Friday, 31 October 2014

maagha sutta (5. ಮಾಘ ಸುತ್ತ)

5. ಮಾಘ ಸುತ್ತ
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ರಾಜಗೃಹದಲ್ಲಿ ಗೃದ್ಧಕೂಟ ಪರ್ವತದಲ್ಲಿ ವಾಸವಾಗಿದ್ದರು. ಆಗ ಮಾಘ ಮಾಣವಕನು ಎಲ್ಲಿ ಭಗವಾನರು ಇದ್ದರೊ ಅಲ್ಲಿಗೆ ಬಂದನು. ಬಂದು ಭಗವಾನರೊಡನೆ ಕುಶಲ ಮಂಗಳವನ್ನು ಕೇಳಿದನು. ಕುಶಲ ಮಂಗಳವನ್ನು ಕೇಳಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಮಾಘ ಮಾಣವಕನು ಭಗವಾನರೊಂದಿಗೆ ಹೀಗೆ ಹೇಳಿದರು.

                ಹೇ ಗೋತಮರೇ, ನಾನು ದಾಯಕನಾಗಿದ್ದೇನೆ. ದಾನಪತಿಯಾಗಿದ್ದೇನೆ. ಯಾಚಕರ ಕೇಳುವಿಕೆಯಿಂದಲೇ ಅರಿಯುವವನಾಗಿದ್ದೇನೆ. ನಾನು ಯಾಚನೆಗೆ ಯೋಗ್ಯನಾಗಿದ್ದೇನೆ. ಧರ್ಮದಿಂದ ಧನವನ್ನು ಸಂಪಾದಿಸುತ್ತೇನೆ. ಧರ್ಮದಿಂದ ಧನವನ್ನು ಸಂಪಾದಿಸಿ ಹೀಗೆ ಧರ್ಮದಿಂದ ಹಸ್ತಗತವಾದ ಧನದಿಂದ ಒಬ್ಬರಿಗೆ ದಾನ ನೀಡುತ್ತೇನೆ. ಇಬ್ಬರಿಗೂ ನೀಡುತ್ತೇನೆ. ಮೂವರಿಗೂ ದಾನ ನೀಡುತ್ತೇನೆ. ನಾಲ್ವರಿಗೂ ನೀಡುತ್ತೇನೆ. ಐವರು, ಆರು ವ್ಯಕ್ತಿಗಳಿಗೂ ನೀಡುತ್ತೇನೆ ಏಳು ವ್ಯಕ್ತಿಗಳಿಗೂ ನೀಡುತ್ತೇನೆ. ಎಂಟು ವ್ಯಕ್ತಿಗಳಿಗೂ ನೀಡುತ್ತೇನೆ. ಒಂಬತ್ತು ವ್ಯಕ್ತಿಗಳಿಗೂ, ಹತ್ತು ವ್ಯಕ್ತಿಗಳಿಗೂ ನೀಡುತ್ತೇನೆ. ಇಪ್ಪತ್ತು ವ್ಯಕ್ತಿಗಳಿಗೂ, ಮೂವತ್ತು ವ್ಯಕ್ತಿಗಳಿಗೂ, ನಲವತ್ತು ವ್ಯಕ್ತಿಗಳಿಗೂ, ಐವತ್ತು ವ್ಯಕ್ತಿಗಳಿಗೂ ನೀಡುತ್ತೇನೆ. ನೂರು ವ್ಯಕ್ತಿಗಳಿಗೂ ನೀಡುತ್ತೇನೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಗೂ ನೀಡುತ್ತೇನೆ. ಏನು ಈ ಗೋತಮರೇ, ಈ ರೀತಿ ದಾನ ನೀಡುತ್ತಾ ಈ ರೀತಿ ಹೆಚ್ಚಿಸುತ್ತಾ ಬಹಳಷ್ಟು ಪುಣ್ಯವನ್ನು ಸಂಪಾದಿಸುವೆನೇ?
                ಹಾಗಾದರೆ ನೀನು ಮಾಣವಕನೇ, ಈ ರೀತಿ ನೀಡುತ್ತಾ, ಈ ರೀತಿ ಹೆಚ್ಚಿಸುತ್ತಾ ಬಹಳ ಪುಣ್ಯವನ್ನು ಸಂಪಾದಿಸುತ್ತಿಯೆ. ಮಾಣವಕನೇ, ಯಾವ ದಾಯಕನೂ, ದಾನಪತಿಯೂ (ಯಾಚಕರ) ಹೇಳುವಿಕೆಯಿಂದಲೇ ಅರಿಯುವಂತಹವನೂ, ಯಾಚನೆ ಯೋಗ್ಯಕ್ಕಾಗಿಯೇ ಧರ್ಮದಿಂದ ಧನವನ್ನು ಸಂಪಾದಿಸುವನೊ, ಧರ್ಮದಿಂದ ಸಂಪಾದಿಸಿ, ಪ್ರಾಪ್ತವಾದ ಹಣದಿಂದ ಒಬ್ಬರಿಗೆ ನೀಡುತ್ತಾನೆ. ನೂರು ಜನರಿಗೆ ನೀಡುತ್ತಾನೆ. ಇದಕ್ಕಿಂತ ಅಧಿಕ ಸಂಖ್ಯೆಯು ನೀಡುತ್ತಾನೆ. ಆತನು ಪುಣ್ಯವನ್ನು ಸಂಪಾದಿಸುತ್ತಾನೆ.
