Thursday, 25 September 2014

kim seela sutta in kannada

9. ಕಿಂ ಸೀಲ ಸುತ್ತ
(ನಿಬ್ಬಾಣ ಪ್ರಾಪ್ತಿಗಾಗಿ ಅಪೇಕ್ಷಿತ ಗುಣ)
1.            ಆಯುಷ್ಮಂತ ಸಾರಿಪುತ್ತ - ಯಾವ ಶೀಲ, ಯಾವ ಆಚರಣೆ ಮತ್ತು ಯಾವ ಕರ್ಮಗಳನ್ನು ಮಾಡುವುದರಲ್ಲಿ ತಲ್ಲೀನನಾದ ವ್ಯಕ್ತಿಯು ಅರ್ಹತ್ವವನ್ನು ಪ್ರಾಪ್ತಿಮಾಡುತ್ತಾನೆ?
2.            ಭಗವಾನ್ ಬುದ್ಧರು - ಆತನು ಹಿರಿಯರ ಸೇವೆ ಮಾಡಲಿ ಈಷರ್ೆಯನ್ನು ಹೊಂದದಿರಲಿ, ಉಚಿತ ಸಮಯದಲ್ಲಿ ಗುರುಗಳ ದರ್ಶನ ಮಾಡಲಿ, ಧರ್ಮಕಥೆ ಕೇಳಲು ಉಚಿತ ಸಮಯ ಅರಿಯಲಿ, ಹೇಳಿದ ಉಪದೇಶವನ್ನು ಆದರಪೂರ್ವಕವಾಗಿ ಕೇಳಲಿ.
3.            ಜಡತೆಯನ್ನು ಬಿಟ್ಟು, ವಿನೀತಭಾವದಿಂದ ಗುರುಜನರನ್ನು ದಶರ್ಿಸಿ, ಅರ್ಥ, ಧರ್ಮ, ಸಂಯಮ ಹಾಗು ಬ್ರಹ್ಮಚರ್ಯದ ಸ್ಮರಣೆ ಮಾಡಿ ಅದರ ಆಚರಣೆ ಮಾಡಲಿ.
4.            ಆತನು ಧಮ್ಮದಲ್ಲಿ ರಮಿಸಲಿ, ಧಮ್ಮದಲ್ಲಿ ನಿರತನಾಗಲಿ, ಧಮ್ಮದಲ್ಲಿ ಸ್ಥಿರನಾಗಲಿ, ಧಾಮರ್ಿಕ ವಿನಿಷ್ಕ್ರಿಯವನ್ನು ಅರಿಯುತ್ತಾ, ಧರ್ಮದೂಷಿಯೊಡನೆ ಚಚರ್ೆ ಮಾಡದಿರಲಿ, ವಾಸ್ತವಿಕ ಸದುಪದೇಶಗಳಿಂದ ಸಮಯವನ್ನು ವ್ಯಯಿಸಲಿ.
5.            ಆತನು ಅಟ್ಟಹಾಸ (ಹಾಸ್ಯ) ಕಾಡುಹರಟೆ, ವಿಲಾಪ, ದ್ವೇಷ, ಮಾಯಾ, ವಂಚನೆ, ಲೋಲುಪತೆ, ಹಿಂಸೆ, ಜಗಳಗಳ ಮಾತುಗಳು, ಕಟುನುಡಿ, ರಾಗ ಹಾಗು ಮೋಹವನ್ನು ತ್ಯಜಿಸಲಿ. ಮದರಹಿತ ಸಂಯಮಿಯಾಗಿ ಸಂಚರಿಸಲಿ.
6.            ಸುಭಾಷಿತ ಜ್ಞಾನದ ಸಾರವಾಗಿದೆ, ಅದು ಸಮಾಧಿ ವಿದ್ಯೆ ಹಾಗು ಜ್ಞಾನದ ಸಾರವಾಗಿದೆ. ಯಾವ ಮನುಷ್ಯ ಲೋಭಿ (ರಾಗಿ) ಹಾಗು ಪ್ರಮಾದವುಳ್ಳವನಾಗುತ್ತಾನೋ, ಆತನ ಪ್ರಜ್ಞೆ ಹಾಗು ಶ್ರುತ ಬೆಳವಣಿಗೆಯಾಗುವುದಿಲ್ಲ.
7.            ಯಾರು ಯಾವ ಆರ್ಯ (ಬುದ್ಧರು) ರಿಂದ ಉಪದೇಶಿತವಾದ ಧರ್ಮದಲ್ಲಿ ರತನಾಗಿದ್ದಾರೋ, ಅವರು ಮನದಿಂದ, ವಚನದಿಂದ ಹಾಗು ಶರೀರದಿಂದ ಉತ್ತಮರಾಗಿರುತ್ತಾರೆ. ಅವರು ಶಾಂತಿ, ಶಿಷ್ಟತಾ ಹಾಗು ಸಮಾಧಿಯಲ್ಲಿ ಸಂಲಗ್ನನಾಗಿ ಶ್ರುತ ಹಾಗು ಪ್ರಜ್ಞೆಯ ಸಾರವನ್ನು ಪ್ರಾಪ್ತಿಮಾಡಿದ್ದಾರೆ.

ಇಲ್ಲಿಗೆ ಕಿಂ ಸೀಲ ಸುತ್ತ ಮುಗಿಯಿತು.

naava sutta in kannada

8. ನಾವಾ ಸುತ್ತ
(ಗುರು ಮಹಿಮೆ)
1.            ಯಾರಿಂದ ಮನುಷ್ಯ ಧರ್ಮವನ್ನು ಅರಿಯುವನೋ, ಆತನಿಗೆ ಇಂದ್ರನನ್ನು ದೇವತೆಗಳು ಪೂಜಿಸುವ ಹಾಗೆ ಪೂಜಿಸಬೇಕು. ಆ ಬಹುಶ್ರುತ ಪೂಜ್ಯನು ಪೂಜಿತನಾದ ಮೇಲೆ ಪ್ರಸನ್ನಚಿತ್ತನಾಗಿ ಧರ್ಮವನ್ನು ಪ್ರಕಾಶಿಸುತ್ತಾನೆ.

2.            ಆ ಬುದ್ಧಿವಂತ ವ್ಯಕ್ತಿಯು ಗುರುವಿನ ಸಂಗತಿಯನ್ನು ಸಾರ್ಥಕತೆಯಿಂದ ಮಾಡುತ್ತಾನೆ. ಹೇಗೆಂದರೆ ಏಕಾಗ್ರತೆಯಿಂದ ಮಾತುಗಳನ್ನು ಕೇಳುತ್ತಾನೆ. ಹಾಗು ಧರ್ಮದ ಅನುಸಾರವಾಗಿ ಆಚರಣೆ ಮಾಡುತ್ತಾನೆ. ಆಗ ಆ ವಿಜ್ಞನು ಜ್ಞಾನಿಯು ಹಾಗು ನಿಪುಣನು ಆಗುತ್ತಾನೆ.
3.            ಯಾರು ಕ್ಷುದ್ರನಾದ, ಮೂರ್ಖನಾದ, ಅರ್ಥವನ್ನು ಅರಿಯದ ಹಾಗು ಮತ್ಸರ್ಯವುಳ್ಳ ಗುರುವಿನೊಡನೆ ಸೇರುವನೋ, ಆತನು ಧರ್ಮವನ್ನು ಅರಿಯದೆಯೇ, ಸಂಶಯದಿಂದ ಮುಕ್ತನಾಗದೆಯೇ ಮೃತ್ಯು ಪ್ರಾಪ್ತಿಮಾಡುತ್ತಾನೆ.
4.            ಯಾವ ಮನುಷ್ಯನು ಹರಿಯುವ ವಿಶಾಲವಾದ ನದಿಯಲ್ಲಿ ಇಳಿದು ಧಾರೆಯಲ್ಲಿ ಕೊಚ್ಚಿ ಹೋಗುತ್ತಿದ್ದಾನೋ ಆತನು ಪರರಿಗೆ ಹೇಗೆ ತೀರ ತಲುಪಿಸಬಲ್ಲ (ಕಾಪಾಡಬಲ್ಲ).
5.            ಅದೇರೀತಿ ಯಾರು ಧರ್ಮವನ್ನು ಅರಿಯುವುದಿಲ್ಲವೊ, ಬಹುಶ್ರುತರ ಅರ್ಥವನ್ನು ಕೇಳುವುದಿಲ್ಲವೋ, ತಾನಾಗಿಯೇ ಅರಿಯದೆ ಹಾಗು ಸಂಶಯದಿಂದ ದೂರವಾಗದೆ ಆತನು ಹೇಗೆ ಪರರನ್ನು ಕೂಡಿಸುತ್ತಾನೆ.
6-7. ಯಾವರೀತಿ ಚುಕ್ಕಾಣಿ ಹಾಗು ಹುಟ್ಟುಗಳಿಂದ ಯುಕ್ತವಾದ ನಾವೆಯಲ್ಲಿ ಹತ್ತಿ ಚತುರರನ್ನು, ಬುದ್ಧಿವಂತ ನಾವಿಕನು ಅದರಿಂದ ಪರರಿಗೆ ಹೇಗೆ ತೀರ ಮುಟ್ಟಿಸುತ್ತಾನೋ, ಅದೇ ರೀತಿಯಲ್ಲಿ ಜ್ಞಾನಿ, ಸಂಯಮಿ ಬಹುಶ್ರುತನು ಪರರ ಮಾತುಗಳಿಂದ ಅವಿಚಲಿತನಾಗುತ್ತಾನೆ. ಆತನು ಕೇಳಲು ಯೋಗ್ಯವಾದವರನ್ನು, ಇಚ್ಛೆಯುಳ್ಳವರಿಗೆ ಧರ್ಮ ಕಲಿಸುತ್ತಾನೆ.
8.            ಆದ್ದರಿಂದ ಬುದ್ಧಿವಂತ, ಬಹುಶ್ರುತ ಸತ್ಪುರುಷರ ಸಂಗತಿ ಮಾಡಬೇಕು, ಯಾರು ಅರ್ಥವನ್ನು ಅರಿತು ಧಮರ್ಾಚರಣೆ ಅನುಸರಿಸುವರೋ ಹಾಗೆಯೇ ಆತನು ಧರ್ಮವನ್ನು ಅರಿತು ಸುಖವನ್ನು ಪ್ರಾಪ್ತಿಮಾಡುತ್ತಾನೆ.

