Friday, 23 January 2015

vaasettha sutta in kannada {ವಾಸೆಟ್ಠ ಸುತ್ತ (ವರ್ಣ ವ್ಯವಸ್ಥೆಯ ಖಂಡನೆ)}

9. ವಾಸೆಟ್ಠ ಸುತ್ತ
(ವರ್ಣ ವ್ಯವಸ್ಥೆಯ ಖಂಡನೆ)
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಇಚ್ಛಾನಂಗಲದ ವನಖಂಡದಲ್ಲಿ ವಿಹರಿಸುತ್ತಿದ್ದರು. ಆಗ ಬಹು ಪ್ರಸಿದ್ಧ (ಅಭಿಜ್ಞಾತ) ರಿಂದ ಪ್ರಸಿದ್ಧರಾದ ಬ್ರಾಹ್ಮಣ ಮಹಾಶಾಲ (ಮಹಾದಾನಿ) ಹೇಗೆ ಚಂಕಿ ಬ್ರಾಹ್ಮಣ ತಾರುಕ್ಖ (ತಾರುಕ್ಷ) ಬ್ರಾಹ್ಮಣ, ಜಾನುಸೋಣಿ ಬ್ರಾಹ್ಮಣ, ತೊದೆಯ್ಯ ಬ್ರಾಹ್ಮಣ ಹಾಗು ಇತರ ಅಭಿಜ್ಞಾತ ಬ್ರಾಹ್ಮಣರಾದ ಮಹಾಶಾಲ, ಇಚ್ಛನಂಗಲದಲ್ಲಿ ವಾಸಿಸುತ್ತಿದ್ದರು.


                ಆಗ ವಾಸೆಟ್ಠ (ವಸಿಷ್ಠ) ಹಾಗು ಭಾರದ್ವಾಜರೆಂಬ ಇಬ್ಬರು ಮಾಣವಕರು ನಡೆದಾಡುತ್ತಾ ವಿಹರಿಸುತ್ತಿರುವಾಗ, ಈ ವಿಷಯದಲ್ಲಿ ಚಚರ್ೆ ನಡೆಯಿತು ಬ್ರಾಹ್ಮಣ ಹೇಗೆ ಆಗುವುದು?
                ಭಾರದ್ವಾಜ ಹೀಗೆ ಹೇಳಿದನು- ಯಾವಾಗ ಪುರುಷನು ತಂದೆಯ ಕಡೆಯಿಂದ ಹಾಗು ತಾಯಿಯ ಕಡೆಯಿಂದ ಸುಜಾತನಾಗಿ ಹುಟ್ಟುವನೋ (ಶುದ್ಧವಂಶಜ), ಎರಡು ಕಡೆಯ ಪಿತಾಮಹರಿಂದ ವಿಶುದ್ಧ ವಂಶಜನೋ, ಈ ರೀತಿ ಹುಟ್ಟಿನಿಂದ (ಜಾತಿಯಿಂದ) ಇಷ್ಟರಿಂದಲೇ ಬ್ರಾಹ್ಮಣನಾಗುತ್ತಾನೆ.
                ವಾಸೆಟ್ಠ ಮಾಣವಕ ಹೀಗೆ ಹೇಳಿದನು- ಯಾವಾತನು ಶೀಲವಂತನೋ ಹಾಗು ವ್ರತಸಂಪನ್ನನೋ, ಆತನು ಇಷ್ಟರಿಂದಲೇ ಬ್ರಾಹ್ಮಣನಾಗುತ್ತಾನೆ.
                ಭಾರದ್ವಾಜ ಮಾಣವಕನು ವಾಸೆಟ್ಠ ಮಾಣವಕನನ್ನು ಅರಿಯಲಾರದೆ ಹೋದನು. ಹಾಗು ಭಾರದ್ವಾಜನು ವಾಸೆಟ್ಠನನ್ನು ಅಥರ್ೈಸಲಾರದೆ ಹೋದನು.
