Saturday 17 October 2015

parayana vagga of suttanipata in kannada ಪಾರಾಯಣ ವಗ್ಗ

ಪಾರಾಯಣ ವಗ್ಗ
1. ವಸ್ತು ಗಾಥಾ
                (ಈ ವರ್ಗದಲ್ಲಿ ಬಾವರಿ ಬ್ರಾಹ್ಮಣನ ಶಿಷ್ಯರ ಪ್ರಶ್ನೆಗಳ ಉತ್ತರವಿದೆ. ಬಾವರಿಯು ಕೋಸಲಾ ನರೇಶ ಪ್ರಸೇನಜಿತನ ಪುರೋಹಿತನಾಗಿದ್ದನು. ಆತನು ಪ್ರವಜರ್ಿತನಾಗಿ ತನ್ನ ಶಿಷ್ಯರ ಸಮೇತ ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನ ಕಡೆಗೆ ಚಲಿಸಿ ಗೋದಾವರಿ ನದಿಯ ದಡದಲ್ಲಿ ಆತನು ಆಶ್ರಮವನ್ನು ರಚಿಸಿಕೊಂಡು ಇರತೊಡಗಿದನು. ಆ ಸಮಯದಲ್ಲಿ ಉತ್ತರ ಫಥದಲ್ಲಿ ಆತನು ಭಗವಾನರ ಖ್ಯಾತಿಯನ್ನು ಕೇಳಿ ತನ್ನ ಹದಿನಾರು ಶಿಷ್ಯರನ್ನು ಭಗವಾನರ ಬಳಿಗೆ ಕಳುಹಿಸಿದನು. ಆ ಶಿಷ್ಯರು ಪರ್ಯಟನೆ ಮಾಡುತ್ತಾ ರಾಜಗೃಹದಲ್ಲಿ ಭಗವಾನರನ್ನು ದಶರ್ಿಸಿದರು ಮತ್ತು ಭಗವಾನರೊಂದಿಗೆ ಪ್ರತ್ಯೇಕವಾಗಿ ವಿವಿಧ ಪ್ರಶ್ನೆಗಳನ್ನು ಕೇಳಿದರು. ಬುದ್ಧ ಭಗವಾನರು ಅದಕ್ಕೆ ಉತ್ತರಿಸಿದರು. ವಸ್ತುಗಾಥೆಯು ಸಂಗೀತಿಕಾರಕ ಭಿಕ್ಷುಗಳಿಂದ ರಚಿತವಾಗಿದೆ).
1.            ಮಂತ್ರ ಪಾರಂಗತ ಬ್ರಾಹ್ಮಣನೋರ್ವ ಸರ್ವತ್ಯಾಗಿಯಾಗುವ ಕಾಮನೆಯಿಂದ ಕೋಶಲ ಜನಪದದ ರಮ್ಯ ನಗರವಾದ ಶ್ರಾವಸ್ತಿಯಿಂದ ದಕ್ಷಿಣಪಥದ ಕಡೆಗೆ ಹೋದನು.
2.            ಆತನು ಅಶ್ವಕ (ಆಂಧ್ರ) ಮತ್ತು ಅಲಕ ಎರಡು ರಾಜ್ಯಗಳ ಮಧ್ಯೆ ಗೋದಾವರಿ ನದಿಯ ತೀರದಲ್ಲಿ ಭಿಕ್ಷೆ ಮತ್ತು ಫಲಹಾರಗಳಿಂದ ಜೀವನ ನಡೆಸುತ್ತಿದ್ದನು.
3.            ಅದರ ಸಮೀಪದಲ್ಲೇ ಒಂದು ದೊಡ್ಡ ಗ್ರಾಮವಿತ್ತು. ಅಲ್ಲಿಂದ ಪ್ರಾಪ್ತವಾದ ಸಂಪತ್ತಿನಿಂದ ಆತನು ಒಂದು ಮಹಾಯಜ್ಞವನ್ನು ಮಾಡಿಸಿದನು.
4.            ಮಹಾಯಜ್ಞವನ್ನು ಮಾಡಿಸಿದ ನಂತರ ಮತ್ತೆ ಆತನು ಆಶ್ರಮವನ್ನು ಪ್ರವೇಶಿಸಿದನು. ಅದೇ ಸಮಯದಲ್ಲಿ ಮತ್ತೊಬ್ಬ ಬ್ರಾಹ್ಮಣನು ಅಲ್ಲಿಗೆ ಬಂದನು.