ಇಲ್ಲಿಗೆ ನಾವ ಸುತ್ತ ಮುಗಿಯಿತು.

brahmana dhammika sutta in kannada(the virtue of ancient brahmins)

7. ಬ್ರಾಹ್ಮಣ ಧಮ್ಮಿಕ ಸುತ್ತ
                (ಬ್ರಾಹ್ಮಣರ ಪುರಾತನ ಧರ್ಮ, ಬ್ರಾಹ್ಮಣರ ಲೋಭದಿಂದ ಯಜ್ಞದಲ್ಲಿ ಹಿಂಸೆ ಪ್ರಾರಂಭವಾಯಿತು. ಹಾಗು ಮಾತೃ ಸಮಾನವಾದ ಗೋವಿನ ಮೇಲೆ ಎಂದು ಶಸ್ತ್ರ ಎತ್ತಲಾರಂಭಿಸಿದರೊ, ಆಗ ನಾನಾ ಪ್ರಕಾರದ ರೋಗಗಳು ಉತ್ಪನ್ನವಾಯಿತು. ಮೊದಲಂತು ಇಚ್ಛೆ, ಹಸಿವು ಹಾಗು ವೃದ್ಧಾಪ್ಯ ಈ ಮೂರು ರೋಗಗಳು ಮಾತ್ರ ಇದ್ದವು).

