Friday 18 July 2014

sigala sutta in kannada

ಸಿಗಾಲೋವಾದ ಸುತ್ತ
ಪರಿಚಯ (ಹಿನ್ನೆಲೆ)
2600 ವರ್ಷಗಳ ಹಿಂದೆ ರಾಜಗೃಹದಲ್ಲಿ ಒಬ್ಬ ಬ್ರಾಹ್ಮಣನು ವಾಸವಾಗಿದ್ದನು. ರಾಜಗೃಹವು ಬಿಹಾರದ ಒಂದು ಪಟ್ಟಣವಾಗಿತ್ತು. ಆ ಬ್ರಾಹ್ಮಣನು ಮಹಾದಾನಿಯು ಹಾಗು ಉದಾತ್ತ ಮನಸ್ಸುಳವನಾಗಿದ್ದನು. ಅವನು ಉಚ್ಛ ಕುಲದಲ್ಲಿ ಜನಿಸಿದ್ದನು. ಅವನ ಐಶ್ವರ್ಯವು 40 ಲಕ್ಷ ಕಪಾಹಣ (ಚಿನ್ನದ ನಾಣ್ಯ) ವಾಗಿತ್ತು. ಅವನಂತೆ ಅವನ ಪತ್ನಿಯು ಸಹಾ ಧಾಮರ್ಿಕತೆಗೆ ಪ್ರಸಿದ್ಧಿ ಪಡೆದಿದ್ದಳು. ಅವರಿಬ್ಬರು ಒಮ್ಮೆ ಬುದ್ಧ ಭಗವಾನರ ಬೋಧನೆಯನ್ನು ಕೇಳಿ ಮನವು ಪರಿವರ್ತನೆಯಾಗಿ ಭಕ್ತಿಯುತ ಉಪಾಸಕರಾದರು. ಅವರ ಶೀಲ ಚಾರಿತ್ರ್ಯವು ಎಷ್ಟು ದೃಢವಾಗಿತ್ತೆಂದರೆ ಅವರು ಸೋತಪನ್ನ ಸ್ಥಿತಿಯನ್ನು ಪ್ರಾಪ್ತಿ ಮಾಡಿದರು. ಆ ಸ್ಥಿತಿಯು ವಿಮುಕ್ತಿಯ ನಾಲ್ಕು ಹಂತಗಳಲ್ಲಿ ಮೊದಲನೆಯದಾಗಿತ್ತು.
ಅವರಿಗೆ ಒಬ್ಬ ಮಗನಿದ್ದನು. ಅವನ ಹೆಸರೇ ಸಿಗಾಲ. ಅವನಿಗೆ ಬುದ್ಧರಲ್ಲಿ, ಧಮ್ಮದಲ್ಲಿ ಅವರ ಸಂಘದಲ್ಲಿ ಶ್ರದ್ಧೆಯಿರಲಿಲ್ಲ. ಅವನಿಗೆ ಧಾಮರ್ಿಕ ತತ್ವಗಳ ಪಾಲನೆಯಲ್ಲಿಯೂ ಇಷ್ಟವಿರಲಿಲ್ಲ. ಅವನ ತಂದೆ-ತಾಯಿಗಳು ಬಹಳಷ್ಟುಸಾರಿ ಈ ರೀತಿ ಬುದ್ಧಿವಾದವನ್ನು ನೀಡಿದರು: ಪ್ರಿಯ ಪುತ್ರ, ಬುದ್ಧರಲ್ಲಿಗೆ ಹೋಗು, ಭೇಟಿ ಮಾಡು. ಅಥವಾ ಸಾರಿಪುತ್ತ ಮಹಾಥೇರರನ್ನು ಅಥವಾ ಮೊಗ್ಗಲ್ಲಾನ ಥೇರರನ್ನು, ಕಶ್ಶಪ ಥೇರರನ್ನು ಅಥವಾ ಯಾವುದೇ ಬುದ್ಧ ಭಗವಾನರ ಪ್ರಧಾನ 80 ಶಿಷ್ಯರಲ್ಲಿ ಯಾರನ್ನಾದರೂ ಭೇಟಿ ಮಾಡು ಎನ್ನುತ್ತಿದ್ದರು.
ಆಗ ಸಿಗಾಲನು ಬದಲಾಗಿ ಈ ನುಡಿಗಳನ್ನೇ ಹೇಳುತ್ತಿದ್ದನು: ಪೂಜ್ಯ ತಂದೆಯೇ, ನನಗಂತೂ ಈ ಧಾಮರ್ಿಕ ಗುರುಗಳನ್ನು ಭೇಟಿ ಮಾಡುವುದರಿಂದ ಯಾವ ಪ್ರಯೋಜನವೂ ಕಾಣುತ್ತಿಲ್ಲ. ನಾನು ಆ ಪವಿತ್ರ ಆಚಾರ್ಯರ ಹತ್ತಿರ ಹೋದರೆ ನಾನು ಮೊಣಕಾಲೂರಿ ವಂದಿಸಬೇಕಾಗುತ್ತದೆ. ನಾನು ಹಾಗೆ ವಂದಿಸಿದಾಗ ನನ್ನ ದೇಹವನ್ನು ಬಗ್ಗಿಸ ಬೇಕಾಗುತ್ತದೆ. ಆಗ ಬೆನ್ನು ನೋಯುತ್ತದೆ ಮತ್ತು ಮೊಣಕಾಲುಗಳು ಗಡುಸಾಗುತ್ತದೆ. ನಾನು ಅಲ್ಲಿ ಬರಿ ನೆಲದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಆಗ ನನ್ನ ವಸ್ತ್ರಗಳು ಮಣ್ಣಾಗಿ ಕೊಳಕಾಗುತ್ತದೆ. ಅಲ್ಲೇ ಇದ್ದರೆ ಅವರೊಡನೆ ಸಂಭಾಷಿಸಬೇಕಾಗುತ್ತದೆ. ಸಂಭಾಷಣೆಯಿಂದ ಸ್ನೇಹವಾಗುತ್ತದೆ. ಅನಂತರ ಅವರಿಗೆ ಊಟ, ವಸ್ತ್ರ, ಹಾಸಿಗೆ ಮತ್ತು ಔಷಧಿಗಳನ್ನು ನೀಡಬೇಕಾಗುತ್ತದೆ. ನಾನು ಈ ಅವಶ್ಯಕತೆಗಳನ್ನು ಪೂರೈಸುವಾಗ ನನ್ನ ಕೆಲಸವನ್ನು ಅಲಕ್ಷಿಸಬೇಕಾಗುತ್ತದೆ ಮತ್ತು ಅಪಾರ ಹಣವನ್ನು ಪೋಲು ಮಾಡಬೇಕಾಗುತ್ತದೆ. ಆದ್ದರಿಂದ ತಂದೆಯೇ ನಿಮ್ಮ ಪರಿಶುದ್ಧ ಭಿಕ್ಖುಗಳ ಹತ್ತಿರದ ಭೇಟಿಯಂತು ಪ್ರಯೋಜನವಿಲ್ಲ ಎಂದು ಹೇಳುತ್ತಿದ್ದನು.
ಹೀಗೆ ನಾನಾ ಕಾರಣಗಳಿಂದ ಸಿಗಾಲನು ಒಪ್ಪಿಸಿ ತಂದೆ-ತಾಯಿಗಳ ಆಸೆಯನ್ನು ತಡೆಯುತ್ತಿದ್ದನು ಹಾಗು ಧಾಮರ್ಿಕತೆಯಿಂದ ತಟಸ್ಥನಾಗಿದ್ದನು. ಆತನ ತಂದೆ-ತಾಯಿಗಳು ಜೀವಂತವಾಗಿರುವವರೆಗೂ ಆತನನ್ನು ಧಾಮರ್ಿಕನನ್ನಾಗಿ ಮಾಡಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ ಅವರ ಉದಾತ್ತ ಪ್ರಯತ್ನಗಳು ಫಲಿಸಲಿಲ್ಲ.
ಸಿಗಾಲನ ತಂದೆಯು ಮುಪ್ಪಿನಿಂದ ಅವೃತನಾಗಿ ಮರಣವು ಸ್ವಲ್ಪ ಹತ್ತಿರದಲ್ಲಿಯೇ ಇದೆಯೆಂದು ಅರಿತಾಗ ಮಗನ ಮೇಲಿನ ಅನುಕಂಪದಿಂದ ಈ ರೀತಿಯ ಪ್ರಜ್ಞಾಪೂರ್ವಕ ಯೋಚನೆ ಮಾಡಿದನು: ಸಾಯುವಾಗ ತಂದೆಯು ಹೇಳುವ ಪ್ರತಿ ಮಾತು ಮಗನಿಗೆ ನೆನಪಿರುತ್ತದೆ. ನಾನು ಹೀಗೆ ಕೊನೆ ಘಳಿಗೆಯಲ್ಲಾದರೂ ಇವನಿಗೆ ಭೂಮಿಯ ಆರು ದಿಕ್ಕುಗಳಿಗೆ ಪೂಜಿಸುವಂತೆ ಬುದ್ಧಿವಾದ ಹೇಳುತ್ತೇನೆ. ನನ್ನ ಮಗನಿಗೆ ಅದರ ನಿಜವಾದ ಅರ್ಥ ಅರಿಯದೆ ಭೌತಿಕ ದಿಕ್ಕುಗಳನ್ನು ಪೂಜಿಸುತ್ತಾನೆ. ಹೀಗೆ ಪೂಜಿಸುವಾಗ ಬುದ್ಧ ಭಗವಾನರು ಅಥವಾ ಅವರ ಮುಖ್ಯ ಶಿಷ್ಯರು ಇದನ್ನು ಗಮನಿಸಿ ಪ್ರಶ್ನಿಸಿದಾಗ ಸಿಗಾಲನು ಈ ರೀತಿ ಉತ್ತರಿಸುತ್ತಾನೆ: ತಂದೆಯ ಅಂತಿಮ ವಾಕ್ಯ ಪರಿಪಾಲನೆ ಮಾಡುತ್ತಿದ್ದೇನೆ ಎಂದು. ಆಗ ಬುದ್ಧರು ಅಥವಾ ಅವರ ಮುಖ್ಯ ಶಿಷ್ಯರು ಇವನಿಗೆ ವಿವರಿಸುತ್ತಾರೆ. ಆರು ದಿಕ್ಕುಗಳನ್ನು ಪೂಜಿಸುವುದು ಈ ರೀತಿ ಅಲ್ಲ ಎಂದು ಅದರ ಸಾರವತ್ತಾದ ಅರ್ಥವನ್ನು ವಿವರಿಸುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಬೋಧನೆಗೆ ಬದ್ಧನಾಗಿ ಪುಣ್ಯಕಾರ್ಯಗಳಲ್ಲಿ ತಲ್ಲೀನನಾಗುತ್ತಾನೆ. ಅದರ ಫಲವಾಗಿ ಇಹಲೋಕ ಮತ್ತು ಪರಲೋಕದಲ್ಲಿ ಸುಖವಾಗಿ ಜೀವಿಸುತ್ತಾನೆ ಎಂದು ತನ್ನಲ್ಲೇ ಹೇಳಿಕೊಂಡು ಮೃತ್ಯುಶಯ್ಯೆಯಲ್ಲಿರುವ ಪಿತನು ಮಗನಿಗೆ ಕೇಳಿಕೊಳ್ಳುತ್ತಾನೆ:
ನನ್ನ ಪ್ರಿಯ ಪುತ್ರ, ನನ್ನ ಆಯುಷ್ಯ ಹಣ್ಣಾಯಿತು, ನನ್ನ ಜೀವನ ಮುಕ್ತಾಯ ಹಂತದಲ್ಲಿದೆ, ನಾನು ನಿನ್ನನ್ನು ಬೇಗನೆ ಅಗಲುವವನಿದ್ದೇನೆ. ಈ ಜೀವನ ಸಾಗರವನ್ನು ದಾಟಿ ಬೇರೊಂದು ಪ್ರದೇಶದಲ್ಲಿದ್ದೇನೆ. ನನ್ನ ಕೊನೆಯ ಉಸಿರು ಬಿಡುವ ಮುಂಚೆ ನಾನು ನಿನಗೆ ಒಂದು ನಿಯಮ ವಿಧಿಸುತ್ತೇನೆ. ಹೇಳು ಪುತ್ರನೇ, ನನ್ನ ಬಯಕೆಯನ್ನು ಜಾರಿಗೆ ತರುವೆಯಾ?
ಖಂಡಿತ ಪೂಜ್ಯ ತಂದೆಯೆ ಎಂದು ಸಿಗಾಲನು ಪಶ್ಚಾತ್ತಾಪ ಗೌರವಯುತ ಧ್ವನಿಯಲ್ಲಿ ಹೇಳಿದನು. ಪೂರ್ಣ ಭರವಸೆಯಿಂದ ಹಾಗು ಗಂಭೀರವಾಗಿ ನಿಮ್ಮ ಯಾವುದೇ ಆಜ್ಞೆಯಿದ್ದಲ್ಲಿ ನೆರವೇರಿಸುತ್ತೇನೆ. ನೀವು ಅದನ್ನು ಹೇಳಿ ಎಂದು ಕೇಳಿಕೊಂಡನು.
ಪ್ರಿಯ ಪುತ್ರನೆ, ನನ್ನ ಆಜ್ಞೆಯಿದು, ಪ್ರತಿನಿತ್ಯ ಮುಂಜಾನೆ ಸ್ನಾನವಾದ ನಂತರ ಪ್ರತಿದಿನ ಪೃಥ್ವಿಯ ಆರು ದಿಕ್ಕುಗಳನ್ನು ಪೂಜಿಸಬೇಕು. ಅದೆಂದರೆ: ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಊಧ್ರ್ವ ಮತ್ತು ಅಧೋ ದಿಕ್ಕುಗಳು.

