Friday 23 January 2015

kokalika sutta in kannada (ಕೋಕಾಲಿಕ ಸುತ್ತ)

10. ಕೋಕಾಲಿಕ ಸುತ್ತ
                (ಅಗ್ರಶ್ರಾವಕ ಆಯುಷ್ಮಂತ ಸಾರಿಪುತ್ತ ಮತ್ತು ಆಯುಷ್ಮಂತ ಮೊಗ್ಗಲ್ಲಾನರಿಗೆ ನಿಂದಿಸಿ ಕೋಕಾಲಿಕನು ನರಕದಲ್ಲಿ ಹುಟ್ಟಿದನು. ಸಂತರನ್ನು ನಿಂದಿಸುವುದು ಮಹಾ ಪಾಪವಾಗಿದೆ.)

                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ತಂಗಿದ್ದರು. ಆಗ ಕೋಕಾಲಿಕನು ಭಗವಾನರು ಇರುವೆಡೆಗೆ ಬಂದನು. ಭಗವಾನರಿಗೆ ವಂದಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಕೋಕಾಲಿಕನು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರಾಗಿದ್ದಾರೆ, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ.
                ಹೀಗೆ ಹೇಳಿದ ಕೋಕಾಲಿಕ ಭಿಕ್ಷುವಿಗೆ ಭಗವಾನರು ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಉತ್ತಮರಾಗಿದ್ದಾರೆ.
                ಎರಡನೆಯ ಬಾರಿಯೂ ಮತ್ತು ಮೂರನೆಯ ಬಾರಿಯೂ ಕೋಕಾಲಿಕ ಭಿಕ್ಷುವು ಭಗವಾನರಿಗೆ ಈ ರೀತಿ ಹೇಳಿದನು: ಭಂತೆ! ಯಾದಾಪಿ ನಾನು ಭಗವಾನರಲ್ಲಿ ಶ್ರದ್ಧೆ ಇಡುವೆನು ಹಾಗು ಪ್ರಸನ್ನನಾಗಿರುವೆನು. ಆದರೂ ಸಹಾ ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರು, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ. ಮೂರನೆಯ ಬಾರಿಯೂ ಸಹಾ ಭಗವಾನರು ಕೋಕಾಲಿಕನಿಗೆ ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಅತ್ಯುತ್ತಮರಾಗಿದ್ದಾರೆ.
                ಆಗ ಕೋಕಾಲಿಕ ಭಿಕ್ಷು ಆಸನದಿಂದ ಎದ್ದು ಭಗವಾನರಿಗೆ ಪ್ರಣಾಮ ಮಾಡಿ ಪ್ರದಕ್ಷಿಣೆ ಹಾಕಿ ಹೊರಟನು. ಕೋಕಾಲಿಕ ಭಿಕ್ಷು ಹೋದ ಅಲ್ಪಕಾಲದಲ್ಲೇ ಆತನ ಶರೀರದಲ್ಲೆಲ್ಲಾ ಸಾಸುವೆ ಕಾಳಿನಷ್ಟು ಗುಳ್ಳೆಗಳು ಎದ್ದವು. ಸಾಸುವೆ ಕಾಳಿನಿಂದ ಆ ಗುಳ್ಳೆಗಳ ಆಕಾರ ಹೆಸರುಕಾಳಿನಷ್ಟಾದವು. ಹೆಸರುಕಾಳಿನಿಂದ ಅದರ ಗಾತ್ರವು ಬಟಾಣಿಕಾಳಿನಷ್ಟಾಯಿತು. ಬಟಾಣಿ ಕಾಳಿನಿಂದ ಆ ಗುಳ್ಳೆಗಳ ಗಾತ್ರವು ಗೊರಟಿನಷ್ಟಾಯಿತು. ಗೊರಟಿಯ ಗಾತ್ರದಿಂದ ಆ ಗುಳ್ಳೆಗಳು ಬೊರೆಹಣ್ಣಿನಷ್ಟಾಯಿತು. ಬೋರೆ ಹಣ್ಣಿನ ಗಾತ್ರದಿಂದ ಆ ಗುಳ್ಳೆಗಳು ನಲ್ಲಿಕಾಯಿಯಷ್ಟು ದಪ್ಪಗಾದವು. ನಲ್ಲಿಕಾಯಿ ಗಾತ್ರದಿಂದ ಆ ಗುಳ್ಳೆಗಳು ಬೇಲದಹಣ್ಣಿನಷ್ಟಾಯಿತು. ಬೇಲದಹಣ್ಣಿನಷ್ಟು ಆದಮೇಲೆ ಗುಳ್ಳೆಗಳು ಹಿಗ್ಗಿ ಒಡೆದುಹೋದವು. ಕೀವು ಹಾಗು ರಕ್ತವು ಹರಿಯಿತು. ನಂತರ ಕೋಕಾಲಿಕನು ಅದೇ ರೋಗದಿಂದ ಮರಣಿಸಿದನು. ಸಾರಿಪುತ್ತ ಹಾಗು ಮೊಗ್ಗಲ್ಲಾನರ ದ್ವೇಷಚಿತ್ತದ ಪರಿಣಾಮವಾಗಿ ಆತನು ಪದ್ಮನರಕದಲ್ಲಿ ಉದ್ಭವಿಸಿದನು.
