Saturday, 11 October 2014

pabbajja sutta in kannada

. ಮಹಾ ವಗ್ಗ
1. ಪಬ್ಬಜ್ಜ ಸುತ್ತ
                (ಈ ಸುತ್ತದಲ್ಲಿ ಆಯುಷ್ಮಂತ ಆನಂದರು ಭಗವಾನರ ಪ್ರವಜ್ರ್ಯದ ವರ್ಣನೆ ಮಾಡಿದ್ದಾರೆ. ಇದರಲ್ಲಿ ಭಗವಾನರಿಗೆ ಬಿಂಬಿಸಾರನು ಮಾಡಿದ ಪ್ರಲೋಭನೆ ಆದರೂ ಸಹಾ ಭಗವಾನರು ಮುಕ್ತಿಯ ಅನ್ವೇಷಣೆಯಲ್ಲಿ ಮುಂದುವರೆದಿದ್ದನ್ನು ತಿಳಿಸಿದ್ದಾರೆ.)

1.            ಯಾವರೀತಿ ಚಕ್ಷುವಂತರು ಪ್ರವಜರ್ಿತರಾದರೋ, ಅವರ ಪಬ್ಬಜ್ಜವನ್ನು ನಾನು ವರ್ಣನೆ ಮಾಡುತ್ತೇನೆ. ಹೇಗೆಂದರೆ ಅವರು ಯಾವರೀತಿ ವಿಚಾರಮಾಡಿ ಪಬ್ಬಜ್ಜವನ್ನು ಇಷ್ಟಪಟ್ಟಿದ್ದರು.
2.            ಈ ಗೃಹ, ಗೃಹಸ್ಥರಾಗಿರುವುದರಲ್ಲಿ ಸಂಕಟಪೂರ್ಣವಾಗಿದೆ, ಇದು ಪಾಪದ ಮನೆಯಾಗಿದೆ (ಪಾಪ ಉತ್ಪಾದಕ). ಪಬ್ಬಜ್ಜವಾದರೋ ತೆರೆದ ಆಕಾಶದಂತೆ - ಇದನ್ನು ನೋಡಿ ಅವರು ಪಬ್ಬಜಿತರಾದರು.
3.            ಪಬ್ಬಜ್ಜರಾಗಿ ಅವರು ಶರೀರದಿಂದ ಪಾಪಕರ್ಮ ಮಾಡುವುದನ್ನು ತ್ಯಜಿಸಿದರು. ವಚನದಿಂದಲೂ, ದುಷ್ಕರ್ಮ ತ್ಯಜಿಸಿ ಆಜೀವಕದ ಪರಿಶೋಧನೆ ಪ್ರಾರಂಭಿಸಿದರು.
4.            ಬುದ್ಧರು ಮಗಧದ ಜನಪದದ ರಾಜಧಾನಿ ಗಿರಿವ್ರಜಕ್ಕೆ (ರಾಜಗೃಹ) ಹೊರಟರು. ಆ ಮೂವತ್ತೆರಡು ಮಹಾ ಲಕ್ಷಣದಿಂದ ತುಂಬಿರುವ ಬುದ್ಧರು ಭಿಕ್ಷೆಗೆ ನಗರದಲ್ಲಿ ಪ್ರವೇಶಿಸಿದರು.
5.            ಮಹಲಿನಲ್ಲಿ ನಿಂತು ರಾಜ ಬಿಂಬಿಸಾರನು ಅವರನ್ನು ನೋಡಿದನು. ಆ ದಿವ್ಯ ಲಕ್ಷಣಗಳಿಂದ ಕೂಡಿದ್ದ ಅವರನ್ನು ಕಂಡು ಈ ನುಡಿ ನುಡಿದನು.