ಇದರಿಂದ ಯಾವ ಕಷ್ಟದ ತೊಂದರೆಯೂ ಇಲ್ಲ ಎಂದು ಅರಿತ ಸಿಗಾಲನು ಪೂಜ್ಯ ತಂದೆಯೇ, ನಿಮ್ಮ ಮಾತನ್ನು ಪ್ರತಿನಿತ್ಯ ಪಾಲಿಸುತ್ತೇನೆ, ಇದು ನನ್ನ ಪೂರ್ಣ ಭರವಸೆಯ ಮಾತು.
ಇದಾದ ಕೆಲವು ದಿನಗಳ ನಂತರ ಕರ್ತವ್ಯಪರ ಬ್ರಾಹ್ಮಣನು ಮರಣಿಸಿದನು. ಸಿಗಾಲನು ತಂದೆಯ ಆಜ್ಞೆಯಂತೆ ಆರು ದಿಕ್ಕುಗಳನ್ನು ಪೂಜಿಸುತ್ತಿದ್ದನು.
ಬುದ್ಧ ಭಗವಾನರು ಎಂದಿನಂತೆ ಮುಂಜಾನೆ ಎದ್ದು ತಮ್ಮ ದಿವ್ಯಚಕ್ಷುಗಳಿಂದ ಜಗತ್ತನ್ನು ವೀಕ್ಷಿಸಿದರು. ಆ ದಿನ ಯಾರಿಗೆ ಅಮೂಲ್ಯವಾದ ಧಮ್ಮ ಬೋಧನೆಯಿಂದ ಧಾಮರ್ಿಕ ಫಲ ಮಾಡಿಸಬೇಕು ಎಂದು ಗಮನಿಸಿದಾಗ ಸಿಗಾಲನು ಕಾಣಿಸಿದನು. ಆಗ ಭಗವಾನರು ಈ ರೀತಿ ಚಿಂತಿಸಿದರು: ಈ ಬೋಧನೆಯಿಂದ ಸಿಗಾಲನಿಗೆ ಮಾತ್ರವಲ್ಲ, ಎಲ್ಲಾ ಗೃಹಸ್ಥರಿಗೂ ಬಹುಫಲವಾಗುತ್ತದೆ ಎಂದು ಅರಿತರು. ಅದು ಮುಂದೆ ಸಿಗಾಲೋವಾದ ಸುತ್ತ ಎಂದೇ ಪ್ರಸಿದ್ಧಿಯಾಯಿತು. ಸುತ್ತಪಿಟಕದ ದೀಘನಿಕಾಯದಲ್ಲಿ ಪಾತಿಕವಗ್ಗದಲ್ಲಿ ಬರುತ್ತದೆ.
ಸಿಗಾಲ ಸುತ್ತ
1. ಹೀಗೆಂದು ಕೇಳಿದ್ದೇನೆ: (ಆನಂದ) ಒಮ್ಮೆ ಭಗವಾನರು ವೇಲುವನ ಆರಾಮದಲ್ಲಿ ವಾಸವಾಗಿದ್ದರು. ಅದು ರಾಜಗೃಹದ ಕಲಂದ ನಿವಾಪದಲ್ಲಿತ್ತು.
2. ಸಿಗಾಲ ಗೃಹಸ್ಥನು ಮುಂಜಾನೆ ಎದ್ದು ರಾಜಗೃಹದ ಹೊರಗೆ ಸ್ನಾನ ಮಾಡಿಕೊಂಡು ಒದ್ದೆ ಉಡುಗೆಯಲ್ಲಿ ಮತ್ತು ಒದ್ದೆ ತಲೆಯಲ್ಲಿ ಸಿಗಾಲನು ಕೈಗಳನ್ನು ಮೇಲಕ್ಕೆತ್ತಿ ಹಣೆಯನ್ನು ತಾಗಿಸಿ ಆರು ದಿಕ್ಕುಗಳನ್ನು ಪೂಜಿಸುತ್ತಿದ್ದನು. ಅದೆಂದರೆ: ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಊಧ್ರ್ವ ಮತ್ತು ಅಧೋ ದಿಕ್ಕುಗಳು.
3. ಅದೇ ಸಮಯದಲ್ಲಿ ಭಗವಾನರು ಕಾಷಾಯ ವಸ್ತ್ರದಿಂದ ಶರೀರವನ್ನು, ಎರಡು ತೋಳುಗಳನ್ನು ಆವರಿಸಿಕೊಂಡು ಪಿಂಡಪಾತ್ರೆಯನ್ನು ಕೈಯಲ್ಲಿರಿಸಿಕೊಂಡು ರಾಜಗೃಹದಲ್ಲಿ ಆಹಾರಕ್ಕಾಗಿ ಹೊರಟರು. ಆಗ ಸಿಗಾಲನನ್ನು ಗಮನಿಸಿದರು. ಆ ಗೃಹಸ್ಥನು ಒದ್ದೆ ಉಡುಪಿನಲ್ಲಿ ತಲೆಯನ್ನು ಒರೆಸದೆ ಒದ್ದೆ ಕೂದಲಿನೊಂದಿಗೆ ಹಣೆಗೆ ಕೈಜೋಡಿಸಿಕೊಂಡು ಆರು ದಿಕ್ಕುಗಳಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಊಧ್ರ್ವ ಮತ್ತು ಅಧೋ ದಿಕ್ಕುಗಳನ್ನು ಪೂಜಿಸುತ್ತಿದ್ದನು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು.
4. ಗೃಹಸ್ಥನೆ, ಏತಕ್ಕಾಗಿ ನೀನು ಅತಿ ಮುಂಜಾನೆಯೇ ಎದ್ದು ರಾಜಗೃಹದಿಂದ ಹೊರಗೆ ಬಂದು ಒದ್ದೆ ವಸ್ತ್ರಗಳಿಂದ, ಒದ್ದೆ ತಲೆಯಿಂದ, ಹಣೆಗೆ ಕೈಗಳನ್ನು ಜೋಡಿಸಿ ಪೃಥ್ವಿಯ ಆರು ದಿಕ್ಕುಗಳನ್ನು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಊಧ್ರ್ವ ಮತ್ತು ಅಧೋ) ವಂದಿಸುತ್ತಿದ್ದೀಯೇ?
5. ಭಗವಾನ್, ನನ್ನ ತಂದೆಯು ಅಂತಿಮ ಕಾಲದಲ್ಲಿ ನನ್ನನ್ನು ಕರೆದು ಹೀಗೆ ಹೇಳಿದರು: ಪ್ರಿಯಪುತ್ರ, ನೀನು ಪೃಥ್ವಿಯ ಆರು ದಿಕ್ಕುಗಳಿಗೆ ತಲೆಬಾಗಿ ವಂದಿಸಬೇಕು ಎಂದು. ಆದ್ದರಿಂದ ಪೂಜ್ಯ ತಂದೆಯ ವಚನಗಳನ್ನು ಪಾಲಿಸುವುದಕ್ಕಾಗಿ ನಾನು ಅತಿ ಮುಂಜಾನೆ ಎದ್ದು ಒದ್ದೆ ದೇಹ, ಒದ್ದೆ ಉಡುಪಿನೊಂದಿಗೆ ಕೈಯನ್ನು ಮೇಲಕ್ಕೆತ್ತಿ ಈ ರೀತಿ ಆರು ವಿಧದ ದಿಕ್ಕುಗಳಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಊಧ್ರ್ವ ಮತ್ತು ಅಧೋ ದಿಕ್ಕುಗಳಿಗೆ ವಂದಿಸುತ್ತಿದ್ದೇನೆ.
6. ಗೃಹಸ್ಥನೆ, ಆರು ದಿಕ್ಕುಗಳನ್ನು ವಂದಿಸುವುದು ಬುದ್ಧರ ಪ್ರಕಾರ ಈ ವಿಧದಲ್ಲಿ ಅಲ್ಲ.
7. ಪೂಜ್ಯ ಭಗವಾನ್, ಬುದ್ಧರ ಪ್ರಕಾರದಲ್ಲಿ ಆರು ದಿಕ್ಕುಗಳನ್ನು ವಂದಿಸುವುದು ಅದು ಯಾವರೀತಿ? ಅಂಥಹುದು ಇದ್ದರೆ ಭಗವಾನರು ವಿವರಿಸಲಿ, ಅದರಿಂದ ನನಗೆ ಒಳಿತಾಗುವುದು.
8. ಹಾಗಾದರೆ ಗೃಹಸ್ಥನೇ ಕೇಳು, ಮನದಲ್ಲಿ ಸ್ಥಾಪಿಸಿಕೋ, ನಾನು ವಿವರಿಸುತ್ತೇನೆ.
9. ತುಂಬಾ ಒಳ್ಳೆಯದು ಭಗವಾನ್ ಎಂದು ಪೂಜ್ಯ ರೀತಿಯಲ್ಲಿ ಉತ್ತರಿಸಿ ಸಮಪರ್ಿಸಿದನು.
10. ನಂತರ ಭಗವಾನರು ವಿವರಿಸಿದರು: ಗೃಹಸ್ಥನೇ, ಯಾವುದೇ ಉದ್ದೇಶದಿಂದ ಉತ್ಪತ್ತಿಯಾಗುವ ಮನಸ್ಸಿನ ನಾಲ್ಕು ಭಾವೋದ್ರೇಕವನ್ನು ನಿಮರ್ೂಲನೆ ಮಾಡಿದ್ದರೆ, ಬುದ್ಧರ ಶಿಷ್ಯನು, ನಾಲ್ಕು ವಿಧದ ಪಾಪಕೃತ್ಯಗಳಿಂದ ವಿರತನಾಗಿದ್ದರೆ, ಆತನು ಐಶ್ವರ್ಯ ನಾಶಕ್ಕೆ ಕೊಂಡೊಯ್ಯುವ ಆರು ಮೂಲಗಳ ನಾಶಕ್ಕೆ ಬದ್ಧನಾಗಿರುತ್ತಾನೆ. ಈ ರೀತಿ ಆತನು ಹದಿನಾಲ್ಕು ಬಗೆಯ ಪಾಪಕೃತ್ಯದಿಂದ ಪಾರಾಗಿ, ಆರು ದಿಕ್ಕುಗಳಿಗೆ ಉಂಟಾಗುವ ಕೆಟ್ಟದ್ದನ್ನು ತೊಲಗಿಸುತ್ತಾನೆ. ಆಗ ಆತನು ಇಹಲೋಕದಲ್ಲಿ ಅತಿ ಉನ್ನತಿಯಲ್ಲಿರುತ್ತಾನೆ. ಮುಂದಿರುವ ಲೋಕಕ್ಕೆ ಹಿತವಾಗುವಂತೆ ಮಾಡಿಕೊಂಡಿರುತ್ತಾನೆ. ಮರಣದ ನಂತರ ಮತ್ತು ಶರೀರ ತ್ಯಜಿಸಿದ ನಂತರ ಆತನು ದೇವಲೋಕದಲ್ಲಿ ಹುಟ್ಟುತ್ತಾನೆ. ಅಲ್ಲಿ ಸುಖವೇ ಪ್ರದಾನವಾಗಿ ತುಂಬಿದ್ದು, ಸುಖದ ಆಡಳಿತವಿರುತ್ತದೆ.
11. ಗೃಹಸ್ಥನೇ, ಮನಸ್ಸಿಗೆ ಆವರಿಸುವ ಆ ನಾಲ್ಕು ಭಾವೋದ್ರೇಕ ಯಾವುದು, ಯಾವುದನ್ನು ಬುದ್ಧರ ಶಿಷ್ಯನು ನಿಮರ್ೂಲನೆ ಮಾಡಿರುತ್ತಾನೆ? ಗೃಹಸ್ಥನೆ, ಅದು ಯಾವುವೆಂದರೆ:
1) ಜೀವಹತ್ಯೆಯ ಪಾಪ
2) ಕೂಡದಿದ್ದನ್ನು ತೆಗದುಕೊಳ್ಳುವ (ಕಳ್ಳತನ) ಪಾಪ
3) ಅನೀತಿಯುತವಾದ ಲೈಂಗಿಕತೆಯಲ್ಲಿ ತೊಡಗುವ ಪಾಪ
4) ಸತ್ಯವಲ್ಲದ್ದನ್ನು ಹೇಳುವ ಪಾಪ.
ಜೀವಹತ್ಯೆ ಮತ್ತು ಕಳ್ಳತನ
ಸುಳ್ಳ ಮತ್ತು ವ್ಯಭಿಚಾರ
ಈ ನಾಲ್ಕು ಪಾಪಗಳನ್ನು
ಜ್ಞಾನಿಗಳು ಎಂದಿಗೂ ಪ್ರಶಂಸಿಸಲಾರರು.
ಇವೇ ಆ ನಾಲ್ಕು ಭಾವೋದ್ರೇಕಗಳು, ಅದನ್ನು ಬುದ್ಧರ ಶಿಷ್ಯನು ನಿಮರ್ೂಲನೆ ಮಾಡಿರುತ್ತಾನೆ.
12. ಈ ವಿಷಯವನ್ನು ಈ ರೀತಿ ತಿಳಿಸಿ. ನಂತರ ತಥಾಗತರು ಇನ್ನಷ್ಟು ಸ್ಫೂತರ್ಿಗಾಗಿ ಮೇಲಿನ ಗಾಥೆಯನ್ನು ತಿಳಿಸಿದರು.
13. ಗೃಹಸ್ಥನೇ, ಬುದ್ಧರ ಶಿಷ್ಯನು ಯಾವ ನಾಲ್ಕು ರೀತಿಯಲ್ಲಿ ಪಾಪಕೃತ್ಯಗಳನ್ನು ಮಾಡುವುದಿಲ್ಲ?
1) ಆತನು ಲೋಭ, ಆಮಿಷದಿಂದ ಕೂಡಿ ಅನ್ಯಾಯವಾಗಲಿ, ಪಾಪವಾಗಲಿ ಮಾಡಲಾರ.
2) ಆತನು ಕೋಪಕ್ಕೆ ವಶವಾಗಿ ಅನ್ಯಾಯವಾಗಲಿ, ಪಾಪವಾಗಲಿ ಮಾಡಲಾರ.
3) ಆತನು ಭಯಕ್ಕೆ ವಶವಾಗಿ ಅನ್ಯಾಯವಾಗಲಿ, ಪಾಪವಾಗಲಿ ಮಾಡಲಾರ.
4) ಆತನು ಮೋಹಕ್ಕೆ ವಶವಾಗಿ ಅನ್ಯಾಯವಾಗಲಿ, ಪಾಪವಾಗಲಿ ಮಾಡಲಾರ.
ಗೃಹಸ್ಥನೆ, ಬುದ್ಧರ ಶಿಷ್ಯನು, ಲೋಭದಿಂದ ಪಾಪ ಮಾಡಲಾರ, ಕೋಪದಿಂದಾಗಲಿ, ಭಯದಿಂದಾಗಲಿ, ಮೋಹದಿಂದಾಗಲಿ ಪಾಪ ಮಾಡಲಾರ. ಈ ನಾಲ್ಕು ರೀತಿಯಲ್ಲಿ ಬುದ್ಧರ ಶಿಷ್ಯನು ಪಾಪಕೃತ್ಯಗಳನ್ನು ಮಾಡಲಾರ.
14. ಸಮ್ಮಾಸಂಬುದ್ಧರು ಈ ವಿಷಯವನ್ನು ಸ್ಪಷ್ಟಪಡಿಸಿ ನಂತರ ಈ ಗಾಥೆಗಳನ್ನು ಹೀಗೆ ಹೇಳಿದರು:
ಯಾರಾದರೂ ಲೋಭಯುತನಾಗಿ, ಕ್ರೋಧಿತನಾಗಿ, ಭಯದಿಂದ ಅಥವಾ ಮೋಹದಿಂದ ಶೀಲಗಳನ್ನು ಮುರಿಯುವನೋ ಹಾಗು ಪಾಪಗಳನ್ನು ಮಾಡುವನೋ ಆತನ ಕೀತರ್ಿಯು ಕೃಷ್ಣಪಕ್ಷದ ಚಂದಿರನಂತೆ ಕ್ಷೀಣಿಸುತ್ತದೆ.
ಯಾರು ಲೋಭದಿಂದಾಗಲಿ, ಕ್ರೋಧದಿಂದಾಗಲಿ, ಭಯ ಮತ್ತು ಮೋಹದಿಂದಾಗಲಿ ಶೀಲವನ್ನು ಮುರಿಯುವುದಿಲ್ಲವೋ ಮತ್ತು ಪಾಪದಿಂದ ಪೂರ್ಣ ವಿರತನೋ ಆತನ ಕೀತರ್ಿಯು ಶುಕ್ಲ ಪಕ್ಷದ ಚಂದಿರನಂತೆ ವೃದ್ಧಿಸಿ ಕಾಂತಿಯುಕ್ತವಾಗಿರುತ್ತದೆ.
15. ಗೃಹಸ್ಥನೇ, ಐಶ್ವರ್ಯ ನಾಶದ ಆರು ಮೂಲಗಳು ಯಾವುವು ಹಾಗು ಅಂತಹುದರಲ್ಲಿ ಬುದ್ಧರ ಶಿಷ್ಯರು ಅಂಟುವುದಿಲ್ಲ.
ಗೃಹಸ್ಥನೇ, ಅದು ಹೀಗಿದೆ:
1) ಮತ್ತನ್ನುಂಟುಮಾಡುವ ಪಾನೀಯ ಪದಾರ್ಥಗಳ ಬಳಕೆ, ಅದರಿಂದ ಐಶ್ವರ್ಯದ ನಾಶಕ್ಕೆ ದಾರಿ, ಅದು ಪ್ರಧಾನ ಮೂಲವಾಗಿದೆ.
2) ಅವೇಳೆಯಲ್ಲಿ ಬೀದಿಗಳಲ್ಲಿ ತಿರುಗಾಡುವುದು ಕೂಡ ಐಶ್ವರ್ಯ ನಾಶಕ್ಕೆ ಮುಖ್ಯ ಮೂಲವಾಗಿದೆ.
3) ಪದೇ ಪದೇ ನೃತ್ಯಕೂಟಗಳಿಗೆ, ಗಾನ-ಸಂಗೀತಗಳಿಗೆ ಹೋಗುವಿಕೆ ಕೂಡ ಐಶ್ವರ್ಯ ನಾಶಕ್ಕೆ ಮುಖ್ಯ ಮೂಲವಾಗಿದೆ.
4) ಜೂಜಾಟದಲ್ಲಿ ತೊಡಗುವಿಕೆ ಹಾಗು ಅದರಿಂದ ಅವಶ್ಯಕ ಕರ್ತವ್ಯಗಳು ಮರೆತು ಅದು ಐಶ್ವರ್ಯ ನಾಶಕ್ಕೆ ಮುಖ್ಯ ಮೂಲವಾಗಿದೆ.
5) ಕೆಟ್ಟ ಗೆಳೆಯರ ಸಂಸರ್ಗದಿಂದಿರುವಿಕೆ ಸಹಾ ಐಶ್ವರ್ಯ ನಾಶಕ್ಕೆ ಮುಖ್ಯ ಮೂಲವಾಗಿದೆ.
6) ಸೋಮಾರಿತನಕ್ಕೆ ವಶವಾಗಿರುವುದು ಕೂಡ ಐಶ್ವರ್ಯ ನಾಶಕ್ಕೆ ಮುಖ್ಯ ಮೂಲವಾಗಿದೆ.
16. ಗೃಹಸ್ಥನೇ, ಮತ್ತನ್ನುಂಟುಮಾಡುವ ಪಾನೀಯ (ಪದಾರ್ಥ) ಗಳಿಂದ ಈ ಆರು ವಿಧದ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ:
1) ಐಶ್ವರ್ಯ ದುಂದುವೆಚ್ಚಕ್ಕೆ ಈಡಾಗಿ ಕ್ಷೀಣಿಸುತ್ತದೆ (ಆಥರ್ಿಕ ಹಾನಿ).
2) ಜಗಳಗಳಿಗೆ ಆಸ್ಪದವಾಗುತ್ತದೆ (ಸಾಮಾಜಿಕ ಹಾನಿ).
3) ಅನೇಕ ಭೀಕರ ರೋಗಗಳಿಗೆ ಕಾರಣವಾಗುತ್ತದೆ (ಆರೋಗ್ಯ ಹಾನಿ).
4) ಪಾಪ ಗಳಿಕೆ ಹೆಚ್ಚುತ್ತದೆ (ನೈತಿಕ ಹಾನಿ).
5) ಆತನು ಪಾಪಲಜ್ಜೆಯಿಂದ ಹಾಗು ಪಾಪ ಭಯದಿಂದ ದೂರನಾಗಿ ಲಜ್ಜಾ ಭಯರಹಿತನಾಗುತ್ತಾನೆ (ಧಾಮರ್ಿಕ ಹಾನಿ).
6) ಆತನ ಪ್ರಜ್ಞಾ (ಬುದ್ಧಿ) ಶಕ್ತಿ ಕ್ಷೀಣಿಸುತ್ತದೆ (ಬೌದ್ಧಿಕ ಹಾನಿ).
ಗೃಹಸ್ಥನೇ, ಈ ಆರು ರೀತಿಯ ಕೆಟ್ಟ ಪರಿಣಾಮಗಳು ಮತ್ತನ್ನುಂಟುಮಾಡುವ ಪಾನೀಯದಿಂದ ಉಂಟಾಗುತ್ತವೆ.
