Saturday, 11 October 2014

sundarika bhaaradvaaja sutta in kannada

4. ಸುಂದರಿಕ ಭಾರದ್ವಾಜ ಸುತ್ತ
(ಪುರಲಾಸ ಸುತ್ತ)
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಕೋಸಲ ಜನಪದದಲ್ಲಿ ಸುಂದರಿ (ಸಯಿ) ನದಿಯ ದಡದಲ್ಲಿ ವಿಹರಿಸುತ್ತಿದ್ದರು. ಆಗ ಸುಂದರಿಕ ಭಾರದ್ವಾಜ ಬ್ರಾಹ್ಮಣನು ಸುಂದರಿ ನದಿಯ ದಡದಲ್ಲಿ ಅಗ್ನಿಹವನವನ್ನು ಮಾಡುತ್ತಿದ್ದನು. ಅಗ್ನಿಹೋತ್ರದಲ್ಲಿ ತಲ್ಲೀನನಾಗಿದ್ದನು. ಆಗ ಸುಂದರಿಕ ಭಾರದ್ವಾಜನು ಅಗ್ನಿಹವನ ಮಾಡಿ, ಅಗ್ನಿಹೋತ್ರದ ಪರಿಚಯರ್ೆ ಮುಗಿಸಿ ಆಸನದಿಂದ ಎದ್ದು ನಾಲ್ಕು ದಿಕ್ಕುಗಳನ್ನು ತಿರುಗಿಕೊಂಡು ಅವಲೋಕಿಸಿದನು.

                ಯಾರು ಈ ಹವ್ಯಶೇಷವನ್ನು ತಿನ್ನುವರು ಎಂದು ನೋಡುತ್ತಿದ್ದಾಗ ಭಗವಾನರು ಸಮೀಪದ ವೃಕ್ಷದ ಕೆಳಗೆ ತಲೆಯಿಂದ ಚೀವರವನ್ನು ಅಡ್ಡವಾಗಿ ಆವರಿಸಿಕೊಂಡು ಕುಳಿತಿರುವುದನ್ನು ಕಂಡನು. ಇದನ್ನು ನೋಡಿ ಬಲಗೈಯಲ್ಲಿ ಹವ್ಯಶೇಷವನ್ನು ತೆಗೆದುಕೊಂಡು, ಎಡಗೈಯಲ್ಲಿ ಕಮಂಡಲವನ್ನು ತೆಗೆದುಕೊಳ್ಳುತ್ತಾ ಭಗವಾನರಿರುವ ಕಡೆ ಬಂದನು.
                ಆಗ ಭಗವಾನರು ಸುಂದರಿಕ ಭಾರದ್ವಾಜ ಬ್ರಾಹ್ಮಣನ ಕಾಲುಗಳ ಶಬ್ದಕ್ಕೆ ಚೀವರವನ್ನು ತಲೆಯಿಂದ ತೆಗೆದರು. ಆಗ ಸುಂದರಿಕ ಭಾರದ್ವಾಜ ಬ್ರಾಹ್ಮಣನು ತಾವು ! ಬೋಳುತಲೆಯವರಾಗಿದ್ದೀರಿ ಎಂದು ಮತ್ತೆ ಮರಳಲು ಸಿದ್ಧನಾದನು. ಆಗ ಸುಂದರಿಕ ಭಾರದ್ವಾಜನಿಗೆ ಹೀಗೆ ಅನಿಸಿತು. ಇಲ್ಲಿ ಕೆಲವು ಬ್ರಾಹ್ಮಣರೂ ಸಹಾ ಬೋಳುತಲೆಯವರಾಗಿರುತ್ತಾರೆ. ಏಕೆ ನಾನು ಅವರ ಹತ್ತಿರ ಹೋಗಿ ಜಾತಿಯನ್ನು ಕೇಳಬಾರದು? ಎಂದುಕೊಂಡು ಭಗವಾನರ ಬಳಿಗೆ ಬಂದನು. ಬಂದು ಭಗವಾನರಿಗೆ ಇಂತೆಂದನು: ತಾವು ಯಾವ ಜಾತಿಯವರು?