                ಹೀಗೆ ನಾನು ಕೇಳಿದ್ದೇನೆ, ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಚೇತವನ ಆರಾಮದಲ್ಲಿ ವಾಸಿಸುತ್ತಿದ್ದರು. ಆಗ ಕೋಸಲ ಜನಪದದ ನಿವಾಸಿಗಳಲ್ಲಿ ವೃದ್ಧರು, ಜೀರ್ಣರು, ಈ ಅವಸ್ಥೆಯುಳ್ಳ ಮಹಾಧನಿ ಬ್ರಾಹ್ಮಣರು ಎಲ್ಲಿ ಭಗವಾನರು ಇದ್ದರೋ ಅಲ್ಲಿಗೆ ಬಂದರು. ಅಲ್ಲಿ ಬಂದನಂತರ ಭಗವಾನರೊಂದಿಗೆ ಕುಶಲ- ಮಂಗಳ ವಿಚಾರಿಸಿದರು. ಕುಶಲ ವಿಚಾರಿಸಿದ ನಂತರ ಒಂದುಕಡೆ ಕುಳಿತರು. ಹಾಗೆ ಕುಳಿತ ಬ್ರಾಹ್ಮಣರು ಭಗವಾನರೊಂದಿಗೆ ಈಗಿನ ಬ್ರಾಹ್ಮಣರು ಪುರಾತನ ಬ್ರಾಹ್ಮಣರ ರೀತಿ ಬ್ರಾಹ್ಮಣ ಧರ್ಮ ಪಾಲಿಸುತ್ತಿರುವಂತೆ  ಕಾಣುತ್ತಿರುವರೇ? ಎಂದು ಕೇಳಿದರು.
                ಭಗವಾನರು - ಬ್ರಾಹ್ಮಣರೇ, ಈಗಿನ ಬ್ರಾಹ್ಮಣರು, ಪುರಾತನ ಬ್ರಾಹ್ಮಣರ ರೀತಿ ಬ್ರಾಹ್ಮಣ ಧರ್ಮ ಆಚರಿಸುತ್ತಿರುವಂತೆ ಕಾಣುತ್ತಿಲ್ಲ. ಗೋತಮರೇ, ತಾವು ನಮಗೆ ಪುರಾತನ ಬ್ರಾಹ್ಮಣರ ಧರ್ಮ ವಿವರಿಸಿದರೆ ಒಳ್ಳೆಯದು. ತಮಗೆ ಆಕ್ಷೇಪವಿಲ್ಲದಿದ್ದರೆ ಹೇಳಿ. ಹಾಗಾದರೆ ಬ್ರಾಹ್ಮಣರೇ ಕೇಳಿ, ಬಹು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ, ಹೇಳುವೆನು. ಒಳ್ಳೆಯದು ಎಂದು ಹೇಳಿ ಆ ಧನಿಬ್ರಾಹ್ಮಣರು ಭಗವಾನರಿಗೆ ಉತ್ತರಿಸಿದರು. ಭಗವಾನವರು ಹೀಗೆ ಹೇಳಿದರು-
1.            ಮೊದಲಿನ ಋಷಿಗಳು ಸಂಯಮಿಗಳು ಹಾಗು ತಪಸ್ವಿಗಳಾಗಿದ್ದರು. ಅವರು ಐದು ಪ್ರಕಾರದ ಕಾಮ ಭೋಗಗಳನ್ನು ತ್ಯಾಗಮಾಡಿ ಸ್ವಹಿತದ ಕಾರ್ಯಗಳಲ್ಲಿ ತೊಡಗುತ್ತಿದ್ದರು.
2.            ಬ್ರಾಹ್ಮಣರ ಬಳಿ ಪಶುಗಳಾಗಲಿ, ಬಂಗಾರವಾಗಲಿ ಅಥವಾ ಧಾನ್ಯವಾಗಲಿ ಇರುತ್ತಿರಲಿಲ್ಲ. ಸ್ವ-ಅಧ್ಯಯನವನ್ನು  ಮಾಡುವುದೇ ಅವರ ಧನಧಾನ್ಯವಾಗಿತ್ತು. ಅವರು ಶ್ರೇಷ್ಠ ನಿಧಿಯಾದ ಬ್ರಹ್ಮವಿಹಾರದ ರಕ್ಷಣೆ ಮಾಡುತ್ತಿದ್ದರು.
3.            ಜನರು ಅವರಿಗಾಗಿ ಶ್ರದ್ಧೆಯಿಂದ ಭೋಜನವನ್ನು ಸಿದ್ಧಪಡಿಸಿ ದ್ವಾರದ ಬಳಿ ಇಡುತ್ತಿದ್ದರು. ಹುಡುಕಿ ಅವರಿಗೆ ಕೊಡಲು ಯೋಗ್ಯರೆಂದು ಭಾವಿಸುತ್ತಿದ್ದರು.
4.            ಸಮೃದ್ಧ ಜನಪದದ ಅಥವಾ ರಾಷ್ಟ್ರದ ಜನರು ನಾನಾ ಬಣ್ಣಗಳ ವಸ್ತ್ರಗಳು, ಶಯನಗಳು ಹಾಗು ನಿವಾಸ ಸ್ಥಾನಗಳನ್ನು ಅಪರ್ಿಸಿ ಅವರಿಗೆ ನಮಸ್ಕರಿಸುತ್ತಿದ್ದರು.
5.            ಬ್ರಾಹ್ಮಣರು ಅವದ್ಯ, ಅಜೇಯ ಹಾಗು ಧರ್ಮದಿಂದ ರಕ್ಷಿತರಾಗಿದ್ದರು. ಮನೆಗಳ ದ್ವಾರಗಳ ಬಳಿಗೆ ಹೋಗಲು ಅವರಿಗೆ ಯಾರೂ ಎಂದಿಗೂ ತಡೆಯುತ್ತಿರಲಿಲ್ಲ.
6.            ಮೊದಲಿನ ಬ್ರಾಹ್ಮಣರು ನಲವತ್ತೆಂಟು ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು ಮತ್ತು ವಿದ್ಯೆ ಹಾಗು ಆಚರಣೆಯ ಅನ್ವೇಷಣೆಯಲ್ಲಿ ನಿರತರಾಗುತ್ತಿದ್ದರು.
7.            ಬ್ರಾಹ್ಮಣರು ಪರಸ್ತ್ರೀಯರ ಹತ್ತಿರ ಹೋಗುತ್ತಿರಲಿಲ್ಲ ಮತ್ತು ಅವರು ಪರಸ್ತ್ರೀಯರನ್ನು ಕೊಳ್ಳುತ್ತಲೂ ಇರಲಿಲ್ಲ. ಅವರು ಕೇವಲ ತನ್ನನ್ನು ಪ್ರೇಮಿಸುವ ಸ್ತ್ರೀಯೊಬ್ಬಳ ಮಿಲನ ಬಯಸುತ್ತಿದ್ದರು.
8.            ಬ್ರಾಹ್ಮಣರು ಋತು ಸಮಯವನ್ನು ಬಿಟ್ಟು ಮಧ್ಯದ ನಿಷಿದ್ಧ ಸಮಯದಲ್ಲಿ ಮೈಥುನ ಆಚರಿಸುತ್ತಿರಲಿಲ್ಲ.
9.            ಅವರು ಬ್ರಹ್ಮಚರ್ಯ, ಶೀಲ, ಋಜುತೆ, ಮೃದುತೆ, ತಪಸ್ಸು, ಸಜ್ಜನತೆ, ಅಹಿಂಸೆ ಹಾಗು ಕ್ಷೇಮದ ಪ್ರಶಂಸಕರಾಗಿದ್ದರು.
10.          ಅವರಲ್ಲಿ ಒಬ್ಬ ಶ್ರೇಷ್ಠ ಹಾಗು ದೃಢ ಪರಾಕ್ರಮಿ ಬ್ರಾಹ್ಮಣ ಇರುತ್ತಿದ್ದ. ಆತನು ಸ್ವಪ್ನದಲ್ಲಿಯೂ ಸಹಾ ಮೈಥುನದ ಬಗ್ಗೆ ಯೋಚಿಸುತ್ತಿರಲಿಲ್ಲ.
11.          ಆತನ ಆಚರಣೆಯನ್ನು ಅನುಸರಿಸಿ ಇಲ್ಲಿ ಕೆಲವು ಜ್ಞಾನಿಗಳು, ಬ್ರಹ್ಮಚರ್ಯ, ಶೀಲ ಹಾಗು ಕ್ಷಮೆಯ ಪ್ರಶಂಸೆ ಮಾಡಿದರು.
12.          ಆಗ ಅವರು ಧಾಮರ್ಿಕ ರೀತಿಯಿಂದ ಅಕ್ಕಿ, ಶಯನ, ವಸ್ತ್ರ, ತುಪ್ಪ ಹಾಗು ಎಣ್ಣೆಯನ್ನು ಯಾಚಿಸಿ ಅದನ್ನು ಏಕತ್ರಗೊಳಿಸಿ, ಯಜ್ಞದ ವಿನ್ಯಾಸ ಮಾಡಿದರು. ಅವರು ಆ ಯಜ್ಞದಲ್ಲಿ ಗೋವುಗಳ ಹತ್ಯೆ ಮಾಡಲಿಲ್ಲ.
13.          ಹೇಗೆ ಮಾತಾ-ಪಿತ, ಸೋದರ ಹಾಗು ಬಂಧುಗಳು ಇರುವರೋ, ಹಾಗೆಯೇ ಗೋವುಗಳು ನಮ್ಮ ಮಿತ್ರರಾಗಿವೆ. ಅದರಿಂದ ಅನೇಕ ಔಷಧಿಗಳು ಉತ್ಪತ್ತಿಯಾಗುತ್ತದೆ.
14.          ಈ ಗೋವುಗಳು, ಆಹಾರವನ್ನು, ಬಲವನ್ನು, ವರ್ಣವನ್ನು ಹಾಗು ಸುಖವನ್ನು ನೀಡುವಂತಹದ್ದಾಗಿದೆ. ಇದನ್ನು ಅರಿತು ಅವರು ಹತ್ಯೆಯನ್ನು ಮಾಡಲಿಲ್ಲ.