17. ಗೃಹಸ್ಥನೇ, ಅವೇಳೆಯಲ್ಲಿ ಬೀದಿಗಳಲ್ಲಿ ಅಡ್ಡಾಡುವುದರಿಂದ ಆರು ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
1) ಆತನ ಶರೀರವು ಅಪಾಯಕ್ಕೆ ಒಳಗಾಗಿ ದುಃಖ, ನೋವಿಗೊಳಗಾಗ ಬೇಕಾಗುತ್ತದೆ, ರಕ್ಷಣೆಯಿಲ್ಲದೆ ಹೋಗುತ್ತದೆ.
2) ಆತನ ಪತ್ನಿ-ಪುತ್ರರು ಸಹಾ ರಕ್ಷಣೆಯಿಲ್ಲದೆ ಅಪಾಯಕ್ಕೆ ಒಳಗಾಗಿ ರಕ್ಷಣಾ ವಂಚಿತರಾಗುತ್ತಾರೆ.
3) ಆತನ ಸಂಪತ್ತು ಸಹಾ ರಕ್ಷಣಾರಹಿತವಾಗಿ ಅಪಾಯಕ್ಕೆ ಒಳಗಾಗಿ ರಕ್ಷಣೆ ತಪ್ಪುತ್ತದೆ.
4) ಆತನು ನಿರಪರಾದಿಯಾಗಿದ್ದರೂ ಸಹ ಆತನ ಹೆಸರು ಕುಖ್ಯಾತ ಕ್ರಿಯೆಗಳಲ್ಲಿ ಸೇರುತ್ತದೆ.
5) ಆತನು ಸಂದೇಹಾಸ್ಪದ ಚಾರಿತ್ರ್ಯವುಳ್ಳವನಾಗುತ್ತಾನೆ.
6) ಆತನು ಲೆಕ್ಕಕ್ಕೆ ಮೀರಿದ ನೋವು ಹಾಗು ದುಃಖಕ್ಕೆ ಈಡಾಗಬೇಕಾಗುತ್ತದೆ.
ಗೃಹಸ್ಥನೇ, ಇವೇ ಆ ಆರು ಕೆಟ್ಟ ಪರಿಣಾಮಗಳು ಅವೇಳೆಯಲ್ಲಿ ಬೀದಿಗಳಲ್ಲಿ ತಿರುಗಾಡುವುದರಿಂದ ಸಂಭವಿಸುತ್ತವೆ.
18. ಗೃಹಸ್ಥನೇ ಪದೇ ಪದೇ ನೃತ್ಯ ಸ್ಥಳಗಳಿಗೆ, ಗಾನ-ಸಂಗೀತ ಸ್ಥಳಗಳಿಗೆ ಹೋಗುವುದರಿಂದ ಈ ಆರು ವಿಧದ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ:
1) ಎಲ್ಲಿ ನೃತ್ಯವಿದೆ ಎಂದು ವಿಚಾರಿಸುತ್ತಾ ಅಲ್ಲಿ ಹೋಗುವಿಕೆ.
2) ಎಲ್ಲಿ ಸಂಗೀತವಿದೆ ಎಂದು ವಿಚಾರಿಸುತ್ತಾ ಅಲ್ಲಿ ಹೋಗುವಿಕೆ.
3) ಎಲ್ಲಿ ವಾದ್ಯ, ಸಂಗೀತವಿದೆ ಎಂದು ವಿಚಾರಿಸುತ್ತಾ ಅಲ್ಲಿ ಹೋಗುವಿಕೆ.
4) ಎಲ್ಲಿ ಕಲ್ಪಿತ ನಂಬಲಾಗದ ಕಥೆಗಳು ಹೇಳುವರೋ ಅಲ್ಲಿ ಹೋಗುವಿಕೆ.
5) ಎಲ್ಲಿ ನಾಟಕಗಳು, ಆಟಗಳು ಎಂದು ವಿಚಾರಿಸುತ್ತಾ ಅಲ್ಲಿ ಹೋಗುವಿಕೆ.
6) ಎಲ್ಲಿ ನಾನಾವಿಧದ ಆಟಗಳು (ಮಡಿಕೆ ಆಟ ಇತ್ಯಾದಿ) ನಡೆಯುತ್ತದೆಯೋ ವಿಚಾರಿಸುತ್ತಾ ಅಲ್ಲಿ ಹೋಗುವಿಕೆ. ಈ ರೀತಿ ಹೋಗುವಿಕೆಯಿಂದ ಐಶ್ವರ್ಯಹಾನಿ, ಕರ್ತವ್ಯ ಭ್ರಷ್ಟತೆ, ಜ್ಞಾನ ಕ್ಷೀಣತೆ ಉಂಟಾಗುತ್ತದೆ.
ಗೃಹಸ್ಥನೇ, ಈ ಆರು ವಿಧದ ಪರಿಣಾಮಗಳನ್ನು ಪದೇ ಪದೇ ನೃತ್ಯ ಸಂಗೀತ, ಆಟ-ನಾಟಕಗಳಿಗೆ ಹೋಗುವಿಕೆಯಿಂದ ಉಂಟಾಗುತ್ತದೆ.
19. ಗೃಹಸ್ಥನೆ, ಜೂಜಾಟದಿಂದ ಉಂಟಾಗುವ ಆರು ಕೆಟ್ಟ ಪರಿಣಾಮಗಳು ಯಾವುವು? ಅದರಿಂದ ಆತನು ಅವಶ್ಯಕ ಕರ್ತವ್ಯಗಳನ್ನು ಮರೆಯುತ್ತಾನೆ.
1) ಯಾವಾಗ ಒಬ್ಬನು ಜಯಶೀಲನಾಗುವನೋ, ಸೋತವನು ಆತನೊಂದಿಗೆ ದ್ವೇಷದಿಂದ ಕೂಡುತ್ತಾನೆ.
2) ಸೋತವನು ಓಹ್! ಆ ವ್ಯಕ್ತಿಯು ನನ್ನ ಸಂಪತ್ತನ್ನು ಗೆದ್ದನು ಎಂದು ಅತೀವವಾಗಿ ಪಶ್ಚಾತ್ತಾಪಕ್ಕೆ ಈಡಾಗಿ ದುಃಖಿಸುತ್ತಾನೆ.
3) ಅತಿ ಕಷ್ಟಪಟ್ಟು ಸಂಪಾದಿಸಿದ್ದ ಸುರಕ್ಷತೆಯಲ್ಲಿದ್ದ ಐಶ್ವರ್ಯವು ತನ್ನ ಕಣ್ಣಮುಂದೆ (ಸೋತು) ನಷ್ಟವಾಗುತ್ತದೆ.
4) ನ್ಯಾಯಾಲಯದಲ್ಲಿ ಸಾಕ್ಷಿಗಳ ಪೈಕಿ ಜೂಜಾಟ ಆಡುವವನಿಗೆ ನಿಲ್ಲಿಸಿದರೆ ಆತ ಸತ್ಯ ಹೇಳಿದರೂ ಅದಕ್ಕೆ ಬೆಲೆಯಿರುವುದಿಲ್ಲ.
5) ಜೂಜಾಟ ಆಡುವವನ ಸಂಬಂಧವನ್ನು ಆತನ ಮಿತ್ರರು ಬಂಧುಗಳು ತಿರಸ್ಕರಿಸುತ್ತಾರೆ. ಏಕೆಂದರೆ ಆತ ಜೂಜಾಟದಲ್ಲಿ ನಿರತನಾಗಿ ಕೆಟ್ಟಿರುತ್ತಾನೆ.
6) ಜೂಜಾಟದಲ್ಲಿ ತೊಡಗಿರುವವನಿಗೆ, ಆತನು ಸಂಸಾರವನ್ನು ನಡೆಸಲು ಅಸಮರ್ಥನೆಂದು ತಿಳಿದು ಆತನಿಗೆ ಹೆಣ್ಣನ್ನು ಯಾರೂ ಕೊಡುವುದಿಲ್ಲ ಅಥವಾ ತೆಗೆದುಕೊಳ್ಳುವುದಿಲ್ಲ.
ಗೃಹಸ್ಥನೇ, ಇದೇ ಆರು ಕೆಟ್ಟ ಪರಿಣಾಮಗಳು ಜೂಜಾಟದಲ್ಲಿ ತೊಡಗಿರುವವನಿಗೆ ಉಂಟಾಗುತ್ತದೆ. ಅದರಂತೆ ಆತನು ತನ್ನ ಕರ್ತವ್ಯಗಳನ್ನು ಅಲಕ್ಷಿಸುತ್ತಾನೆ.
20. ಗೃಹಸ್ಥನೇ, ಕೆಟ್ಟ ಸಂಗಾತಿಗಳೊಂದಿಗೆ ಸೇರುವುದರಿಂದ ಆರು ವಿಧದ ಕೆಟ್ಟ ಪರಿಣಾಮಗಳು ಆಗುತ್ತದೆ.
1) ಜೂಜಾಡುವವನೊಂದಿಗೆ ಸೇರುವುದು.
2) ವ್ಯಭಿಚಾರಿಯ ಸಂಗಡ ಸೇರವುದು.
3) ಕುಡುಕರೊಂದಿಗೆ ಸೇರುವುದು.
4) ತಪ್ಪಾಗಿ ನಿರೂಪಿಸುವವರೊಂದಿಗೆ ಸೇರುವುದು.
5) ಮೋಸಗಾರರೊಂದಿಗೆ ಸೇರುವುದು.
6) ಹಿಂಸಾಪ್ರವೃತ್ತಿ ವ್ಯಕ್ತಿಯೊಂದಿಗೆ ಸೇರುವುದು.
ಇವರ ಸಂಗಡ ಸೇರುವುದರಿಂದ ಬಹಳ ಕೆಡುಕಾಗುವುದು.
ಗೃಹಸ್ಥನೇ, ಕೆಟ್ಟ ಸಂಗಾತಿಗಳೊಂದಿಗೆ ಸೇರಿದರೆ ಈ ಆರು ರೀತಿಯ ಪರಿಣಾಮಗಳಾಗುತ್ತದೆ.
21. ಗೃಹಸ್ಥನೇ, ಸೋಮಾರಿತನಕ್ಕೆ ವಶವಾಗುವುದರಿಂದ ಈ ಆರು ರೀತಿಯ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಸೋಮಾರಿಯು ಏನಾದರೂ ನೆಪ ಹೇಳಿ ಕೆಲಸವನ್ನು ಮಾಡದೆ ತನ್ನ ನಾಶವನ್ನು ತಾನೇ ತಂದುಕೊಳ್ಳುವನು.
1) ಆತನು ಕಾರ್ಯಕ್ಕೆ ಸಿದ್ಧನಾಗದೆ ಈ ನೆಪ ಹೇಳುತ್ತಾನೆ: ಓಹ್! ಈಗ ಅತಿ ಚಳಿಯಾಗಿದೆ. ಅಂತಹವನು ಉನ್ನತಿ ಏರಲಾರ, ಬದಲಾಗಿ ಇರುವ ಐಶ್ವರ್ಯ ಹಾನಿಯಾಗುತ್ತದೆ.
2) ಆತನು ಶ್ರಮಕ್ಕೆ ಸಿದ್ಧನಾಗದೆ ಈ ನೆಪ ಹೇಳುತ್ತಾನೆ: ಓಹ್! ಈಗ ಅತಿ ಬೇಸಿಗೆ (ಬಿಸಿ) ಯಾಗಿದೆ. ಅಂತಹವನು ಯಶಸ್ಸು ಸಂಪಾದಿಸಲಾರ, ಬದಲಾಗಿ ಇರುವ ಐಶ್ವರ್ಯ ಅತಿ ಬಳಕೆ ಮಾಡಿಬಿಡುತ್ತಾನೆ.
3) ಆತನು ಶ್ರಮಕ್ಕೆ ಸಿದ್ಧನಾಗದೇ ಈ ನೆಪ ಹೇಳುತ್ತಾನೆ: ಓಹ್! ಈಗಾಗಲೇ ಸಂಜೆಯಾಗಿದೆ ಎಂದು ಹೇಳಿ ಶ್ರಮಿಸುವುದಿಲ್ಲ. ಆಗ ಆತನ ಅಭಿವೃದ್ಧಿಯಾಗುವುದಿಲ್ಲ, ಬದಲಾಗಿ ಇರುವ ಐಶ್ವರ್ಯ ಕ್ಷೀಣಿಸುತ್ತದೆ.
4) ಆತನು ಶ್ರಮಕ್ಕೆ ಸಿದ್ಧನಾಗದೆ ಈ ನೆಪ ಹೇಳುತ್ತಾನೆ: ಓಹ್! ಇನ್ನೂ ಮುಂಜಾನೆಯಾಗಿಲ್ಲ ಎಂದು ಕೆಲಸ ಮಾಡಲಾರ. ಅಂತಹವನ ಐಶ್ವರ್ಯ ಅಭಿವೃದ್ಧಿಯಾಗದೆ ಹಣ ಖಚರ್ು ಮಾಡಿ ಕ್ಷೀಣಿಸುತ್ತದೆ.
5) ಆತನು ಶ್ರಮಕ್ಕೆ ಸಿದ್ಧನಾಗದೆ ಈ ನೆಪ ಹೇಳುತ್ತಾನೆ: ಓಹ್! ನನಗೆ ಈಗ ಹೊಟ್ಟೆ ತುಂಬಾ ಭತರ್ಿಯಾಗಿದೆ. ಅಂತಹವನು ಉನ್ನತಿಗೇರಲಾರ, ಬದಲಾಗಿ ಇರುವ ಐಶ್ವರ್ಯ ಖಚರ್ು ಮಾಡುತ್ತಾನೆ.
6) ಆತನು ಶ್ರಮಕ್ಕೆ ಸಿದ್ಧನಾಗುವ ಬದಲು ಈ ನೆಪ ಹೇಳುತ್ತಾನೆ: ಓಹ್! ನನಗೆ ಈಗ ಹಸಿವಾಗುತ್ತಿದೆ ಎಂದು ಹೇಳಿ ಶ್ರಮಪಡದೆ ಪರಿಶ್ರಮ ಮುಂದೂಡುತ್ತಾನೆ. ಅಂತಹವನು ಉನ್ನತಿಗೇರಲಾರ, ಬದಲಾಗಿ ಇರುವ ಐಶ್ವರ್ಯ ಖಚರ್ು ಮಾಡುತ್ತಾನೆ.
ಗೃಹಸ್ಥನೆ, ಯಾರು ಈ ರೀತಿ ಹುಡುಗಾಟತನ ರೀತಿಯಲ್ಲಿ ವತರ್ಿಸಿ, ಶ್ರಮಪಡದೆ ಇರುವನೋ, ಅವನು ಯಾವ ಐಶ್ವರ್ಯ ಸಂಪಾದಿಸಲಾರ ಮತ್ತು ಅವನಲ್ಲಿ ಯಾವುದೇ ಐಶ್ವರ್ಯ ಉಳಿದಿದ್ದರೆ ಅದೆಲ್ಲಾ ಖಚರ್ು ಮಾಡಿ ಕ್ಷೀಣಿಸಿ ನಾಶವಾಗುತ್ತದೆ.
22. ಈ ರೀತಿ ಹೇಳಿದ ಮೇಲೆ ಭಗವಾನರು ಉಳಿದ ಗಾಥೆಗಳನ್ನು ವ್ಯಕ್ತಪಡಿಸಿದರು.
1) ಮೂರು ವಿಧದ ಮಿತ್ರರಿದ್ದಾರೆ:
ಅ) ಕುಡಿತದ ವೇಳೆಯಲ್ಲಿ ಮಾತ್ರ ತಾನು ಮಿತ್ರನೆಂದು ನಟಿಸುವವನು.
ಆ) ಇನ್ನೊಬ್ಬ ಮಿತ್ರನು ಮುಂದೆ ಈ ರೀತಿ ಹೇಳುವನು: ಓಹ್! ನನ್ನ ಒಳ್ಳೆಯ ಮಿತ್ರ ಓಹ್! ನನ್ನ ಸುಮಿತ್ರ ಎಂದು. ಆದರೆ ಹಿಂದೆ ದ್ವೇಷದಿಂದ ಕೂಡಿ ಆತನಲ್ಲಿ ದೋಷವನ್ನು ಕಂಡುಹಿಡಿಯುವನು.
ಇ) ಮತ್ತೊಬ್ಬ ಮಿತ್ರನು ಪ್ರತಿಕೂಲ ಆಪತ್ತಿನ ಸಮಯದಲ್ಲಿ ತನ್ನ ಮಿತ್ರತ್ವ ಪ್ರಕಟಿಸುತ್ತಾನೆ.
2) ಸೂರ್ಯ ಉದಯಿಸಿದ ಮೇಲೂ ಮಲಗಿರುವುದು, ವ್ಯಭಿಚಾರದಲ್ಲಿ ತಲ್ಲೀನನಾಗಿರುವುದು, ದ್ವೇಷದಿಂದ, ಕೋಪದಿಂದ ಕೂಡಿ ಸರ್ಪದಂತೆ ಬುಸುಗುಟ್ಟುವುದು, ದಂಡದಿಂದ ಹಿಂಸಿಸುವುದು, ಜಿಪುಣರೊಂದಿಗೆ, ಕೆಟ್ಟ ಗೆಳೆಯರೊಂದಿಗೆ ಇರುವುದು. ಗೃಹಸ್ಥನೇ, ಈ ಆರು ಮೂಲಗಳು ಮನುಷ್ಯನನ್ನು ಅವನತಿಗೆ ತಳ್ಳುತ್ತದೆ.
3) ಯಾರು ಕೆಟ್ಟ ಗೆಳೆಯರೊಂದಿಗೆ ಕೂಡಿರುವರೋ, ಪರರ ಉನ್ನತಿಗೆ ಮತ್ಸರ ಪಡುವನೋ, ಪಾಪದ ಪ್ರೋತ್ಸಾಹದ ಸ್ಥಳಗಳಿಗೆ ಪದೇ ಪದೇ ಹೋಗುವನೋ ಹಾಗು ಖಚರ್ು ಮಾಡುವನೋ, ಅಂತಹವನು ಇಹದಲ್ಲಿಯೂ ಉನ್ನತಿ ಮಾಡಲಾರ, ಪರದಲ್ಲಿಯೂ ಸುಗತಿ ಗಳಿಸಲಾರ.
4) ವ್ಯಭಿಚಾರಕ್ಕೆ ವಶನಾಗಿ, ಕುಡಿತದ ಚಟಕ್ಕೆ ಬಲಿಯಾಗಿ, ನೃತ್ಯ-ಸಂಗೀತಗಳಿಗೆ ಬದ್ಧನಾಗಿ, ಹಗಲಿನಲ್ಲಿ ನಿದ್ರಿಸುವವನಾಗಿ, ಅವೇಳೆಯಲ್ಲಿ ಬೀದಿಗಳಲ್ಲಿ ತಿರುಗಾಡುವವನಾಗಿ, ಜಿಪುಣನಾಗಿ ಇರುವನೋ ಅವೆಲ್ಲಾ ಆತನಿಗೆ ಅವನತಿಯನ್ನು ನೀಡುತ್ತದೆ.
5) ಯಾರು ಜೂಜಾಟದಲ್ಲಿ ಆನಂದಿಸುವನೋ, ಕುಡಿತದಲ್ಲಿ ತಲ್ಲೀನನಾಗಿರು ವನೋ, ವ್ಯಭಿಚಾರದಲ್ಲಿ ನಿರತನಾಗುವನೋ, ಅಸಭ್ಯ ಸಂಗಾತಿಗಳ ಜೊತೆ ಸೇರುವನೋ ಮತ್ತು ಜ್ಞಾನಿಗಳ ಹಾಗು ವೃದ್ಧರ ಜೊತೆ ಸೇರುವುದಿಲ್ಲವೋ, ಅಂತಹವನ ಐಶ್ವರ್ಯ ಕೃಷ್ಣ ಪಕ್ಷದ ಚಂದಿರನಂತೆ ಕ್ಷೀಣಿಸುತ್ತದೆ.
6) ಯಾರ ಸ್ಥಿತಿಯು ಸದಾ ಕುಡಿತದ ಅಂಗಡಿಗಳಲ್ಲಿ ಸೇರುವುದು ನಿಶ್ಚಿತವೋ ಮತ್ತು ಕುಡಿತದಲ್ಲಿ ಆನಂದಿಸುವನೋ, ಅವನು ನೀರಿನಲ್ಲಿ ಬಿದ್ದ ಕಲ್ಲು ಮುಳುಗುವಂತೆ ಸಾಲಗಾರನಾಗಿ ತನ್ನ ಕುಟುಂಬಕ್ಕೆ ಕುಖ್ಯಾತಿ ತಂದು ತನ್ನ ಅವನತಿ ಮಾಡಿಕೊಳ್ಳುವನು.
7) ಯಾರಿಗೆ ಹಗಲು ಮಲಗುವುದು ಅಭ್ಯಾಸವಾಗಿದೆಯೋ ಯಾರು ಮುಂಜಾನೆಗೆ ಮೊದಲು ಏಳುವುದಿಲ್ಲವೋ, ಕುಡಿತದ ಅಮಲಿನಲ್ಲಿ ಆತನ ಸ್ಥಿತಿಯಿದ್ದು, ಹಾಳಾಗುತ್ತಾನೆಯೋ, ವ್ಯಭಿಚಾರದಲ್ಲಿ ತಲ್ಲೀನನಾಗಿರುವನೋ, ಆತನು ಗೃಹಸ್ಥ ಜೀವನ ಮಾಡಲು ಶಕ್ಯನಾಗಿರುವುದಿಲ್ಲ.
8) ಯಾರು ಓಹ್! ಅತಿ ಚಳಿಯೆಂದು, ಓಹ್! ಅತಿ ಸೆಖೆಯೆಂದು, ಓಹ್! ಅತಿ ನಿಧಾನ ಸಂಜೆಯಾಯಿತು ಎಂದು ಯಾರು ಮಾಡಬೇಕಾದ ಕರ್ತವ್ಯಗಳನ್ನು ಮಾಡುವುದಿಲ್ಲವೋ ಅಂತಹವನು ಐಶ್ವರ್ಯವನ್ನು ಸಂಪಾದಿಸಲಾರ ಹಾಗು ಆತನ ಹತ್ತಿರ ಐಶ್ವರ್ಯ ಇರುವುದಿಲ್ಲ.