                ಆಗ ವಾಸೆಟ್ಠ ಮಾಣವಕನು ಭಾರದ್ವಾಜನಿಗೆ ಈ ರೀತಿಯಾಗಿ ಸಂಬೋಧಿಸಿದನು- ಶಾಕ್ಯ ಕುಲದಿಂದ ಪ್ರವಜರ್ಿತರಾಗಿರುವ ಶಾಕ್ಯಪುತ್ರ ಗೋತಮರು ಇಚ್ಛಾನಂಗಲದಲ್ಲಿ ಇರುವ ವನಖಂಡದಲ್ಲಿ ವಾಸಿಸುತ್ತಿರುವರು. ಅವರ ಕಲ್ಯಾಣಕೀತರ್ಿಯು ಈ ರೀತಿಯ ಶಬ್ದಗಳಿಂದ ಹಬ್ಬಿದೆ. ಅವರು ಅರಹಂತರಾಗಿದ್ದಾರೆ, ಸಮ್ಯಕ್ ಸಂಬುದ್ಧರಾಗಿದ್ದಾರೆ, ವಿದ್ಯಾಚರಣಸಂಪನ್ನರಾಗಿದ್ದಾರೆ. ಸುಗತರು, ಲೋಕವಿದು, ಅನುಪಮ ಪುರುಷಧಮ್ಮ ಸಾರಥಿಯಾಗಿದ್ದಾರೆ. ದೇವತೆಗಳಿಗೆ ಹಾಗು ಮಾನವರಿಗೆ ಶಾಸ್ತರಾಗಿದ್ದಾರೆ, ಬುದ್ಧರು ಹಾಗು ಭಗವಾನರಾಗಿದ್ದಾರೆ. ಆದ್ದರಿಂದ ನಡೆ ಭಾರದ್ವಾಜ, ಎಲ್ಲಿ ಗೋತಮ ಸಮಣರಿರುವರೋ ಅಲ್ಲಿ ನಡೆ, ಅಲ್ಲಿ ಹೋಗಿ ಸಮಣ ಗೋತಮರಿಂದ ಈ ಮಾತನ್ನು ಕೇಳೋಣ. ಹೇಗೆ ಶ್ರಮಣ ಗೋತಮರು ಹೇಳುವರೋ ಹಾಗೆಯೇ ಧಾರಣೆ ಮಾಡೋಣ.
                ಹಾಗೇ ಆಗಲಿ ಎಂದು ಭಾರದ್ವಾಜನು ಭಗವಾನರು ಎಲ್ಲಿದ್ದರೋ, ಅಲ್ಲಿಗೆ ಹೋದರು. ಹೋಗಿ ಭಗವಾನರೊಡನೆ ಕುಶಲ ಸಂಬೋಧನೆ ಮಾಡಿ ಒಂದುಕಡೆ ಕುಳಿತರು. ಒಂದುಕಡೆ ಕುಳಿತ ವಾಸೆಟ್ಠ ಮಾಣವಕನು ಭಗವಾನರಿಗೆ ಈ ರೀತಿ ಗಾಥೆಗಳಿಂದ ಹೇಳಿದನು-
1.            ಹೇ ಗೋತಮರೇ, ನಾವು ಅನುಜ್ಞಾತ-ಪ್ರವಿಜ್ಞಾತ (ಪ್ರಸಿದ್ಧ) ರಾಗಿರುವ ತ್ರಿಮೋದಜ್ಞರಾಗಿದ್ದೇವೆ. ನಾನು ಪೌಷ್ಕರಸಾಹಿಕಾ ಮತ್ತು ಈತನು ತಾರುಕ್ಷಾಕನ ಶಿಷ್ಯರಾಗಿದ್ದೇವೆ.
2.            ತ್ರಿವೇದದ ವ್ಯಾಖ್ಯಾನಕರು ಹಾಗು ಅದರಲ್ಲಿ ನಿಪುಣರು ಆಗಿದ್ದೇವೆ. ಪದದಲ್ಲಿ, ವ್ಯಾಕರಣದಲ್ಲಿ ಮತ್ತು ಜಲ್ವ (ವಾದ)ದಲ್ಲಿ ಆಚಾರ್ಯರ ಸಮಾನರಾಗಿದ್ದೇವೆ.
3.            ಗೋತಮರೇ, ಹೀಗಿರುವ ನಮ್ಮಲ್ಲಿ ಜಾತಿಯ ವಾದದ ವಿಷಯದ ಬಗ್ಗೆ ವಿವಾದ ಉತ್ಪನ್ನವಾಗಿದೆ. ಭಾರದ್ವಾಜನು ಹೇಳುವನು ಹುಟ್ಟಿನಿಂದಲೇ ಬ್ರಾಹ್ಮಣನಾಗುತ್ತಾನೆ ಎಂದು.
4.            ಚಕ್ಷುವಂತರೇ, ಕರ್ಮದಿಂದಲೇ ಎಂದು ನಾನು ಹೇಳುತ್ತಿದ್ದೇನೆ. ಇದನ್ನು ಅರಿತುಕೊಳ್ಳಲು ನಾವಿಬ್ಬರೂ ಪರಸ್ಪರರನ್ನು ಅಥರ್ೈಸಲಾಗದೆ ಹೋದೆವು. ಅದಕ್ಕಾಗಿ ಸಂಬುದ್ಧರ ಬಳಿ ವಿಶ್ರುತ ಭಗವಾನರ ಬಳಿ ಬಂದಿರುವೆವು.
5.            ಅಕ್ಷಯ (ಪೂರ್ಣ) ಚಂದಿರನನ್ನು ಹೇಗೆ ಜನರು ಕೈಜೋಡಿಸಿ ವಂದಿಸುವರೋ ಹಾಗೆಯೇ ಗೋತಮರಾದ ತಮಗೂ ವಂದಿಸುವೆವು.
