Friday 23 January 2015

salla sutta in kannada {8. ಸಲ್ಲ ಸುತ್ತ}

8. ಸಲ್ಲ ಸುತ್ತ

(ಜೀವನದ ಅನಿತ್ಯ, ತೃಷ್ಣಾದ ಪ್ರಹಾರ ಮತ್ತು ಮುಕ್ತಿಯ ಮಾರ್ಗ)
1.            ಇಲ್ಲಿ ಮನುಷ್ಯರ ಜೀವನ ಅನಿಮಿತ್ತ ಹಾಗು ಅಜ್ಞಾತವಾಗಿದೆ. ಕಠಿಣ ಹಾಗು ಅಲ್ಪವಾಗಿದೆ. ಅದು ಸಹಾ ದುಃಖಭರಿತವಾಗಿದೆ.
2.            ಅಂತಹ ಯಾವುದೂ ಉಪಕ್ರಮವಿಲ್ಲದಾಗಿದೆ. ಹೇಗೆಂದರೆ ಜನ್ಮಿತನು ಮರಣಿಸಿದಂತೆ, ವೃದ್ಧಾಪ್ಯವನ್ನು ಹೊಂದಿಯೂ ಮರಣಿಸಬೇಕಾಗಿದೆ. ಜೀವಿಗಳ ಧರ್ಮ ಇದೇ ಆಗಿದೆ.
3.            ಮರಗಳಲ್ಲಿರುವ ಫಲಗಳಿಗೆ ಬೀಳುವ ಭಯವಿರುವಂತೆ (ಸ್ವಭಾವ), ಹಾಗೆಯೇ ಜನ್ಮಿಸಿರುವ ಜೀವಿಗಳಿಗೆ ನಿತ್ಯವೂ ಮೃತ್ಯುವಿನ ಭಯವಿರುತ್ತದೆ.
4.            ಹೇಗೆ ಕುಂಬಾರನಿಂದ ಸಿದ್ಧವಾಗಿರುವ ಮಣ್ಣಿನ ಪಾತ್ರೆಗಳು ಚೂರಾಗುವ ಸ್ವಭಾವವುಳ್ಳವಾಗಿದೆಯೋ, ಹಾಗೆಯೇ ಜೀವಿಗಳ ಜೀವನವು ಇದೆ.
5.            ತರುಣ, ವೃದ್ಧರು, ಮಕ್ಕಳು ಹಾಗು ಬುದ್ಧಿವಂತರೂ ಸಹಾ ಮೃತ್ಯುವಿನ ವಶವಾಗುತ್ತಾರೆ. ಸರ್ವರೂ ಮೃತ್ಯುವನ್ನು ಪ್ರಾಪ್ತಿಮಾಡುತ್ತಾರೆ.
6.            ಹೀಗೆ ಮೃತ್ಯುವಿನ ಅಧೀನರಾಗಿರುವವರು ಪರಲೋಕಕ್ಕೆ ಹೋಗುವ ಸಮಯದಲ್ಲಿ ಪಿತರು, ಪುತ್ರರನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ. ಹಾಗು ಸೋದರ ಸಂಬಂಧಿ ಮಿತ್ರರು ಕಾಪಾಡಲಾರರು.
7.            ಸೋದರರನ್ನು, ಸಂಬಂಧಿಗಳನ್ನು ನೋಡುತ್ತಾ, ನಾನಾ ಪ್ರಕಾರವಾಗಿ ವಿಲಾಪ ಮಾಡುತ್ತಿರುವುದನ್ನು ಕಂಡು ಸಹಾ ಮೃತ್ಯುವು ಏಕಾಂಗಿಯಾಗಿಯೇ ಕ್ರೂರ ಗೋವೊಂದು ವಧಿಸುವಂತೆ ಜೀವಿಗಳನ್ನು ಕೊಲ್ಲುತ್ತಿದೆ.
8.            ಈ ರೀತಿಯಿಂದ ಲೋಕವು ಮೃತ್ಯು ಹಾಗು ವೃದ್ಧಾಪ್ಯದಿಂದ ಪೀಡಿತವಾಗಿದೆ. ಆದ್ದರಿಂದ ಧೀರ ಪುರುಷರು ಲೋಕದ ಸ್ವಭಾವ ಅರಿತು ಶೋಕಪಡುವುದಿಲ್ಲ.
9.            ಯಾರು ಬರುವ ಹಾಗು ಹೋಗುವ ಮಾರ್ಗವನ್ನು ಅರಿಯಲಾರರೋ ಹಾಗು ಎರಡು ಅಂತಗಳನ್ನು ಅರಿಯಲಾರದೆ ವ್ಯರ್ಥದಿಂದ ವಿಲಾಪ ಮಾಡುತ್ತಿರುವರು.
10.          ವಿಲಾಪಿಸುವುದರಿಂದ ಅಲ್ಪವು ಪ್ರಯೋಜನ ಆಗುವುದಿದ್ದರೆ, ಬುದ್ಧಿವಂತ ವ್ಯಕ್ತಿಯು ತನಗೆ ಹಾಗೆಯೇ ನೋವುಂಟು ಮಾಡಿಕೊಳ್ಳಲಿ (ಆದರೆ ಹಾಗೆ ಆಗದಿರುವಾಗ ಶೋಕಿಸದಿರಲಿ).
