Saturday 30 August 2014

paraabhava sutta in kannada (12 causes of downfall)

6. ಪರಾಭವ ಸುತ್ತ
(ವ್ಯಕ್ತಿಯ ಅವನತಿಯ ಹನ್ನೆರಡು ಕಾರಣಗಳು)
ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ದೇವತೆಯು ರಾತ್ರಿ ಮುಗಿಯುತ್ತಿದ್ದಂತೆ ತನ್ನ ತೇಜಸ್ಸಿನಿಂದ ಸಮಸ್ತ ಜೇತವನವನ್ನು ಬೆಳಗಿಸುವಂತಹ ಪ್ರಕಾಶವನ್ನು ಹರಡುತ್ತಾ ಎಲ್ಲಿ ಭಗವಾನರು ಇದ್ದರೋ ಅಲ್ಲಿ ಬಂದನು. ಬಂದು ಭಗವಾನರಿಗೆ ಅಭಿವಂದನೆ ಸಲ್ಲಿಸಿ ಒಂದುಕಡೆ ನಿಂತನು. ಹಾಗೆ ನಿಂತ ದೇವತೆಯು ಭಗವಾನರಿಗೆ ಗಾಥೆಗಳಿಂದ ಹೀಗೆ ಹೇಳಿದನು-
1. ನಾನು ಗೋತಮರ ಬಳಿ ಅವನತಿಯ ಕಡೆ ಹೋಗುತ್ತಿರುವ ಪುರುಷನ ವಿಷಯ ಕೇಳುತ್ತಿದ್ದೇನೆ. ಇದನ್ನು ಕೇಳಲೆಂದು ನಾನು ಭಗವಾನರ ಬಳಿ ಬಂದಿದ್ದೇನೆ. ಅವನತಿಯ ಕಾರಣವೇನು?
2. ಭಗವಾನರು- ಉನ್ನತಿಗಾಮಿಯು ಸುಲಭವಾಗಿ ಕಾಣುತ್ತಾನೆ, ಹಾಗೆಯೇ ಅವನತಿಗಾಮಿಯು ಸುಲಭವಾಗಿ ಕಾಣುತ್ತಾನೆ. ಧಮ್ಮಕಾಮಿಯು ಉನ್ನತನು, ಧಮ್ಮದ್ವೇಷಿಯೇ ಅವನತಿಯುಳ್ಳವನು.
3. ದೇವತೆ - ಈ ಪ್ರಕಾರದಿಂದ ಅವನತಿಯ ಪ್ರಥಮ ಕಾರಣವನ್ನು ನಾನು ಅರಿತೆನು. ಭಗವಾನರು ದ್ವಿತೀಯ ಕಾರಣವನ್ನು ತಿಳಿಸಲಿ.
4. ಭಗವಾನರು ಯಾರಿಗೆ ದುರ್ಜನರು ಪ್ರಿಯರೋ, ಸಜ್ಜನರು ಇಷ್ಟವಿಲ್ಲವೋ, ಅಸತ್ಪುರುಷರ ಧಮ್ಮವನ್ನು ಇಷ್ಟಪಡುವನೋ ಇದೇ ಅವನ ಅವನತಿಯ ಕಾರಣವಾಗಿದೆ.
5. ದೇವತೆ - ಈ ರೀತಿಯಾಗಿ ಪರಾಭವದ ಎರಡನೇ ಕಾರಣವನ್ನು ನಾನು ಅರಿತೆನು, ಭಗವಾನರು ಪರಾಭವದ ಮೂರನೇ ಕಾರಣವನ್ನು ತಿಳಿಸಲಿ.
6. ಭಗವಾನರು - ಯಾವ ವ್ಯಕ್ತಿ ಅತಿ ನಿದ್ರಾವಂತನೋ, ಗುಂಪು ಜೊತೆಗಳಲ್ಲಿ ಉನ್ಮತ್ತನಾಗಿರುವನೋ, ಪರಿಶ್ರಮವನ್ನು ಪಡುವುದಿಲ್ಲವೋ, ಸೋಮಾರಿ ಹಾಗು ಕ್ರೋದಿಯೋ ಅದೇ ಅವನ ಪರಾಭವದ ಕಾರಣವಾಗಿದೆ.
