Friday 12 September 2014

Aamagandha sutta in kannada (is non-veg food pollute to the mind or person ?)

2. ಆಮಗಂಧ ಸುತ್ತ
                (ಈ ಸುತ್ತದಲ್ಲಿ ಮತ್ಸ್ಯ ಮಾಂಸವನ್ನು ತಿನ್ನುವವನು ಕಲುಷಿತನಾಗುವುದಿಲ್ಲ. ಆದರೆ ಚಿತ್ತಕ್ಲೇಶ ಹಾಗು ಪಾಪಕಮರ್ಿಯು ಕಲುಶಿತ (ಆಮಗಂಧ) ನೆಂದು ಹೇಳಿದ್ದಾರೆ. ಈ ಸುತ್ತವು ಗೋತಮ ಬುದ್ಧರವರಿಗಿಂತ ಹಿಂದಿನ ಬುದ್ಧರಾದ ಕಶ್ಯಪ ಬುದ್ಧ ಭಗವಾನರು ತಿಸ್ಸ ಬ್ರಾಹ್ಮಣನಿಗೆ ಹೇಳಿದ ಬೋಧನೆಯಾಗಿದೆ.)

1.            ತಿಸ್ಸ ಬ್ರಾಹ್ಮಣ - ಧರ್ಮಪೂರ್ವಕವಾಗಿ ಪ್ರಾಪ್ತಿಯಾದ ಸ್ಹಾವಾ, ಸಜ್ಜೆ, ಕಳ್ಳೆ, ಪಲ್ಯ, ಸೊಪ್ಪು, ಕಂದಮೂಲ, ಲತಾಫಲಗಳನ್ನು ತಿನ್ನುವ ಸತ್ಪುರುಷನು ತನ್ನ ಇಚ್ಛೆಗೆ ಅನುಸಾರವಾಗಿ ಅಸತ್ಯ ಹೇಳಲಾರನು.
2.            ಹೇ ಕಶ್ಯಪರೇ, ಆದರೆ ಯಾರು ಪರರಿಂದ ಚೆನ್ನಾಗಿ ಬೇಯಿಸಿ ಅಡಿಗೆ ಮಾಡಿದ ಅನ್ನವನ್ನು ತಿನ್ನುವನೋ ಆತನು ಆಮಗಂಧ (ಕಲುಷಿತ) ಸೇವಿಸುತ್ತಾನೆ.
3.            ಹೇ ವಸುಬಂಧು! ಕಲುಷಿತರಲ್ಲವೆಂದು ತಾವು ಹೇಳುತ್ತಿರುವಿರಿ. ಆದರೆ ತಾವು ಪಕ್ಷಿಗಳ ಮಾಂಸ ಸಮೇತ ಚೆನ್ನಾಗಿ ಬೇಯಿಸಿ ಅಡುಗೆ ಮಾಡಿದ ಅನ್ನವನ್ನು ತಿನ್ನುತ್ತಿರುವಿರಿ. ಹೇ ಕಾಶ್ಯಪರೇ, ತಮ್ಮ ರೀತಿಯಲ್ಲಿ ಆಮಗಂಧ (ಕಲುಷಿತ) ಹೇಗಿರುತ್ತಾನೆ.
4.            ಕಶ್ಯಪ ಬುದ್ಧರು - ಜೀವಹಿಂಸೆ, ವಧೆ, ಬಂಧನ ಮಾಡುವವ, ಕಳ್ಳ, ಅಸತ್ಯ ಹೇಳುವವ, ಮೋಸಗಾರ, ಠಕ್ಕ, ನಿರರ್ಥಕ ಗ್ರಂಥಗಳನ್ನು ಅಧ್ಯಯನ ಮಾಡುವವ ಹಾಗು ಪರಸ್ತ್ರೀಯನ್ನು ಸೇವಿಸುವವ ಕಲುಷಿತನಾಗಿರುತ್ತಾನೆಯೇ ಹೊರತು, ಮಾಂಸ ಸೇವಿಸುವವನಲ್ಲ.