                ಆಗ ಮಾಘ ಮಾಣವಕನು ಭಗವಾನರಿಗೆ ಗಾಥೆಯಿಂದ ಈ ರೀತಿ ನುಡಿದನು-
1.            ಕಾಷಾಯ ವಸ್ತ್ರಧಾರಿಯು, ಯಾಚಕರಿಗೆ ಅರಿಯುವಂತಹ ಗೋತಮರಿಗೆ ನಾನು ಕೇಳುವುದು ಏನೆಂದರೆ ಪುಣ್ಯಾಥರ್ಿಗಾಗಿ, ಪುಣ್ಯದ ಅಪೇಕ್ಷೆಗೆ, ಬೇರೆಯವರಿಗೆ ಅನ್ನಪೇಯಗಳಿಂದ ದಾನ ನೀಡುವವನು, ಯಾಚನೆಗೆ ಯೋಗ್ಯನಾಗಿರುವವನ, ದಾನಪತಿ ಗೃಹಸ್ಥನು ಯಾರಿಗೆ ದಾನ ನೀಡುವುದರಿಂದ ಅತನ ದಾನವು ಸಫಲವಾಗುತ್ತದೆ.
2.            ಭಗವಾನ್ - ಯಾರು ಯಾಚಿಸುವವರಿಗೆ ಯೋಗ್ಯನೋ, ದಾನಪತಿ, ಗೃಹಸ್ಥನು ಪುಣ್ಯವನ್ನು ಅಪೇಕ್ಷಿಸುವವನು, ಪುಣ್ಯಾಕಾಂಕ್ಷೆಯಿಂದ ಪರರಿಗೆ ಅನ್ನ ಮತ್ತು ಪೇಯವನ್ನು ನೀಡುತ್ತಾನೋ, ಆತನು ಉತ್ತಮ ಜ್ಞಾನಿಗೆ ದಕ್ಷಿಣೆಯಿಂದ (ದಾನ) ಪ್ರಸನ್ನ ಮಾಡಲಿ.
3.            ಮಾಘ - ಯಾರು ಯಾಚಿಸುವವರಿಗೆ ಯೋಗ್ಯನು, ದಾನಪತಿ ಗೃಹಸ್ಥನೋ, ಪುಣ್ಯಾಕಾಂಕ್ಷೆಯಿಂದ ದಾನವನ್ನು ನೀಡುತ್ತಿರುವವನೋ, ಇಲ್ಲಿ ಪರರಿಗೆ ಅನ್ನಪೇಯಗಳಿಂದ ದಾನ ಮಾಡುತ್ತಿರುವರು. ಹಾಗಾದರೆ ಭಗವಾನ್, ದಾನಕ್ಕೆ ಯೋಗ್ಯವಾದ ಪಾತ್ರರಾದ ವ್ಯಕ್ತಿಯ ಬಗ್ಗೆ ತಿಳಿಸಿರಿ.
4.            ಭಗವಾನರು - ಯಾವ ಬ್ರಾಹ್ಮಣನು ಪುಣ್ಯದ ಕಾಮನೆಯಿಂದ ದಾನ ನೀಡುವನೊ, ಆತನಿಗೆ ಬೇಕಾಗಿರುವುದು ಏನೆಂದರೆ, ಸಮಯಾನುಸಾರವಾಗಿ ದಾನವನ್ನು ನೀಡಲಿ. ಯಾರಿಗೆಂದರೆ, ಯಾರು ಅನಾಸಕ್ತರಾಗಿ ಲೋಕದಲ್ಲಿ ಸಂಚರಿಸುತ್ತಿರುವರೋ, ಯಾರು ಅಕಿಂಚನರೋ (ಏನೂ ಇಲ್ಲದವರು), ಜ್ಞಾನಿ ಹಾಗು ಸಂಯಮಿಗಳೋ ಅವರಿಗೆ.
5.            ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವವನೋ, ಆತನು ದಾಂತರಿಗೆ, ವಿಮುಕ್ತರಿಗೆ, ನಿಷ್ಪಾಪಿಗಳಿಗೆ, ತೃಷ್ಣಾರಹಿತರಿಗೆ ಹಾಗು ಸರ್ವ ಸಂಯೋಜನೆಗಳನ್ನು ಕತ್ತರಿಸಿದವರಿಗೆ ಸಮಯಾನುಸಾರ ದಾನ ನೀಡಬೇಕು.
6.            ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ದಾಂತರಿಗೆ, ವಿಮುಕ್ತರಿಗೆ, ನಿಷ್ಪಾಪಿಗಳಿಗೆ, ತೃಷ್ಣಾರಹಿತರಿಗೆ ಹಾಗು ಲೋಕ ಬಂಧನಗಳಿಂದ ಮುಕ್ತರಾದವರಿಗೆ ಸಮಯಾನುಸಾರ ದಾನ ನೀಡಬೇಕು.
7.            ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ರಾಗ, ದ್ವೇಷ ಮತ್ತು ಮೋಹಗಳನ್ನು ತ್ಯಾಗ ಮಾಡಿರುವವರಿಗೆ, ಕ್ಷೀಣಾಸವರಿಗೆ ಹಾಗು ಬ್ರಹ್ಮಚರ್ಯವಾಸವನ್ನು ಪೂರ್ಣ ಮಾಡಿರುವವರಿಗೆ ಸಮಯಾನುಸಾರವಾಗಿ ದಾನವನ್ನು ನೀಡಬೇಕು.
8-9.        ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ ಆತನು ಮಾಯಾವಿತನವಿಲ್ಲದ, ಅಭಿಮಾನವಿಲ್ಲದ, ಲೋಭರಹಿತರಾದ, ಮಮತಾರಹಿತರಾದ ಹಾಗು ತೃಷ್ಣಾರಹಿತರಿಗೆ ಸಮಯಾನುಸಾರವಾಗಿ ದಾನವನ್ನು ನೀಡಬೇಕು.
10.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ತೃಷ್ಣೆಯಲ್ಲಿ ಸಿಲುಕದ ಹಾಗು ಸಂಸಾರ ರೂಪದ ಪ್ರವಾಹವನ್ನು ದಾಟಿ ಆಸಕ್ತಿರಹಿತರಾಗಿ ಸಂಚರಿಸುತ್ತಿರುವರೋ ಅವರಿಗೆ ಸಮಯಕ್ಕೆ ಅನುಸಾರವಾಗಿ ದಾನವನ್ನು ನೀಡಬೇಕು.