9) ಯಾರು ಚಳಿಗಾಗಲಿ ಅಥವಾ ಬಿಸಿಗಾಗಲಿ ಯಾವುದೇ ತಡೆಗಳಿಗೆ ತೃಣಮಾತ್ರವು ಲೆಕ್ಕಿಸುವುದಿಲ್ಲವೋ, ಹಾಗು ಮಾಡಬೇಕಾದುದನ್ನು ಮಾಡುವನೋ ಅಂತಹ ಮನುಷ್ಯನು ಐಶ್ವರ್ಯ ವಂಚಿತನಾಗುವುದಿಲ್ಲ, ಸದಾ ಸುಖಿಯಾಗಿರುತ್ತಾನೆ.
23. ಗೃಹಸ್ಥನೇ, ನಾಲ್ಕು ರೀತಿಯ ಮಿತ್ರರಿದ್ದಾರೆ, ಅವರು ಮಿತ್ರನಂತೆಯೇ ನಟಿಸುತ್ತಾರೆ. ಆದರೆ ಅಮಿತ್ರರಾಗಿರುತ್ತಾರೆ. ಯಾಕೆಂದರೆ:
1) ಒಬ್ಬನು ಬರಿಗೈಯಲ್ಲಿ ಬರುತ್ತಾನೆ, ಆದರೆ ಹೋಗುವಾಗ ಏನಾದರೂ ತೆಗೆದು ಕೊಂಡೇ ಹೋಗುತ್ತಾನೆ. ಆತನನ್ನು ಮಿತ್ರನ ವೇಷಧಾರಿ ಮಿತ್ರ ಎಂದೇ ತಿಳಿ.
2) ಒಬ್ಬನು ಸಿಹಿ ಮಾತಿನಲ್ಲೇ ಮಿತ್ರನೆಂದು ವತರ್ಿಸುತ್ತಾನೆ. ತಾನು ನಿನಗೆ ಏನಾದರೂ ದಾನ ಅಥವಾ ಸಹಾಯ ಮಾಡುವೆನೆಂದೇ ಹೇಳಿಕೊಳ್ಳುತ್ತಾನೆ. ಆತನನ್ನು ವೇಷಧಾರಿ ಮಿತ್ರ ಎಂದು ತಿಳಿ.
3) ಒಬ್ಬನು ನಿನಗೆ ಕೆಲವು ವಿಷಯಗಳನ್ನು ಕರುಣೆಯಿಂದ (ಹೊಗಳುವವನು) ಹೇಳಿದಂತೆ ಕಾಣುವುದು. ಆದರೆ ಆತನು ಮನದಲ್ಲಿ ದ್ವೇಷವೇ, ಅಹಿತವೇ ಇಚ್ಛಿಸುತ್ತಾನೆ. ಆತನನ್ನು ವೇಷಧಾರಿ ಮಿತ್ರ ಎಂದು ತಿಳಿ.
4) ಒಬ್ಬನು ನಿನ್ನನ್ನು ಪೂರ್ಣವಾಗಿ ಹಾಳು ಮಾಡಲೆಂದೇ ನಿನ್ನ ಜೊತೆ ಸೇರುತ್ತಾನೆ. ಆತನನ್ನು ವೇಷಧಾರಿ ಮಿತ್ರನೆಂದು ತಿಳಿದ.
24. ಗೃಹಸ್ಥನೇ ನಾಲ್ಕು ವಿಧದ ಅಮಿತ್ರರಲ್ಲಿ ಬರಿಗೈಯಲ್ಲಿ ಬಂದು ಏನಾದರೂ ಕೊಂಡೊಯ್ಯುವಂತಹನ ಲಕ್ಷಣಗಳು ಈ ರೀತಿ ಇರುತ್ತದೆ:
1) ಆತನು ಏನಾದರೂ ತೆಗೆದುಕೊಳ್ಳಲೆಂದೇ ನಿನ್ನನ್ನು ಭೇಟಿ ಮಾಡುತ್ತಾನೆ.
2) ಆತನು ಅಲ್ಪವನ್ನು ಕೊಡುತ್ತಾನೆ, ಆದರೆ ಮಹತ್ತನ್ನು ಪಡೆಯುತ್ತಾನೆ.
3) ಆತನು ನಿನಗೆ ಸಹಾಯ ಮಾಡಬೇಕಾದಾಗ ನಿನ್ನ ಭಯದಿಂದ ಸ್ವಲ್ಪ ಮಾಡಬಹುದು, ಆದರೆ ಅಂತಹ ಸಹೃದಯ ಇರುವುದಿಲ್ಲ.
4) ಆತನು ನಿನ್ನೊಂದಿಗೆ ಬೆರೆಯುವುದು ಕೇವಲ ತನ್ನ ಸ್ವಾರ್ಥಕ್ಕೆ ಮಾತ್ರ.
ಗೃಹಸ್ಥನೇ ಬರಿಗೈಯಲ್ಲಿ ಬಂದು ಏನಾದರೂ ತೆಗೆದುಕೊಂಡು ಹೋಗುವವನ ಲಕ್ಷಣಗಳು ಈ ನಾಲ್ಕು ಬಗೆಯಿರುತ್ತದೆ.
25. ಗೃಹಸ್ಥನೇ, ಬರೀ ಮಾತನಾಡುವ ವೇಷಧಾರಿ ಮಿತ್ರನ ಲಕ್ಷಣಗಳು ಈ ನಾಲ್ಕು ಬಗೆಯಿರುತ್ತದೆ. ಹೇಗೆಂದರೆ:
1) ಆತನು ಹಿಂದಿನ ಘಟನೆಗಳನ್ನು ಬರೀ ಹೇಳುತ್ತಾ ತನ್ನ ಪ್ರೀತಿಯನ್ನು ಪ್ರಕಟಗೊಳಿಸಲು ಪ್ರಯತ್ನಿಸುತ್ತಾನೆ.
2) ಆತನು ಭವಿಷ್ಯದ ಬಗ್ಗೆ ಬರೀ ಹೇಳುತ್ತಾ ತಾನು ಪ್ರೀತಿಸುವಂತೆ ಯತ್ನಿಸುತ್ತಾನೆ.
3) ಆತನು ಸ್ವಲ್ಪವೂ ಲಾಭವಿಲ್ಲದೆ ಮಾತುಗಳನ್ನು ಆಡುತ್ತಾ ತನ್ನ ಸಭ್ಯತನವನ್ನು ಪ್ರದಶರ್ಿಸುತ್ತಾನೆ.
4) ಕಷ್ಟಕಾಲ ಬಂದಾಗ ಆತನಲ್ಲಿ ಮೊರೆಹೋದರೆ ಇಲ್ಲದ ನೆಪಗಳನ್ನು ಹೇಳಿ ನಿರಾಕರಿಸಿಬಿಡುತ್ತಾನೆ.
ಗೃಹಸ್ಥನೇ, ಬರೀ ಮಾತನಾಡುವ (ಮಾತಿನಲ್ಲೇ ಸ್ನೇಹವಿರುವ) ಮಿತ್ರ ವೇಷಧಾರಿಯಲ್ಲಿ ಈ ನಾಲ್ಕು ಲಕ್ಷಣಗಳು ಇರುತ್ತವೆ.
26. ಗೃಹಸ್ಥನೇ, ಪ್ರಿಯವಾಗಿ ಮಾತನಾಡುವ (ಹೊಗಳುವ) ಮಿತ್ರ, ಆದರೆ ಹಿಂದೆ ದ್ವೇಷವಿರುವ ವೇಷಧಾರಿ ಮಿತ್ರನ ಲಕ್ಷಣಗಳು ಈ ನಾಲ್ಕು ರೀತಿಯಿರುತ್ತದೆ:
1) ಪಾಪಕಾರ್ಯಕ್ಕೆ ಆಹ್ವಾನ ಬಂದಾಗ ಆತನು ಅದಕ್ಕೆ ಪ್ರೋತ್ಸಾಹಿಸುತ್ತಾನೆ.
2) ಪುಣ್ಯಕಾರ್ಯಕ್ಕೆ ಆಹ್ವಾನ ಬಂದಾಗ ಆತನು ಅದಕ್ಕೆ ಪ್ರೋತ್ಸಾಹಿಸುವುದಿಲ್ಲ, ನಿರಾಕರಿಸುತ್ತಾನೆ.
3) ನಿನ್ನ ಮುಂದೆ ನಿನ್ನ ಸದ್ಗುಣಗಳನ್ನು ಹೊಗಳುತ್ತಾನೆ.
4) ನಿನ್ನ ಹಿಂದೆ ನಿನ್ನ ದೋಷಗಳನ್ನು ಎತ್ತಾಡಿ ನಿಂದಿಸುತ್ತಾನೆ.
ಗೃಹಸ್ಥನೇ, ಮುಂದೆ ಪ್ರೀತಿ, ಹಿಂದೆ ದ್ವೇಷದಿಂದ ಇರುವ ವೇಷಧಾರಿ ಮಿತ್ರನ ಲಕ್ಷಣಗಳು ಈ ನಾಲ್ಕು ರೀತಿ ಇರುತ್ತದೆ.
27. ಗೃಹಸ್ಥನೇ, ನಿನ್ನ ಸಂಪತ್ತು ನಾಶಕ್ಕೆ ನಿನ್ನ ಹಿಂದೆ ಬಿದ್ದಿರುವ ವೇಷಧಾರಿ ಮಿತ್ರ ಈ ನಾಲ್ಕು ರೀತಿ ಇರುತ್ತಾನೆ.
1) ಆತನು ನಿನಗೆ ಕುಡಿತಕ್ಕೆ ಪದೇ ಪದೇ ಕರೆದುಕೊಂಡು ಹೋಗುತ್ತಾನೆ.
2) ಆತನು ನಿನಗೆ ಅವೇಳೆಯಲ್ಲಿ ಬೀದಿಗಳಲ್ಲಿ ಪದೇ ಪದೇ ತಿರುಗಾಡಿಸುತ್ತಾನೆ.
3) ಆತನು ನಿನಗೆ ನೃತ್ಯ, ಗೀತೆ, ಸಂಗೀತ ಇಂತಹ ಸ್ಥಳಗಳಿಗೆ ನಿರಂತರ ಕರೆದೊಯ್ಯುತ್ತಾನೆ.
4) ಆತನು ನಿನಗೆ ಜೂಜಾಟದ ಸ್ಥಳಗಳಿಗೆ ಜೂಜಾಡಲು ನಿರಂತರ ಕರೆದೊಯ್ಯುತ್ತಾನೆ. ಅದು ನಿನಗೆ ಅವಶ್ಯಕ ಕರ್ತವ್ಯಗಳನ್ನು ಅಲಕ್ಷಿಸುವಂತೆ ಮಾಡುತ್ತದೆ.
ಗೃಹಸ್ಥನೇ, ನಿನ್ನ ಐಶ್ವರ್ಯ ನಾಶಕ್ಕೆ ನಿನ್ನ ಜೊತೆಯಿರುವ ಮಿತ್ರನ ಲಕ್ಷಣಗಳು ಈ ರೀತಿ ಇರುತ್ತದೆ.
28. ಈ ವಿಷಯಗಳನ್ನು ತಿಳಿಸಿದ ನಂತರ ಪರಮಪೂಜ್ಯರು ಮತ್ತೆ ಈ ಗಾಥೆಗಳನ್ನು ತಿಳಿಸಿದರು:
ನಾಲ್ಕು ವಿಧದ ಮಿತ್ರರಿದ್ದಾರೆ:
1) ಒಬ್ಬ ಬರಿಗೈಯಲ್ಲಿ ಬಂದು ಏನಾದರೂ ತೆಗೆದುಕೊಂಡು ಹೋಗುವ ಇಚ್ಛೆಯಿಂದ ಇರುತ್ತಾನೆ.
2) ಒಬ್ಬನು ಕೇವಲ ಮಾತಿನಿಂದಲೇ ಆದರಿಸುತ್ತಾನೆ.
3) ಒಬ್ಬನು ಪ್ರಿಯವಾಗಿ ವಿಷಯಗಳನ್ನು ತಿಳಿಸುತ್ತಾನೆ, ಆದರೆ ಹೃದಯದಲ್ಲಿ ದ್ವೇಷಿಸುತ್ತಾನೆ.
4) ಒಬ್ಬನು ನಿನ್ನ ಐಶ್ವರ್ಯ ನಾಶಕ್ಕೆ ನಿನ್ನೊಂದಿಗೆ ಇರುತ್ತಾನೆ.
ಇವರನ್ನು ಕೂಲಂಕುಷವಾಗಿ ಚಿಂತಿಸಿ ಜ್ಞಾನಿಯು ಅರಿತು, ಕ್ರೂರ ಮೃಗಗಳಿಂದ ಹಾಗು ಡಕಾಯಿತರಿಂದ ಕೂಡಿದ ದಾರಿಯನ್ನು ತ್ಯಜಿಸುವಂತೆ ಅವರ ಜೊತೆಯನ್ನು ತ್ಯಜಿಸಬೇಕು. ಈಗ ಯಾರ ಜೊತೆ ಮಿತ್ರತ್ವ ಹೊಂದಿರಬೇಕು ಎಂದು ಹೇಳುತ್ತೇನೆ.
29. ಗೃಹಸ್ಥನೇ, ನಾಲ್ಕು ವಿಧದ ಸಹೃದಯ ಮಿತ್ರರಿದ್ದಾರೆ, ಅವರು ಜೊತೆಗೂಡಲು ಅರ್ಹರಾಗಿರುತ್ತಾರೆ. ಯಾರೆಂದರೆ:
1) ನಿನಗೆ ಸಹಾಯ ಮಾಡುವಂತಹ ಸಹೃದಯನು.
2) ನಿನ್ನ ಸುಖ ಹಾಗು ದುಃಖಗಳಲ್ಲಿ ಸಮನಾಗಿರುವವನು.
3) ನಿನ್ನ ಅಭಿವೃದ್ಧಿಗೆ ಕಾರಣನಾಗುವ ಸಹೃದಯನು.
4) ನಿನ್ನಲ್ಲಿ ಅಪಾರ ಕರುಣೆಯಿರುವ ಸಹೃದಯನು.
30. ಗೃಹಸ್ಥನೇ, ನಿನಗೆ ಸಹಾಯ ಮಾಡುವಂತಹ ಮಿತ್ರನನ್ನು ನಾಲ್ಕು ರೀತಿಯಲ್ಲಿ ಕಾಣಬಹುದು:
1) ಕುಡಿತವಾಗಿ ತಡೆಯುಂಟಾದಾಗ ಅಥವಾ ಇನ್ನಾವುದೇ ಅಂತಹ ಅಡಚಣೆ ಬಂದಾಗ ಆತನು ರಕ್ಷಕನಾಗಿರುತ್ತಾನೆ.
2) ಆತನು ತನ್ನ ಸ್ನೇಹಿತನ ಆಸ್ತಿಯನ್ನು ರಕ್ಷಣೆ ಮಾಡುತ್ತಾನೆ. ಬೇರೆಯವರನ್ನು ಅಪಹರಿಸಲು ಬಿಡುವುದಿಲ್ಲ.
3) ಭಯದಿಂದ ಅಥವಾ ಚಿಂತೆಯಿಂದ ಇದ್ದಾಗ ಮಿತ್ರನು ಬಂದು ಸಮಾಧಾನಪಡಿಸಿ ಶಾಂತಿ ಉಂಟುಮಾಡುತ್ತಾನೆ.
4) ಕಷ್ಟ ಬಂದಾಗ ಅಗತ್ಯಕ್ಕಿಂತ ಹೆಚ್ಚಿನದಷ್ಟು ಸಹಾಯ ಮಾಡುತ್ತಾನೆ. (ಹಣವನ್ನು ಕೇಳಿದಾಗ ಕೇಳಿದ್ದಕ್ಕಿಂತ ಹೆಚ್ಚು ಕೊಡುತ್ತಾನೆ).
ಗೃಹಸ್ಥನೇ, ಸಹಾಯ ಮಾಡುವವನ ಲಕ್ಷಣಗಳು ಈ ರೀತಿ ಇರುತ್ತವೆ.
31. ಗೃಹಸ್ಥನೇ, ಸುಖ ಮತ್ತು ಶೋಕಗಳಲ್ಲಿ ಸಮಭಾಗಿಯಾಗಿರುವವನ ಲಕ್ಷಣಗಳು ಈ ನಾಲ್ಕು ರೀತಿಯಲ್ಲಿ ಇರುತ್ತದೆ, ಹೇಗೆಂದರೆ:
1) ಆತನು ತನ್ನೆಲ್ಲಾ ರಹಸ್ಯಗಳನ್ನು ಹೇಳುತ್ತಾನೆ, ಗುಟ್ಟಾಗಿಡುವುದಿಲ್ಲ.
2) ಮಿತ್ರನ (ನಿನ್ನ) ರಹಸ್ಯಗಳನ್ನು ಆತನು ಸ್ವಲ್ಪವೂ ಬಯಲು ಮಾಡುವುದಿಲ್ಲ.
3) ಮಿತ್ರನಿಗೆ (ನಿನಗೆ) ಎಂತಹ ವಿಪತ್ತು ಬರಲಿ, ತೊರೆಯುವುದಿಲ್ಲ, ಜೊತೆಯಲ್ಲಿಯೇ ಇರುತ್ತಾನೆ.
4) ಮಿತ್ರನಿಗಾಗಿ (ನಿನಗಾಗಿ) ಆತನು ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧನಾಗಿರುತ್ತಾನೆ.
ಗೃಹಸ್ಥನೇ, ಈ ನಾಲ್ಕು ರೀತಿ ಸುಖ ಶೋಕಗಳಲ್ಲಿ ಸಮಭಾಗಿಯಾಗಿರುವ ಮಿತ್ರನ ಲಕ್ಷಣಗಳಾಗಿರುತ್ತದೆ.
32. ಗೃಹಸ್ಥನೇ, ನಿನ್ನ ಉನ್ನತಿಗೆ ಕಾರಣನಾಗುವ ಸಹೃದಯ ಮಿತ್ರನ ಲಕ್ಷಣಗಳು ಈ ನಾಲ್ಕು ರೀತಿ ಇರುತ್ತದೆ:
1) ಗೃಹಸ್ಥನೇ, ನಿನ್ನ ಉನ್ನತಿಗೆ ಕಾರಣನಾಗುವ ಸಹೃದಯ ಮಿತ್ರನ ಲಕ್ಷಣಗಳು ಈ ನಾಲ್ಕು ರೀತಿ ಇರುತ್ತದೆ.
2) ಆತನು ನಿನಗೆ ಕುಶಲ ಕಾರ್ಯಗಳಲ್ಲಿ (ಪುಣ್ಯ) ತೊಡಗುವಂತೆ ಮಾಡುತ್ತಾನೆ.
3) ಆತನು ನೀನು ಕೇಳಿರದಂತಹ ಸುಬೋಧನೆ ಕೇಳಲು ಕಾರಣಕರ್ತ ನಾಗುತ್ತಾನೆ.
4) ಆತನು ನಿನಗೆ ಸುಗತಿಯನ್ನು ತಲುಪುವಂತಹ ಹಾದಿಯನ್ನು ತೋರಿಸುತ್ತಾನೆ.
ಗೃಹಸ್ಥನ ಈ ನಾಲ್ಕು ರೀತಿಯಲ್ಲಿ ನಿನ್ನ ಉನ್ನತಿಗೆ ಕಾರಣವಾಗುವ ಸಹೃದಯ ಮಿತ್ರನ ಲಕ್ಷಣಗಳು ಕಾಣುತ್ತದೆ.
33. ಗೃಹಸ್ಥನೇ, ನಿನ್ನಲ್ಲಿ ಸದಾ ಕರುಣೆಯುಳ್ಳಂತಹ ಸಹೃದಯ ಮಿತ್ರನ ಲಕ್ಷಣಗಳು ಈ ನಾಲ್ಕು ಬಗೆಯಿರುತ್ತದೆ:
1) ನಿನ್ನ ಕೇಡುಗಾಲದಲ್ಲಿ ಅಗಾಧ ಸಹಾನುಭೂತಿ ವ್ಯಕ್ತಪಡಿಸುತ್ತಾನೆ.
2) ನಿನ್ನ ಯಶಸ್ಸಿನಲ್ಲಿ ಆನಂದಿಸುತ್ತಾನೆ.
3) ನಿನ್ನ ದುರ್ಗಣಗಳನ್ನು ಯಾರಾದರೂ ಎತ್ತಾಡಲಿಕ್ಕೆ ತೊಡಗಿದರೆ ಅವರನ್ನು ತಡೆಯುತ್ತಾನೆ.
4) ನಿನ್ನ ಬಗ್ಗೆ ಯಾರಾದರೂ ಪ್ರಶಂಸೆ ಮಾಡಿದರೆ ತಾನು ಸಹಾ ಸ್ತುತಿ ಮಾಡುತ್ತಾನೆ.
ಗೃಹಸ್ಥನೇ, ನಿನ್ನಲ್ಲಿ ಸದಾ ಕರುಣೆಯಿರುವ ಸಹೃದಯ ಲಕ್ಷಣಗಳು ಈ ನಾಲ್ಕು ರೀತಿಯಿರುತ್ತದೆ.
34. ಹೀಗೆ ಹೇಳಿದ ನಂತರ ಭಗವಾನರು ಈ ಗಾಥೆಗಳನ್ನು ನುಡಿದರು:
ಈ ರೀತಿಯಾಗಿ ನಿನ್ನ ಮಿತ್ರರು ನಾಲ್ಕು ಬಗೆಯುಳ್ಳವರಾಗಿರುತ್ತಾರೆ. ಅವರು
1) ನಿನಗಾಗಿ ಸದಾ ಸಹಾಯ ಮಾಡುವವನು.
2) ನಿನ್ನ ಸುಖ-ದುಃಖಗಳಲ್ಲಿ ಸಮಾನವಾಗಿ ಸಹಭಾಗಿಯಾಗಿರುವವನು.
3) ನಿನಗೆ ಉನ್ನತಿಯ ಹಾದಿ ತೋರುವವನು
