Tuesday, 26 March 2019

sacca vibhanga sutta in kannada ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)

 
    ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)


ನಾನು ಹೀಗೆ ಕೇಳಿದ್ದೇನೆ, ಒಮ್ಮೆ ಭಗವಾನರು ವಾರಣಾಸಿಯ ಇಸಿಪಟ್ಟಣದ ಜಿಂಕೆಗಳ ಉಧ್ಯಾನ(ಮಿಗದಾಯ)ದಲ್ಲಿ ತಂಗಿದ್ದರು, ಆಗ ಭಗವಾನರು ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :ಭಿಕ್ಖುಗಳೇ
       ಭಗವಾನ್
ಆಗ ಭಗವಾನರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?

ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,


  ಭಿಕ್ಖುಗಳೇ ನೀವುಗಳು ಸಾರಿಪುತ್ರ ಹಾಗೂ ಮೊಗ್ಗಲಾನರ  ಸೇವನೆ(ಮಿತ್ರತ್ವ)ೆ  ಮಾಡಿರಿ, ಅವರ ಒಡನಾಟದಿಂದ ಬೆರೆಯಿರಿ, ಅವರು ಪಂಡಿತ(ಜ್ಞಾನಿ) ಭಿಕ್ಖುಗಳಾಗಿದ್ದಾರೆ, ಅವರು ಬ್ರಹ್ಮಚರಿಯದ ಶ್ರೇಷ್ಟ ಜೀವನಕ್ಕೆ ಅನುಗ್ರಹ ತೋರುತ್ತಾರೆ, ಅದರಲ್ಲಿ ಸಾರಿಪುತ್ತರು  ಜನ್ಮನೀಡಿದ ಮಾತೆಯ ತರಹ, ಹಾಗೆಯೇ ಮೋಗ್ಗಲಾನರು ಮಗುವನ್ನು ಸಲಹುವಂತಹವರ ತರಹ, ಸಾರಿಪುತ್ತರು ಎಲ್ಲರನ್ನು ಸೋತಪತ್ತಿ ಫಲವನ್ನು ಪಡೆಯುವ ಹಾಗೇ ಮಾರ್ಗದಶರ್ಿತರಾಗುವರು. ಮತ್ತು ಮೊಗ್ಗಲಾನರು ಉನ್ನತ ಗುರಿಯೆಡೆಗೆ ಸಾಗಿಸುವಂತಹವರು. ಸಾರಿಪುತ್ರರು ಆರ್ಯಸತ್ಯಗಳನ್ನು ಬೋದಿಸುವಲ್ಲಿ ಸಮರ್ಥರು ಅವರು ಆರ್ಯಸತ್ಯಗಳನ್ನು ವಿವರಿಸುತ್ತಾರೆ, ಒತ್ತಿಹೇಳುತ್ತಾರೆ, ಸ್ಥಾಪಿಸುತ್ತಾರೆ, ಸ್ಪಷ್ಟಿಕರಿಸುತ್ತಾರೆ, ವಿಶ್ಲೇಷಿಸುತ್ತಾರೆ, ಮತ್ತು ಪ್ರಕಟಪಡಿಸುತ್ತಾರೆ. ಹೀಗೆ ನುಡಿದ ಭಗವಾನರು ತಮ್ಮ ಆಸನದಿಂದ ಎದ್ದು ತಮ್ಮ ವಿಹಾರದೆಡೆಗೆ ವಿಶ್ರಮಿಸಲು ಹೋರಟರು.

     ಅವರು ಹೋರಟ ನಂತರ ಸಾರಿಪುತ್ತರು ಎದ್ದು ಭಿಕ್ಖುಗಳೊಂದಿಗೆ ಹೀಗೆ ಸಂಬೋದಿಸಿದರು : ಅಯುಷ್ಮಂತ ಭಿಕ್ಖುಗಳೇ,
ಆಗ ಪ್ರತಿಯಾಗಿ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರುರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?




       ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

      ಮತ್ತೆ ಯಾವುದು ದುಃಖ ಆರ್ಯ ಸತ್ಯ ?
   ಜನ್ಮವು ದುಃಖ, ಜರಾವು ದುಃಖ, ಮರಣವು ದುಃಖ, ಶೋಕ ಪ್ರಲಾಪವು ದುಃಖ, ನೋವು ದುಃಖ, ಚಿಂತೆ ಯಾತನೆಗಳು ದುಃಖ, ಅಪ್ರಿಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖ, ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿದ್ದಾಗ ದುಃಖ, ಒಟ್ಟಾರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಪಂಚ ಉಪಾದಾನ ಖಂದಗಳು( 5 ರಾಶಿಗಳಿಗೆ(ದೇಹ ಮತ್ತು ಮನಸ್ಸಿಗೆ) ಅಂಟುವಿಕೆಯೇ) ದುಃಖಕರ.

  ಮತ್ತು ಜನ್ಮ ಎಂದರೇನು?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ಜನ್ಮ, ಆರಂಭ, ಪುನರ್ಜನ್ಮ, ಖಂದಗಳ ಸ್ಥಾಪನೆ, ಮತ್ತು ಇಂದ್ರೀಯಗಳ ಪಡೆಯುವಿಕೆಯನ್ನು ಜನ್ಮ ಎನ್ನುತ್ತಾರೆ.

   ಮತ್ತು ಜರಾ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ವೃದ್ಧಾಪ್ಯ, ವಯಸ್ಸಿನಿಂದ ದುರ್ಬಲವಾಗುವಿಕೆ, ಮುರಿದ ಹಲ್ಲುಗಳು, ನೆರತಕೂದಲು, ಸುಕ್ಕುಗಟ್ಟಿದ ಚರ್ಮ, ಶಕ್ತಿಗುಂದುವಿಕೆ, ಇಂದ್ರೀಯಗಳ ಶಿಥಿಲತೆಯನ್ನು ಜರಾ ಎನ್ನುತ್ತಾರೆ.

   ಮತ್ತು ಮರಣ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಮರಣಿಸುವಿಕೆ, ನಾಷವಾಗುವಿಕೆ, ವಿಯೋಗ, ಅಂತ್ಯವಾಗುವಿಕೆ, ಮೃತ್ಯುವಶವಾಗುವಿಕೆ, ಸಾವು,  ಖಂದಗಳ ಬೇರ್ಪಡೆಯಾಗುವಿಕೆ, ಶವವಾಗುವಿಕೆ, ಜೀವಿಂದ್ರೀಯದ ಕತ್ತರಿಸುವಿಕೆಯನ್ನು ಮರಣ ಎನ್ನುವರು.

     ಮತ್ತು ಶೋಕ ಎಂದರೇನು?
   ಆಯುಷ್ಮಂತರೇ, ಶೋಕ, ಶೋಕಿಸುವಿಕೆ, ಶೋಕಸ್ಥಿತಿ, ಅಂತರ್ಯದ ದುಃಖ, ದೌಭರ್ಾಗ್ಯ ಅಥವಾ ದುರ್ಘಟನೆಗೆ ಈಡಾಗಿರುವವರಲ್ಲಿನ ಆಂತರ್ಯದ ಆಳ ನೋವು, ಶೋಕವನ್ನು ಅನುಭವಿಸುತ್ತಿರುವಿಕೆ, ಇವನೆಲ್ಲಾ ಶೋಕ ಎನ್ನುವರು.

     ಮತ್ತು ಪ್ರಲಾಪ ಎಂದರೇನು ?
 ಆಯುಷ್ಮಂತರೇ ಅಳುವಿಕೆ, ಪ್ರಲಾಪಿಸುವಿಕೆ, ಯಾರದರೂ ದುಃಖಭರಿತ ಸನ್ನಿವೇಶದಲ್ಲಿದ್ದಾಗ ಅಥವಾ ತಾವೇ ಅಂತಹ ಸನ್ನಿವೇಶದಲ್ಲಿದ್ದಾಗ ಅತ್ತು ಪ್ರಲಾಪಿಸುವುದನ್ನು ಪ್ರಲಾಪವೆನ್ನುತ್ತೇವೆ.

       ಮತ್ತು ನೋವು(ಕಾಯದ ದುಃಖ) ಎಂದರೇನು ?
 ಅಯುಷ್ಮಂತರೇ ಶಾರೀರಿಕ ನೋವು, ಶಾರೀರಿಕ ಅಸಂತೋಷ, ಶರೀರಕ್ಕೆ ಸಂಪರ್ಕವಾಗಿ ಉಂಟಾಗುವ ನೋವುಭರಿತ, ಅಪ್ರೀಯ ವೇದನೆಗಳನ್ನು ನೋವು(ಕಾಯದ ದುಃಖ) ಎನ್ನುತ್ತಾರೆ.

        ಮತ್ತು ದೋಮನಸ್ಸು ಎಂದರೇನು ?
     ಆಯುಷ್ಮಂತರೇ, ಮಾನಸಿಕ ದುಃಖ, ಮಾನಸಿಕ ಅಸಂತುಷ್ಟತೆ, ಮನಸ್ಸಿಗೆ ಮಾನಸಿಕ ವಿಷಯಗಳಾದ ಚೇತಸಿಕಗಳು ಸಂಪರ್ಕವಾದಾಗ ಉಂಟಾಗುವ ಅಪ್ರಿಯ ವೇದನೆಗಳನ್ನು ದೋಮನಸ್ಸು ಎನ್ನುತ್ತೇವೆ.

         ಮತ್ತು ಉಪಯಾಸೋ(ಖಿನ್ನತೆ/ಚಿಂತೆ) ಎಂದರೇನು ?
   ಆಯುಷ್ಮಂತರೇ, ಒತ್ತಡ, ಯಾತನೆ, ಯಾವಾಗ ಒಬ್ಬನು ದುಃಖಭರಿತ ಅಥವಾ ನಷ್ಟಭರಿತ ಸನ್ನಿವéೇಷದಲ್ಲಿದ್ದಾಗ ಆತನು ಅನುಭವಿಸುವ ದುಃಖವನ್ನು ಉಪಯಾಸೋ ಎನ್ನುತ್ತೇವೆ.