11.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವವನೊ, ಆತನು ಯಾರಿಗೆ ಈ ಲೋಕದ ಅಥವಾ ಪರಲೋಕದಲ್ಲಿ ಎಲ್ಲಿಯೂ, ಯಾವುದರಲ್ಲೂ, ಉತ್ಪತ್ತಿ ಹಾಗು ನಾಶದ ಬಗ್ಗೆ ತೃಷ್ಣೆಯಿಲ್ಲವೊ, ಅಂತಹವರಿಗೆ ಸಮಯಾನುಸಾರವಾಗಿ ದಾನ ನೀಡಬೇಕು.
12.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ಕಾಮಭೋಗಗಳನ್ನು ತ್ಯಜಿಸಿದವರಿಗೆ, ಅನಿಕೇತನರಾಗಿ ಲಾಳಿಯ ರೀತಿ ಸಂಯಮಿಯಾಗಿ ಸಂಚರಿಸುವರೋ ಅವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಬೇಕು.
13.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ರಾಹುಮುಕ್ತ ಚಂದ್ರನಂತೆ ವೀತರಾಗರಾಗಿರುವ ಹಾಗು ಸುಸಂಯಮಿತ ಇಂದ್ರಿಯವುಳ್ಳವರಿಗೆ ಸಮಯಕ್ಕೆ ಅನುಸಾರವಾಗಿ ದಾನವನ್ನು ಮಾಡಲಿ.
14.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವನೊ, ಆತನು ವಾಸನಾರಹಿತರಿಗೆ, ರಾಗರಹಿತರಿಗೆ, ಕ್ರೋಧರಹಿತರಿಗೆ ಹಾಗು ಪುನರ್ಜನ್ಮ ಪಡೆಯದವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಬೇಕು.
15.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವವನೋ ಆತನು ಜನ್ಮ-ಮೃತ್ಯುವಿಗೆ ಸಂಪೂರ್ಣವಾಗಿ ಬಿಟ್ಟವರಿಗೆ ಹಾಗು ಸರ್ವ ಸಂಶಯಗಳನ್ನು ಪರಿಹರಿಸಿಕೊಂಡವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಬೇಕು.
16.          ಯಾವ ಬ್ರಾಹ್ಮಣು ಪುಣ್ಯಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ಯಾರು ಈ ಲೋಕದಲ್ಲಿಯೆ ತನಗಾಗಿ ದ್ವೀಪ ಮಾಡಿಕೊಂಡು ಸಂಚರಿಸುತ್ತಿರುವರೋ, ಅಕಿಂಚನರೊ, ಹಾಗು ಸರ್ವರೀತಿಯಲ್ಲೂ ಮುಕ್ತರಾಗಿರುವವರಿಗೆ ಸಮಯಕ್ಕೆ ಅನುಸಾರವಾಗಿ ದಾನ ಮಾಡಲಿ.
17.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಾನೋ, ಆತನು ಯಾರಿಗೆ ತಮ್ಮ ಜನ್ಮ ಅಂತಿಮವಾದುದು ಮತ್ತು ಪುನರ್ಜನ್ಮ ಆಗಲಾರದು ಎಂದು ಯಥಾರ್ಥವಾಗಿ ಅರಿತಿರುವನೋ ಅಂತಹವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಲಿ.
18.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ದಾನ ನೀಡುತ್ತಿರುವನೋ, ಆತನು ಜ್ಞಾನಿಗಳಿಗೆ, ಧ್ಯಾನರತರಿಗೆ, ಸ್ಮೃತಿವಂತರಿಗೆ, ಸಂಬೋಧಿಪ್ರಾಪ್ತರಿಗೆ ಹಾಗು ಯಾರಿಗೆ ಬಹು ಸಂಖ್ಯಾತರು ಶರಣಾಗಿರುವವರೋ ಅಂತಹವರಿಗೆ ಸಮಯಕ್ಕೆ ಅನುಸಾರವಾಗಿ ದಾನ ನೀಡಲಿ.
19.          ಮಾಘ - ನಿಶ್ಚಿತವಾಗಿಯೂ ನನ್ನ ಪ್ರಶ್ನೆ ನಿರರ್ಥಕವಾಗಲಿಲ್ಲ. ಭಗವಾನರು ದಾನಕ್ಕೆ ಪಾತ್ರರಾದ ವ್ಯಕ್ತಿಯನ್ನು ತಿಳಿಸಿದರು. ತಾವು ಇದನ್ನು ಯಥಾರ್ಥವಾಗಿ ಅರಿತಿರುವಿರಿ. ತಮಗೆ ಈ ಕರ್ಮ ಯಥಾರ್ಥವಾಗಿ ತಿಳಿದಿದೆ.
20.          ಯಾರು ಯಾಚನೆಗೆ ಯೋಗ್ಯರಾದ ದಾನಪತಿ ಗೃಹಸ್ಥನು ಪುಣ್ಯಾಪೇಕ್ಷೆಯಿಂದ ಯಜ್ಞ ಮಾಡುವನೋ (ದಾನ) ಪರರಿಗೆ ಅನ್ನ ಹಾಗು ಪೇಯದಿಂದ ಆದರಿಸುವನೋ, ಭಗವಾನ್, ನನಗೆ ಅದರಿಂದ ದೊರಕುವ ದಾನಸಂಪದವನ್ನು ತಿಳಿಸಿ.
21.          ಭಗವಾನ್ - ದಾನವನ್ನು ಮಾಡು ಮತ್ತು ದಾನ ನೀಡುವ ಸಮಯದಲ್ಲಿ ಸರ್ವರ ಬಗ್ಗೆ ಮನವನ್ನು ಪ್ರಸನ್ನವಾಗಿಡು (ಮೈತ್ರಿ). ದಾನವೇ ದಾಯಕನ ಅವಲಂಬನೆ ಆಗಿದೆ. ಇದರಿಂದ ಸುಪ್ರತಿಷ್ಠನಾದ ದಾಯಕನ ಮನವು ದ್ವೇಷದಿಂದ ದೂರವಾಗುತ್ತದೆ.