4) ನಿನ್ನಲ್ಲಿ ಸದಾ ಕರುಣೆಯನ್ನು ಹೊಂದಿರುವವನು.
ವಿವೇಕಿ ಮನುಷ್ಯನು ಅಂತಹ ಮಿತ್ರರೊಂದಿಗೆ ಅದೇ ರೀತಿಯಾದ ಭಕ್ತಿ, ನಿಷ್ಠೆಯನ್ನು ಹೊಂದಿ ಸದಾ ಜೊತೆಯಲ್ಲಿರುತ್ತಾನೆ. ಹೇಗೆಂದರೆ ತಾಯಿಯು ತನ್ನ ಏಕಮಾತ್ರ ಪುತ್ರನನ್ನು ಅಂಟಿಕೊಳ್ಳುವ ಹಾಗೆ ಮಿತ್ರತ್ವದಿಂದ ಕೂಡಿರುತ್ತಾನೆ.
ಶೀಲವಂತ ಹಾಗು ವಿವೇಕಿ ಮನುಷ್ಯನು ಸದಾ ಪ್ರಜ್ವಲಿಸಿ ಕಾಂತಿಯುತನಾಗಿರುತ್ತಾನೆ. ಹೇಗೆಂದರೆ ಕತ್ತಲೆಯಲ್ಲಿ ಬೆಟ್ಟದ ಮೇಲೆ ಅಗಾಧ ಬೆಂಕಿ ಹುಟ್ಟಿದಾಗ ಹೊಳೆಯುವ ಹಾಗೆ. ಅವನು ಪರರಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದೆ ತನ್ನ ಐಶ್ವರ್ಯವನ್ನು ಸಂಗ್ರಹಿಸುತ್ತಾನೆ. ಹೇಗೆಂದರೆ ಜೇನುಹುಳುವು ಹೂವುಗಳಲ್ಲಿ ಅದರ ಪರಾಗಗಳಿಗಾಗಲಿ, ಕೇಸರಕ್ಕಾಗಲಿ, ಗಾಯಗೊಳಿಸದೆ, ಯಾವ ಹಾನಿಯೂ ಮಾಡದೆ ಮಕರಂದವನ್ನು ಹೀರಿ ಸಂಗ್ರಹಿಸುವ ಹಾಗೆ. ಆತನು ಐಶ್ವರ್ಯವನ್ನು ಸಂಗ್ರಹಿಸುತ್ತಾನೆ, ಹೇಗೆಂದರೆ ಇರುವೆಯು ಮರಳು ಕಾಳನ್ನು ಹೊತ್ತುಕೊಂಡು ಸಂಗ್ರಹಿಸಿ ತನ್ನ ತಾಣವನ್ನು (ಇರುವೆ ದಿಬ್ಬ) ರಚಿಸುವ ಹಾಗೆ ಸಂಗ್ರಹಿಸುತ್ತಾನೆ. ಹೀಗೆ ಐಶ್ವರ್ಯವನ್ನು ಸಂಗ್ರಹಿಸಿದ ಮೇಲೆ ಆತನು ದಿನನಿತ್ಯವು ಗೃಹಸ್ಥನ ಕರ್ತವ್ಯಗಳನ್ನು ಚಾಚುತಪ್ಪದೆ ಪಾಲಿಸುತ್ತಾನೆ.
ನ್ಯಾಯಬದ್ಧವಾದ ರೀತಿಯಲ್ಲಿ ಸಂಪಾದಿಸಿದ ಅವನು ಐಶ್ವರ್ಯವನ್ನು ಆತನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತಾನೆ. ಮೊದಲನೇ ಭಾಗವನ್ನು ತನ್ನ ಬಳಕೆ (ಪೋಷಣೆಗೆ) ವಿನಿಯೋಗಿಸುತ್ತಾನೆ. ಎರಡನೇ ಭಾಗವನ್ನು ತನ್ನ ವೃತ್ತಿಗೆ ಹಾಕಿ ವೃದ್ಧಿಪಡಿಸುತ್ತಾನೆ. ಯಾವುದೆಂದರೆ: ವ್ಯವಸಾಯ ಅಥವಾ ವ್ಯಾಪಾರ ಇತ್ಯಾದಿ. ಮತ್ತು ಒಂದು ಭಾಗವನ್ನು ಆಪತ್ಕಾಲಕ್ಕೆ ಸಹಾಯವಾಗಲೆಂದು ಇಡುತ್ತಾನೆ. ಉದಾಹರಣೆಗೆ: ರೋಗ ಅಥವಾ ರಾಜದಿಂದ ಅಪಾಯ, ಕಳ್ಳರಿಂದ ಅಪಾಯ, ಪ್ರವಾಹ, ಅಥವಾ ಯಾವುದೇ ವಿಪತ್ತಿಗೆ ಅನುಕೂಲವಾಗಲೆಂದು ಇಡುತ್ತಾನೆ. ಈ ರೀತಿಯಾಗಿ ವತರ್ಿಸುವವನ ಬಳಿ ಸ್ನೇಹಿತರು (ಮಿತ್ರರು) ಆಕಷರ್ಿತರಾಗುತ್ತಾರೆ.
35. ಗೃಹಸ್ಥನೇ, ಯಾವರೀತಿ ಬುದ್ಧರ ಶಿಷ್ಯನು ಆರು ದಿಕ್ಕುಗಳಿಂದ ಆಗುವ ಅಪಾಯಗಳಿಂದ ರಕ್ಷಣೆ ಪಡೆಯುತ್ತಾನೆ. ಆತನು ಈ ರೀತಿ ರಕ್ಷಣೆ ಪಡೆಯುತ್ತಾನೆ.
1) ತಂದೆ ಮತ್ತು ತಾಯಿಯನ್ನು ಪೂರ್ವವೆಂದು ತಿಳಿದು ಅವರಿಗೆ ಪೂಜಿಸುವುದು.
2) ಗುರುಗಳನ್ನು ದಕ್ಷಿಣ ದಿಕ್ಕು ಎಂದು ತಿಳಿದು ಅವರಿಗೆ ಪೂಜಿಸುವುದು.
3) ಪತ್ನಿ ಹಾಗು ಪುತ್ರರನ್ನು ಪಶ್ಚಿಮವೆಂದು ತಿಳಿಸಿ ಪೂಜಿಸುವುದು.
4) ಮಿತ್ರರು ಹಾಗು ಬಂಧುಗಳನ್ನು ಉತ್ತರವೆಂದು ತಿಳಿದು ಅವರಿಗೆ ಪೂಜಿಸುವುದು.
5) ಸೇವಕರನ್ನು ಕೆಳದಿಕ್ಕು ಎಂದು ಭಾವಿಸಿ ಪೂಜಿಸುವುದು
6) ಭಿಕ್ಖುಗಳನ್ನು ಮತ್ತು ಬ್ರಾಹ್ಮಣರನ್ನು ಊಧ್ರ್ವ ದಿಕ್ಕು ಎಂದು ಭಾವಿಸಿ ಅದನ್ನು ಪೂಜಿಸುವುದು.
36. ಗೃಹಸ್ಥನೇ ಈ ಐದು ರೀತಿ ಮಕ್ಕಳು ತಮ್ಮ ತಂದೆ-ತಾಯಿಯರಿಗೆ ಪ್ರತಿಯಾಗಿ ಕರ್ತವ್ಯ ಸಲ್ಲಿಸಬೇಕು. ಇದು ಪೂರ್ವ ದಿಕ್ಕಿನ ಸಾರ.
1) ಅವರಿಗೆ ಸಹಾಯ ಮತ್ತು ರಕ್ಷಣೆ ನೀಡಬೇಕು ಮತ್ತು ಅವರ ಅವಶ್ಯಕತೆ ಪೂರೈಸಬೇಕು.
2) ತಮ್ಮ ತಂದೆ-ತಾಯಿಯರ ಕೆಲಸಗಳನ್ನು ತಾವೇ ಮಾಡಬೇಕು.
3) ಅವರು ತಮ್ಮ ಕುಟುಂಬದ ಕೀತರ್ಿಯನ್ನು ಕಾಪಾಡಬೇಕು, ಮುಂದುವರೆಸಬೇಕು.
4) ಅವರು ಜ್ಞಾನಿಗಳಾಗಿ, ಕರ್ತವ್ಯಶೀಲರಾಗಿ ತಂದೆ-ತಾಯಿ ಆಸ್ತಿಗೆ ಅರ್ಹರಾಗಬೇಕು.
5) ತಂದೆ-ತಾಯಿಗಳ ಮೃತ್ಯುವಿನ ಅನಂತರ ಅವರ ಹೆಸರಿನಲ್ಲಿ ದಾನ ಮಾಡಿ ಆ ಫಲವನ್ನು ಅವರಿಗೆ ವಗರ್ಾಯಿಸಬೇಕು.
ಗೃಹಸ್ಥನೇ, ಈ ಐದು ರೀತಿಯಲ್ಲಿ ಮಕ್ಕಳು ತಂದೆ-ತಾಯಿಯರಿಗೆ ಪ್ರತಿಯಾಗಿ ಕರ್ತವ್ಯ ಸಲ್ಲಿಸಿದಾಗ ಇದೇ ಪೂರ್ವ ದಿಕ್ಕಿನ ಸಾರ.
37. ಗೃಹಸ್ಥನೇ, ಈ ಐದು ವಿಧದಿಂದ ತಂದೆ-ತಾಯಿಗಳು ಸಹಾ ತಮ್ಮ ಕರ್ತವ್ಯವನ್ನು ಮಕ್ಕಳಿಗೆ ಮಾಡಬೇಕು:
1) ಮಕ್ಕಳು ಪಾಪ ಮಾಡದಂತೆ ನಿಯಂತ್ರಿಸಬೇಕು.
2) ಅವರನ್ನು ಕುಶಲ ಕಾರ್ಯ (ಪುಣ್ಯ) ಗಳಲ್ಲಿ ತೊಡಗಿಸಬೇಕು.
3) ಅವರಿಗೆ ಕಲೆ ಮತ್ತು ವಿಜ್ಞಾನ ಮುಂತಾದ ವಿದ್ಯಾಭ್ಯಾಸ ಕೊಡಿಸಬೇಕು.
4) ಅವರಿಗೆ ಯೋಗ್ಯವಾದ ವಧು-ವರರನ್ನು ಒದಗಿಸಿ ವಿವಾಹಗೊಳಿಸಬೇಕು.
5) ಅವರಿಗೆ ಯೋಗ್ಯ ಕಾಲದಲ್ಲಿ ಆಸ್ತಿಯನ್ನು ನೀಡಬೇಕು.
ಗೃಹಸ್ಥನೆ, ಈ ರೀತಿಯಾಗಿ ತಂದೆ-ತಾಯಿಗಳು ತಮ್ಮ ಮಕ್ಕಳೊಂದಿಗೆ ಕರ್ತವ್ಯ ಪರರಾಗಿರುತ್ತಾರೆ.
ವಿವೇಕಿಗಳು ಮಕ್ಕಳನ್ನು ಅಪಾಯದಿಂದ, ಭಯದಿಂದ, ಕೆಟ್ಟದ್ದರಿಂದ ರಕ್ಷಿಸುತ್ತಾರೆ. ಇದೇ ತಂದೆ-ತಾಯಿಗಳ ಸಾರವಾದ ಪೂರ್ವದಿಕ್ಕು.
38. ಗೃಹಸ್ಥನೇ, ಈ ಐದು ವಿಧದಿಂದ ಗುರುಗಳನ್ನು ಸೇವಿಸಬೇಕು, ಅವರು ದಕ್ಷಿಣ ದಿಕ್ಕೆಂದು ಪರಿಗಣಿಸಲ್ಪಡುತ್ತಾರೆ.
1) ಗುರುವು ದೂರದಿಂದ ಬರುತ್ತಿರುವುದು ಕಂಡ ಕ್ಷಣದಲ್ಲೇ ತನ್ನ ಆಸನದಿಂದ ಏಳಬೇಕು.
2) ಅವರಿಗೆ ಶುಶ್ರೂಷೆ ಮಾಡಬೇಕು.
3) ಅವರು ಹೇಳುವುದನ್ನು ಶ್ರದ್ಧೆಯಿಂದ ಹಾಗು ಭಕ್ತಿಯಿಂದ ಕೇಳಬೇಕು ಮತ್ತು ದಿನವೂ ಶಿಕ್ಷಣಕ್ಕಾಗಿ ಹೋಗಬೇಕು.
4) ಗುರುವಿನ ಅವಶ್ಯಕತೆ ಪೂರೈಸಿ ಅವರಿಗೆ ಸೇವೆ ಮಾಡಬೇಕು.
5) ಆತನು ಪಾಠಗಳನ್ನು ಶ್ರದ್ಧೆಯಿಂದ ಹಾಗು ಪರಿಶ್ರಮದಿಂದ ಕಲಿಯಬೇಕು.
ಗೃಹಸ್ಥನೇ, ಈ ರೀತಿ ಗುರುವಿಗೆ ಸೇವಿಸಬೇಕು. ಅವರು ದಕ್ಷಿಣ ದಿಕ್ಕು ಎಂದು ಪರಿಗಣಿಸಲ್ಪಡುತ್ತಾರೆ.
39. ಗೃಹಸ್ಥನೇ, ಈ ಐದು ರೀತಿಯಲ್ಲಿ ಶಿಷ್ಯನು ಗುರುವಿನಿಂದ ಆದರಿಸಲ್ಪಡುತ್ತಾರೆ.
1) ಶಿಷ್ಯನಿಗೆ ಉತ್ತಮ ಶೀಲವನ್ನು ಬೋಧಿಸುತ್ತಾನೆ.
2) ಶಿಷ್ಯನಿಗೆ ಅರ್ಥವಾಗಿ ಉಳಿಯುವ ಹಾದಿಯಲ್ಲಿ ಜ್ಞಾನವನ್ನು ಬೋಧಿಸುತ್ತಾನೆ.
3) ತಾನು ಕಲಿತುದೆಲ್ಲವನ್ನು ತಿಳಿಸುತ್ತಾನೆ.
4) ಗುರುವು ತನ್ನ ಮಿತ್ರರೊಡನೆ ಶಿಷ್ಯನ ಗುಣವನ್ನು ಪ್ರಶಂಸಿಸುತ್ತಾನೆ.
5) ಶಿಷ್ಯನಿಗೆ ರಕ್ಷಣೆ ಮಾಡುತ್ತಾನೆ.
ಗೃಹಸ್ಥನೇ, ಈ ಐದು ರೀತಿಯಲ್ಲಿ ಗುರುವು ಶಿಷ್ಯನೊಂದಿಗೆ ನಡೆದುಕೊಳ್ಳುತ್ತಾನೆ.
ಈ ರೀತಿಯಾಗಿ ಶಿಷ್ಯನು ಯಾವುದೇ ಅಪಾಯದಿಂದ, ಭಯದಿಂದ, ಕೆಟ್ಟದ್ದರಿಂದ ಪಾರಾಗುತ್ತಾನೆ. ಗುರುವು ದಕ್ಷಿಣ ದಿಕ್ಕೆಂದು ಪರಿಗಣಿಸಲ್ಪಡುತ್ತಾನೆ.
40. ಗೃಹಸ್ಥನೇ, ಪಶ್ಚಿಮ ದಿಕ್ಕೆಂದು ಪರಿಗಣಿಸಲ್ಪಡುವ ಪತ್ನಿಯನ್ನು ಈ ಐದು ರೀತಿಯಲ್ಲಿ ಕಾಣಬೇಕು.
1) ಆತನು ಆಕೆಯೊಂದಿಗೆ ಕರುಣಾಭರಿತ ಹಾಗು ಗೌರವಯುತ ಮಾತುಗಳನ್ನು ಆಡಬೇಕು.
2) ಆಕೆಯೊಂದಿಗೆ ಕಟುವಾಕ್ಯ ಹಾಗು ನಿಂದನೆಯಿಂದ ವತರ್ಿಸಬಾರದು.
3) ಆಕೆಯೊಂದಿಗೆ ನಿಷ್ಠವಂತನಾಗಿರಬೇಕು (ನಂಬಿಕೆಗೆ ಅರ್ಹನಾಗಿರಬೇಕು).
4) ಆತನು ತನ್ನೆಲ್ಲಾ ಐಶ್ವರ್ಯವನ್ನು ಆಕೆಯ ಕೈಗೆ ಒಪ್ಪಿಸಬೇಕು.
5) ಆತನು ಆಕೆಗೆ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಆಕೆಗೆ ವಸ್ತ್ರಗಳನ್ನು ಹಾಗು ಆಭರಣಗಳನ್ನು ನೀಡಬೇಕು.
ಈ ರೀತಿಯಾಗಿ ಪತ್ನಿಯನ್ನು ಪತಿಯು ಕಾಣಬೇಕು. ಪತ್ನಿಯು ಪಶ್ಚಿಮ ದಿಕ್ಕು ಎಂದು ಪರಿಗಣಿಸಲ್ಪಡುತ್ತಾಳೆ.
41. ಗೃಹಸ್ಥನೇ, ಈ ಐದು ರೀತಿ ಗಂಡನನ್ನು ಪತ್ನಿಯು ಆಧರಿಸಬೇಕು.
1) ಆಕೆಯು ಪತಿಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಮಾಡಿ ನೀಡಬೇಕು.
2) ಆಕೆಯು ತನ್ನ ಪತಿಯ ಮಿತ್ರರು ಹಾಗು ಬಂಧುಗಳಿಗೆ ಆದರ ಆತಿಥ್ಯದಿಂದ ಕಾಣಬೇಕು.
3) ಆಕೆಯು ಪತಿಗೆ ನಿಷ್ಠವಂತಳಾಗಿರಬೇಕು.
4) ಆಕೆಯು ತನ್ನ ಪತಿ ಒಪ್ಪಿಸಿದ ಐಶ್ವರ್ಯವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು.
5) ಆಕೆಯು ಸೋಮಾರಿಯಾಗಿರದೆ ತನ್ನಲ್ಲಿ ಕರ್ತವ್ಯವನ್ನು ಪರಿಶ್ರಮದಿಂದ ಕೌಶಲ್ಯದಿಂದ ಮಾಡಬೇಕು.
ಈ ರೀತಿಯಾಗಿ ಪತ್ನಿಯು ಪತಿಯನ್ನು ಕಾಣಬೇಕು. ಈ ಬಗೆಯಲ್ಲಿ ಪತ್ನಿಯು ಪಶ್ಚಿಮ ದಿಕ್ಕೆಂದು ಪರಿಗಣಿಸಲ್ಪಡುತ್ತಾಳೆ. ಹಾಗು ಯಾವುದೇ ಅಪಾಯ, ಭಯ ಅಥವಾ ಕೆಟ್ಟದ್ದರಿಂದ ಪತಿಯಿಂದ ರಕ್ಷಿಸಲ್ಪಡುತ್ತಾಳೆ.
42. ಗೃಹಸ್ಥನೇ, ಈ ಐದು ವಿಧದಿಂದ ಮಿತ್ರರನ್ನು ಕಾಣಬೇಕು. ಅವರು ಉತ್ತರ ದಿಕ್ಕೆಂದು ಪರಿಗಣಿಸಲ್ಪಡುತ್ತಾರೆ.
1) ಆತನು ಮಿತ್ರರಿಗೆ ಯೋಗ್ಯವಾದ ದಾನಗಳನ್ನು ನೀಡಬೇಕು.
2) ಆತನು ಅವರೊಂದಿಗೆ ಮೈತ್ರಿಭರಿತ ಮಾತುಗಳನ್ನು ಆಡಬೇಕು.
3) ಆತನು ಅವರ ಕಾರ್ಯಗಳಲ್ಲಿ ಸ್ಪಷ್ಟವಾಗಿ ಆಸಕ್ತಿ ವಹಿಸುವುದು.
4) ಆತನು ಅವರನ್ನು ತನ್ನಂತೆ ಭಾವಿಸಬೇಕು.
5) ಆತನು ಅವರನ್ನು ತನ್ನ ಭಾಗ್ಯದಲ್ಲಿ ಭಾಗಿದಾರರನ್ನಾಗಿ ಮಾಡಬೇಕು.
ಉತ್ತರ ದಿಕ್ಕಾದ ಮಿತ್ರರಲ್ಲಿ ಈ ರೀತಿಯಾಗಿ ಗೌರವಾರ್ಹನು ನಡೆದುಕೊಳ್ಳುತ್ತಾನೆ.
43. ಗೃಹಸ್ಥನೇ ಗೌರವಾರ್ಹನು ಸಹಾ ತನ್ನ ಮಿತ್ರ ಬಾಂಧವರಿಂದ ಈ ಐದು ರೀತಿಯಲ್ಲಿ ಆದರಿಸಲ್ಪಡುತ್ತಾನೆ.
1) ಆತನು ಪ್ರಜ್ಞೆ ತಪ್ಪಿದಾಗ ಆತನನ್ನು ರಕ್ಷಣೆ ಮಾಡುತ್ತಾರೆ.
2) ಆತನು ಅಂತಹ ಸಂದರ್ಭಗಳಲ್ಲಿ ಸಿಲುಕಿದಾಗ ಆತನ ಆಸ್ತಿಯನ್ನು ರಕ್ಷಿಸುತ್ತಾರೆ.
3) ಆತನಿಗೆ ಯಾವುದೇ ವಿಪತ್ತು ಬಂದಿರಲಿ, ಸಹಾಯವನ್ನು ಸಮಪರ್ಿಸುತ್ತಾರೆ.
