Friday 29 May 2015

saariputta sutta in kannada 16. ಸಾರಿಪುತ್ತ ಸುತ್ತ

16. ಸಾರಿಪುತ್ತ ಸುತ್ತ
(ಭಿಕ್ಷುಚಯರ್ಾ)

1.            ಸಾರಿಪುತ್ರರು - ತುಸಿತಾ ಲೋಕದಿಂದ ಮಾನವ ಲೋಕದವರೆಗೂ ಇಂತಹ ಮೃದು ಸುಮಧುರ ಭಾಷಿಯಾದ ಶ್ರೇಷ್ಠ ಗುರುವನ್ನು ನಾನು ಇದುವರೆಗೂ ನೋಡಿರಲಿಲ್ಲ, ಹಾಗೆಯೇ ಕೇಳಿಯೂ ಇರಲಿಲ್ಲ.
2.            ದೇವತೆಗಳ ಸಹಿತ ಲೋಕದಲ್ಲಿ ಹೇಗೆ ಚಕ್ಷುವಂತರು ಕಾಣುತ್ತಾರೆಂದರೆ, ಸರ್ವ ಅಂಧಕಾರವನ್ನು ದೂರ ಮಾಡಿದಂತೆ, ಅವರು ಏಕಾಂತದಲ್ಲಿ ಏಕಾಕಿಯಾಗಿ ಪ್ರವಜ್ರ್ಯಸುಖ ಪ್ರಾಪ್ತಿಯಲ್ಲಿ ಸುಖಿಯಾಗಿರುತ್ತಾರೆ.
3.            ಮಾನವರ ಮಧ್ಯೆ ಬಂದಿರುವ ಅನಾಸಕ್ತ, ಸ್ಥಿರ, ನಿಷ್ಕಪಟ ಬುದ್ಧರಲ್ಲಿ ಬದ್ಧಜೀವಿಗಳ ಪರವಾಗಿ ನಾನು ಅನೇಕ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದೇನೆ.
4-5. ವೃಕ್ಷ ಮೂಲದಲ್ಲಿ, ಸ್ಮಶಾಣಗಳಲ್ಲಿ, ಪರ್ವತಗಳಲ್ಲಿ ಅಥವಾ ಗುಹೆಗಳಲ್ಲಿ ಏಕಾಂತ ಚಿತ್ತದ ಅಭ್ಯಾಸ ಮಾಡುವ ಅನಾಸಕ್ತ ಭಿಕ್ಷುವು ವಿವಿಧ ಸ್ಥಳಗಳಲ್ಲಿ ಎಷ್ಟೋ ರೀತಿ ಭಯಾನಕ ಶಬ್ದಗಳು ಕೇಳುವವು, ಅವುಗಳಿಂದ ಭಿಕ್ಷುವು ಕಂಪಿತನಾಗದಿರಲಿ.
6.            ನಿಬ್ಬಾಣದ ಹಾದಿಯಲ್ಲಿ ಬರುವ ಎಷ್ಟೇ ಸಂಕಷ್ಟಗಳಿರಲಿ, ಅವನ್ನು ಭಿಕ್ಷುವು ಏಕಾಂತ ಶಯನಾಸನದಲ್ಲಿ ಇದ್ದು ಅವನ್ನು ದೂರಮಾಡಲಿ.
7.            ಸಂಯಮಿ ಭಿಕ್ಖುವಿನ ವಚನಗಳು ಹೇಗಿರುತ್ತವೆ? ಆತನ ಗೋಚರವು ಹೇಗಿರುತ್ತದೆ? ಮತ್ತು ಆತನ ಶೀಲಗಳು ಹೇಗಿರುತ್ತವೆ?
8.            ಏಕಾಂತ ಸೇವಿಯಾದ ಜ್ಞಾನಿ ಮತ್ತು ಸ್ಮೃತಿವಂತ ಭಿಕ್ಖುವು ಯಾವರೀತಿಯಲ್ಲಿ ಶಿಕ್ಷಣವನ್ನು ಗ್ರಹಿಸಿ ಅಕ್ಕಸಾಲಿಗನು ಬೆಳ್ಳಿಯನ್ನು ಶುದ್ದಿಮಾಡುವ ತೆರದಿ ತನ್ನ ಕಲ್ಮಶಗಳನ್ನು ದೂರೀಕರಿಸುತ್ತಾನೆ.
