Friday 23 January 2015

dvayataanuppassana sutta in kannada (12. ದ್ವಯತಾನುಪ್ಪಸ್ಸನಾ ಸುತ್ತ)

12. ದ್ವಯತಾನುಪ್ಪಸ್ಸನಾ ಸುತ್ತ
                (ಈ ಸುತ್ತದಲ್ಲಿ ಪಟಿಚ್ಛಸಮುಪ್ಪಾದದ ಅನುಸಾರವಾಗಿ ದುಃಖದ ಉತ್ಪತ್ತಿ ಹಾಗು ನಿರೋಧದ ಬಗ್ಗೆ ಅರಿವು ಮೂಡಿಸಿದ್ದಾರೆ)

                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯ ಪೂರ್ವ ಆರಾಮದ ಮಿಗಾರ ಮಾತಾರ ಪ್ರಸಾದದಲ್ಲಿ ವಾಸಿಸುತ್ತಿದ್ದರು. ಒಮ್ಮೆ ಭಗವಾನರು ಪೂಣರ್ಿಮೆಯ ರಾತ್ರಿಯಲ್ಲಿ ಉಪೋಸಥಕ್ಕಾಗಿ ತೆರೆದ ಮೈದಾನದಲ್ಲಿ ಭಿಕ್ಷು ಸಂಘದ ಸಮೇತ ಕುಳಿತಿದ್ದರು. ಆಗ ಭಗವಾನರು ಮೌನದಿಂದ ಕೂಡಿದ ಭಿಕ್ಷು ಸಂಘಕ್ಕೆ ಈ ರೀತಿ ಸಂಬೋಧಿಸಿದರು-
                ಭಿಕ್ಷುಗಳೇ, ಈ ಆರ್ಯರ ಉತ್ತಮ ಸಂಬೋಧಿಯ ಕಡೆ ಕರೆದೊಯ್ಯುವ ಕಲ್ಯಾಣಕಾರಿ ಧಮ್ಮವನ್ನು ಕೇಳುವುದರಿಂದ ಪ್ರಯೋಜನ ಏನಿದೆ? ಹೀಗೆ ಕೇಳಿದವರಿಗೆ ನೀವು ತಿಳಿಯಪಡಿಸುವುದೇನೆಂದರೆ ಇದರಿಂದ ಎರಡು ಧಮ್ಮಗಳ ಯಥಾರ್ಥ ಜ್ಞಾನದ ಲಾಭವಾಗುವುದು. ಯಾವುದು ಎರಡು ಧಮ್ಮಗಳು ತಿಳಿಯಪಡಿಸಬೇಕಾಗಿರುವುದು?
                (1) ದುಃಖ ಮತ್ತು ದುಃಖದ ಮೂಲ (ಹೇತು). ಇದು ಒಂದು ಅನುಪಶ್ಶನ (ಚಿಂತನೆ). ದುಃಖನಿರೋಧ ಮತ್ತು ದುಃಖ ನಿರೋಧದ ಕಡೆ ಕೊಂಡೊಯ್ಯುವ ಮಾರ್ಗ. ಇದು ಎರಡನೆಯ ಅನುಪಶ್ಶನವಾಗಿದೆ. ಭಿಕ್ಷುಗಳೇ, ಈ ಎರಡು ಮಾತುಗಳನ್ನು (ವಿಷಯ) ಮನನ ಮಾಡುವಂತಹ ಅಪ್ರಮತ್ತ ಪ್ರಯತ್ನಶೀಲನು ತತ್ಪರನು ಆದ ಭಿಕ್ಷುವು ಎರಡು ಫಲಗಳಲ್ಲಿ ಒಂದನ್ನು ಪಡೆಯಬಲ್ಲವನಾಗುತ್ತಾನೆ. ಅದೆಂದರೆ: ಈ ಜನ್ಮದಲ್ಲೇ ಪೂರ್ಣ ಜ್ಞಾನ ಅಥವಾ ಅಲ್ಪ ವಾಸನೆಗಳ ಶೇಷವಿರುವ ಅನಗಾಮಿತ್ವ ಭಗವಾನರು ಹೀಗೆ ಹೇಳಿದರು. ಸುಗತರು ಹೀಗೆ ಹೇಳಿ ನಂತರ ಮತ್ತೆ ಹೀಗೆ ಮುಂದುವರಿಸಿದರು-
1.            ಯಾರು ದುಃಖವನ್ನು ಅರಿಯುವುದಿಲ್ಲವೋ ಹಾಗು ದುಃಖದ ಉತ್ಪತ್ತಿ ಸಹಾ ಅರಿಯುವುದಿಲ್ಲವೋ ಮತ್ತು ಎಲ್ಲಿ ಸರ್ವದುಃಖಗಳು ಸಂಪೂರ್ಣವಾಗಿ ಶಾಂತವಾಗಿವೆಯೋ ಮತ್ತು ದುಃಖದ ನಿರೋಧವಾಗಿ ಶಾಂತವಾಗುವಂತಹ ಮಾರ್ಗವನ್ನು ಸಹಾ ಅವರು ಅರಿಯಲಾರರು.