                ಆಗ ಭಗವಾನರು ಸುಂದರಿಕ ಭಾರದ್ವಾಜನಿಗೆ ಈ ಗಾಥೆಗಳಲ್ಲಿ ಉತ್ತರಿಸಿದರು:
1.            ನಾನು ಬ್ರಾಹ್ಮಣನೂ ಅಲ್ಲ, ರಾಜಪುತ್ರನೂ ಅಲ್ಲ, ವೈಶ್ಯನೂ ಅಲ್ಲ ಹಾಗು ಬೇರೆ ಇನ್ನೊಂದು ಅಲ್ಲ. ಸಾಮಾನ್ಯ ಜನರ ಗೋತ್ರವನ್ನು ಚೆನ್ನಾಗಿ ಅರಿತು ನಾನು ವಿಚಾರಪೂರ್ವಕವಾಗಿ ಅಕಿಂಚನ (ಏನೂ ಇಲ್ಲ) ಭಾವದಿಂದ ಲೋಕದಲ್ಲಿ ಸಂಚರಿಸುತ್ತೇನೆ.
2.            ಚೀವರವನ್ನು ಧರಿಸಿ, ಅನಿಕೇತನನಾಗಿ, ಶಿರವನ್ನು ಬೋಳಿಸಿಕೊಂಡು ಪೂರ್ಣವಾಗಿ ಶಾಂತನಾಗಿ, ಇಲ್ಲಿನ ಜನರಲ್ಲಿ ಅನಾಸಕ್ತನಾಗಿ ಸಂಚರಿಸುವೆನು. ಹೇ ಬ್ರಾಹ್ಮಣನೇ, ನೀನು ನನ್ನಲ್ಲಿ ಗೋತ್ರವನ್ನು ಪ್ರಶ್ನಿಸುವುದು ಅನುಚಿತವಾಗಿದೆ.
3.            ಬ್ರಾಹ್ಮಣ - ಬ್ರಾಹ್ಮಣನೇ, ಬ್ರಾಹ್ಮಣರಿಗೆ ತಾವು ಬ್ರಾಹ್ಮಣನೇ ಎಂದು ಕೇಳುತ್ತಾರೆ.
4.            ಭಗವಾನರು - ನೀನು ನಿನಗೆ ಬ್ರಾಹ್ಮಣನೆಂದು ಹೇಳುತ್ತಿ. ನನಗೆ ಬ್ರಾಹ್ಮಣನಲ್ಲವೆಂದು ಹೇಳುತ್ತಿ. ನಾನು ನಿನಗೆ ತ್ರಿಪದ ಹಾಗು 24 ಅಕ್ಷರದ ಸಾವಿತ್ರಿ (ಗಾಯತ್ರಿ) ಮಂತ್ರದ ಬಗ್ಗೆ ಕೇಳುತ್ತೇನೆ.
5.            ಬ್ರಾಹ್ಮಣ - ಈ ಸಂಸಾರದಲ್ಲಿ ಋಷಿಗಳು, ಮನುಷ್ಯರು, ಕ್ಷತ್ರಿಯರು ಮತ್ತು ಬ್ರಾಹ್ಮಣರು ಯಾವ ಕಾರಣದಿಂದ ದೇವತೆಗಳ ಹೆಸರಿನಿಂದ ಬಹಳಷ್ಟು ಯಜ್ಞಗಳನ್ನು ಆಚರಿಸಿದರು ?
6.            ಭಗವಾನರು - ಯಜ್ಞ ಸಮಯದಲ್ಲಿ ಪಾರಂಗತರಾದ ಜ್ಞಾನಿಗೆ ಆಹುತಿಯು (ದಾನ) ಸಿಕ್ಕರೆ, ಆತನ ಯಜ್ಞವು ಸಫಲವಾಗುತ್ತದೆ. ನಾನು ಈ ರೀತಿ ಹೇಳುತ್ತೇನೆ.