                ಆಗ ಸಹಂಪತಿ ಬ್ರಹ್ಮನು ರಾತ್ರಿ ಕಳೆಯುತ್ತಿದ್ದಂತೆ ತನ್ನ ಕಾಂತಿಯಿಂದ ಸಂಪೂರ್ಣ ಜೇತವನವನ್ನು ಪ್ರಕಾಶಗೊಳಿಸುತ್ತಾ ಭಗವಾನರು ಇರುವಲ್ಲಿಗೆ ಬಂದನು. ಭಗವಾನರ ಬಳಿಗೆ ಬಂದು ವಂದಿಸಿ ಒಂದುಕಡೆ ನಿಂತುಕೊಂಡನು. ಒಂದುಕಡೆ ನಿಂತ ಸಹಂಪತಿ ಬ್ರಹ್ಮನು ಭಗವಾನರಿಗೆ ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ಭಗವಾನರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.
                ಆಗ ಭಗವಾನರು ಆ ರಾತ್ರಿ ಕಳೆದನಂತರ ಭಿಕ್ಷುಗಳಿಗೆ ಆಮಂತ್ರಿಸಿದರು. ನಂತರ ಹೀಗೆ ನುಡಿದರು- ಭಿಕ್ಷುಗಳೇ, ಇಂದು ರಾತ್ರಿ ಸಹಂಪತಿ ಬ್ರಹ್ಮನು ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ನಂತರ ನನಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.
                ಹೀಗೆ ನುಡಿದ ನಂತರ ಓರ್ವ ಭಿಕ್ಷುವು ಭಗವಾನರೊಡನೆ ಹೀಗೆ ಕೇಳಿದನು- ಭಂತೆ, ಪದ್ಮ ನರಕದ ಆಯುವು ಎಷ್ಟು ದೀರ್ಘವಾಗಿರುತ್ತದೆ?
                ಭಿಕ್ಷು, ಪದ್ಮ ನರಕದ ಆಯುವು ದೀರ್ಘವಾಗಿರುತ್ತದೆ. ಅದರ ಗಣಿಕೆ ಇಷ್ಟು ಸಹಜವಾಗಿಲ್ಲ. ಅದು ಇಷ್ಟು ವರ್ಷ, ನೂರು ವರ್ಷ ಅಥವಾ ಇಷ್ಟು ಲಕ್ಷ ವರ್ಷವೆಂದು ಸೀಮಿತವಾಗಿಲ್ಲ?
                ಭಂತೆ, ಉಪಮೆ ನೀಡಬಲ್ಲಿರಾ?
