Friday 29 May 2015

attadanda sutta in kannada 15. ಅತ್ತದಂಡ ಸುತ್ತ

15. ಅತ್ತದಂಡ ಸುತ್ತ

(ಭಗವಾನರ ಗೃಹತ್ಯಾಗದ ಕಾರಣ)
1.            ತನ್ನ ದುಷ್ಕರ್ಮದಿಂದಲೇ ಭಯ ಉತ್ಪನ್ನವಾಗುತ್ತದೆ. ಕಲಹವಾಡುತ್ತಿರುವ ಜನರನ್ನು ನೋಡಿ, ನಾನು ಸಂವೇಗ (ವೈರಾಗ್ಯ)ದ ಮಾತನ್ನು ಆಡುವೆ. ಹೇಗೆ ನನ್ನಲ್ಲಿ ಸಂವೇಗಪ್ರಾಪ್ತಿ ಆಗಿತ್ತೆಂದು.
2.            ಹೇಗೆ ಅಲ್ಪ ಜಲದಲ್ಲಿ ಮತ್ಸ್ಯಗಳು ಒದ್ದಾಡುತ್ತಿರುತ್ತವೆಯೋ ಹಾಗೆಯೇ ಜನರು ಒದ್ದಾಡುವುದನ್ನು ಒಬ್ಬರ ವಿರುದ್ಧ ಮತ್ತೊಬ್ಬರಾಗಿರುವ ಜನರನ್ನು ನೋಡಿ ನನ್ನಲ್ಲಿ ಭಯ (ಅನುಕಂಪ) ವಾಯಿತು.
3.            ಸರ್ವಲೋಕವು ಅಸಾರವಾಗಿದೆ, ಸರ್ವ ದಿಕ್ಕುಗಳೂ ವಿಚಲಿತವಾಗಿದೆ. ನನಗೆ ಕಲ್ಯಾಣಕಾರಿ ಸ್ಥಾನ ಹುಡುಕುತ್ತಾ ನಾನು ಎಲ್ಲಿಯೂ ಆಪತ್ತಿನಿಂದ ಬರಿದಾದುದನ್ನು ಕಾಣಲಿಲ್ಲ.
4.            ಅಂತ್ಯದಲ್ಲಿ ಸರ್ವತ್ರವು ವಿರೋಧಭಾವವನ್ನು ಕಂಡು ನನಗೆ ವೈರಾಗ್ಯವಾಯಿತು. ಆಗ ನಾನು ನೋಡುವಿಕೆಯಲ್ಲಿ ದುದರ್ುಶ್ಯವನ್ನು ಹಾಗು ಹೃದಯದಲ್ಲಿ ಮುಳ್ಳನ್ನು ನೋಡಿದೆ.
5.            ಯಾವ ಮುಳ್ಳಿನಿಂದ ಚುಚ್ಚಿಸಿಕೊಂಡ ವ್ಯಕ್ತಿ ಹೇಗೆ ಸರ್ವ ದಿಕ್ಕುಗಳಿಗೂ ಓಡುವನೋ, ಅದೇ ಮುಳ್ಳನ್ನು ತೆಗೆದನಂತರ ಆತನು ಓಡುವುದೂ ಇಲ್ಲ ಮತ್ತು ಮುಳುಗುವುದೂ ಇಲ್ಲ.
6.            ಈ ಲೋಕದಲ್ಲಿ ಆಸಕ್ತಿಜನಕವಾದ ಬಹಳಷ್ಟು ಶಿಕ್ಷಣ ನೀಡಲಾಗುತ್ತದೆ. ಅದರಲ್ಲಿ ಅಂಟದಿರಲಿ. ಸರ್ವ ಕಾಮನೆಗಳ ಬಗ್ಗೆ ಉಪೇಕ್ಷೆ ತಾಳಿ ತನ್ನ ಮುಕ್ತಿಗಾಗಿ ಅಭ್ಯಾಸ ಮಾಡಲಿ.