6.            ಉತ್ಪನ್ನವಾಗಿರುವ ಲೋಕಚಕ್ಷು ಸಂಪನ್ನರಾದ ತಮಗೆ ಕೇಳುತ್ತಿದ್ದೇವೆ ಜನ್ಮದಿಂದ ಬ್ರಾಹ್ಮಣರಾಗುವರೇ ಅಥವಾ ಕರ್ಮದಿಂದಲೋ? ಅಜ್ಞಾನಿಗಳಾದ ನಮಗೆ ತಿಳಿಸಿ, ಅದರಿಂದ ನಾವು ಬ್ರಾಹ್ಮಣರನ್ನು ಅರಿಯುತ್ತೇವೆ.
7.            ಭಗವಾನರು - ವಾಸೆಟ್ಠ, ನಿನಗೆ ನಾನು ಕ್ರಮವಾಗಿ ಯಥಾರ್ಥತೆಯನ್ನು ತಿಳಿಸುವೆನು. ಪ್ರಾಣಿಗಳು, ಜಾತಿಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಬೇಧವಿದೆ.
8.            ಹುಲ್ಲು ಹಾಗು ವೃಕ್ಷಗಳಲ್ಲೂ ಸಹಾ, ಅವು ಪ್ರತಿಜ್ಞೆ ಮಾಡಲಾರವು, ಜಾತಿಯ ಲಿಂಗವಿದೆ. ಅವುಗಳಲ್ಲಿ ಜಾತಿಯು ಒಂದರಿಂದ ಇನ್ನೊಂದು ಭಿನ್ನವಿದೆ.
9.            ಅಷ್ಟೇ ಅಲ್ಲ, ಕೀಟ ಪತಂಗಗಳಲ್ಲೂ ಜಾತಿಯಿದೆ, ಲಿಂಗವಿದೆ, ಅದರಲ್ಲೂ ಜಾತಿಯು ಒಂದರಿಂದ ಇನ್ನೊಂದು ಭಿನ್ನವಾಗಿದೆ.
10.          ನೀನು ಬಲ್ಲೆ, ಚಿಕ್ಕ ದೊಡ್ಡ ಚತುಷ್ಪಾದಿಗಳಲ್ಲೂ ಜಾತಿಯಿದೆ, ಲಿಂಗವಿದೆ, ಅದರಲ್ಲೂ ಜಾತಿಯು ಒಂದರಿಂದ ಇನ್ನೊಂದು ಭಿನ್ನವಾಗಿದೆ.
11.          ನೀನು ಬಲ್ಲೆ, ಉದ್ದವಾದ ಬೆನ್ನುಗಳ ಸರ್ಪಗಳಲ್ಲೂ ಜಾತಿಯಿದೆ, ಲಿಂಗವಿದೆ, ಅದರಲ್ಲೂ ಜಾತಿಯು ಒಂದರಿಂದ ಇನ್ನೊಂದು ಭಿನ್ನವಾಗಿದೆ.
12.          ಮತ್ತೆ ಜಲಚರಗಳಾದ ಮೀನುಗಳನ್ನು ಅರಿಯುತ್ತಿಯೇ, ಅವುಗಳಲ್ಲೂ ಸಹಾ ಜಾತಿಯಿದೆ, ಲಿಂಗವಿದೆ, ಅದರಲ್ಲೂ ಜಾತಿಯು ಒಂದರಿಂದ ಇನ್ನೊಂದು ಭಿನ್ನವಾಗಿದೆ.
13.          ಮತ್ತೆ ಆಕಾಶಚಾರಿ ಪತ್ರಯಾನ (ಹಾರುವ) ಪಕ್ಷಿಗಳನ್ನು ಅರಿಯುತ್ತೀಯೆ, ಅವುಗಳಲ್ಲೂ ಜಾತಿಯಿದೆ, ಲಿಂಗವಿದೆ, ಅದರಲ್ಲೂ ಜಾತಿಯು ಒಂದರಿಂದ ಇನ್ನೊಂದು ಭಿನ್ನವಾಗಿದೆ.
14.          ಹೇಗೆ ಈ ಜಾತಿಗಳಲ್ಲಿ ಜಾತಿಯ ವಿಭಿನ್ನ ವಿಭಿನ್ನ ಲಿಂಗವಿದೆಯೋ ಆ ರೀತಿಯ ಜಾತಿಯ ವಿಭಿನ್ನತೆಗಳೂ ಮನುಷ್ಯರಲ್ಲಿ ಇಲ್ಲ.
15.          ಕೇಶಗಳಲ್ಲಾಗಲಿ, ತಲೆಯಲ್ಲಾಗಲಿ, ಕಿವಿಗಳಲ್ಲಾಗಲಿ, ಕಣ್ಣುಗಳಲ್ಲಾಗಲಿ, ಮುಖದಲ್ಲಾಗಲಿ, ನಾಸಿಕದಲ್ಲಾಗಲಿ, ತುಟಿಯಲ್ಲಾಗಲಿ, .............. ಹೆಗಲಲ್ಲಾಗಲಿ, ಬೆನ್ನಲ್ಲಾಗಲಿ, ಹೊಟ್ಟೆಯಲ್ಲಾಗಲಿ...
