Saturday, 30 August 2014

kasi bhaaradvaaja sutta in kannada( the cultivation of Buddha)

.
4. ಕಸಿ ಭಾರದ್ವಾಜ ಸುತ್ತ
(ಇದರಲ್ಲಿ ಭಗವಾನರು ಸಹಾ ಕೃಷಿಕರೆಂದು ಹೇಳಿಕೊಂಡಿದ್ದಾರೆ ಹಾಗೂ ಅವರ ಕೃಷಿ ಏನು?)
ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಮಗಧದ ದಕ್ಷಿಣಾಗಿರಿಯಲ್ಲಿ ಏಕನಾಲ ಹೆಸರಿನ ಬ್ರಾಹ್ಮಣರ ಗ್ರಾಮದಲ್ಲಿ ವಿಹಾರ ಮಾಡುತ್ತಿದ್ದರು. ಆ ಸಮಯದಲ್ಲಿ ಕೃಷಿ ಭಾರದ್ವಾಜ ಬ್ರಾಹ್ಮಣನು 500 ನೇಗಿಲುಗಳೊಡನೆ ಕೃಷಿ ಕಾರ್ಯದಲ್ಲಿ ತಲ್ಲೀನನಾಗಿದ್ದನು. ಆಗ ಭಗವಾನರು ಪೂವರ್ಾಹ್ನ ಸಮಯದಲ್ಲಿ ಚೀವರವನ್ನು ಧರಿಸಿ ಪಿಂಡಪಾತ್ರೆಯನ್ನು ಎತ್ತಿಕೊಂಡು ಎಲ್ಲಿ ಕೃಷಿ ಭಾರದ್ವಾಜನಿದ್ದನೋ ಅಲ್ಲಿಗೆ ಬಂದರು. ಆ ಸಮಯದಲ್ಲಿ ಕೃಷಿ ಭಾರದ್ವಾಜನು ಆಳುಗಳಿಗೆ ಭೋಜನವನ್ನು ಹಾಕಿಸುತ್ತಿದ್ದನು. ಕೃಷಿ ಭಾರದ್ವಾಜನು ಭಗವಾನರು ಭೋಜನಕ್ಕಾಗಿ ನಿಂತಿರುವುದು ಕಂಡು ಭಗವಾನರಿಗೆ ಹೀಗೆ ಹೇಳಿದನು-
ಹೇ ಸಮಣ, ನಾನು ಬಿತ್ತುತ್ತೇನೆ ಹಾಗು ಊಳುತ್ತೇನೆ, ಬಿತ್ತಿ ಹಾಗು ಊಳಿ ತಿನ್ನುತ್ತೇನೆ, ಹೇ ಸಮಣ, ನೀನು ಸಹಾ ಬಿತ್ತಿ, ಊಳಿ ತಿನ್ನು ಎಂದನು.
ಭಗವಾನರು ಬ್ರಾಹ್ಮಣನೇ, ನಾನು ಸಹಾ ಊಳುತ್ತೇನೆ ಹಾಗು ಬಿತ್ತಿ ಬೆಳೆಯುತ್ತೇನೆ, ಊಳಿ ಹಾಗು ಬಿತ್ತಿ ತಿನ್ನುತ್ತೇನೆ ಎಂದರು.
ನಾವಂತು ಗೋತಮರ ನೊಗ, ನೇಗಿಲು, ಗುಳ ಅಥವಾ ಎತ್ತುಗಳನ್ನು ನೋಡುತ್ತಿಲ್ಲ. ಆದರೂ ಗೋತಮರು ಹೀಗೆ ಹೇಳುತ್ತಾರೆ: ಹೇ ಬ್ರಾಹ್ಮಣನೇ, ನಾನು ಸಹಾ ಊಳುತ್ತೇನೆ ಹಾಗು ಬಿತ್ತಿ ಬೆಳೆಯುತ್ತೇನೆ, ಊಳಿ ಹಾಗು ಬಿತ್ತಿ ತಿನ್ನುತ್ತೇನೆ ಎಂದು.