22.          ಆತನು ರಾಗರಹಿತನಾಗಲಿ, ದ್ವೇಷವನ್ನು ದಮನಮಾಡಿ ಅಪ್ರಮಾಣಯುತವಾಗಿ, ಅಪರಿಮಿತ, ಅಗಾಧ ಮೈತ್ರಿ ಭಾವನೆ (ಧ್ಯಾನ) ಮಾಡುತ್ತಾ, ರಾತ್ರಿ-ಹಗಲು ಜಾಗರೂಕನಾಗಿ, ಸರ್ವ ದಿಕ್ಕುಗಳಲ್ಲಿ ಅಸೀಮವಾದ ಮೈತ್ರಿಯನ್ನು ಪ್ರಸರಿಸುತ್ತಾನೆ.
23.          ಮಾಘ - ಅಜ್ಞಾನಿಯಾದ ನನಗೆ ಮುನಿಯು ಈ ಪ್ರಶ್ನೆಗಳಿಗೆ ಉತ್ತರಿಸಿ, ಯಾರು ಶುದ್ಧನು ಆಗುವನು ಹಾಗು ಮುಕ್ತನು ಯಾರು ಆಗುವನು, ಬಂಧನದಲ್ಲಿ ಹೇಗೆ ಸಿಲುಕುವನು ಮತ್ತು ಸ್ವಯಂ ಬ್ರಹ್ಮಲೋಕಕ್ಕೆ ಯಾರು  ಹೋಗುವರು? ಭಗವಾನರಂತು ನಾನು ನೋಡಿದ ಸಾಕ್ಷಾತ್ ಬ್ರಹ್ಮರಾಗಿರುವರು. ಇದು ಸತ್ಯವೇ ಆಗಿದೆ. ತಾವು ನಮಗಾಗಿ ಬ್ರಹ್ಮರಾಗಿರುವಿರಿ. ಧೃತಿವಂತರೇ, ಬ್ರಹ್ಮಲೋಕದಲ್ಲಿ ಉತ್ಪತ್ತಿ ಯಾವರೀತಿ ಆಗುವುದು?
24.          ಭಗವಾನ್ - ಯಾರು ಮೂರು ಬಗೆಯ ದಾನ (ಆಮಿಷ, ಅಭಯ, ಧಮ್ಮದಾನ) ನೀಡುವನೋ, ಯಾರು ಯಾಚಿಸುವವರಿಗೆ ಪ್ರಚನ್ನವಾಗಿಡುವನೋ, ಈ ರೀತಿ ಶ್ರೇಷ್ಠವಾಗಿ ದಾನ ನೀಡಿದಾತನು ಬ್ರಹ್ಮಲೋಕದಲ್ಲಿ ಉದಯಿಸುವನು. ಹೀಗೆ ನಾನು ಹೇಳುತ್ತೇನೆ.
                ಹೀಗೆ ನುಡಿದ ನಂತರ ಮಾಘ ಮಾಣವಕನು ಭಗವಾನರಿಗೆ ಹೀಗೆ ನುಡಿದನು- ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನ್ನನ್ನು ಜೀವನಪರ್ಯಂತ ಶರಣಾಗತ ಉಪಾಸಕನೆಂದು ಧಾರಣೆ ಮಾಡಿಕೊಳ್ಳಿ.

ಇಲ್ಲಿಗೆ ಮಾಘ ಸುತ್ತ ಮುಗಿಯಿತು.

Saturday, 11 October 2014

sundarika bhaaradvaaja sutta in kannada

4. ಸುಂದರಿಕ ಭಾರದ್ವಾಜ ಸುತ್ತ
(ಪುರಲಾಸ ಸುತ್ತ)
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಕೋಸಲ ಜನಪದದಲ್ಲಿ ಸುಂದರಿ (ಸಯಿ) ನದಿಯ ದಡದಲ್ಲಿ ವಿಹರಿಸುತ್ತಿದ್ದರು. ಆಗ ಸುಂದರಿಕ ಭಾರದ್ವಾಜ ಬ್ರಾಹ್ಮಣನು ಸುಂದರಿ ನದಿಯ ದಡದಲ್ಲಿ ಅಗ್ನಿಹವನವನ್ನು ಮಾಡುತ್ತಿದ್ದನು. ಅಗ್ನಿಹೋತ್ರದಲ್ಲಿ ತಲ್ಲೀನನಾಗಿದ್ದನು. ಆಗ ಸುಂದರಿಕ ಭಾರದ್ವಾಜನು ಅಗ್ನಿಹವನ ಮಾಡಿ, ಅಗ್ನಿಹೋತ್ರದ ಪರಿಚಯರ್ೆ ಮುಗಿಸಿ ಆಸನದಿಂದ ಎದ್ದು ನಾಲ್ಕು ದಿಕ್ಕುಗಳನ್ನು ತಿರುಗಿಕೊಂಡು ಅವಲೋಕಿಸಿದನು.

                ಯಾರು ಈ ಹವ್ಯಶೇಷವನ್ನು ತಿನ್ನುವರು ಎಂದು ನೋಡುತ್ತಿದ್ದಾಗ ಭಗವಾನರು ಸಮೀಪದ ವೃಕ್ಷದ ಕೆಳಗೆ ತಲೆಯಿಂದ ಚೀವರವನ್ನು ಅಡ್ಡವಾಗಿ ಆವರಿಸಿಕೊಂಡು ಕುಳಿತಿರುವುದನ್ನು ಕಂಡನು. ಇದನ್ನು ನೋಡಿ ಬಲಗೈಯಲ್ಲಿ ಹವ್ಯಶೇಷವನ್ನು ತೆಗೆದುಕೊಂಡು, ಎಡಗೈಯಲ್ಲಿ ಕಮಂಡಲವನ್ನು ತೆಗೆದುಕೊಳ್ಳುತ್ತಾ ಭಗವಾನರಿರುವ ಕಡೆ ಬಂದನು.
