Friday 29 May 2015

tissa metteyya sutta in kannada 7. ತಿಸ್ಸ ಮೇತ್ತೇಯ್ಯ ಸುತ್ತ

7. ತಿಸ್ಸ ಮೇತ್ತೇಯ್ಯ ಸುತ್ತ
(ಮೈಥುನದ ತ್ಯಾಗ)
1.            ಆಯುಷ್ಮಂತ ತಿಸ್ಸಮೆತ್ತೆಯ - ಹೇ ಮಾರ್ಷರೇ, ಮೈಥುನ ಧರ್ಮದಲ್ಲಿ ಬಿದ್ದಿರುವವನ ಹಾನಿ ತಿಳಿಸಿರಿ. ತಮ್ಮ ಉಪದೇಶ ಕೇಳಿ ಏಕಾಂತ ವಾಸದ ಅಭ್ಯಾಸ ಮಾಡುವೆನು.
2.            ಭಗವಾನರು - ಯಾವ ವ್ಯಕ್ತಿ ಮೈಥುನ ಧರ್ಮದಲ್ಲಿ ತಲ್ಲೀನ ಆಗುತ್ತಾನೆಯೋ, ಆತನಿಗೆ ಉಪದೇಶವು ಮರೆತುಹೋಗುತ್ತದೆ ಮತ್ತು ಆತನು ಮಿಥ್ಯಾ ಮಾರ್ಗದಲ್ಲಿ ಚಲಿಸುತ್ತಾನೆ - ಇದು ಅದರಲ್ಲಿರುವ ಅನಾರ್ಯರ ವಿಷಯವಾಗಿದೆ (ಮಾತಾಗಿದೆ).
3.            ಯಾರು ಮೊದಲು ಏಕಾಂಗಿಯಾಗಿ ವಾಸಿಸಿ ಮತ್ತೆ ಮೈಥುನದ ಸೇವನೆ ಮಾಡುವನೋ, ಆತನು ಭ್ರಾಂತ (ಅನಿಯಂತ್ರಿತ) ರಥದ ಸಮಾನನಾಗಿ ನೀಚ ಹಾಗು ಪ್ರಾಪಂಚಿಕ ಅತಿ ಸಾಮಾನ್ಯ (ಸೋತವನು) ಎನಿಸಿಕೊಳ್ಳುತ್ತಾನೆ.
4.            ಮೊದಲು ಆತನ ಯಾವ ಯಶಸ್ಸು ಮತ್ತು ಕೀತರ್ಿ ಇತ್ತೋ, ಅದೆಲ್ಲವೂ ಇದರಿಂದ ನಷ್ಟವಾಗುತ್ತದೆ. ಇದನ್ನು ಕಂಡಾದರೂ ಮೈಥುನವನ್ನು ತ್ಯಜಿಸುವ ಅಭ್ಯಾಸ ಮಾಡಲಿ.
5.            ಯಾರು ಸಂಕಲ್ಪಗಳಿಗೆ ವಶಿಯಾಗಿದ್ದಾನೋ, ಭಿಕಾರಿಯಂತೆ ಯೋಚಿಸುವನೋ, ಇಂತಹ ವ್ಯಕ್ತಿಯು ಪರರಿಂದ ನಿಂದೆ ಕೇಳಿ ಮೌನವಾಗಿ ಇದ್ದುಬಿಡುತ್ತಾನೆ.
6.            ಪರರು ಅಪವಾದಿಸುವುದರಿಂದ ಆತನು ಉತ್ತೇಜಿತನಾಗಿ ಸುಳ್ಳು ಹೇಳುತ್ತಾನೆ. ಇದು ಒಂದು ಬೃಹತ್ ಬಂಧನವಾಗಿದೆ. ಆತನು (ಇದರಲ್ಲಿ ಬಿದ್ದು) ಸುಳ್ಳು ಹೇಳಲಾರಂಭಿಸುತ್ತಾನೆ.
7.            ಪಂಡಿತರ (ಜ್ಞಾನಿಯ) ರೂಪದಲ್ಲಿ ಪ್ರಸಿದ್ಧರಾಗಿ ಮತ್ತು ಏಕಾಚಯರ್ೆಯಲ್ಲಿ ಪ್ರತಿಷ್ಠಿತರಾದ ಯಾವ ವ್ಯಕ್ತಿಗಳು ಮೈಥುನದಲ್ಲಿ ಆಸಕ್ತರಾಗುವರೋ ಅವರು ಮೂಢರ ರೀತಿ ಕ್ಲೇಶವನ್ನು ಪ್ರಾಪ್ತಿಮಾಡುವರು.
8.            ಮುನಿಯು ಆರಂಭ ಮತ್ತು ಅಂತ್ಯದಲ್ಲಿ ಈ ದುಷ್ಪರಿಣಾಮಗಳನ್ನು ಅರಿತು ಒಂಟಿಯಾಗಿ ದೃಢತೆ ಪೂರ್ವಕವಾಗಿ ವಾಸಿಸಲಿ ಮತ್ತು ಮೈಥುನವನ್ನು ಸೇವಿಸದಿರಲಿ.
9.            ಏಕಾಂತ ಚಿಂತನೆಯ ಅಭ್ಯಾಸ ಮಾಡಲಿ. ಇದು ಆರ್ಯರ ಉತ್ತಮ ವಿಷಯವಾಗಿದೆ. ಅದರಿಂದ ತನ್ನನ್ನು ಶ್ರೇಷ್ಠನೆಂದು ಭಾವಿಸದಿರಲಿ. ಆತನೇ ನಿಬ್ಬಾಣಕ್ಕೆ (ಹತ್ತಿರ) ಸೇರುವವನಾಗುತ್ತಾನೆ.
10.          ಆಸಕ್ತಿಗಳಲ್ಲಿ ರಹಿತನಾಗಿ, ಕಾಮಭೋಗಗಳ ಅಪೇಕ್ಷೆ ಮಾಡದೆ ವಾಸಿಸುವವನಾದ ಭವ-ಪಾರಂಗತ ಮುನಿಯ ಬಗ್ಗೆ ಅಲಕ್ಷವನ್ನು ಇಚ್ಛೆಯನ್ನು ಕಾಮಭೋಗದಲ್ಲಿ ಆಸಕ್ತರಾದ ಜನರು ಮಾಡುವರು.

ಇಲ್ಲಿಗೆ ತಿಸ್ಸ ಮೆತ್ತೆಯ ಸುತ್ತ ಮುಗಿಯಿತು.

No comments:

Post a Comment