ಹಾಗೆಯೇ ಕೃಷಿಕ ಭಾರದ್ವಾಜನು ಗಾಥೆಯಲ್ಲಿ ಭಗವಾನರೊಂದಿಗೆ ಹೀಗೆ ಹೇಳಿದನು-
1. ತಮ್ಮೊಂದಿಗೆ ತಾವು ಕೃಷಿಕರೆಂದು ಹೇಳುವಿರಿ, ಆದರೆ ಕೃಷಿಯಲ್ಲಿರುವ ತಮ್ಮನ್ನು ನೋಡಿಲ್ಲ ನಾನೆಂದು, ಕೇಳುವ ನಮಗೆ ತಮ್ಮ ಕೃಷಿಯನ್ನು ಹೇಳಿರಿ ನಾವು ಸಹಾ ಅದರಿಂದ ತಮ್ಮನ್ನು ಕೃಷಿಕರೆಂದು ಭಾವಿಸುತ್ತೇವೆ.
ಭಗವಾನರು ಪ್ರತಿ ಗಾಥೆಗಳನ್ನು ನುಡಿದರು-
2. ಶ್ರದ್ದೇಯೇ ನನ್ನ ಬೀಜವಾಗಿದೆ, ತಪವೇ ನನ್ನ ಮಳೆ, ಪ್ರಜ್ಞೆಯೇ ನನ್ನ ನೊಗ ಹಾಗು ನೇಗಿಲು, ಲಜ್ಜೆಯೇ ನೊಗದ ದಂಡ, ಚಿತ್ತವೇ ಹೂಳಲ್ಪಡುವುದಾಗಿದೆ, ಸ್ಮೃತಿಯೇ ನನ್ನ ಗುಳವಾಗಿದೆ.
3. ಶರೀರದಿಂದ ಸಂಯಮದಿಂದಿದ್ದೇನೆ, ವಚನದಿಂದಲೂ ನಿಗ್ರಹದಿಂದಿದ್ದೇನೆ, ಭೋಜನ ಹಾಗು ಹೊಟ್ಟೆಯ ಬಗ್ಗೆ ಮಿತವಾಗಿದ್ದೇನೆ. ನಾನು ಸತ್ಯದ ಕಳೆ ತೆಗೆಯುತ್ತೇನೆ. ಅರಹತ್ವದ ಪ್ರಾಪ್ತಿಯನ್ನೇ ಬೆಳೆಯಾಗಿ ಪಡೆಯುವುದಾಗಿದೆ.
4. ಪ್ರಯತ್ನಶೀಲತೆಯೇ ನನ್ನ ಎತ್ತುಗಳಾಗಿವೆ ಹಾಗು ನಿಬ್ಬಾಣಕ್ಕೆ ಬಂಡಿಯಾಗಿದೆ. ನನ್ನ ಬಂಡಿಯು ಕ್ಷಣವೂ ನಿಲ್ಲದೆ ಚಲಿಸುತ್ತಿರುತ್ತದೆ ಹಾಗು ತಲುಪುತ್ತಿರುವ ಕಡೆ ಹೋಗಿ ನಂತರ ಶೋಕ ಪಡಬೇಕಾಗಿಲ್ಲ.
5. ಈ ಪ್ರಕಾರದ ಕೃಷಿಕ ಫಲದಾಯಕವಾಗಿದೆ. ಈ ಕೃಷಿಯಿಂದ ಮನುಷ್ಯ ಸರ್ವ ದುಃಖದಿಂದ ಮುಕ್ತನಾಗುತ್ತಾನೆ.
ಆಗ ಕೃಷಿ ಭಾರದ್ವಾಜ ಬ್ರಾಹ್ಮಣನು ಒಂದು ದೊಡ್ಡ ಕಂಚಿನ ಪಾತ್ರೆಯಲ್ಲಿ ಪಾಯಸವನ್ನು ತುಂಬಿಸಿ, ಭಗವಾನರ ಬಳಿ ತಂದು ಹೀಗೆ ಹೇಳಿದನು- ಗೋತಮರೇ, ತಾವು ಪಾಯಸ ತಿನ್ನಿ, ತಾವು ಕೃಷಿಕರಾಗಿದ್ದೀರಿ, ಅಮರತ್ವದ ಫಲವುಳ್ಳ ಕೃಷಿಯನ್ನು ತಾವು ಮಾಡುವಂತಹವರಾಗಿದ್ದೀರಿ ಎಂದನು.