5.            ಬಳಲಿದ ಕಾಲುಗಳು, ಬೆವರಿದ, ಚಿಂತಾಕ್ರಾಂತ, ಧೂಳಿನಿಂದ ಕೂಡಿದ ತಲೆ, ಆ ಬ್ರಾಹ್ಮಣ ಬಾವರಿಯಿಂದ ಐದುನೂರು ನಾಣ್ಯ ಯಾಚಿಸಿದನು.
6.            ಬಾವರಿಯು ಆತನಿಗೆ ಆಸನ ನೀಡಿದನು. ಕ್ಷೇಮವನ್ನು ಕೇಳಿ ನಂತರ ಹೀಗೆ ನುಡಿದನು-
7.            ನನ್ನಲ್ಲಿದ್ದ ಸರ್ವವನ್ನೂ ದಾನ ಮಾಡಿಬಿಟ್ಟೆನು, ನನ್ನನ್ನು ಕ್ಷಮಿಸು, ನನ್ನ ಬಳಿ ಐದುನೂರು ನಾಣ್ಯ ಇಲ್ಲ.
8.            ನಾನು ಯಾಚಿಸಿದ ನಂತರವೂ ನೀನು ನೀಡದಿದ್ದ ಪಕ್ಷದಲ್ಲಿ ಇಂದಿಗೆ ಏಳನೆಯ ದಿನ ನಿನ್ನ ಶಿರವು ಏಳು ಭಾಗಗಳಾಗಿ ಸೀಳಿಹೋಗಲಿ ಎಂದು ಆ ಬ್ರಾಹ್ಮಣ ಶಾಪ ನೀಡಿದನು.
9.            ಆ ಕುಹಕಿಯು ಭಯಾನಕ ರೂಪ ತೋರಿಸಿ ಈ ರೀತಿ ಹೆದರಿಸಿದನು. ಆತನ ಮಾತನ್ನು ನಂಬಿ ಬಾವರಿಯು ದುಃಖಿತನಾದನು.
10.          ಆತನು ಶೋಕದಿಂದ ನಿರಾಹಾರಿಯಾಗಿ ಕೃಶನಾದನು. ಈ ರೀತಿಯ ಚಿತ್ತದಿಂದಾಗಿ ಧ್ಯಾನ ಮಾಡಲು ಸಾಧ್ಯವಾಗಲಿಲ್ಲ.
11.          ಆತನ ಈ ರೀತಿ ಭಯ ಮತ್ತು ಶೋಕವನ್ನು ಕಂಡ ಹಿತೈಷಿ ದೇವತೆಯು ಆತನಿಗೆ ಈ ರೀತಿ ಹೇಳಿತು-
12.          ಈ ಧನಲೋಭಿ ಡೊಂಗಿಗೆ ಶಿರದ ಬಗ್ಗೆ ತಿಳಿದಿಲ್ಲ. ಶಿರ ಮತ್ತು ಶಿರವು ಬೀಳುವುದರ ಬಗ್ಗೆ ಆತನಿಗೆ ಜ್ಞಾನವಿಲ್ಲ.
13.          ಬಾವರಿ - ಹೇ ದೇವತೆ, ಒಂದುವೇಳೆ ನೀವು ಶಿರ ಮತ್ತು ಶಿರವು ಬೀಳುವುದರ ಬಗ್ಗೆ ತಿಳಿದಿದ್ದರೆ ನನಗೆ ಉತ್ತರಿಸಿ, ನಾನು ಅದನ್ನು ಕೇಳಲು ಇಚ್ಚಿಸುತ್ತಿದ್ದೇನೆ.
14.          ದೇವತೆ- ನಾನು ಸಹಾ ಇದನ್ನು ಅರಿತಿಲ್ಲ, ಶಿರ ಮತ್ತು ಶಿರವು ಉರುಳುವುದಂತೂ ಬುದ್ಧರ ವಿಷಯವಾಗಿದೆ.
15.          ಬಾವರಿ - ಹೇ ದೇವತೆಯೇ, ದಯೆಯಿಟ್ಟು ನನಗೆ ವಿವರಿಸಿ, ಶಿರ ಮತ್ತು ಶಿರವು ಉರುಳುವುದನ್ನು ಯಾರು ತಿಳಿಸಬಲ್ಲರು?