7.            ಬ್ರಾಹ್ಮಣ - ಅವಶ್ಯಕವಾಗಿ ಆತನ ಯಜ್ಞ ಸಫಲವಾಗುತ್ತದೆ. ಅಂತಹ ಜ್ಞಾನಿಯ ದರ್ಶನವಾದರೆ, ತಮ್ಮಂತಹ (ಜ್ಞಾನಿ) ದಶರ್ಿಸಿ ಸಿಗದೆ ಇರುವುದರಿಂದಲೇ ಪರರು ಪುರಿಯನ್ನು, ಅವಲಕ್ಕಿಯನ್ನು ತಿನ್ನುತ್ತಾರೆ.
8.            ಭಗವಾನರು - ಆದ್ದರಿಂದ ನೀನು ಬ್ರಾಹ್ಮಣನೇ. ಶಾಂತ, ಕ್ರೋಧರಹಿತ, ನಿಷ್ಪಾತಿ, ತೃಷ್ಣಾರಹಿತ, ಮಹಾಜ್ಞಾನಿಯ ಹತ್ತಿರ ಹೋಗಿ ಅರ್ಥದ ಬಗ್ಗೆ ಕೇಳು. ಅದರಿಂದ ನೀನು ಕೆಲವು ಅರಿವು ಗಳಿಸಬಹುದು.
9.            ಬ್ರಾಹ್ಮಣ - ಹೇ ಗೋತಮರೇ, ನಾನು ಯಜ್ಞದಲ್ಲಿ ರತನಾಗಿದ್ದೇನೆ. ಯಜ್ಞವನ್ನು ಮಾಡಲು ಇಚ್ಛಿಸುತ್ತೇನೆ. ನಾನು ಅದನ್ನು ಅರಿಯಲಾರೆ. ಆದ್ದರಿಂದ ತಾವು ಉಪದೇಶಿಸಿ. ತಾವೇ ಹೇಳಿ ಯಾವರೀತಿ ಯಜ್ಞವು ಸಫಲವಾಗುತ್ತದೆ.
                ಭಗವಾನರು - ಹಾಗಾದರೆ ಬ್ರಾಹ್ಮಣ, ಗಮನವಿಟ್ಟು ಕೇಳು, ನಾನು ನಿನಗೆ ಧಮರ್ೊಪದೇಶ ನೀಡುತ್ತೇನೆ.
10.          ಜಾತಿಯನ್ನು ಕೇಳದಿರು, ಆಚರಣೆಯನ್ನು ಕೇಳು. ಕಟ್ಟಿಗೆಯಿಂದಲೂ ಅಗ್ನಿ ಉದಯಿಸುತ್ತದೆ. ಇದೇ ರೀತಿಯಾಗಿ ನೀಚಕುಲದಿಂದಲೂ ಹುಟ್ಟಿ ಮುನಿಯು ಧೃತಿವಂತನು, ಉತ್ತಮನು ಹಾಗು ಲಜ್ಜಾವಂತನು ಹಾಗು ಕೆಟ್ಟ ಕಾರ್ಯಗಳಿಂದ ದೂರವಾಗುತ್ತಾನೆ.
11.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ಯಜ್ಞ ಮಾಡುವನೋ, ಆತನಿಗೆ ಅಗತ್ಯವಾಗಿ ಬೇಕಾಗಿರುವುದು ಸತ್ಯವಂತನು, ದಯವಂತನು, ಸಂಯಮಿಯು, ಜ್ಞಾನ ಪಾರಂಗತನು ಹಾಗು ಬ್ರಹ್ಮಚರ್ಯವನ್ನು ಪೂರ್ಣ ಮಾಡಿದ ಮುನಿಗೆ ಮನಸಾರೆ ಹವ್ಯ (ದಾನ) ನೀಡಬೇಕು.
12.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ಯಜ್ಞ ಮಾಡುವನೋ, ಆತನಿಗೆ ಬೇಕಾಗಿರುವುದು ಲಾಳಿ ಸಮಾನವಾದ ಋಜುವಂತನು, ಎರಡನೆಯದಾಗಿ ಕಾಮಭೋಗವನ್ನು ವಜರ್ಿಸಿದ ಸಂಯಮಿ, ಅನಿಕೇತನನಾಗಿ ಸಂಚರಿಸುವ ಮುನಿಗೆ ಮನಸಾರೆ ಹವ್ಯ (ದಾನ) ನೀಡಬೇಕು.