15.          ಕೋಮಲ, ವಿಶಾಲಕಾಯ, ಸುಂದರ ಹಾಗು ಯಶಸ್ವಿ ಬ್ರಾಹ್ಮಣರು ಈ ಧರ್ಮಗಳಿಂದ ಯುಕ್ತರಾಗಿ ತಮ್ಮ ಕಾರ್ಯಗಳಲ್ಲಿ ಮಗ್ನರಾಗುತ್ತಿದ್ದರೊ, ಅಲ್ಲಿಯವರೆಗೂ ಪ್ರಜೆಗಳು ಸಹಾ ಸುಖಿಯಾಗಿದ್ದರು.
16-17 ಕಾಲಕ್ರಮೇಣ ರಾಜನ ಸಂಪತ್ತು, ಅಲಂಕೃತ ಸ್ತ್ರೀಯರು, ಉತ್ಕೃಷ್ಟ ಕುದುರೆಗಳು, ಸುಂದರ ಎತ್ತಿನ ಬಂಡಿಗಳು, ರಥಗಳು, ನಿವಾಸ ಸ್ಥಾನಗಳು ಇತ್ಯಾದಿ ಭೋಗಗಳು ಕಂಡು ಅವರಲ್ಲಿ ಪರಿವರ್ತನೆಯಾಯಿತು.
18.          ಆ ಬ್ರಾಹ್ಮಣರು ನಗರ-ಮಂಡಲಿಯಿಂದ ಗೋವು, ನಾರಿಯರನ್ನು ಒಳಗೊಂಡು ವಿಪುಲವಾದ ಪ್ರಾಪಂಚಿಕ ಸಂಪತ್ತಿಗೆ ಲೋಭಪಟ್ಟರು.
19.          ಆಗ ಅವರು ಮಂತ್ರಗಳನ್ನು ರಚನೆಮಾಡಿ ಇಕ್ಷಾಕುವಿನ ಹತ್ತಿರ ಹೋದರು. ನಂತರ ಈ ರೀತಿ ಹೇಳಿದರು- ನೀವು ಬಹು ಸಂಪತ್ತುಳ್ಳವರಾಗಿದ್ದೀರಿ, ಈಗ ಯಜ್ಞ ಮಾಡಿ, ನಿಮ್ಮ ಬಳಿ ವಿಪುಲವಾದ ಸಂಪತ್ತಿದೆ ಯಜ್ಞಮಾಡಿ.
20.          ಆಗ ರಥಪತಿ ರಾಜನು ಬ್ರಾಹ್ಮಣರಿಂದ ವಿವರಿಸಲ್ಪಟ್ಟು, ಅವರ ಸಲಹೆಯಂತೆ ಅಶ್ವಮೇಧ, ಪುರುಷಮೇಧ, ಸಮ್ಮಪಾಸ (ಯಾತ ಯಜ್ಞ), ವಾಜಪೇಯ, ನಿರರ್ಗಲ (ಸರ್ವಮೇಧ) ಈ ಯಜ್ಞಗಳನ್ನು ಮಾಡಿದ ಬ್ರಾಹ್ಮಣರಿಗೆ ಧನವನ್ನು ನೀಡಲಾಯಿತು.
21-22. ಗೋವುಗಳು, ಶಯನಗಳು, ವಸ್ತ್ರ, ಅಲಂಕೃತ ಸ್ತ್ರೀಯರು, ಉತ್ತಮ ಅಶ್ವಗಳು, ಶ್ರೇಷ್ಠ ಎತ್ತುಗಳು, ಕಸೂತಿಯುಳ್ಳ ರಥಗಳು ಹಾಗು ಧನ-ಧಾನ್ಯಗಳನ್ನು ತುಂಬಿ, ಅನೇಕ ರೀತಿಯಿಂದ ಸರಿಯಾಗಿ ಸುಂದರ ಭವನಗಳನ್ನು ಧನದ ರೂಪವಾಗಿ ಪಾತ್ರೆಗಳಲ್ಲಿ ತುಂಬಿ ಬ್ರಾಹ್ಮಣರಿಗೆ ಕೊಟ್ಟರು.
23.          ಅವರು ಅಲ್ಲಿ ಧನವನ್ನು ಪಡೆದು ಸಂಗ್ರಹಿಸಲು ಇಷ್ಟಪಟ್ಟರು. ಈ ರೀತಿ ಇಚ್ಛೆಗೆ ವಶೀಭೂತರಾಗಿ ಆ ಬ್ರಾಹ್ಮಣರ ತೃಷ್ಣೆಯು ಬಹಳವಾಗಿ ಹೆಚ್ಚಿತು. ಅವರು ಮಂತ್ರಗಳನ್ನು ಪುನಃ ರಚಿಸಿ ಇಕ್ಷಾಕುವಿನ ಬಳಿ ಹೋದರು.
24.          ಹೀಗೆ ಹೇಳಿದರು - ಯಾವರೀತಿ ಜಲ, ಪೃಥ್ವಿ, ಅರಣ್ಯ ಹಾಗು ಧನಧಾನ್ಯವಿದೆಯೋ, ಅದೇರೀತಿಯಲ್ಲಿ ಮನುಷ್ಯರಿಗಾಗಿ ಗೋವುಗಳಿವೆ, ಆ ಪ್ರಾಣಿಗಳೆಲ್ಲವೂ ಉಪಭೋಗದ ವಸ್ತುಗಳಾಗಿವೆ. ನಿಮ್ಮ ಬಳಿಯಲ್ಲಿ ಅಪಾರ ಸಂಪತ್ತಿದೆ, ಯಜ್ಞ ಮಾಡಿ, ನಿಮ್ಮ ಬಳಿ ಬಹಳ ಧನವಿದೆ, ಯಜ್ಞ ಮಾಡಿ.
25.          ಈ ರೀತಿ ಬ್ರಾಹ್ಮಣರಿಂದ ಮಿಥ್ಯಾ ಅರಿವು ಮಾಡಿಕೊಂಡ ರಾಜನು ಯಜ್ಞದಲ್ಲಿ ಲಕ್ಷಾಂತರ ಗೋವುಗಳನ್ನು ವಧೆ ಮಾಡಿದನು.
26.          ಯಾವ ಗೋವುಗಳು ಕಾಲಿನಿಂದಾಗಲಿ, ಕೊಂಬಿನಿಂದಾಗಲಿ ಅಥವಾ ಯಾವುದೇ ಅಂಗದಿಂದಾಗಲಿ, ಹಿಂಸಿಸುತ್ತಿರಲಿಲ್ಲವೋ, ಕುರಿಗಳ ಸಮಾನವಾಗಿ ಸಾಧುವಾಗಿತ್ತೋ ಹಾಗು ಕೊಡದ ತುಂಬಾ ಹಾಲು ನೀಡುತ್ತಿತ್ತೋ, ಆ ಮುಗ್ಧ ಹಸುಗಳ ಕೊಂಬುಗಳನ್ನು ಹಿಡಿದು ರಾಜನು ಶಸ್ತ್ರದಿಂದ ಕೊಂದನು.
27.          ಈ ರೀತಿ ಗೋವುಗಳ ಮೇಲೆ ಆಗುತ್ತಿದ್ದ ಶಸ್ತ್ರಪಾತವನ್ನು ಕಂಡು ದೇವತೆಗಳು, ಪ್ರಜೆಗಳು, ಇಂದ್ರ, ಅಸುರ, ರಾಕ್ಷಸರು ಮುಂತಾದವರು ಇದು ಅಧರ್ಮ ವೆಂದು ಕೂಗಿಕೊಂಡರು.
28.          ಮೊದಲು ಕೇವಲ ಮೂರು ರೋಗಗಳಿದ್ದವು - ಇಚ್ಛೆ, ಹಸಿವು ಹಾಗು ವೃದ್ಧಾಪ್ಯ. ಆದರೆ ಪಶುಗಳ ಹತ್ಯೆಯಿಂದ ತೊಂಬತ್ತೆಂಟು ರೋಗಗಳಾದವು.
29.          ಈ ಹಿಂಸಾರೂಪಿ ಅಧರ್ಮವು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪುರೋಹಿತರು ನಿದರ್ೊಷಿ ಗೋವುಗಳನ್ನು ಹತ್ಯೆ ಮಾಡುತ್ತಿದ್ದಾರೆ ಹಾಗು ಧರ್ಮವನ್ನು ಭ್ರಷ್ಟಗೊಳಿಸುತ್ತಿದ್ದಾರೆ.
30.          ಈ ಪ್ರಕಾರದ ನೀಚಕರ್ಮ ಹಳೆಯದಾಗಿದೆ ಮತ್ತು ಜ್ಞಾನಿಗಳಿಂದ ನಿಂದಿಸಲ್ಪಡುತ್ತದೆ. ಜನರು ಈ ಪ್ರಕಾರದ ಪುರೋಹಿತರನ್ನು ಕಂಡಾಗ ನಿಂದಿಸುತ್ತಾರೆ.
31.          ಈ ಪ್ರಕಾರದ ಧರ್ಮ ಚ್ಯುತರಾದ ಮೇಲೆ ಶೂದ್ರರಲ್ಲಿ ಹಾಗು ವೈಶ್ಯರಲ್ಲಿ ಒಡಕುಂಟಾಯಿತು. ಕ್ಷತ್ರಿಯರು ಸಹಾ ವಿಭಿನ್ನ ಭಾಗಗಳಾಗಿ ಹಂಚಿಹೋದರು. ಸ್ತ್ರೀಯು ಸಹಾ ಪತಿಯನ್ನು ಅನಾದರ ಮಾಡತೊಡಗಿದಳು.
32.          ಕ್ಷತ್ರಿಯ, ಬ್ರಾಹ್ಮಣ ಹಾಗು ಬೇರೆ ಗೋತ್ರದಿಂದ ರಕ್ಷಿತರಾದವರು ಮನುಷ್ಯ ಹುಟ್ಟಿನ ಉದ್ದೇಶ ಮುರಿದು ಕಾಮಾಸಕ್ತರಾದರು.
                ಹೀಗೆ ಭಗವಾನರು ನುಡಿದ ನಂತರ ಮಹಾಧನಿ ಬ್ರಾಹ್ಮಣರು ಭಗವಾನರಿಗೆ ಹೀಗೆ ನುಡಿದರು- ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ನಾವೆಲ್ಲಾ ಗೋತಮ ಬುದ್ಧರಿಗೆ ಶರಣು ಹೋಗುತ್ತೇವೆ. ಹಾಗೆಯೇ ಧಮ್ಮ ಹಾಗು ಸಂಘಕ್ಕೂ ಸಹಾ ಶರಣು ಹೋಗುತ್ತೇವೆ. ನಮ್ಮನ್ನು ಜೀವನಪರ್ಯಂತ ಉಪಾಸಕರೆಂದು ಅನುಗ್ರಹಿಸಿ.