2.            ಅವರು ಚಿತ್ತ ಮತ್ತು ಪ್ರಜ್ಞೆಯ ವಿಮುಕ್ತಿಯಿಂದಲೂ ಸಹಾ ರಹಿತರಾಗಿದ್ದಾರೆ. ಅವರು ದುಃಖದ ಅಂತ್ಯ ಮಾಡಲು ಅಯೋಗ್ಯರಾಗಿದ್ದಾರೆ. ಅವರೇ ಜನ್ಮಜರಾದಲ್ಲಿ ಬೀಳುವವರಾಗಿದ್ದಾರೆ.
3.            ಎಲ್ಲಿ ಎಲ್ಲಾ ಪ್ರಕಾರದ ಸಂಪೂರ್ಣ ದುಃಖವು ನಿರುದ್ಧ (ನಾಶ) ವಾಗಿದೆಯೋ, ಅವರು ದುಃಖ, ದುಃಖದ ಉತ್ಪತ್ತಿ ಮತ್ತು ದುಃಖದ ಶಾಂತಿಯ ಮಾರ್ಗವನ್ನು ಅರಿತಿರುತ್ತಾರೆ.
4.            ಅವರು ಚಿತ್ತ ಮತ್ತು ಪ್ರಜ್ಞೆಯ ವಿಮುಕ್ತಿ ಸಂಪನ್ನರಾಗಿರುತ್ತಾರೆ. ಅವರು ದುಃಖದ ಅಂತ್ಯ ಮಾಡಲು ಸಮರ್ಥರಾಗಿದ್ದಾರೆ. ಅವರೇ ಜನ್ಮ-ಜರಾದಲ್ಲಿ ಬೀಳದವರಾಗಿದ್ದಾರೆ.
                (2) ಏನು ಅಂತಹ ಯಾವುದಾದರೂ ದ್ವಿತೀಯ ಕ್ರಮವಿದೆಯೇ, ಆ ಎರಡರ ಅನುಪಶ್ಶನ ಮಾಡಲಾಗುತ್ತದೆಯೆ? ಹೀಗೆ ಕೇಳಿದವರನ್ನು, ಇದೇ ಎಂದು ಹೇಳಬೇಕು. ಯಾವುದದು? ಯಾವ ಯಾವ ದುಃಖವು ಇದೆಯೋ, ಅದೆಲ್ಲವೂ ವಾಸನೆಯಿಂದ (ಕಾರಣದಿಂದ/ಉಪಾದಿ) ಆಗುತ್ತದೆ. ಇದು ಒಂದು ಅನುಪಶ್ಶನ (ಚಿಂತನೆ), ವಾಸನೆಗಳ ಸಂಪೂರ್ಣ ನಿವೃತ್ತಿ ಮತ್ತು ನಿರೋಧದಿಂದ ದುಃಖದ ಉತ್ಪತ್ತಿಯಾಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
5.            ಯಾವ ಲೋಕದಲ್ಲಿ ಅನೇಕ ಪ್ರಕಾರದ ದುಃಖಗಳಿವೆಯೋ ಅವು ವಾಸನೆಯ ಕಾರಣದಿಂದ ಉತ್ಪನ್ನವಾಗುತ್ತದೆ. ಯಾವ ಮೂರ್ಖನು ವಾಸನೆಗಳಲ್ಲಿ ಬೀಳುತ್ತಾನೋ, ಆ ಮೂಡನು ಪ್ರತಿಸಾರಿಯೂ ದುಃಖದಲ್ಲಿ ಬೀಳುತ್ತಾನೆ. ಆದ್ದರಿಂದ ದುಃಖದ ಉತ್ಪತ್ತಿ ಮತ್ತು ಹೇತು (ಮೂಲ) ಅರಿತು ಜನರು ವಾಸನೆಯಲ್ಲಿ ಬೀಳದಿರಲಿ.
                (3) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವುದರಲ್ಲಿ ದುಃಖವಿದೆಯೋ, ಅದೆಲ್ಲವೂ ಅವಿದ್ಯೆಯ (ಅಜ್ಞಾನ) ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆ. ಅವಿದ್ಯೆಯ ಸಂಪೂರ್ಣ ನಿವೃತ್ತಿಯಿಂದ, ನಿರೋಧದಿಂದ, ದುಃಖದ ಉತ್ಪನ್ನವಾಗುವುದಿಲ್ಲ. ಇದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
6.            ಯಾವ ಜನರು ಜನ್ಮ-ಮೃತ್ಯು ರೂಪಿ ಸಂಸಾರದಲ್ಲಿ ಬಾರಿಬಾರಿಯು ಬೀಳುತ್ತಿರುವರೋ ಮತ್ತು ಈ ಲೋಕ ಹಾಗು ಪರಲೋಕದಲ್ಲಿ ಸುತ್ತಾಡುತ್ತಿರುತ್ತಾರೋ ಅವರಿಗೆ ಅವಿದ್ಯೆಯೇ ಅವರ ಗತಿಗೆ ಮೂಲ ಆಗಿದೆ.
