Wednesday 1 October 2014

dhammika sutta in kannada

14. ಧಮ್ಮಿಕ ಸುತ್ತ
(ಭಿಕ್ಷುಗಳ ಹಾಗು ಗೃಹಸ್ಥರ ಧರ್ಮ)
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನಾರಾಮದಲ್ಲಿ ವಿಹರಿಸುತ್ತಿದ್ದರು. ಆಗ ಧಮ್ಮಿಕ ಉಪಾಸಕನು ಐದುನೂರು ಉಪಾಸಕರ ಸಂಗಡ ಭಗವಾನರು ಎಲ್ಲಿದ್ದರೊ ಅಲ್ಲಿಗೆ ಬಂದನು. ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಧಮ್ಮಿಕನು ಭಗವಾನರಿಗೆ ಗಾಥೆಗಳಲ್ಲಿ ಈ ರೀತಿ ಹೇಳಿದನು-

1.            ಧಮ್ಮಿಕ ಉಪಾಸಕ - ಹೇ ಮಹಾ ಪ್ರಜ್ಞಾವಂತ ಗೋತಮರೇ, ನಾನು ತಮ್ಮಲ್ಲಿ ಕೇಳುತ್ತಿದ್ದೇನೆ. ಏನೆಂದರೆ ಯಾವರೀತಿಯ ಕರ್ಮ ಮಾಡುವ ಶ್ರಾವಕ ಚೆನ್ನಾಗಿರುತ್ತಾನೆ? ಮನೆಯಿಂದ (ಭಿಕ್ಷು) ಅನಿಕೇತನನಾಗುವವನೋ ಅಥವಾ ಮನೆಯಲ್ಲಿರುವ ಉಪಾಸಕನೋ?
2.            ತಾವು ದೇವಸಹಿತ ಲೋಕದ ಗತಿ ಹಾಗು ವಿಮುಕ್ತಿ ಅರಿತಿರುವಿರಿ. ತಮ್ಮ ಸಮಾನವಾದ ಬೇರಾರು ನಿಪುಣ ಅರ್ಥದಶರ್ಿಯಿಲ್ಲ. ಜನರು ತಮಗೆ ಶ್ರೇಷ್ಠ ಬುದ್ಧರೆನ್ನುವರು. ತಾವು ಧಮ್ಮದ ಸಂಪೂರ್ಣ ಜ್ಞಾನವನ್ನು ಪ್ರಾಪ್ತಿಮಾಡಿ ಸರ್ವಜೀವಿಗಳ ಮೇಲೆ ಅನುಕಂಪ ಉಳ್ಳವರಾಗಿ ಧರ್ಮವನ್ನು ಪ್ರಕಾಶಪಡಿಸಿದ್ದೀರಿ. ತಾವು ತೆರೆದ ಚಾವಣಿಯುಳ್ಳವರು (ಜ್ಞಾನಿ) ಹಾಗು ಸಮಂತಚಕ್ಷುವುಳ್ಳವರು, ಸರ್ವ ಸಂಸಾರದಲ್ಲಿ ನಿರ್ಮಲ ಸ್ವರೂಪದಲ್ಲಿ ಸುಶೋಭಿತರಾಗಿರುವಿರಿ.
4.            ಏರಾವಣ ನಾಗರಾಜನು ಸಹಾ ತಾವು ಜಿನರೆಂದು ಕೇಳಿ ತಮ್ಮ ಬಳಿಬಂದು ತಮ್ಮಲ್ಲಿ ಮಂತ್ರಣ ಮಾಡಿ ಧಮ್ಮವನ್ನು ಕೇಳಿ ಪ್ರಸನ್ನನಾಗಿ ತುಂಬ ಒಳ್ಳೆಯದಾಯಿತು ಎಂದು ಹೇಳಿ ಹೋದನು.
5.            ರಾಜ ವೈಶ್ರವಣ ಕುಬೇರನೂ ಸಹಾ ಧಮ್ಮವನ್ನು ಪ್ರಶ್ನಿಸಲು ತಮ್ಮಲ್ಲಿ ಬಂದನು. ಹೇ ಧೀರರೇ, ಆತನ ಪ್ರಶ್ನೆಗೂ ತಾವು ಉತ್ತರಿಸಿದಿರಿ. ಆತನೂ ತಮ್ಮ ವಾಣಿ ಕೇಳಿ ಪ್ರಸನ್ನನಾಗಿ ಹೊರಟನು.