6.            ಆಹ್! ಈ ಸುಂದರ, ಎತ್ತರದ ಮೈಕಟ್ಟಿನ ಪವಿತ್ರ ಆಚರಣೆಯಿಂದ ಯುಕ್ತವಾದ ಈ ವ್ಯಕ್ತಿಯನ್ನು ನೋಡಿ, ಆತನು ಕೇವಲ ನಾಲ್ಕು ಕೈಯಷ್ಟು ಮಾತ್ರವೇ (ಯುಗಮಾತ್ರ) ನೋಡುತ್ತಾನೆ.
7.            ಕೆಳಗೆ ಬಾಗಿಸಿರುವ ನೇತ್ರವುಳ್ಳವ, ಸ್ಮೃತಿವಂತ. ಈತನು ನೀಚಕುಲದ ಸಮಾನನಲ್ಲ, ರಾಜದೂತರೇ, ಓಡಿ ಪತ್ತೆಹಚ್ಚಿ, ಈ ಭಿಕ್ಷು ಎಲ್ಲಿ ಹೋಗುವನೆಂದು.
8.            ಕಳುಹಿಸಲ್ಪಟ್ಟಿರುವ ರಾಜದೂತರು (ಭಗವಾನರ) ಹಿಂದೆ ಹಿಂದೆಯೇ ಹಿಂಬಾಲಿಸಿದರು. ಹಾಗು ಈ ಭಿಕ್ಷು ಎಲ್ಲಿ ಹೋಗುವನು ಮತ್ತು ವಾಸಸ್ಥಳ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿದರು.
9.            ಇಂದ್ರಿಯಗಳನ್ನು ರಕ್ಷಿಸುವವರು, ಸಂಯಮಿಯು, ಜಾಗರೂಕ, ಸ್ಮೃತಿವಂತರೂ, ಬೋಧಿಸತ್ತರು ಮನೆ ಮನೆಗೆ ಭಿಕ್ಷೆ ಕೇಳಿದಾಗ ಶೀಘ್ರದಲ್ಲೇ ಪಿಂಡಪಾತ್ರೆ ತುಂಬಿತು.
10.          ಭಿಕ್ಷಾಟನೆ ಮುಗಿಸಿ ಆ ಮಹಾಮುನಿಯು ನಗರದಿಂದ ಹೊರಟು, ಪಾಂಡವ ಪರ್ವತವನ್ನು ಅಲ್ಲಿಯೇ ನಿವಾಸಸ್ಥಾನ ಎಂಬಂತೆ ಏರಿದರು.
11.          ಅವರು ಅಲ್ಲಿ ನೆಲೆಯಾಗಿದ್ದನ್ನು ಕಂಡ ದೂತ ಹತ್ತಿರದಲ್ಲೇ ಕುಳಿತನು. ಮತ್ತೊಬ್ಬ ದೂತನು ರಾಜನ ಬಳಿಗೆ ಹೋಗಿ ನಿವೇದನೆ ಅಪರ್ಿಸಿದನು-
12.          ಮಹಾರಾಜರೇ, ಆ ಭಿಕ್ಷು ಶ್ರೇಷ್ಠರು ಪಾಂಡವ ಪರ್ವತದ ಪೂರ್ವದ ಕಡೆ ಕುಳಿತಿದ್ದಾರೆ. ಹೇಗೆಂದರೆ, ವ್ಯಾಘ್ರ ವೃಷಭ ಅಥವಾ ಮಹಾ ಸಿಂಹವೊಂದು ಗುಹೆಯಲ್ಲಿ ಕುಳಿತಂತೆ ಗಾಂಭೀರ್ಯವುಳ್ಳವರಾಗಿದ್ದಾರೆ.
13.          ದೂತನ ವಚನವನ್ನು ಕೇಳಿ ರಾಜನು ಉತ್ತಮ ರಥದಿಂದ ಶೀಘ್ರವೇ ಪಾಂಡವ ಪರ್ವತದ ಬಳಿ ಹೊರಟನು.