7.            ಈ ಅವಿದ್ಯೆಯು ಮಹಾ ಮೋಹವಾಗಿದೆ. ಅದರ ಕಾರಣದಿಂದ ಚಿರಕಾಲದಿಂದ ಸುತ್ತಾಡುತ್ತಿದ್ದಾರೆ. ಯಾವ ಜೀವಿಗಳೂ ವಿದ್ಯೆ ಪ್ರಾಪ್ತಿ ಮಾಡಿದ್ದಾರೋ ಅವರು ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (4) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅದೆಲ್ಲವೂ ಸಂಖಾರದ ಕಾರಣದಿಂದಾಗಿದೆ (ಮನೋನಿಮರ್ಿತಿ). ಸಂಖಾರದ ಸಂಪೂರ್ಣ ನಿರೋಧದಿಂದ ದುಃಖ ಇರುವುದಿಲ್ಲ. ಇದು ಎರಡನೆಯ ಚಿಂತನೆಯಗಿದೆ. ಶಾಸ್ತರು ಮತ್ತೆ ಇದನ್ನು ಹೇಳಿದರು.
8.            ಯಾವುದೆಲ್ಲವೂ ದುಃಖವಿದೆಯೋ, ಅದೆಲ್ಲಾ ಸಂಖಾರ (ಮನೋ ನಿಮರ್ಿತಿ)ದ ಕಾರಣದಿಂದ ಆಗುತ್ತದೆ. ಸಂಖಾರದ ನಿರೋಧದಿಂದ ದುಃಖ ಉತ್ಪತ್ತಿ ಆಗುವುದಿಲ್ಲ.
9.            ಸಂಖಾರಗಳ ಕಾರಣದಿಂದ ದುಃಖವುಂಟಾಗುತ್ತದೆ. ಈ ದುಷ್ಪರಿಣಾಮವನ್ನು ಅರಿತು ಸರ್ವ ಸಂಖಾರಗಳ ಶಾಂತಿ ಮತ್ತು ಸಂಜ್ಞೆಯ ನಿರೋಧದಿಂದ ದುಃಖದ ಕ್ಷಯವಾಗುತ್ತದೆ. ಇದನ್ನು ಯಥಾರ್ಥವಾಗಿ ಅರಿತು...
10.          ಸಮ್ಯಕ್ ದಶರ್ಿಯು, ಜ್ಞಾನಿಯು, ಪಂಡಿತರು ಚೆನ್ನಾಗಿ ಅರಿತು ಮಾರನ ಸಂಯೋಗವನ್ನು ಜಯಿಸಿ ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (5) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅದೆಲ್ಲವೂ ವಿಞ್ಞಾಣದ ಕಾರಣದಿಂದ ಆಗುವುದು. ಇದು ಒಂದು ಚಿಂತನೆಯಾಗಿದೆ. ವಿಞ್ಞಾಣದ ಸಂಪೂರ್ಣ ನಿರೋಧದಿಂದ ದುಃಖ ಉತ್ಪನ್ನ ಆಗುವುದಿಲ್ಲ. ಇದು ಒಂದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
11.          ಯಾವೆಲ್ಲಾ ದುಃಖವು ಉತ್ಪನ್ನವಾಗುವುದೋ, ಅದೆಲ್ಲವೂ ವಿಞ್ಞಾಣದ ಕಾರಣದಿಂದ ಆಗುತ್ತದೆ. ವಿಞ್ಞಾಣದ ನಿರೋಧದಿಂದ ದುಃಖ ಉತ್ಪನ್ನವಾಗುವುದಿಲ್ಲ.
12.          ವಿಞ್ಞಾಣ ಕಾರಣದಿಂದ ದುಃಖವಾಗುವುದು. ಇದರ ದುಷ್ಟರಿಣಾಮಗಳನ್ನು ಅರಿತು ವಿಞ್ಞಾಣದ ನಿರೋಧದಿಂದ ಭಿಕ್ಷು ತೃಷ್ಣಾರಹಿತನಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡುವನು.
                (6) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ ಅದೆಲ್ಲವೂ ಸ್ಪರ್ಶದ ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆಯಾಗಿದೆ. ಸ್ಪರ್ಶದ ಸಂಪೂರ್ಣ ನಿರೋಧದಿಂದ ದುಃಖದ ಉತ್ಪನ್ನವಾಗುವುದಿಲ್ಲ. ಇದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಇದನ್ನು ಹೇಳಿದರು.
13.          ಯಾರು ಸ್ಪರ್ಶಗಳಲ್ಲಿ ಸಂಲಗ್ನರಾಗಿರುವರೋ, ಅವರು ಸಂಸಾರ ಶ್ರೋತದ ಅನುಸಾರವಾಗಿ ಚಲಿಸುವವರಾಗಿದ್ದಾರೆ. ಅವರು ಸುಮಾರ್ಗದಲ್ಲಿ ಚಲಿಸುವವರಾಗಿದ್ದಾರೆ. ಅವರೆಲ್ಲರೂ ಸಾಂಸಾರಿಕ ಬಂಧನಗಳು, ಕ್ಷಯದಿಂದ ದೂರವಿದ್ದಾರೆ.