                ಆಗ ಭಗವಾನರು ಸುಂದರಿಕ ಭಾರದ್ವಾಜ ಬ್ರಾಹ್ಮಣನ ಕಾಲುಗಳ ಶಬ್ದಕ್ಕೆ ಚೀವರವನ್ನು ತಲೆಯಿಂದ ತೆಗೆದರು. ಆಗ ಸುಂದರಿಕ ಭಾರದ್ವಾಜ ಬ್ರಾಹ್ಮಣನು ತಾವು ! ಬೋಳುತಲೆಯವರಾಗಿದ್ದೀರಿ ಎಂದು ಮತ್ತೆ ಮರಳಲು ಸಿದ್ಧನಾದನು. ಆಗ ಸುಂದರಿಕ ಭಾರದ್ವಾಜನಿಗೆ ಹೀಗೆ ಅನಿಸಿತು. ಇಲ್ಲಿ ಕೆಲವು ಬ್ರಾಹ್ಮಣರೂ ಸಹಾ ಬೋಳುತಲೆಯವರಾಗಿರುತ್ತಾರೆ. ಏಕೆ ನಾನು ಅವರ ಹತ್ತಿರ ಹೋಗಿ ಜಾತಿಯನ್ನು ಕೇಳಬಾರದು? ಎಂದುಕೊಂಡು ಭಗವಾನರ ಬಳಿಗೆ ಬಂದನು. ಬಂದು ಭಗವಾನರಿಗೆ ಇಂತೆಂದನು: ತಾವು ಯಾವ ಜಾತಿಯವರು?
                ಆಗ ಭಗವಾನರು ಸುಂದರಿಕ ಭಾರದ್ವಾಜನಿಗೆ ಈ ಗಾಥೆಗಳಲ್ಲಿ ಉತ್ತರಿಸಿದರು:
1.            ನಾನು ಬ್ರಾಹ್ಮಣನೂ ಅಲ್ಲ, ರಾಜಪುತ್ರನೂ ಅಲ್ಲ, ವೈಶ್ಯನೂ ಅಲ್ಲ ಹಾಗು ಬೇರೆ ಇನ್ನೊಂದು ಅಲ್ಲ. ಸಾಮಾನ್ಯ ಜನರ ಗೋತ್ರವನ್ನು ಚೆನ್ನಾಗಿ ಅರಿತು ನಾನು ವಿಚಾರಪೂರ್ವಕವಾಗಿ ಅಕಿಂಚನ (ಏನೂ ಇಲ್ಲ) ಭಾವದಿಂದ ಲೋಕದಲ್ಲಿ ಸಂಚರಿಸುತ್ತೇನೆ.
2.            ಚೀವರವನ್ನು ಧರಿಸಿ, ಅನಿಕೇತನನಾಗಿ, ಶಿರವನ್ನು ಬೋಳಿಸಿಕೊಂಡು ಪೂರ್ಣವಾಗಿ ಶಾಂತನಾಗಿ, ಇಲ್ಲಿನ ಜನರಲ್ಲಿ ಅನಾಸಕ್ತನಾಗಿ ಸಂಚರಿಸುವೆನು. ಹೇ ಬ್ರಾಹ್ಮಣನೇ, ನೀನು ನನ್ನಲ್ಲಿ ಗೋತ್ರವನ್ನು ಪ್ರಶ್ನಿಸುವುದು ಅನುಚಿತವಾಗಿದೆ.
3.            ಬ್ರಾಹ್ಮಣ - ಬ್ರಾಹ್ಮಣನೇ, ಬ್ರಾಹ್ಮಣರಿಗೆ ತಾವು ಬ್ರಾಹ್ಮಣನೇ ಎಂದು ಕೇಳುತ್ತಾರೆ.
4.            ಭಗವಾನರು - ನೀನು ನಿನಗೆ ಬ್ರಾಹ್ಮಣನೆಂದು ಹೇಳುತ್ತಿ. ನನಗೆ ಬ್ರಾಹ್ಮಣನಲ್ಲವೆಂದು ಹೇಳುತ್ತಿ. ನಾನು ನಿನಗೆ ತ್ರಿಪದ ಹಾಗು 24 ಅಕ್ಷರದ ಸಾವಿತ್ರಿ (ಗಾಯತ್ರಿ) ಮಂತ್ರದ ಬಗ್ಗೆ ಕೇಳುತ್ತೇನೆ.
5.            ಬ್ರಾಹ್ಮಣ - ಈ ಸಂಸಾರದಲ್ಲಿ ಋಷಿಗಳು, ಮನುಷ್ಯರು, ಕ್ಷತ್ರಿಯರು ಮತ್ತು ಬ್ರಾಹ್ಮಣರು ಯಾವ ಕಾರಣದಿಂದ ದೇವತೆಗಳ ಹೆಸರಿನಿಂದ ಬಹಳಷ್ಟು ಯಜ್ಞಗಳನ್ನು ಆಚರಿಸಿದರು ?
6.            ಭಗವಾನರು - ಯಜ್ಞ ಸಮಯದಲ್ಲಿ ಪಾರಂಗತರಾದ ಜ್ಞಾನಿಗೆ ಆಹುತಿಯು (ದಾನ) ಸಿಕ್ಕರೆ, ಆತನ ಯಜ್ಞವು ಸಫಲವಾಗುತ್ತದೆ. ನಾನು ಈ ರೀತಿ ಹೇಳುತ್ತೇನೆ.