ಇಲ್ಲಿಗೆ ಬ್ರಾಹ್ಮಣ ಧಮ್ಮಿಕ ಸುತ್ತ ಮುಗಿಯಿತು.

Dhammachariya sutta in kannada(the importance of good friendship in monks)

6. ಧಮ್ಮಚರಿಯ ಸುತ್ತ
(ಕೆಟ್ಟ ಭಿಕ್ಖುಗಳ ಸಂಗವನ್ನು ತೊರೆದು ಶುದ್ಧ ಭಿಕ್ಖುಗಳ ಸಂಗ ಮಾಡಲಿ)

1-2.        ಧರ್ಮದ ಆಚರಣೆ ಹಾಗು ಬ್ರಹ್ಮಚರ್ಯದ ಪಾಲನೆ - ಇವು ಉತ್ತಮ ಧನವೆಂದು ಪರಿಗಣಿಸಲ್ಪಟ್ಟಿದೆ. ಯಾರಾದರೂ ಗೃಹವನ್ನು ತೊರೆದು ಅನಿಕೇತನನಾಗಿ ಪ್ರವಜರ್ಿತನಾಗುತ್ತಾನೆ. ಆದರೆ ಆತನು ಕಟುಭಾಷಿಯಾಗಿದ್ದರೆ ಮತ್ತು ಮೃಗದ ರೀತಿ ಪರರಿಗೆ ಪೀಡಿಸುವವನಾಗಿದ್ದರೆ, ಅವನ ಜೀವನ ಕೆಟ್ಟದ್ದಾಗಿದ್ದರೆ, ಆತನು ತನ್ನ ಕ್ಲೇಷವನ್ನು ಬೆಳೆಸುತ್ತಾನೆ.
3.            ಯಾವ ಭಿಕ್ಷು ಜಗಳಗಂಟನೋ ಹಾಗು ಮೋಹದಿಂದ ಆವೃತನೋ, ಆತನು ಬುದ್ಧರಿಂದ ಉಪದೇಶಿಸಿದ ಧರ್ಮವನ್ನು ಅರಿಯುವುದಿಲ್ಲ.
4.            ಯಾರು ಅವಿದ್ಯೆಗೆ ವಶಿಭೂತನಾಗಿ, ಸಂಯಮಿಗಳಿಗೆ ಪೀಡಿಸುವನೋ, ಅವನು ಹೋಗುತ್ತಿರುವ ಹಾದಿ ನರಕದ್ದು ಎಂದು ಅವನಿಗೆ ಅರಿವಾಗುವುದಿಲ್ಲ.
5.            ಇಂತಹ ಭಿಕ್ಷು ಮರಣದ ನಂತರ, ನರಕದಲ್ಲಿ ಬೀಳುತ್ತಾನೆ ಹಾಗು ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಅಂಧಕಾರದಿಂದ ಗಾಢ ಅಂಧಕಾರಕ್ಕೆ ಹೋಗುವವನಾಗಿ ಪರಲೋಕದಲ್ಲಿ ದುಃಖವನ್ನು ಅನುಭವಿಸುತ್ತಾನೆ.
6.            ಅಂತಹ ಪಾಪಿಯು ಶುದ್ಧನಾಗಲಾರ. ಹೇಗೆಂದರೆ ಅನೇಕ ವರ್ಷಗಳ ಮಲಕೂಪವೂ ಶುದ್ಧವಾಗದ ಹಾಗೆ.
7.            ಭಿಕ್ಷುಗಳೇ ! ಅಂತಹವನನ್ನು ಅರಿಯಿರಿ. ಈತನು ಕಾಮಭೋಗಗಳಲ್ಲಿ ಆಸಕ್ತನಾಗಿದ್ದಾನೆ, ಕೆಟ್ಟ ವಿಚಾರವುಳ್ಳವನಾಗಿದ್ದಾನೆ. ಕೆಟ್ಟ ಸಂಕಲ್ಪವುಳ್ಳವನಾಗಿದ್ದಾನೆ. ಕೆಟ್ಟ ಆಚರಣೆ ಹಾಗು ಕೆಟ್ಟ ಸಂಗವನ್ನು ಮಾಡುವವನಾಗಿದ್ದಾನೆ.
8.            ಸರ್ವರು ಒಂದಾಗಿ ಆತನನ್ನು ಸಂಘದಿಂದ ಬಹಿಷ್ಕರಿಸಿ, ಕಸದ ಹಾಗೆ ದೂರೀಕರಿಸಿ ಹಾಗು ಮಲದ ರೀತಿ ದೂರ ತಳ್ಳಿಹಾಕಿ.
9.            ಅಂತಹ ತುಚ್ಛ ಭಿಕ್ಷುಗಳನ್ನು ಬೇಗನೆ ತೆಗೆಯಿರಿ, ಅವರು ಶ್ರಮಣರಾಗದಿದ್ದರೂ ಸಹಾ ಶ್ರಮಣರಂತೆ ವತರ್ಿಸು (ನಟಿಸು) ತ್ತಾರೆ. ಯಾರು ಕೆಟ್ಟ ಆಚರಣೆ ಹಾಗು ಕೆಟ್ಟ ಸಂಗತಿಯುಳ್ಳವರಾಗಿದ್ದಾರೋ, ಅವರನ್ನು ತ್ಯಜಿಸಿ.
10.          ಸರ್ವತ್ರರಾಗಿ ಶುದ್ಧರು ಪರಿಶುದ್ಧರ ಸಂಗತಿ ಮಾಡಲಿ, ಆಗ ಮಾತ್ರ ಬುದ್ಧಿವಂತರೂ, ದುಃಖದ ಅಂತ್ಯ ಮಾಡಬಲ್ಲವರಾಗುತ್ತಾರೆ.
ಇಲ್ಲಿಗೆ ಧರ್ಮಚರಿಯ ಸುತ್ತ ಮುಗಿಯಿತು

Friday, 12 September 2014

suchiloma sutta in kannada (where does the greed and hatred arise etc.?)

5. ಸೂಚಿಲೋಮ ಸುತ್ತ
(ತೃಷ್ಣೆಯೇ ಸರ್ವ ವಾಸನೆಗಳ ಮೂಲವಾಗಿದೆ)
                ಹೀಗೆ ನಾನು ಕೇಳಿದ್ದೇನೆ, ಒಮ್ಮೆ ಭಗವಾನರು ಗಯಾದ ಟಂಕಿತ ಮಂಚದಲ್ಲಿ ಸೂಚಿಲೋಮ ಯಕ್ಷನ ಭವನದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ಖರಯಕ್ಷ ಹಾಗು ಸೂಚಿಲೋಮ ಯಕ್ಷರು ಭಗವಾನರ ಸಮೀಪದಲ್ಲೇ ಹೋಗುತ್ತಿದ್ದರು. ಆಗ ಖರಯಕ್ಷನು ಸೂಚಿಲೋಮ ಯಕ್ಷನಿಗೆ ಈ ರೀತಿ ಹೇಳಿದನು- ಇವರು ಶ್ರಮಣರಾಗಿದ್ದಾರೆ.

                ಸೂಚಿಲೋಮನು ಈ ರೀತಿ ಹೇಳಿದನು- ಈತನು ಶ್ರಮಣನಲ್ಲ, ಶ್ರಮಣಕ (ಚಿಕ್ಕ ಶ್ರಮಣ) ನಾಗಿದ್ದಾನೆ. ಇರು ನಾನು ಪತ್ತೆಹಚ್ಚುತ್ತೇನೆ. ಈತನು ಶ್ರಮಣನೇ ಅಥವಾ ಶ್ರಮಣಕನೇ.
                ಆಗ ಸೂಚಿಲೋಮನು ಭಗವಾನರು ಇರುವೆಡೆಗೆ ಬಂದನು. ಆತನು ಭಗವಾನರ ಸಮೀಪ ತನ್ನ ಶರೀರವನ್ನು ತೆಗೆದುಕೊಂಡು ಹೋದನು. ಆಗ ಭಗವಾನರು ತಮ್ಮ ಶರೀರವನ್ನು ಪಕ್ಕಕ್ಕೆ ತೆಗೆದುಕೊಂಡರು. ಆಗ ಸೂಚಿಲೋಮ ಭಗವಾನಿಗೆ ಹೀಗೆ ಹೇಳಿದನು- ಶ್ರಮಣ ನೀನು ಹೆದರುತ್ತಿದ್ದೀಯೆ?
                ಆಯುಷ್ಮಂತನೇ ನಾನು ಹೆದರುತ್ತಿಲ್ಲ, ಆದರೆ ನಿನ್ನ ಸಂಸ್ಪರ್ಶವು ಪಾಪಯುತವಾಗಿದೆ (ಅಸಹ್ಯವಾಗಿದೆ).
                ಶ್ರಮಣ ನಾನು ನಿನ್ನಲ್ಲಿ ಪ್ರಶ್ನೆ ಕೇಳುತ್ತೇನೆ, ನೀನು ಉತ್ತರ ಹೇಳದಿದ್ದರೆ ನಿನ್ನ ಚಿತ್ತವನ್ನು ವಿಕ್ಷಿಪ್ತವನ್ನಾಗಿ ಮಾಡುವೆನು. ನಿನ್ನ ಹೃದಯವನ್ನು ಹರಿದು ಹಾಕುವೆನು. ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವೆನು.
                ಆಯುಷ್ಮಂತನೇ ನಾನು ದೇವತಾ, ಮಾರ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣ ಸಹಿತ, ರಾಜ-ಮನುಷ್ಯರು ಇಡೀ ಲೋಕಗಳಲ್ಲಿ ನನ್ನ ಚಿತ್ತವವನ್ನು ವಿಕ್ಷಿಪ್ತವಾಗುವಂತಹ, ಹೃದಯವನ್ನು ಸೀಳುವಂತಹ ಅಥವಾ ಕಾಲುಗಳನ್ನು ಹಿಡಿದು ಗಂಗಾತೀರಕ್ಕೆ ಎಸೆದುಬಿಡುವಂತಹ ಇಂಥಹ ಯಾರನ್ನೂ ಕಾಣುತ್ತಿಲ್ಲ, ಅಂತಹವರಾರು ಇಲ್ಲ. ಆದರೂ ನೀನು ಏನನ್ನು ಕೇಳಬಯಸುವೆಯೋ ಅದನ್ನು ಕೇಳು.
                ಆಗ ಸೂಚಿಲೋಮ ಈ ಗಾಥೆಗಳಿಂದ ಪ್ರಶ್ನಿಸಿದನು -
1.            ರಾಗ ಮತ್ತು ದ್ವೇಷವು ಎಲ್ಲಿಂದ ಉತ್ಪನ್ನವಾಗುತ್ತದೆ? ಪುಣ್ಯಕರ್ಮಗಳಲ್ಲಿ ಮನವನ್ನು ಹರಿಸದಿರುವುದು (ಅರತಿ), ಪಾಪಕರ್ಮಗಳಲ್ಲಿ ಮನವನ್ನು ಹರಿಸುವುದು (ರತಿ) ಹಾಗು ಭಯವು ಎಲ್ಲಿಂದ ಉತ್ಪನ್ನವಾಗುತ್ತದೆ? ಮನದಲ್ಲಿ ಕೆಟ್ಟ ವಿತರ್ಕ ಎಲ್ಲಿಂದ ಉತ್ಪನ್ನವಾಗಿ ತುಂಟ ಮಕ್ಕಳಿಂದಾಗಿ ಕಾಗೆ ಹಾರುವಂತೆ ಚಿಂತೆಯುಂಟುಮಾಡುತ್ತದೆ.
2.            ರಾಗ ಮತ್ತು ದ್ವೇಷವು ಇಲ್ಲಿಂದಲೇ (ಅಂತರಂಗ) ಉತ್ಪನ್ನವಾಗುತ್ತದೆ. ಹಾಗು ಪುಣ್ಯಕರ್ಮಗಳಲ್ಲಿ ಮನವನ್ನು ಹರಿಸದಿರುವುದು ಹಾಗು ಪಾಪಕರ್ಮಗಳಲ್ಲಿ ಮನವನ್ನು ಹರಿಸುವುದು. ಮತ್ತು ಭಯವು ಸಹಾ ಇಲ್ಲಿಂದಲೇ ಉತ್ಪನ್ನವಾಗುತ್ತದೆ. ಮನದಲ್ಲಿ ಕೆಟ್ಟ ವಿತರ್ಕವೂ ಸಹಾ ಇಲ್ಲಿಂದಲೇ ಉತ್ಪನ್ನವಾಗಿ ತುಂಟ ಮಕ್ಕಳಿಂದಾಗಿ ಕಾಗೆ ಹಾರುವಂತೆ ಚಿಂತೆಯುಂಟುಮಾಡುತ್ತದೆ.
3.            ಹೇಗೆ ಆಲದ ಮರದಿಂದ ಬಿಳಿಲುಗಳು ಹೊರಬರುವುವು, ಹಾಗೆಯೇ ಅವು ಸ್ನೇಹ (ರಾಗ) ಮತ್ತು ಆತ್ಮದೃಷ್ಟಿಯಿಂದ ಉತ್ಪನ್ನವಾಗುತ್ತವೆ. ಅರಣ್ಯದಲ್ಲಿ ಹರಡಿರುವ ಮಾಲುವಾ ಬಳ್ಳಿಯಂತೆ ವಿಭಿನ್ನ ಪ್ರಕಾರದಿಂದ ಕಾಮಗಳಲ್ಲಿ ಆಸಕ್ತಿ ತಾಳುತ್ತಾರೆ.
4.            ಹೇ ಯಕ್ಷ, ಕೇಳು, ಯಾರು ಉತ್ಪತ್ತಿ ಸ್ಥಾನವನ್ನು ಅರಿಯುವರೋ, ಅವರು ಅದರ ಅಂತ್ಯ ಮಾಡುತ್ತಾರೆ. ಅವರು ಹಿಂದೆ ದಾಟದ ದುಷ್ಕರವಾದ ಪ್ರವಾಹವನ್ನು ದಾಟುತ್ತಾರೆ. ಅವರಿಗೆ ಪುನರ್ಜನ್ಮ ಆಗುವುದಿಲ್ಲ.