4) ವಿಪತ್ತಿನ ಸಂದರ್ಭಗಳಲ್ಲಿ ಆತನನ್ನು ತೊರೆಯುವುದಿಲ್ಲ.
5) ಆತನ ಮಕ್ಕಳನ್ನು ರಕ್ಷಿಸುತ್ತಾರೆ ಹಾಗು ಅವರ ಕ್ಷೇಮವನ್ನು ಮಾಡುತ್ತಾರೆ.
ಈ ರೀತಿಯಾಗಿ ಗೌರವಾರ್ಹನಿಗೆ ಆತನ ಮಿತ್ರರು ಕಾಣುತ್ತಾರೆ. ಅವರು ಉತ್ತರ ದಿಕ್ಕೆಂದು ಪರಿಗಣಿಸಲ್ಪಡುತ್ತಾರೆ.
ಈ ರೀತಿಯಾಗಿ ಗೌರವಾರ್ಹನು ಉತ್ತರ ದಿಕ್ಕಿನಿಂದ ಉಂಟಾಗುವ ಅಪಾಯ, ಭಯ ಅಥವಾ ಕೆಟ್ಟದರಿಂದ ಪಾರಾಗುತ್ತಾನೆ.
44. ಗೃಹಸ್ಥನೇ, ಮಾಲೀಕನು ಸೇವಕನನ್ನು ಈ ಐದು ರೀತಿ ಕಾಣಬೇಕು.
1) ಆತನ ಸಾಮಥ್ರ್ಯಕ್ಕೆ ತಕ್ಕಂತೆ ಆತನಿಗೆ ಸರಿಯಾಗಿ ವಿಭಾಗಿಸಿ ಕೆಲಸವನ್ನು ನೀಡಬೇಕು.
2) ಆತನ ವಯಸ್ಸು (ಕಾಲ) ಹಾಗು ಯೋಗ್ಯತೆ ನೋಡಿ ಆತನಿಗೆ ಆಹಾರ ಹಾಗು ಪಾಲನ್ನು ನೀಡಬೇಕು.
3) ಆತನು ರೋಗಿಯಾಗಿರುವಾಗ ಆತನಿಗೆ ವಿಶ್ರಾಂತಿ ನೀಡಿ ಔಷಧಿ ನೀಡಿ ಸೇವೆ ಮಾಡಬೇಕು.
4) ವಿಶೇಷ ಭೋಜನ ಅಥವಾ ವಿಶೇಷತೆಗಳು ಏನಾದರೂ ಮನೆಯಲ್ಲಿ ನಡೆದಾಗ, ಅಥವಾ ಹೊರಗಿನಿಂದ ಬಂದಾಗ ಆತನಿಗೂ ಪಾಲು ನೀಡಬೇಕು.
5) ಆತನಿಗೆ ಕಾಲಕ್ಕೆ ಸರಿಯಾಗಿ ಕೆಲಸದಲ್ಲಿ ಭಾಗವಹಿಸಿ, ವಿಶ್ರಾಂತಿ ಸಮಯದಲ್ಲಿ ವಿರಾಮ ನೀಡಬೇಕು.
ಈ ರೀತಿಯಾಗಿ ಅಧೋ ದಿಕ್ಕೆಂದು ಪರಿಗಣಿಸಲ್ಪಡುವ ಸೇವಕರಿಗೆ ಯಜಮಾನರು ವತರ್ಿಸಬೇಕು.
45. ಗೃಹಸ್ಥನೇ, ಈ ಐದು ರೀತಿಯಲ್ಲಿ ಸೇವಕನು ತನ್ನ ಸ್ವಾಮಿಯನ್ನು ಆಧರಿಸಬೇಕು.
1) ಆತನು ತನ್ನ ಒಡೆಯನಿಗಿಂತ ಮುಂಚಿತವಾಗಿ ಏಳಬೇಕು.
2) ಆತನು ತನ್ನ ಒಡೆಯನು ಮಲಗಿದ ನಂತರ ಮಲಗಬೇಕು.
3) ಆತನು ತನ್ನ ಒಡೆಯನ ಮೇಲೆ ಒಳ್ಳೆಯ ಅಭಿಪ್ರಾಯವುಳ್ಳವನಾಗಿ ಭಕ್ತಿಯಿಂದಿರಬೇಕು. ಮತ್ತು ಒಡೆಯನ ಆಜ್ಞೆಗಳನ್ನು ವಿಳಂಬವಿಲ್ಲದೆ ಸಂತೋಷದಿಂದ ಮಾಡಬೇಕು.
4) ಆತನು ಮೋಸ ವಂಚನೆ ರಹಿತವಾಗಿ ಇದ್ದು ಒಡೆಯನು ನೀಡಿದ್ದನ್ನು ತೆಗೆದುಕೊಳ್ಳಬೇಕು.
5) ಆತನು ಸಂದರ್ಭಗಳಲ್ಲಿ ಒಡೆಯನನ್ನು ಹೊಗಳಬೇಕು ಮತ್ತು ಆತನೊಂದಿಗೆ ಕಾರ್ಯ ಮಾಡುವಲ್ಲಿ ಹೆಮ್ಮೆಪಡಬೇಕು.
ಈ ಐದು ರೀತಿ ಸೇವಕರು ತಮ್ಮ ಸ್ವಾಮಿಯನ್ನು ಆಧರಿಸಬೇಕು.
ಈ ರೀತಿಯಾಗಿ ವತರ್ಿಸಿರುವ ಸೇವಕರು ಅಪಾಯ ಅಥವಾ ಕೆಡಕಿನಲ್ಲಿ ಅಥವಾ ಭಯಗೊಂಡಿರುವಾಗ ಒಡೆಯನಿಂದ ಆಶ್ರಯ ಪಡೆಯುತ್ತಾರೆ.
46. ಗೃಹಸ್ಥನೆ, ಊದ್ರ್ವ ದಿಕ್ಕಿಗೆ ಸಂಕೇತವಾಗಿರುವ ಭಿಕ್ಷು ಬ್ರಾಹ್ಮಣರಿಗೆ ಈ ರೀತಿಯಾಗಿ ಆಧರಿಸಬೇಕು.
1) ಅವರಿಗೆ ಮೈತ್ರಿಯುತವಾದ ಕ್ರಿಯೆಗಳೊಂದಿಗೆ ಆಧರಿಸಬೇಕು.
2) ಅವರಿಗೆ ಮೈತ್ರಿಯುತವಾದ ಮಾತಿನೊಂದಿಗೆ ಆಧರಿಸಬೇಕು.
3) ಅವರೊಂದಿಗೆ ಮೈತ್ರಿಯುತವಾದ ಮನದಿಂದ ಕೂಡಿದ್ದು ಅವರ ಕ್ಷೇಮವನ್ನು ಚಿಂತಿಸಬೇಕು.
4) ಅವರ ಅವಶ್ಯಕತೆ ಪೂರೈಸಿ ಅವರೊಂದಿಗೆ ದಾನಿಯಾಗಿರಬೇಕು.
5) ಕಾಲಕ್ಕೆ ಅನುಗುಣವಾಗಿ ದೊರೆಯುವ ಆಹಾರದಿಂದ ಅವರಿಗೆ ದಾನ ನೀಡಬೇಕು.
47. ಈ ರೀತಿಯಾಗಿ ಊದ್ರ್ವ ದಿಕ್ಕೆಂದು ಪರಿಗಣಿಸಲ್ಪಡುವ ಬ್ರಾಹ್ಮಣ ಭಿಕ್ಷುಗಳಿಗೆ ಆಧರಿಸಿದರೆ ಅವರು ಸಹಾ ಪ್ರತಿಯಾಗಿ ಈ ಆರು ರೀತಿಯಲ್ಲಿ ವತರ್ಿಸುತ್ತಾರೆ.
1) ಆತನು ಪಾಪ ಮಾಡದಂತೆ ನಿಯಂತ್ರಿಸುತ್ತಾರೆ.
2) ಆತನು ಪುಣ್ಯಶಾಲಿಯಾಗುವುದಕ್ಕೆ ಪರಿವತರ್ಿಸಿ, ಪರರಲ್ಲಿ ದಯೆಯುಳ್ಳವ ನಾಗುವಂತೆ ಮಾಡುತ್ತಾರೆ.
3) ಆತನಿಗೆ ಪುಣ್ಯ ಕಾರ್ಯಗಳಲ್ಲಿ ತೊಡಗುವಂತೆ ಮಾಡುತ್ತಾರೆ.
4) ಆತನು ಬೋಧನೆಯನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯುವಂತೆ ಮಾಡುತ್ತಾರೆ. ಹಾಗು ಆತನ ಸಂದೇಹ (ಧ್ವಂದ್ವ) ಗಳನ್ನು ದೂರ ಮಾಡುತ್ತಾರೆ.
5) ಆತನು ಸುಗತಿಯನ್ನು ತಲುಪುವಂತಹ ಹಾದಿಯನ್ನು ತೋರಿಸುತ್ತಾರೆ.
ಈ ರೀತಿಯಾಗಿ ಗೃಹಸ್ಥನು ಭಿಕ್ಷುಗಳು ಹಾಗು ಬ್ರಾಹ್ಮಣರಿಂದ ಆದರಿಸಲ್ಪಡುತ್ತಾನೆ.
ಊಧ್ರ್ವ ದಿಕ್ಕೆಂದು ಪರಿಗಣಿಸಲ್ಪಡುವ ಭಿಕ್ಖು ಬ್ರಾಹ್ಮಣರ ಸಹಾಯದಿಂದ ಗೃಹಸ್ಥನು ಅಪಾಯದಿಂದ, ಕೆಡುಕಿನಿಂದ, ಭಯದಿಮದ ರಕ್ಷಿಸಲ್ಪಡುತ್ತಾನೆ.
48. ಈ ರೀತಿಯಾಗಿ ಹೇಳಿದನಂತರ ಭಗವಾನರು ಈ ಗಾಥೆಗಳನ್ನು ವ್ಯಕ್ತಪಡಿಸಿದರು:
ತಂದೆ ಮತ್ತು ತಾಯಿಯರನ್ನು ಪೂರ್ವವೆಂದು ಪರಿಗಣಿಸಬೇಕು, ಅವರು ಅತ್ಯಂತ ಪ್ರಾಧಾನ್ಯತೆಯುಳ್ಳವರು.
ಗುರುಗಳನ್ನು ದಕ್ಷಿಣವೆಂದು ಪರಿಗಣಿಸಬೇಕು, ಅವರು ತಮಗೆ ನೀಡಿದ ಕಾಣಿಕೆಗಳನ್ನು ನೀಡಿದ್ದನ್ನು ಸ್ವೀಕರಿಸುವವರು.
ಪತ್ನಿ ಮತ್ತು ಪುತ್ರರನ್ನು ಪಶ್ಚಿಮವೆಂದು ಪರಿಗಣಿಸಬೇಕು. ಅವರು ಅನಂತರದವರು.
ಮಿತ್ರರನ್ನು ಉತ್ತರ ದಿಕ್ಕೆಂದು ಪರಿಗಣಿಸಬೇಕು, ಅವರು ನಿನ್ನ ಯಾವುದೇ ಕೆಡುಕಿರಲಿ ಅದನ್ನು ನಿವಾರಿಸುವವರು.
ಸೇವಕರನ್ನು ಅಧೋ ದಿಕ್ಕೆಂದು ಪರಿಗಣಿಸಬೇಕು, ಅವರು ನಿನಗೆ ಅತ್ಯಂತ ಗೌರವಿಸುವವರು.
ಭಿಕ್ಷು ಮತ್ತು ಬ್ರಾಹ್ಮಣರನ್ನು ಊಧ್ರ್ವ ದಿಕ್ಕೆಂದು ಪರಿಗಣಿಸಬೇಕು, ಏಕೆಂದರೆ ಅವರು ಶೀಲವಂತರು ಹಾಗು ಗೌರವಾದರಗಳಿಗೆ ಅರ್ಹರು.
ಈ ರೀತಿಯಾಗಿ ಅಥರ್ೈಸಿಕೊಂಡು ಈ ದಿಕ್ಕುಗಳಿಗೆ ವಂದಿಸುವವರು ತಮ್ಮ ಕುಟುಂಬಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಮತ್ತು ಗೃಹಸ್ಥನಂತೆ ಜೀವನ ಮಾಡುತ್ತಾರೆ.
ಯಾರಾದರೂ ಈ ಬಗೆಯ ಅರ್ಥದಿಂದ ಈ ಆರು ದಿಕ್ಕುಗಳಿಗೆ ವಂದಿಸುತ್ತಿದ್ದರೆ, ಶೀಲವಂತನಾಗಿದ್ದರೆ, ಆತನು ಅತ್ಯಂತ ಗಹನವಾದ ವಿಷಯಗಳನ್ನು ಅರಿಯವಂತಹವ ನಾಗುತ್ತಾನೆ, ಅಹಂಕಾರರಹಿತನಾಗುತ್ತಾನೆ. ಆತನು ಕಟು ಹೃದಯಿಯಾಗುವುದಿಲ್ಲ. ಅಂತಹವನು ಈ ಲೋಕಕ್ಕೆ ಹಾಗು ಪರಲೋಕಕ್ಕೆ ಸಹಾಯಕವಾದ ಐಶ್ವರ್ಯವನ್ನು ಸಂಗ್ರಹ ಮಾಡುತ್ತಾನೆ.
ಯಾರಾದರೂ ಸೋಮಾರಿಯಾಗಿರದೆ ಪರಿಶ್ರಮಿಯಾಗಿದ್ದು, ಎಂಥಹ ವಿಪತ್ತುಗಳು ಬಂದರೂ ವಿಚಲಿತನಾಗದೆ ಇರುವವನಾಗಿ, ತನ್ನ ಕ್ರಿಯೆಗಳಲ್ಲಿ ದೋಷರಹಿತನಾಗಿ, ಯೋಗ್ಯ ಕಾಲದಲ್ಲಿ ಸರಿಯಾದ ಕಾರ್ಯ ಮಾಡುವವನಾಗಿದ್ದು, ಅಂತಹವನು ಮಾತ್ರ ಈ ಲೋಕಕ್ಕೂ ಹಾಗು ಪರಲೋಕಕ್ಕೂ ಸಹಾಯಕವಾದ ಐಶ್ವರ್ಯವನ್ನು ಸಂಗ್ರಹ ಮಾಡುತ್ತಾನೆ.
ಯಾರಾದರೂ ಆತಿಥ್ಯದಿಂದ ಕೂಡಿರುವವನಾಗಿ, ಸಂಭಾಷಣೆಯಲ್ಲಿ ಗಾಂಭೀರ್ಯವುಳ್ಳವನಾಗಿ, ಅರಿಯುವಿಕೆಯಲ್ಲಿ ಕುಶಾಗ್ರಮತಿಯಾಗಿ, ದಾನಿಯಾಗಿದ್ದು, ಪ್ರಜ್ಞಾಶೀಲತೆಯಲ್ಲಿ ಅಗಾಧತೆಯುಳ್ಳವನಾಗಿ, ಯೋಗ್ಯ ಶಿಸ್ತಿನಿಂದ ಕೂಡಿರುವವನಾಗಿ, ಸುಶೀಲನಾಗಿ, ಇರುವಂತಹವನು ಮಾತ್ರ ಈ ಲೋಕಕ್ಕೆ ಹಾಗು ಪರಲೋಕಕ್ಕೆ ಸಹಾಯಕವಾದ ಐಶ್ವರ್ಯವನ್ನು ಸಂಗ್ರಹ ಮಾಡುತ್ತಾನೆ.
ನಾಲ್ಕು ಸದ್ಗುಣಗಳಿವೆ ಅವು ಯಾವುವೆಂದರೆ: ದಾನಶೀಲತೆ, ಪ್ರಿಯವಚನ, ಪರೋಪಕಾರ ಬುದ್ಧಿ, ನಿಸ್ವಾರ್ಥ ಇಚ್ಛೆ (ಸಮಾನತೆ). ಇವು ಮನುಷ್ಯನಲ್ಲಿ (ತನ್ನ ಪುಣ್ಯಕ್ಕೆ ತಕ್ಕಂತೆ) ಇರುತ್ತದೆ. ಇದು ವ್ಯಕ್ತಿಗಷ್ಟೇ ಅಲ್ಲದೆ ಸಮಾಜಕ್ಕೂ (ವಿಶ್ವಕ್ಕೂ) ಅಷ್ಟೇ ಪ್ರಧಾನ್ಯಕರ. ಹೇಗೆಂದರೆ ರಥದ ಚಕ್ರವು ತಿರುಗಬೇಕಾದರೆ ಅಚ್ಚುಗಳು ಹಾಗು ಕೀಲು ಹೇಗೆ ಪ್ರಾಮುಖ್ಯವೋ ಹಾಗೆ ಈ ನಾಲ್ಕು ಸದ್ಗುಣಗಳು ಜಗತ್ತಿನಲ್ಲಿ ಇರದಿದ್ದಲ್ಲಿ ತಂದೆ-ತಾಯಿಗಳು, ಮಕ್ಕಳಿಂದ ಗೌರವ, ಆದರ, ಸತ್ಕಾರ, ಸೇವೆಗಳು ಸಿಗದೆ ಹೋಗುತ್ತದೆ (ಇನ್ನೂ ಬೇರೆಯವರ ಬಗ್ಗೆ ಹೇಳಬೇಕಾಗಿಲ್ಲ). ಯಾವ ವಿವೇಕಿಗಳಲ್ಲಿ ಈ ಸದ್ಗುಣಗಳು ವ್ಯಕ್ತವಾಗುವುವೋ ಅವರು ಈ ಲೋಕದಲ್ಲಿ ಸಹಾಯಕವಾಗುವ ಐಶ್ವರ್ಯವನ್ನು ಸಂಗ್ರಹ ಮಾಡುತ್ತಾರೆ ಹಾಗು ಗೌರವಕ್ಕೆ ಅರ್ಹರಾಗುವ ಜೀವಿಗಳಾಗುತ್ತಾರೆ.
49. ಹೀಗೆ ನುಡಿದ ನಂತರ ಭಗವಾನರು ಸುತ್ತವನ್ನು ಮುಗಿಸಿದರು. ಆಗ ಸಿಗಾಲನು ಭಗವಾನರಿಗೆ ಈ ರೀತಿ ಭಕ್ತಿಯಿಂದ ನುಡಿದನು:
ಓ ಭಗವಾನರೇ, ನಿಮ್ಮ ಬೋಧನೆ ಪರಮಶ್ರೇಷ್ಠಕರ. ಹೇಗೆಂದರೆ ತಲೆಕೆಳಗಾಗಿರುವು ದನ್ನು ಸರಿಯಾಗಿ ನಿಲ್ಲಿಸುವಂತೆ, ಹುದುಗಿರುವುದನ್ನು ತೆಗೆದು ತೋರಿಸಿದಂತೆ, ದಾರಿ ತಪ್ಪಿರುವವನಿಗೆ ದಾರಿ ತೋರಿಸುವಂತೆ, ಕತ್ತಲೆಯಲ್ಲಿರುವವನಿಗೆ ಬೆಳಕನ್ನು ಹಿಡಿದು ವಸ್ತುಗಳು ಗೋಚರಿಸುವಂತೆ. ಹಾಗೆಯೇ ಭಗವಾನರು ಸಹಾ ಧಮ್ಮವನ್ನು ಹಲವು ರೀತಿಯಲ್ಲಿ ಪ್ರಕಾಶಿಸಿದ್ದಾರೆ. ನಾನು ಬುದ್ಧರನ್ನು ನನ್ನ ಮಾರ್ಗದಶರ್ಿಯೆಂದು ತಿಳಿದು ಅನುಸರಣೆ ಮಾಡುತ್ತೇನೆ. ಧಮ್ಮವನ್ನು ನನ್ನ ಮಾರ್ಗದಶರ್ಿ ಎಂದು ತಿಳಿದು ಅನುಸರಣೆ ಮಾಡುತ್ತೇನೆ. ಮತ್ತು ಸಂಘವು ನನ್ನ ಮಾರ್ಗದಶರ್ಿ ಎದು ತಿಳಿದು ಶರಣು ಹೋಗುತ್ತೇನೆ. ಭಗವಾನರು ಸಹಾ ನನ್ನನ್ನು ಪರಿಗ್ರಹಿಸಲಿ. ನಾನು ಅವರ ಶರಣಾಥರ್ಿಯಾಗಿರುವೆನು. ಅವರು ನನ್ನನ್ನು ಅವರ ಉಪಾಸಕನೆಂದು ಸ್ವೀಕರಿಸಲಿ. ಇಂದಿನಿಂದ ನಾನು ಜೀವನ ಪರ್ಯಂತ ಉಪಾಸಕನಾಗಿರುವೆನು.
ಈ ಬೋಧನೆ ಮುಗಿದನಂತರ ಭಗವಾನರು ಆಹಾರವನ್ನು ರಾಜಗೃಹದಲ್ಲಿ ಸ್ವೀಕರಿಸಿ ತಮ್ಮ ವಿಹಾರಕ್ಕೆ ಹಿಂತಿರುಗಿದರು.
ಸಿಗಾಲ ಗೃಹಸ್ಥನು ಸಂತತ್ವದ (ಮುಕ್ತಿಯ) ಪ್ರಥಮ ಹಂತವಾದ ಸೋತಾಪತ್ತಿ ಫಲ ಪಡೆದನು. ಹಾಗು ಸಂಘದ ಭಕ್ತಿಯುತ ಉಪಾಸಕನಾದನು. ಅನಂತರ ಅವನು ಭಿಕ್ಷುಗಳಿಗೆ ಸಹಾಯಕವಾಗಿ 40 ದಶಲಕ್ಷ ಕಹಾಪಣಗಳನ್ನು ವಿನಿಯೋಗಿಸಿದನು. ಅದರಿಂದ ವಿಹಾರದ ನಿಮರ್ಾಣ ಹಾಗು ಇತರೆ ದಾನಗಳಿಗೆ ವಿನಿಯೋಗಿಸಲಾಯಿತು.