7.            ಬ್ರಾಹ್ಮಣ - ಅವಶ್ಯಕವಾಗಿ ಆತನ ಯಜ್ಞ ಸಫಲವಾಗುತ್ತದೆ. ಅಂತಹ ಜ್ಞಾನಿಯ ದರ್ಶನವಾದರೆ, ತಮ್ಮಂತಹ (ಜ್ಞಾನಿ) ದಶರ್ಿಸಿ ಸಿಗದೆ ಇರುವುದರಿಂದಲೇ ಪರರು ಪುರಿಯನ್ನು, ಅವಲಕ್ಕಿಯನ್ನು ತಿನ್ನುತ್ತಾರೆ.
8.            ಭಗವಾನರು - ಆದ್ದರಿಂದ ನೀನು ಬ್ರಾಹ್ಮಣನೇ. ಶಾಂತ, ಕ್ರೋಧರಹಿತ, ನಿಷ್ಪಾತಿ, ತೃಷ್ಣಾರಹಿತ, ಮಹಾಜ್ಞಾನಿಯ ಹತ್ತಿರ ಹೋಗಿ ಅರ್ಥದ ಬಗ್ಗೆ ಕೇಳು. ಅದರಿಂದ ನೀನು ಕೆಲವು ಅರಿವು ಗಳಿಸಬಹುದು.
9.            ಬ್ರಾಹ್ಮಣ - ಹೇ ಗೋತಮರೇ, ನಾನು ಯಜ್ಞದಲ್ಲಿ ರತನಾಗಿದ್ದೇನೆ. ಯಜ್ಞವನ್ನು ಮಾಡಲು ಇಚ್ಛಿಸುತ್ತೇನೆ. ನಾನು ಅದನ್ನು ಅರಿಯಲಾರೆ. ಆದ್ದರಿಂದ ತಾವು ಉಪದೇಶಿಸಿ. ತಾವೇ ಹೇಳಿ ಯಾವರೀತಿ ಯಜ್ಞವು ಸಫಲವಾಗುತ್ತದೆ.
                ಭಗವಾನರು - ಹಾಗಾದರೆ ಬ್ರಾಹ್ಮಣ, ಗಮನವಿಟ್ಟು ಕೇಳು, ನಾನು ನಿನಗೆ ಧಮರ್ೊಪದೇಶ ನೀಡುತ್ತೇನೆ.
10.          ಜಾತಿಯನ್ನು ಕೇಳದಿರು, ಆಚರಣೆಯನ್ನು ಕೇಳು. ಕಟ್ಟಿಗೆಯಿಂದಲೂ ಅಗ್ನಿ ಉದಯಿಸುತ್ತದೆ. ಇದೇ ರೀತಿಯಾಗಿ ನೀಚಕುಲದಿಂದಲೂ ಹುಟ್ಟಿ ಮುನಿಯು ಧೃತಿವಂತನು, ಉತ್ತಮನು ಹಾಗು ಲಜ್ಜಾವಂತನು ಹಾಗು ಕೆಟ್ಟ ಕಾರ್ಯಗಳಿಂದ ದೂರವಾಗುತ್ತಾನೆ.
11.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ಯಜ್ಞ ಮಾಡುವನೋ, ಆತನಿಗೆ ಅಗತ್ಯವಾಗಿ ಬೇಕಾಗಿರುವುದು ಸತ್ಯವಂತನು, ದಯವಂತನು, ಸಂಯಮಿಯು, ಜ್ಞಾನ ಪಾರಂಗತನು ಹಾಗು ಬ್ರಹ್ಮಚರ್ಯವನ್ನು ಪೂರ್ಣ ಮಾಡಿದ ಮುನಿಗೆ ಮನಸಾರೆ ಹವ್ಯ (ದಾನ) ನೀಡಬೇಕು.
12.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ಯಜ್ಞ ಮಾಡುವನೋ, ಆತನಿಗೆ ಬೇಕಾಗಿರುವುದು ಲಾಳಿ ಸಮಾನವಾದ ಋಜುವಂತನು, ಎರಡನೆಯದಾಗಿ ಕಾಮಭೋಗವನ್ನು ವಜರ್ಿಸಿದ ಸಂಯಮಿ, ಅನಿಕೇತನನಾಗಿ ಸಂಚರಿಸುವ ಮುನಿಗೆ ಮನಸಾರೆ ಹವ್ಯ (ದಾನ) ನೀಡಬೇಕು.
13.          ಯಾವ ಬ್ರಾಹ್ಮಣನು ಪುಣ್ಯಕಾಮನೆಯಿಂದ ಯಜ್ಞ ಆಚರಿಸುವನೋ ಆತನಿಗೆ ಬೇಕಾಗಿರುವಂತಹ ವ್ಯಕ್ತಿಯು ಗ್ರಹಣ ವಿಮುಕ್ತ ಚಂದಿರನಂತೆ ರಾಗರಹಿತನೂ, ಇಂದ್ರಿಯ ಸಂಯಮ ಹೊಂದಿದ ಮುನಿಗೆ ಮನಸಾರೆ ದಾನ (ಹವ್ಯ) ನೀಡಲಿ.
14.          ಯಾವ ಬ್ರಾಹ್ಮಣನು ಪುಣ್ಯ ಕಾಮನೆಯಿಂದ ಯಜ್ಞ ಆಚರಿಸುವನೋ, ಆತನಿಗೆ ಬೇಕಾಗಿರುವಂತಹ ವ್ಯಕ್ತಿಯು ಸದಾ ಸ್ಮೃತಿವಂತನೂ, ಮಮತ್ವ ಮೀರಿರುವವನೂ, ಸಂಸಾರ ಅನಾಸಕ್ತನು ಆದ ಸಂಚಾರಿ ಮುನಿಗೆ ಮನಸಾರೆ ಹವ್ಯ (ದಾನ) ನೀಡಲಿ.