ಇಲ್ಲಿಗೆ ಸೂಚಿಲೋಮ ಸುತ್ತ ಮುಗಿಯಿತು.

Maha mangala sutta in kannada ( which are the highest Blessing to humans)

4. ಮಹಾಮಂಗಳ ಸುತ್ತ
(ಮೂವತ್ತೆಂಟು ರೀತಿ ಶುಭ ಕರ್ಮಗಳು)
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಒಬ್ಬ ದೇವತೆಯು ರಾತ್ರಿ ಕಳೆಯುತ್ತಿದ್ದಂತೆ ತನ್ನ ದಿವ್ಯವಾದ ತೇಜಸ್ಸಿನಿಂದ ಸಮಸ್ತ ಜೇತವನವನ್ನು ಭವ್ಯವಾಗಿ ಬೆಳಗಿಸುತ್ತಾ ಭಗವಾನರ ಬಳಿ ಬಂದು ವಂದಿಸಿ ಒಂದುಕಡೆ ನಿಂತು ಭಗವಾನರೊಂದಿಗೆ ಗಾಥೆಗಳಲ್ಲಿ ಈ ರೀತಿ ಹೇಳಿದನು.

1.            ಕಲ್ಯಾಣದ ಆಕಾಂಕ್ಷೆಯಿಂದ ಬಹು ದೇವತೆಗಳೂ ಹಾಗು ಮನುಷ್ಯರು ಮಂಗಳಗಳ ಬಗ್ಗೆ ಚಿಂತಿಸಿದ್ದಾರೆ. ತಾವು ಈಗ ನಮಗೆ ಮಂಗಳಗಳು ಯಾವುವು ಎಂದು ತಿಳಿಸಿ.
2.            ಭಗವಾನ್ ಬುದ್ಧರು - ಮೂರ್ಖರ ಸೇವನೆಯನ್ನು ಮಾಡದಿರುವುದು, ಜ್ಞಾನಿಗಳ ಸೇವನೆ ಮಾಡುವುದು, ಪೂಜ್ಯರಿಗೆ ಪೂಜಿಸುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
3.            ಅನುಕೂಲ ಸ್ಥಳಗಳಲ್ಲಿ ವಾಸಿಸುವುದು, ಹಿಂದಿನ ಜನ್ಮದಲ್ಲಿ ಗಳಿಸಿದ್ದ ಪುಣ್ಯಫಲವಿರುವಿಕೆ ಹಾಗು ತನ್ನನ್ನು ಸನ್ಮಾರ್ಗದಲ್ಲಿ ನಡೆಸುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
4.            ಬಹುಶ್ರುತ (ಆಳವಾದ ಜ್ಞಾನ) ನಾಗುವುದು, ಕಲೆಗಳನ್ನು ಅರಿತಿರುವುದು, ಶಿಷ್ಟನಾಗಿರುವುದು, ಸುಶಿಕ್ಷಿತನಾಗಿರುವುದು ಹಾಗು ಸುಭಾಷಿತನಾಗಿರುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
5.            ಮಾತಾಪಿತರ ಸೇವೆ ಮಾಡುವುದು, ಪತ್ನಿ-ಪುತ್ರರ ಪಾಲನೆ ಮಾಡುವುದು ಹಾಗು ಅನುಕೂಲವಾದ ವೃತ್ತಿಯನ್ನು ಹೊಂದಿರುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
6.            ದಾನ ಮಾಡುವಿಕೆ, ಧರ್ಮವನ್ನು ಅನುಸರಿಸುವಿಕೆ, ಬಂಧು-ಬಾಂಧವರಿಗೆ ಸಹಾಯ ಮಾಡುವಿಕೆ ಹಾಗು ದೋಷರಹಿತ ಕಾರ್ಯವನ್ನು ಮಾಡುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
7.            ಆನಂದವನ್ನು ಮೀರುವಿಕೆ, ಪಾಪದಿಂದ ವಿರತನಾಗುವಿಕೆ, ಮದ್ಯಪಾನ ಮಾಡದಿರುವಿಕೆ, ಧಮರ್ಾಚರಣೆಯಲ್ಲಿ ಎಚ್ಚರಿಕೆಯಿಂದಿರುವಿಕೆ. ಇವು ಮಂಗಳಗಳಲ್ಲಿ ಉತ್ತಮವಾದುದು.
8.            ಗೌರವಿಸುವಿಕೆ, ವಿನಮ್ರನಾಗುವಿಕೆ, ಸಂತುಷ್ಠಿಯಿಂದಿರುವಿಕೆ, ಕೃತಜ್ಞತೆ ಹೊಂದಿರುವಿಕೆ ಹಾಗು ಉಚಿತ ಕಾಲದಲ್ಲಿ ಧರ್ಮಶ್ರವಣ ಮಾಡುವಿಕೆ. ಇವು ಮಂಗಳಗಳಲ್ಲಿ ಉತ್ತಮವಾದುದು.
9.            ಸಹನಾಯುತ ಕ್ಷಮಾಶೀಲನಾಗಿರುವಿಕೆ, ಸಮ್ಯಕ್ ವಾಚದಿಂದ ಕೂಡಿರುವಿಕೆ, ಸಮಣರ ದಶರ್ಿಸುವಿಕೆ, ಉಚಿತ ಕಾಲಕ್ಕೆ ಧಾಮರ್ಿಕ ಚಚರ್ೆಯಲ್ಲಿರುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
10.          ತಪಸ್ಸನ್ನಾಚರಿಸುವುದು, ಬ್ರಹ್ಮಚರ್ಯೆಯಿಂದಿರುವುದು, ಆರ್ಯ ಸತ್ಯಗಳನ್ನು ದಶರ್ಿಸುವುದು ಹಾಗು ನಿಬ್ಬಾಣವನ್ನು ಸಾಕ್ಷಾತ್ಕರಿಸುವುದು. ಇವು ಮಂಗಳಗಳಲ್ಲಿ ಅತ್ಯುತ್ತಮವಾದುದು.
11.          ಲೋಕ ಧಮ್ಮಗಳು* ಸ್ಪಶರ್ಿಸುವಾಗ ಯಾರ ಚಿತ್ತವು ಸ್ವಲ್ಪವೂ ಕಂಪನಮಯವಾಗುವುದಿಲ್ಲವೊ, ಶೋಕರಹಿತನಾಗಿ ಕಶ್ಮಲರಹಿತನಾಗಿ (ಪರಿಶುದ್ಧ) ಕ್ಷೇಮಯುತವಾಗಿ (ಶಾಂತವಾಗಿ) ಇರುವುದೋ, ಇದು ಮಂಗಳಗಳಲ್ಲಿ ಅತ್ಯುತ್ತಮವಾದುದು.
12.          ಈ ಪ್ರಕಾರದಿಂದ ಕಾರ್ಯಶೀಲರಾಗುವವರೂ ಸರ್ವತ್ರವಾಗಿ ಅಪರಾಜಿತರಾಗಿರುವರು, ಸರ್ವವಿಧದಲ್ಲಿ ಕಲ್ಯಾಣವನ್ನು ಹೊಂದುವವರು ಇದು ಅವರಿಗೆ ಅತ್ಯುತ್ತಮ ಮಂಗಳವಾಗಿದೆ.