- ಂ0ಂ - ಂ0ಂ - ಂ0ಂ  

Wednesday 16 July 2014

vyaggapajja sutta in kannada


ವ್ಯಾಗ್ಗಪಜ್ಜ ಸುತ್ತ 

ನಾನು (ಆನಂದ ಮಹಾಥೇರ) ಹೀಗೆ ಕೇಳಿದ್ದೇನೆ. ಒಮ್ಮೆ ಬುದ್ಧ ಭಗವಾನರು ಕೋಲಿಯ ರಾಜರ ಪ್ರಾಂತ್ಯವಾದ ಹಕ್ಕರಪತ್ತಂ ಹಳ್ಳಿಯಲ್ಲಿ ವಾಸವಾಗಿದ್ದರು. 

ಆ ಸಮಯದಲ್ಲಿ ದೀಘಜಾನು ಎಂಬ ಕೋಲಿಯನು ಭಗವಾನರು ಇದ್ದಕಡೆ ಹೋಗಿ ಅವರಿಗೆ ಶ್ರದ್ಧೆಯಿಂದ ವಂದಿಸಿ ಒಂದುಕಡೆ ಕುಳಿತನು. ಹಾಗೆ ಕುಳಿತ ದೀಘಜಾನು ಕೋಲಿಯನು ಭಗವಾನರಿಗೆ ಹೀಗೆ ಹೇಳಿದನು:

ಪರಮಪೂಜ್ಯ ಭಂತೆ, ಗೃಹಸ್ಥರಾದ ನಾವು ಇಂದ್ರೀಯ ಸುಖಗಳಲ್ಲೇ ದಿನಗಳನ್ನು ಕಳೆಯುವೆವು. ನಾವು ನಮ್ಮ ಪತ್ನಿ ಹಾಗು ಪುತ್ರರ ಪಾಲನೆಯಲ್ಲೇ ಇರುವುದರಿಂದ ನಮಗೆ ಪುಣ್ಯದ ಕಾಯರ್ಾಚರಣೆಗೆ ಸಾಕಷ್ಟು ಸಮಯವಿರುವುದಿಲ್ಲ. ನಾವು ನಮ್ಮ ಶರೀರಗಳಿಗೆ ಕಾಶಿಯ ಗಂಧದ ಸುಂಗಂಧದ್ರವ್ಯ ಹಚ್ಚುವೆವು ಹಾಗು ಇನ್ನಿತರ ಸುಗಂಧವನ್ನು ಹಚ್ಚುವೆವು. ನಾವು ನಮ್ಮ ಶರೀರಗಳಿಗೆ ಸುಂದರವಾದ ಹಾಗು ಸುಗಂಧಿತವಾದ ಹೂವಿನ ಹಾರಗಳನ್ನು ಹಾಕಿಕೊಳ್ಳುವೆವು. ನಾವು ಚಿನ್ನ ಹಾಗು ಬೆಳ್ಳಿಯಿಂದ ಅಲಂಕೃತವಾದ ರತ್ನಾಭರಣಗಳನ್ನು ಹಾಕಿಕೊಳ್ಳುವೆವು. ಆದ್ದರಿಂದ ಪರಮಪೂಜ್ಯ ಭಗವಾನ್, ನಮಗೆ ಸಹಾಯಕವಾಗಿರುವಂತಹ ಗೃಹಸ್ಥರಿಗೆ ಇಹಲೋಕದಲ್ಲಿ ಸುಖವನ್ನು ನೀಡುವ ಹಾಗು ಪರಲೋಕದಲ್ಲಿ ಕ್ಷೇಮ ಹಾಗು ಸುಖ ನೀಡುವ ಬೋಧನೆ ಇದ್ದರೆ ಅದನ್ನು ನಮಗೆ ಬೋಧಿಸುವಂತಾಗಬೇಕು.

ಆಗ ವಿಜ್ಜಾಚರಣಸಂಪನ್ನರು ಬೋಧನೆಯನ್ನು ಪ್ರಾರಂಭಿಸಿದರು: ವ್ಯಾಗ್ಗಪಜ್ಜ, ಈ ನಾಲ್ಕು ಧಮ್ಮವನ್ನು (ನಿಯಮವನ್ನು) ಆತನು ಅನುಸರಿಸಿದರೆ, ಆತನು ಶೀಲವಂತನಾಗಿ, ಇರುವ ಹಾಗು ಪರಲೋಕದ ಸುಖ ಕ್ಷೇಮವನ್ನು ಉಳ್ಳವನಾಗುತ್ತಾನೆ ಯಾವುದು ನಾಲ್ಕು?

1. ಪ್ರಯತ್ನಶೀಲತೆ

2. ಐಶ್ವರ್ಯದ ರಕ್ಷಣೆ

3. ಶ್ರೇಷ್ಠ ಮಿತ್ರತ್ವ

4. ಬಳಸುವಿಕೆ (ಮಿತವ್ಯಯ)

ಓ ವ್ಯಾಗ್ಗಪಜ್ಜ, ಪ್ರಯತ್ನಶೀಲತೆ ಎಂದರೇನು? ವ್ಯಾಗ್ಗಪಜ್ಜ, ಇಲ್ಲಿ ಗೃಹಸ್ಥನು ಅನೇಕ ರೀತಿಯ ವೃತ್ತಿಯನ್ನು ತನ್ನ ಪಾಲನೆಗೆ ಅವಲಂಬಿಸುತ್ತಾನೆ. ಅವು ವ್ಯವಸಾಯ ವಾಗಿರಬಹುದು ಅಥವಾ ವ್ಯಾಪಾರವಾಗಿರಬಹುದು ಅಥವಾ ಪಶುಪಾಲನೆ ಅಥವಾ ಕ್ಷತ್ರಿಯತೆ ಅಥವ ರಾಜನೀತಿ ನಿಪುಣತೆ ಅಥವಾ ಇನ್ನಾವುದೇ ವೃತ್ತಿಯಾಗಿರಬಹುದು. ಯಾವುವೆಂದರೆ: ಕಮ್ಮಾರ, ಕುಂಬಾರ ಇತ್ಯಾದಿ... ಯಾವುದೇ ಪ್ರಾಪಂಚಿಕ ವೃತ್ತಿಯಲ್ಲಿ ಕುಶಲನಾಗಿರಬೇಕು. ನಿರಂತರ ಪ್ರಯತ್ನಶೀಲನಾಗಿರಬೇಕು ಮತ್ತು ಸರಿಯಾದ ಕಾಲದಲ್ಲಿ, ಕರ್ತವ್ಯದ ವೇಳೆಯಲ್ಲಿ ವಿಳಂಬನ ಮಾಡದೆ ಆಲಸ್ಯ ತೋರಿಸದೆ ಶ್ರಮನಿರತನಾಗಿಬೇಕು. ಆತನ ಶ್ರಮವು ಯೋಗ್ಯ ತೀಮರ್ಾನ ಹಾಗು ಬುದ್ಧಿ ಕೌಶಲ್ಯದಿಂದ ಕೂಡಿರಬೇಕು. ಓ ವ್ಯಾಗ್ಗಪಜ್ಜ ಐಶ್ವರ್ಯ ಸಂಗ್ರಹಣೆಗೆ ಅಥವಾ ಪೂರ್ಣ ಸಫಲತೆಯ ಪ್ರಾಪ್ತಿಗೆ ನಿರಂತರ ಶ್ರಮಶೀಲತೆ ಹಾಗು ದೃಢವಾದ ಕ್ರಿಯಾತ್ಮಕತೆ ಅತ್ಯವಶ್ಯಕ ಇದನ್ನೇ ಪ್ರಯತ್ನಶೀಲತೆ ಎನ್ನುತ್ತಾರೆ.

ಓ ವ್ಯಾಗ್ಗಪಜ್ಜ, ಐಶ್ವರ್ಯ ರಕ್ಷಣೆ ಎಂದರೇನು? ವ್ಯಾಗ್ಗಪಜ್ಜ ಗೃಹಸ್ಥನು ತನ್ನ ನಿರಂತರ ಪ್ರಯತ್ನಶೀಲತೆಯಿಂದ ಐಶ್ವರ್ಯ ಸಂಪಾದಿಸುತ್ತಾನೆ. ಅದಕ್ಕಾಗಿ ಆತನು ತನ್ನ ಅಂಗಾಂಗಗಳ ಶಕ್ತಿಯನ್ನು ಬಳಸಿರುತ್ತಾನೆ. ಹಣೆಯಲ್ಲಿ ಬೆವರು ಸುರಿಸುತ್ತಾನೆ, ಅದಕ್ಕಾಗಿ ಉತ್ತಮೋತ್ತಮ ಉಪಾಯಗಳನ್ನು ಹಾಕಿರುತ್ತಾನೆ ಮತ್ತು ಯೊಗ್ಯವಾದ ಜೀವನದಿಂದ ಸಂಪಾದಿಸಿರುತ್ತಾನೆ. ಆಗ ಗೃಹಸ್ಥನು ಈ ರೀತಿ ಚಿಂತಿಸಬೇಕು: ಈ ಐಶ್ವರ್ಯ ನನ್ನಿಂದ ಸಂಪಾದಿಸಲಾಗಿದೆ. ನಾನು ಇದನ್ನು ಕಳ್ಳರಿಂದ ರಕ್ಷಿಸಬೇಕು, ಬೆಂಕಿಯಿಂದ ರಕ್ಷಿಸಬೇಕು. ಅಧಿಕಾರದವರಿಂದ ರಕ್ಷಿಸಬೇಕು ಮತ್ತು ಅಸಮ್ಮತಿ ಸೂಚಿಸುವ ಹಾಗು ಈಷರ್ೆಯುಳ್ಳ ಬಾಂಧವರಿಂದ ರಕ್ಷಿಸಬೇಕು. ಈ ರೀತಿಯಾಗಿ ಮುನ್ನೆಚ್ಚರಿಕೆಯಿಂದ, ದೂರದೃಷ್ಟಿಯಿಂದ ಯೋಚಿಸಿ ಸಂಪಾದಿಸಿದ ಐಶ್ವರ್ಯ ರಕ್ಷಿಸುವುದೇ ಐಶ್ವರ್ಯದ ರಕ್ಷಣೆಯಾಗುತ್ತದೆ. 

ಓ ವ್ಯಾಗ್ಗಪಜ್ಜ, ನಿಜವಾದ ಶ್ರೇಷ್ಠ ಮಿತ್ರತ್ವ ಎಂದರೇನು? ಈ ಜಗತ್ತಿನಲ್ಲಿ ವ್ಯಾಗ್ಗಪಜ್ಜ ಹಳ್ಳಿಯಲ್ಲೇ ವಾಸಿಸಲಿ ಅಥವಾ ಪಟ್ಟಣದಲ್ಲೇ ವಾಸಿಸಲಿ, ಒಬ್ಬ ಉಪಾಸಕನನ್ನು ಅಥವಾ ಉಪಾಸಕ ಪುತ್ರನನ್ನು ಹುಡುಕಬೇಕು. ಆತನು ಹೇಗಿರಬೇಕೆಂದರೆ ಶೀಲಗಳನ್ನು ಪಾಲಿಸುವಂತಹವನು, ಧಮ್ಮಜ್ಞಾತಜ್ಞನು, ಧಾಮರ್ಿಕತೆಯಲ್ಲಿ ಮುಂದುವರೆದವನು, ಶ್ರದ್ಧೆಯಲ್ಲಿ ದೃಢವಂತನು, ಗೃಹಸ್ಥ ನಿಯಮಗಳನ್ನು ಪಾಲಿಸಿದವನು, ಪರರಲ್ಲಿ ಸೇವಾಮನೋಭಾವ ಉಳ್ಳವನು, ಅನೇಕ ಶಾಸ್ತ್ರಗಳಲ್ಲಿ ನಿಪುಣನು ಅಂತಹವನ ಜೊತೆಗೂಡಬೇಕು. ಆತನಲ್ಲಿ ಚಚರ್ಿಸಬೇಕು, ಅರಿಯಬೇಕು. ಆಗ ಈ ಗೃಹಸ್ಥನು ಸಹಾ ಆತನಂತೆಯೇ ಶೀಲ ಪಾಲನಾಬದ್ಧನು, ಪ್ರಜ್ಞಾ ಅಭ್ಯುದಯನು, ಆಳವಾದ ಧಾಮರ್ಿಕನು, ಶ್ರದ್ಧಾ ದೃಢವಂತನು, ಗೃಹಸ್ಥ ಸುಕಮರ್ಿಯು, ಪರಹಿತ ಆಚರಣೆಯುಳ್ಳವನು ಹಾಗು ಸರ್ವಶಾಸ್ತ್ರ ಬಲ್ಲವನು ಆಗುತ್ತಾನೆ. ಆತನು ಒಳ್ಳೆಯದನ್ನು ಮಾಡುತ್ತಾನೆ ಹಾಗು ಕೆಟ್ಟದರಿಂದ ದೂರವಿರುತ್ತಾನೆ. ಇದನ್ನು ವ್ಯಾಗ್ಗಪಜ್ಜ ಶ್ರೇಷ್ಠ (ನಿಜವಾದ) ಮಿತ್ರತ್ವ ಎನ್ನುತ್ತಾರೆ.

ಬಳಸುವಿಕೆ : ಓ! ವ್ಯಾಗ್ಗಪಜ್ಜ ಮಿತವ್ಯಯದಿಂದ ಈ ಜಗತ್ತಿನಲ್ಲಿರಬೇಕು. ವ್ಯಾಗ್ಗಪಜ್ಜ ಗೃಹಸ್ಥನು ಪೂರ್ಣ ಬುದ್ಧಿಯಿಂದ ಅರಿಯಬೇಕು. ಏನೆಂದರೆ ಐಶ್ವರ್ಯವನ್ನು ಅತಿ ಶ್ರಮಪಟ್ಟು ಸಂಪಾದಿಸಬೇಕಾಗುತ್ತದೆ. ಹಾಗು ಅದರ ಬಳಕೆಯನ್ನು ಸಹಾ ಮಿತವಾಗಿ ಬಳಸಬೇಕಾಗುತ್ತದೆ. ಹೇಗೆಂದರೆ ಖಚರ್ು ಮಾಡುವ ಎರಡರಷ್ಟು ಸಂಪಾದಿಸಬೇಕಾಗುತ್ತದೆ ಮತ್ತು ದಿನವನ್ನು ಕಳೆಯಬೇಕಾಗುತ್ತದೆ. ಅತಿ ಹೆಚ್ಚು ಖಚರ್ು ಮಾಡಬಾರದು, ಅತಿ ಜಿಪುಣತನದ ರೀತಿ ಅತ್ಯಲ್ಪವೂ ಬಳಸಬಾರದು. ಆಗ ಸಂಪಾದಿಸಿದ ಐಶ್ವರ್ಯ ನಷ್ಟವಾಗುವುದಿಲ್ಲ. ವ್ಯಾಗ್ಗಪಜ್ಜ ವ್ಯಾಪಾರಿಯೇ ಅಗಿರಲಿ ಅಥವಾ ಪರಾಧಿನ ಉದ್ಯೋಗಸ್ಥನೇ ಆಗಿರಲಿ, ಸಮತೂಕವಾಗಿ ಬಳಸಬೇಕು ಹಾಗು ರಕ್ಷಿಸಬೇಕು. ತಕ್ಕಡಿಯಲ್ಲಿ ತೂಕವನ್ನು ಹಾಕಿದರೆ ಬಾರವಿರುವುದು ಕೆಳಗೆ ಬರುತ್ತದೆ ಮತ್ತೊಂದು ಭಾಗ ಕೊರತೆಯಿಂದ ಮೇಲಕ್ಕೆ ಹೋಗುತ್ತದೆ. ಆದ್ದರಿಂದ ಸಮವಾಗಿರಬೇಕು. ಇದೇ ರೀತಿಯಿಂದ ಗೃಹಸ್ಥನು ಅರಿಯಬೇಕು ಹೇಗೆಂದರೆ, ತನ್ನ ಲಾಭವನ್ನು ಗಮನಿಸಿ ಖರ್ಚನ್ನು ಹೊಂದಿಸಿಕೊಳ್ಳಬೇಕು. ಐಶ್ವರ್ಯ ದೊರೆಯುವುದು ಅತಿ ಕಷ್ಟಪಟ್ಟ ಮೇಲೆಯೇ ಮತ್ತು ಶೋಕಿನ ದುಂದುವೆಚ್ಚ ಮಾಡಿದರೆ ಹಾನಿಯೇ ಸರಿ. ಆತನು ಅತಿ ಬುದ್ಧಿಯಿಂದ ತನ್ನ ಅವಶ್ಯಕತೆಗೆ ಪಾಲನೆಗೆ ತಕ್ಕಂತೆ ಬಳಸಬೇಕು. ಈ ರೀತಿಯಾಗಿ ಬಳಕೆ ಮಾಡಿದರೆ ಆತನು ದುಂದುವೆಚ್ಚಗಾರನಾಗುವುದಿಲ್ಲ. ಆತನ ಐಶ್ವರ್ಯವು ಕ್ಷೀಣಿಸುವುದಿಲ್ಲ, ಬದಲಾಗಿ ಸುರಕ್ಷಿತವಾಗಿರುತ್ತದೆ. 

ವ್ಯಾಗ್ಗಪಜ್ಜ, ಯಾವ ಗೃಹಸ್ಥ ಅಲ್ಪ ಸಂಪಾದಿಸಿ ಅಧಿಕವಾಗಿ ಖಚರ್ು ಮಾಡುತ್ತಾನೆಯೋ, ಅದರಂತೆ ಜೀವಿಸುತ್ತಾನೆಯೋ ಅವನು ಹೇಗಿರುತ್ತಾನೆಂದರೆ ಕಾಡುಸೇಬು ತಿನ್ನುವ ಮನುಷ್ಯನು ಮರಹತ್ತಿ ಕಾಯಿಯನ್ನು ಹಾಗು ಹಣ್ಣುಗಳನ್ನು ಎಲ್ಲವನ್ನು ಕೊಂಬೆ ಅಲ್ಲಾಡಿಸಿ ಬೀಳಿಸುತ್ತಾನೆ. ನಂತರ ಹಣ್ಣುಗಳನ್ನು ತಿಂದು ಕಾಯಿಗಳನ್ನು ಬಿಸಾಡಿ ಹೋಗುತ್ತಾನೆ. ಜನರು ಅಂತಹ ನಷ್ಟವನ್ನು ವಿರೋಧಿಸುತ್ತಾರೆ.

ವ್ಯಾಗ್ಗಪಜ್ಜ, ಯಾವುದಾದರೂ ಗೃಹಸ್ಥ ಜಿಪುಣತನದಿಂದ ತನ್ನ ಸುಖಕ್ಕೆ ಅತಿ ಅಲ್ಪವಾಗಿ ಬಳಸಿ ಸತ್ತರೆ, ಆತನು ನಿಂದೆಗೆ ಪ್ರಾಪ್ತಿಯಾಗುತ್ತಾನೆ. ಏಕೆಂದರೆ ಯಾವ ಪ್ರಾಪಂಚಿಕ ಸುಖಕ್ಕಾಗಿ ಹಣ ಪ್ರಾಪ್ತಿ ಮಾಡಿದನೋ ಅದಕ್ಕೆ ಬಳಸದೆ ಹೋಗುತ್ತಾನೆ. 