14.          ಯಾರು ಸ್ಪರ್ಶವನ್ನು ಆಳವಾಗಿ ಅರಿತು ಜ್ಞಾನಪೂರ್ವಕ ಉಪಶಮದಲ್ಲಿ ರತರೋ, ಅವರು ಸ್ಪರ್ಶ ನಿರೋಧದಿಂದ ತೃಷ್ಣಾರಹಿತರಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿರುವರು.
                (7) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅವೆಲ್ಲವೂ ವೇದನೆಯ ಕಾರಣದಿಂದ ಉತ್ಪನ್ನವಾಗುವುದು. ಇದು ಒಂದು ಅನುಪಶ್ಶನ (ಚಿಂತನೆ) ವಾಗಿದೆ. ವೇದನೆಯ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಚಿಂತನೆಯಾಗಿದೆ. ನಂತರ ಶಾಸ್ತರು ಹೀಗೆ ಹೇಳಿದರು:
15.          ಸುಖ, ದುಃಖ ಮತ್ತು ತಟಸ್ಥ (ಉಪೇಕ್ಷಾ)ಗಳ ರೂಪದಲ್ಲಿ ಯಾವೆಲ್ಲವೂ ಆಂತರ್ಯದಲ್ಲಿ ಮತ್ತು ಬಾಹ್ಯದಲ್ಲಿ ವೇದನೆಗಳಿವೆ.
16.          ಅವೆಲ್ಲವನ್ನು ನಶ್ವರ ಮತ್ತು ಕ್ಷಣಭಂಗುರ ಎಂದು ಅರಿತು ಇದು ದುಃಖವಾಗಿದೆ ಎಂದು ಸ್ಪಷ್ಟವಾಗಿ ಅರಿತು, ವಿಶಾಲವಾಗಿ ಅವುಗಳ ನಷ್ಟವನ್ನು (ಕ್ಷಯ) ನೋಡಿ ಈ ಪ್ರಕಾರದಿಂದ ಅದರಿಂದ ವಿರಕ್ತನಾಗುತ್ತಾನೆ. ಆ ಭಿಕ್ಷುವು ವೇದನೆಗಳ ಕ್ಷಯದಿಂದ ತೃಷ್ಣಾರಹಿತನಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡುತ್ತಾನೆ.
                (8) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲವೂ ದುಃಖವಿದೆಯೋ, ಅವೆಲ್ಲವೂ ತೃಷ್ಣೆಯ ಕಾರಣದಿಂದ ಅಗುತ್ತದೆ. ಇದು ಒಂದು ಚಿಂತನೆಯಾಗಿದೆ. ತೃಷ್ಣೆಯ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ನುಡಿದರು.
17.          ತೃಷ್ಣೆಯ ಸಂಗಡ ಪುರುಷನು ದೀರ್ಘಕಾಲದಿಂದ ಈ ಲೋಕದಲ್ಲಿ ಹಾಗು ಪರಲೋಕದಲ್ಲಿ ಸುತ್ತಾಡುತ್ತಿದ್ದಾನೆ. ಮತ್ತೆ ಸಂಸಾರವನ್ನು ದಾಟಲು ಅಸಮರ್ಥನಾಗಿದ್ದಾನೆ.
18.          ತೃಷ್ಣೆಯ ಕಾರಣದಿಂದ ದುಃಖದ ಉತ್ಪನ್ನ ಆಗುವುದು. ಈ ದುಷ್ಟರಿಣಾಮವನ್ನು ಅರಿತು ಭಿಕ್ಷುವಿಗೆ ಬೇಕಾಗಿರುವುದು ಏನೆಂದರೆ ತೃಷ್ಣಾರಹಿತ ಮತ್ತು ಆಸಕ್ತರಹಿತನಾಗಿ ಸ್ಮೃತಿ (ಎಚ್ಚರಿಕೆ)ಯಿಂದ ಸಂಚರಿಸಲಿ.
                (9) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅವೆಲ್ಲವೂ ಉಪಾದಾನದ (ಅಂಟುವಿಕೆಯ) ಕಾರಣದಿಂದ ಉತ್ಪನ್ನವಾಗುತ್ತದೆ. ಇದು ಒಂದು ಅನುಪಶ್ಶನವಾಗಿದೆ. ಉಪಾದಾನದ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿಯಾಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಹೀಗೆ ಮತ್ತೆ ನುಡಿದರು.
19.          ಉಪಾದಾನದ (ವಿಷಯಗಳಲ್ಲಿ ಪ್ರಬಲವಾಗಿ ಅಂಟುವಿಕೆ) ಕಾರಣದಿಂದ ಭವ (ಜನ್ಮ ಸಂಭವಿಸುವಿಕೆ) ವಾಗುತ್ತದೆ ಮತ್ತು ಜೀವಿಗಳಿಗೆ ದುಃಖವು ಪ್ರಾಪ್ತಿ ಆಗುತ್ತದೆ. (ಜನ್ಮ) ಉತ್ಪನ್ನನಾದವನಿಗೆ ಮೃತ್ಯುವು ಆಗುತ್ತದೆ. ಇದೇ ದುಃಖದ ಉತ್ಪತ್ತಿ ಆಗಿದೆ.