9.            ಭಗವಾನರು - ವಿರಕ್ತಚಿತ್ತನ, ಏಕಾಂತಜೀವಿಯೂ ಧಮರ್ಾನುಸಾರವಾಗಿ ಸಂಬೋಧಿಯ ಇಚ್ಚಿಕನಿಗೆ ಯಾವುದು ಅನುಕೂಲವೋ ಅವುಗಳ ಬಗ್ಗೆ ನಿಮಗೆ ಹೇಳುವೆನು.
10.          ಧೀರನು, ಸ್ಮೃತಿವಂತನು, ಸಂಯಮಗಳ ಆಚರಣೆ ಮಾಡುವಂತಹ ಭಿಕ್ಷುವು 5 ವಿಷಯಗಳಲ್ಲಿ ಭಯಭೀತನಾಗುವುದಿಲ್ಲ. ಅವೆಂದರೆ; ಸೊಳ್ಳೆಗಳು, ಸರ್ಪಗಳು, ಪ್ರಾಣಿಗಳ ಮತ್ತು ಮಾನವರ ಸ್ಪರ್ಶಗಳಲ್ಲಿ ಭಯಭೀತನಾಗಲಾರ.
11.          ಹಾಗೂ ಬೇರೆ ಧಮರ್ಾವಲಂಬಿಗಳ ವೇಷಗಳನ್ನು ಕಂಡು ಭಯಭೀತನಾಗಲಾರ, ಕುಶಲ ಶ್ರಮಿಯು ಬೇರೆ ಅಡಚಣೆಗಳನ್ನು ಎದುರಿಸಲಿ.
12.          ರೋಗ ನೋವುಗಳನ್ನು, ಹಸಿವು, ಶೀತೋಷ್ಣಗಳನ್ನು ಸಹಿಸಲಿ. ಅನೇಕ ವಿಧವಾದ ಪೀಡನೆಗಳನ್ನು ಆ ಅನಿಕೇತನ, ಪರಾಕ್ರಮಿಯು ದೃಢತೆಯಿಂದ ಎದುರಿಸಲಿ. ವೀರ್ಯವನ್ನು (ಪರಿಶ್ರಮ) ದೃಢೀಕರಿಸಲಿ.
13.          ಕಳ್ಳತನ ಮಾಡದಿರಲಿ, ಅಸತ್ಯ ಹೇಳದಿರಲಿ, ದುರ್ಬಲರಲ್ಲಿ ಮತ್ತು ಸಬಲರಲ್ಲಿ ಮೈತ್ರಿ ಇಡಲಿ. ಮನವು ವ್ಯಾಕುಲವಾದರೆ ಅದನ್ನು ಮಾರನ ಪಕ್ಷಪಾತಿ ಎಂದು ಬಗೆದು ಅದನ್ನು ದೂರೀಕರಿಸಲಿ.
14.          ಕ್ರೋಧದ, ಅಭಿಮಾನದ ವಶದಲ್ಲಿ ಸಿಲುಕದಿರಲಿ, ಅವುಗಳ ಮೂಲವನ್ನು ಕಿತ್ತು ಎಸೆಯಲಿ. ನಿಶ್ಚಯವಾಗಿ ಆತನು ಪ್ರಿಯ-ಅಪ್ರಿಯ ಎರಡನ್ನೂ ದೂರಮಾಡಲಿ.
15.          ಪ್ರಜ್ಞಾಪೂರ್ವಕವಾಗಿ ಕಲ್ಯಾಣರತನಾಗಲಿ, ಬಾಧೆಗಳೆಲ್ಲವನ್ನೂ ದೂರಮಾಡಲಿ, ಏಕಾಂತ ಸ್ಥಾನದಲ್ಲಿ ಅರತಿಯ (ಬೇಸರ) ಮೇಲೆ ವಿಜಯ ಸಾಧಿಸಿ, ನಾಲ್ಕು ವಿಲಾಪಗಳ ವಿಷಯಗಳಲ್ಲಿ ವಿಜಯಿಯಾಗಲಿ.