6.            ವಾದವಿವಾದ ಮಾಡುವ ಎಲ್ಲಾ ತಾಕರ್ಿಕರೂ, ಅಜೀವಕರೂ, ನಿಗಂಠರು (ಜೈನರು) ಎಲ್ಲರೂ ತಮ್ಮ ಪ್ರಜ್ಞೆಯ ಮುಂದೆ ತುಚ್ಛರಾಗಿರುವರು. ಹೇಗೆಂದರೆ ವೇಗವಾಗಿ ನಡೆಯುವವನ ಮುಂದೆ ನಿಂತಿರುವನ ಹಾಗೆ.
7.            ವಾದವಿವಾದ ಮಾಡುವ ಎಷ್ಟೇ ಬ್ರಾಹ್ಮಣರಿರಲಿ, ಎಷ್ಟೇ ವೃದ್ಧ ಬ್ರಾಹ್ಮಣರು ಅಥವಾ ಬೇರೆ ಯಾರೇ ವಾದ ವಿವಾದಗಳಲ್ಲಿ ದಕ್ಷರೆಂದು ಮಾನ್ಯರಾಗಿರುವವರೆಲ್ಲಾ ತಮ್ಮಲ್ಲಿ ಅರ್ಥದ (ಧರ್ಮ) ಬಗ್ಗೆ ಕೇಳಲು ತಮ್ಮಲ್ಲಿಗೆ ಬರುತ್ತಾರೆ.
8.            ಹೇ ಭಗವಾನ್, ತಮ್ಮಿಂದ ಉಪದಿಷ್ಟವಾದ ಯಾವ ಧರ್ಮವಿದೆಯೋ, ಅದು ಅತ್ಯುತ್ತಮವೂ, ಸೌಖ್ಯದಾಯಕವೂ ಆಗಿದೆ. ನಾವೆಲ್ಲರೂ ಅದನ್ನು ಕೇಳಲು ಇಚ್ಛುಕರಾಗಿದ್ದೇವೆ. ಹೇ ಬುದ್ಧಶ್ರೇಷ್ಠರೇ, ನಮ್ಮ ಪ್ರಶ್ನೆಗಳಿಗೆ ಉತ್ತರಿಸಿರಿ.
9.            ಇಲ್ಲಿರುವ ಸರ್ವ ಭಿಕ್ಷುಗಳು ಹಾಗು ಉಪಾಸಕರು ಕೇಳಲು ಕುಳಿತಿರುವರು. ನಿರ್ಮಲ ಬುದ್ಧರ ಅವಗತ ಧರ್ಮವನ್ನು ಕೇಳುತ್ತಾರೆ. ಹೇಗೆಂದರೆ ಇಂದ್ರನ ಉಪದೇಶ ದೇವತೆಗಳು ಕೇಳುವಂತೆ.
ಭಿಕ್ಷು ಧರ್ಮ
10.          ಬುದ್ಧ ಭಗವಾನರು - ಭಿಕ್ಷುಗಳೇ, ನನ್ನ ಮಾತು ಕೇಳಿ, ನಾನು ನಿಮಗೆ ತಿಳಿಸುತ್ತಿದ್ದೇನೆ. ನೀವು ಧಮ್ಮ ಮತ್ತು ಧುತಂಗಗಳನ್ನು ಧಾರಣೆ ಮಾಡಿ, ನಿಮ್ಮ ಆಚರಣೆ ಪ್ರವಜರ್ಿತರಿಗೆ ತಕ್ಕಂತೆ ಅನುಕೂಲವಾಗಿರಲಿ ಹಾಗು ಯಾರು ಅರ್ಥದಶರ್ಿಯೋ, ಬುದ್ಧಿವಂತ ಭಿಕ್ಷುವೋ ಆತನ ಸಂಗದಲ್ಲಿ ಬೆರೆಯಿರಿ.
11.          ಭಿಕ್ಷು ಅಸಮಯದಲ್ಲಿ ತಿರುಗಾಡುವುದು ಮಾಡಬಾರದು. ಸಮಯದಲ್ಲಿ ಭಿಕ್ಷಾಟನೆಗೆ ಗ್ರಾಮದಲ್ಲಿ ಸಂಚರಿಸಲಿ, ಅಸಮಯದಲ್ಲಿ ತಿರುಗಾಡುವವನಿಗೆ ಆಸಕ್ತಿಗಳು ಅಂಟಿಕೊಳ್ಳುತ್ತದೆ. ಆದ್ದರಿಂದ ಅಸಮಯದಲ್ಲಿ ಬುದ್ಧರು ತಿರುಗಾಡುವುದಿಲ್ಲ.