          ಮತ್ತು ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿರುವುದೇ ದುಃಖ ಎಂದರೇನು ?
    ಇಲ್ಲಿ ಅಯುಷ್ಮಂತರೇ, ಇದಕ್ಕೆ ಉದಾಹರಿಸುವುದಾದರೆ ಯಾವ ಜೀವಿಗಳು ಪುನರ್ಜನ್ಮಿಸುವ ಖಚಿತತೆ ಹೊಂದಿವೆಯೊ ಅವರಲ್ಲಿ ಇಂತಹ ಇಚ್ಚೆ ಉಂಟಾಗಬಹುದು ಎನೆಂದರೇ ಒಹ್ ನಾವು ಮಾತ್ರ ಪುನರ್ಜನ್ಮ ತಾಳದಿದ್ದರೆ ಹೇಗೆ !, ನಮಗೆ ಮಾತ್ರ ಪುನರ್ಜನ್ಮವಾಗದಿರಲಿ! ಅದರೆ ಹಾಗೇ ಬಯಸಿದ ಮಾತ್ರಕ್ಕೆ ಒಬ್ಬರಿಗೆ ಪುನರ್ಜನ್ಮ ಸಿಗದೇ ಹೋಗುವುದಿಲ್ಲ. ಬಯಸಿದ ಮಾತ್ರಕ್ಕೆ ಹಾಗಾವುದಿಲ್ಲ. ಆಗ ಆತನು ಹಾಗೇ ಆಗಲಿಲ್ಲವಲ್ಲ ಎಂದು ದುಃಖಿಸುವನು, ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು. ಜೀವಿಗಳಲ್ಲಿ ಯಾರೆಲ್ಲಾ ವೃದ್ಧಾವಸ್ಥೆಗೆ.....ರೋಗಕ್ಕೆ........ಮರಣಕ್ಕೆ.........ಶೋಕಕ್ಕೆ......ಪ್ರಲಾಪಕ್ಕೆ......ನೋವಿಗೆ.......ದೋಮನಸ್ಸಿಗೆ......ಮತ್ತು, ಚಿಂತೆಗೆ ಗುರಿಯಾಗಬಾರದು ಎಂದು ಇಚ್ಚಿಸುತ್ತೇವೆ, ಅದರೆ ಕೇವಲ ಇಚ್ಚಿಸಿದ ಮಾತ್ರಕ್ಕೆ ನೀವು ಅವೆಲ್ಲಾವನ್ನು ತಡೆಯಲು ಸಾಧ್ಯವೇ ?.ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು.
   
        ಮತ್ತು ಆಯುಷ್ಮಂತರೇ ಪಂಚ ಉಪಾದಾನಖಂದಗಳು ದುಃಖ ಎಂದರೇನು?
  ಇಲ್ಲಿ  5 ರೀತಿಯ ಅಂಟುವಿಕೆಗಳಿವೆ ಅವೆಂದರೆ ದೇಹಕ್ಕೆ, ವೇದನೆಗಳಿಗೆ, ಗ್ರಹಿಕೆಗಳಿಗೆ, ಸಂಖಾರಗಳಿಗೆ, ಮತ್ತು ವಿಞ್ಞಆನಗಳಿಗೆ ಅಂಟಿಕೊಂಡಿರುವುದು. ಇದನ್ನು ಸಂಕ್ಷಿಪ್ತವಾಗಿ 5 ಖಂದಗಳಿಗೆ ಅಂಟಿರುವುದೇ ದುಃಖ ಎಂದು ಹೇಳಲಾಗಿದೆ, ಇದೇ ಆರ್ಯರ ದುಃಖ ಸತ್ಯವಾಗಿದೆ. 

      ಮತ್ತು ಆಯುಷ್ಮಂತರೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎಂದರೇನು ?
   ಇಲ್ಲಿ ತೃಷ್ಣೆಯೇ ಪುನರ್ಜನ್ಮಗಳ ಕಡೆಗೆ ಕರೆದೊಯ್ಯುತ್ತದೆ, ಇದು ಆನಂದ ಹಾಗೂ ರಾಗದಿಂದ ಕೂಡಿದ್ದು, ಸದಾ ವಿವಿಧ ವಲಯಗಳಲ್ಲಿ, ಕ್ಷೇತ್ರಗಳಲ್ಲಿ ಸುಖಭೋಗಗಳನ್ನು ಹುಡುಕುತ್ತಿರುತ್ತದೆ. ಅವೆಂದರೆ ಕಾಮತನ್ಹಾ(ಇಂದ್ರೀಯಸುಖಗಳ ಬೋಗಾಸಕ್ತಿ), ಭವತನ್ಹಾ(ಶಾಶ್ವತವಾಗಿ ಇರಬೇಕು ಎನ್ನುವ ತೀವ್ರಬಯಕೆ), ಮತ್ತು ವಿಭವ ತನ್ಹಾ(ಇರಲೇಬಾರದು ಎಂಬ ತೀವ್ರ ಬಯಕೆ). ಇದನ್ನೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎನ್ನುತ್ತಾರೆ.


      ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧ(ಅಂತ್ಯ/ಸಮಾಪ್ತಿ/ಇಲ್ಲವಾಗುವಿಕೆ) ಎಂದರೇನು ?
  ದುಃಖಕ್ಕೆ ಕಾರಣವಾದ ತನ್ಹಾವನ್ನು (ತೀವ್ರಬಯಕೆಗಳನ್ನು) ನಿಶ್ಶೇಷವಾಗಿ ವಿರಾಗತೋರುವುದು(ಮರೆಮಾಡುವುದು/ವಿಕರ್ಷಣವಾಗುವುದು), ನಿರೋಧಗೊಳಿಸುವುದು(ಅಂತ್ಯ), ತ್ಯಾಗಮಾಡುವುದು, ಪಟಿನಿಸ್ಸ(ಬಿಟ್ಟುಬಿಡುವುದು)ಮಾಡುವುದು, ಮುಕ್ತವಾಗುವುದು, ಅನಾಲಯಗೊಳ್ಳುವುದು(ಅಂಟದೆ ಇರುವುದು), ಇದನ್ನೇ ಆಯುಷ್ಮಂತರೇ ಆರ್ಯರ ದುಃಖನಿರೋಧ ಎನ್ನುತ್ತಾರೆ.

   
     ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗಸತ್ಯ ಎಂದರೇನು ?
ಅದೇ ಆರ್ಯ ಆಷ್ಟಾಂಗ ಮಾರ್ಗ ಅಂದರೆ

ಸಮ್ಮಾ ದಿಟ್ಟಿ
ಸಮ್ಮಾ ಸಂಕಲ್ಪ
ಸಮ್ಮಾ ವಾಚಾ
ಸಮ್ಮಾ ಕಮ್ಮ
ಸಮ್ಮಾ ಜೀವನೋಪಾಯ
ಸಮ್ಮಾ ವ್ಯಾಯಾಮ
ಸಮ್ಮಾ ಸ್ಮೃತಿ
ಸಮ್ಮಾ ಸಮಾಧಿ

ಮತ್ತು ಆಯುಷ್ಮಂತರೇ ಸಮ್ಮಾ ದಿಟ್ಟಿ(ದೃಷ್ಟಿಕೋನ) ಎಂದರೇನು?
  ದುಃಖ ಆರ್ಯ ಸತ್ಯ, ದುಃಖ ಸಮುದಯ ಆರ್ಯ ಸತ್ಯ, ದುಃಖ ನಿರೋಧ ಆರ್ಯ ಸತ್ಯ, ಮತ್ತು ದುಃಖ ನಿರೋಧಕ್ಕೆ ಕೊಂಡೊಯ್ಯುನ ಮಾರ್ಗ. ಇವುಗಳನ್ನು ಯಾತಾರ್ಥವಾಗಿ ಅರಿಯುವುದೇ ಸಮ್ಮಾ ದಿಟ್ಟಿಯಾಗಿದೆ.


ಮತ್ತು ಆಯುಷ್ಮಂತರೇ ಸಮ್ಮಾಸಂಕಲ್ಪ ಎಂದರೇನು?
  ತ್ಯಾಗದ ಸಂಕಲ್ಪಗಳು, ಅದ್ವೇಷದ ಸಂಕಲ್ಪಗಳು, ಅಹಿಂಸೆಯ ಸಂಕಲ್ಪಗಳು ಇಂಥವುಗಳನ್ನು ಆಯುಷ್ಮಂತರೇ ಸಮ್ಮಾ ಸಂಕಲ್ಪ ಎನ್ನುವರು.

ಮತ್ತು ಆಯುಷ್ಮಂತರೇ ಸಮ್ಮಾವಾಚಾ ಎಂದರೇನು?
  ಸುಳ್ಳುಮಾತುಗಳಿಂದ ವಿರತನಾಗುವಿಕೆ , ಚಾಡಿತನಗಳಿಂದ ವಿರತನಾಗುವಿಕೆ, ಕಠೋರ ಮಾತುಗಳಿಂದ ವಿರತನಾಗುವಿಕೆ , ಮತ್ತು ಅಸಂಬದ್ಧಮಾತುಗಳಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವಾಚಾ ಎನ್ನುವರು.


      ಮತ್ತು ಆಯುಷ್ಮಂತರೇ ಸಮ್ಮಾಕಮ್ಮ ಎಂದರೇನು?
  ಪ್ರಾಣಿಹತ್ಯೆಗಳಿಂದ ವಿರತನಾಗುವಿಕೆ, ಕಳ್ಳತನಗಳಿಂದ ವಿರತನಾಗುವಿಕೆ, ಮತ್ತು ಅನೈತಿಕ ಕಾಮುಕತೆಯಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾಜೀವನೊಪಾಯ ಎಂದರೇನು?
   ಇಲ್ಲಿ ಆರ್ಯಶ್ರಾವಕನು ಮಿಥ್ಯಜೀವನೋಪಯಗಳನ್ನು ತೊರೆದು ಸಮ್ಮಜೀವನೊಪಾಯದಿಂದ ಜೀವಿಸಿದರೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾವ್ಯಾಯಮವು ಯಾವುದು ?
   ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ.  ಹಾಗೇಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಇನ್ನಿಲ್ಲದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೇಯೆ ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸುವಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಕಳೆದುಹೋಗದಂತೆ, ವೃದ್ಧಿಸುವಂತೆ, ವಿಕಸಿಸುವಂತೆ, ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವ್ಯಾಯಾಮ ಎನ್ನುವರು. 

        ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃತಿಯು ಯಾವುದು ? 
  ಇಲ್ಲಿ ಆಯುಷ್ಮಂತರೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ವೇದನೆಗಳಲ್ಲಿ ವೇದನೂಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಹಾಗೆಯೇ ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ಧಮ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಸತಿ ಎನ್ನುವರು. 


          ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃಮಾಧಿಯು ಯಾವುದು ?  

    ಇಲ್ಲಿ ಆಯುಷ್ಮಂತರೇ ಭಿಕ್ಖುವು ಇಂದ್ರೀಯಸುಖಗಳ ಯೋಚನೆಗಳಿಂದ ರಹಿತನಾಗಿ(ಬರಿದಾಗಿ) ಹಾಗೆಯೇ ಅಕುಶಲ ಮಾನಸಿಕ ಸ್ಥಿತಿಗಳಿಂದ ರಹಿತನಾಗಿ, ವಿತರ್ಕ(ಮನಸ್ಸನ್ನು ಕೇಂದ್ರಿಕರಿಸುವಿಕೆ), ವಿಚಾರ(ಆ ದಿಕ್ಕಿನಲ್ಲಿಯೇ ಮನಸ್ಸನ್ನು ಹರಿಸುವಿಕೆ),  ಹಾಗೂ ಏಕಾಗ್ರತೆಗಳಿಂದ ಹುಟ್ಟಿದ  ಆನಂದ ಮತ್ತು ಸುಖದಿಂದ ಕೂಡಿದ ಪ್ರಥಮ ಸಮಾದಿಯಲ್ಲಿ ನೆಲೆಸುತ್ತಾನೆ.

 ನಂತರ ವಿತರ್ಕ ಮತ್ತು ವಿಚಾರಗಳಿಂದ ರಹಿತನಾಗಿ, ಅವುಗಳಿಗೆ ಅತೀತನಾಗಿ  ದ್ವೀತೀಯ ಸಮಾಧಿಯಲ್ಲಿ ನೆಲೆಸುತ್ತಾನೆ, ಆ ಸಮಾಧಿಯು ವಿತರ್ಕ ಮತ್ತು ವಿಚಾರಗಳಿಂದ ರಹಿತವಾದ ಆನಂದ ಹಾಗೂ ಸುಖಗಳಿಂದ ಕೂಡಿರುತ್ತದೆ. ಜೋತೆಗೆ ಅಂತರಿಕ ಸ್ಪಷ್ಟತೆ ಹಾಗೂ ಶ್ರದ್ಧೆಯಿಂದ ಕೂಡಿದ್ದು ಚಿತ್ತದ ಏಕೋಭಾವದಿಂದ ಕೂಡಿರುತ್ತದೆ.

    ನಂತರ ಆನಂದವನ್ನು ಮೀರಿದ ತ್ರಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಅಲ್ಲಿ ಅವರು ಸಮಚಿತ್ತತೆಯಿಂದ, ಸ್ಮೃತಿ ಹಾಗೂ ಎಚ್ಚರಿಕೆಯಿಂದ ಕೂಡಿದ ಸುಖದಲ್ಲಿ ನೆಲಸಿರುತ್ತಾರೆ, ಯಾವುದನ್ನು ಕುರಿತು ಆರ್ಯರು ಹೀಗೆ ನುಡಿದಿದ್ದಾರೊ : ಉಪೇಕ್ಖ(ಸಮಚಿತ್ತತೆ) ಹಾಗೂ ಸ್ಮೃತಿ(ಎಚ್ಚರಿಕೆ)ಯಿಂದ ಕೂಡಿದ ಸುಖಯುತ ಸಮಾಧಿಯಲ್ಲಿ ನೆಲಸುತ್ತಾನೆ. ಅದರಲ್ಲಿ ನೆಲಸುತ್ತಾನೆ.

    ನಂತರ ಸುಖಗಳನ್ನು ಹಾಗೂ ನೋವುಗಳನ್ನು ತ್ಯೇಜಿಸಿ, ಹಿಂದಿನ ಸುಖ ಹಾಗೂ ಶೋಕಗಳನ್ನು ಮೀರಿ, ಆತನು ಚತುರ್ಥ ಸಮಾಧಿಯಲ್ಲಿ ಪ್ರವೇಶಿಸಿ ನೆಲಸುತ್ತಾನೆ, ಅಲ್ಲಿ ಶುದ್ಧವಾದ ಸಮಚಿತ್ತತೆ ಹಾಗೂ ಸ್ಮೃತಿಯು ಇರುತ್ತದೆ. ಇದನ್ನೇ ಆಯುಷ್ಮಂತರೇ ಸಮ್ಮ ಸಮಾಧಿ ಎನ್ನುವರು. ಇದನ್ನೇ ಆಯುಷ್ಮಂತರೇ ದುಃಖನಿರೋಧಗಾಮಿನಿಯ ಮಾರ್ಗದ ಆರಿಯ ಸತ್ಯ ಎನ್ನುವರು.

    ಅಯುಷ್ಮಂತರೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,

  ಹೀಗೆ ಅಯುಷ್ಮಂತರಾದ ಸಾರಿಪುತ್ತರು ನುಡಿದರು. ಇದನ್ನು ಅಲಿಸಿ ಆನಂದಿತರಾಗಿದಂತಹ ಭಿಕ್ಕೂಗಳು ಸಾರಿಪುತ್ತರ ಬೊಧನೆಗೆ ಅಭಿನಂದನೆ ಮಾಡಿದರು.

   ಇಲ್ಲಿಗೆ ಹನ್ನೊಂದನೆಯ ಸಚ್ಚವಿಭಂಗ ಸುತ್ತವು ಮುಗಿಯಿತು.






   

 

 










