16.          ಏನನ್ನು ತಿನ್ನಲಿ, ಎಲ್ಲಿ ತಿನ್ನಲಿ, ನೆನ್ನೆ ದುಃಖದಿಂದ ನಿದ್ರಿಸಿದ್ದೆ, ಇಂದು ಎಲ್ಲಿ ನಿದ್ರಿಸಲಿ. ಇಂತಹ ವಿಲಾಪಿಸುವಂತಹ ಕ್ಷುದ್ರ ಯೋಚನೆಗಳನ್ನು ಅನಿಕೇತನ, ವಿನಯದಾರಿ ಭಿಕ್ಷುವು ಉಂಟುಮಾಡದಿರಲಿ.
17.          ಸಮಯದಲ್ಲಿ ಸಿಗುವಂತಹ ಅನ್ನ, ವಸ್ತ್ರಗಳಿಂದ ಆತನು ಸಂತೃಪ್ತನಾಗಲಿ, ಅವುಗಳಲ್ಲಿ ಸಂಯಮಿಯಾಗಲಿ, ಸಂಯಮದಿಂದ ಗ್ರಾಮಗಳಲ್ಲಿ ವಿಹರಿಸಲಿ, ದುಷ್ಟವಾಗಿ ನಡೆದುಕೊಂಡರೂ ಆತನು ಕಠೋರ ಮಾತು ಆಡದಿರಲಿ.
18.          ಕೆಳಕ್ಕೆ ಬಾಗಿರುವ ಚಕ್ಷುಗಳಿಂದ ಚಲಿಸಲಿ, ಸದಾ ಸಂಚಾರಿಯೂ ಆಗದಿರಲಿ, ಧ್ಯಾನದಲ್ಲಿ ಲೀನ ಮತ್ತು ಸದಾ ಜಾಗರೂಕನಾಗಲಿ, ಸಮಚಿತ್ತತೆ ಮತ್ತು ಏಕಾಗ್ರಚಿತ್ತದಿಂದ ಕೂಡಿರಲಿ, ಕಾಮ-ಭೋಗ ಸಂಬಂಧಿ ಯೋಚನೆ ಮತ್ತು ಚಂಚಲತೆಗಳನ್ನು ತ್ಯಾಗಮಾಡಲಿ.
19.          ಆಚಾರ್ಯ ಮುಂತಾದವರ ವಚನಗಳಲ್ಲಿ ದೋಷ ಕಂಡಬಂದರೆ ಸ್ಮೃತಿವಂತನು ಅವುಗಳನ್ನು ಸ್ವೀಕಾರ ಮಾಡಲಿ, ಸಹಚರರಲ್ಲಿ ಅಸೂಯೆ, ದ್ವೇಷ ತಾಳದಿರಲಿ. ಕಲ್ಯಾಣಕಾರಿ ಅನುಕೂಲಿಯಾದಂತಹ ಮಾತುಗಳನ್ನು ಆಡಲಿ, ಜನರಲ್ಲಿ ವಿವಾದ ಹುಟ್ಟಿಸುವಂತಹ ಮಾತುಗಳನ್ನು ಯೋಚಿಸುವುದು ಸಹಾ ಬೇಡ.
20.          ಸಂಸಾರದಲ್ಲಿರುವ ಐದು ರಜಗಳನ್ನು ಸ್ಮೃತಿವಂತನು ದೂರಮಾಡುವ ಅಭ್ಯಾಸ ಮಾಡಲಿ, ರೂಪ, ಶಬ್ದ, ಗಂಧ, ರಸ ಮತ್ತು ಸ್ಪರ್ಶಗಳ ರಾಗದಲ್ಲಿ ವಿಜಯಿಯಾಗಲಿ.
21.          ಈ ವಿಷಯಗಳಲ್ಲಿ ರಾಗ ತ್ಯಾಗಮಾಡಿ, ಸ್ಮೃತಿವಂತನಾಗಿ ಮತ್ತು ವಿರಕ್ತಚಿತ್ತನಾಗಿ ನಾನಾವಿಧದಲ್ಲಿ ಧಮರ್ಾನುಶೀಲನಾಗಿ, ಏಕಾಗ್ರಚಿತ್ತನಾಗಿ, ಅಂಧಕಾರವನ್ನು ನಾಶಮಾಡಲಿ.
ಇಲ್ಲಿಗೆ ಸಾರಿಪುತ್ತ ಸುತ್ತ ಮುಗಿಯಿತು.

ಅಟ್ಠಕ ವಗ್ಗ ಮುಗಿಯಿತು

No comments:

Post a Comment