16.          ಶ್ರೇಣಿಯಲ್ಲಾಗಲಿ, ಗುಪ್ತಸ್ತಾನದಲ್ಲಾಗಲಿ, ಮೈಥುನದಲ್ಲಾಗಲಿ, ಕೈಯಲ್ಲಾಗಲಿ, ಕಾಲಲ್ಲಾಗಲಿ, ಬೆರಳುಗಳಲ್ಲಾಗಲಿ ಮತ್ತು ಉಗುರಿನಲ್ಲಾಗಲಿ....
17.          ಜಂಘೆಯಲ್ಲಾಗಲಿ, ತೊಡೆಯಲ್ಲಾಗಲಿ, ವರ್ಣದಲ್ಲಾಗಲಿ, ಸ್ವರದಲ್ಲೇ ಆಗಲಿ. ಹೇಗೆ ಅನ್ಯ ಜಾತಿಗಳಲ್ಲಿದೆಯೋ ಅಂತಹ ಯಾವ ವಿಭಿನ್ನತೆಯೂ (ಲಿಂಗವೂ, ಜಾತಿಯೂ) ಇಲ್ಲವಾಗಿದೆ.
18.          ಮಾನವರ ಶರೀರದಲ್ಲಿ ಈ ರೀತಿಯ (ಪೂರ್ಣ) ಬೇಧವು ಸಿಗುವುದಿಲ್ಲ. ಮಾನವರಲ್ಲಿ ಬೇಧವು ಸಂಜ್ಞಾ (ಗ್ರಹಿಕೆ) ದಲ್ಲಿ ಮಾತ್ರವಿದೆ.
19.          ವಾಸೆಟ್ಠ, ಮಾನವರಲ್ಲಿ ಯಾರು ಗೋರಕ್ಷೆಯಿಂದ ಜೀವಿಸುತ್ತಾನೋ, ಆತನನ್ನು ಕೃಷಿಕನೆಂದು ಭಾವಿಸು, ಬ್ರಾಹ್ಮಣ ಎಂದಲ್ಲ.
20.          ವಾಸೆಟ್ಠ, ಮಾನವರಲ್ಲಿ ಯಾರು ಶಿಲ್ಪಿತನದಿಂದ ಜೀವಿಸುತ್ತಾನೋ ಆತನನ್ನು ಶಿಲ್ಪಿ ಎಂದು ಭಾವಿಸು, ಬ್ರಾಹ್ಮಣ ಎಂದಲ್ಲ.
21.          ವಾಸೆಟ್ಠ, ಮಾನವರಲ್ಲಿ ಯಾರು ವ್ಯಾಪಾರದಿಂದ ಜೀವಿಸುವರೋ ಅವರನ್ನು ವ್ಯಾಪಾರಿಗಳೆಂದು ಭಾವಿಸು, ಬ್ರಾಹ್ಮಣನೆಂದಲ್ಲ.
22.          ಮಾನವರಲ್ಲಿ ಯಾರು ಪರರ ಕೆಲಸದಿಂದ ಜೀವಿಸುತ್ತಿದ್ದಾನೆಯೋ ಆತನನ್ನು ಪರರ ದಾಸ ಎಂದೆಣಿಸಿಕೋ, ಬ್ರಾಹ್ಮಣನೆಂದಲ್ಲ.
23.          ವಾಸೆಟ್ಠ, ಮಾನವರಲ್ಲಿ ಯಾರು ಕೊಡದಿರುವುದನ್ನು ಅಪಹರಿಸಿ ಜೀವಿಸುತ್ತಾನೆಯೋ ಆತನನ್ನು ಕಳ್ಳನೆಂದು ಭಾವಿಸು, ಬ್ರಾಹ್ಮಣನೆಂದಲ್ಲ.
24.          ವಾಸೆಟ್ಠ, ಮಾನವರಲ್ಲಿ ಯಾರು ಈಷ್ಯರ್ೆ-ಅಸ್ತ್ರದಿಂದ ಜೀವಿಸುತ್ತಾನೆಯೋ ಆತನನ್ನು ಯೋಧನೆಂದು ಭಾವಿಸು, ಬ್ರಾಹ್ಮಣನೆಂದಲ್ಲ.
25.          ವಾಸೆಟ್ಠ, ಮಾನವರಲ್ಲಿ ಯಾರು ಪುರೋಹಿತರೋ, ಆತನನ್ನು ಯಾಜಕನೆಂದು ಭಾವಿಸು, ಬ್ರಾಹ್ಮಣನೆಂದಲ್ಲ.