Thursday, 21 March 2019

pathama mahanama sutta in kannada 7. ಪ್ರಥಮ ಮಹಾನಾಮ ಸುತ್ತ

                                  7. ಪ್ರಥಮ ಮಹಾನಾಮ ಸುತ್ತ



ಆ ಸಮಯದಲ್ಲಿ ಭಗವಾನರು ಶಾಕ್ಯರ ರಾಜ್ಯದಲ್ಲಿ ಇದ್ದರು. ಕಪಿಲವಸ್ತುವಿನ ಸಮೀಪದ ಆಲದಮರದ ವಿಹಾರದಲ್ಲಿ ನೆಲೆಸಿದ್ದರು. ಆ ಸಮಯದಲ್ಲಿ ಕೆಲ ಭಿಕ್ಹುಗಳು ಭಗವಾನರಿಗೆ ಚಿವರ(ಭಿಕ್ಖು ವಸ್ತ್ರ)ವನ್ನು ಸಿದ್ಧಪಡಿಸುತ್ತಿದ್ದರು ಏಕೆಂದರೆ ವಷರ್ಾವಾಸದ ನಂತರ ಭಗವಾನರು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇತ್ತು.. ಈ ವಿಷಯವನ್ನು ಮಹಾನಾಮ ಶಾಕ್ಯರು ಕೇಳಿದರು.
ಅವರು ಬುದ್ಧರಲ್ಲಿಗೆ ಹೋಗಿ ವಂದಿಸಿದರು ನಂತರ ಒಂದೆಡೆ ಕುಳಿತರು ಮತ್ತು ಹೀಗೆ ಕೇಳಿದರು : ಭಗವಾನ್, ಕೆಲ ಭಿಕ್ಹುಗಳು ಭಗವಾನರಿಗೆ ಚಿವರವನ್ನು ಸಿದ್ಧಪಡಿಸುತ್ತಿದ್ದಾರೆ  ಏಕೆಂದರೆ ವಷರ್ಾವಾಸದ ನಂತರ ತಾವು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇದೆ ಎಂದು. ಈಗ ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.
ಸಾಧು ಸಾಧು ಮಹಾನಾಮ, ತಮ್ಮಂತಹ ಗೌರವಾನ್ವಿತ ವ್ಯಕ್ತಿಗಳು ನನ್ನೊಂದಿಗೆ ಈ ರೀತಿಯಲ್ಲಿ ಬಂದು, ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.  ಎಂದು ಕೇಳುವುದು ಅತ್ಯಂತ ಸಮಂಜಸವಾಗಿದೆ.
ಮಹಾನಾಮ, ಶ್ರದ್ಧಾವಂತನು ಯಶಸ್ವಿಯಾಗುತ್ತಾನೆ ಹೊರತು ಅಶ್ರದ್ಧಾವಂತನಲ್ಲ,
ಧೃಡಯತ್ನಶೀಲನು ಯಶಸ್ವಿಯಾಗುತ್ತಾನೆ ಹೊರತು ಸೋಮಾರಿಯಲ್ಲ, 
ಸ್ಮೃತಿವಂತನು ಯಶಸ್ವಿಯಾಗುತ್ತಾನೆ ಹೊರತು ಸ್ಮೃತಿಹೀನನಲ್ಲ,
ಸಮಾಹಿತನು ಯಶಸ್ವಿಯಾಗುತ್ತಾನೆ ಹೊರತು ಅಸಮಾಹಿತನಲ್ಲ, 
ಪ್ರಜ್ಞಾವಂತನು ಯಶಸ್ವಿಯಾಗುತ್ತಾನೆ ಹೊರತು ದುಪ್ರಜ್ಞನಲ್ಲ, 
ಯಾವಾಗ ನೀವು ಈ ರೀತಿಯಲ್ಲಿ ಈ ಐದು ವಿಷಯಗಳಲ್ಲಿ ನೆಲೆಗೊಂಡಾಗ, ನೀವು ನಂತರ ಆರು ಉನ್ನತ ವಿಷಯಗಳಲ್ಲಿ ಅಭಿವೃದ್ಧಿ ತಾಳಬೇಕು. ಮೊದಲು ನೀವು ತಥಾಗತರ ಅನುಸ್ಮರಣೆ ಹೀಗೆ ಮಾಡಬೇಕು:
     ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿಧ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷದಮ್ಯ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ.    ಯಾವಾಗ ಹೀಗೆ ಆರ್ಯ ಶಿಷ್ಯನು ತಥಾಗತರನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಬುದ್ಧಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಧಮ್ಮಾನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ :
ಧಮ್ಮವು (ಬೋಧನೆ) ಭಗವಾನರಿಂದ ತುಂಬ ಚೆನ್ನಾಗಿ ವಿವರಿಸಲ್ಪಟ್ಟಿದೆ (ಸ್ವಾಖ್ವಾತೋ), ಧಮ್ಮವು ಇಲ್ಲಿಯೇ ಈಗಲೇ ದಶರ್ಿಸಲ್ಪಟ್ಟಿದೆ(ಸಂದಿಟ್ಟಿಕೊ), ಕಾಲವಿಳಂಬವಿಲ್ಲದೆ ಫಲಕಾರಿಯು ಮತ್ತು ಸವರ್ಾಕಾಲಿಕವಾದುದು (ಅಕಾಲಿಕೊ), ಬನ್ನಿ ಪರಿಕ್ಷಿಸಿ (ಏಹಿಪಸ್ಸಿಕೊ) ನಂತರ ಸ್ವೀಕರಿಸಿ ಎಂದು ಆಹ್ವಾನಿಸುತ್ತದೆ. ಉನ್ನತಿಯೆಡೆಗೆ (ಓಪನಯಿಕೋ) ಸಾಗಿಸುವಂತಹುದು, ಜ್ಞಾನಿಗಳಾದ ಪ್ರತಿಯೊಬ್ಬರಿಂದಲೂ ಅರಿಯಬಹುದಾಗಿದೆ (ಪಚ್ಚತ್ತಂ ವೇದಿತಬ್ಬೊ ವಿಞ್ಞೋಹಿ ತಿ).
ಯಾವಾಗ ಹೀಗೆ ಆರ್ಯ ಶಿಷ್ಯನು ಧಮ್ಮವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಧಮ್ಮಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಭಗವಾನರ ಶ್ರಾವಕ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತಿದೆ
ಭಗವಾನರ ಶ್ರಾವಕ ಸಂಘವು ಋಜುವಿನ (ನೇರವಾದ) ದಾರಿಯಲ್ಲಿ. ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ನ್ಯಾಯವಾದ (ನಿಜ/ಸತ್ಯ) ದಾರಿಯಲ್ಲಿ ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ. ನಾಲ್ಕು ವ್ಯಕ್ತಿಗಳ ಜೋಡಿಗಳಿಂದ ಮತ್ತು ಅಷ್ಟ ವ್ಯಕ್ತಿಗಳಿಂದ ಕೂಡಿರುವುದೇ ಭಗವಾನರ ಶ್ರಾವಕ ಸಂಘವಾಗಿದೆ. ಈ ಪವಿತ್ರವಾದ ಸಂಘವು ದಾನಕ್ಕೆ ಅರ್ಹವಾಗಿದೆ, ಆತಿಥ್ಯಕ್ಕೆ ಅರ್ಹವಾಗಿದೆ, ದಕ್ಷಣೆಗೆ (ಸಮರ್ಪಣೆ) ಅರ್ಹವಾಗಿದೆ. ಅಂಜಲಿಬದ್ಧರಾಗಿ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಸಂಘವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಸಂಘಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಶೀಲಾನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ ?:
ನಾನು ಶೀಲಗಳನ್ನು ಅಭಂಗವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಛಿದ್ರವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಕಲೆರಹಿತವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಮಲಿನವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಖಂಡವಾಗಿ ಪಾಲಿಸಿದ್ದೇನೆ 
ನಾನು ಸೀಲಗಳನ್ನು ಸ್ವತಂತ್ರಗಳಿಸುವ ರೀತಿಯಲ್ಲಿ ಪಾಲಿಸಿದ್ದೆನೆ,
ನಾನು ಶೀಲಗಳನ್ನು ಜ್ಞಾನಿಗಳೂ ಸಹಾ ಪ್ರಶಂಶಿಸುವ ರೀತಿಯಲಿ ಪಾಲಿಸಿದ್ದೇನೆ,
ನಾನು  ಶೀಲಗಳನ್ನು ಸಮಾಧಿಯು ಗಳಿಸುವ ರೀತಿಯಲ್ಲಿ ಪಾಲಿಸಿದ್ದೇನೆ. ಎಂದು ಆನಂದಿಸುತ್ತಾನೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಶೀಲವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ಶೀಲಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಚಾಗಾ(ತ್ಯಾಗಾ)ನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ:
ನಾನು ಅತ್ಯಂತ ಲಾಭವಂತ, ಭಾಗ್ಯಶಾಲಿ, ಪುಣ್ಯವಂತನಾಗಿದ್ದೇನೆ, ಏಕೆಂದರೆ ಸ್ವಾರ್ಥಮಲ ಹೊಂದಿರುವ ಜನರ ನಡುವೆ ನಿಃಸ್ವಾರ್ಥತತೆಯಿಂದ ಸ್ವತಂತ್ರವಾಗಿ, ದಾನಿಯಾಗಿ, ತೆರೆದಹಸ್ತವುಳ್ಳವವಾಗಿ, ತ್ಯಾಗದಲ್ಲಿ ಪ್ರೀತಿಸುವವನಾಗಿ, ದಾನಶೀಲತೆಯಲ್ಲಿ ಬದ್ಧನಾಗಿ, ನೀಡುವುದರಲ್ಲಿ , ಹಂಚುವುದರಲ್ಲ್ಲಿ ಆನಂದಿಸುವವನಾಗಿದ್ದೇನೆ
ಯಾವಾಗ ಹೀಗೆ ಆರ್ಯ ಶಿಷ್ಯನು ತ್ಯಾಗವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ತ್ಯಾಗಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವವ್ಯಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
 ಅಲ್ಲದೆ ನೀವು ದೇವತಾನುನುಸ್ಸತಿಯಲ್ಲಿ ತೊಡಗಬೇಕು. ಹೇಗೆಂದರೆ?  :ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ ದೇವತೆಗಳಿದ್ದಾರೆ, ಪರನಿಮರ್ಾಣರತಿ ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ ಮತ್ತು ಬೇರೆಯ ಉನ್ನತ ರೀತಿಯ ದೇವತೆಗಳಿದ್ದಾರೆ. ಯಾವಾಗ ಈ ದೇವತೆಗಳು ಇಲ್ಲಿಂದ ಚ್ಯುತಿ ಹೊಂದುವವು ಆಗ ಅವು ಇಲ್ಲಿಂದ ಬೇರೆಡೆ ದೇವ ಪುನರ್ಜನ್ಮ ತಾಳುವವು, ಇವರೆಲ್ಲರ ಬಳಿ ಶ್ರದ್ಧೆ, ದಾನ, ಶೀಲ, ಧ್ಯಾನ, ಕಲಿಯುವಿಕೆ, ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ. ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.
ಯಾವಾಗ ಹೀಗೆ ಆರ್ಯ ಶಿಷ್ಯನು ದೇವತಾನುಸತಿಯನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ದೇವತಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು..
ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.