14.          ರಥ ಎಲ್ಲಿಯವರೆಗೆ ಹೋಗಬಹುದೋ ಅಲ್ಲಿಯವರೆಗೆ ರಥದಲ್ಲಿ ಹೊರಟನು. ರಥದಿಂದ ಇಳಿದು ರಾಜನು ಬರಿಗಾಲಿನಲ್ಲಿ ಭಗವಾನರ ಬಳಿ ಹೊರಟು ಅವರ ಬಳಿ ಕುಳಿತನು.
15.          ನಂತರ ರಾಜನು ಕುಳಿತು ಕುಶಲ ಮಂಗಳವನ್ನು ಕೇಳಿದನು. ಕುಶಲ ಮಂಗಳವನ್ನು ಕೇಳಿ ಈ ರೀತಿ ನುಡಿದನು-
16.          ಬಿಂಬಿಸಾರ - ತಾವು ನವಯುವಕರಾಗಿದ್ದೀರಿ, ಪ್ರಥಮ ಅವಸ್ಥೆಯ ತರುಣರಾಗಿದ್ದೀರಿ, ತಾವು ರೂಪ ಹಾಗು ಶರೀರದ ಮೈಕಟ್ಟಿನಿಂದ ಕ್ಷತ್ರಿಯರೆಂದು ಭಾಸವಾಗುತ್ತಿರುವಿರಿ.
17.          ನಾನು ಸಂಪತ್ತನ್ನು ನೀಡುತ್ತೇನೆ. ಆನೆಗಳಿಂದ ಒಳಗೊಂಡು ಇಡೀ ಸೇನೆಯನ್ನು ಸುಶೋಭಿತಗೊಳಿಸಿ ಅದರ ಉಪಭೋಗವನ್ನು ಮಾಡಿಕೊಳ್ಳಿ. ಹಾಗು ನನ್ನ ಹೇಳಿಕೆಗೆ ಪ್ರತಿಯಾಗಿ ತಮ್ಮ ಜಾತಿ ಯಾವುದೆಂದು ತಿಳಿಸಿ.
18.          ಮಹಾ ಬೋಧಿಸತ್ವರು - ಹಿಮಾಲಯದ ಕೆಳಪ್ರಾಂತದ ಒಂದು ಜನಪದದಲ್ಲಿ ಕೋಸಲ ದೇಶವಾಸಿ ಸಂಪತ್ತಿನಲ್ಲಿ ಹಾಗು ಪರಾಕ್ರಮದಲ್ಲಿ ತುಂಬಿರುವ ಒಬ್ಬ ಋಜು ರಾಜನಿದ್ದಾನೆ.
19.          ಅವರು ಗೋತ್ರದಲ್ಲಿ ಆದಿತ್ಯ (ಸೂರ್ಯ) ವಂಶಿಗಳಾಗಿದ್ದಾರೆ ಹಾಗು ಶಾಕ್ಯ ಜಾತಿಯುಳ್ಳವರಾಗಿದ್ದಾರೆ. ಹೇ ಮಹಾರಾಜ ನಾನು ಆ ಕುಲದಲ್ಲಿ ಪಬ್ಬಜ್ಜ ಆಗಿದ್ದೇನೆ. ನಾನು ಕಾಮಭೋಗಗಳ ಕಾಮನೆಯನ್ನು ಮಾಡುವುದಿಲ್ಲ.
20.          ಲೋಕದ ಕಾಮಭೋಗಗಳ ದುಷ್ಪರಿಣಾಮಗಳನ್ನು ಹಾಗು ನೈಷ್ಕಮ್ರ್ಯದ (ನೇಕ್ಖಮ್ಮ / ತ್ಯಾಗ) ಕಲ್ಯಾಣವನ್ನು ನೋಡಿ ನಾನು ತಪಸ್ಸು ಮಾಡಲು ಹೊರಟಿದ್ದೇನೆ. ಇದರಲ್ಲೇ ನನ್ನ ಮನವು ಲೀನವಾಗಿದೆ.

ಇಲ್ಲಿಗೆ ಪಬ್ಬಜ್ಜ ಸುತ್ತ ಮುಗಿಯಿತು.

No comments:

Post a Comment