26.          ಮಾನವರಲ್ಲಿ ಯಾರು ರಾಷ್ಟ್ರದ ಉಪಯೋಗ ಮಾಡುತ್ತಿರುವನೋ, ಆತನನ್ನು ರಾಜನೆಂದು ಭಾವಿಸು, ಬ್ರಾಹ್ಮಣನೆಂದಲ್ಲ.
27.          ಮಾತೆಯಿಂದ ಮತ್ತು ಯೋನಿಯಿಂದ ಉತ್ಪನ್ನನಾಗುವ ಕಾರಣದಿಂದಲೇ ಬ್ರಾಹ್ಮಣನಾಗುವುದಿಲ್ಲ. ಆತನು ಭೂ-ವಾಸಿಯಾಗುತ್ತಾನೆ. ಆತನಾದರೋ ಸಂಗ್ರಹಿಯಾಗಿದ್ದಾನೆ, ಬ್ರಾಹ್ಮಣನಾದರೋ ಅಪಗ್ರಹಿ (ಅಸಂಗ್ರಹಕಾರಕ) ಆಗಿರುತ್ತಾನೆ.
28.          ಯಾರು ಲೋಕದ ಸರ್ವ ಸಂಯೋಜನೆಗಳನ್ನು (ಬಂಧನ) ಕತ್ತರಿಸಿ, ಭಯಪಡನೋ, ಯಾರು ಸಂಗ ಹಾಗು ಆಸಕ್ತಿರಹಿತನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
29.          ನಂದಿ (ಕ್ರೋಧ), ವರತ್ರ (ತೃಷ್ಣಾರೂಪಿ ಹಗ್ಗ) ಸಂದಾನ (62 ಬಗೆಯ ಮಿಥ್ಯಾದೃಷ್ಟಿಗಳು) ಮತ್ತು ಹನುಕ್ರಮ (ಬಾಯಲ್ಲಿ ಕಟ್ಟುವ ಬಾಯಿಕಲ್ಲಿ) ಗಳನ್ನೆಲ್ಲಾ ಕತ್ತರಿಸಿ, ವಿರೋಧಿಯನ್ನು ಜಯ ಪ್ರಾಪ್ತಿಮಾಡಿ, ಎಸೆದು ಯಾರು ಬುದ್ಧರಾಗಿರುವರೋ, ಅವರನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
30.          ಯಾರು ಅಲ್ಪವೂ ವಿರೋಧಿಸದೆ, ನಿಂದೆ, ವಧೆ, ಬಂಧಗಳನ್ನು ಸಹಿಸುವನೋ, ಯಾರೂ ಕ್ಷಮೆಯ ಬಲದ (ಸೇನೆಯ) ಸೇನಾಧಿಪತಿಯೋ ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
31.          ಯಾರು ಅಕ್ರೋಧಿಯೋ, ವ್ರತಿಯೋ, ಶೀಲವಂತನೋ, ಬಹುಶ್ರುತನೋ, ಸಂಯಮಿಯೋ ಮತ್ತು ಅಂತಿಮ ಶರೀರಧಾರಿಯೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
32.          ಕಮಲದ ಎಲೆಯ ಮೇಲಿರುವ ಜಲದಂತೆ ಮತ್ತು ಸೂಜಿಯ ಮೇಲಿರುವ ಸಾಸುವೆಯಂತೆ ಯಾರು ಭೋಗಗಳಿಗೆ ಲಿಪ್ತನಾಗುವುದಿಲ್ಲವೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
33.          ಯಾರು ಈ ಜನ್ಮದಲ್ಲಿ ತನ್ನ ದುಃಖವನ್ನೆಲ್ಲಾ ವಿನಾಶ ಮಾಡಿರುವನೋ, ಯಾರು ತನ್ನೆಲ್ಲಾ ಭಾರವನ್ನು ಇಳಿಸಿ ಎಸೆದಿರುವನೋ ಮತ್ತು ಆಸಕ್ತರಹಿತನಾದ ಆತನಿಗೆ ನಾನು ಬ್ರಾಹ್ಮಣ ಎನ್ನುತ್ತೇನೆ.