16.          ದೇವತೆ - ಮೊದಲು ಇಕ್ಷಾಕು ರಾಜರ ಪುತ್ರ, ಶಾಕ್ಯಪುತ್ರರು ಪ್ರಕಾಶಮಾನರಾದ ಲೋಕನಾಯಕರು ಕಪಿಲವಸ್ತು ನಗರದಿಂದ ಹೊರಟಿದ್ದರು.
17.          ಹೇ ಬ್ರಾಹ್ಮಣ, ಅವರು ಈಗ ಸಮ್ಮಾಸಂಬುದ್ಧರಾಗಿದ್ದಾರೆ. ಅವರು ಸರ್ವ ಧರ್ಮಗಳಲ್ಲಿ ಪಾರಂಗತರಾಗಿದ್ದಾರೆ. ಸರ್ವ ಅಭಿಜ್ಞಾ ಬಲಪ್ರಾಪ್ತರು. ಸರ್ವ ಧರ್ಮದಲ್ಲಿ ಚಕ್ಷುವಂತರು, ಸರ್ವ ಕ್ಲೇಷ ನಾಶಕರು, ಅವರ ಆಸಕ್ತಿಗಳು ನಷ್ಟವಾಗಿ ವಿಮುಕ್ತರಾಗಿದ್ದಾರೆ.
18.          ಅಂತಹ ಚಕ್ಷುಮಾನವರು ಲೋಕಗಳಲ್ಲಿ ಧಮರ್ೊಪದೇಶ ನೀಡುತ್ತಿದ್ದಾರೆ. ನೀವು ಅವರಲ್ಲಿಗೆ ಹೋಗಿ ಕೇಳಿ ಅವರು ಉತ್ತರಿಸುವರು.
19.          ಸಂಬುದ್ಧ ಎಂಬ ಶಬ್ದ ಕೇಳಿಯೇ ಬಾವರಿ ಪ್ರಫುಲ್ಲಿತನಾದನು. ಆತನ ಶೋಕವು ಕಡಿಮೆಯಾಯಿತು ಮತ್ತು ಆತನು ಅತ್ಯಧಿಕ ಆನಂದಿತನಾದನು.
20.          ಬಾವರಿಯು ಪ್ರಸನ್ನ, ಹಷರ್ಿತ ಮತ್ತು ಆನಂದಿತನಾಗಿ ಆ ದೇವತೆಯಲ್ಲಿ ಕೇಳಿದನು- ಲೋಕನಾಥರು ಯಾವ ಜನಪದ ಅಥವಾ ಪ್ರದೇಶದಲ್ಲಿದ್ದಾರೆ. ಎಲ್ಲಿ ನಾವು ಆ ನರಶ್ರೇಷ್ಠರನ್ನು ನಮಸ್ಕರಿಸಬೇಕು.
21.          ದೇವತೆ- ಕೋಶಲ ಜನಪದದಲ್ಲಿ ಶ್ರಾವಸ್ತಿ ನಗರದಲ್ಲಿ ಆ ಮಹಾಪ್ರಾಜ್ಞರು, ಭಾರಮುಕ್ತರು, ಆಸವರಹಿತರು, ನರಶ್ರೇಷ್ಠರು, ತಲೆ ಬೀಳಿಸುವ ಜ್ಞಾತರಾದ ಶಾಕ್ಯಪುತ್ರರು ಈಗ ಬುದ್ಧರು ಮತ್ತು ಜಿನರಾಗಿದ್ದಾರೆ.
22.          ಬಾವರಿಯು ವೇದ ಪಾರಂಗತ ಬ್ರಾಹ್ಮಣ ಶಿಷ್ಯರಲ್ಲಿ ಈ ರೀತಿ ಸಂಬೋಧಿಸಿದನು- ಹೇ ಮಾಣವರೇ, ಇಲ್ಲಿ ಬನ್ನಿ, ನಾನು ನಿಮಗೆ ಹೇಳುತ್ತಿದ್ದೇನೆ, ನನ್ನ ಮಾತು ಕೇಳಿ.
23.          ಸಂಸಾರದಲ್ಲಿ ಯಾರ ಉತ್ಪನ್ನವು ದುರ್ಲಭವೊ, ಅಂತಹವರಾದ ಅನುಪಮ ಸಂಪನ್ನರು, ಸಂಬುದ್ಧ ಎಂಬ ಈ ಹೆಸರಿನಲ್ಲಿ ಉತ್ಪನ್ನರಾಗಿರುವರು. ಶ್ರಾವಸ್ತಿಗೆ ಹೋಗಿ ಆ ಪರಮಶ್ರೇಷ್ಠರ ದರ್ಶನವನ್ನು ಮಾಡಿ.