5.            ಯಾವ ಜನರು ಕಾಮಭೋಗಗಳಲ್ಲಿ ಸಂಯಮದಿಂದಿರುವುದಿಲ್ಲವೊ, ಸ್ವಾದಿಷ್ಟ ರಸಗಳಲ್ಲಿ ಲಿಪ್ತರಾಗಿರುವರೊ, ನಾನಾ ಪ್ರಕಾರದ ಪಾಪಕರ್ಮಗಳಲ್ಲಿ ಇರುವರೋ, ವಿಷಯ ಹಾಗೂ ವಕ್ರ ನಾಸ್ತಿಕ ದೃಷ್ಟಿಯುಳ್ಳವರೋ ಅವರು ಕಲುಷಿತರೇ ಹೊರತು, ಮಾಂಸದ ಭೋಜನ ತಿನ್ನುವವರಲ್ಲ.
6.            ಯಾರು ಕಠೋರರೋ, ದಾರುಣರೋ, ಚಾಡಿ ಹೇಳುವವರೋ, ಮಿತ್ರದ್ರೋಹಿಗಳೋ, ನಿರ್ದಯರೋ, ಅತಿ ಅಹಂಕಾರಿಗಳೋ, ದಾನ ನೀಡದವರೋ, ಜಿಪುಣರೋ, ಅವರು ಕಲುಷಿತರು ಹೊರತು, ಮಾಂಸದ ಭೋಜನ ತಿನ್ನುವವರಲ್ಲ.
7.            ಕ್ರೋಧ, ಮದ, ಜಡತೆ, ವಿರೋಧ, ಮಾಯಾ, ಈಷ್ಯರ್ೆ, ಸ್ವಪ್ರಶಂಸೆ, ಅತಿ ಅಹಂಕಾರಿ, ಕೆಟ್ಟಸಂಗ ಮಾಡುವವ ಕಲುಷಿತನಾಗುತ್ತಾನೆ ಹೊರತು, ಮಾಂಸ ಭೋಜನ ತಿನ್ನುವವನಲ್ಲ.
8.            ಯಾವ ಜನರು ಜೀವಿಗಳ ಪ್ರತಿಯಾಗಿ ಅಸಂಯಮಿಗಳೊ, ಪರರ ವಸ್ತುಗಳನ್ನು ತೆಗೆದುಕೊಂಡು ತೊಂದರೆ ಉಂಟುಮಾಡುವರೊ, ದುರಾಚಾರಿಗಳೋ, ಲೋಭಿ, ಕಠೋರರೋ ಹಾಗು ಆದರಹೀನರೋ ಅವರು ಕಲುಷಿತರಾಗುವರೇ ಹೊರತು, ಮಾಂಸ ಭೋಜನ ತಿನ್ನುವವರಲ್ಲ.
9.            ಯಾರು ಪಾಪಿಯೋ, ಋಣವನ್ನು ತೀರಿಸದವನೋ, ಮೋಸ ಮಾಡುವವನೋ, ಡೋಂಗಿಯೋ, ನರಾಧಮನೋ, ಇಲ್ಲಿ ಪಾಪಕರ್ಮವನ್ನು ಮಾಡುತ್ತಾನೋ, ಅವನು ಕಲುಷಿತನೇ ಹೊರತು, ಮಾಂಸ ಭೋಜನ ತಿನ್ನುವವನಲ್ಲ.
10.          ಯಾವ ಜನರು ಇದರಲ್ಲಿ ಲೋಭಿಗಳಾಗಿ ವಿರೋಧಭಾವ ಹಾಗು ಜೀವಹಿಂಸೆಯಲ್ಲಿ ತಲ್ಲೀನರೋ, ಅವರು ಮೃತ್ಯು ಹೊಂದಿ ಅಂಧಕಾರದಲ್ಲಿ ಹೋಗುವರು. ಅವರು ತಲೆಕೆಳಕಾಗಿ ನರಕದಲ್ಲಿ ಬೀಳುವರು. ಅವರು ಕಲುಷಿತರೇ ಹೊರತು, ಮಾಂಸ ಭೋಜನ ತಿನ್ನುವವರಲ್ಲ.