34.          ಯಾರು ಗಂಭೀರ ಪ್ರಜ್ಞಾವಂತನೋ, ಮೇಧಾವಿಯೋ, ಮಾರ್ಗ-ಅಮಾರ್ಗದಶರ್ಿಯೋ, ಉತ್ತಮ ಪದಾರ್ಥ (ಸತ್ಯ) ಪಡೆದಿರುವನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
35.          ಗೃಹಸ್ಥರಲ್ಲಾಗಲಿ ಮತ್ತು ಗೃಹತ್ಯಾಗಗಳಲ್ಲೇ ಆಗಲಿ ಯಾರು ಲಿಪ್ತನಾಗುವುದಿಲ್ಲವೋ, ಯಾರು ಎಲ್ಲಿಯೂ ಉಳಿಯದೆ ಸಂಚರಿಸುತ್ತಿರುವನೊ ಹಾಗು ಇಚ್ಛಾರಹಿತನೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
36.          ಚಲಿಸುವಂತಹದ್ದಾಗಿರಲಿ, ಅಚರ ಜೀವಿಗಳೇ ಆಗಲಿ, ಯಾರು ಜೀವಿಗಳನ್ನು ಹಿಂಸಿಸುವುದಿಲ್ಲವೋ, ಹತ್ಯೆ ಮಾಡುವುದಿಲ್ಲವೋ, ಅಥವಾ ಮಾಡಿಸಲು ಪ್ರೇರಣೆ ನೀಡುವುದಿಲ್ಲವೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
37.          ಯಾರು ವಿರೋಧಿಗಳಲ್ಲಿ ವಿರೋಧರಹಿತನೋ, ಯಾರು ದಂಡ (ಶಸ್ತ್ರ)ಧಾರಿಗಳಲ್ಲಿ ದಂಡರಹಿತನೋ, ಸಂಗ್ರಹಿಗಳಲ್ಲಿ ಸಂಗ್ರಹರಹಿತನೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
38.          ಸೂಜಿಯ ಮೇಲಿನ ಸಾಸುವೆಯಂತೆ ಯಾರಲ್ಲಿ ರಾಗ, ದ್ವೇಷ, ಅಹಂಕಾರ, ಅಸೂಯೆಗಳು ಉರುಳಿಹೋಗಿವೆಯೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
39.          ಈ ರೀತಿಯಿಂದ ಆಕರ್ಷಕವಾಗಿ, ಆಧಾರಯುಕ್ತನಾಗಿ (ಪ್ರಿಯ), ಸತ್ಯವಾಣಿಯನ್ನು ಹೇಳಬೇಕು, ಅದರಿಂದ ಯಾರಿಗೂ ನೋವು ಆಗಬಾರದು ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
40.          ಪದಾರ್ಥವು (ವಸ್ತು) ದೊಡ್ಡದಾಗಿಯೇ ಇರಲಿ, ಚಿಕ್ಕದಾಗಿಯೇ ಇರಲಿ. ಒಳ್ಳೆಯದಾಗಿಯೇ ಇರಲಿ, ಅಥವಾ ಕೆಟ್ಟದೆ (ಅಶುಭ) ಆಗಿರಲಿ, ಯಾರು ಲೋಕದಲ್ಲಿ ಯಾವುದೇ ನೀಡದ ವಸ್ತುವನ್ನು ತೆಗೆದುಕೊಳ್ಳುದಿಲ್ಲವೋ ಆತನನ್ನು ಬ್ರಾಹ್ಮಣ ಎನ್ನುತ್ತೇನೆ.
41.          ಈ ಲೋಕದ ಬಗ್ಗೆಯಾಗಲಿ ಮತ್ತು ಪರಲೋಕದ ಬಗ್ಗೆಯಾಗಲಿ ಯಾರ ಆಶಯಗಳು ಇಲ್ಲವಾಗಿವೆಯೋ, ಯಾರು ಆಸೆರಹಿತನು ಹಾಗು ಅನಾಸಕ್ತನಾಗಿರುವನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
42.          ಯಾರಲ್ಲಿ ಆಲಯ (ತೃಷ್ಣೆ) ವಿಲ್ಲವೋ, ಯಾರು ಚೆನ್ನಾಗಿ ಅರಿತು ಅವರ್ಣನಿಯವಾದುದನ್ನು ವಿವರಿಸುವರೋ, ಯಾರು ಆಳವಾದ ಅಮೃತವನ್ನು ಪಡೆದಿರುವವನೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
43.          ಯಾರು ಪುಣ್ಯ ಹಾಗು ಪಾಪ ಎರಡರಲ್ಲೂ ಆಸಕ್ತಿ ತೊರೆದಿರುವವನೋ, ಯಾರು ಶೋಕರಹಿತನೋ, ನಿರ್ಮಲನೋ ಹಾಗು ಶುದ್ಧನೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
44.          ಯಾರು ಚಂದಿರನಂತೆ ವಿಮಲನೋ, ಶುದ್ಧನೋ, ಸ್ವಚ್ಛನೋ (ಅನಾಮಿ) ಹಾಗು ಯಾರಲ್ಲಿ ಜನ್ಮಕ್ಕೆ ಕಾರಣವಾದ ಸರ್ವ ತೃಷ್ಣೆಗಳು ನಷ್ಟವಾಗಿವೆಯೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