24.          ಶಿಷ್ಯ - ಹೇ ಬ್ರಾಹ್ಮಣರೆ ! ನಾವು ಯಾವ ರೀತಿಯಲ್ಲಿ ಇವರೇ ಆ ಬುದ್ಧರೆಂದು ಗುರುತಿಸುವುದು? ಈ ಕುರಿತು ಅಜ್ಞಾನಿಗಳಾದ ನಮಗೆ ತಿಳಿಸಿರಿ. ಅದರಿಂದ ನಾವು ಅವರಲ್ಲಿಗೆ ತಲುಪುವಂತಾಗಲಿ.
25.          ಬಾವರಿ- ವೇದಗಳಲ್ಲಿ ಮಹಾಪುರುಷರ ಲಕ್ಷಣಗಳ ವಿವರಣೆಯಿದೆ. ಕ್ರಮ ಮತ್ತು ಪರಿಪೂರ್ಣವಾಗಿ ಅವು ಮೂವತ್ತೆರಡು ಎಂದು ತಿಳಿಸಲಾಗಿದೆ.
26.          ಯಾರ ಶರೀರದಲ್ಲಿ ಈ ಮಹಾಪುರುಷ ಲಕ್ಷಣಗಳಿರುತ್ತವೆಯೋ ಅವರಿಗೆ ಕೇವಲ ಎರಡು ಗತಿಗಳಿರುತ್ತವೆ, ಮೂರನೆಯದು ಇಲ್ಲವೇ ಇಲ್ಲ.
27.          ಒಂದುವೇಳೆ ಅವರು ಪೃಥ್ವಿಯನ್ನು ಜಯಿಸಿ ಗೃಹಸ್ಥರಾಗಿಯೇ ಇರುವುದಾದರೆ, ದಂಡಶಸ್ತ್ರಗಳಿಲ್ಲದೆ ಚಕ್ರವತರ್ಿಯಾಗಿ ಕೇವಲ ಧರ್ಮದಿಂದಲೇ ಶಾಸನವನ್ನು ಮಾಡುವರು.
28.          ಹಾಗಲ್ಲದೆ ಆವರು ಗೃಹತ್ಯಾಗ ಮಾಡಿ ಪಬ್ಬಜಿತರಾಗಿ ಹೋದರೆ ಅಂತಹ ತೆರೆದ ಜ್ಞಾನವುಳ್ಳ ಸರ್ವಶ್ರೇಷ್ಠ ಸಮ್ಮಾಸಂಬುದ್ಧರಾಗುವರು.
29.          ಓ ಶಿಷ್ಯರೇ, ಅವರ ಜಾತಿಯನ್ನು, ಗೋತ್ರವನ್ನು, ಮಂತ್ರವನ್ನು ಕೇಳಿರಿ. ಲಕ್ಷಣವನ್ನು ಗುರುತಿಸಿ, ನೀವು ಪ್ರಶ್ನೆಗಳನ್ನು ಮನಸ್ಸಿನ ಮೂಲಕವೇ ಕೇಳಿ. ಶಿರ ಮತ್ತು ಶಿರವನ್ನು ಬೀಳಿಸುವ ಬಗ್ಗೆ ಮನಸ್ಸಿನಲ್ಲಿಯೇ ಕೇಳಿರಿ.
30.          ಅವರು ಅವರಣರಹಿತ ಜ್ಞಾನಿಗಳಾದ ಬುದ್ಧರೇ ಆಗಿದ್ದಲ್ಲಿ ನಿಮ್ಮ ಮನಸ್ಸಿನ ಮೂಲಕ ಕೇಳುವ ಪ್ರಶ್ನೆಗಳಿಗೆ ಅವರು ವಚನ (ಬಾಯಿಯ)ದ ಮೂಲಕವೇ ಉತ್ತರಿಸುವರು.