                ಭಿಕ್ಷು, ನೀಡಬಹುದು ಎಂದು ಭಗವಾನರು ಹೀಗೆ ನುಡಿದರು- ಭಿಕ್ಷು ಹೇಗೆ ಇಪ್ಪತ್ತು ಖಾರಿ (1 ಖಾರಿ=4 ಮಣ) ಎಳ್ಳನ್ನು ಕೊಂಡೊಯ್ಯುತ್ತಿರುವ ಕೋಸಲದ ಯಾವ ಬಂಡಿಯಿದೆಯೋ ಅದರಿಂದ ಒಬ್ಬ ಪುರುಷನು ಸಾವಿರ ವರ್ಷದ ನಂತರ ಒಂದು ಎಳ್ಳುಕಾಳನ್ನು ತೆಗೆದರೆ, ಇದೇ ಕ್ರಮದಲ್ಲಿ ಕಾಲಾಂತರದಲ್ಲಿ ಇಪ್ಪತ್ತು ಖಾರಿ ಎಳ್ಳನ್ನು ತೆಗೆಯುತ್ತಾ ಮುಗಿಸಿದರೂ ಅದು ಅಬರ್ುದ ನರಕದ ಆಯುವಿನ 20 ಜೀವನಕ್ಕೆ ಸಮನಾಗಿದೆ ಹಾಗು ನಿರಬರ್ುದ ನರಕದ ಒಂದು ಜೀವನ ಕಾಲಕ್ಕೆ ಸಮನಾಗಿದೆ. ಭಿಕ್ಷು ಅಬಬ ನರಕದ 20 ಜೀವನಗಳಿಗೆ ಸಮನಾಗಿ ಅಹಹದ ನರಕದ ಒಂದು ಜೀವನ ಸಮವಾಗಿದೆ. ಭಿಕ್ಷು ಅಹಹ ನರಕದ 20 ಜೀವನಕ್ಕೆ ಸಮವಾದುದು ಅಟಟ ನರಕದ ಒಂದು ಜೀವನ ಕಾಲ. ಅಟಟ ನರಕದ 20 ಜೀವನಗಳಿಗೆ ಸಮನಾದುದು ಕುಮುದ ನರಕದ ಒಂದು ಜೀವನ. ಭಿಕ್ಷು ಕುಮುದ ನರಕದ 20 ಜೀವನಗಳಿಗೆ ಸಮನಾದುದು ಸೌಗಂಧಿಕಾ ನರಕದ ಒಂದು ಜೀವನಕಾಲ. ಭಿಕ್ಷು ಸೌಗಂಧಿಕಾ ನರಕದ 20 ಜೀವನಕ್ಕೆ ಸಮನಾದುದು ಉತ್ಪಲ ನರಕದ ಒಂದು ಜೀವನಕಾಲ. ಉತ್ಪಲ ನರಕದ 20 ಜೀವನಕ್ಕೆ ಸಮನಾದುದು ಪುಂಡರಿಕ ನರಕದ ಒಂದು ಜೀವನ ಕಾಲ. ಪುಂಡರಿಕ ನರಕದ 20 ಜೀವನ ಕಾಲಕ್ಕೆ ಸಮನಾದುದು ಪದ್ಮ ನರಕದ ಒಂದು ಜೀವನಕಾಲ. ಭಿಕ್ಷು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಪ್ರತಿ ದ್ವೇಷಚಿತ್ತ ಮಾಡಿ ಕೋಕಾಲಿಕನು ಪದ್ಮ ನರಕದಲ್ಲಿ ಉತ್ಪತ್ತಿಯಾಗಿದ್ದಾನೆ. ಹೀಗೆ ಹೇಳಿ ಸುಗತರಾದ ಶಾಸ್ತರು ಹೀಗೆ ಹೇಳಿದರು-
1.            ಅಲ್ಲಿ ಉತ್ಪನ್ನವಾಗುವ ಪುರುಷರ ಮುಖದಲ್ಲಿ ಕೊಡಲಿಯು ಉದ್ಭವಿಸುತ್ತದೆ. ಮೂರ್ಖ ಕೆಟ್ಟ ಮಾತು ಆಡುತ್ತಾ ಅದರಿಂದಲೇ ಕತ್ತರಿಸಲ್ಪಡುತ್ತಾನೆ.
2.            ಯಾರು ನಿಂದನೀಯನ ಪ್ರಶಂಸೆ ಮಾಡುವನೋ ಅಥವಾ ಪ್ರಶಂಸನೀಯರ ನಿಂದೆ ಮಾಡುತ್ತಾನೋ ಆ ಮೂರ್ಖನು ಪಾಪ ಮಾಡುತ್ತಾನೆ ಮತ್ತು ಆ ಪಾಪದ ಕಾರಣದಿಂದ ಆತನು ಸುಖವನ್ನು ಪ್ರಾಪ್ತಿಮಾಡುವುದಿಲ್ಲ.