13.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ಯಜ್ಞ ಆಚರಿಸುವನೋ ಆತನಿಗೆ ಬೇಕಾಗಿರುವಂತಹ ವ್ಯಕ್ತಿಯು ಗ್ರಹಣ ವಿಮುಕ್ತ ಚಂದಿರನಂತೆ ರಾಗರಹಿತನೂ, ಇಂದ್ರಿಯ ಸಂಯಮ ಹೊಂದಿದ ಮುನಿಗೆ ಮನಸಾರೆ ದಾನ (ಹವ್ಯ) ನೀಡಲಿ.
14.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ಯಜ್ಞ ಆಚರಿಸುವನೋ, ಆತನಿಗೆ ಬೇಕಾಗಿರುವಂತಹ ವ್ಯಕ್ತಿಯು ಸದಾ ಸ್ಮೃತಿವಂತನೂ, ಮಮತ್ವ ಮೀರಿರುವವನೂ, ಸಂಸಾರ ಅನಾಸಕ್ತನು ಆದ ಸಂಚಾರಿ ಮುನಿಗೆ ಮನಸಾರೆ ಹವ್ಯ (ದಾನ) ನೀಡಲಿ.
15.          ಯಾರು ವಿಷಯಗಳನ್ನು ತ್ಯಜಿಸಿರುವರೋ, ನಿರ್ಭಯರಾಗಿ ಸಂಚರಿಸುವರೋ, ಯಾರು ಜನ್ಮ-ಮೃತ್ಯುವಿನ ಅಂತ್ಯವನ್ನು ಅರಿತಿರುವರೋ, ಉಪಶಾಂತರೋ, ಗಂಭೀರವಾದ ಜಲಾಶಯದ ರೀತಿ ಇರುವ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
16.          ಸತ್ಪರುಷರೊಂದಿಗೆ ಸಮಾನ ವ್ಯವಹಾರ ಮಾಡುವವರು, ದುರ್ಜನರೊಂದಿಗೆ ದೂರವಿರುವ ತಥಾಗತರೂ ಅನಂತ ಪ್ರಜ್ಞಾವಂತರಾಗಿದ್ದಾರೆ. ಈ ಲೋಕ ಅಥವಾ ಪರಲೋಕದ ಆಸಕ್ತಿಯಿಲ್ಲದೆ ಇರುವ ತಥಾಗತರೆ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
17.          ಯಾರಲ್ಲಿ ಮಾಯಾವಿತನವಿಲ್ಲವೋ, ಅಭಿಮಾನವೂ ಇಲ್ಲವೋ, ಲೋಭ, ಅಹಂಕಾರ ಮತ್ತು ತೃಷ್ಣೆಗಳೂ ಇಲ್ಲವೋ ಕ್ರೋಧದಿಂದ ದೂರಾಗಿ ಉಪಶಾಂತರಾಗಿರುವರೋ ಮತ್ತು ಯಾವ ಬ್ರಾಹ್ಮಣರು ಶೋಕಕೂಪದ ಮಲವನ್ನು ದೂರೀಕರಿಸಿರುವರೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
18.          ಯಾರ ಮನಸ್ಸಿನಲ್ಲಿ ಆಸಕ್ತಿಗಳು ವಜ್ರ್ಯವಾಗಿವೆಯೋ, ಯಾರಲ್ಲಿ ಯಾವುದೇ ಪ್ರಕಾರದ ಪರಿಗ್ರಹವಿಲ್ಲವೋ ಹಾಗು ಈ ಲೋಕದ ಪರಲೋಕದ ಆಸಕ್ತಿರಹಿತರಾದ ತಥಾಗತರು ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿರುವರು.
