8. ನಾವಾ ಸುತ್ತ
(ಗುರು ಮಹಿಮೆ)
1. ಯಾರಿಂದ ಮನುಷ್ಯ ಧರ್ಮವನ್ನು ಅರಿಯುವನೋ, ಆತನಿಗೆ ಇಂದ್ರನನ್ನು ದೇವತೆಗಳು ಪೂಜಿಸುವ ಹಾಗೆ
ಪೂಜಿಸಬೇಕು. ಆ ಬಹುಶ್ರುತ ಪೂಜ್ಯನು ಪೂಜಿತನಾದ ಮೇಲೆ ಪ್ರಸನ್ನಚಿತ್ತನಾಗಿ ಧರ್ಮವನ್ನು
ಪ್ರಕಾಶಿಸುತ್ತಾನೆ.
2. ಆ ಬುದ್ಧಿವಂತ ವ್ಯಕ್ತಿಯು ಗುರುವಿನ ಸಂಗತಿಯನ್ನು
ಸಾರ್ಥಕತೆಯಿಂದ ಮಾಡುತ್ತಾನೆ. ಹೇಗೆಂದರೆ ಏಕಾಗ್ರತೆಯಿಂದ ಮಾತುಗಳನ್ನು ಕೇಳುತ್ತಾನೆ. ಹಾಗು
ಧರ್ಮದ ಅನುಸಾರವಾಗಿ ಆಚರಣೆ ಮಾಡುತ್ತಾನೆ. ಆಗ ಆ ವಿಜ್ಞನು ಜ್ಞಾನಿಯು ಹಾಗು ನಿಪುಣನು
ಆಗುತ್ತಾನೆ.
3. ಯಾರು ಕ್ಷುದ್ರನಾದ, ಮೂರ್ಖನಾದ, ಅರ್ಥವನ್ನು ಅರಿಯದ ಹಾಗು ಮತ್ಸರ್ಯವುಳ್ಳ ಗುರುವಿನೊಡನೆ
ಸೇರುವನೋ, ಆತನು ಧರ್ಮವನ್ನು
ಅರಿಯದೆಯೇ, ಸಂಶಯದಿಂದ
ಮುಕ್ತನಾಗದೆಯೇ ಮೃತ್ಯು ಪ್ರಾಪ್ತಿಮಾಡುತ್ತಾನೆ.
4. ಯಾವ ಮನುಷ್ಯನು ಹರಿಯುವ ವಿಶಾಲವಾದ ನದಿಯಲ್ಲಿ ಇಳಿದು
ಧಾರೆಯಲ್ಲಿ ಕೊಚ್ಚಿ ಹೋಗುತ್ತಿದ್ದಾನೋ ಆತನು ಪರರಿಗೆ ಹೇಗೆ ತೀರ ತಲುಪಿಸಬಲ್ಲ (ಕಾಪಾಡಬಲ್ಲ).
5. ಅದೇರೀತಿ ಯಾರು ಧರ್ಮವನ್ನು ಅರಿಯುವುದಿಲ್ಲವೊ,
ಬಹುಶ್ರುತರ ಅರ್ಥವನ್ನು
ಕೇಳುವುದಿಲ್ಲವೋ, ತಾನಾಗಿಯೇ ಅರಿಯದೆ
ಹಾಗು ಸಂಶಯದಿಂದ ದೂರವಾಗದೆ ಆತನು ಹೇಗೆ ಪರರನ್ನು ಕೂಡಿಸುತ್ತಾನೆ.
6-7. ಯಾವರೀತಿ ಚುಕ್ಕಾಣಿ
ಹಾಗು ಹುಟ್ಟುಗಳಿಂದ ಯುಕ್ತವಾದ ನಾವೆಯಲ್ಲಿ ಹತ್ತಿ ಚತುರರನ್ನು, ಬುದ್ಧಿವಂತ ನಾವಿಕನು ಅದರಿಂದ ಪರರಿಗೆ ಹೇಗೆ ತೀರ
ಮುಟ್ಟಿಸುತ್ತಾನೋ, ಅದೇ ರೀತಿಯಲ್ಲಿ
ಜ್ಞಾನಿ, ಸಂಯಮಿ ಬಹುಶ್ರುತನು
ಪರರ ಮಾತುಗಳಿಂದ ಅವಿಚಲಿತನಾಗುತ್ತಾನೆ. ಆತನು ಕೇಳಲು ಯೋಗ್ಯವಾದವರನ್ನು, ಇಚ್ಛೆಯುಳ್ಳವರಿಗೆ ಧರ್ಮ ಕಲಿಸುತ್ತಾನೆ.
8. ಆದ್ದರಿಂದ ಬುದ್ಧಿವಂತ, ಬಹುಶ್ರುತ ಸತ್ಪುರುಷರ ಸಂಗತಿ ಮಾಡಬೇಕು, ಯಾರು ಅರ್ಥವನ್ನು ಅರಿತು ಧಮರ್ಾಚರಣೆ ಅನುಸರಿಸುವರೋ
ಹಾಗೆಯೇ ಆತನು ಧರ್ಮವನ್ನು ಅರಿತು ಸುಖವನ್ನು ಪ್ರಾಪ್ತಿಮಾಡುತ್ತಾನೆ.
ಇಲ್ಲಿಗೆ ನಾವ
ಸುತ್ತ ಮುಗಿಯಿತು.
No comments:
Post a Comment