3.            ಯಾರು ಜೂಜಿನಲ್ಲಿ ತನ್ನ ಸರ್ವಸ್ವ ಧನವನ್ನು ಕಳೆದುಕೊಳ್ಳುವನೋ ಅದು ಅಲ್ಪಹಾನಿಯೇ ಆಗಿದೆ. ಆದರೆ ಎಲ್ಲಕ್ಕಿಂತ ದೊಡ್ಡ ಹಾನಿ ಯಾವುದೆಂದರೆ ತಥಾಗತರ ಬಗ್ಗೆ ಮನವನ್ನು ದೂಷಿತ ಮಾಡುವುದಾಗಿದೆ.
4.            ಆರ್ಯ ಪುರುಷರ ನಿಂದೆ ಮಾಡುವವನು ತನ್ನ ಮನ ಮತ್ತು ವಚನವನ್ನು ಪಾಪದಲ್ಲಿ ಹಾಕಿ ನರಕದಲ್ಲಿ ಉದ್ಭವಿಸುತ್ತಾನೆ. ಅಲ್ಲಿನ ಆಯು ಒಂದು ಲಕ್ಷ ನಿರಬರ್ುದ ಹಾಗು 41 ಅಬರ್ುದವಾಗಿದೆ.
5.            ಅಸತ್ಯವಾದಿಯು ನರಕಕ್ಕೆ ಹೋಗುವನು ಮತ್ತು ಯಾರು ಮಾಡಿರುವುದನ್ನು ಇಲ್ಲವೆನ್ನುತ್ತಾನೋ ಆತನು ಸಹಾ ಹೀನಕರ್ಮ ಮಾಡುವ ಈ ಇಬ್ಬರು ಪರಲೋಕದಲ್ಲಿ ಸಮಾನರಾಗುತ್ತಾರೆ.
6.            ಯಾರು ದೋಷರಹಿತರಾದ ಶುದ್ಧ, ನಿರ್ಮಲ, ಪುರುಷರಿಗೆ ದೋಷಿಸುತ್ತಾರೋ ಅವರ ಪಾಪ ಎದುರು ದಿಕ್ಕಿನಲ್ಲಿ ಬರುತ್ತಿರುವ ಗಾಳಿಗೆ ಧೂಳನ್ನು ಎಸೆದಂತೆ ಅದೇ ಮೂರ್ಖನ ಮೇಲೆ ಬೀಳುತ್ತದೆ.
7.            ಯಾರು ಶ್ರದ್ಧಾರಹಿತನೋ, ಯಾರು ಬೇರೆಯವರು ದಾನ ಮಾಡುತ್ತಿದ್ದರೆ ಸಹಿಸಲಾರನೋ, ಯಾರು ಯಾರ ಮಾತನ್ನು ಕೇಳುವುದಿಲ್ಲವೋ, ಜಿಪುಣನೋ, ಚಾಡಿತನದಲ್ಲಿ ತಲ್ಲೀನನೋ, ಲೋಭದಲ್ಲಿ ಬಿದ್ದಿರುವನೋ, ಅವನು ವಚನದಿಂದ ಪರರನ್ನು ನಿಂದಿಸುವನು.
8.            ದುರ್ವಚನಿಯು, ಸುಳ್ಳುಗಾರನು, ಅನಾರ್ಯನೂ ಬುದ್ಧಿನಾಶಕನೂ, ಪಾಪಿಯು, ಕೆಟ್ಟಕರ್ಮನೂ, ಅಧಮ ಪುರುಷನು ಮತ್ತು ಕೆಳನರಕದಲ್ಲಿ ಹೋಗುವಂತಹ ನೀನು ಇಲ್ಲಿ ಹೆಚ್ಚು ಮಾತು ಆಡದಿರು.
