Wednesday 1 October 2014

samma paribbaajaneeya sutta

13. ಸಮ್ಮಾ ಪರಿಬ್ಬಾಜನೀಯ ಸುತ್ತ
(ಭಿಕ್ಷುಗಳು ಆಚರಣನೀಯ ಧಮ್ಮ)
1.            ಹೇ ಮಹಾಪ್ರಾಜ್ಞರೇ, ಸಂಸಾರ ಸಾಗರವನ್ನು ದಾಟಿ ಮುಕ್ತರಾಗಿರುವ, ಸ್ಥಿರವಾಗಿರುವಂತಹ ಮುನಿಯನ್ನು ನಾವು ಕೇಳುವುದೇನೆಂದರೆ ಕಾಮಭೋಗಗಳ ತ್ಯಾಗಮಾಡಿ, ಮನೆಯನ್ನು ತೊರೆದು ಭಿಕ್ಷು ಹೇಗೆ ಸಮ್ಯಕ್ ಪ್ರಕಾರದಿಂದ ಲೋಕದಲ್ಲಿ ಸಂಚರಿಸುವನು.

2.            ಭಗವಾನ್ ಬುದ್ಧ - ಯಾರಲ್ಲಿ ಮಾಂಗಳಿಕ ಕರ್ಮಗಳಾದ (ಉಲ್ಕಾಪಾತ ಇತ್ಯಾದಿ) ಉತ್ಪಾತಗಳ, ಸ್ವಪ್ನಗಳ ಮಾತುಗಳು, ಲಕ್ಷಣ ಹಾಗು ಸಾಮುದ್ರಿಕಾ ಶಾಸ್ತ್ರಗಳ ವಿಶ್ವಾಸ ನಷ್ಟವಾಗಿದೆಯೋ, ಯಾರು ಮಂಗಳ ದೋಷ (ಶಕುನ, ಅಪಶಕುನ)ಗಳಿಂದ ಮುಕ್ತನಾಗಿರುವನೋ, ಆತನೇ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
3.            ಯಾವ ಭಿಕ್ಷು ಮಾನವ ಲೋಕದ ಸರ್ವ ಕಾಮಭೋಗಗಳು ಹಾಗು ಸ್ವಗರ್ಿಯ ಲೋಕಗಳ ಬಗ್ಗೆ ರಾಗವನ್ನು ತ್ಯಜಿಸಿರುವನೋ, ಧರ್ಮವನ್ನು ಚೆನ್ನಾಗಿ ಅರಿತಿರುವನೋ ಭವವನ್ನು ದಾಟುವಂತಹ ಆತನೇ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
4.            ಯಾವ ಭಿಕ್ಷುವು ಚಾಡಿ, ಕ್ರೋಧವನ್ನು ತ್ಯಜಿಸಿ ಜಿಪುಣತನವನ್ನು ವಜರ್ಿಸಿ, ಅನುರೋಧ-ವಿರೋಧಗಳಿಂದ ರಹಿತನಾಗಿರುವ ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
5.            ಯಾವ ಭಿಕ್ಷು ಪ್ರಿಯ-ಅಪ್ರಿಯಗಳನ್ನು ವಜರ್ಿಸಿ, ಎಲ್ಲಿಯೂ ಅನುರಾಗ ಅಥವಾ ತೃಷ್ಣೆಯನ್ನು ಮಾಡದೆ ಬಂಧನಗಳಿಂದ ಮುಕ್ತನಾಗಲಿ. ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
6.            ಯಾವ ಭಿಕ್ಷು ಸಾಂಸಾರಿಕ ಆಸಕ್ತಿಗಳಲ್ಲಿ ಸಾರವನ್ನು ಕಾಣುವುದಿಲ್ಲವೋ, ಪರಿಗ್ರಹದ ವಿಷಯದಲ್ಲಿ ಇಚ್ಛೆ ಅಥವಾ ಆನಂದ ತ್ಯಾಗ ಮಾಡಿರುವನೋ ಮತ್ತು ತೃಷ್ಣಾರಹಿತನಾಗಿರುವನೋ, ಪರರ (ಪ್ರಾಪಂಚಿಕರ) ಅನುಸರಣೆ ಮಾಡುವುದಿಲ್ಲವೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
7.            ಯಾವ ಭಿಕ್ಷು ವಚನದಲ್ಲಿ, ಮನದಲ್ಲಿ ಹಾಗು ಕ್ರಿಯೆಯಲ್ಲಿ ವಿರೋಧರಹಿತನಾಗಿರುವನೋ, ಚೆನ್ನಾಗಿ ಧರ್ಮವನ್ನು ಅರಿತು ನಿಬ್ಬಾಣ ಪದಕ್ಕಾಗಿ ಆಕಾಂಕ್ಷಿಸುವನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
8.            ಪರರು ನನಗೆ ವಂದಿಸುತ್ತಾರೆ ಎಂದು ಯೋಚಿಸಿ ಯಾವ ಭಿಕ್ಷು ಗವರ್ಿಸುವುದಿಲ್ಲವೋ, ಆಕ್ರೋಶವನ್ನುಂಟು ಮಾಡಿದರೂ ವೈಮನಸ್ಯ ಮಾಡುವುದಿಲ್ಲವೋ, ಪರರಿಂದ ಭೋಜನ ಗ್ರಹಿಸಿ ಪ್ರಮತ್ತನಾಗುವುದಿಲ್ಲವೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