ವ್ಯಾಗ್ಗಪಜ್ಜ, ಆದ್ದರಿಂದ ಗೃಹಸ್ಥನು ಬುದ್ಧಿವಂತಿಕೆಯಿಂದ ಐಶ್ವರ್ಯ ಐಶ್ವರ್ಯ ಸಂಪಾದನೆ ಆಗುವ ಕಷ್ಟ ಅರಿತು, ಅದಕ್ಕಾಗಿ ದುಂದುವೆಚ್ಚ ಮಾಡದೆ, ಜಿಪುಣನು ಆಗದೆ ಬಳಸಬೇಕು. ಆತನು ಈ ರೀತಿ ವಿವೇಕಿಯಾಗಿ ವತರ್ಿಸಬೇಕು. ಈ ಐಶ್ವರ್ಯ ನನ್ನಿಂದ ಸಂಪಾದಿಸಲ್ಪಟ್ಟಿದೆ. ನಾನು ಇದನ್ನು ಅತಿಯಾಗಿ ಖಚರ್ು ಮಾಡಲಾರೆ, ಬದಲಾಗಿ ಮಿತವ್ಯಯದಿಂದ ನನ್ನ ಅಗತ್ಯತೆಗೆ ತಕ್ಕಂತೆ ಬಳಸುತ್ತೇನೆ ಈ ರೀತಿಯ ಬಳಕೆಯನ್ನು ಮಿತವ್ಯಯ ಎನ್ನುತ್ತಾರೆ.

ವಾಗ್ಗಪಜ್ಜ, ಈ ನಾಲ್ಕು ದಾರಿಯಿಂದ ನೀತಿಯಿಂದ ನಿರಂತರ ಪರಿಶ್ರಮದಿಂದ ಗಳಿಸಿದ ಐಶ್ವರ್ಯವು ನಾಶವಾಗುತ್ತದೆ. ಯಾವುದು ನಾಲ್ಕು ? ಅವೆಂದರೆ :

1. ಅನೀತಿಯುತ ಕಾಮುಕತೆಯಲ್ಲಿ ತಲ್ಲೀನನಾಗುವುದು

2. ಮಾದಕ ಪಾನೀಯಗಳಲ್ಲಿ ನಿರತನಾಗುವುದು

3. ಜೂಜಿನಲ್ಲಿ ರತನಾಗುವುದು

4. ಅನೀತಿಯುತ ಮಿತ್ರರ ಸಂಗಡ ಬೆರೆಯುವುದು.

ವ್ಯಾಗ್ಗಪಜ್ಜ, ಒಂದು ಸರೋವರಕ್ಕೆ ಅತಿ ಶ್ರಮದಿಂದ ಕಟ್ಟೆಯನ್ನು ಭದ್ರಪಡಿಸುತ್ತಾರೆ. ಅದಕ್ಕೆ ನಾಲ್ಕುಕಡೆಯಿಂದ ನೀರು ಒಳಗೆ ಬರುವ ಹಾದಿಯಿರುತ್ತದೆ. ಹಾಗೆಯೇ ನಾಲ್ಕುಕಡೆ  ನೀರು ಹೊರಹೋಗುವ ದಾರಿ ತೆರೆಯಬಿಟ್ಟರೆ, ಅಲ್ಲಿ ಗಾಳಿಯ ಪ್ರವೇಶ ಇಲ್ಲದೆಯೇ ಸರೋವರ ಹರಿದು ಬರಿದಾಗಿಬಿಡುತ್ತದೆ. ಇದೇ ರೀತಿಯಾಗಿ ವ್ಯಾಗ್ಗಪಜ್ಜ, ಮಾನವ ಸಂಪಾದಿಸಿದ ಐಶ್ವರ್ಯವೂ ಸಹಾ ಹಾನಿಯಾಗುತ್ತದೆ. 

ವ್ಯಾಗ್ಗಪಜ್ಜ, ನಾಲ್ಕು ದಾರಿಯಿಂದ ಪರಿಶ್ರಮಪಟ್ಟು ಗಳಿಸಿದ ಐಶ್ವರ್ಯ ಸುರಕ್ಷಿತವಾಗಿರುತ್ತದೆ ಹಾಗು ಅಭಿವೃದ್ಧಿ ಹೊಂದುತ್ತದೆ. ಅವು ಯಾವುವು? ಅದೆಂದರೆ:

1. ಅನೀತಿಯುತ ಕಾಮುಕತನದಿಂದ ವಿರತನಾಗುವುದು.

2. ಮಾದಕ ಪಾನೀಯಗಳಿಂದ ದೂರವಿರುವುದು.

3. ಜೂಜಾಡುವುದನ್ನು ತೊರೆಯುವುದು

4. ಶ್ರೇಷ್ಠ ಮಿತ್ರರನ್ನು ಹೊಂದಿರುವುದು. 

ಇದರಿಂದ ಆತನ ಐಶ್ವರ್ಯವು ಅಭಿವೃದ್ಧಿಯಾಗತ್ತದೆ.

ವ್ಯಾಗ್ಗಪಜ್ಜ ಸರೋವರವೊಂದಕ್ಕೆ ನಾಲ್ಕು ಕಡೆಗಳಿಂದಲೂ ಕಟ್ಟೆ ಕಟ್ಟಿರುತ್ತಾರೆ, ಭದ್ರಪಡಿಸಿರುತ್ತಾರೆ. ಅದರ ಹೊರಹೋಗುವ ಮಾರ್ಗ ಎಲ್ಲಾ ರೀತಿಯಲ್ಲಿ ಮುಚ್ಚಿದ್ದು ನೀರು ಒಳಹೋಗುವ ಹಾದಿ ತೆರೆದಿದ್ದು ನೀನು ಒಳಗೆ ಹರಿದರೆ ಮತ್ತು ಒಳಹೋಗುವ ಹಾದಿಗೆ ಗಾಳಿಯ ತಡೆಯು ಇಲ್ಲದಿದ್ದರೆ ಸರೋವರದ ನೀರು ಕ್ಷೀಣಿಸುವುದಿಲ್ಲ, ಬದಲಾಗಿ ವೃದ್ಧಿಸುತ್ತದೆ. ಹಾಗೆಯೇ ಸರೋವರವು ತುಂಬುತ್ತದೆ.

ಇದೇರೀತಿಯಾಗಿ ವ್ಯಾಗ್ಗಪಜ್ಜ, ಯಾವ ಮನುಷ್ಯನು ಅನೀತಿಯುತ ಕಾಮವನ್ನು ತ್ಯಜಿಸಿರುವನು, ಮದ್ಯಪಾನವನ್ನು ಬಿಟ್ಟಿರುವನೋ, ಜೂಜಿನಿಂದ ವಿರತನೋ ಮತ್ತು ಕೆಟ್ಟ ಸ್ನೇಹಿತರನ್ನು ತೊರೆದಿರುವನೋ ವ್ಯಾಗಪಜ್ಜ, ಅಂತಹ ನಾಲ್ಕು ನಿಯಮಗಳಿಂದ ಕೂಡಿದ ಗೃಹಸ್ಥನು ಈ ಜೀವನದಲ್ಲಿ ಶೀಲವಂತನಾಗಿದ್ದು, ಮುಂದಿನ ಜನ್ಮದಲ್ಲಿ ಸುಖವನ್ನು ಪಡೆಯುತ್ತಾನೆ.

ವ್ಯಾಗ್ಗಪಜ್ಜ ಮುಂದಿನ ನಾಲ್ಕು ನಿಯಮಗಳಿಗೆ ಬದ್ಧನಾದರೆ ಅತನು ಮುಂದೆ ಉತ್ತಮ ಜನ್ಮ ಪಡೆಯುತ್ತಾನೆ. ಸುಗತಿಯ ಸುಖವನ್ನು ಪಡೆಯುತ್ತಾನೆ. ಯಾವುವು ನಾಲ್ಕು? ಅವೆಂದರೆ: 1) ಶ್ರದ್ಧೆ  2) ಶೀಲ  3) ದಾನ  4) ಪ್ರಜ್ಞಾಶೀಲತೆ.

ಓ ವ್ಯಾಗ್ಗಪಜ್ಜ, ಶ್ರದ್ಧೆ ಎಂದರೇನು? ಈ ಜಗತ್ತಿನಲ್ಲಿ ವ್ಯಾಗ್ಗಪಜ್ಜ ಗೃಹಸ್ಥನು ಶ್ರದ್ಧೆಯುಳ್ಳವನಾಗುತ್ತಾನೆ. ಆತನು ಬುದ್ಧರಲ್ಲಿ ಹಾಗು ಅವರ ಅಸಮಾನ್ಯ ಜ್ಞಾನದಲ್ಲಿ ಪ್ರಬಲ ಶ್ರದ್ಧೆಯಿಡುತ್ತಾನೆ. ಆತನು ಈ ರೀತಿ ಚಿಂತಿಸಿ ಶ್ರದ್ಧೆಯನ್ನು ಅಭಿವೃದ್ಧಿಗೊಳಿಸುತ್ತಾನೆ. 

ಬುದ್ಧ ಭಗವಾನರು ಎಲ್ಲಾ ಪಾಪಗಳನ್ನು ದಾಟಿ ಹೋಗಿದ್ದಾರೆ (ಮುಕ್ತರು) ಅವರು ಸ್ವಯಂ ಪರಿಶ್ರಮದಿಂದ ಸರ್ವ ವಿಷಯಗಳ ಕಾರಣವನ್ನು ಹಾಗು ಅದರ ನಿವಾರಣೆಯನ್ನು ಅರಿತಿದ್ದಾರೆ. ಅವರು ಸರ್ವರಿಗೂ ಕರುಣೆಯ ನುಡಿಗಳನ್ನು ಆಡುತ್ತಾರೆ ಮತ್ತು ಅವರ ಅನಂತ ಅತೀ ಮೈತ್ತಿಯಿಂದ (ಶುದ್ಧ ಪ್ರೀತಿ) ಕೂಡಿದ ಆಚರಣೆಯಲ್ಲಿರುತ್ತಾರೆ. ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವ ಲೋಕಗಳನ್ನು ಅರಿತಿದ್ದಾರೆ. ಅವರು ಮಾನವರೆಲ್ಲಾ ಪಾಪದಿಂದ ವಿಮುಕ್ತರಾಗಲು ಹಾಗು ಶ್ರೇಷ್ಠ ಋಜು ಮಾರ್ಗ ಹಿಡಿಯಲು ಕಾರಣಕರ್ತರಾಗಿದ್ದಾರೆ. ಅವರು ಸರ್ವದೇವ ಹಾಗು ಮಾನವರ ಮಾರ್ಗದಶರ್ಿಯಾಗಿದ್ದಾರೆ. ಅವರು ಸ್ವಯಂ ಪರಮಶ್ರೇಷ್ಠವಾದ ನಾಲ್ಕು ಸತ್ಯಗಳನ್ನು ಕಂಡುಹಿಡಿದಿದ್ದಾರೆ. ಹಾಗು ಪರರ ಪರಮ ಉನ್ನತಿಗೆ ಅದನ್ನು ಪ್ರಕಾಶಿಸುತ್ತಾರೆ. ಈ ರೀತಿಯಾಗಿ ಬುದ್ಧರಲ್ಲಿ ಶ್ರದ್ಧೆಯುಳ್ಳವನಾಗುತ್ತಾನೆ. 

ಓ ವ್ಯಾಗ್ಗಪಜ್ಜ, ಶೀಲಗಳ ಪಾಲನೆ ಎಂದರೇನು? ಈ ಜಗತ್ತಿನಲ್ಲಿ ವ್ಯಾಗ್ಗಪಜ್ಜ ಗೃಹಸ್ಥನು ಜೀವಹತ್ಯೆಯಿಂದ ವಿರತನಾಗುವುದು, ತನ್ನದಲ್ಲದ್ದನ್ನು ತೆಗೆದುಕೊಳ್ಳುವ, ಕಳ್ಳತನದಿಂದ ವಿರತನಾಗುವುದು, ಅನೀತಿಯುತ ಕಾಮುಕತೆಯಿಂದ ವಿರತನಾಗುವುದು, ಯಾವುದೇ ರೀತಿಯ ಅಸತ್ಯವನ್ನು ಹೇಳುವುದರಲ್ಲಿ ವಿರತನಾಗುವುದು ಮತ್ತು ಮಾದಕ ಪಾನೀಯಗಳ ಸೇವನೆಯಲ್ಲಿ ವಿರತನಾಗುವುದು. ಇದನ್ನೇ ಶೀಲಗಳ ಪಾಲನೆ ಎನ್ನುವರು.

ಓ ವ್ಯಾಗ್ಗಪಜ್ಜ, ದಾನವೆಂದರೇನು? ಈ ಜಗದಲ್ಲಿ ಗೃಹಸ್ಥನು ತೃಪ್ತಿಹೊಂದದ ಬಯಕೆಗಳಿಂದ ಕೂಡಿ, ಪರರ ಐಶ್ವರ್ಯದಲ್ಲಿ ಈಷರ್ೆಪಟ್ಟು ಈ ರೀತಿ ನಿರ್ಧರಿಸುತ್ತಾನೆ: ನನ್ನ ಈ ಐಶ್ವರ್ಯ ಪರರಲ್ಲಿ ಅಲ್ಪವೂ ಹೋಗದಿರಲಿ ಎಂದು. ಆದರೆ ದಾನ ಇದಲ್ಲ, ಬದಲಾಗಿ ಪರರಲ್ಲಿ ಅತ್ಯಂತ ದಯೆಯುಳ್ಳವರಾಗಿ ಪರರಿಗೆ ಪಾಲನ್ನು ನೀಡುವುದು ಮತ್ತು ಪರರಿಗೆ ಅವರ ಅಗತ್ಯ ಬಂದಾಗ ನೀಡುವುದು ಮತ್ತು ತನ್ನ ಐಶ್ವರ್ಯದಲ್ಲಿ ಪರರಿಗೂ ಪಾಲು ನೀಡುವುದು. ವ್ಯಾಗ್ಗಪಜ್ಜ ಇದನ್ನೇ ದಾನ ಎನ್ನುವರು.

ಮತ್ತೆ ಓ ವ್ಯಾಗ್ಗಪಜ್ಜ, ಪ್ರಜ್ಞಾಶೀಲತೆ ಎಂದರೇನು? ವ್ಯಾಗ್ಗಪಜ್ಜ, ಈ ಜಗತ್ತಿನಲ್ಲಿ  ಗೃಹಸ್ಥನು ತನ್ನ ಧಾಮರ್ಿಕ ಜೀವನಕ್ಕೆ ಪ್ರಬಲವಾಗಿ ಅಡ್ಡಿಯಾಗಿರುವ ಅಜ್ಞಾನವನ್ನು ದೂರೀಕರಿಸುವುದು ಅಥವಾ ಈ ಜಗತ್ತಿನಲ್ಲಿ ಸಫಲತೆಯನ್ನು ಸಾಧಿಸಿ ಸಂಬೋಧಿಯನ್ನು ಪ್ರಾಪ್ತಿಮಾಡುವುದು ಮತ್ತು ಖಂಧಗಳ (ದೇಹ ಮತ್ತು ಮನಸ್ಸಿನ ರಾಶಿಯನ್ನು) ಉತ್ಪತ್ತಿ ಹಾಗು ಅದರ ಪರಿವರ್ತನೆ, ಅದರ ಲಯವನ್ನು ಆಳವಾಗಿ, ಸೂಕ್ಷ್ಮವಾಗಿ ಅರಿಯುವಿಕೆ ಹಾಗು ಇದರ ಫಲವಾಗಿ ಯಾವುದು ಅಸ್ತಿತ್ವದಲ್ಲಿದೆಯೋ ಅದೆಲ್ಲವನ್ನು ಪರಿವರ್ತನಶೀಲ ಅನಿತ್ಯವಾದುದು ಎಂದು ಅರಿಯುವುದು ವ್ಯಾಗ್ಗಪಜ್ಜ, ಇದನ್ನೇ ಪ್ರಜ್ಞಾಶೀಲತೆ ಎನ್ನುತ್ತಾರೆ.

ವ್ಯಾಗ್ಗಪಜ್ಜ, ಈ ನಾಲ್ಕು ನಿಯಮಗಳನ್ನು ಪಾಲಿಸುವುದರಿಂದ ಗೃಹಸ್ಥನು ಈ ಜೀವನದಲ್ಲಿನ ಅತ್ಯಂತ ಆನಂದಕರ ಜೀವನ ನಡೆಸುತ್ತಾನೆ ಹಾಗು ಮರಣದ ನಂತರ ಸುಗತಿಗೆ ಹೋಗುತ್ತಾನೆ. 

ಈ ರೀತಿಯಾಗಿ ಹೇಳಿದ ಮೇಲೆ ಭಗವಾನರು ಇದನ್ನೇ ಸಂಕ್ಷಿಪ್ತವಾಗಿ ಗಾಥೆಯಲ್ಲಿ ಹೇಳಿದರು: ಯಾವ ಗೃಹಸ್ಥನು ಸೋಮಾರಿಯಾಗಿದೆ, ತನ್ನ ಅನೇಕ ಕರ್ತವ್ಯಗಳನ್ನು, ಪುಣ್ಯಗಳನ್ನು ಭಂಗಮಾಡದೆ ಆಚರಿಸುತ್ತಿರುವನೋ, ಪ್ರಯತ್ನಶೀಲತೆಯನ್ನೇ ರಕ್ಷಿಸುತ್ತಿರುವನೋ, ಐಶ್ವರ್ಯದ ರಕ್ಷಣೆಯೊಂದಿಗೆ ಮಿತವ್ಯಯದಿಂದಿರುವನೋ, ಶ್ರದ್ಧೆಯಿಂದ ಶೀಲದ ಪಾಲನೆಯಲ್ಲಿರುವನೊ, ದಾನಿಯಾಗಿಯು ಮತ್ತು ಪ್ರಜ್ಞಾಶೀಲತೆಯಿಂದ ಕೂಡಿರುವನೋ ಅಂತಹ ಉತ್ತಮೋತ್ತಮನಲ್ಲಿ ಪಾಪಯುತ ಯೋಚನೆ ಉತ್ಪತ್ತಿ ಆಗುವುದಿಲ್ಲ.

ಬುದ್ಧ ಭಗವಾನರು ಈ ಬೋಧನೆಯನ್ನು ಗೃಹಸ್ಥರಿಗಾಗಿಯೇ ನೀಡಿದರು. ಯಾರು ತಾವು ಇಂದ್ರಿಯ ಸುಖಗಳಲ್ಲೇ ಕಾಲಕಳೆಯುತ್ತಾ ಪುಣ್ಯಕಾರ್ಯ ಮಾಡಲು ಸಾಕಷ್ಟು ಸಮಯವಿಲ್ಲವೋ, ಯಾರು ಪತ್ನಿ-ಪುತ್ರರ ಪಾಲನೆಯಲ್ಲೇ ಇರುವರೋ ಅಂತಹ ಗೃಹಸ್ಥರಿಗೆ ಈ ಜ್ಞಾನ ಅನರ್ಘ ಐಶ್ವರ್ಯವಾಗಿದೆ. ಇದನ್ನು ವ್ಯಾಗ್ಗಪಜ್ಜರಿಗೆ ಭಗವಾನರು ಹೇಳಿದ್ದರು. ಇದು ಸುತ್ತಪಿಟಕದ ಅಂಗುತ್ತರನಿಕಾಯದಲ್ಲಿ ಸಿಗುತ್ತದೆ. ಇದನ್ನು ಪಾಲಿಸುವ ಗೃಹಸ್ಥರ ಜೀವನವು ಇಹದಲ್ಲೂ ಹಾಗು ಪರಲೋಕದಲ್ಲೂ ಸುದೀರ್ಘ ಸುಖ ಹಿತವನ್ನು ನೀಡುತ್ತದೆ.


- ಂ0ಂ - ಂ0ಂ - ಂ0ಂ