9.            ನೀನು ಪಾಪಿ ಆಗಿದ್ದೂ ಅಲ್ಲದೆ, ನಂತರ ನಿಂದೆಮಾಡಿ ನಿನ್ನ ಅಹಿತವನ್ನು ಮಾಡಿಕೊಳ್ಳುತ್ತಿದ್ದೀಯೆ. ಅನೇಕ ಪಾಪಮಾಡಿ ಬಹುಕಾಲ ಹಳ್ಳದಲ್ಲಿ ಬೀಳುವೆ.
10.          ಯಾರ ಕರ್ಮವು ನಷ್ಟವಾಗುವುದಿಲ್ಲ, ಮಾಡುವವನು ಅದರ ಫಲ ಪ್ರಾಪ್ತಿಮಾಡುತ್ತಾನೆ. ಪಾಪಕಾರಿ ಮೂರ್ಖನು ತಾನಾಗಿಯೇ ಪರಲೋಕದಲ್ಲಿ ದುಃಖದಲ್ಲಿ ಬೀಳುತ್ತಾನೆ.
11.          ಆತನು ಮುಳ್ಳುಗಳಿಂದ ಹಾಗು ತೀಕ್ಷ್ಣ ಅಗ್ರವುಳ್ಳ ಲೋಹದ ಭಜರ್ಿಗಳಿಂದ ಆವೃತವಾದ ನರಕದಲ್ಲಿ ಬೀಳುತ್ತಾನೆ. ಅಲ್ಲಿ ಕಾದ ಲೋಹದ ಗುಂಡುಗಳೇ ಅವನ ಭೋಜನವಾಗಿರುತ್ತದೆ.
12.          ನರಕವಾಸಿಗಳಾದ ಯಾರು ಅಲ್ಲಿ ಪ್ರಿಯವಚನ ನುಡಿಯಲಾರರು. ಪ್ರಸನ್ನ ಮುಖದವರು ಹಾಗು ರಕ್ಷಕರೂ ಅಲ್ಲಿ ದೊರೆಯಲಾರದ ಬೆಂಕಿಯಿಂದ ಆವೃತರಾದ ಅವರು ಬೆಂಕಿಯ ಹಾಸಿಗೆಯಲ್ಲಿ ಮಲಗುತ್ತಾರೆ. ಪ್ರಜ್ವಲಿಸುತ್ತಿರುವ ಬೆಂಕಿಯಲ್ಲೇ ಪ್ರವೇಶಿಸಬೇಕಾಗುತ್ತದೆ.
13.          ನರಕವಾಸಿಗಳು ಜಾಲಗಳಲ್ಲಿ ಬಂಧಿತರಾಗಿ ಸುತ್ತಿಗಳಿಂದ ಹೊಡೆದಾಡಿಕೊಳ್ಳುವರು (ಹೊಡೆಯುವರು). ಅವರು ಬಹು ಘೋರ ಅಂಧಕಾರದಲ್ಲಿ ಬೀಳುವರು ಹಾಗು ಅದು ಉನ್ನತ ಪೃಥ್ವಿಯ ರೀತಿ ಹರಡಿರುತ್ತದೆ.
14.          ಬೆಂಕಿಯ ಸಮಾನವಾದ ಲೋಹದ ದೊಡ್ಡ ಪಾತ್ರೆಯಲ್ಲಿ ಬೀಳುವರು ಮತ್ತು ಬೆಂಕಿಯ ರೀತಿ ಅದರಲ್ಲಿ ಚಿರಕಾಲ ಮೇಲೆ-ಕೆಳಗೆ ಬಂದು ಹೋಗುತ್ತಾ ಬೇಯುವರು.
15.          ಆಗ ಕೀವು ಹಾಗು ರಕ್ತದಿಂದ ಆ ಪಾಪಕಾರಿಯು ಒದ್ದಾಡುತ್ತಾ ಬೇಯುತ್ತಾನೆ. ಯಾವರೀತಿ ಎಂದರೆ ಎಲ್ಲೆಲ್ಲಿ ಒದ್ದಾಡುತ್ತಾನೋ ಅಲ್ಲೆಲ್ಲಾ ಕೀವುರಕ್ತದಿಂದ ಸ್ರವಿಸಿ ಮಲಿನವಾಗುತ್ತಾನೆ.