7.            ಮುನಿಯು ಸತ್ಯವಾದಿಯಾಗಲಿ, ಹಠಮಾರಿಯಾಗದಿರಲಿ, ಮಾಯಾವಿಯಾಗದಿರಲಿ, ಚಾಡಿ ಹೇಳುವವನು ಆಗದಿರಲಿ, ಕ್ರೋಧ, ಕೋಭ, ಪಾಪ ಹಾಗು ಸ್ವಾರ್ಥ ರಹಿತನಾಗಿ ವಾಸಿಸಲಿ.
8.            ನಿಬ್ಬಾಣ ಬಯಸುವಂತಹ ವ್ಯಕ್ತಿ ನಿದ್ರೆ, ಜಡತೆ ಹಾಗು ಆಲಸ್ಯವನ್ನು ಜಯಿಸಲಿ. ಅಜಾಗರೂಕನಾಗದಿರಲಿ, ಅಭಿಮಾನದಲ್ಲಿ ಬೀಳದಿರಲಿ.
9.            ಅಸತ್ಯದ ಭಾಷಣ ಮಾಡದಿರಲಿ, ದೇಹದ ಬಗ್ಗೆ ಸ್ನೇಹ ತಾಳದಿರಲಿ, ಅಹಂ ಅನ್ನು ತ್ಯಜಿಸಿಲಿ, ಹಿಂಸೆಯಿಂದ ವಿರತನಾಗಿ ಜೀವಿಸಲಿ.
10.          ಹಳೆಯ ಕಾರ್ಯವನ್ನು ಅಭಿನಂದನೆ ಮಾಡದಿರಲಿ, ಹೊಸದನ್ನು ಬಯಸದಿರಲಿ, ಕಳೆದುಹೋದುದನ್ನು ಚಿಂತೆ ಮಾಡದಿರಿಲಿ ಮತ್ತು ತೃಷ್ಣೆಯಲ್ಲಿ ಲಿಪ್ತನಾಗದಿರಲಿ.
11.          ನಾನು ಲೋಭವನ್ನು ಮಹಾ ಪ್ರವಾಹ ಎನ್ನುತ್ತೇನೆ. ಆಸಕ್ತಿಗೆ ಹರಟೆ ಎನ್ನುತ್ತೇನೆ. ಅವಲಂಬನೆ ಕಂಪನವಾಗಿದೆ ಮತ್ತು ಕಾಮಭೋಗವು ದುಷ್ಕರವಾದ ಕೆಸರಾಗಿದೆ.
12.          ಪರಮಶ್ರೇಷ್ಠ ಮುನಿಯು ಸತ್ಯದಿಂದ ಅಲುಗಾಡದೆ ನಿಬ್ಬಾಣರೂಪಿ ಸ್ಥಳದಲ್ಲಿ ಸ್ಥಿತರಾಗಿರುವರು. ಸರ್ವ ತ್ಯಾಗಿಯಾದ ಅವರು ಅವಶ್ಯಕವಾಗಿ ಶಾಂತರೆಂದು ಕರೆಯಲ್ಪಡುವರು.
13.          ಅವರೇ ವಿದ್ವಾನರಾಗಿರುವರು, ಅವರೇ ಜ್ಞಾನಿಯಾಗಿರುವರು, ಧಮ್ಮವನ್ನು ಅರಿತು ಅನಾಸಕ್ತರಾಗಿ ಯಾವುದನ್ನು ಬಯಸದೆ ಸಮ್ಯಕ್ ರೂಪದಿಂದ ಲೋಕದಲ್ಲಿ ಸಂಚರಿಸುತ್ತಿರುವರು.
