Saturday 17 October 2015

mettagu manava pucca of suttanipata in kannada 4. ಮೇತ್ತಗೂ ಮಾಣವ ಪುಚ್ಚ (ಮೇತ್ತಗೂ ಮಾಣವನ ಪ್ರಶ್ನಾವಳಿ)

4. ಮೇತ್ತಗೂ ಮಾಣವ ಪುಚ್ಚ
(ಮೇತ್ತಗೂ ಮಾಣವನ ಪ್ರಶ್ನಾವಳಿ)

1.            ಮೇತ್ತಗೂ- ಭಗವಾನ್, ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ ಪ್ರಶ್ನಿಸುತ್ತಿದ್ದೇನೆ. ನನಗೆ ತಿಳಿಸಿ, ನಾನು ತಮಗೆ ಸಂಯಮಿ ಹಾಗು ವೇದಜ್ಞ (ಜ್ಞಾನಿ) ಎಂದು ಭಾವಿಸುತ್ತೇನೆ. ಲೋಕದಲ್ಲಿ ಅನೇಕ ವಿಧವಾದ ದುಃಖಗಳಿವೆ. ಇವೆಲ್ಲವೂ ಎಲ್ಲಿ ಉತ್ಪನ್ನವಾಗುತ್ತವೆ?
2.            ಭಗವಾನರು- ನೀನು ನನ್ನಿಂದ ದುಃಖದ ಉತ್ಪತ್ತಿಯ ಬಗ್ಗೆ ಕೇಳುತ್ತಿರುವೆ. ನಾನು ಹೇಗೆ ದಶರ್ಿಸಿದ್ದೇನೆಯೋ ಅದನ್ನು ಹಾಗೆ ತಿಳಿಸುವೆ. ಆಲಿಸು. ಲೋಕದಲ್ಲಿ ಯಾವೆಲ್ಲಾ ಅನೇಕ ಪ್ರಕಾರದ ದುಃಖಗಳಿವೆಯೋ ಅವೆಲ್ಲವೂ ಉಪದಿಯ (ತೃಷ್ಣೆ/ಅಂಟುವಿಕೆ) ಕಾರಣದಿಂದಾಗಿ ಉತ್ಪನ್ನವಾಗುತ್ತವೆ.
3.            ಯಾರೆಲ್ಲಾ ಅವಿದ್ಯೆಯ ಕಾರಣದಿಂದಾಗಿ ಅಂಟುವಿಕೆ (ಉಪದಿ)ಗೆ ಸಿಲುಕಿ ಬಂಧನಕಾರಕ ಕಮ್ಮವನ್ನು ಮಾಡುತ್ತಾನೋ, ಅಂತಹ ಮೂರ್ಖ ಪುನಃ ಪುನಃ ದುಃಖದಲ್ಲಿ ಬೀಳುತ್ತಾನೆ. ಆದ್ದರಿಂದ ದುಃಖವು ಉಪದಿಯಿಂದ ಉಂಟಾಗುವುದು ಎಂದು ಮನನ ಮಾಡಿಕೊಂಡು ತೃಷ್ಣೆಯಲ್ಲಿ ತೊಡಗದಿರಲಿ.
4.            ಮೇತ್ತಗೂ- ನಾನು ತಮ್ಮಲ್ಲಿ ಯಾವುದನ್ನು ಪ್ರಶ್ನಿಸಿದೆನೋ, ತಾವು ಅದಕ್ಕೆ ಉತ್ತರಿಸಿದಿರಿ. ಈಗ ನಾನು ಎರಡನೆಯ ಪ್ರಶ್ನೆ ಕೇಳುತ್ತಿರುವೆ. ಎಂತಹ ಧೀರರು ಜನ್ಮ, ಜರಾ, ಶೋಕ ವಿಲಾಪಗಳ ಪ್ರವಾಹವನ್ನು ದಾಟುತ್ತಾರೆ? ಹೇ ಮುನಿಗಳೇ, ಅದನ್ನು ನನಗೆ ಅತ್ಯಂತ ಸ್ಪಷ್ಟವಾಗಿ ತಿಳಿಸಿ, ಏಕೆಂದರೆ ಧಮ್ಮವನ್ನು ತಾವು ಅತಿ ಸ್ಪಷ್ಟವಾಗಿ ತಿಳಿದಿರುವಿರಿ.
5.            ಭಗವಾನರು- ನಾನು ನಿನಗೆ ಅಂತಹ ಪರಮೋಚ್ಛ ಧಮ್ಮವನ್ನು ಉಪದೇಶಿಸುವೆ. ಅದರಿಂದಾಗಿ ವ್ಯಕ್ತಿಯು ಇದೇ ಜನ್ಮದಲ್ಲೇ ಸ್ವಯಂ ಸಾಕ್ಷಾತ್ಕರಿಸಿ, ಪ್ರಜ್ಞಾವಂತನಾಗಿ, ಸ್ಮೃತಿವಂತನಾಗಿ ಜೀವಿಸುತ್ತಾ ಲೋಕದಲ್ಲಿ ತೃಷ್ಣೆಗೆ ಅತೀತನಾಗುತ್ತಾನೆ.