12.          ರೂಪ, ಶಬ್ದ, ಗಂಧ, ರಸ ಹಾಗು ಸ್ಪರ್ಶ - ಇವು ಪ್ರಾಣಿಗಳಿಗೆ ಮೋಹಿತನನ್ನಾಗಿ ಮಾಡುತ್ತದೆ. ಇವುಗಳಲ್ಲಿ ರಾಗ ತ್ಯಜಿಸಿ ಸಮಯದಲ್ಲಿ ಭೋಜನಕ್ಕಾಗಿ ಗ್ರಾಮದಲ್ಲಿ ಪ್ರವೇಶಿಸಲಿ.
13.          ಭಿಕ್ಷು ಸಮಯದಲ್ಲಿ ಪ್ರಾಪ್ತ ಭಿಕ್ಷೆಯನ್ನು ಸೇವಿಸಿ, ಏಕಾಂತದಲ್ಲಿ ಕುಳಿತುಕೊಳ್ಳಲಿ ಹಾಗು ತನ್ನ ಆಂತರಿಕದಲ್ಲೇ ಮನನ ಮಾಡಲಿ. ಮನವು ಬಾಹ್ಯದಲ್ಲಿ ಹೋಗದಿರಲಿ ಮತ್ತು ಚಿತ್ತವನ್ನು ಏಕಾಗ್ರ ಮಾಡಲಿ.
14.          ಒಂದುವೇಳೆ ಯಾರಾದರೂ ಶ್ರಮಣ ಅಥವಾ ಆರ್ಯ ಭಿಕ್ಷುವಿನೊಂದಿಗೆ ಮಾತನಾಡಬೇಕಾದರೆ ಆತನು ಉತ್ತಮವಾದ ಧರ್ಮದ ಮಾತು ಆಡಲಿ. ಅದರ ಹೊರತು ಚಾಡಿ ಅಥವಾ ನಿಂದೆ ಮಾಡದಿರಲಿ.
15.          ಕೆಲವರು ವಾದ-ವಿವಾದ ಮಾಡುತ್ತಿರುತ್ತಾರೆ. ಅಂತಹ ಅಲ್ಪ ಪ್ರಜ್ಞೆವುಳ್ಳವರಿಗೆ ನಾವು ಪ್ರಶಂಸೆ ಮಾಡುವುದಿಲ್ಲ. ಈ ಕಡೆ, ಆ ಕಡೆಗಳಿಂದ ಆಸಕ್ತಿಯು ಅಂಟುತ್ತದೆ ಮತ್ತು ಅವರ ಚಿತ್ತವು ಅಂತಹ ವಾದ ವಿವಾದಗಳಲ್ಲೇ ದೂರದವರೆಗೂ ಹೋಗುತ್ತದೆ.
16.          ಬುದ್ಧರ ಉತ್ತಮ ಪ್ರಜ್ಞೆಯುಳ್ಳ ಶ್ರಾವಕನು ಸುಗತರ ಉಪದಿಷ್ಟ ಧರ್ಮವನ್ನು ಕೇಳಿ ಭಿಕ್ಷೆ, ವಿಹಾರ, ಶಯನಾಸನ, ಜಲ ಹಾಗೂ ಸಂಘಾಟಿಯ ಕೊಳೆಯನ್ನು ತೊಳೆಯುವುದು. ಇವುಗಳನ್ನು ವಿಚಾರ ಪೂರ್ವಕವಾಗಿ ಸೇವಿಸುತ್ತಾನೆ.
17.          ಆದ್ದರಿಂದ ಭಿಕ್ಷೆ, ಶಯನಾಸನ, ಜಲ ಹಾಗು ಸಂಘಾಟಿಯ ಕೊಳೆಯನ್ನು ತೊಳೆಯುವುದರಲ್ಲಿ ಆತನು ಆಸಕ್ತರಹಿತನಾಗಿರುತ್ತಾನೆ. ಹೇಗೆಂದರೆ ಕಮಲಪತ್ರದಲ್ಲಿರುವ ಜಲಬಿಂದುವಿನಂತೆ.
ಗೃಹಸ್ಥ ಧರ್ಮ
18.          ಈಗ ನಾನು ಗೃಹಸ್ಥ ಧರ್ಮ ಹೇಳುತ್ತೇನೆ. ಯಾವ ಕ್ರಿಯೆಗಳನ್ನು ಶ್ರೇಷ್ಠ ಭಿಕ್ಷು ಮಾಡುತ್ತಾನೋ, ಹಾಗು ಯಾವ ಸಂಪೂರ್ಣ ಭಿಕ್ಷು ಧರ್ಮವಿದೆಯೋ ಅದರ ಪಾಲನೆ ಸಪರಿಗ್ರಹಿ ಗೃಹಸ್ಥನಿಂದ ಮಾಡಲಾಗುವುದಿಲ್ಲ.