                                                         ಇಲ್ಲಿಗೆ ಪ್ರಥಮ ಮಹಾನಾಮ ಮುಗಿಯಿತು 

velama sutta in kannada ವೇಲಾಮ ಸುತ್ತ

                                          2. ವೇಲಾಮ ಸುತ್ತ


ಆ ಸಮಯದಲ್ಲಿ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ನೆಲೆಸಿದ್ದರು. ಆಗ ಮಹಾಉಪಾಸಕ ಅನಾಥಪಿಂಡಿಕರು ಭಗವಾನರ ಬಳಿಗೆ ಬಂದರು, ಶ್ರದ್ಧಾಪೂರ್ವಕವಾಗಿ ವಂದಿಸಿದರು, ನಂತರ ಒಂದೆಡೆ ಕುಳಿತರು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು:
   ಗೃಹಪತಿಯೇ, ನಿಮ್ಮ ಕುಲವು ಈಗಲೂ ದಾನಗಳನ್ನು ನೀಡುತ್ತಿದೆಯೇ?
  ನೀಡುತ್ತಿದೆ ಭಗವಾನ್, ಅದರೆ ಕೇವಲ ಒರಟಾದ ಅಂಬಲಿ ಹಾಗೂ ಉಪ್ಪಿನಕಾಯಿಗಳನ್ನು ನೀಡುತ್ತಿದ್ದೇವೆ.
 ಗೃಹಪತಿಯೇ ದಾನಿಯು ನೀಡುವಂತಹ ಆಹಾರವು ಒರಟಾಗಿರಬಹುದು ಅಥವಾ ಶ್ರೇಷ್ಟವಾಗಿರುವುದೇ ಆಗಿರಬಹುದು, ಅದರೆ ಅವರು ಅಲಕ್ಷವಾಗಿ ನೀಡಿದರೆ, ಮನಸ್ಸಿಡದೇ ನೀಡಿದರೆ, ತಮ್ಮ ಕೈಯಾರೆ ನೀಡದಿದ್ದರೇ, ಉಳಿದಿದ್ದು ನೀಡಿದರೆ, ಕಮ್ಮವಿಪಾಕದ ಅರಿವಿಲ್ಲದೆ ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರವಾಗಿರ ಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಅವ್ಯಾವುದರಲ್ಲೂ ಆತನು ಆನಂದಿಸಲಾರನು ಆತನ ಮನಸ್ಸು ಅದರಲ್ಲಿ ಹರಿಯಲಾರದು, ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಯಾರು ಸಹಾ ಆತನ ಮಾತನ್ನು ಕೇಳಲಾರರು, ಅವರ್ಯಾರು ಸಹಾ ಅತನ ಮಾತುಗಳಿಗೆ ಗಮನವೂ ಸಹ ನೀಡುವುದಿಲ್ಲ ಹಾಗೇಯೆ ಅರ್ಥವನ್ನು ಮಾಡಿಕೊಳ್ಳಲು ಸಹಾ ಹೋಗುವುದಿಲ್ಲ. ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ನಿರ್ಲಕ್ಷವಾಗಿ ನೀಡಿದ್ದಾರೆ.
ಇಲ್ಲಿ ಹಲವರು ದಾನದಲ್ಲಿ ನೀಡುವಂತಹ ಆಹಾರವು ಒರಟಾಗಿಯೇ ಇರಲಿ ಅಥವಾ ಶ್ರೇಷ್ಟವಾಗಿಯೇ ಇರಲಿ ಅದರೆ ಅವರು ಜಾಗರೂಕವಾಗಿ ಶ್ರದ್ಧೆಯಿಂದ ನೀಡಿದರೆ, ಮನಸ್ಸಿಟ್ಟು ನೀಡಿದರೆ, ತಮ್ಮ ಕೈಯಾರೆ ನೀಡಿದ್ದರೇ, ಉಳಿದಿದ್ದು ನೀಡದಿದ್ದರೆ, ಕಮ್ಮವಿಪಾಕದ ಅರಿವಿದ್ದು ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರ ವಾಗಿರಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಆ ಎಲ್ಲದರಲ್ಲು ಆತನು ಆನಂದಿಸುವನು ಆತನ ಮನಸ್ಸು ಅದರಲ್ಲಿ ಬಾಗುವುದು ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಎಲ್ಲರೂ ಸಹಾ ಆತನ ಮಾತನ್ನು ಕೇಳುವರು. ಎಲ್ಲರೂ ಸಹಾ ಅತನ ಮಾತುಗಳಿಗೆ ಗಮನವೂ ನೀಡುತ್ತಾರೆ ಹಾಗೇಯೆ ಅರ್ಥವನ್ನು ಮಾಡಿಕೊಳ್ಳುತ್ತಾರೆ ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ಜಾಗರೂಕವಾಗಿ, ಶ್ರದ್ಧಾಪೂರ್ವಕವಾಗಿ ನೀಡಿದ್ದಾರೆ ಅದರ ಕಮ್ಮಫಲದಿಂದಾಗಿ ಹೀಗಾಗಿದೆ.
ಗೃಹಪತಿಯೇ ಒಂದು ಕಾಲದಲ್ಲಿ ವೇಲಾಮ ಎಂಬ ಹೆಸರಿನ ಬ್ರಾಹ್ಮಣನಿದ್ದನು, ಆತನು ಹೀಗೆ ದಾನವನ್ನು ಮಾಡುತ್ತಿದ್ದನು ಹೇಗೆಂದರೆ 84000 ಸಾವಿರ ಚಿನ್ನದ ಪಾತ್ರೆಗಳು ಬೆಳ್ಳಿಯಿಂದ ತುಂಬಿರುತ್ತಿದ್ದವು, 84000 ಸಾವಿರ ಬೆಳ್ಳಿಪಾತ್ರೆಗಳು ಚಿನ್ನದಿಂದ ತುಂಬಿರುತ್ತಿತ್ತು, 84000 ಕಂಚಿನ ಪಾತ್ರೆಗಳು ಚಿನ್ನದ ನಾಣ್ಯಗಳಿಂದ ತುಂಬಿರುತ್ತ್ತಿತ್ತು. 84000 ಆನೆಗಳು ಚಿನ್ನಾಭರಣಗಳಿಂದ, ಧ್ವಜಗಳಿಂದ ಕೂಡಿರುತ್ತಿತ್ತು, 84000 ರಥಗಳು ಸಿಂಹಗಳ, ಹುಲಿಗಳ, ಚಿರತೆಗಳ ಚರ್ಮಗಳಿಂದ ಮತ್ತು ನಯವಾದ ರತ್ನಕಂಬಳಿಗಳಿಂದ, ಚಿನ್ನವಸ್ತ್ರಗಳಿಂದ, ಚಿನ್ನದ ಧ್ವಜಗಳಿಂದ ಅಲಂಕೃತವಾಗಿರುತ್ತಿದ್ದವು, ಚಿನ್ನದ ಬಲೆಗಳಿಂದ ಕೂಡಿರುತ್ತಿದ್ದವು. ಹಾಗೇಯೆ  ಹಾಲನ್ನು ನೀಡುವಂತಹ 84000 ಹಸುಗಳಿಗೆ ರೇಷ್ಮೆಯ ಮೂಗುದಾರವು ಹಾಗೂ ಹತೋಟಿಯ ರೇಷ್ಮೆಯ ಹಗ್ಗವು ಇರುತ್ತಿತ್ತು, ಹಾಗೇಯೇ 84000 ಕನ್ಯೆಯರು ರತ್ನಾಭರಣಗಳಿಂದ ಅಭೂಷಿತರಾಗಿದ್ದರು, 84000 ಪಲ್ಲಕ್ಕಿಗಳು ರತ್ನಗಂಬಳಿಗಳಿಂದ, ಹೂವು ಇತ್ಯಾದಿಗಳಿಂದ ಜಿಂಕೆಯ ಚರ್ಮಗಳಿಂದ ಅಲಂಕೃತವಾಗಿ ಅವರಿಸಿದ್ದವು, ಅದರಲ್ಲಿ ಕೆಂಪು ದಿಂಬುಗಳು ಸಹಾ ಇದ್ದವು, ಹಾಗೆಯೇ 84000000000 ಗಳಷ್ಟು ಲಿನೀನ್ನ, ರೇಷ್ಮೇಯ, ಉಣ್ಣೆಯ, ಮತ್ತು ಹತ್ತಿಯ ಉಡುಗೆಗಳು ಸಹಾ ಇದ್ದವು. ಮತ್ತು ಇನ್ನು ಊಟ, ಪಾನಿಯ, ತಿಂಡಿ, ಆಹಾರಗಳು, ಭೋಜನಗಳು ಇತ್ಯಾದಿಗಳ ಬಗ್ಗೆ ಹೇಳಲೇ ಬೇಕಾಗಿಲ್ಲ, ಏಕೆಂದರೆ , ಅವೆಲ್ಲಾ ನದಿಯಂತೆ ಹರಿಯುತ್ತಿದ್ದವು.
ಗೃಹಪತಿಯೇ ನೀನು ಹೀಗೆ ಯೋಚಿಸಬಹುದು: ಖಂಡಿತವಾಗಿ ಈ ಬ್ರಾಹ್ಮಣ ಆ ಕಾಲದಲ್ಲಿ ಬೇರೆ ಯಾರೋ ಇದ್ದಿರಬಹುದು! ಎಂದು. ಅದರೆ ಹಾಗೇ ಭಾವಿಸದಿರಿ. ನಾನೇ ಆ ಕಾಲದಲ್ಲಿ ವೇಲಾಮ ಬ್ರಾಹ್ಮಣ ನಾಗಿದ್ದೇನು. ನಾನೇ ಆಗ ಆ ಮಟ್ಟದ ದಾನಗಳನ್ನು ಮಾಡಿದ್ದೆನು!, ಅದರೆ ಆ ಕಾಲದಲ್ಲಿ ಯಾರು ಸಹಾ ಅಂತಹ ದಾನ ಸ್ವೀಕಾರಕ್ಕೆ ಅರ್ಹರು ಇರಲಿಲ್ಲ. ಹೀಗಾಗಿ ಅಂತಹ ದಾನದಿಂದ ಯಾರು ಸಹಾ ಪರಿಶುದ್ಧರಾಗಲಿಲ್ಲ.
ಗೃಹಪತಿಯೇ ವೇಲಾಮ ಬ್ರಾಹ್ಮಣ ಮಹಾದಾನವನ್ನೇ ಮಾಡಿರ ಬಹುದು, ಅದರೆ ಒಬ್ಬ ದೃಷ್ಟಿಸಂಪನ್ನನಿಗೆ (ಸೋತಪನ್ನ) ಬೋಜನದಾನ ಮಾಡಿಸಿದರೆ ಅದು ಈ ಹಿಂದೆ ವೇಲಾಮ ಮಾಡಿದ ಅಷ್ಟು ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ,  ಒಬ್ಬ ಸಕದಾಗಾಮಿ(ಜ್ಞಾನೋದಯದ 2ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ದೃಷ್ಟಿಸಂಪನ್ನರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅನಾಗಾಮಿ(ಜ್ಞಾನೋದಯದ 3ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ಸಕದಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅರಹಂತಗೆ(ಜ್ಞಾನೋದಯ ಪೂರ್ಣ)  ಭೋಜನದಾನ ಮಾಡಿಸಿದರೆ ಅದು ನೂರು ಅನಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ,  ಒಬ್ಬ ಪಚ್ಚೇಕಬುದ್ಧರಿಗೆ ಭೋಜನದಾನ ಮಾಡಿಸಿದರೆ ಅದು ನೂರು ಅರಹಂತರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ, ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಭೋಜನದಾನ ಮಾಡಿದರೆ ಅದು ನೂರು ಪಚ್ಚೇಕಬುದ್ಧರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ಭಿಕ್ಖುಸಂಘಸಹಿತ ,ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿದರೆ ಅದು ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೇಯೇ ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದು  ಭಿಕ್ಖುಸಂಘಸಹಿತ ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿಸುವುದಕ್ಕಿಂತಲೂ ಮಹತ್ಫಲವಾಗಿರುತ್ತದೆ.
ಹಾಗೇಯೇ ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದು ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೆಯೇ ಪಂಚಶೀಲಗಳಾದ (- ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೊಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಯು ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೇಯೇ ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಧ್ಯಾನವು ಮಾಡಿದರೆ ಅದು ಪಂಚಶೀಲಗಳಾದ (ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೋಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಗಿಂತಲೂ ಹೆಚ್ಚು ಮಹತ್ಫಲವನ್ನು ನೀಡುತ್ತದೆ.   
ಹಾಗೇಯೇ ನಿಮಿಷಗಳ ಕಾಲದ ಅನಿತ್ಯತೆಯ ಸಂಜ್ಞೇಯ ಧ್ಯಾನವನ್ನು ಮಾಡಿದರೆ ಅದು  ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಭಾವನ (ಧ್ಯಾನ)ವು ಮಾಡಿದುದಕ್ಕಿಂತಲೂ ಹೆಚ್ಚು ಮಹತ್ಫಲ ನೀಡುತ್ತದೆ .ಇದು ಇವೆಲ್ಲಕ್ಕೂ ಹೆಚ್ಚು ಮಹತ್ಫಲವಾಗಿದೆ .