15.          ಯಾರು ವಿಷಯಗಳನ್ನು ತ್ಯಜಿಸಿರುವರೋ, ನಿರ್ಭಯರಾಗಿ ಸಂಚರಿಸುವರೋ, ಯಾರು ಜನ್ಮ-ಮೃತ್ಯುವಿನ ಅಂತ್ಯವನ್ನು ಅರಿತಿರುವರೋ, ಉಪಶಾಂತರೋ, ಗಂಭೀರವಾದ ಜಲಾಶಯದ ರೀತಿ ಇರುವ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
16.          ಸತ್ಪರುಷರೊಂದಿಗೆ ಸಮಾನ ವ್ಯವಹಾರ ಮಾಡುವವರು, ದುರ್ಜನರೊಂದಿಗೆ ದೂರವಿರುವ ತಥಾಗತರೂ ಅನಂತ ಪ್ರಜ್ಞಾವಂತರಾಗಿದ್ದಾರೆ. ಈ ಲೋಕ ಅಥವಾ ಪರಲೋಕದ ಆಸಕ್ತಿಯಿಲ್ಲದೆ ಇರುವ ತಥಾಗತರೆ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
17.          ಯಾರಲ್ಲಿ ಮಾಯಾವಿತನವಿಲ್ಲವೋ, ಅಭಿಮಾನವೂ ಇಲ್ಲವೋ, ಲೋಭ, ಅಹಂಕಾರ ಮತ್ತು ತೃಷ್ಣೆಗಳೂ ಇಲ್ಲವೋ ಕ್ರೋಧದಿಂದ ದೂರಾಗಿ ಉಪಶಾಂತರಾಗಿರುವರೋ ಮತ್ತು ಯಾವ ಬ್ರಾಹ್ಮಣರು ಶೋಕಕೂಪದ ಮಲವನ್ನು ದೂರೀಕರಿಸಿರುವರೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
18.          ಯಾರ ಮನಸ್ಸಿನಲ್ಲಿ ಆಸಕ್ತಿಗಳು ವಜ್ರ್ಯವಾಗಿವೆಯೋ, ಯಾರಲ್ಲಿ ಯಾವುದೇ ಪ್ರಕಾರದ ಪರಿಗ್ರಹವಿಲ್ಲವೋ ಹಾಗು ಈ ಲೋಕದ ಪರಲೋಕದ ಆಸಕ್ತಿರಹಿತರಾದ ತಥಾಗತರು ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿರುವರು.
19.          ಯಾರು ಸಮಾಹಿತ (ಏಕಾಗ್ರತೆ) ದಿಂದ ಲೋಕದ ಪ್ರವಾಹವನ್ನು ದಾಟಿರುವರೋ ಹಾಗು ಸಮ್ಮಾ ದೃಷ್ಟಿಯಿಂದ ಧರ್ಮವನ್ನು ಅರಿತಿರುವರೋ, ಅಂತಹ ಕ್ಷೀಣಾಸವರು ಮತ್ತು ಅಂತಿಮ ಶರೀರ ಧಾರಿಯು ಆದಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
20.          ಯಾರು ಭವಾಸವ ಹಾಗು ಕಟುವಚನವು ನಷ್ಟವಾಗಿದೆಯೋ, ಅಸ್ತವಾಗಿದೆಯೋ, ಇಲ್ಲವಾಗಿದೆಯೋ ಅಂತಹ ಜ್ಞಾನಿ ಸರ್ವರೀತಿಯಿಂದ ಯುಕ್ತವಾದ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
21.          ಯಾರು ರಾಗಾದಿ ಆಸಕ್ತಿಗಳಿಂದ ಮೀರಿದವರೊ, ಯಾರಲ್ಲಿ ಆಸಕ್ತಿಗಳು ಇಲ್ಲವೋ, ಯಾರು ಅಭಿಮಾನಿಗಳಲ್ಲಿ ಅಭಿಮಾನ ಶೂನ್ಯರೋ, ಯಾರು ದುಃಖ ಮತ್ತು ಅದರ ಉತ್ಪತ್ತಿ ಕ್ಷೇತ್ರವನ್ನು ಅರಿತಿರುವರೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
22.          ಯಾರು ತೃಷ್ಣಾರಹಿತರೋ, ನಿಬ್ಬಾಣ ದಶರ್ಿಗಳೋ, ಪರರ ದೃಷ್ಟಿಗಳಿಂದ ಮೀರಿಹೋಗಿರುವರೋ ಮತ್ತು ಯಾರಿಗೆ ಎಲ್ಲಿಯೂ ಅಲ್ಪವೋ, ವಿಷಯ ಅವಲಂಬನೆಯಿಲ್ಲವೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮ ಯೋಗ್ಯರಾಗಿರುವರು.
23.          ಜ್ಞಾನದಿಂದ ಯಾರಲ್ಲಿ ಆದಿಯಿಂದ ಅಂತ್ಯದವರೆಗೆ ವಾಸನೆಗಳು ನಷ್ಟವಾಗಿದೆಯೋ, ಅಸ್ತವಾಗಿವೆಯೋ, ಯಾರು ಶಾಂತರೋ ಮತ್ತು ಆಸಕ್ತಿ ಕ್ಷಯರಾದ ವಿಮುಕ್ತರೋ ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
24.          ಯಾರು ಜನ್ಮ ಕ್ಷಯವನ್ನು ನೋಡಿರುವರೋ, ಸರ್ವಲೋಕದ ಬಂಧನಗಳನ್ನು ಮತ್ತು ರಾಗದ ಮಾರ್ಗಗಳನ್ನು ದೂರೀಕರಿಸಿರುವರೋ, ಯಾರು ಶುದ್ಧರೋ, ನಿದರ್ೊರ್ಷರೋ, ವಿಮಲರೋ ಮತ್ತು ನಿರ್ಮಲರೋ ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
25.          ಯಾರು ತನ್ನಲ್ಲಿ ಆತ್ಮದ ಇಲ್ಲದಿರುವಿಕೆಯನ್ನು ಸ್ಪಷ್ಟವಾಗಿ ಅರಿತಿರುವರೋ, ಸಮಾಧಿ ಸಂಪನ್ನರೋ, ಋಜುಗಾಮಿಯೋ ಮತ್ತು ಸ್ಥಿರಚಿತ್ತರೋ, ಅಂತಹ ತೃಷ್ಣಾರಹಿತರೂ, ಸಂಪೂರ್ಣವಾಗಿ ಸಂಶಯರಹಿತರಾದ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
26.          ಯಾರಲ್ಲಿ ಯಾವುದೇ ಪ್ರಕಾರದ ಮೋಹವಿಲ್ಲವೋ ಮತ್ತು ಸರ್ವಧರ್ಮಗಳಲ್ಲಿ ಜ್ಞಾನದಶರ್ಿಯೋ, ಯಾರು ಅಂತಿಮ ಶರೀರಧಾರಿಯೋ, ಯಾರು ಸವರ್ೊತ್ತಮ ಕಲ್ಯಾಣಕಾರಿಯಾದ ಸಂಭೋದಿಯ ಪ್ರಾಪ್ತಿ ಮಾಡಿರುವರೋ, ಇಷ್ಟು ಮಾತ್ರದಿಂದಲೆ ಯಕ್ಷರ (ಪುರುಷನ) ಶುದ್ಧಿಯಾಗುತ್ತದೋ, ಅಂತಹ ತಥಾಗತರೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿದ್ದಾರೆ.