6.            ಮೇತ್ತಗೂ- ಹೇ ಮಹಷರ್ಿಗಳೇ, ನಾನು ಆ ಪರಮೋತ್ತಮವಾದ ಧಮ್ಮಕ್ಕೆ ಅಭಿನಂದನೆಯನ್ನು ಸಲ್ಲಿಸುವೆ. ಯಾವುದರಿಂದಾಗಿ ಆತನು ಸ್ಮೃತಿವಂತನಾಗಿ ಜೀವಿಸುತ್ತಾ ಲೋಕದಲ್ಲಿಯೇ ತೃಷ್ಣೆಗೆ ಅತೀತನಾಗುತ್ತಾನೆ?
7.            ಭಗವಾನರು- ಊದ್ರ್ವದಲ್ಲಿ (ಮೇಲೆ) ಅಧೋ (ಕೆಳಗೆ) ದಿಕ್ಕಿನಲ್ಲಿ ಸುತ್ತಲೂ (ವಕ್ರತೆಯಲ್ಲಿ) ಹಾಗೂ ಮಧ್ಯದಲ್ಲಿ ಯಾವುದೆಲ್ಲವನ್ನೂ ಅರಿತಿರುವೆಯೋ ಅದೆಲ್ಲದರ ಪ್ರತಿ ತೃಷ್ಣೆ ಅಥವಾ ರಾಗವನ್ನು ತ್ಯಾಗ ಮಾಡುವಂತವನಾಗು. ಹಾಗು ಮನಸ್ಸನ್ನು ಭವದಲ್ಲಿ ನಿಲ್ಲಿಸಬೇಡ.
8.            ಈ ರೀತಿಯಾಗಿ ಜೀವಿಸುತ್ತಾ, ಸ್ಮೃತಿವಂತ ಹಾಗು ಜಾಗರೂಕ ಭಿಕ್ಷುವು ಮಮತ್ವವನ್ನು, ಜನ್ಮವನ್ನು, ಜರಾವನ್ನು, ಶೋಕವನ್ನು ಹಾಗು ವಿಲಾಪವನ್ನು ತ್ಯಜಿಸಿ, ದುಃಖ ನಾಶ ಮಾಡುತ್ತಾನೆ.
9.            ಮೆತ್ತಗೂ- ಮಹಾಋಷಿಯೇ, ಈ ವಿಷಯಕ್ಕಾಗಿ ಅಭಿನಂದನೆ ಮಾಡುವೆ. ಹೇ ಗೋತಮರೇ, ತಾವು ನಿಬ್ಬಾಣವನ್ನು ಅತ್ಯಂತ ಸುಂದರವಾಗಿ ನಿರೂಪಿಸಿದಿರಿ, ಖಂಡಿತವಾಗಿ ಭಗವಾನರು ದುಃಖದಿಂದ ಅತೀತರಾಗಿದ್ದಾರೆ. ಏಕೆಂದರೆ ತಾವು ಅಂತಹ ಪರಮ ಉನ್ನತ ಧಮ್ಮವನ್ನು ಅರಿತಿರುವಿರಿ.
10.          ಖಂಡಿತವಾಗಿಯೂ ತಮ್ಮಿಂದ ಉಪದೇಶ ಆಲಿಸುವವರು ಸಹಾ ದುಃಖದಿಂದ ಅತೀತರಾಗುತ್ತಾರೆ. ಹೇ ಮುನಿವರ್ಯರೇ, ಹೇ ನಾಗರೇ (ಉತ್ತಮ ಪುರುಷ) ನಾನು ತಮ್ಮ ಸಮೀಪ ಬಂದು ನಮಸ್ಕರಿಸುವೆ. ಇದರಿಂದಾಗಿ ಭಗವಾನರು ನನಗೆ ನಿರಂತರ ಉಪದೇಶ ನೀಡುವಂತಾಗಲಿ.
11.          ಭಗವಾನರು- ಯಾವ ಬ್ರಾಹ್ಮಣ ಜ್ಞಾನಿಯೋ, ಅಕಿಂಚನನೊ (ಸಂಪಾದಿತನು), ಕಾಮಗಳಲ್ಲಿ ಅನಾಸಕ್ತನೋ ಆತನು ಖಂಡಿತವಾಗಿ ಈ ಲೋಕದ ಪ್ರವಾಹವನ್ನು ದಾಟಿದ್ದಾನೆ. ಆ ತೀರವನ್ನು ಸೇರಿದ್ದಾನೆ ಹಾಗು ಚಿತ್ತ ಮಲಗಳಿಂದ ನಿರ್ಮಲವಾಗಿ ಸಂದೇಹಾತೀತನಾಗಿದ್ದಾನೆ ಎಂದು ಭಾವಿಸಿ.
12           ವಿಜ್ಞನಾದ ಜ್ಞಾನಿಯು ಪುನರ್ಜನ್ಮದಲ್ಲಿ ಆಸಕ್ತಿ ತ್ಯಾಗಮಾಡಿ, ತೃಷ್ಣರಹಿತನಾಗಲಿ, ಪಾಪರಹಿತನಾಗಲಿ, ಕಾಮರಹಿತನಾಗಲಿ, ಅಂತಹವನು ಜನ್ಮ ಮತ್ತು ಜರಾವನ್ನು ದಾಟುತ್ತಾನೆ. ನಾನು ಹೀಗೆ ಹೇಳುತ್ತೇನೆ.

ಇಲ್ಲಿಗೆ ಮೇತ್ತಗೂ ಪ್ರಶ್ನಾವಳಿ ಮುಗಿಯಿತು.

No comments:

Post a Comment