ಇಲ್ಲಿಗೆ ಮಹಾ ಮಂಗಳ ಸುತ್ತ ಮುಗಿಯಿತು.

hirisutta in kannada (who is your friend )

3. ಹಿರಿ ಸುತ್ತ
[ಮಿತ್ರನ ಪರಿಚಯ (ಸ್ವರೂಪ)]
1.            ನಿರ್ಲಜ್ಜ ವ್ಯವಹಾರ ಮಾಡುವವನು, ಅಂತರಂಗದಲ್ಲಿ ಅಸಹ್ಯಿಸುವವನು, ಸಾಮಥ್ರ್ಯದ ಮಾತು ಬಂದಾಗ  ಇಲ್ಲವೆಂದು ಹೇಳುವವನೂ, ತನ್ನನ್ನು ಮಿತ್ರನೆಂದು ಹೇಳತೊಡಗಿದರೆ ಅವನ ವಿಷಯದಲ್ಲಿ ಇವನು ನನ್ನ ಮಿತ್ರನಲ್ಲ ಎಂದು ಅರಿಯಬೇಕು.

2.            ಯಾರು ಬೇಕಾಗಿ ಮಿತ್ರರಲ್ಲಿ ಸಿಹಿಯಾದ ಮಾತುಗಳನ್ನು ಆಡುವನೋ, ಏನು ಮಾಡದೆಯೇ ಹೇಳುತ್ತಿರುತ್ತಾನೋ, ಆತನನ್ನು ಬುದ್ಧಿವಂತರು ನಿಂದಿಸುತ್ತಾರೆ.
3.            ಯಾರು ಸದಾ ಮಿತ್ರನೆಂದೇ ತೋರಿಸಿಕೊಳ್ಳುತ್ತಿರುವನೋ, ಜೊತೆಯಲ್ಲಿ ವೈಮನಸ್ಯಭಾವದಿಂದಿರುವನೋ ಹಾಗು ದೋಷಗಳನ್ನು ಹುಡುಕುತ್ತಾ ಇರುವನೋ ಅವನು ಮಿತ್ರನಲ್ಲ. ಯಾರು ಮಾತೆಯಂತೆ ಮಡಿಲಲ್ಲಿ ಮಗುವಿಗೆ ಹೇಗೆ ವಾತ್ಸಲ್ಯದಿಂದ, ಮಮತೆಯಿಂದ ವತರ್ಿಸುವಳೋ ಹಾಗೆ ಇರುವನೋ ಹಾಗು ಪರರಿಂದ ಬಿರುಕುಗೊಳ್ಳದ ಮೈತ್ರಿಯಿಂದಿರುವನೋ ಆತನೇ ಮಿತ್ರ ಶ್ರೇಷ್ಠನಾಗುವನು.
4.            ಯಾವ ಮನುಷ್ಯ ಪವಿತ್ರ ಕರ್ತವ್ಯಗಳನ್ನು ನಿರ್ವಹಿಸುವನೋ, ಅವನು ಪ್ರಸನ್ನತೆ ಹಾಗು ಪ್ರಶಂಸೆಯನ್ನು ಪಡೆಯುತ್ತಾನೆ. ಆತನು ಫಲದ ಪ್ರಾಪ್ತಿಗೆ ಪ್ರಯತ್ನಶೀಲನಾಗುತ್ತಾನೆ.
5.            ಏಕಾಂತತೆಯ ಸುರಸವನ್ನು ಹಾಗು ಉಪಶಮ (ಶಾಂತತೆಯ) ಗಂಭೀರ ರಸವನ್ನು ಸೇವಿಸಿದ ಪುರುಷನು ನಿರ್ಭಯನಾಗುತ್ತಾನೆ. ಹಾಗು ಧಮ್ಮದ ಆನಂದರಸವನ್ನು ಆಸ್ವಾದಿಸಿದ ಆತನು ನಿಷ್ಪಾಪನಾಗುತ್ತಾನೆ.

ಇಲ್ಲಿಗೆ ಹಿರಿ ಸುತ್ತ ಮುಗಿಯಿತು.

Aamagandha sutta in kannada (is non-veg food pollute to the mind or person ?)

2. ಆಮಗಂಧ ಸುತ್ತ
                (ಈ ಸುತ್ತದಲ್ಲಿ ಮತ್ಸ್ಯ ಮಾಂಸವನ್ನು ತಿನ್ನುವವನು ಕಲುಷಿತನಾಗುವುದಿಲ್ಲ. ಆದರೆ ಚಿತ್ತಕ್ಲೇಶ ಹಾಗು ಪಾಪಕಮರ್ಿಯು ಕಲುಶಿತ (ಆಮಗಂಧ) ನೆಂದು ಹೇಳಿದ್ದಾರೆ. ಈ ಸುತ್ತವು ಗೋತಮ ಬುದ್ಧರವರಿಗಿಂತ ಹಿಂದಿನ ಬುದ್ಧರಾದ ಕಶ್ಯಪ ಬುದ್ಧ ಭಗವಾನರು ತಿಸ್ಸ ಬ್ರಾಹ್ಮಣನಿಗೆ ಹೇಳಿದ ಬೋಧನೆಯಾಗಿದೆ.)