7. ದೇವತೆ - ಈ ಪ್ರಕಾರದಿಂದ ಪರಾಭವದ ಮೂರನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ನಾಲ್ಕನೆಯ ಕಾರಣವನ್ನು ತಿಳಿಸಲಿ.
8. ಭಗವಾನರು - ಯಾರು ಸಮರ್ಥನಾಗಿದ್ದರೂ ವೃದ್ಧರಾದ ತಾಯಿ-ತಂದೆಯರನ್ನು ಸಾಕುವುದಿಲ್ಲವೋ, ಅದೇ ಆತನ ಪರಾಭವದ ಕಾರಣವಾಗಿದೆ.
9. ದೇವತೆ - ಈ ಪ್ರಕಾರದಿಂದ ಪರಾಭವದ ನಾಲ್ಕನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಐದನೆಯ ಕಾರಣವನ್ನು ತಿಳಿಸಲಿ.
10. ಭಗವಾನರು - ಯಾರು ಬ್ರಾಹ್ಮಣರಿಗೆ, ಸಮಣರಿಗೆ ಅಥವಾ ಪರ ಯಾಚಕರಿಗೆ ಸುಳ್ಳು ಹೇಳಿ ವಂಚಿಸುತ್ತಾನೋ ಅದು ಆತನ ಪರಾಭವದ ಕಾರಣವಾಗಿದೆ.
11. ದೇವತೆ - ಈ ಪ್ರಕಾರದಿಂದ ಪರಾಭವದ ಐದನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಆರನೆಯ ಕಾರಣವನ್ನು ತಿಳಿಸಲಿ.
12. ಭಗವಾನರು - ಅತ್ಯಂತ ಶ್ರೀಮಂತನಾಗಿದ್ದರೂ, ಚಿನ್ನ ಹಾಗು ಆಹಾರದಿಂದ ಸಂಪನ್ನನಾಗಿದ್ದರೂ, ಸ್ವಾಥರ್ಿಯಾಗಿ ಒಬ್ಬನೇ ಸ್ವಾದಿಷ್ಟ ಭೋಜನ ಮಾಡುತ್ತಾನೋ, ಅದೇ ಅವನ ಪರಾಭವದ ಕಾರಣವಾಗಿದೆ.
13. ದೇವತೆ - ಈ ಪ್ರಕಾರದಿಂದ ಅವನತಿಯ ಆರನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಅವನತಿಯ ಏಳನೆಯ ಕಾರಣವನ್ನು ತಿಳಿಸಲಿ.
14. ಭಗವಾನರು - ಯಾರು ಜಾತಿ, ಧನ ಹಾಗು ಗೋತ್ರದ ಮದದಿಂದ ತುಂಬಿರುವನೋ, ತನ್ನ ಸೋದರ ಬಂಧುಗಳನ್ನು ಸಹಾ ಜಾತಿಯ ಕಾರಣದಿಂದ ಅನಾಧರಣೆ ಮಾಡುವನೋ, ಅದು ಆತನ ಪರಾಭವದ ಕಾರಣವಾಗಿದೆ.
15. ದೇವತೆ - ಈ ಪ್ರಕಾರದಿಂದ ಪರಾಭವದ ಏಳನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಎಂಟನೆಯ ಕಾರಣವನ್ನು ತಿಳಿಸಲಿ.
16. ಭಗವಾನರು - ಯಾವ ವ್ಯಕ್ತಿ ಸ್ತ್ರೀಯರ ಹಿಂದೆ ಬಿದ್ದಿರುವನೋ, ಕುಡುಕನೋ ಹಾಗು ಜೂಜುಕೋರನೋ, ಸಂಪಾದಿಸಿದ ಸರ್ವ ಧನವನ್ನು ನಷ್ಟ ಮಾಡಿರುವನೋ ಅದೇ ಆತನ ಪರಾಭವದ ಕಾರಣವಾಗಿದೆ.