19.          ಯಾರು ಸಮಾಹಿತ (ಏಕಾಗ್ರತೆ) ದಿಂದ ಲೋಕದ ಪ್ರವಾಹವನ್ನು ದಾಟಿರುವರೋ ಹಾಗು ಸಮ್ಮಾ ದೃಷ್ಟಿಯಿಂದ ಧರ್ಮವನ್ನು ಅರಿತಿರುವರೋ, ಅಂತಹ ಕ್ಷೀಣಾಸವರು ಮತ್ತು ಅಂತಿಮ ಶರೀರ ಧಾರಿಯು ಆದಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
20.          ಯಾರು ಭವಾಸವ ಹಾಗು ಕಟುವಚನವು ನಷ್ಟವಾಗಿದೆಯೋ, ಅಸ್ತವಾಗಿದೆಯೋ, ಇಲ್ಲವಾಗಿದೆಯೋ ಅಂತಹ ಜ್ಞಾನಿ ಸರ್ವರೀತಿಯಿಂದ ಯುಕ್ತವಾದ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
21.          ಯಾರು ರಾಗಾದಿ ಆಸಕ್ತಿಗಳಿಂದ ಮೀರಿದವರೊ, ಯಾರಲ್ಲಿ ಆಸಕ್ತಿಗಳು ಇಲ್ಲವೋ, ಯಾರು ಅಭಿಮಾನಿಗಳಲ್ಲಿ ಅಭಿಮಾನ ಶೂನ್ಯರೋ, ಯಾರು ದುಃಖ ಮತ್ತು ಅದರ ಉತ್ಪತ್ತಿ ಕ್ಷೇತ್ರವನ್ನು ಅರಿತಿರುವರೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
22.          ಯಾರು ತೃಷ್ಣಾರಹಿತರೋ, ನಿಬ್ಬಾಣ ದಶರ್ಿಗಳೋ, ಪರರ ದೃಷ್ಟಿಗಳಿಂದ ಮೀರಿಹೋಗಿರುವರೋ ಮತ್ತು ಯಾರಿಗೆ ಎಲ್ಲಿಯೂ ಅಲ್ಪವೋ, ವಿಷಯ ಅವಲಂಬನೆಯಿಲ್ಲವೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
23.          ಜ್ಞಾನದಿಂದ ಯಾರಲ್ಲಿ ಆದಿಯಿಂದ ಅಂತ್ಯದವರೆಗೆ ವಾಸನೆಗಳು ನಷ್ಟವಾಗಿದೆಯೋ, ಅಸ್ತವಾಗಿವೆಯೋ, ಯಾರು ಶಾಂತರೋ ಮತ್ತು ಆಸಕ್ತಿ ಕ್ಷಯರಾದ ವಿಮುಕ್ತರೋ ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
24.          ಯಾರು ಜನ್ಮ ಕ್ಷಯವನ್ನು ನೋಡಿರುವರೋ, ಸರ್ವಲೋಕದ ಬಂಧನಗಳನ್ನು ಮತ್ತು ರಾಗದ ಮಾರ್ಗಗಳನ್ನು ದೂರೀಕರಿಸಿರುವರೋ, ಯಾರು ಶುದ್ಧರೋ, ನಿದರ್ೊರ್ಷರೋ, ವಿಮಲರೋ ಮತ್ತು ನಿರ್ಮಲರೋ ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
25.          ಯಾರು ತನ್ನಲ್ಲಿ ಆತ್ಮದ ಇಲ್ಲದಿರುವಿಕೆಯನ್ನು ಸ್ಪಷ್ಟವಾಗಿ ಅರಿತಿರುವರೋ, ಸಮಾಧಿ ಸಂಪನ್ನರೋ, ಋಜುಗಾಮಿಯೋ ಮತ್ತು ಸ್ಥಿರಚಿತ್ತರೋ, ಅಂತಹ ತೃಷ್ಣಾರಹಿತರೂ, ಸಂಪೂರ್ಣವಾಗಿ ಸಂಶಯರಹಿತರಾದ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
26.          ಯಾರಲ್ಲಿ ಯಾವುದೇ ಪ್ರಕಾರದ ಮೋಹವಿಲ್ಲವೋ ಮತ್ತು ಸರ್ವಧರ್ಮಗಳಲ್ಲಿ ಜ್ಞಾನದಶರ್ಿಯೋ, ಯಾರು ಅಂತಿಮ ಶರೀರಧಾರಿಯೋ, ಯಾರು ಸವರ್ೊತ್ತಮ ಕಲ್ಯಾಣಕಾರಿಯಾದ ಸಂಭೋದಿಯ ಪ್ರಾಪ್ತಿ ಮಾಡಿರುವರೋ, ಇಷ್ಟು ಮಾತ್ರದಿಂದಲೆ ಯಕ್ಷರ (ಪುರುಷನ) ಶುದ್ಧಿಯಾಗುತ್ತದೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
27.          ಬ್ರಾಹ್ಮಣ - ತಮ್ಮಂತಹ ಜ್ಞಾನಪಾರಂಗತರನ್ನು ಪಡೆದು ನನ್ನ ಯಜ್ಞ ಪೂರ್ಣವಾಗಲಿ. ತಾವು ಸಾಕ್ಷಾತ್ ಬ್ರಹ್ಮರಾಗಿರುವಿರಿ. ಭಗವಾನ್, ನನ್ನ ಬೋಜನ ಸ್ವೀಕರಿಸಿ, ನನ್ನ ಪುರಿ ಹಾಗು ಅವಲಕ್ಕಿಯನ್ನು ಸೇವಿಸಿ.