31-35. ಬಾವರಿಯ ಮಾತುಗಳನ್ನು ಕೇಳಿದ ಆ ಹದಿನಾರು ಶಿಷ್ಯರಾದ ಅಜಿತ, ಪುಣ್ಣಕ, ಮೇತ್ತಗೂ, ಧೋತಕ, ಉಪಸೀವ, ನಂದ, ಹೇಮಕ, ತೋದೆಯ್ಯ ಮತ್ತು ಕಪ್ಪಾದುಭಯೋ, ಪಂಡಿತ ಜಾತುಕಣ್ಣಿ, ಭದ್ರಾಯುಧ ಉದಯ ಮತ್ತು ಪೋಸಾಲ ಬ್ರಾಹ್ಮಣ, ಮೇಧಾವಿ ಮೋಘರಾಜ, ಮಹಾಋಷಿ ಪಿಂಗಿಯ - ಇವರೆಲ್ಲರೂ ಪ್ರತ್ಯೇಕ ಗಣಗಳ ನಾಯಕರಾಗಿದ್ದರು ಹಾಗು ಪ್ರಸಿದ್ಧರಾಗಿದ್ದರು. ಅವರೆಲ್ಲರೂ ಧ್ಯಾನದಲ್ಲಿ ಲೀನವಾಗುವಂತಹ ಧ್ಯಾನಿಗಳಾಗಿದ್ದರು. ಧೀರರು, ಉಚ್ಛ ಸುಸಂಸ್ಕೃತರು ಆಗಿದ್ದರು. ಅವರೆಲ್ಲರೂ ಬಾವರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ, ಜಟಾಧಾರಿಗಳಾದ ಅವರು ಉತ್ತರದ ಕಡೆಗೆ ಹೊರಟರು.
36.          ಅವರು ಮೊದಲು ಆಲಕದ ಪ್ರತಿಷ್ಠಾನಕ್ಕೆ ಹೋದರು. ಅಲ್ಲಿಂದ ಮಾಹಿಷ್ಮತಿ ನಗರಕ್ಕೆ ಹೊರಟರು. ಉಜ್ಜಯಿನಿ, ಗೋಧಪುರ, ವಿಧಿಶಾ ಮತ್ತು ವನವೆಂಬ ನಗರಕ್ಕೆ ಹೊರಟರು.
37.          ನಂತರ ಅಲ್ಲಿಂದ ಕೋಶಂಬಿ, ಸಾಕೇತ, ಉತ್ತಮನಗರ, ಶ್ರಾವಸ್ತಿ, ಸೇತಭ್ಯ ಕಪಿಲವಸ್ತು ಮತ್ತು ಕುಸಿನಾರಕ್ಕೆ ಬಂದರು.
38.          ಅಲ್ಲಿಂದ ಪಾವಾ, ಬೋಗನಗರ, ವೈಶಾಲಿ ಮತ್ತು ರಾಜಗೃಹಕ್ಕೆ ಕೊನೆಗೆ ಬಂದರು. ನಂತರ ಅಲ್ಲಿಯ ರಮಣೀಯ ಮನೋರಮ ಪಾಷಾಣ ಎಂಬ ಚೈತ್ಯಕ್ಕೆ ತಲುಪಿದರು.
39.          ಹೇಗೆ ಬಾಯಾರಿದವನು ಶೀತಲ ಜಲಕ್ಕೆ, ವ್ಯಾಪಾರಿಯು ಮಹಾ ಲಾಭದ ಕಡೆಗೆ, ಬಿಸಿಲಲ್ಲಿ ಪೀಡಿತನಾದವನು ತಂಪು ನೆರಳಿಗೆ ಹಾತೊರೆಯುವರೋ ಹಾಗೆ ಅವರು ಜ್ಞಾನಕ್ಕಾಗಿ ಶೀಘ್ರದಲ್ಲಿ ಪರ್ವತವನ್ನು ಹತ್ತಿದ್ದರು.
40.          ಆ ಸಮಯದಲ್ಲಿ ಭಗವಾನರು ಭಿಕ್ಷು ಸಂಘದ ಮಧ್ಯದಲ್ಲಿ ಭಿಕ್ಷುಗಳಿಗೆ ಸಿಂಹ ಘೋಷಣೆ ಗಾಂಭೀರ್ಯದಲ್ಲಿ ಉಪದೇಶ ಮಾಡುತ್ತಿದ್ದರು.