45.          ಯಾರು ಈ ದುರ್ಗಮ ಸಂಸಾರದಲ್ಲಿ ಸುತ್ತಾಡುವ ಮೋಹರೂಪಿ ತಲೆಕೆಳಗು ಮಾರ್ಗವನ್ನು ತ್ಯಜಿಸಿರುವನೋ, ಯಾರು ಪಾರಂಗತನು, ಧ್ಯಾನಿಯು ಹಾಗು ತೀರ ಸೇರಿದವನೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
46.          ಯಾರು ಇಲ್ಲಿ ಭೋಗಗಳನ್ನು ಬಿಟ್ಟು, ಗೃಹತ್ಯಾಗಿಯಾಗಿ ಪ್ರವಜರ್ಿತನಾಗಿರುವನೋ ಯಾರ ಭೋಗ ಮತ್ತು ಜನ್ಮ ನಷ್ಟವಾಗಿರುವವೊ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
47.          ಯಾರು ಇಲ್ಲಿ ತೃಷ್ಣೆಯನ್ನು ವಜರ್ಿಸಿ, ಅನಿಕೇತನನಾಗಿ ಪಬ್ಬಜ್ಜನಾಗಿರುವನೋ, ಯಾರಲ್ಲಿ ತೃಷ್ಣೆ ಹಾಗು ಪುನರ್ಜನ್ಮ ನಷ್ಟವಾಗಿದೆಯೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
48.          ಯಾರು ಮಾನವ-ಭೋಗ ಬಂಧನರಹಿತನಾಗಿ ದಿವ್ಯ ಭೋಗದ ಬಂಧನವನ್ನು ತ್ಯಾಗ ಮಾಡಿರುವನೋ ಸರ್ವ ಬಂಧನಗಳಲ್ಲಿ ಯಾರು ಆಸಕ್ತರಹಿತನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
49.          ರತಿ ಮತ್ತು ಅರತಿ (ಬೇಸರ) ಗಳನ್ನು ವಜರ್ಿಸಿ, ಯಾರು ಶೀತಲ ಸ್ವಭಾವದವನೋ ಹಾಗು ಕ್ಲೇಶರಹಿತನೋ, ಹೀಗೆ ಯಾರು ಸರ್ವಲೋಕ ವಿಜಯಿಯೋ, ವೀರನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
50.          ಯಾರು ಜೀವಿಗಳ ಚ್ಯುತಿ ಹಾಗು ಉತ್ಪತ್ತಿಯನ್ನು ಚೆನ್ನಾಗಿ ಅರಿತಿರುವನೋ, ಯಾರು ಆಸಕ್ತಿರಹಿತ ಸುಗತ (ಸುಂದರ ಸುಶ್ರೇಷ್ಠ ಗತಿ ಪಡೆದಿರುವವರು) ಹಾಗು ಬುದ್ಧರಾಗಿರುವರೋ ಅವರನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
51.          ಯಾರ ಸ್ಥಿತಿಯನ್ನು ದೇವತೆಗಳೂ, ಗಂಧರ್ವರೂ ಹಾಗು ಮಾನವರು ಅರಿಯಲಾರರೋ, ಕ್ಷೀಣಾಸವ ಹಾಗು ಅರಹಂತರಾಗಿರುವರೋ ಅವರನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
52.          ಯಾರ ಪೂರ್ವದ ಹಾಗು ಅನಂತರದ ಮತ್ತು ಮಧ್ಯದಲ್ಲಿ ಏನೂ ಇಲ್ಲವೋ, ಯಾರು ಪರಿಗ್ರಹಿರಹಿತ (ಅನಾದಾನ) ನಾಗಿರುವನೋ, ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
53.          ಯಾರು ವೃಷಭರೋ, (ನಾಯಕ), ಪ್ರವರರೋ, ಮಹಷರ್ಿಯೋ, ವಿಜೇತರೋ, ಅಕಂಪ್ಯರೋ (ಭಯರಹಿತ), ಸ್ನಾನಕರೋ ಮತ್ತು ಬುದ್ಧರೋ ಅವರನ್ನು ಬ್ರಾಹ್ಮಣ ಎನ್ನುತ್ತೇನೆ.
54.          ಯಾರು ಪೂರ್ವ ಜನ್ಮವನ್ನು ಅರಿತಿರುವರೋ, ಸುಗತಿ ಹಾಗು ದುರ್ಗತಿಗಳನ್ನು ನೋಡುವರೋ, ಮತ್ತು ಯಾರ ಪುನರ್ಜನ್ಮ ಕ್ಷೀಣಿಸಿ ಇಲ್ಲವಾಗಿದೆಯೋ, ಯಾರು ಅಭಿಜ್ಞಾ-ಪರಾಯಣ (ಪವಾಡಸಿದ್ಧ) ಮುನಿಯೋ ಹಾಗು ಯಾರ ಕೃತ್ಯಗಳು ಸಂಪೂರ್ಣವಾಗಿ ಸಮಾಪ್ತಿ ಆಗಿದೆಯೋ ಅವರನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
55.          ಲೋಕದಲ್ಲಿ ಯಾವ ಸಂಜ್ಞೆಗಳೂ ಇವೆಯೋ, ಅವು ಕಲ್ಪಿತನಾಮ ಗೋತ್ರವಾಗಿದೆ. ಅಲ್ಲಲ್ಲಿ ಕಲ್ಪಿಸಿ ಲೋಕ ವ್ಯವಹಾರವು ನಡೆದುಬಂದಿದೆ.