28.          ಭಗವಾನರು - ಧಮರ್ೊಪದೇಶ ನೀಡಿದ ನಂತರದ ಭೋಜನ ನನಗಾಗಿ ಅಭೋಜ್ಯವಾಗಿದೆ. ಬ್ರಾಹ್ಮಣನೇ ಆಳವಾದ ಜ್ಞಾನಿಗಳಿಗೆ ಆ ರೀತಿ ಸೇವಿಸುವುದು ನಿಯಮವಲ್ಲ. ಬುದ್ಧರು ಧಮರ್ೊಪದೇಶದ ನಂತರ ಪ್ರಾಪ್ತವಾದ ಭೋಜನವನ್ನು ತ್ಯಜಿಸುತ್ತಾರೆ. ಬ್ರಾಹ್ಮಣ! ಧರ್ಮದಲ್ಲಿ ವಿದ್ಯಾಮಾನರಾಗಿರುವವರಿಗೆ ಇದೇರೀತಿಯಾಗಿದೆ.
29.          ಜ್ಞಾನಿ, ಮಹಷರ್ಿ, ಕ್ಷೀಣಾಸವ ಮತ್ತು ಚಂಚಲಿತ ರಹಿತನಾದ ನನಗಾಗಿ ಬೇರೆಯ ಅನ್ನ ಮತ್ತು ಪೇಯವನ್ನು ನೀಡು. ಪುಣ್ಯಾಪೇಕ್ಷೆಗೆ ಇದು ಅತ್ಯುತ್ತಮ ಕ್ಷೇತ್ರವಾಗಿದೆ.
30.          ಬ್ರಾಹ್ಮಣ - ಬಹಳ ಒಳ್ಳೆಯದು ಭಗವಾನ್. ನಾನು ಇದನ್ನು ತಿಳಿಯಲು ಅಪೇಕ್ಷಿಸುತ್ತೇನೆ. ಏನೆಂದರೆ ನನ್ನಂತಹವನ ದಕ್ಷಿಣೆಯನ್ನು ಯಾರು ಸ್ವೀಕರಿಸುವರು. ಹಾಗು ತಮ್ಮ ಧರ್ಮವನ್ನು ಗ್ರಹಿಸಿ ನಾನು ಯಜ್ಞದ ಸಮಯದಲ್ಲಿ ಯಾರನ್ನು ಹುಡುಕಲಿ.
31.          ಭಗವಾನರು ಯಾರಲ್ಲಿ ಹಿಂಸೆ ಭಾವವಿಲ್ಲವೋ, ಯಾರ ಚಿತ್ತವು ರಾಗರಹಿತವೋ, ಯಾರು ಕಾಮಭೋಗಗಳಿಂದ ಮುಕ್ತರೋ, ಯಾರಲ್ಲಿ ಆಲಸ್ಯವೂ ಇಲ್ಲವೋ.