                                             ಇಲ್ಲಿಗೆ ವೇಲಾಮ ಸುತ್ತವು ಮುಗಿಯಿತು 

kalama sutta in kannada ಕಾಲಾಮ ಸುತ್ತ

1. ಕೇಸಮುಟ್ಟಿ (ಕೇಸಪುತ್ತಿಯ/ಕಾಲಾಮ ಸುತ್ತ) (ವಿಚಾರಶೀಲತೆಯ ಸೂತ್ರ) ಸುತ್ತ


ನಾನು ಹೀಗೆ ಕೇಳಿರುವೆ. ಭಗವಾನರು ಒಮ್ಮೆ ಕೋಸಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಕೇಸಪುತ್ತದ ಕಾಲಾಮರು ಹೀಗೆ ಭಗವಾನರ ಖ್ಯಾತಿ ಆಲಿಸಿದ್ದರು. ಏನೆಂದರೆ ಶಾಕ್ಯಪುತ್ರರಾದ ಸಮಣಗೋತಮರು ಕೇಸಪುತ್ತಕ್ಕೆ ಆಗಮಿಸಿದ್ದಾರೆ ಅವರ ಬಗ್ಗೆ ಈ ರೀತಿಯ ಖ್ಯಾತಿಯು ಹಬ್ಬಿದೆ:
ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿದ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷಧಮ್ಮ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ. ಹೀಗಾಗಿ ಅಂತಹ ಅರಹಂತರನ್ನು ದಶರ್ಿಸುವುದು ಒಳ್ಳೆಯದು ಎಂದು ತಿಮರ್ಾನಿಸಿದರು.
ಹೀಗೆ ಕೇಸಪುತ್ತದ ಕಾಲಾಮರು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು....ಕೆಲವರು ನಿಶ್ಯಬ್ದವಾಗಿ ಕುಳಿತರು.... ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:
ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ಧಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು? ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.
ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯ ಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ) 
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ 
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ,  
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ, 
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ, 
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ,  
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹ ಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ, 
9. ಭವ್ಯ ನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ, 
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು, ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಒಬ್ಬನಲ್ಲಿ ಲೋಭ ಉಂಟಾದಾಗ ಅದು ಆತನಿಗೆ ಲಾಭಕ್ಷೇಮ ತರುತ್ತದೆಯೋ ಅಥವಾ ಹಾನಿಯನ್ನು ಉಂಟುಮಾಡುತ್ತದೆಯೋ?
ಅದು ಹಾನಿಯನ್ನು ತರುತ್ತದೆ ಭಗವಾನರೇ.
ಕಾಲಾಮರೇ, ಈಗ ಆತನು ಲೋಭಿಯಾದಾಗ, ಲೋಭದಿಂದ ಸೋತಿರುವಾಗ, ಲೋಭದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇ ರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ದ್ವೇಷಿಯಾದಾಗ, ದ್ವೇಷದಿಂದ ಸೋತಿರುವಾಗ, ದ್ವೇಷದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ಮೋಹಿಯಾದಾಗ, ಮೋಹದಿಂದ ಸೋತಿರುವಾಗ, ಮೋಹದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ?
ಅಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನಾತೀತವೋ?
ನಿಂದನೀಯವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ನಿಷೇಧಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ ಅಲ್ಲವೇ? ಇದನ್ನು ಹೇಗೆ ತೆಗೆದುಕೊಳ್ಳುವಿರಿ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಓ ಕಾಲಾಮರೇ, ಹೀಗಾಗಿ
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು ,ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ ,ಅದಕ್ಕಾಗಿಯೇ ಹೀಗೆ ಹೇಳಿದ್ದೇನೆ.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದಾತೀತವಾದವು ,ಇವು ಅರ್ಥಕಾರಿ, ನಿಂದತೀತವಾದವು ಜ್ಞಾನಿಗಳಿಂದ ಪ್ರಶಂಶಿಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ಸುಖವಾಗುತ್ತದೆ ಮತ್ತು ಕ್ಷೇಮವಾಗುತ್ತದೆ ಎಂದು ಅರಿವಾದಾಗ ಅವನ್ನು ಸ್ವೀಕರಿಸಿರಿ, ಪಾಲಿಸಿರಿ, ಜೀವಿಸಿರಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ?,  ಅಲೋಭವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಲೋಭಮುುಕ್ತನಾದಾಗ, ಲೋಭದಿಂದ ಸೋಲದಿದ್ದಾಗ, ಲೋಭದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಇದನ್ನೇ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ  ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅದ್ವೇಷವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ದ್ವೇಷಮುಕ್ತನಾದಾಗ,  ದ್ವೇಷದಿಂದ ಸೋಲದಿದ್ದಾಗ, ದ್ವೇಷದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅಮೋಹವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಮೋಹಮುಕ್ತನಾದಾಗ,  ಮೋಹದಿಂದ ಸೋಲದಿದ್ದಾಗ, ಮೋಹದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ,?
ಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನತೀತವೋ ?.
ನಿಂದನಾತೀತವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ಪ್ರಶಂಸಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ ಅಥವಾ ಅಲ್ಲವೇ ಇದನ್ನು ಹೇಗೆ ತೆಗೆದುಕೊಳ್ಳುವಿರಿ ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗಹ್ರಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದನಾತೀತವಾದವು ,ಇವು ಅರ್ಥಕಾರಿ,  ಜ್ಞಾನಿಗಳಿಂದ ಪ್ರಶಂಶಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಸ್ವೀಕಾರ ಹಾಗು ಪಾಲನೆಯಿಂದ ದೀರ್ಘಕಾಲಸುಖವಾಗುತ್ತದೆ ಎಂದು ಅರಿವಾದಾಗ ಅದನ್ನು ಪುರಸ್ಕರಿಸಿ, ಪಾಲಿಸಿರಿ ಮತ್ತು ಜೀವಿಸಿರಿ ಅದಕ್ಕಾಗಿಯೇ ಹೀಗೆ ಹೇಳಲಾಗಿದೆ.
ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಸ್ಪಷ್ಟವಾಗಿ ಅರಿಯುವವನಾಗುತ್ತಾನೆ,  ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಹೀಗೇ ಸ್ಥಾಪಿತವಾದ ಮೆತ್ತಾಯುತವಾದ ಚಿತ್ತದಿಂದ ಒಂದು ದಿಕ್ಕಿನತ್ತ ಮೆತ್ತವನ್ನು ಪ್ರಸರಿಸುತ್ತಾನೆ.......... ಕರುಣೆಯಿಂದ ಕೂಡಿರುತ್ತಾನೆ.......... ಮುದಿತಾದಿಂದ ಕೂಡಿರುತ್ತಾನೆ......... ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎರಡನೇಯ ದಿಕ್ಕಿಗೂ, ಮೂರನೆಯ ದಿಕ್ಕಿಗೂ, ನಾಲ್ಕನೇಯ ದಿಕ್ಕಿಗೂ, ಹೀಗೆಯೇ ಮೇಲೆ, ಕೆಳಗೆ, ಸುತ್ತಲೂ, ಎಲ್ಲಾ ದಿಕ್ಕುಗಳಿಗೂ ಸಮಚಿತ್ತತೆಯನ್ನು ಹರಡುತ್ತ ನೆಲೆಸುತ್ತಾನೆ. ಹೀಗೆ ಆತನು ವ್ಯಾಪಕವಾದ, ಉನ್ನತವಾದ, ಅಪರಿಮಿತವಾದ,  ದ್ವೇಷರಹಿತವಾದ, ಚಿತ್ತದಿಂದ ಕೂಡಿರುತ್ತಾನೆ.
ಕಾಲಾಮರೇ ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಭರವಸೆಗಳನ್ನು ಕಾಣಬಹುದು.
1. ಮೊದಲ ಭರವಸೆ ಏನೆಂದರೆ, ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.
2. ಎರಡನೆಯ ಭರವಸೆ ಏನೆಂದರ,ೆ ಪರಲೋಕವಿಲ್ಲದಿದ್ದರೆ, ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲ ಸಿಗದಿದ್ದರೆ, ಅದರೂ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.
3. ಮೂರನೆಯ ಭರವಸೆ ಏನೆಂದರೆ, ಕರ್ಮಫಲ ಇರುವುದಾದರೆ, ಪಾಪಿಗೇ ಮಾತ್ರ ಕೆಡಕಾಗುತ್ತದೆ,  ನಾನು ಯಾವುದೇ ಕೆಟ್ಟ ಇಚ್ಚೆಗಳನ್ನು ಯಾರ ಮೇಲೆಯೂ ಹೊಂದಿಲ್ಲ,  ಹೀಗೆ ಯಾವ ಪಾಪವೂ ಮಾಡದ  ನನಗೆ ಹೇಗೆತಾನೆ  ದುಃಖವು ತಟ್ಟಿತು?.
4. ನಾಲ್ಕನೆಯ ಭರವಸೆ ಏನೆಂದರೆ, ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎನ್ನುವುವಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು.
ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಮೊದಲ ಭರವಸೆ ಏನೆಂದರೆ ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಾನು ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.............. ನಾಲ್ಕನೆಯ ಭರವಸೆ ಏನೆಂದರೆ ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎಂದರೂ ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು. ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಅದ್ಭುತ ಭಂತೆ! ......... ನಾವು ಭಗವಾನರಿಗೆ ಶರಣು ಹೋಗುವೆವು, ಧಮ್ಮಕ್ಕೂ ಶರಣು ಹೋಗುವೆವು, ಸಂಘಕ್ಕೂ ಶರಣು ಹೋಗುವೆವು. ನಮ್ಮನ್ನು ಭಗವಾನರು ಇಂದಿನಿಂದ ಜೀವನ ಪರ್ಯಂತ ಉಪಾಸಕರೆಂದು ಪರಿಗಣಿಸಲಿ.
                                                              - ಂ0ಂ  

Thursday, 26 July 2018

ಅನತ್ತ ಲಕ್ಖಣ ಸುತ್ತ (ಬುದ್ಧಭಗವಾನರ ಎರಡನೇಯ ಸುತ್ತ) anatta lakkhana sutta in kannada

ಅನತ್ತ ಲಕ್ಖಣ ಸುತ್ತ


(ಬುದ್ಧಭಗವಾನರ ಎರಡನೇಯ ಸುತ್ತ)



ಹೀಗೆ ನಾನು ಕೇಳಿದ್ದೇನೆ ಆಗ ಭಗವಾನರು ಕಾಶಿಯ ಹತ್ತಿರದ ಇಸಿಪತ್ತನದ ಮೃಗದಾಯದ ಬಳಿ ಇದ್ದರು.ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :
  ಭಿಕ್ಖುಗಳೇ ಆಕಾರವು(ದೇಹವು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ದೇಹವೇ ಆತ್ಮವಾಗಿದ್ದರೇ ಆಗ ದೇಹವೂ ರೋಗಕ್ಕೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ದೇಹವೂ ಆತ್ಮವಲ್ಲದ್ದರಿಂದಾಗಿ ಅದು ರೋಗವನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ವೇದನೆಗಳು ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ವೇದನೆಗಳೇ ಆತ್ಮವಾಗಿದ್ದರೇ ಆಗ ವೇದನೆಗಳು ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವೇದನೆಗಳು ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿದ್ದರೇ ಆಗ ಸಞ್ಞೆಗಳು (ಗ್ರಹಿಕೆಗಳು) ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಞ್ಞೆಗಳು(ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಞ್ಞೆಗಳು (ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿದ್ದರೇ ಆಗ ಸಂಖಾರಗಳು(ಮನೋನಿಮರ್ಿತಿಗಳು) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು)ೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.