56.          ಆಜ್ಞೆಯ ಧಾರಣೆಯಿಂದ ಇದು ಚಿರಕಾಲದಿಂದ ನುಸುಳಿ ಬಂದಿದೆ. ಅರಿತ ಪ್ರಾಜ್ಞರೆಲ್ಲಾ ಜನ್ಮದಿಂದ ಬ್ರಾಹ್ಮಣ ಎಂದು ಹೇಳುವುದಿಲ್ಲ.
57.          ಜನ್ಮದಿಂದ ಬ್ರಾಹ್ಮಣನಾಗುವುದಿಲ್ಲ, ಅಬ್ರಾಹ್ಮಣನೂ ಆಗುವುದಿಲ್ಲ, ಕರ್ಮದಿಂದಲೇ ಬ್ರಾಹ್ಮಣನಾಗುತ್ತಾನೆ ಹಾಗು ಕರ್ಮದಿಂದಲೇ ಅಬ್ರಾಹ್ಮಣನಾಗುತ್ತಾನೆ.
58.          ಕರ್ಮದಿಂದಲೇ ಕೃಷಿಕನಾಗುತ್ತಾನೆ, ಕರ್ಮದಿಂದಲೇ ಶಿಲ್ಪಿ, ಕರ್ಮದಿಂದಲೇ ವ್ಯಾಪಾರಿಯಾಗುತ್ತಾನೆ, ಕರ್ಮದಿಂದಲೇ ಪ್ರೇಶ್ಯಕನೂ ಆಗುತ್ತಾನೆ.
59.          ಕರ್ಮದಿಂದಲೇ ಕಳ್ಳನಾಗುವನು, ಯೋಧನು ಕರ್ಮದಿಂದಲೇ ಆಗುವನು, ಕರ್ಮದಿಂದಲೇ ಯಾಜಕ ಆಗುತ್ತಾನೆ ಮತ್ತು ರಾಜನೂ ಸಹಾ ಕರ್ಮದಿಂದಲೇ ಆಗುತ್ತಾನೆ.
60.          ಪಟಿಚ್ಚ ಸಮುಪ್ಪಾದದ ದಶರ್ಿಯು (ಕಾರ್ಯ/ಕಾರಣ ದರ್ಶಕನು) ಮತ್ತು ಕರ್ಮಫಲ ವಿವರಿಸುವ ಕೋವಿದನು ಹಾಗು ಪಂಡಿತರು ಇದನ್ನು ಯಥಾರ್ಥವಾಗಿ ಅರಿತಿರುತ್ತಾರೆ.
61.          ಲೋಕವು ಕರ್ಮದಿಂದಲೇ ನಡೆದುಬಂದಿದೆ. ಪ್ರಜೆಗಳೂ ಕರ್ಮದಿಂದಲೇ ಚಲಿಸುತ್ತಿರುವುದು, ಚಲಿಸುತ್ತಿರುವ ರಥದ ಚಕ್ರದ ರೀತಿ ಜೀವಿಗಳು ಕರ್ಮದಿಂದ ಬಂಧಿತರಾಗಿರುವರು.
62.          ತಪ, ಬ್ರಹ್ಮಚರ್ಯ, ಸಂಯಮ ಹಾಗು ದಮ ಇವುಗಳಿಂದ ಬ್ರಾಹ್ಮಣ ಆಗುತ್ತಾನೆ. ಆತನೇ ಬ್ರಾಹ್ಮಣೋತ್ತಮ ಆಗಿರುವನು.
63.          ವಾಸೆಟ್ಠ, ಮೂರು ವಿದ್ಯೆ (ತಿಲಕ್ಷಣ) ಗಳಿಂದ ಯುಕ್ತನಾದ, ಶಾಂತ ಹಾಗು ಪುನರ್ಜನ್ಮರಹಿತನನ್ನು ನೀನು ವಿಜ್ಞಾಗಳ ಬ್ರಹ್ಮ ಹಾಗು ಶಕ್ರ ಎಂದು ಅರಿತುಕೋ!
                ಹೀಗೆ ಭಗವಾನರು ನುಡಿದ ನಂತರ ವಾಸೆಟ್ಠ ಹಾಗು ಭಾರದ್ವಾಜರು ಭಗವಾನರೊಂದಿಗೆ ಹೀಗೆ ನುಡಿದರು-ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ಹೇ ಭಗವಾನ್, ನಾವು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನಮ್ಮನ್ನು ಅಂಜಲೀಬದ್ಧ ಶರಣಾಗತ ಉಪಾಸಕರೆಂದು ಸ್ವೀಕರಿಸಿ.

ಇಲ್ಲಿಗೆ ವಾಸೆಟ್ಠ ಸುತ್ತ ಮುಗಿಯಿತು.

No comments:

Post a Comment