32.          ಯಾರು ವಾಸನೆಗಳ ನಾಶಕರ್ತರೋ, ಜನ್ಮ ಹಾಗು ಮೃತ್ಯುವಿನ ಜ್ಞಾನಿಗಳು, ಯಾರು ಮೌನವ್ರತಧಾರಿಗಳಾದ ಮುನಿಯೋ, ಅಂತಹವನು ಯಜ್ಞಕ್ಕೆ ಬಂದಮೇಲೆ.
33.          ಕಣ್ಣುಗಳನ್ನು ಕೆಳಗೆ ಮಾಡಿ (ಪಾದವನ್ನು ದೃಷ್ಟಿಸುತ್ತಾ) ಎರಡು ಹಸ್ತಗಳನ್ನು ಜೋಡಿಸಿ ನಮಸ್ಕರಿಸು. ಅನ್ನ-ಪೇಯದಿಂದ ಅವರಿಗೆ ಪೂಜಿಸು. ಈ ರೀತಿಯ ದಕ್ಷಿಣೆಯು ಸಫಲವಾಗುತ್ತದೆ.
34.          ಬ್ರಾಹ್ಮಣ - ಬುದ್ಧರಾದ ತಾವೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿರುವಿರಿ. ತಾವೇ ಅತ್ಯುತ್ತಮ ಪುಣ್ಯಕ್ಷೇತ್ರ ಆಗಿದ್ದೀರಿ. ಸರ್ವ ಲೋಕಗಳಿಗೂ ಪೂಜ್ಯರಾಗಿರುವಿರಿ. ತಮಗೆ ದಾನ ನೀಡುವುದು ಮಹಾ ಫಲದಾಯಕವಾಗಿದೆ.
                ಆಗ ಸುಂದರಿಕ ಭಾರದ್ವಾಜ ಬ್ರಾಹ್ಮಣನು ಭಗವಾನರಿಗೆ ಈ ರೀತಿ ಹೇಳಿದನು - ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನಗೆ ಪ್ರವಜ್ರ್ಯವನ್ನು ನೀಡುವಂತಾಗಲಿ, ಉಪಸಂಪದವು ದೊರೆಯುವಂತಾಗಲಿ.
                ನಂತರ ಸುಂದರಿಕ ಭಾರದ್ವಾಜನು ಭಗವಾನರಿಂದ ಪ್ರವಜ್ರ್ಯ ಪಡೆದನು, ಉಪಸಂಪದ ಪಡೆದನು. ಉಪಸಂಪದ ಪಡೆದ ಕೆಲವೇ ದಿನಗಳಲ್ಲಿ ಆಯುಷ್ಮಂತ ಭಾರದ್ವಾಜನು ಏಕಾಂತದಲ್ಲಿ ವಾಸಿಸಿ, ಸಂಯಮಿ, ಅಪ್ರಮಾದಿ ಧ್ಯಾನ ವಿಧಿಗಳಲ್ಲಿ ಮಗ್ನನಾದನು. ನಂತರ ಯಾವ ಪರಮ ಅರ್ಥವನ್ನು ಪಡೆಯಲು ಕುಲಪುತ್ರರು ಮನೆ ತ್ಯಜಿಸಿ ಪ್ರವಜರ್ಿತರಾಗಿ ಸಾಧನಶೀಲರಾಗುವರೋ, ಅಂತಹ ಅನುತ್ತರ ಬ್ರಹ್ಮಚರ್ಯದ ಅಂತಿಮ ಫಲವನ್ನು ಸ್ವಯಂ ಜ್ಞಾನವನ್ನು ಸಾಕ್ಷಾತ್ಕರಿಸಿದನು. ಹಾಗೆಯೇ ವಿಮುಕ್ತಿ ಜ್ಞಾನವು ಲಭಿಸಿತು- ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದನ್ನು ಮಾಡಿದೆ, ಯಾವ ಶೇಷವೂ ಉಳಿದಿಲ್ಲ. ಆಯುಷ್ಮಂತ ಭಾರದ್ವಾಜನು ಅರಹಂತರಲ್ಲಿ ಒಬ್ಬನಾದನು.

ಇಲ್ಲಿಗೆ ಸುಂದರಿಕ ಭಾರದ್ವಾಜ ಸುತ್ತ ಮುಗಿಯಿತು.

No comments:

Post a Comment