6. ಭಗವಾನರು ಧಮ್ಮೋಪದೇಶದ ನಂತರದ ಭೋಜನ ನನಗೆ ಅಭೋಜನವಾಗಿದೆ ಬ್ರಾಹ್ಮಣ, ಬಹಳ ಪ್ರಾಜ್ಞರಿಗೆ ಇದು ಧಮ್ಮವಲ್ಲ, ಬುದ್ಧರು ಧಮ್ಮೋಪದೇಶದ ನಂತರ ಭೋಜನವನ್ನು ತ್ಯಜಿಸುತ್ತಾರೆ. ಬ್ರಾಹ್ಮಣ ಧಮ್ಮದಿಂದ ಶೋಭಿಸುತ್ತಿರುವವರಿಗೆ ಇದೇ ರೀತಿಯಾಗಿದೆ.
7. ಜ್ಞಾನಿ, ಮಹಷರ್ಿ, ಕ್ಷೀಣಾಸ್ರವ ಹಾಗು ಚಂಚಲ್ಯರಹಿತರಾದ ನನಗಾಗಿ ಬೇರೆಯೇ ಅನ್ನ ಹಾಗು ಪೇಯ ನೀಡು, ಪುಣ್ಯ ಅಪೇಕ್ಷೆಗೆ ಇದು (ಬುದ್ಧರಿಗೆ ದಾನ) ಅತ್ಯುತ್ತಮ ಕ್ಷೇತ್ರವಾಗಿದೆ.
ಹಾಗಾದರೆ ಗೋತಮರೇ, ಈ ಪಾಯಸವನ್ನು ನಾನು ಯಾರಿಗಾಗಿ ನೀಡಲಿ.
ಬ್ರಾಹ್ಮಣ, ದೇವತೆಗಳ ಸಹಿತ ಸರ್ವ ಲೋಕದಲ್ಲಿ ತಥಾಗತರು ಮತ್ತು ತಥಾಗತರ ಶಿಷ್ಯರ ವಿನಃ ಮತ್ಯಾವ ಸಮಣ, ಬ್ರಾಹ್ಮಣ, ಬ್ರಹ್ಮ, ದೇವ ಹಾಗು ದೇವಮನುಷ್ಯರಲ್ಲಿ ಯಾರೂ ಇದನ್ನು ತಿಂದು ಜೀಣರ್ಿಸುವವರನ್ನು ನಾನು ಕಾಣುತ್ತಿಲ್ಲ. ಆದ್ದರಿಂದ ಬ್ರಾಹ್ಮಣ ನೀನು ಇದನ್ನು ಸಸ್ಯರಹಿತ ಭೂಮಿ ಅಥವಾ ಜೀವರಹಿತ ಜಲದಲ್ಲಿ ಸುರಿದುಬಿಡು.
ಆಗ ಕೃಷಿಕ ಭಾರದ್ವಾಜನು ಆ ಪಾಯಸನ್ನು ಜೀವರಹಿತ ಜಲದಲ್ಲಿ ಮುಳುಗಿಸಿಬಿಟ್ಟನು. ಆಗ ಆ ಪಾಯಸವು ನೀರಿನಲ್ಲಿ ಬೀಳುತ್ತಿದ್ದಂತೆ ಚಟಪಟನೆ ಸದ್ದು ಮಾಡುತ್ತಾ ಹೊಗೆ ಎದ್ದಿತು. ಹೇಗೆ ಕಬ್ಬಿಣದ ಸರಳನ್ನು ದಿನವೆಲ್ಲಾ  ಅಗ್ನಿಗೆ ಕೊಟ್ಟು, ಬಿಸಿಮಾಡಿ ಜಲದಲ್ಲಿ ಅದ್ದಿದಾಗ ಶಬ್ದ ಹೊರಬಂದು ಹೊಗೆ ಏಳುವುದೋ ಹಾಗೆಯೇ ಪಾಯಸವನ್ನು ನೀರಿಗೆ ಹಾಕಿದಾಗ ಚಟಪಟನೆ ಶಬ್ದವಾಗಿ ಹೊಗೆ ಎದ್ದಿತು. ಆಗ ಕೃಷಿಕ ಭಾರದ್ವಾಜನು ಸಂವಿಘ್ನನಾದನು, ರೋಮಾಂಚಿತನಾದನು.