19.          ಲೋಕದಲ್ಲಿ ಯಾವ ಸ್ಥಿರವಾದ ಹಾಗು ಚಲಿಸುವ ಜೀವಿಗಳಿವೆಯೋ, ಅವುಗಳ ಪ್ರಾಣದ ಹತ್ಯೆ ಮಾಡದಿರಲಿ ಹಾಗು ಮಾಡಿಸದಿರಲಿ ಮತ್ತು ಅವುಗಳ ಹತ್ಯೆಗೆ ಆಜ್ಞೆ ನೀಡದಿರಲಿ. ಸರ್ವ ಜೀವಿಗಳ ಬಗ್ಗೆ ದಂಡ (ಶಸ್ತ್ರ) ತ್ಯಜಿಸಲಿ.
20.          ಪರರ ವಸ್ತುವೆಂದು ಅರಿಯಲ್ಪಡುವ ಯಾವುದೇ ವಸ್ತುವನ್ನು ಅಪಹರಿಸುವುದು ತ್ಯಜಿಸಲಿ, ಕಳ್ಳತನ ಮಾಡದಿರಲಿ ಹಾಗು ಕಳ್ಳತನ ಮಾಡಲು ಪರರಿಗೆ ಅನುಮತಿಯನ್ನು ನೀಡದಿರಲಿ, ಸರ್ವರೀತಿಯ ಕಳ್ಳತನವನ್ನು ತ್ಯಾಗಮಾಡಲಿ.
21.          ಅಬ್ರಹ್ಮಚರ್ಯವನ್ನು ಉರಿಯುತ್ತಿರುವ ಬೆಂಕಿಯ ರಾಶಿಯ ರೀತಿ ತ್ಯಜಿಸಲಿ. ವಿಜ್ಞಪುರುಷನು ಈ ರೀತಿ ವತರ್ಿಸುತ್ತಾನೆ. ಬ್ರಹ್ಮಚರ್ಯದ ಪಾಲನೆ ಮಾಡದಿದ್ದರೂ ಸಹಾ ಪರಸ್ತ್ರೀಯನ್ನು ಸೇವಿಸದಿರಲಿ.
22.          ಸಭೆ ಅಥವಾ ಪರಿಷತ್ತಿನಲ್ಲಿ ಹೋಗಿ ಪರರ ಮೇಲೆ ಸುಳ್ಳು ಹೇಳದಿರಲಿ, ಆತನು ಸಹಾ ಸುಳ್ಳು ಹೇಳದಿರಲಿ ಹಾಗು ಪರರಿಗೆ ಸುಳ್ಳು ಹೇಳಲು ಅನುಮತಿ ನೀಡದಿರಲಿ. ಸರ್ವ ಪ್ರಕಾರದ ಅಸತ್ಯ ಭಾಷಣ (ನುಡಿ) ತ್ಯಾಗಮಾಡಲಿ.
23.          ಯಾವ ಗೃಹಸ್ಥನು ಧರ್ಮವನ್ನು ಇಷ್ಟಪಡುವನೋ, ಆತನು ಮದ್ಯಪಾನ ಮಾಡದಿರಲಿ, ಪರರಿಗೆ ಕುಡಿಸದಿರಲಿ ಹಾಗು ಪರರಿಗೆ ಕುಡಿಯಲು ಅನುಮತಿಯನ್ನು ನೀಡದಿರಲಿ. ಇದು ಉನ್ಮಾದಕರ ಎಂದು ಅರಿತು ತಪ್ಪು ಮಾಡದಿರಲಿ.
24.          ಮೂರ್ಖ ಜನರು ಮದದ ಕಾರಣದಿಂದ ಪಾಪ ಮಾಡುತ್ತಾರೆ ಹಾಗು ಬೇರೆಯ ಪ್ರಮತ್ತ ಜನರಿಂದ ಪಾಪ ಮಾಡಿಸುತ್ತಾರೆ. ಈ ಪಾಪದ ಮನೆಯನ್ನು ತ್ಯಜಿಸಲಿ, ಪಾಪವು ಉನ್ಮಾದಕ, ಮೋಹಕವಾಗಿದೆ ಮತ್ತು ಮೂರ್ಖರಿಗೆ ಪ್ರಿಯವಾಗಿರುತ್ತದೆ.