20.          ಆದ್ದರಿಂದ ಉಪಾದಾನದ ಕ್ಷಯದಿಂದ ಪಂಡಿತನು ಜನ್ಮಕ್ಷಯವೆಂದು ಆಳವಾಗಿ ಅರಿಯುತ್ತಾನೆ ಹಾಗು ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (10) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅವೆಲ್ಲವೂ ಕರ್ಮಯುಕ್ತ ಪ್ರಯತ್ನದಿಂದ ಉತ್ಪನ್ನವಾಗುತ್ತದೆ. ಇದು ಒಂದು ಚಿಂತನೆಯಾಗಿದೆ. ಕರ್ಮಯುಕ್ತ ಪ್ರಯತ್ನದಿಂದ ಸಂಪೂರ್ಣವಾಗಿ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
21.          ಯಾವುದೆಲ್ಲವೂ ದುಃಖ ಉತ್ಪನ್ನವಾಗುವುದೋ, ಅವೆಲ್ಲವೂ ಕರ್ಮಯುಕ್ತ ಪ್ರಯತ್ನದಿಂದ ಉತ್ಪನ್ನವಾಗುತ್ತದೆ. ಪ್ರಯತ್ನ (ಕರ್ಮ)ದ ನಿರೋಧದಿಂದ ದುಃಖದ ಉತ್ಪತ್ತಿ ಆಗಲಾರದು.
22-23. ದುಃಖವು ಕ್ರಿಯೆಯ (ಪ್ರಯತ್ನ) ಕಾರಣದಿಂದ ಆಗುತ್ತದೆ. ಇದರ ದುಷ್ಪರಿಣಾಮವನ್ನು ಅರಿತು ಸರ್ವ ಪ್ರಯತ್ನಗಳನ್ನು ತ್ಯಜಿಸಿ ಕರ್ಮಯುಕ್ತ ಪ್ರಯತ್ನರಹಿತನಾಗಿ ವಿಮುಕ್ತನಾಗಲಿ, ಭವತೃಷ್ಣೆಯ ವಿನಾಶದಲ್ಲಿ ಶಾಂತಚಿತ್ತ ಭಿಕ್ಷು ನಿರತನಾಗಲಿ ಮತ್ತು ಜನ್ಮರೂಪಿ ಸಾಗರವನ್ನು ದಾಟಲಿ. ಆತನು ಮತ್ತೆ ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (11) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ ಅವೆಲ್ಲವೂ ಆಹಾರದ (ಮಾನಸಿಕ ಆಹಾರ) ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆ, ಆಹಾರದ ಸಂಪೂರ್ಣತೆ ನಿರೋಧದಿಂದ ದುಃಖದ ಉತ್ಪತ್ತಿ ಆಗಲಾರದು. ಇದು ಎರಡನೆಯ ಅನುಪಶ್ಶನ. ಹೀಗೆ ನುಡಿದು ಶಾಸ್ತರು ಹೀಗೆ ಹೇಳಿದರು-
24.          ಯಾವೆಲ್ಲವೂ ದುಃಖ ಉತ್ಪನ್ನವಾಗುವುದೋ ಅವೆಲ್ಲಾ ಆಹಾರದ (ಸ್ಪರ್ಶ, ಇಚ್ಛೆ, ವಿನ್ಯಾನ) ಕಾರಣದಿಂದ ಉತ್ಪನ್ನವಾಗುತ್ತದೆ. ಆಹಾರದ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ.
25.          ಆಹಾರದಿಂದಲೇ ದುಃಖ, ಇದರ ದುಷ್ಪರಿಣಾಮಗಳನ್ನು ಚೆನ್ನಾಗಿ ಅರಿತು ಆಹಾರದಿಂದ (ವಿಷಯಗಳಿಂದ) ವಿಮುಕ್ತನಾಗಲಿ.
26.          ಚಿತ್ತ ಮಲಗಳ ಕ್ಷಯದಿಂದಲೇ ಆರೋಗ್ಯ (ನಿಬ್ಬಾಣ) ಎಂಬುದನ್ನು ಚೆನ್ನಾಗಿ ಅರಿತು ಸ್ಥಿರ ವ್ಯಕ್ತಿಯು ಜ್ಞಾನಪೂರ್ವಕ ಆಹಾರ ಸೇವಿಸಲಿ (ಕುಶಲ ಚೇತಸಿಕಾ) ಇಂತಹ ವ್ಯಕ್ತಿಯು ಮತ್ತೆ ಜನ್ಮಗ್ರಹಣ ಮಾಡುವುದಿಲ್ಲ.
                (12) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲವೂ ದುಃಖದಿಂದಿದೆಯೋ, ಅವೆಲ್ಲವೂ ಚಂಚಲತೆಯ ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆಯಾಗಿದೆ. ಚಂಚಲತೆಗಳ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಅನುಷ್ಠಾನವಾಗಿದೆ. ಶಾಸ್ತರು ಮತ್ತೆ ಇದನ್ನು ನುಡಿದರು-
27.          ಯಾವೆಲ್ಲವೂ ದುಃಖವು ಸಂಭವಿಸುವುದೋ ಅವೆಲ್ಲವೂ ಚಂಚಲತೆಯ ಕಾರಣದಿಂದ ಆಗುತ್ತದೆ. ಚಂಚಲತೆಯ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ.