ಭಗವಾನರು ಎಲ್ಲಿದ್ದರೋ ಅಲ್ಲಿ ಹೋದನು. ನಂತರ ಭಗವಾನರ ಪಾದಕಮಲದಲ್ಲಿ ತನ್ನ ತಲೆಯಿಟ್ಟು ವಂದಿಸಿ ಈ ರೀತಿ ಹೇಳಿದನು- ಹೇ ಗೋತಮರೇ, ಆಶ್ಚರ್ಯ ! ಆಶ್ಚರ್ಯವಾಯಿತು ! ಹೇಗೆಂದರೆ ತಲೆಕೆಳಗಿರುವ ಪಾತ್ರೆಯನ್ನು ಸರಿಯಾಗಿಸುವಂತೆ, ಮುಚ್ಚಿರುವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿರುವವರಿಗೆ ದಾರಿ ತೋರಿಸುವಂತೆ, ಅಂಧಕಾರದಲ್ಲಿರುವವರಿಗೆ ದೀಪ ತೋರಿಸುವಂತೆ, ಕಣ್ಣಿರುವವನಿಗೆ ವಸ್ತುಗಳನ್ನು ತೋರಿಸುವಂತೆ. ಹಾಗೆಯೇ ಪರಮಶ್ರೇಷ್ಠ ಭಗವಾನರಿಂದ ಅನೇಕ ರೀತಿಯಲ್ಲಿ ಧಮ್ಮವು ಪ್ರಕಾಶವಾಯಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನಗೆ ಪ್ರವಜ್ರ್ಯವನ್ನು ನೀಡುವಂತಾಗಲಿ, ಉಪಸಂಪದವು ದೊರೆಯುವಂತಾಗಲಿ.
ನಂತರ ಕೃಷಿಕ ಭಾರದ್ವಾಜನು ಭಗವಾನರಿಂದ ಪ್ರವಜ್ರ್ಯ ಪಡೆದನು, ಉಪಸಂಪದ ಪಡೆದನು. ಉಪಸಂಪದ ಪಡೆದ ಕೆಲವೇ ದಿನಗಳಲ್ಲಿ ಆಯುಷ್ಮಂತ ಭಾರದ್ವಾಜನು ಏಕಾಂತದಲ್ಲಿ ವಾಸಿಸಿ, ಸಂಯಮಿ, ಅಪ್ರಮಾದ ಧ್ಯಾನ ವಿಧಿಗಳಲ್ಲಿ ಮಗ್ನನಾದನು. ನಂತರ ಯಾವ ಪರಮ ಅರ್ಥವನ್ನು ಪಡೆಯಲು ಕುಲಪುತ್ರರು ಮನೆ ತ್ಯಜಿಸಿ ಪ್ರವಜರ್ಿತರಾಗಿ ಸಾಧನಶೀಲರಾಗುವರೋ, ಅಂತಹ ಅನುತ್ತರ ಬ್ರಹ್ಮಚರ್ಯದ ಅಂತಿಮ ಫಲವನ್ನು ಸ್ವಯಂ ಜ್ಞಾನವನ್ನು ಸಾಕ್ಷಾತ್ಕರಿಸಿದನು. ಹಾಗೆಯೇ ವಿಮುಕ್ತಿ ಜ್ಞಾನವು ಲಭಿಸಿತು- ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದನ್ನು ಮಾಡಿಯಾಯಿತು, ಯಾವ ಶೇಷವೂ ಉಳಿದಿಲ್ಲ. ಆಯುಷ್ಮಂತ ಭಾರದ್ವಾಜನು ಅರಹಂತರಲ್ಲಿ ಒಬ್ಬನಾದನು.
ಇಲ್ಲಿಗೆ ಕಸಿ ಭಾರದ್ವಾಜ ಸುತ್ತ ಮುಗಿಯಿತು.

No comments:

Post a Comment