16.          ಪಾಪಿಯು ಮಲಿನವಾದ ನೀರಿನಲ್ಲಿ ಈ ರೀತಿಯಾಗಿ ಬೇಯುತ್ತಾನೆ. ಹೇಗೆಂದರೆ ಆತನು ಈಜಲಾರ. ಏಕೆಂದರೆ ನಾಲ್ಕು ಕಡೆಯೂ ಕಡಾಯಿಗಳಿರುತ್ತವೆ.
17.          ಗಾಯಗೊಂಡ ಶರೀರದಿಂದ ಆತನು ತೀಕ್ಷ್ಣವಾದ ಅಸಿಪತ್ರ ವನದಲ್ಲಿ ಪ್ರವೇಶಿಸುತ್ತಾನೆ. ನರಕವಾಸಿಗಳು ಆತನ ನಾಲಿಗೆಯನ್ನು ಹಿಡಿದು ಮುಳ್ಳುಗಳಿಂದ ವಧಿಸುತ್ತಾರೆ.
18.          ಆಗ ಆತನ ತೀಕ್ಷ್ಣಧಾರೆಯ ಕತ್ತಿಗೆ ಸಮಾನವಾದ ತೀಕ್ಷ್ಣ ಧಾರೆಯುಳ್ಳ ದುಸ್ತರವಾದ ವೈತರಿಣಿ ನದಿಯಲ್ಲಿ ಬೀಳುತ್ತಾನೆ. ಪಾಪಿಯಾಗಿರುವ ಮೂರ್ಖನು ಅದರಲ್ಲೇ ಬೀಳುತ್ತಾನೆ.
19.          ಅಲ್ಲಿ ಕಪ್ಪಾದ ಮತ್ತು ಬಣ್ಣಗಳ ಕಾಗೆಯು ಅವರನ್ನು ತಿನ್ನುತ್ತದೆ. ನಾಯಿಗಳು, ನರಿಗಳು, ವ್ಯಾಘ್ರ, ಹದ್ದುಗಳು ಮತ್ತು ಕಾಗೆಗಳು ಅವರನ್ನು ತಿನ್ನುತ್ತವೆ.
20.          ಪಾಪಕಾರಿ ಮಾನವ ನರಕದಲ್ಲಿ ಯಾವ ಜೀವನದ ಅನುಭವ ಪಡೆಯುವನೋ, ಅದು ದುಃಖಕರವಾಗಿದೆ. ಆದ್ದರಿಂದ ಮನುಷ್ಯನು ಪ್ರಮಾದರಹಿತನಾಗಿ ತನ್ನ ಉಳಿದ ಜೀವನವನ್ನು ಒಳ್ಳೆಯ ಕರ್ಮದಿಂದ ಜೀವಿಸಲಿ.
21.          ಪದ್ಮ ನರಕವು ಉತ್ಪನ್ನವಾಗುವವರ ಆಯುವು ಪಂಡಿತರ ಗಣಕದಿಂದ ಎಳ್ಳನ್ನು ಒಂದೊಂದಾಗಿ ಎಣಿಸುವಷ್ಟು ದೀರ್ಘಯುತವಾಗಿದೆ. ಅದು 4 ನರಕ ಕೋಟಿ ಮತ್ತು 1200 ಕೋಟಿಗೆ ಸಮನಾಗಿದೆ.
22.          ಇಲ್ಲಿ ಎಷ್ಟೆಲ್ಲವೂ ದುಃಖವನ್ನು ನೀಡಲಾಗಿದೆಯೋ, ಅದೆಲ್ಲವನ್ನು ಅವರು ಅನುಭವಿಸಬೇಕಾಗಿದೆ. ಆದ್ದರಿಂದ ಪವಿತ್ರ ಉತ್ತಮ ಸಾಧುಗಳಲ್ಲಿ ಪ್ರತಿ ತಮ್ಮ ಮನಸ್ಸನ್ನು ಹಾಗು ವಚನವನ್ನು ಸದಾ ಸಂಯಮವಾಗಿಡಿ.

ಇಲ್ಲಿಗೆ ಕೋಕಾಲಿಕ ಸುತ್ತ ಮುಗಿಯಿತು.

No comments:

Post a Comment