Saturday 17 October 2015

punnaka manava pucca of suttanipata in kannada 3. ಪುಣ್ಣಕ ಮಾಣವ ಪುಚ್ಚ (ಪುಣ್ಣಕ ಮಾಣವನ ಪ್ರಶ್ನಾವಳಿ)

3. ಪುಣ್ಣಕ ಮಾಣವ ಪುಚ್ಚ
(ಪುಣ್ಣಕ ಮಾಣವನ ಪ್ರಶ್ನಾವಳಿ)

1.            ಪುಣ್ಣಕ- ಹೇ ತೃಷ್ಣಾರಹಿತರಾದ ಭಗವಾನ್, ಅಕುಶಲದ ಮೂಲ ಇತ್ಯಾದಿಗಳನ್ನು ಅರಿತಿರುವಂತಹ ತಮ್ಮ ಬಳಿ ನಾನು ಪ್ರಶ್ನೆ ಕೇಳಲು ಬಂದಿರುವೆ. ಭಗವಾನ್, ಯಾವ ಕಾರಣದಿಂದಾಗಿ ಋಷಿಗಳು, ಮನುಜರು, ಕ್ಷತ್ರಿಯರು, ಬ್ರಾಹ್ಮಣರು, ದೇವತೆಗಳ ಹೆಸರಿನಲ್ಲಿ ಬಹಳಷ್ಟು ಯಜ್ಞಗಳನ್ನು ಮಾಡಿದ್ದಾರೆ. ಭಗವಾನರು ನನ್ನಲ್ಲಿ ದಯವಿಟ್ಟು ತಿಳಿಸಬೇಕು.
2.            ಭಗವಾನರು- ಪುಣ್ಣಕ ! ವೃದ್ಧಾಪ್ಯದ ನಂತರವೂ ಜೀವಿಸುವ ಕಾಮನೆಯಿಂದಲೇ ಈ ಲೋಕದಲ್ಲಿ ಋಷಿಗಳು, ಮನುಜರು, ಕ್ಷತ್ರಿಯರು ಹಾಗು ಬ್ರಾಹ್ಮಣರು, ದೇವತೆಗಳ ಹೆಸರಿನಲ್ಲಿ ಬಹಳಷ್ಟು ಯಜ್ಞಗಳನ್ನು ಆಚರಿಸಿದ್ದಾರೆ.
3.            ಭಗವಾನ್, ಯಾವ ಋಷಿಗಳು, ಮನುಜರು, ಕ್ಷತ್ರಿಯರು ಹಾಗು ಬ್ರಾಹ್ಮಣರು ದೇವತೆಗಳ ಹೆಸರಿನಲ್ಲಿ ಬಹಳಷ್ಟು ಯಜ್ಞಗಳನ್ನು ಮಾಡಿದರೋ, ಅಂತಹ ಯಜ್ಞ ಪಥದಲ್ಲಿ ಅಪ್ರಮತ್ತರಾಗಿದ್ದ ಅವರೆಲ್ಲಾ ಜನ್ಮ ಜರಾಗಳನ್ನು ದಾಟಿಹೋಗಿದ್ದಾರೆಯೇ? ಹೇ ಪರಮಪೂಜ್ಯರೇ, ನಾನು ಕೇಳುತ್ತಿದ್ದೇನೆ ತಾವು ತಿಳಿಸಬೇಕು.
4.            ಭಗವಾನರು- ಹೇ ಪುಣ್ಣಕ ! ಸ್ವಾರ್ಥ ಲಾಭದ ಕಾರಣಗಳಿಂದಾಗಿ ಅವರೆಲ್ಲಾ ದೇವತೆಗಳ ಗುಣಗಾನ ಮಾಡುತ್ತಲೇ ಬಂದಿದ್ದಾರೆ. ಪ್ರಶಂಸಿಸುತ್ತಾರೆ, ಚಚರ್ೆ ಮಾಡುತ್ತಾರೆ, ಯಜ್ಞಗಳನ್ನು ಆಚರಿಸುತ್ತಾರೆ ಹಾಗು ಕಾಮಭೋಗಗಳ ಇಚ್ಛೆ ಮಾಡುತ್ತಿರುತ್ತಾರೆ. ಆದರೆ ನಾನು ಹೇಳುತ್ತಿರುವುದು ಏನೆಂದರೆ ಹೀಗೆ ಭವ ತೃಷ್ಣೆಗೆ ಬಲಿಯಾಗಿ ಯಜ್ಞಗಳಲ್ಲಿ ಆಸಕ್ತರಾಗಿರುವವರೆಲ್ಲಾ ಜನ್ಮ ಹಾಗು ಜರಾಗಳನ್ನು ದಾಟಲಿಲ್ಲ.
5.            ಪುಣ್ಣಕ- ಹೇ ಪೂಜ್ಯರೇ ! ಹೀಗೆ ಯಜ್ಞಗಳಲ್ಲಿ ದಾನ ಮಾಡುತ್ತಾ, ಇಂತಹುದರಲ್ಲಿ ರತರಾದ ಜನರು ಜನ್ಮ ಹಾಗು ಜರಾ (ಮುಪ್ಪು)ಗಳನ್ನು ದಾಟಿಲ್ಲವಾದರೆ, ಹೇ ಪೂಜ್ಯರೇ, ಯಾರು ಜನ್ಮ ಹಾಗು ಜರಾಗಳನ್ನು ದಾಟಿರುವವರು, ಹೇ ಭಗವಾನ್ ತಾವು ತಿಳಿಸಬೇಕು.
6.            ಭಗವಾನ್- ಯಾರು ಲೋಕದ ಎಲ್ಲಾ ಅನಿತ್ಯತೆಯನ್ನು ಅರಿತಿರುವನೋ, ಅಂತಹವನು, ಲೋಕಗಳ ಬಗ್ಗೆ ತೃಷ್ಣಾರಹಿತನಾಗುತ್ತಾನೆ. ಅಂತಹ ಪರಮಶಾಂತನು, ವಾಸನಾರಹಿತನು, ಪಾಪರಹಿತನು ಹಾಗು ಆಸಕ್ತರಹಿತನು, ಜನ್ಮ ಹಾಗು ಜರಾಗಳಿಂದ ದಾಟಿ ಹೋಗಿರುತ್ತಾನೆ. ಹೀಗೆ ನಾನು ಹೇಳುತ್ತೇನೆ.

ಇಲ್ಲಿಗೆ ಪುಣ್ಣಕ ಪ್ರಶ್ನೆಗಳು ಮುಗಿಯಿತು.

No comments:

Post a Comment