28.          ಆದ್ದರಿಂದ ಇದನ್ನು ತ್ಯಜಿಸಿ, ಸಂಖಾರಗಳ ನಿರೋಧ ಮಾಡಿ, ತೃಷ್ಣೆ ಹಾಗು ಆಸಕ್ತಿರಹಿತರಾಗಿ ಸ್ಮೃತಿಯಿಂದ ಭಿಕ್ಷು ಸಂಚರಿಸಲಿ.
                (13) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾರು ತೃಷ್ಣೆಯಲ್ಲಿ ಲಿಪ್ತರಾಗಿರುವರೋ ಅವರಲ್ಲಿ ಚಂಚಲತೆ ಬರುವುದು. ಇದು ಒಂದು ಚಿಂತನೆಯಾಗಿದೆ. ಯಾರು ತೃಷ್ಣೆಯಲ್ಲಿ ನಿಲರ್ಿಪ್ತರೋ ಅವರಿಗೆ ಚಂಚಲತೆ ಇರುವುದಿಲ್ಲ. ಇದು ಎರಡನೆಯ ಚಿಂತನೆ ಆಗಿದೆ. ಶಾಸ್ತರು ಮತ್ತೆ ಇದನ್ನು ನುಡಿದರು-
29.          ಯಾರು ತೃಷ್ಣೆಯಲ್ಲಿ ಲಿಪ್ತರಲ್ಲವೋ ಅವರಲ್ಲಿ ಚಂಚಲತೆ ಇರುವುದಿಲ್ಲ. ಆದರೆ ತೃಷ್ಣೆಯಲ್ಲಿ ಲಿಪ್ತರಾಗಿರುವವರಲ್ಲಿ ಚಂಚಲತೆ ಆಗುತ್ತದೆ. ಅವರು ಈ ಲೋಕ ಹಾಗು ಪರಲೋಕದಲ್ಲಿ ಸುತ್ತಾಡುವಿಕೆಯಿಂದ ಮುಕ್ತಿ ಹೊಂದಲಾರರು.
30.          ತೃಷ್ಣೆಯಲ್ಲಿ ಲಿಪ್ತರಾಗಿರುವುದು ಮಹಾ ಭಯವಾಗಿದೆ. ಈ ದುಷ್ಪರಿಣಾಮವನ್ನು ಚೆನ್ನಾಗಿ ಅರಿತು ತೃಷ್ಣೆಯಿಂದ ನಿಲರ್ಿಪ್ತನಾಗಿ ಮತ್ತು ಅನಾಸಕ್ತನಾಗಿ ಸ್ಮೃತಿಯಿಂದ ಸಂಚರಿಸಲಿ (ವಾಸಿಸಲಿ).
                (14) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಭಿಕ್ಷುಗಳೇ, ರೂಪಲೋಕಕ್ಕಿಂತ ಅರೂಪಲೋಕವು ಶಾಂತಕರವಾಗಿದೆ. ಇದು ಒಂದು ಚಿಂತನೆ, ಅರೂಪಲೋಕಕ್ಕಿಂತ ನಿಬ್ಬಾಣವು ಶಾಂತಕರವಾಗಿದೆ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ನುಡಿದರು-
31.          ಯಾವೆಲ್ಲಾ ಜೀವಿಗಳು ರೂಪಲೋಕದಲ್ಲಿ ಇರುತ್ತವೆಯೋ ಮತ್ತು ಯಾವೆಲ್ಲಾ ಜೀವಿಗಳು ಅರೂಪಲೋಕ ನಿವಾಸಿಗಳೋ, ಅವುಗಳು ನಿರೋಧ (ನಿಬ್ಬಾಣ) ಅರಿಯದೆ ಪುನರ್ಜನ್ಮದಲ್ಲಿ ಬೀಳುತ್ತವೆ.
32.          ಯಾವೆಲ್ಲವೂ ರೂಪವನ್ನು (ದೇಹ) ಅರಿತು (ಚಿತ್ತ) ಅರೂಪದಲ್ಲಿ ಅನಾಸಕ್ತರಾಗಿರುವರೋ, ಯಾರು ನಿಬ್ಬಾಣ ಪ್ರಾಪ್ತಿಮಾಡಿ ವಿಮುಕ್ತರೋ, ಅವರು ಮೃತ್ಯುವನ್ನು ಅಂತ್ಯ ಮಾಡಿರುವರು.