41.          ಅಜೀತನು ಬುದ್ಧರನ್ನು ನೋಡಿದನು. ಬುದ್ಧರಾದರೋ ಪ್ರಖರರಶ್ಮಿರಹಿತ ಸೂರ್ಯನಂತೆ ತೇಜಸ್ವಿಗಳು ಹಾಗು ಹುಣ್ಣಿಮೆಯ ಕಾಂತಿಯುತ ಪೂರ್ಣ ಚಂದಿರನಂತೆ ಕಾಣಿಸುತ್ತಿದ್ದರು.
42.          ಬುದ್ಧ ಭಗವಾನರ ಶರೀರದಲ್ಲಿ ಕಾಣುವ ಮಹಾಪುರುಷ ಲಕ್ಷಣಗಳನ್ನು ಕಂಡು ಹಷರ್ಿತನಾದನು. ಹಾಗು ಗೌರವದಿಂದ ಒಂದೆಡೆ ನಿಂತು ಮನದಲ್ಲಿಯೇ ಈ ರೀತಿ ಪ್ರಶ್ನಿಸಿದನು.
43.          ಓ ಭಗವಾನರೇ, ನನ್ನ ಆಚಾರ್ಯರ ಆಯಸ್ಸನ್ನು ಹೇಳಿರಿ? ಅವರ ಜಾತಿ, ಗೋತ್ರ, ಲಕ್ಷಣ ಮತ್ತು ವೇದಗಳಲ್ಲಿ ಅವರು ಪಡೆದಿರುವ ಯೋಗ್ಯತೆ ಹೇಳಿರಿ. ಹಾಗು ಅವರು ಎಷ್ಟು ಬ್ರಾಹ್ಮಣರಿಗೆ ಶಿಕ್ಷಣ ನೀಡುತ್ತಾರೆ ತಿಳಿಸಿ.
44.          ಭಗವಾನರು- ಅವರ ಆಯಸ್ಸು ಸರಿಯಾಗಿ ನೂರು ವರ್ಷದ್ದಾಗಿದೆ. ಗೋತ್ರದಲ್ಲಿ ಬಾವರಿಯು ತ್ರಿಲಕ್ಷಣಗಳನ್ನು ಹೊಂದಿದ್ದು, ತ್ರಿವೇದಗಳಲ್ಲಿ ಪಾರಂಗತರಾಗಿದ್ದಾರೆ.
45.          ಅವರು ಲಕ್ಷಣಶಾಸ್ತ್ರ, ಇತಿಹಾಸ, ನಿಘಂಟು ಸಹಿತ ಜ್ಞಾನ ಹೊಂದಿದ್ದು, 500 ಶಿಷ್ಯರಿಗೆ ಕಲಿಸುತ್ತಾ ತಮ್ಮ ಧಮ್ಮದಲ್ಲಿ ಪಾರಂಗತರಾಗಿದ್ದಾರೆ.
46.          ಅಜಿತ- ಹೇ ನರಶ್ರೇಷ್ಠರೇ, ತೃಷ್ಣೆಯನ್ನು ಭೇದಿಸಿದಂತೆ ತಾವು ಬಾವರಿಯ ಲಕ್ಷಣಗಳನ್ನು ವಣರ್ಿಸಿರಿ, ಅದರಿಂದಾಗಿ ನಾವು ಸಂಶಯ ದಾಟಿದವರಾಗುತ್ತೇವೆ.
47.          ಭಗವಾನರು- ಆತ ತನ್ನ ನಾಲಿಗೆಯಿಂದ ಮುಖವನ್ನೇ ಮುಚ್ಚಿಕೊಳ್ಳುತ್ತಾನೆ. ಹುಬ್ಬುಗಳ ಮಧ್ಯೆ ಊಧ್ರ್ವ ಲೋಮವಿದೆ ಹಾಗು ಆತನ ಲಿಂಗವು ಕೋಶದಿಂದ ಆವೃತವಾಗಿದೆ, ಮಾಣವ ಈ ರೀತಿಯಾಗಿ ತಿಳಿದುಕೋ.
48.          ಯಾವುದೇ ಪ್ರಶ್ನೆಗಳನ್ನು ಕಿವಿಗಳಲ್ಲಿ ಆಲಿಸದೆಯೇ, ಅದ್ಭುತವಾಗಿ ಉತ್ತರಗಳನ್ನು ನೀಡುತ್ತಿದ್ದ ಭಗವಾನರನ್ನು ಕಂಡು ಎಲ್ಲರೂ ಪ್ರಮೋದಿತರಾದರು. ಶ್ರದ್ಧೆಯಿಂದ ಅಂಜಲಿಬದ್ಧರಾಗಿ ಹೀಗೆ ಯೋಚಿಸಲಾರಂಭಿಸಿದರು.