14.          ಲೋಕದಲ್ಲಿ ದುಸ್ತರವಾದ ಆಸಕ್ತಿಯಾದ ಕಾಮಭೋಗಗಳನ್ನು ಯಾರು ತ್ಯಾಗ ಮಾಡಿರುವನೋ, ಆತನು ಇಂತಹ ಧಾರೆಯನ್ನು ಕತ್ತರಿಸಿದ್ದಾನೆ. ಆ ಬಂಧನರಹಿತನೂ ಶೋಕಪಡುವುದಿಲ್ಲ ಹಾಗು ಚಿಂತೆಯನ್ನು ಪಡುವುದಿಲ್ಲ.
15.          ಯಾವುದು ಮೊದಲಿನ ಆಸಕ್ತಿಯಾಗಿದೆಯೋ, ಅದನ್ನು ತ್ಯಜಿಸಲಿ. ಹಿಂದೆ ಯಾವುದನ್ನು ಗ್ರಹಣೆ ಮಾಡದಿರಲಿ. ಮಧ್ಯದಲ್ಲೂ ಗ್ರಹಣ ಮಾಡದೆ ಉಪಶಾಂತನಾಗಿ ಜೀವಿಸಲಿ.
16.          ಯಾರಿಗೆ ದೇಹ ಮತ್ತು ಮನಸ್ಸಿನ ಬಗ್ಗೆ ಸರ್ವಸ್ವವು ಮಮತೆಯಿಲ್ಲವೋ, ಯಾರು ಇಲ್ಲದುದಕ್ಕಾಗಿ ಶೋಕಪಡುವುದಿಲ್ಲವೋ ಆತನು ಲೋಕದಲ್ಲಿ ಜನ್ಮಗ್ರಹಣ ಮಾಡುವುದಿಲ್ಲ.
17.          ಯಾರಿಗೆ ಯಾವುದೇ ವಸ್ತುವಿನ ವಿಷಯದಲ್ಲಿ ಇದು ನನ್ನದು ಅಥವಾ ಇದು ಪರರದು ಹೀಗೆ ಆಗುವುದಿಲ್ಲವೋ, ಮಮತ್ವದಲ್ಲಿ ಬೀಳದಿರುವವನು ನನ್ನದಲ್ಲ ಎಂದು ಅರಿತು ಶೋಕಪಡುವುದಿಲ್ಲ.
18.          ಅನಿಷ್ಠುರತೆ, ನಿಲರ್ೊಭತೆ, ವಿತೃಷ್ಣೆ, ಸರ್ವರ್ತ ಸಮಚಿತ್ತತೆ ಇದರಲ್ಲಿರುವವನು, ಕೇಳಿದಾಗ ನಿರ್ಭಯದ ಸುಪರಿಣಾಮವನ್ನು ತಿಳಿಸುತ್ತಾನೆ.
19.          ತೃಷ್ಣಾರಹಿತನಾದ ವಿಜ್ಞನಿಗೆ ಯಾವುದೇ ಸಂಖಾರವಿರುವುದಿಲ್ಲ. ವಿರತನಾಗಿ ಆತನು ಸರ್ವತ್ರ ಕ್ಷೇಮವನ್ನು ಕಾಣುತ್ತಾನೆ.
20.          ಮುನಿಯು ಸಮಾನರಲ್ಲಿ, ನೀಚರಲ್ಲಿ ಅಥವಾ ಶ್ರೇಷ್ಠರಲ್ಲಿ ತನ್ನನ್ನು ಹೋಲಿಸಿಕೊಳ್ಳಲಾರ. ಶಾಂತ, ಸ್ವಾರ್ಥರಹಿತ ಆತನು ಯಾವುದೋ ಗ್ರಹಣೆಯನ್ನು ಮಾಡುವುದಿಲ್ಲ ಅಥವಾ ಬಿಡುವುದು ಇಲ್ಲ.

ಇಲ್ಲಿಗೆ ಆತ್ತದಂಡ ಸುತ್ತ ಮುಗಿಯಿತು.

No comments:

Post a Comment