25.          ಜೀವಹತ್ಯೆ ಮಾಡಬೇಡಿ, ಕಳ್ಳತನ ಮಾಡಬೇಡಿ, ಸುಳ್ಳು ಹೇಳಬೇಡಿ ಮತ್ತು ಮದ್ಯ ಸೇವಿಸಬೇಡಿ. ಅಬ್ರಹ್ಮಚರ್ಯ ಮತ್ತು ಮೈಥುನದಿಂದ ವಿರತರಾಗಿರಿ ಹಾಗು ರಾತ್ರಿಯಲ್ಲಿ ಭೋಜನ ಮಾಡದಿರಿ.
26.          ಮಾಲೆಯನ್ನು ಧರಿಸದಿರಿ, ಗಂಧವನ್ನು ಲೇಪಿಸದಿರಿ, ಕುಚರ್ಿ ಅಥವಾ ಭೂಮಿಯ ಮೇಲೆ ಮಲಗಿ. ಇದನ್ನು ಅಷ್ಠಾಂಗಿಕ ಉಪೋಸಥ ಎನ್ನುತ್ತಾರೆ. ದುಃಖದ ಅಂತ್ಯದ ಪಾರಂಗತ ಬುದ್ಧರಿಂದ ಇದು ಪ್ರಕಾಶಿತವಾಗಿದೆ.
27.          ಪ್ರತ್ಯೇಕ ಪಕ್ಷದ ಚತುರ್ದಶಿ, ಪೂಣರ್ಿಮೆ, ಅಷ್ಟಮಿ ಹಾಗೂ ಪ್ರತಿಹಾರ್ಯ ಪಕ್ಷದಲ್ಲಿ ಪ್ರಸನ್ನ ಮನದಿಂದ ಅಷ್ಠಾಂಗ ಉಪಸೋತದ ಪಾಲನೆ ಮಾಡಿರಿ.
28.          ಆಗ ಎಲ್ಲಾ ಪುರುಷರು ಪ್ರಾತಃ ಉಪೋಸಥವನ್ನು ಗ್ರಹಣ ಮಾಡಿ ತಮ್ಮ ಶಕ್ತಿಗೆ ಅನುಸಾರವಾಗಿ ಶ್ರದ್ಧಾಪೂರ್ವಕವಾಗಿ ಅನುಮೋದನೆ ಮಾಡುತ್ತಾ ಪ್ರಸನ್ನತೆಯಿಂದ ಭಿಕ್ಷು ಸಂಘಕ್ಕೆ ಅನ್ನ ಹಾಗು ಪೇಯದ ದಾನ ನೀಡಲಿ.
29.          ಧರ್ಮದಿಂದ ಮಾತಾಪಿತರ ಪೋಷಣೆ ಮಾಡಲಿ. ಯಾವುದೇ ಧಾಮರ್ಿಕ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಲಿ. ಯಾವ ಅಪ್ರಮತ್ತನು (ಜಾಗರೂಕ) ಈ ವ್ರತವನ್ನು ಪಾಲಿಸುವನೋ ಆತನು ಸ್ವಯಂಪ್ರಭ ಎಂಬ ದೇವಲೋಕದಲ್ಲಿ ಉತ್ಪನ್ನನಾಗುತ್ತಾನೆ.
ಇಲ್ಲಿಗೆ ಧಮ್ಮಿಕ ಸುತ್ತ ಮುಗಿಯಿತು.
ಇಲ್ಲಿಗೆ ಚೂಳ ವಗ್ಗ ಮುಗಿಯಿತು.
ಸಾರಾಂಶ -
                ರತನ, ಗಂಧ, ಹರಿ ಹಾಗು ಮಂಗಲ ಸೂತಿಲೋಮ ಸುತ್ತಗಳು
                ಹಾಗೆಯೆ ಧಮ್ಮಚರಿಯ, ಬ್ರಾಹ್ಮಣ ಸುತ್ತಗಳೊಡನೆ ನಾವಾ, ಕಿಂಸಿಲ, ಉಟ್ಠಾನ ಸುತ್ತಗಳು
                ರಾಹುಲ, ಕಪ್ಪ, ಪರಿಬ್ಬಾಜನಿಯ ಸುತ್ತಗಳು ಕೂಡ

                ಮತ್ತು ಧಮ್ಮಿಕ ಸುತ್ತದೊಂದಿಗೆ ಚೂಳವಗ್ಗದಲ್ಲಿ ಹದಿನಾಲ್ಕು ಸುತ್ತಗಳಿವೆ

No comments:

Post a Comment