ಅಟ್ಠಕ
ವಗ್ಗ
1. ಕಾಮ ಸುತ್ತ
(ಕಾಮಭೋಗಗಳ
ದುಷ್ಪರಿಣಾಮಗಳು)
1. ಒಂದುವೇಳೆ ಭೋಗವಿಲಾಸ ಇಚ್ಛೆವುಳ್ಳವನ ಇಚ್ಛೆಗಳು
ಪೂರ್ಣವಾದರೆ ಆ ವ್ಯಕ್ತಿಯು ಅವಶ್ಯಕವಾಗಿ ತನ್ನ ಇಚ್ಛೆಗಳು ಪೂರ್ಣವಾದುದನ್ನು ಕಂಡು ಪ್ರಸನ್ನ
ಮನದವನಾಗುತ್ತಿದ್ದನು.
2. ಒಂದುವೇಳೆ ಇಚ್ಛಿಸುವವನು, ತೃಷ್ಣೆಗೆ ವಶೀಭೂತನು ಆದ ಅವನ ಕಾಮಭೋಗಗಳು ವಸ್ತುಗಳು (ವ್ಯಕ್ತಿ)
ನಷ್ಟವಾದರೆ ಆತನು ಬಾಣವು ಚುಚ್ಚಿದಂತೆ ಪೀಡಿತನಾಗುತ್ತಾನೆ.
3. ಸರ್ಪದ ಹೆಡೆಯಿಂದ ಕಾಲುಗಳನ್ನು ರಕ್ಷಿಸುವ ಹಾಗೆ ಯಾರು
ಕಾಮಭೋಗಗಳನ್ನು ತ್ಯಜಿಸುವನೋ, ಆತನು ಈ
ಸಂಸಾರದಲ್ಲಿ ಸ್ಮೃತಿಯಿಂದ (ಎಚ್ಚರಿಕೆಯಿಂದ) ವಿಷಪೂರಿತದಂತಿರುವ ಬಯಕೆಯನ್ನು ತ್ಯಜಿಸುವನು.
4. ಮನುಷ್ಯನು ಹೊಲಗದ್ದೆ, ಹೊನ್ನು, ಗೋವುಗಳು, ಕುದುರೆ, ಧನ, ಸ್ತ್ರೀಯರು ಅಥವಾ
ಬಂಧು ಸಂಬಂಧಿ ಹೀಗೆ ಅನೇಕ ರೀತಿಯಲ್ಲಿ ಭೋಗಭಿಲಾಷೆಯಲ್ಲಿ ಸಿಕ್ಕಿಕೊಳ್ಳುತ್ತಾನೆ.
5. ಆಗ ಆತನಿಗೆ ವಾಸನೆಗಳು ಅಧುಮುತ್ತವೆ ಮತ್ತು ತೊಂದರೆಗಳು
ಮದರ್ಿಸುತ್ತವೆ. ಹೇಗೆ ಒಡೆದ ನೌಕೆಯಲ್ಲಿ ನೀರು ನುಗ್ಗುವುದೋ ಹಾಗೆಯೇ ಅದರ ಹಿಂದೆ ದುಃಖವನ್ನು
ಪಡೆಯುತ್ತಾನೆ.
6. ಆದ್ದರಿಂದ ವ್ಯಕ್ತಿಯು ಸದಾ ಸ್ಮೃತಿವಂತನಾಗಿ
ಕಾಮಭೋಗಗಳನ್ನು ಪರಿತ್ಯಜಿಸಬೇಕು. ಅವುಗಳನ್ನು ತ್ಯಜಿಸಲಿ, ನಾವೆಯಿಂದ ನೀರನ್ನು ಬರಿದುಮಾಡಿ ಭವಸಾಗರವನ್ನು ದಾಟಿಹೋಗುತ್ತಾನೆ.
ಇಲ್ಲಿಗೆ ಕಾಮ
ಸುತ್ತ ಮುಗಿಯಿತು.
No comments:
Post a Comment