                (15) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಭಿಕ್ಷುಗಳೇ, ದೇವ, ಮಾರ, ಬ್ರಹ್ಮ, ಸಮಣ ಹಾಗು ಬ್ರಾಹ್ಮಣ ಸಹಿತ ಸರ್ವ ಜೀವಿಗಳ ಸಮೂಹವು ಯಾವುದನ್ನು ಸತ್ಯ ಎಂದು ಅರಿತವೋ ಅದನ್ನು ಆರ್ಯರು ಸಮ್ಯಕ್ ಪ್ರಜ್ಞೆಯಿಂದ ಅಸತ್ಯ ಎಂದು ಅರಿತರು. ಇದು ಒಂದು ಅನುಪಶ್ಶನವಾಗಿದೆ. ದೇವ, ಮಾರ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣರ ಸಹಿತ ಸರ್ವಜೀವಿಗಳ ಸಮೂಹವು ಯಾವುದನ್ನು ಅಸತ್ಯ ಎಂದು ಭಾವಿಸಿದ್ದರೋ, ಆರ್ಯರು ಅದನ್ನು ಸಮ್ಯಕ್ ಪ್ರಜ್ಞೆಯಿಂದ ಸತ್ಯ ಎಂದು ಅರಿತರು. ಇದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಹೀಗೆ ನುಡಿದರು-
33.          ಅನಾತ್ಮರಲ್ಲಿ (ತಾನು ಅಲ್ಲದುದರಲ್ಲಿ) ಆತ್ಮವನ್ನು (ತಾನೆಂದು, ನಿತ್ಯವೆಂದು ಭ್ರಮಿಸುವ) ನಂಬಿರುವ ದೇವಸಹಿತ ಲೋಕವನ್ನು ನೋಡಿ, ನಾಮ (ಮನಸ್ಸು) ಮತ್ತು ರೂಪದಲ್ಲಿ (ದೇಹ) ಸಂಲಗ್ನನರಾಗಿರುವ ಜೀವಿಗಳೂ ಇದನ್ನು ಸತ್ಯವೆಂದು ನಂಬುವರು.
34.          ಯಾವುದನ್ನು ಯಾವರೀತಿ ಅರಿಯುವರೋ, ಅದು ಅದಕ್ಕಿಂತ ಭಿನ್ನವಾಗಿದೆ. ಅವರ ಈ ಧಾರಣೆ (ನಂಬಿಕೆ) ಅಸತ್ಯವಾಗುತ್ತದೆ. ಯಾವುದು ಅಸತ್ಯವೋ ಅದು ನಶ್ವರವಾಗಿದೆ.
35.          ನಿಬ್ಬಾಣವು ಅನಕ್ಷರವಾಗಿದೆ. ಆರ್ಯರು ಅದನ್ನು ಸತ್ಯವೆಂದು ಅರಿತಿದ್ದಾರೆ. ಸತ್ಯವನ್ನು ಅರಿತವರು (ಯಾರೇ ಆಗಲಿ) ತೃಷ್ಣಾರಹಿತರಾಗಿ ಪರಿನಿಬ್ಬಾಣ ಪ್ರಾಪ್ತಿಮಾಡುತ್ತಾರೆ.
                (16) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಭಿಕ್ಷುಗಳೇ, ದೇವ, ಮಾರ, ಶ್ರಮಣ ಹಾಗು ಬ್ರಾಹ್ಮಣಸಹಿತ ಸರ್ವಜೀವಿಗಳು ಯಾವುದನ್ನು ಸುಖ ಎಂದು ಅರಿತಿರುವರೋ, ಆರ್ಯರು ಅದನ್ನೇ ಸಮ್ಯಕ್ ಪ್ರಜ್ಞಾದಿಂದ ಯಥಾರ್ಥವಾಗಿ ದುಃಖ ಎಂದು ಅರಿತಿದ್ದಾರೆ. ಇದು ಒಂದು ಅನುಪಶ್ಶನವಾಗಿದೆ. ದೇವ, ಮಾನವ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣ ಸಹಿತ ಸರ್ವ ಜೀವಿಗಳೂ ಯಾವುದನ್ನು ದುಃಖ ಎಂದು ಅರಿತಿರುವರೋ, ಆರ್ಯರು ಅದನ್ನು ಸುಖ ಎಂದು ಯಥಾರ್ಥವಾಗಿ ಅರಿತಿರುವರು. ಇದು ಎರಡನೆಯ ಅನುಪಶ್ಶನವಾಗಿದೆ. ಭಿಕ್ಷುಗಳೇ, ಈ ಎರಡು ಮಾತುಗಳನ್ನು ಮನನ ಮಾಡುವವ ಅಪ್ರಮತ್ತನಾಗಿ, ಪ್ರಯತ್ನಶೀಲನಾಗಿರುವ ತತ್ಪರ ಭಿಕ್ಷು ಎರಡು ಫಲಗಳಲ್ಲಿ ಒಂದನ್ನು ಪ್ರಾಪ್ತಿಮಾಡಬಹುದು. ಒಂದು ಇದೇ ಜನ್ಮದಲ್ಲೇ ಪೂರ್ಣ ಗಂಭೀರ ಜ್ಞಾನ ಅಥವಾ (ಎರಡನೆಯದು) ಅಲ್ಪ ವಾಸನಶೇಷ ಅನಗಾಮಿತ್ವ, ಭಗವಾನರು ಹೀಗೆ ಹೇಳಿದರು, ಸುಗತರು ಹೀಗೆ ಹೇಳಿದರುಶಾಸ್ತರು ಹೀಗೆ ಹೇಳಿದರು-
36-37. ಎಷ್ಟೇ ಇಷ್ಟವಾದ ಪ್ರಿಯವಾದ ಮನಾಪವಾದ (ಮನಸೂರೆಗೊಳ್ಳುವ) ರೂಪ, ಶಬ್ದ, ಗಂಧ, ರಸ ಮತ್ತು ಸ್ಪರ್ಶ ಇದೆಯೋ ಅವೆಲ್ಲವನ್ನು ದೇವಸಹಿತವಾದ ಲೋಕವು ಸುಖವೆಂದು ಪರಿಗಣಿಸಿದೆ. ಮತ್ತು ಎಲ್ಲಿ ಅದರ ನಿರೋಧವಾಗುವುದೋ ಅದನ್ನೇ ಮಿಥ್ಯಾ ಜ್ಞಾನಿಗಳು ದುಃಖವೆಂದು ನಂಬಿದ್ದಾರೆ.