11.          ಮತ್ಸ್ಯ ಮಾಂಸ ತಿನ್ನದೆ ಇರುವುದರಿಂದಾಗಲಿ, ನಗ್ನವಾಗಿರುವುದರಿಂದಾಗಲಿ, ಉಪವಾಸ ಇರುವುದರಿಂದಾಗಲಿ, ತಲೆಯನ್ನು ತಿರುಗಿಸುವುದರಿಂದಾಗಲಿ, ಜಟೆಯನ್ನು ಬಿಡುವುದರಿಂದಾಗಲಿ, ಬೂದಿಯನ್ನು ಬಳಿದುಕೊಂಡಿರುವುದ ರಿಂದಾಗಲಿ, ಮೃಗಗಳ ಚರ್ಮ ಧರಿಸಿರುವುದರಿಂದಾಗಲಿ, ಅಗ್ನಿಹವನ ಮಾಡುವುದರಿಂದಾಗಲಿ, ಅಮರತ್ವದ ಅಪೇಕ್ಷೆಯಿಂದ ನಾನಾ ದೇಹದಂಡನೆ ಮಾಡುವುದರಿಂದಾಗಲಿ, ಮಂತ್ರವನ್ನು ಜಪಿಸುವುದರಿಂದಾಗಾಲಿ, ಹವನ ಮಾಡುವುದರಿಂದಾಗಲಿ, ಯಜ್ಞವನ್ನು ಆಚರಿಸುವುದರಿಂದಾಗಲಿ ಹಾಗು ಋತುಗಳ ಉಪಸೇವನೆ ಮಾಡುವುದು. ಈ ಕಾರ್ಯಗಳನ್ನು ಮಾಡುವವನು ಶುದ್ಧನಾಗುವುದಿಲ್ಲ. ಅಂತಹ ಸಂಶಯಯುಕ್ತ ಪುರುಷ ಶುದ್ಧನು ಹೇಗೆತಾನೆ ಆಗುತ್ತಾನೆ?
12.          ಯಾರು ಸರ್ವ ಇಂದ್ರಿಯಗಳಲ್ಲಿ ಸಂಯಮಿಯೋ, ಇಂದ್ರಿಯಗಳನ್ನು ಬಹಳ ರೀತಿ ಅರಿತು ಸಂಚರಿಸುವನೋ, ಧಮ್ಮದಲ್ಲಿ ಸ್ಥಿರನೋ, ಶೀಲ ಹಾಗು ಮೃದುತೆಯಲ್ಲಿ ರತನೊ, ಸಾಂಸಾರಿಕ ಆಸಕ್ತಿಯನ್ನು ದಾಟಿದವನೋ, ಯಾರ ಸರ್ವ ದುಃಖವು ಅಂತ್ಯವಾಗಿರುವುದೋ, ಅಂತಹ ಧೀರ ವ್ಯಕ್ತಿಯು ನೋಡಿ-ಕೇಳುವ ಮಾತುಗಳಲ್ಲಿ ಲಿಪ್ತನಾಗುವುದಿಲ್ಲ.
13.          ಈ ಮಾತನ್ನು ಭಗವಾನರು ಮತ್ತೆ ಮತ್ತೆ ಹೇಳಿದರು. ವೇದ ಪಾರಂಗತ ಬ್ರಾಹ್ಮಣನು ಇದನ್ನು ಅರಿತನು. ತೃಷ್ಣಾರಹಿತರಾಗಿ, ಅನಾಸಕ್ತ ಹಾಗು ಅನುಸರಣೆ ಮಾಡುವುದರಲ್ಲಿ ಪಳಗಿರುವ ಮುನಿಯು ಸುಂದರ ಗಾಥೆಗಳಲ್ಲಿ ನಿರಆಮಗಂಧವನ್ನು (ಪರಿಶುದ್ಧತೆಯನ್ನು) ಪ್ರಕಟಪಡಿಸಿದರು.
14.          ಸರ್ವ ದುಃಖ ಪರಿಹಾರಕರಾದ ಬುದ್ಧ ಭಗವಾನರ ಪರಿಶುದ್ಧ ಸುಭಾಷಿತವನ್ನು ಕೇಳಿ ತಿಸ್ಸನು ವಿನಮ್ರ ಭಾವದಿಂದ ತಥಾಗತರಿಗೆ ವಂದಿಸಿ, ಪ್ರವಜರ್ಿತನಾಗಲು ನಿರ್ಧರಿಸಿದನು.

ಇಲ್ಲಿಗೆ ಆಮಗಂಧ ಸುತ್ತ ಮುಗಿಯಿತು.

No comments:

Post a Comment