49.          ಖಂಡಿತವಾಗಿ ಯಾವುದೋ ದೇವ ಅಥವಾ ಬ್ರಹ್ಮ ಅಥವಾ ಇಂದ್ರ ಅಥವಾ ಸುಜಂಪತಿಯ ಮನೋದ್ವಾರ ಕೇಳಲ್ಪಟ್ಟ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
50.          ಅಜಿತ- ಶಿರ ಹಾಗು ಶಿರವನ್ನು ಬೀಳಿಸುವ ವಿಷಯದಲ್ಲಿ ಬಾವರಿಯು ಪ್ರಶ್ನಿಸುತ್ತಿದ್ದಾರೆ, ಭಗವಾನರು ಅದಕ್ಕೆ ಉತ್ತರಿಸಬೇಕು. ಹೇ ಋಷಿಯೇ ನಮ್ಮ ಸಂಶಯಗಳನ್ನು ದೂರೀಕರಿಸಿ.
51.          ಭಗವಾನರು- ಅವಿದ್ಯೆಗೆ ಶಿರವೆಂದು ಭಾವಿಸು. ಶ್ರದ್ಧಾ, ಸ್ಮೃತಿ, ಸಮಾಧಿ, ಇಚ್ಛಾಶಕ್ತಿ ಹಾಗು ವೀರ್ಯದಿಂದ ಕೂಡಿದ ವಿದ್ಯೆಗೆ ಶಿರವನ್ನು ಬೀಳಿಸುವಂತಹುದು ಎಂದು ಅರಿತುಕೋ.
52.          ಇಂಥ ಗಂಭೀರ ಜ್ಞಾನವನ್ನು ಅರಿತಂತಹ ಮಾಣವನು ಆಗ ಅತ್ಯಂತ ಆನಂಧಭರಿತನಾಗಿ ಹಾಗೆ ತನ್ನನ್ನು ನಿಯಂತ್ರಿಸುತ್ತ ಒಂದು ಭುಜದ ಮೇಲೆ ಉತ್ತರಿಯವನ್ನು ಹಾಕಿಕೊಂಡು ಭಗವಾನರ ಪಾದದ ಮೇಲೆ ಸಾಷ್ಠಾಂಗ ನಮಸ್ಕಾರ ಹಾಕಿದನು.
53.          ಅಜಿತ- ಹೇ ಮಾರನನ್ನು ಜಯಿಸಿದವರೇ, ಶಿಷ್ಯರ ಸಹಿತ ಬಾವರಿ ಬ್ರಾಹ್ಮಣ ಹಷರ್ಿತ ಹಾಗು ಪ್ರಸನ್ನರಾಗಿ ಚಕ್ಷುವಂತರ ಪಾದಗಳಿಗೆ ವಂದಿಸುತ್ತಿದ್ದಾರೆ.
54.          ಭಗವಾನರು : ಬಾವರಿ ಬ್ರಾಹ್ಮಣ ಶಿಷ್ಯರ ಸಹಿತ ಸುಖಿಯಾಗಿರಲಿ, ನೀನು ಸಹಾ ಸುಖಿಯಾಗಿರು, ಮಾಣವನೇ, ಚಿರಕಾಲ ಜೀವಿಸುವಂತಾಗು.
55.          ಬಾವರಿ ಹಾಗು ನಿಮಗೆಲ್ಲಾ ಸರ್ವ ಸಂಶಯಗಳ ನಿವಾರಣೆಗಾಗಿ ಪ್ರಶ್ನಿಸುವ ಅವಕಾಶ ನೀಡುತ್ತಿದ್ದೇನೆ, ಏನು ಬೇಕಾದರೂ ಪ್ರಶ್ನಿಸಿ.
56.          ಸಂಬುದ್ಧರು ಹೀಗೆ ಅವಕಾಶ ನೀಡಿದ ನಂತರ ಅಜೀತನು ಅಂಜಲಿಬದ್ಧನಾಗಿ ತಥಾಗತರಿಗೆ ಪ್ರಥಮ ಪ್ರಶ್ನೆಯನ್ನು ಕೇಳಿದನು.

ಇಲ್ಲಿಗೆ ವಸ್ತುಗಾಥ ಮುಗಿಯಿತು

No comments:

Post a Comment