Friday 15 August 2014

uraga vagga in kannada

ಖುದ್ದಕನಿಕಾಯ
ಸುತ್ತ ನಿಪಾತ
. ಉರಗ ವಗ್ಗ
1. ಉರಗ ಸುತ್ತ (ಸರ್ಪ ಸುತ್ತ)
(ಈ ಸುತ್ತದಲ್ಲಿ ನಿಬ್ಬಾಣ ಪ್ರಾಪ್ತಿಗಾಗಿ ಶ್ರಮಿಸುವ ಭಿಕ್ಷುಗಳಿಗೆ ಇರುವಂತಹ ಗುಣಗಳನ್ನು ವಣರ್ಿಸಲಾಗಿದೆ. ಇದರಲ್ಲಿ ಸರ್ಪವು ಪೊರೆಯನ್ನು ತ್ಯಜಿಸುವ ರೀತಿಯಲ್ಲಿ ಈ ಲೋಕ ಮತ್ತು ಪರಲೋಕವನ್ನು ತ್ಯಾಗ ಮಾಡುವುದನ್ನು ಹೇಳಲಾಗಿದೆ.)
1. ಯಾವ ರೀತಿಯಲ್ಲಿ ಶರೀರದಲ್ಲಿರುವ ಸರ್ಪದ ವಿಷವನ್ನು ಔಷಧಿಯಿಂದ ಶಾಂತ ಮಾಡಬಹುದೋ ಅದೇ ಪ್ರಕಾರದಲ್ಲಿ ಭಿಕ್ಷುವು ಉತ್ಪನ್ನವಾಗಿರುವ ಕ್ರೋಧವನ್ನು ಶಾಂತಗೊಳಿಸುತ್ತಾನೆ. ಸರ್ಪವು ಪೊರೆಯು ತ್ಯಜಿಸುವಂತೆ ಆತನು ಈ ಲೋಕ ಹಾಗು ಪರಲೋಕದ ಬಗೆಗಿನ ಆಸಕ್ತಿಯನ್ನೆಲ್ಲಾ ತ್ಯಜಿಸುತ್ತಾನೆ.
2. ಯಾವ ರೀತಿಯಲ್ಲಿ ಕೆರೆಯಲ್ಲಿ ಪ್ರವೇಶಿಸಿ ಕಮಲವನ್ನು ಕೀಳುವರೋ, ಅದೇರೀತಿಯಲ್ಲಿ ಭಿಕ್ಷುವು ಸಂಪೂರ್ಣ ರಾಗವನ್ನು ನಷ್ಟಗೊಳಿಸುತ್ತಾನೆ. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
3. ಯಾವ ರೀತಿಯಲ್ಲಿ ಮಹಾತೇಜವು ಹರಿಯುವ ನದಿಯನ್ನು ಸಹಾ ಒಣಗಿಸಿಬಿಡುತ್ತದೋ, ಅದೇ ರೀತಿಯಲ್ಲಿ ಭಿಕ್ಷುವು ತನ್ನಲ್ಲಿನ ಅಭಿಮಾನವನ್ನು ತೆಗೆದು ಬಿಸಾಡಿರುವನು. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
4. ಯಾವ ರೀತಿಯಲ್ಲಿ ಅತಿ ದುರ್ಬಲವಾದ ನರಕಟ ಪುಷ್ಪವನ್ನು ಬೃಹತ್ ಪ್ರವಾಹವು ಎತ್ತಿಕೊಂಡು ಹೋಗುತ್ತದೋ ಅದೇರೀತಿಯಲ್ಲಿ ಭಿಕ್ಷುವು ತನ್ನ ಅಹಂಕಾರವನ್ನು ತಗೆದು ಬಿಸಾಡುವನು. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
5. ಯಾವ ರೀತಿಯಲ್ಲಿ ಅತ್ತಿ (ಆಲದ) ವೃಕ್ಷದಲ್ಲಿ ಪುಷ್ಪವನ್ನು ಎಷ್ಟು ಹುಡುಕಿದರೂ ಸಿಗುವುದಿಲ್ಲವೋ ಅದೇರೀತಿ ಭಿಕ್ಷುವು ಸಂಸಾರದಲ್ಲಿ ಯಾವ ರೀತಿಯ ಸಾರವನ್ನು ಕಾಣುವುದಿಲ್ಲ. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
6. ಯಾವ ಭಿಕ್ಷುವಿನ ಆಂತರ್ಯದಲ್ಲಿ ಕೋಪವಿಲ್ಲವೊ ಹಾಗು ಪಾಪ-ಪುಣ್ಯಗಳನ್ನು ಮೀರಿ ಹೋಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
7. ಯಾವ ಭಿಕ್ಷುವಿನಲ್ಲಿ ವಿತರ್ಕವು ನಷ್ಟವಾಗಿದೆಯೋ ಹಾಗು ಆತನ ಚಿತ್ತವು ಪೂರ್ಣವಾಗಿ ಆತನ ಅಧೀನದಲ್ಲಿದೆಯೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
8. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಅವನು ಇಡೀ ಪ್ರಾಪಂಚಿಕತೆಯನ್ನು ದಾಟಿ ಹೋಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
9. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಆತನು ಲೋಕದ ಪ್ರತಿಯೊಂದು ನಿಸ್ಸಾರ ಎಂದು ಸ್ಪಷ್ಟವಾಗಿ ಅರಿತಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
10. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಆತನು ಇವೆಲ್ಲವೂ ಸಂಪೂರ್ಣವಾಗಿ ನಿಸ್ಸಾರ ಎಂದು ಸ್ಪಷ್ಟವಾಗಿ ಅರಿತಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
11. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಇದು ಸಂಪೂರ್ಣ ನಿಸ್ಸಾರವೆಂದು ಅರಿತು ರಾಗರಹಿತನಾಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
12. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಇದೆಲ್ಲವೂ ಸಂಪೂರ್ಣ ನಿಸ್ಸಾರವೆಂದು ಅರಿತು ದ್ವೇಷರಹಿತನಾಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
13. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಇದೆಲ್ಲವೂ ಸಂಪೂರ್ಣ ನಿಸ್ಸಾರವೆಂದು ಅರಿತು ಮೋಹರಹಿತನಾಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
14. ಯಾವ ಭಿಕ್ಷುವಿನಲ್ಲಿ ಯಾವ ರೀತಿಯ ಆಸಕ್ತಿಯೂ ಇಲ್ಲವೋ ಹಾಗು ಅಕುಶಲದ (ಪಾಪ) ಮೂಲವು ನಷ್ಟವಾಗಿದೆಯೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
15. ಯಾವ ಭಿಕ್ಷುವಿನಲ್ಲಿ ಪುನಃ ಸಂಸಾರದಲ್ಲಿ ಉತ್ಪನ್ನವಾಗುವ ಯಾವ ಕ್ಲೇಶವೂ ಇಲ್ಲವೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
16. ಯಾವ ಭಿಕ್ಷುವಿನಲ್ಲಿ ಪುನಃ ಭವಬಂಧನದಲ್ಲಿ ಬೀಳುವ ಯಾವ ರೀತಿಯ ತೀವ್ರ ಬಯಕೆಯಿಲ್ಲವೊ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
17. ಯಾವ ಭಿಕ್ಷುವು ಪಂಚನಿವರಣಗಳನ್ನು* (ತಡೆ) ತ್ಯಜಿಸಿರುವನೊ, ಯಾರು ಪಾಪರಹಿತನೊ, ಸಂದೇಹಮುಕ್ತನೋ, ಹಾಗು ಯಾರಲ್ಲಿ ಸಾಂಸಾರಿಕ ಆಸಕ್ತಿಗಳ ಮುಳ್ಳುಗಳು ಎಸೆಯಲ್ಪಟ್ಟಿರುವವೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
ಇಲ್ಲಿಗೆ ಉರಗ ಸುತ್ತ ಮುಗಿಯಿತು.

No comments:

Post a Comment