Thursday 25 September 2014

Dhammachariya sutta in kannada(the importance of good friendship in monks)

6. ಧಮ್ಮಚರಿಯ ಸುತ್ತ
(ಕೆಟ್ಟ ಭಿಕ್ಖುಗಳ ಸಂಗವನ್ನು ತೊರೆದು ಶುದ್ಧ ಭಿಕ್ಖುಗಳ ಸಂಗ ಮಾಡಲಿ)

1-2.        ಧರ್ಮದ ಆಚರಣೆ ಹಾಗು ಬ್ರಹ್ಮಚರ್ಯದ ಪಾಲನೆ - ಇವು ಉತ್ತಮ ಧನವೆಂದು ಪರಿಗಣಿಸಲ್ಪಟ್ಟಿದೆ. ಯಾರಾದರೂ ಗೃಹವನ್ನು ತೊರೆದು ಅನಿಕೇತನನಾಗಿ ಪ್ರವಜರ್ಿತನಾಗುತ್ತಾನೆ. ಆದರೆ ಆತನು ಕಟುಭಾಷಿಯಾಗಿದ್ದರೆ ಮತ್ತು ಮೃಗದ ರೀತಿ ಪರರಿಗೆ ಪೀಡಿಸುವವನಾಗಿದ್ದರೆ, ಅವನ ಜೀವನ ಕೆಟ್ಟದ್ದಾಗಿದ್ದರೆ, ಆತನು ತನ್ನ ಕ್ಲೇಷವನ್ನು ಬೆಳೆಸುತ್ತಾನೆ.
3.            ಯಾವ ಭಿಕ್ಷು ಜಗಳಗಂಟನೋ ಹಾಗು ಮೋಹದಿಂದ ಆವೃತನೋ, ಆತನು ಬುದ್ಧರಿಂದ ಉಪದೇಶಿಸಿದ ಧರ್ಮವನ್ನು ಅರಿಯುವುದಿಲ್ಲ.
4.            ಯಾರು ಅವಿದ್ಯೆಗೆ ವಶಿಭೂತನಾಗಿ, ಸಂಯಮಿಗಳಿಗೆ ಪೀಡಿಸುವನೋ, ಅವನು ಹೋಗುತ್ತಿರುವ ಹಾದಿ ನರಕದ್ದು ಎಂದು ಅವನಿಗೆ ಅರಿವಾಗುವುದಿಲ್ಲ.
5.            ಇಂತಹ ಭಿಕ್ಷು ಮರಣದ ನಂತರ, ನರಕದಲ್ಲಿ ಬೀಳುತ್ತಾನೆ ಹಾಗು ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಅಂಧಕಾರದಿಂದ ಗಾಢ ಅಂಧಕಾರಕ್ಕೆ ಹೋಗುವವನಾಗಿ ಪರಲೋಕದಲ್ಲಿ ದುಃಖವನ್ನು ಅನುಭವಿಸುತ್ತಾನೆ.
6.            ಅಂತಹ ಪಾಪಿಯು ಶುದ್ಧನಾಗಲಾರ. ಹೇಗೆಂದರೆ ಅನೇಕ ವರ್ಷಗಳ ಮಲಕೂಪವೂ ಶುದ್ಧವಾಗದ ಹಾಗೆ.
7.            ಭಿಕ್ಷುಗಳೇ ! ಅಂತಹವನನ್ನು ಅರಿಯಿರಿ. ಈತನು ಕಾಮಭೋಗಗಳಲ್ಲಿ ಆಸಕ್ತನಾಗಿದ್ದಾನೆ, ಕೆಟ್ಟ ವಿಚಾರವುಳ್ಳವನಾಗಿದ್ದಾನೆ. ಕೆಟ್ಟ ಸಂಕಲ್ಪವುಳ್ಳವನಾಗಿದ್ದಾನೆ. ಕೆಟ್ಟ ಆಚರಣೆ ಹಾಗು ಕೆಟ್ಟ ಸಂಗವನ್ನು ಮಾಡುವವನಾಗಿದ್ದಾನೆ.
8.            ಸರ್ವರು ಒಂದಾಗಿ ಆತನನ್ನು ಸಂಘದಿಂದ ಬಹಿಷ್ಕರಿಸಿ, ಕಸದ ಹಾಗೆ ದೂರೀಕರಿಸಿ ಹಾಗು ಮಲದ ರೀತಿ ದೂರ ತಳ್ಳಿಹಾಕಿ.
9.            ಅಂತಹ ತುಚ್ಛ ಭಿಕ್ಷುಗಳನ್ನು ಬೇಗನೆ ತೆಗೆಯಿರಿ, ಅವರು ಶ್ರಮಣರಾಗದಿದ್ದರೂ ಸಹಾ ಶ್ರಮಣರಂತೆ ವತರ್ಿಸು (ನಟಿಸು) ತ್ತಾರೆ. ಯಾರು ಕೆಟ್ಟ ಆಚರಣೆ ಹಾಗು ಕೆಟ್ಟ ಸಂಗತಿಯುಳ್ಳವರಾಗಿದ್ದಾರೋ, ಅವರನ್ನು ತ್ಯಜಿಸಿ.
10.          ಸರ್ವತ್ರರಾಗಿ ಶುದ್ಧರು ಪರಿಶುದ್ಧರ ಸಂಗತಿ ಮಾಡಲಿ, ಆಗ ಮಾತ್ರ ಬುದ್ಧಿವಂತರೂ, ದುಃಖದ ಅಂತ್ಯ ಮಾಡಬಲ್ಲವರಾಗುತ್ತಾರೆ.
ಇಲ್ಲಿಗೆ ಧರ್ಮಚರಿಯ ಸುತ್ತ ಮುಗಿಯಿತು

No comments:

Post a Comment