11.          ಆದರೆ ವಿಲಾಪ ಹಾಗು ಶೋಕಿಸುವುದರಿಂದ ಚಿತ್ತದ ಶಾಂತಿ ಲಭಿಸಲಾರದು. ಬದಲಾಗಿ ಅಧಿಕ ದುಃಖವೇ ಉತ್ಪನ್ನವಾಗುತ್ತದೆ ಮತ್ತು ಶರೀರ ಪೀಡಿತವಾಗುತ್ತದೆ.
12.          ತನಗೆ ತಾನೇ ಪೀಡಿಸಿಕೊಳ್ಳುವ ವ್ಯಕ್ತಿಯು ಕೃಶನು ಹಾಗು ಕುರೂಪಿಯು ಆಗುವನು. ಅದರಿಂದ ಪ್ರೇತಗಳ ಪಾಲನೆಯಂತು ಆಗುವುದಿಲ್ಲ. ವಿಲಾಪಿಸುವುದು ನಿರರ್ಥಕವಾಗಿದೆ.
13.          ಯಾವ ವ್ಯಕ್ತಿಯು ಶೋಕವನ್ನು ಬಿಡಲಾರನೋ, ಆತನು ಅತ್ಯಧಿಕ ದುಃಖವನ್ನು ಪ್ರಾಪ್ತಿಮಾಡುತ್ತಾನೆ. ಸತ್ತ ವ್ಯಕ್ತಿಗಾಗಿ ಪಶ್ಚಾತ್ತಾಪ ಮಾಡುತ್ತಾ ಶೋಕದ ವಶಕ್ಕೆ ಬೀಳುತ್ತಾನೆ.
14.          ತಮ್ಮ ಕಮರ್ಾನುಸಾರ ಅನ್ಯರು ಸಾಯುವ ಮಾನವರನ್ನು ಹಾಗು ಮೃತ್ಯುವಿನ ವಶದಲ್ಲಿ ಬಿದ್ದು ಒದ್ದಾಡುವ ಈ ಜೀವಿಗಳನ್ನು ನೋಡಿ.
15.          ಮನುಷ್ಯ ಯಾವ ಯಾವುದಕ್ಕೆ ಮಾನ್ಯತೆ ನೀಡುವನು. ಆದರೆ ಅದರಿಂದ ಕೆಲವೊಮ್ಮೆ ಅನ್ಯಥವೇ ಸಂಭವಿಸುವುದು. ಈ ಪ್ರಕಾರದಿಂದ ವಿಯೋಗವನ್ನು ಮತ್ತು ಲೋಕದ ಸ್ವಭಾವವನ್ನು ನೋಡು.
16.          ಮಾನವ ಏನಾದರೂ ನೂರು ವರ್ಷ ಅಥವಾ ಅದಕ್ಕಿಂತ ಅಧಿಕವಾಗಿ ಜೀವಿಸಿದರೂ ಸಹಾ ಆತನು ಸೋದರ ಸಂಬಂಧಿಗಳಿಂದ ವಿಯೋಗವಾಗುತ್ತಾನೆ ಹಾಗು ಇಲ್ಲಿ ಜೀವಿತವನ್ನು ಬಿಡುವನು.
17.          ಆದ್ದರಿಂದ ಅರ್ಹರಾಗಿರುವವರೇ, ಉಪದೇಶ ಕೇಳಿ, ವಿಲಾಪಿಸುವುದನ್ನು ಬಿಟ್ಟು, ಸತ್ತ ಪ್ರೇತವನ್ನು (ಹೆಣ) ನೋಡಿ, ಆತನು ನನಗೆ ಇನ್ನು ಸಿಗುವುದಿಲ್ಲ ಎಂದು ಯೋಚಿಸಿ.
18.          ಯಾವರೀತಿಯಲ್ಲಿ ಅಗ್ನಿಯಿಂದ ಸುಡುತ್ತಿರುವ ಮನೆಗೆ ನೀರಿನಿಂದ ಆರಿಸುವರೋ, ಹಾಗೆಯೇ ಧೀರನು, ಪ್ರಜ್ಞಾವಂತನು, ಬುದ್ಧಿವಂತನು ಹಾಗು ಕುಶಲನು ಉತ್ಪನ್ನವಾದ ಶೋಕವನ್ನು ಶೀಘ್ರವೇ ನಷ್ಟಗೊಳಿಸುತ್ತಾನೆ. ಹೇಗೆಂದರೆ ಪ್ರಬಲ ವಾಯುವು ಹತ್ತಿಯನ್ನು ಹಾರಿಸುವಂತೆ.
19.          ತನ್ನ ಸುಖವನ್ನು ಬಯಸುವವನು ಶಲ್ಯರೂಪಿಯಾದ ಅಳುವಿಕೆ, ವಿಪಾಲಿಸುವಿಕೆ ಮತ್ತು ಮಾನಸಿಕ ದುಃಖವನ್ನು ತೆಗೆದುಹಾಕಲಿ.
20.          ಯಾರು ಶಲ್ಯರಹಿತನೋ, ಅನಾಸಕ್ತನೋ ಹಾಗು ಚಿತ್ತಶಾಂತ ಪ್ರಾಪ್ತನೋ, ಅವನು ಸರ್ವ ಶೋಕವನ್ನು ಮೀರಿ ಶೋಕರಹಿತನಾಗಿ ಶಾಂತನಾಗುವನು.

ಇಲ್ಲಿಗೆ ಸಲ್ಲ (ಶಲ್ಯ) ಸುತ್ತ ಮುಗಿಯಿtu

No comments:

Post a Comment