Friday 12 September 2014

Maha mangala sutta in kannada ( which are the highest Blessing to humans)

4. ಮಹಾಮಂಗಳ ಸುತ್ತ
(ಮೂವತ್ತೆಂಟು ರೀತಿ ಶುಭ ಕರ್ಮಗಳು)
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಒಬ್ಬ ದೇವತೆಯು ರಾತ್ರಿ ಕಳೆಯುತ್ತಿದ್ದಂತೆ ತನ್ನ ದಿವ್ಯವಾದ ತೇಜಸ್ಸಿನಿಂದ ಸಮಸ್ತ ಜೇತವನವನ್ನು ಭವ್ಯವಾಗಿ ಬೆಳಗಿಸುತ್ತಾ ಭಗವಾನರ ಬಳಿ ಬಂದು ವಂದಿಸಿ ಒಂದುಕಡೆ ನಿಂತು ಭಗವಾನರೊಂದಿಗೆ ಗಾಥೆಗಳಲ್ಲಿ ಈ ರೀತಿ ಹೇಳಿದನು.

1.            ಕಲ್ಯಾಣದ ಆಕಾಂಕ್ಷೆಯಿಂದ ಬಹು ದೇವತೆಗಳೂ ಹಾಗು ಮನುಷ್ಯರು ಮಂಗಳಗಳ ಬಗ್ಗೆ ಚಿಂತಿಸಿದ್ದಾರೆ. ತಾವು ಈಗ ನಮಗೆ ಮಂಗಳಗಳು ಯಾವುವು ಎಂದು ತಿಳಿಸಿ.
2.            ಭಗವಾನ್ ಬುದ್ಧರು - ಮೂರ್ಖರ ಸೇವನೆಯನ್ನು ಮಾಡದಿರುವುದು, ಜ್ಞಾನಿಗಳ ಸೇವನೆ ಮಾಡುವುದು, ಪೂಜ್ಯರಿಗೆ ಪೂಜಿಸುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
3.            ಅನುಕೂಲ ಸ್ಥಳಗಳಲ್ಲಿ ವಾಸಿಸುವುದು, ಹಿಂದಿನ ಜನ್ಮದಲ್ಲಿ ಗಳಿಸಿದ್ದ ಪುಣ್ಯಫಲವಿರುವಿಕೆ ಹಾಗು ತನ್ನನ್ನು ಸನ್ಮಾರ್ಗದಲ್ಲಿ ನಡೆಸುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
4.            ಬಹುಶ್ರುತ (ಆಳವಾದ ಜ್ಞಾನ) ನಾಗುವುದು, ಕಲೆಗಳನ್ನು ಅರಿತಿರುವುದು, ಶಿಷ್ಟನಾಗಿರುವುದು, ಸುಶಿಕ್ಷಿತನಾಗಿರುವುದು ಹಾಗು ಸುಭಾಷಿತನಾಗಿರುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
5.            ಮಾತಾಪಿತರ ಸೇವೆ ಮಾಡುವುದು, ಪತ್ನಿ-ಪುತ್ರರ ಪಾಲನೆ ಮಾಡುವುದು ಹಾಗು ಅನುಕೂಲವಾದ ವೃತ್ತಿಯನ್ನು ಹೊಂದಿರುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
6.            ದಾನ ಮಾಡುವಿಕೆ, ಧರ್ಮವನ್ನು ಅನುಸರಿಸುವಿಕೆ, ಬಂಧು-ಬಾಂಧವರಿಗೆ ಸಹಾಯ ಮಾಡುವಿಕೆ ಹಾಗು ದೋಷರಹಿತ ಕಾರ್ಯವನ್ನು ಮಾಡುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
7.            ಆನಂದವನ್ನು ಮೀರುವಿಕೆ, ಪಾಪದಿಂದ ವಿರತನಾಗುವಿಕೆ, ಮದ್ಯಪಾನ ಮಾಡದಿರುವಿಕೆ, ಧಮರ್ಾಚರಣೆಯಲ್ಲಿ ಎಚ್ಚರಿಕೆಯಿಂದಿರುವಿಕೆ. ಇವು ಮಂಗಳಗಳಲ್ಲಿ ಉತ್ತಮವಾದುದು.
8.            ಗೌರವಿಸುವಿಕೆ, ವಿನಮ್ರನಾಗುವಿಕೆ, ಸಂತುಷ್ಠಿಯಿಂದಿರುವಿಕೆ, ಕೃತಜ್ಞತೆ ಹೊಂದಿರುವಿಕೆ ಹಾಗು ಉಚಿತ ಕಾಲದಲ್ಲಿ ಧರ್ಮಶ್ರವಣ ಮಾಡುವಿಕೆ. ಇವು ಮಂಗಳಗಳಲ್ಲಿ ಉತ್ತಮವಾದುದು.
9.            ಸಹನಾಯುತ ಕ್ಷಮಾಶೀಲನಾಗಿರುವಿಕೆ, ಸಮ್ಯಕ್ ವಾಚದಿಂದ ಕೂಡಿರುವಿಕೆ, ಸಮಣರ ದಶರ್ಿಸುವಿಕೆ, ಉಚಿತ ಕಾಲಕ್ಕೆ ಧಾಮರ್ಿಕ ಚಚರ್ೆಯಲ್ಲಿರುವುದು. ಇವು ಮಂಗಳಗಳಲ್ಲಿ ಉತ್ತಮವಾದುದು.
10.          ತಪಸ್ಸನ್ನಾಚರಿಸುವುದು, ಬ್ರಹ್ಮಚರ್ಯೆಯಿಂದಿರುವುದು, ಆರ್ಯ ಸತ್ಯಗಳನ್ನು ದಶರ್ಿಸುವುದು ಹಾಗು ನಿಬ್ಬಾಣವನ್ನು ಸಾಕ್ಷಾತ್ಕರಿಸುವುದು. ಇವು ಮಂಗಳಗಳಲ್ಲಿ ಅತ್ಯುತ್ತಮವಾದುದು.
11.          ಲೋಕ ಧಮ್ಮಗಳು* ಸ್ಪಶರ್ಿಸುವಾಗ ಯಾರ ಚಿತ್ತವು ಸ್ವಲ್ಪವೂ ಕಂಪನಮಯವಾಗುವುದಿಲ್ಲವೊ, ಶೋಕರಹಿತನಾಗಿ ಕಶ್ಮಲರಹಿತನಾಗಿ (ಪರಿಶುದ್ಧ) ಕ್ಷೇಮಯುತವಾಗಿ (ಶಾಂತವಾಗಿ) ಇರುವುದೋ, ಇದು ಮಂಗಳಗಳಲ್ಲಿ ಅತ್ಯುತ್ತಮವಾದುದು.
12.          ಈ ಪ್ರಕಾರದಿಂದ ಕಾರ್ಯಶೀಲರಾಗುವವರೂ ಸರ್ವತ್ರವಾಗಿ ಅಪರಾಜಿತರಾಗಿರುವರು, ಸರ್ವವಿಧದಲ್ಲಿ ಕಲ್ಯಾಣವನ್ನು ಹೊಂದುವವರು ಇದು ಅವರಿಗೆ ಅತ್ಯುತ್ತಮ ಮಂಗಳವಾಗಿದೆ.

ಇಲ್ಲಿಗೆ ಮಹಾ ಮಂಗಳ ಸುತ್ತ ಮುಗಿಯಿತು.

No comments:

Post a Comment