38.          ಪಂಚಖಂದದ (ಅಸ್ತಿತ್ವದ) ನಿರೋಧವನ್ನು ಆರ್ಯರು ಸುಖವೆಂದು ಯಥಾರ್ಥವಾಗಿ ಅರಿತಿರುವರು. ಸಮ್ಯಕ್ ದರ್ಶಕರ ಈ ಮಹೋನ್ನತ ಅನುಭವವು ಲೋಕದ (ಇತರರ) ಅನುಭವಕ್ಕಿಂತ ಭಿನ್ನವಾಗಿದೆ ಹಾಗು ಶ್ರೇಷ್ಠವಾಗಿದೆ.
39.          ಯಾವುದನ್ನು ಪರರು ಸುಖ ಎಂದು ಹೇಳುವರೋ, ಅದನ್ನೇ ಆರ್ಯರು ದುಃಖವೆಂದು ಹೇಳುವರು. ಯಾವುದನ್ನು ಪರರು ದುಃಖವೆಂದು ಹೇಳುವರೋ, ಅದನ್ನೇ ಆರ್ಯರು ಸುಖವೆಂದು ಅರಿಯುವರು. ಅರಿಯುವಿಕೆಯಲ್ಲಿ ದುಷ್ಕರವಾದ ಈ ಧಮ್ಮವನ್ನು ನೋಡಿ, ಅಜ್ಞರಾದ ಜನರು ಈ ವಿಷಯದಲ್ಲಿ ಮೂಢರಾಗಿಯೇ ಇದ್ದಾರೆ.
40.          ಅವಿದ್ಯೆಯಿಂದ ಆವರಿಸಿರುವ ಜನರಿಗೆ ಕತ್ತಲೆಯಾಗಿದೆ ಮತ್ತು ಅಜ್ಞರಿಗೆ ಅಂಧಕಾರಮಯವಾಗಿದೆ. ಸತ್ಪುರುಷರಿಗೆ ಆ ಪ್ರಕಾಶವು ನೋಡಲು ಸಮಾನವಾಗಿರುವಂತೆ (ಅನುಕೂಲವಾಗಿ) ತೆರೆದಿರುತ್ತದೆ. ಧರ್ಮವನ್ನು ಅರಿಯದವರು ಹತ್ತಿರವಿದ್ದರೂ ಸತ್ಯವನ್ನು ಅರಿಯುವುದಿಲ್ಲ.
41.          ಭವರಾಗದಲ್ಲಿ ವಶೀಭೂತರೂ, ಭವಶ್ರೋತದಲ್ಲಿ ಬಿದ್ದಿರುವರು ಮತ್ತು ಮಾರನ ಅಧೀನರಾಗಿರುವ ಜನರಿಗೆ ಈ ಧರ್ಮ ಅರಿಯುವುದು ಅಷ್ಟು ಸುಲಭವಲ್ಲ.
42.          ಆರ್ಯರಿಗೆ ಅತಿರಿಕ್ತವಾಗಿ ಮತ್ತು ಯಾರು ಸಂಬೋಧಿ ಪದಕ್ಕೆ ಅರ್ಹರೋ ಅವರು ಚೆನ್ನಾಗಿ ಅರಿತು ಆಸವರಹಿತರಾಗಿ ಪರಿನಿಬ್ಬಾಣ ಪ್ರಾಪ್ತಿಮಾಡುತ್ತಾರೆ.
                ಭಗವಾನರು ಹೀಗೆ ನುಡಿದರು. ಆ ಭಿಕ್ಷುಗಳು ಆ ಬೋಧನೆಗೆ ಪ್ರಸನ್ನರಾಗಿ ಅನುಮೋದಿಸಿ ಅಭಿನಂದಿಸಿದರು. ಈ ಉಪದೇಶ ಹೇಳುವಾಗ ಅರವತ್ತು ಭಿಕ್ಷುಗಳ ಚಿತ್ತವು ಆಸವಗಳಿಂದ ವಿಮುಕ್ತವಾಗಿ, ಅರಹಂತರಾದರು.

ಇಲ್ಲಿಗೆ ದ್ವಯತಾನುಪ್ಪಸನಾ ಸುತ್ತ ಮುಗಿಯಿತು.

ಮಹಾ ವಗ್ಗ ಮುಗಿಯಿತ

No comments:

Post a Comment