ಕಿಂ ದಾನ ಸುತ್ತ
ದೇವನೊಬ್ಬನ ಪ್ರಶ್ನೆ :
1. ಏನನ್ನು ದಾನ ನೀಡಿದರೆ ಶಕ್ತಿಯನ್ನು ನೀಡುತ್ತಾನೆ ?
2. ಏನನ್ನು ದಾನ ನೀಡಿದರೆ ಸೌಂದರ್ಯವನ್ನು ನೀಡುತ್ತಾನೆ ?
3. ಏನನ್ನು ದಾನ ನೀಡಿದರೆ ಆರಾಮ ನೀಡುತ್ತಾನೆ ?
4. ಏನನ್ನು ದಾನ ನೀಡಿದರೆ ದೃಷಿ ನೀಡುತ್ತಾನೆ ?
5. ಮತ್ತು ಏನನ್ನು ದಾನ ನೀಡಿದರೆ ಎಲ್ಲವನ್ನು ದಾನ ನೀಡಿದಂತೆ ಆಗುವುದು ?
ಬುದ್ಧ ಭಗವಾನರ ಉತ್ತರ :
1. ಆಹಾರ ನೀಡುವ ದಾನಿಯು ಶಕ್ತಿಯನ್ನು ನೀಡುತ್ತಾನೆ.
2. ವಸ್ತ್ರಗಳನ್ನು ನೀಡುವ ದಾನಿಯು ಸೌಂದರ್ಯವನ್ನು ನೀಡುತ್ತಾನೆ .
3. ವಾಹನವನ್ನು ನೀಡುವ ದಾನಿಯು ಆರಾಮವನ್ನು ನೀಡುತ್ತಾನೆ.
4. ದೀಪಗಳನ್ನು ನೀಡುವ ದಾನಿಯು ದೃಷ್ಟಿಯನ್ನು ನೀಡುತ್ತಾನೆ.
5. ಮತ್ತು ವಸತಿಯನ್ನು ನೀಡುವ ದಾನಿಯು ಎಲ್ಲವನ್ನು ದಾನ ನೀಡಿದಂತೆ ಆಗುವುದು.
ಅದರೆ ಧಮ್ಮವನ್ನು (ಬುದ್ಧರ ಬೋಧನೆ) ನೀಡುವ ದಾನಿಯು ಅಮರತ್ವವನ್ನೇ ನೀಡುತ್ತಾನೆ.
No comments:
Post a Comment