17. ದೇವತೆ - ಈ ಪ್ರಕಾರದಿಂದ ಪರಾಭವದ ಎಂಟನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಒಂಬತ್ತನೆಯ ಕಾರಣವನ್ನು ತಿಳಿಸಲಿ.
18. ಭಗವಾನರು - ಯಾರು ತನ್ನ ಪತ್ನಿಯಿಂದ ಅಸಂತುಷ್ಟನಾಗಿ ವೇಶ್ಯೆಯರ ಹಾಗು ಪರಸ್ತ್ರೀಯರೊಂದಿಗೆ ಕಾಣಿಸುತ್ತಾನೋ ಅದು ಆತನ ಪರಾಭವದ ಕಾರಣವಾಗಿದೆ.
19. ದೇವತೆ - ಈ ಪ್ರಕಾರದಿಂದ ಪರಾಭವದ ಒಂಬತ್ತನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಹತ್ತನೆಯ ಕಾರಣವನ್ನು ತಿಳಿಸಲಿ.
20. ಭಗವಾನರು - ಯಾವ ವೃದ್ಧನು ನವ ಯುವತಿಯನ್ನು ವಿವಾಹವಾಗಿ, ಆಕೆಯ ಮೇಲೆ ಸಂಶಯ, ಈಷರ್ೆಯಿಂದ ಸರಿಯಾಗಿ ನಿದ್ರಿಸಲಾರನೋ, ಇದು ಆತನ ಪರಾಭವದ ಕಾರಣವಾಗಿದೆ.
21. ದೇವತೆ - ಈ ಪ್ರಕಾರದಿಂದ ಪರಾಭವದ ಹತ್ತನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಹನ್ನೊಂದನೆಯ ಕಾರಣವನ್ನು ತಿಳಿಸಲಿ.
22. ಭಗವಾನರು - ದುರಾಸೆ ಅಥವಾ ಸಂಪತ್ತನ್ನು ನಷ್ಟ ಮಾಡುವಂತಹ ಸ್ತ್ರೀ ಅಥವಾ ಪುರುಷನನ್ನು ಸಂಪತ್ತಿನ ಒಡೆಯನನ್ನಾಗಿ ಮಾಡಿದರೆ ಅದು ಆತನ ಪರಾಭವದ ಕಾರಣವಾಗಿದೆ.
23. ದೇವತೆ - ಈ ಪ್ರಕಾರದಿಂದ ಪರಾಭವದ ಹನ್ನೊಂದನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಹನ್ನೆರಡನೆಯ ಕಾರಣವನ್ನು ತಿಳಿಸಲಿ.
24. ಭಗವಾನರು - ಕ್ಷತ್ರಿಯ ಕುಲದಲ್ಲಿ ಜನಿಸಿದ ಅಲ್ಪ ಸಂಪತ್ತಿನವನು ಹಾಗು ಮಹಾ ದುರಾಸೆಪೀಡಿತ ಪುರುಷ ರಾಜ್ಯದ ಆಸೆಪಟ್ಟರೆ ಅದು ಆತನ ಅವನತಿಯ ಕಾರಣವಾಗಿದೆ.
25. ವ್ಯಕ್ತಿಯ ಈ ಪರಾಭವದ ಕಾರಣಗಳನ್ನು ಬುದ್ಧಿವಂತನಾದ ಆರ್ಯ ವ್ಯಕ್ತಿಯು ಅರಿತು ನಡೆದರೆ ಸುಗತಿ ಪ್ರಾಪ್ತಿಮಾಡಿಕೊಳ್ಳುತ್ತಾನೆ.
ಇಲ್ಲಿಗೆ ಪರಾಭವ ಸುತ್ತ ಮುಗಿಯಿತು.

No comments:

Post a Comment