ಭಿಕ್ಖುಗಳೇ ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿದ್ದರೇ ಆಗ ವಿಞ್ಞನಗಳು (ಅರಿಯುವಿಕೆ) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆ) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ದೇಹವೂ ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್
ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಞ್ಞ(ಗ್ರಹಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
  ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
ಅದ್ದರಿಂದ ಭಿಕ್ಖುಗಳೇ ಯಾವುದೇ ಶರೀರವು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಶರೀರವನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವೇದನೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವೇದನೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಞ್ಞೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಞ್ಞೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಂಖಾರಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಂಖಾರಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವಿಞ್ಞನಗಳು ಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವಿಞ್ಞನಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಓ ಭಿಕ್ಖುಗಳೇ, ಯಾವಾಗ ಸುಶಿಕ್ಷಿತ ಆರ್ಯ ಶ್ರಾವಕನು ಹೀಗೆ ಗಮನಿಸಿದಾಗ ಆತನು ದೇಹದಿಂದ ವಿಕಷರ್ಿತನಾಗುತ್ತಾನೆ , ವೇದನೆಗಳಿಂದ ವಿಕಷರ್ಿತನಾಗುತ್ತಾನೆ,  ಸಞ್ಞಗಳಿಂದ ವಿಕಷರ್ಿತನಾಗುತ್ತಾನೆ , ಸಂಖಾರಗಳಿಂದ ವಿಕಷರ್ಿತನಾಗುತ್ತಾನೆ , ವಿಞ್ಞನಗಳಿಂದ ವಿಕಷರ್ಿತನಾಗುತ್ತಾನೆ ,ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ, ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತಾನೆ, ಅದರಿಂದಾಗಿ ವಿಮುಕ್ತಜ್ಞಾನ ಪಡೆಯುತ್ತಾನೆ ಜನ್ಮವೂ ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಯಾವುದೆಲ್ಲವನ್ನು ಮಾಡಬೇಕಾಗಿತ್ತೊ ಅವೆಲ್ಲವನ್ನು ಮಾಡಿಯಾಗಿದೆ, ಇನ್ನು ನನಗೆ ಭವವಿಲ್ಲ ಎಂದು ಅರಿಯುತ್ತಾನೆ.

ಭಗವಾನರು ಹೀಗೆ ಬೋಧಿಸಿದಾಗ ಪಂಚವಗರ್ೀಯ ಭಿಕ್ಷುಗಳು ಆನಂದಿತರಾದರು ಹಾಗೂ ಅವರ ಚಿತ್ತಗಳು ಅಸವಗಳಿಂದ ಮುಕ್ತವಾದವು, ಅವರು ಎಲ್ಲಾಬಗೆಯ ಅಂಟುವಿಕೆಯಿಂದ ಮುಕ್ತರಾದರು.

DHAMMACAKKAPAVATTANA SUTTA in kannada ದಮ್ಮಚಕ್ಕಪವತ್ತನ ಸುತ್ತ

 ದಮ್ಮಚಕ್ಕಪವತ್ತನ ಸುತ್ತ




ನಾನು ಹೀಗೆ ಕೇಳಿದ್ದೇನೆ :
ಒಮ್ಮೆ ಭಗವಾನರು ವಾರಾಣಸಿಯ ಇಸಿಪಟ್ಟಣದ ಮಿಗದಾಯದಲ್ಲಿ ವಿಹರಿಸುತ್ತಿದ್ದರು, ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳಿಗೆ ಹೀಗೆ ಸಂಭೋದಿಸಿದರು :

 ಎರಡು ಅತಿರೇಕಗಳಿವೆ ಭಿಕ್ಖುಗಳೇ, ಅದನ್ನು ಪಬ್ಬಜಿತನಾದವನು ಸೇವಿಸಬಾರದು, ಯಾವುದವು ಎರಡು ?

 ಅವೆಂದರೆ ಕಾಮಸುಖಗಳಲ್ಲಿ ತಲ್ಲಿನನಾಗುವಿಕೆ, ಇವು ಹೀನವಾದುದು, ಅಸಭ್ಯವಾದುದು(ಗಮ್ಮೋ), ಪ್ರಾಪಂಚಿಕವಾದುದು(ಪೊಥುಜ್ಜನಿಕೊ), ಉದಾತ್ತವಲ್ಲದ್ದು(ಅನರಿಯೊ), ಮತ್ತು ಅನರ್ಥಕಾರಿಯಾದುದು.


ಇನ್ನೊಂದು ಅತಿರೇಕವೆಂದರೆ ಸ್ವಯಂವನ್ನು(ದೇಹ) ದಂಡಿಸುವಿಕೆ, ಇವು ದುಃಖಕಾರಿ, ಉದಾತ್ತವಲ್ಲದ್ದು, ಮತ್ತು ಅನರ್ಥಕಾರಿಯಾದುದು.

 ಈ ಉಭಯವನ್ನು ವಜರ್ಿಸಿರುವ ತಥಾಗತರು ಮಧ್ಯಮ ಮಾರ್ಗವನ್ನು ಅನ್ವೇಷಿಸಿದ್ದಾರೆ. ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.

   ಯಾವುದು ಭಿಕ್ಖುಗಳೇ ತಥಾಗತರು ಅನ್ವೇಷಿಸಿರುವ. ಮಧ್ಯಮ ಮಾರ್ಗವು. ಚಕ್ಷುಕಾರಕವು, ಜ್ಞಾನಕಾರಕವು, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು..
 ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ
ಸಮ್ಮಾದೃಷ್ಟಿಕೋನ,
ಸಮ್ಮಾಸಂಕಲ್ಪ,
ಸಮ್ಮಾ ವಾಚ,
ಸಮ್ಮಾ ಕಮ್ಮ,
 ಸಮ್ಮಾ ಜೀವನೋಪಾಯ,
ಸಮ್ಮಾ ಸ್ಮೃತಿ ಮತ್ತು
ಸಮ್ಮಾ ಸಮಾಧಿ.

ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.
 ಇದೇ ಭಿಕ್ಖುಗಳೇ ದುಃಖ ಆರ್ಯಸತ್ಯ, ಹೇಗೆಂದರೆ ಜನ್ಮವು ದುಃಖಕರ, ಜರಾ(ಮುಪ್ಪು) ದುಃಖಕರ, ವ್ಯಾದಿ ದುಃಖಕರ, ಮರಣ ದುಃಖಕರ, ಅಪ್ರೀಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖಕರ, ಇಚ್ಚಿಸುವಂತಹುದು ಅಲಭ್ಯವಾದರೆ ದುಃಖ, ಸಂಕ್ಷೀಪ್ತವಾಗಿ ಹೇಳುವುದಾದರೆ ಐದು ಖಂದಗಳಲ್ಲಿ(ದೇಹ ಮತ್ತು ಮನಸ್ಸುಗೆ) ಅಂಟಿರುವಿಕೆಯೇ ದುಃಖಕರ.

  ಈಗ ಓ ಭಿಕ್ಖುಗಳೇ ಇದೇ ದುಃಖ ಸಮುದಯ(ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರ್ಯ ಸತ್ಯವಾಗಿದೆ. ಇಲ್ಲಿ ತಣ್ಹಾದಿಂದಲೇ ಪುನರ್ಭವಿಸುತ್ತಾನೆ ತಣ್ಹಾವು 3 ವಿಧದ್ದಾಗಿದೆ ಕಾಮತಣ್ಹಾ(ಇಂದ್ರೀಯ ಬೋಗ), ಭವತಣ್ಹಾ(ಶಾಶ್ವತವಾಗಿ ಅಥವಾ ಇರಬೇಕೆಂಬ ತೀವ್ರಬಯಕೆ) ಮತ್ತು ವಿಭವ ತಣ್ಹಾ(ಇರಬಾರದು ಎಂಬ ತೀವ್ರಬಯಕೆ).

ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧ ಆರ್ಯಸತ್ಯವಾಗಿದೆ. ಅಂದರೆ ಈ ತಣ್ಹಾದಿಂದ ನಿಶ್ಶ್ಯೇಷವಾಗಿ ರಹಿತನಾಗುವಿಕೆ, ವಿರಾಗಹೊಂದುವಿಕೆ, ನಿರೋಧಹೊಂದುವಿಕೆ, ತ್ಯಾಗಮಾಡಿವಿಕೆ, ಬಿಟ್ಟುಬಿಡುವಿಕೆ, ಮುಕ್ತಿ ಹೊಂದುವಿಕೆ ಮತ್ತು ಪೂರ್ಣವಾಗಿ ಅಂಟದೆ ಹೋಗುವಿಕೆ.

          ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧಕ್ಕೇ ಕೊಂಡುಯ್ಯುವಂತಹ ಮಾರ್ಗದ ಆರ್ಯಸತ್ಯವಾಗಿದೆ. ಅದೇ ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ ಸಮ್ಮಾದೃಷ್ಟಿಕೋನ, ಸಮ್ಮಾಸಂಕಲ್ಪ, ಸಮ್ಮಾ ವಾಚ, ಸಮ್ಮಾ ಕಮ್ಮ, ಸಮ್ಮಾ ಜೀವನೋಪಾಯ, ಸಮ್ಮಾ ಸ್ಮೃತಿ ಮತ್ತು ಸಮ್ಮಾ ಸಮಾಧಿ.

