Saturday 11 October 2014

subhashita sutta in kannada

3. ಸುಭಾಷಿತ ಸುತ್ತ
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಾಸವಾಗಿದ್ದರು. ಭಗವಾನರು ಹೀಗೆ ಹೇಳಿದರು- ಭಿಕ್ಷುಗಳೇ, ನಾಲ್ಕು ಅಂಗಗಳಿಂದ ಯುಕ್ತವಾದ ವಚನವು ಸುಭಾಷಿತವಾಗುತ್ತದೆ. ದುಭರ್ಾಷಿಕವಾಗುವುದಿಲ್ಲ. ಯಾವುದು ಆ ನಾಲ್ಕು? ಭಿಕ್ಷುಗಳೇ, ಇಲ್ಲಿ ಭಿಕ್ಷು ಸುಭಾಷಿತಯುತವಾಗಿ ನುಡಿಯುತ್ತಾನೆ. ದುಭರ್ಾಷಿತವಾಗಿ ಅಲ್ಲ. ಧರ್ಮಯುತವಾಗಿ ನುಡಿಯುತ್ತಾನೆ, ಅಧರ್ಮಯುತನಾಗಿ ಅಲ್ಲ. ಸತ್ಯವನ್ನೇ ನುಡಿಯುತ್ತಾನೆ, ಅಸತ್ಯವನ್ನಲ್ಲ. ಭಿಕ್ಷುಗಳೇ ಈ ನಾಲ್ಕು ಅಂಶಗಳಿಂದ ಯುಕ್ತವಾದುದು ಸುಭಾಷಿತವಾಗುತ್ತದೆ, ದುಭರ್ಾಷಿತವಲ್ಲ. ಜ್ಞಾನಿಗಳಿಗೆ ನಿದರ್ೊಷವಾಗಿರುತ್ತದೆ, ದೋಷಯುತವಲ್ಲ.

                ಭಗವಾನರು ಈ ರೀತಿ ನುಡಿದರು. ಸುಗತರು ಈ ರೀತಿ ಹೇಳಿದ ನಂತರ ಶಾಸ್ತರು ಇದನ್ನು ಹೇಳಿದರು-
1.            ಸಂತರು ಸುಭಾಷಿತವನ್ನು ಉತ್ತಮ ವಚನವೆಂದು ನುಡಿದಿದ್ದಾರೆ, ಧರ್ಮವನ್ನೇ ನುಡಿಯಿರಿ, ಅಧರ್ಮವನ್ನಲ್ಲ - ಇದು ಎರಡನೆಯದು. ಪ್ರಿಯ ವಚನವನ್ನು ನುಡಿಯಿರಿ, ಅಪ್ರಿಯವನ್ನಲ್ಲ - ಇದು ಮೂರನೆಯದು. ಸತ್ಯವನ್ನೇ ನುಡಿಯಿರಿ, ಅಸತ್ಯವನ್ನಲ್ಲ - ಇದು ನಾಲ್ಕನೆಯದು.
                ಆಗ ಆಯುಷ್ಮಂತ ವಂಗೀಸನು ಆಸನದಿಂದ ಎದ್ದನು. ಚೀವರವನ್ನು ಒಂದು ಹೆಗಲಮೇಲೆ ಹಾಕಿಕೊಂಡು, ಎಲ್ಲಿ ಭಗವಾನರಿದ್ದರೋ ಅಲ್ಲಿ ಎರಡು ಕೈಗಳನ್ನು ಜೋಡಿಸಿ ಪ್ರಣಾಮ ಮಾಡಿದನು. ನಂತರ ಈ ರೀತಿ ಹೇಳಿದನು-ಸುಗತರೇ, ನನಗೆ ಈ ರೀತಿ ಅರಿವು ಉಂಟಾಗಿದೆ. ವಂಗೀಸ, ಅದನ್ನು ತಿಳಿಯಪಡಿಸು ಎಂದು ಭಗವಾನರು ಹೇಳಿದರು. ಆಗ ಆಯುಷ್ಮಂತ ವಂಗೀಸನು ಭಗವಾನರ ಮುಂದೆ ಅನುಕೂಲಕರವಾದ ಗಾಥೆಗಳಿಂದ ವ್ಯಕ್ತಪಡಿಸಿದನು.
2.            ಅದೇ ಮಾತನ್ನು ನುಡಿಯಲಿ, ಅದರಿಂದ ತಾನು ಸಂಕಷ್ಟದಲ್ಲಿ ಬೀಳದಿರಲಿ ಮತ್ತು ಪರರಿಗೂ ದುಃಖವಾಗದಿರಲಿ. ಅದೇ ಸುಭಾಷಿತವಾಗಿದೆ.
3.            ಯಾವ ನುಡಿಯು ಆನಂದಮಯವೋ, ಅಂತಹ ಪ್ರಿಯ ನುಡಿಯನ್ನು ನುಡಿಯಲಿ. ಪಾಪಯುತ ನುಡಿಗಳನ್ನು ತ್ಯಜಿಸಿ ಪ್ರಿಯವಾದುದನ್ನು ನುಡಿಯಲಿ.
4.            ಸತ್ಯವೇ ಅಮೃತವಾಣಿಯಾಗಿದೆ. ಇದು ಸನಾತನ ನಿಯಮವಾಗಿದೆ. ಇದನ್ನು ಸತ್ಯ, ಅರ್ಥ ಮತ್ತು ಧರ್ಮದಿಂದ ಪ್ರತಿಷ್ಠಿತರಾದ ಸಂತರು ಹೇಳಿದ್ದಾರೆ.
5.            ಭಗವಾನ ಬುದ್ಧರು ಯಾವ ಕಲ್ಯಾಣಕರವಾದ ನಿಬ್ಬಾಣ ಪ್ರಾಪ್ತಿ ಹಾಗು ದುಃಖದ ಅಂತ್ಯ ಮಾಡಬಲ್ಲ ಯಾವ ಶ್ರೇಷ್ಠ ಸುವಾಚವನ್ನು ನುಡಿದಿರುವರೋ, ಅದೇ ವಚನಗಳಲ್ಲಿ ಅತ್ಯುತ್ತಮವಾಗಿದೆ.

ಇಲ್ಲಿಗೆ ಸುಭಾಷಿತ ಸುತ್ತ ಮುಗಿಯಿತು.

No comments:

Post a Comment