9.            ಯಾವ ಭಿಕ್ಷು ಲೋಭ ಮತ್ತು ತೃಷ್ಣೆಯನ್ನು ತ್ಯಜಿಸಿ ವಧೆ ಬಂಧನದಿಂದ ರಹಿತನಾಗಿರುವನೋ, ಸಂಶಯವನ್ನು ದಾಟಿರುವನೋ, ನಿಷ್ಕಾಮನಾಗಿರುವನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
10.          ಆ ಭಿಕ್ಷುವು ತನ್ನ ಅನುರೂಪತೆಯನ್ನು ಅರಿತು, ಲೋಕದಲ್ಲಿ ಯಾರಿಗೂ ಹಿಂಸೆ ಮಾಡದಿರಲಿ ಹಾಗು ಯಥಾರ್ಥ ರೂಪದಲ್ಲಿ ಧರ್ಮವನ್ನು ಅರಿಯಲಿ. ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.
11.          ಯಾವ ಭಿಕ್ಷುವಿನಲ್ಲಿ ಯಾವುದೇ ಪ್ರಕಾರದ ಆಸಕ್ತಿಯಿಲ್ಲವೋ, ಅಕುಶಲದ ಪಾಪ ಮೂಲವು ನಷ್ಟವಾಗಿದೆಯೋ ಹಾಗು ತೃಷ್ಣೆ ಅಥವಾ ಆಸಕ್ತಿರಹಿತನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.
12.          ಯಾವ ಭಿಕ್ಷು ಆಸವ ಕ್ಷೀಣನೋ, ಅಭಿಮಾನರಹಿತನೋ, ಸಂಪೂರ್ಣ ರಾಗ ಪಥವನ್ನು ದಾಟಿ ಹೋಗಿರುವನೋ, ಯಾರು ದಾಂತನೋ, ಉಪಶಾಂತನೋ ಹಾಗು ಸ್ಥಿರನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.
13.          ಯಾವ ಭಿಕ್ಷು ಶ್ರದ್ಧಾಶೀಲನೋ, ಶ್ರುತಮಾನನೋ, ನಿಬ್ಬಾಣಪದ ದಶರ್ಿಯೋ, ದಳಗಳಲ್ಲಿ ನಿಷ್ಪಕ್ಷಪಾತಿಯೋ ಮತ್ತು ಯಾವ ಧೀರನೂ, ಲೋಭ, ದ್ವೇಷ ಹಾಗು ಪ್ರತಿಹಿಂಸೆ ಭಾವನೆಯನ್ನು ತ್ಯಜಿಸಿರುವನೋ ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾಶದಿಂದ ಸಂಚರಿಸುವನು.
14.          ಯಾವ ಭಿಕ್ಷು ಸುವಿಶುದ್ಧ - ಸ್ವಜಯಿಯೋ, ತೆರೆದ ಚಾವಣಿಯುಳ್ಳವನೋ (ಜ್ಞಾನಿ), ಧರ್ಮಗಳ ವಶಿಪ್ರಾಪ್ತನೋ, ಪಾರಂಗತನೋ, ತೃಷ್ಣಾರಹಿತನೋ ಹಾಗು ಸಂಖಾರಗಳ ನಾಶದಲ್ಲಿ ಕುಶಲನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
15.          ಯಾವ ಭಿಕ್ಷು ಭೂತ ಹಾಗು ಭವಿಷ್ಯಗಳ ಮಾತುಗಳಿಂದ ಬಹುದೂರನೋ, ಯಾರು ಅತ್ಯಂತ ವಿಶುದ್ಧ ಪ್ರಜ್ಞಾವುಳ್ಳವನೋ, ಸರ್ವ ಇಂದ್ರಿಯಗಳಿಂದ ಮುಕ್ತನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
16.          ಯಾವ ಭಿಕ್ಷು ಪದಗಳನ್ನು (ಚತುರಾರ್ಯ ಸತ್ಯಗಳು) ಅರಿತವನೋ, ಧರ್ಮಜ್ಞನೋ, ಆಸವಗಳ ಅಂಗಳದಿಂದ ನಿಬ್ಬಾಣದವರೆಗೂ ಯಥಾರ್ಥವಾಗಿ ನೋಡಿರುವನೋ, ಸರ್ವ ಆಸಕ್ತಿಗಳನ್ನು ನಷ್ಟ ಮಾಡಿರುವನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
17.          ನಿಶ್ಚಯವಾಗಿಯೂ ಭಗವಾನ್, ಇದು ಅಂತಹ ಸಂಗತಿಯಾಗಿದೆ. ಯಾರು ಈ ಪ್ರಕಾರದಿಂದ ವಿಹರಿಸುವನೋ, ಆ ದಾಂತನು ಸರ್ವ ಬಂಧನರಹಿತ ಭಿಕ್ಷು ಆಗಿರುತ್ತಾನೆ. ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.

ಇಲ್ಲಿಗೆ ಸಮ್ಮಾ ಪರಿಬ್ಬಾಜನೀಯ ಸುತ್ತ ಮುಗಿಯಿತು.

No comments:

Post a Comment