ಇದೇ ದುಃಖದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಪೂರ್ಣವಾಗಿ ಅರಿಯಲೇಬೇಕು(ಪರಿನೆಯ್ಯ) ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಅರಿಯಲಾಗಿದೆ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

  ಇದು ದುಃಖಸಮುದಯದ ((ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಲೇಬೇಕು. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಿಯಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಇದೇ ದುಃಖನಿರೋಧ ಆರಿಯ ಸತ್ಯ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲೇಬೇಕು ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲಾಗಿದೆ  ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಇದೇ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲೇಬೇಕು. . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲಾಗಿದೆ  . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಭಿಕ್ಖುಗಳೇ ಎಲ್ಲಿಯವರೆಗೆ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಲಿಲ್ಲವೋ, ಅಲ್ಲಿಯವರೆಗೆ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಳ್ಳಲ್ಲಿಲ್ಲ.

 ಅದರೆ ಭಿಕ್ಖುಗಳೇ ಯಾವಾಗ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಿಹೋಯಿತೋ, ಆಗ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಂಡೆನು.

ಮತ್ತು ಆಗ ನನ್ನಲ್ಲಿ ಈ ಬಗೆಯ ಜ್ಞಾನವೂ ಹಾಗೂ ದರ್ಶನವೂ ಉದಯಿಸಿತು ಅದೇನೆಂದರೆ ; (ನನ್ನ) ಚೇತೋವಿಮುಕ್ತಿಯು ಅಚಲವಾದುದು, ಇದೇ (ನನ್ನ) ಕಟ್ಟಕಡೆಯ ಜನ್ಮ, ಮತ್ತೆ ಪುನರ್ಭವವಿಲ್ಲ.(ಅಸ್ತಿತ್ವವಿಲ್ಲ).


ಹೀಗೆ ಭಗವಾನರು ಸುತ್ತವನ್ನು ಪ್ರವಚಿಸಿದಾಗ ಭಿಕ್ಖುಗಳು ಆನಂದಿತರಾದರು ಹಾಗು ಅಭಿನಂದನೆ ಮಾಡಿದರು. ಯಾವಾಗ ಹೀಗೆ ಸುತ್ತವನ್ನು ಪ್ರವಚಿಸುವಾಗ ಪೂಜ್ಯ ಕೊಂಡನ್ಯರವರಿಗೆ ಹೀಗೆ ವಿರಜವಾದ, ವಿಮಲವಾದ ಧಮ್ಮಚಕ್ಷುವು ಉದಯವಾಯಿತು.: ಯಾವುದೆಲ್ಲಾ ಉದಯ ಧಮ್ಮವನ್ನು ಹೊಂದಿವೆಯೋ ಅವೆಲ್ಲವೂ ನಿರೋಧಧಮ್ಮವನ್ನು ಹೊಂದುತ್ತವೆ.

ಯಾವಾಗ ಬುದ್ಧಭಗವಾನರು ಈ ಧಮ್ಮಚಕ್ಕ ಸುತ್ತವನ್ನು ಪ್ರವಚಿಸಿದರೋ ಆಗ ಭೂಮಿಯಲ್ಲಿನ ದೇವದೇವತೆಗಳೂ ಹೀಗೇ ಹಷರ್ೋಧ್ಗಾರಗಳನ್ನು ಮಾಡಿದವು : ಭಗವಾನರು ವಾರಾಣಸಿಯ ಋಷಿಪಟ್ಟಣದಲ್ಲಿ ಮೃಗದಾಯದ ಬಳಿ ಅನುತ್ತರವಾದ ಧಮ್ಮಚಕ್ರವನ್ನು ಪ್ರವತರ್ಿಸಿದ್ದಾರೆ. ಈ ಬಗೆಯ ಧಮ್ಮಚಕ್ರದ ಚಾಲನೆಯನ್ನು ಈವರೆವಿಗೆ ಈ ಲೋಕಗಳ ಯಾವುದೇ ಸಮಣ ಬ್ರಾಹ್ಮಣರಾಗಲಿ, ದೇವಗಳಾಗಲಿ, ಮಾರರಾಗಲಿ, ಬ್ರಹ್ಮರಾಗಲಿ ಪ್ರವರ್ತನೆ ಮಾಡಿಲ್ಲ  ಈ ದಮ್ಮಚಕ್ಕಪವತ್ತನವನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಹಾಗೂ ಯಾರಿಂದಲೂ ಹಿಂದಕ್ಕೆ ತಿರುಗಿಸಲು ಸಾಧ್ಯವಿಲ್ಲ .. ಈ ಬಗೆಯ ಭೂಮಿಯ ದೇವದೇವತೆಗಳ ಶಬ್ದಗಳನ್ನು ಆಲಿಸಿದಂತಹ ಚಾತುಮಹಾರಾಜಿಕಾ ದೇವತೆಗಳುಹೀಗೆಯೇ ಪುನರುಚ್ಚಿಸಿದವು. . . .  . . . . . .ಅವನ್ನು ಕಂಡು . . . .ತಾವತಿಂಸ . .. . . . . .ಯಾಮ. . . . . . ತುಸಿತಾ. . .. . . .ನಿಮ್ಮಾನರತಿ. . .. . . . . .ಪರನಿಮ್ಮಾನರತಿ ದೇವಗಳು ಪುನರುಚ್ಚಿಸಿದವು.. ..  . . .. .. .ಅವರ ಧ್ವನಿ ಆಲಿಸಿದಂತಹ ಬ್ರಹ್ಮಕಾಯಿಕ ದೇವತೆಗಳಾದ ಬ್ರಹ್ಮ ಪರಿಸಜ್ಜ,  . . . ಬ್ರಹ್ಮ ಪುರೋಹಿತ .. . .ಮಹಾಬ್ರಹ್ಮ . . . .ಪರಿತ್ತಭ. .. . . .ಅಪ್ಪಮಾನಾಭ. .. . .ಸುಭಕಿನ್ನ,, . . ..ವೆಹಪ್ಫಲ. . .ಅವಿಹ. . .. ಅತಪ್ಪ. . . ಸುದಸ್ಸ . . . .ಮತ್ತು ಅಕನಿತ್ಥ ಅವರೂ ಸಹಾ ಹೀಗೆಯೇ ಹಷರ್ೋಧ್ಗಾರಗಳನ್ನು ಮಾಡಿದವು
ಹೀಗೇ ಆ ಕ್ಷಣದಲ್ಲಿ ಆ ಸಮಯದಲ್ಲಿ ಈ ಬಗೆಯ ಹಷರ್ೋಧ್ಗಾರಗಳೂ ಬ್ರಹ್ಮಲೋಕಗಳವರೆವಿಗೂ ಹಬ್ಬಿತು. ಆಗ ಹತ್ತುಸಹಸ್ರ ಲೋಕಧಾತುಗಳು ಕಂಪಿಸಿದವು,  ನಡುಗಿದವು, ಭೀಕರವಾಗಿ ಅಲುಗಾಡಿದವು.
ಆಗ ದೇವದೇವತೆಗಳ ಮೀರಿಸಿದ ತೇಜಸ್ಸುಗಳ ಮಹಾ ಬೆಳಗಿನಿಂದಾಗಿ ಲೋಕವೆಲ್ಲಾ ಪ್ರಕಾಶಮಾನವಾಯಿತು. ಆಗ ಭಗವಾನರು ಹೀಗೆ ನುಡಿದರು. :  ಅರಿತಿದ್ದಾನೆ ಕೋಂಡನ್ಯ, ನಿಜವಾಗಿಯು ಆಯುಷ್ಮಂತ ಕೋಂಡನ್ಯ ಜ್ಞಾನವನ್ನು ಪಡೆದಿದ್ದಾನೆ .ಅಥರ್ೈಸಿಕೊಂಡಿದ್ದಾನೆ.

ಅಂದಿನಿಂದ ಪೂಜ್ಯಕೊಂಡನ್ಯನವರಿಗೆ ಅಞ್ಞಸಿ(ಅರಿತಿರುವ) ಕೊಂಡನ್ಯ ಎಂದು ಕರೆಯಲಾರಂಬಿಸಿದರು.

  _____________________________ಸಮಾಪ್ತಿ_______________________________________

Saturday, 14 July 2018

ಅಹುನೇಯ್ಯ ಸುತ್ತ ahuneyya sutta

ಅಹುನೇಯ್ಯ ಸುತ್ತ 



ಭಿಕ್ಖುಗಳೇ,
ಈ 10 ಬಗೆಯ ವ್ಯಕ್ತಿಗಳು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ,  ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ.

ಯಾರವರು 10 ಜನರು ?
ಅವರೆಂದರೇ

1.ತಥಾಗತರು ಅರಹಂತರು ಆಗಿರುವಂತಹ  ಸಮ್ಮಸಂಬುಧ್ಧರು
2.ಪಚ್ಚೇಕ ಬುಧ್ಧರು.
3.ಸಮಥ ಹಾಗೂ ವಿಪಸ್ಸನ ಎರಡರಿಂದಲೂ ವಿಮುಕ್ತರಾಗಿರುವವರು.
4.ಪ್ರಜ್ಞೆಯಿಂದ(ವಿಪಸ್ಸನ) ವಿಮುಕ್ತರಾಗಿರುವವರು
5.ಕಾಯವನ್ನು ಸಾಕ್ಷಿಯಾಗಿ ಗಮನಿಸುತ್ತ ಕಾಯಾಗತಾನುಸತಿಯಿಂದ ವಿಮುಕ್ತರಾಗಿರುವವರು.
6.ದರ್ಶನದಿಂದ(ದೃಷ್ಟಿಗಳಿಂದ) ವಿಮುಕ್ತರಾಗಿರುವವರು
7.ಶ್ರಧ್ಧೆಯಿಂದ ವಿಮುಕ್ತರಾಗಿರುವವರು(ಸೋತಪನ್ನ)
8.ಧಮ್ಮಾನುಯಾಯಿ(ಸುಶೀಲರು/ಧರ್ಮದ ಆಚರಣೆಯ ಲ್ಲಿರುವವನು)
9.ತಿರತನದಲ್ಲಿ ಆಪಾರ ಅಚಲ ನಂಬಿಕೆ ಇರುವವವನು(.ಶ್ರಧ್ಹಾನುಸಾರಿ )
10.ಭಿಕ್ಖು (ಗೋತ್ರ್ರಭೂ ಆಗೀರುವವರು ಅಂದ್ರೆ ಇಂದ್ರಿಯ ಲೋಕದಿಂದ ಸಮಾದಿ ಸ್ಥಿತಿ ಅಥವಾ ಅರಿಯ ಸ್ಥಿತಿ  ಹೊಂದಿದವರು ) 

ಈ 10 ಜನರು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ,  ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