1.            ತಿಸ್ಸ ಬ್ರಾಹ್ಮಣ - ಧರ್ಮಪೂರ್ವಕವಾಗಿ ಪ್ರಾಪ್ತಿಯಾದ ಸ್ಹಾವಾ, ಸಜ್ಜೆ, ಕಳ್ಳೆ, ಪಲ್ಯ, ಸೊಪ್ಪು, ಕಂದಮೂಲ, ಲತಾಫಲಗಳನ್ನು ತಿನ್ನುವ ಸತ್ಪುರುಷನು ತನ್ನ ಇಚ್ಛೆಗೆ ಅನುಸಾರವಾಗಿ ಅಸತ್ಯ ಹೇಳಲಾರನು.
2.            ಹೇ ಕಶ್ಯಪರೇ, ಆದರೆ ಯಾರು ಪರರಿಂದ ಚೆನ್ನಾಗಿ ಬೇಯಿಸಿ ಅಡಿಗೆ ಮಾಡಿದ ಅನ್ನವನ್ನು ತಿನ್ನುವನೋ ಆತನು ಆಮಗಂಧ (ಕಲುಷಿತ) ಸೇವಿಸುತ್ತಾನೆ.
3.            ಹೇ ವಸುಬಂಧು! ಕಲುಷಿತರಲ್ಲವೆಂದು ತಾವು ಹೇಳುತ್ತಿರುವಿರಿ. ಆದರೆ ತಾವು ಪಕ್ಷಿಗಳ ಮಾಂಸ ಸಮೇತ ಚೆನ್ನಾಗಿ ಬೇಯಿಸಿ ಅಡುಗೆ ಮಾಡಿದ ಅನ್ನವನ್ನು ತಿನ್ನುತ್ತಿರುವಿರಿ. ಹೇ ಕಾಶ್ಯಪರೇ, ತಮ್ಮ ರೀತಿಯಲ್ಲಿ ಆಮಗಂಧ (ಕಲುಷಿತ) ಹೇಗಿರುತ್ತಾನೆ.
4.            ಕಶ್ಯಪ ಬುದ್ಧರು - ಜೀವಹಿಂಸೆ, ವಧೆ, ಬಂಧನ ಮಾಡುವವ, ಕಳ್ಳ, ಅಸತ್ಯ ಹೇಳುವವ, ಮೋಸಗಾರ, ಠಕ್ಕ, ನಿರರ್ಥಕ ಗ್ರಂಥಗಳನ್ನು ಅಧ್ಯಯನ ಮಾಡುವವ ಹಾಗು ಪರಸ್ತ್ರೀಯನ್ನು ಸೇವಿಸುವವ ಕಲುಷಿತನಾಗಿರುತ್ತಾನೆಯೇ ಹೊರತು, ಮಾಂಸ ಸೇವಿಸುವವನಲ್ಲ.
5.            ಯಾವ ಜನರು ಕಾಮಭೋಗಗಳಲ್ಲಿ ಸಂಯಮದಿಂದಿರುವುದಿಲ್ಲವೊ, ಸ್ವಾದಿಷ್ಟ ರಸಗಳಲ್ಲಿ ಲಿಪ್ತರಾಗಿರುವರೊ, ನಾನಾ ಪ್ರಕಾರದ ಪಾಪಕರ್ಮಗಳಲ್ಲಿ ಇರುವರೋ, ವಿಷಯ ಹಾಗೂ ವಕ್ರ ನಾಸ್ತಿಕ ದೃಷ್ಟಿಯುಳ್ಳವರೋ ಅವರು ಕಲುಷಿತರೇ ಹೊರತು, ಮಾಂಸದ ಭೋಜನ ತಿನ್ನುವವರಲ್ಲ.
6.            ಯಾರು ಕಠೋರರೋ, ದಾರುಣರೋ, ಚಾಡಿ ಹೇಳುವವರೋ, ಮಿತ್ರದ್ರೋಹಿಗಳೋ, ನಿರ್ದಯರೋ, ಅತಿ ಅಹಂಕಾರಿಗಳೋ, ದಾನ ನೀಡದವರೋ, ಜಿಪುಣರೋ, ಅವರು ಕಲುಷಿತರು ಹೊರತು, ಮಾಂಸದ ಭೋಜನ ತಿನ್ನುವವರಲ್ಲ.
7.            ಕ್ರೋಧ, ಮದ, ಜಡತೆ, ವಿರೋಧ, ಮಾಯಾ, ಈಷ್ಯರ್ೆ, ಸ್ವಪ್ರಶಂಸೆ, ಅತಿ ಅಹಂಕಾರಿ, ಕೆಟ್ಟಸಂಗ ಮಾಡುವವ ಕಲುಷಿತನಾಗುತ್ತಾನೆ ಹೊರತು, ಮಾಂಸ ಭೋಜನ ತಿನ್ನುವವನಲ್ಲ.
8.            ಯಾವ ಜನರು ಜೀವಿಗಳ ಪ್ರತಿಯಾಗಿ ಅಸಂಯಮಿಗಳೊ, ಪರರ ವಸ್ತುಗಳನ್ನು ತೆಗೆದುಕೊಂಡು ತೊಂದರೆ ಉಂಟುಮಾಡುವರೊ, ದುರಾಚಾರಿಗಳೋ, ಲೋಭಿ, ಕಠೋರರೋ ಹಾಗು ಆದರಹೀನರೋ ಅವರು ಕಲುಷಿತರಾಗುವರೇ ಹೊರತು, ಮಾಂಸ ಭೋಜನ ತಿನ್ನುವವರಲ್ಲ.
9.            ಯಾರು ಪಾಪಿಯೋ, ಋಣವನ್ನು ತೀರಿಸದವನೋ, ಮೋಸ ಮಾಡುವವನೋ, ಡೋಂಗಿಯೋ, ನರಾಧಮನೋ, ಇಲ್ಲಿ ಪಾಪಕರ್ಮವನ್ನು ಮಾಡುತ್ತಾನೋ, ಅವನು ಕಲುಷಿತನೇ ಹೊರತು, ಮಾಂಸ ಭೋಜನ ತಿನ್ನುವವನಲ್ಲ.
10.          ಯಾವ ಜನರು ಇದರಲ್ಲಿ ಲೋಭಿಗಳಾಗಿ ವಿರೋಧಭಾವ ಹಾಗು ಜೀವಹಿಂಸೆಯಲ್ಲಿ ತಲ್ಲೀನರೋ, ಅವರು ಮೃತ್ಯು ಹೊಂದಿ ಅಂಧಕಾರದಲ್ಲಿ ಹೋಗುವರು. ಅವರು ತಲೆಕೆಳಕಾಗಿ ನರಕದಲ್ಲಿ ಬೀಳುವರು. ಅವರು ಕಲುಷಿತರೇ ಹೊರತು, ಮಾಂಸ ಭೋಜನ ತಿನ್ನುವವರಲ್ಲ.
11.          ಮತ್ಸ್ಯ ಮಾಂಸ ತಿನ್ನದೆ ಇರುವುದರಿಂದಾಗಲಿ, ನಗ್ನವಾಗಿರುವುದರಿಂದಾಗಲಿ, ಉಪವಾಸ ಇರುವುದರಿಂದಾಗಲಿ, ತಲೆಯನ್ನು ತಿರುಗಿಸುವುದರಿಂದಾಗಲಿ, ಜಟೆಯನ್ನು ಬಿಡುವುದರಿಂದಾಗಲಿ, ಬೂದಿಯನ್ನು ಬಳಿದುಕೊಂಡಿರುವುದ ರಿಂದಾಗಲಿ, ಮೃಗಗಳ ಚರ್ಮ ಧರಿಸಿರುವುದರಿಂದಾಗಲಿ, ಅಗ್ನಿಹವನ ಮಾಡುವುದರಿಂದಾಗಲಿ, ಅಮರತ್ವದ ಅಪೇಕ್ಷೆಯಿಂದ ನಾನಾ ದೇಹದಂಡನೆ ಮಾಡುವುದರಿಂದಾಗಲಿ, ಮಂತ್ರವನ್ನು ಜಪಿಸುವುದರಿಂದಾಗಾಲಿ, ಹವನ ಮಾಡುವುದರಿಂದಾಗಲಿ, ಯಜ್ಞವನ್ನು ಆಚರಿಸುವುದರಿಂದಾಗಲಿ ಹಾಗು ಋತುಗಳ ಉಪಸೇವನೆ ಮಾಡುವುದು. ಈ ಕಾರ್ಯಗಳನ್ನು ಮಾಡುವವನು ಶುದ್ಧನಾಗುವುದಿಲ್ಲ. ಅಂತಹ ಸಂಶಯಯುಕ್ತ ಪುರುಷ ಶುದ್ಧನು ಹೇಗೆತಾನೆ ಆಗುತ್ತಾನೆ?
12.          ಯಾರು ಸರ್ವ ಇಂದ್ರಿಯಗಳಲ್ಲಿ ಸಂಯಮಿಯೋ, ಇಂದ್ರಿಯಗಳನ್ನು ಬಹಳ ರೀತಿ ಅರಿತು ಸಂಚರಿಸುವನೋ, ಧಮ್ಮದಲ್ಲಿ ಸ್ಥಿರನೋ, ಶೀಲ ಹಾಗು ಮೃದುತೆಯಲ್ಲಿ ರತನೊ, ಸಾಂಸಾರಿಕ ಆಸಕ್ತಿಯನ್ನು ದಾಟಿದವನೋ, ಯಾರ ಸರ್ವ ದುಃಖವು ಅಂತ್ಯವಾಗಿರುವುದೋ, ಅಂತಹ ಧೀರ ವ್ಯಕ್ತಿಯು ನೋಡಿ-ಕೇಳುವ ಮಾತುಗಳಲ್ಲಿ ಲಿಪ್ತನಾಗುವುದಿಲ್ಲ.
13.          ಈ ಮಾತನ್ನು ಭಗವಾನರು ಮತ್ತೆ ಮತ್ತೆ ಹೇಳಿದರು. ವೇದ ಪಾರಂಗತ ಬ್ರಾಹ್ಮಣನು ಇದನ್ನು ಅರಿತನು. ತೃಷ್ಣಾರಹಿತರಾಗಿ, ಅನಾಸಕ್ತ ಹಾಗು ಅನುಸರಣೆ ಮಾಡುವುದರಲ್ಲಿ ಪಳಗಿರುವ ಮುನಿಯು ಸುಂದರ ಗಾಥೆಗಳಲ್ಲಿ ನಿರಆಮಗಂಧವನ್ನು (ಪರಿಶುದ್ಧತೆಯನ್ನು) ಪ್ರಕಟಪಡಿಸಿದರು.
14.          ಸರ್ವ ದುಃಖ ಪರಿಹಾರಕರಾದ ಬುದ್ಧ ಭಗವಾನರ ಪರಿಶುದ್ಧ ಸುಭಾಷಿತವನ್ನು ಕೇಳಿ ತಿಸ್ಸನು ವಿನಮ್ರ ಭಾವದಿಂದ ತಥಾಗತರಿಗೆ ವಂದಿಸಿ, ಪ್ರವಜರ್ಿತನಾಗಲು ನಿರ್ಧರಿಸಿದನು.

ಇಲ್ಲಿಗೆ ಆಮಗಂಧ ಸುತ್ತ ಮುಗಿಯಿತು.