27.          ಬ್ರಾಹ್ಮಣ - ತಮ್ಮಂತಹ ಜ್ಞಾನಪಾರಂಗತರನ್ನು ಪಡೆದು ನನ್ನ ಯಜ್ಞ ಪೂರ್ಣವಾಗಲಿ. ತಾವು ಸಾಕ್ಷಾತ್ ಬ್ರಹ್ಮರಾಗಿರುವಿರಿ. ಭಗವಾನ್, ನನ್ನ ಬೋಜನ ಸ್ವೀಕರಿಸಿ, ನನ್ನ ಪುರಿ ಹಾಗು ಅವಲಕ್ಕಿಯನ್ನು ಸೇವಿಸಿ.
28.          ಭಗವಾನರು - ಧಮರ್ೊಪದೇಶ ನೀಡಿದ ನಂತರದ ಭೋಜನ ನನಗಾಗಿ ಅಭೋಜ್ಯವಾಗಿದೆ. ಬ್ರಾಹ್ಮಣನೇ ಆಳವಾದ ಜ್ಞಾನಿಗಳಿಗೆ ಆ ರೀತಿ ಸೇವಿಸುವುದು ನಿಯಮವಲ್ಲ. ಬುದ್ಧರು ಧಮರ್ೊಪದೇಶದ ನಂತರ ಪ್ರಾಪ್ತವಾದ ಭೋಜನವನ್ನು ತ್ಯಜಿಸುತ್ತಾರೆ. ಬ್ರಾಹ್ಮಣ! ಧರ್ಮದಲ್ಲಿ ವಿದ್ಯಾಮಾನರಾಗಿರುವವರಿಗೆ ಇದೇರೀತಿಯಾಗಿದೆ.
29.          ಜ್ಞಾನಿ, ಮಹಷರ್ಿ, ಕ್ಷೀಣಾಸವ ಮತ್ತು ಚಂಚಲಿತ ರಹಿತನಾದ ನನಗಾಗಿ ಬೇರೆಯ ಅನ್ನ ಮತ್ತು ಪೇಯವನ್ನು ನೀಡು. ಪುಣ್ಯಾಪೇಕ್ಷೆಗೆ ಇದು ಅತ್ಯುತ್ತಮ ಕ್ಷೇತ್ರವಾಗಿದೆ.
30.          ಬ್ರಾಹ್ಮಣ - ಬಹಳ ಒಳ್ಳೆಯದು ಭಗವಾನ್. ನಾನು ಇದನ್ನು ತಿಳಿಯಲು ಅಪೇಕ್ಷಿಸುತ್ತೇನೆ. ಏನೆಂದರೆ ನನ್ನಂತಹವನ ದಕ್ಷಿಣೆಯನ್ನು ಯಾರು ಸ್ವೀಕರಿಸುವರು. ಹಾಗು ತಮ್ಮ ಧರ್ಮವನ್ನು ಗ್ರಹಿಸಿ ನಾನು ಯಜ್ಞದ ಸಮಯದಲ್ಲಿ ಯಾರನ್ನು ಹುಡುಕಲಿ.
31.          ಭಗವಾನರು ಯಾರಲ್ಲಿ ಹಿಂಸೆ ಭಾವವಿಲ್ಲವೋ, ಯಾರ ಚಿತ್ತವು ರಾಗರಹಿತವೋ, ಯಾರು ಕಾಮಭೋಗಗಳಿಂದ ಮುಕ್ತರೋ, ಯಾರಲ್ಲಿ ಆಲಸ್ಯವೂ ಇಲ್ಲವೋ.
32.          ಯಾರು ವಾಸನೆಗಳ ನಾಶಕರ್ತರೋ, ಜನ್ಮ ಹಾಗು ಮೃತ್ಯುವಿನ ಜ್ಞಾನಿಗಳು, ಯಾರು ಮೌನವ್ರತಧಾರಿಗಳಾದ ಮುನಿಯೋ, ಅಂತಹವನು ಯಜ್ಞಕ್ಕೆ ಬಂದಮೇಲೆ.
33.          ಕಣ್ಣುಗಳನ್ನು ಕೆಳಗೆ ಮಾಡಿ (ಪಾದವನ್ನು ದೃಷ್ಟಿಸುತ್ತಾ) ಎರಡು ಹಸ್ತಗಳನ್ನು ಜೋಡಿಸಿ ನಮಸ್ಕರಿಸು. ಅನ್ನ-ಪೇಯದಿಂದ ಅವರಿಗೆ ಪೂಜಿಸು. ಈ ರೀತಿಯ ದಕ್ಷಿಣೆಯು ಸಫಲವಾಗುತ್ತದೆ.
34.          ಬ್ರಾಹ್ಮಣ - ಬುದ್ಧರಾದ ತಾವೇ ಪುರಿ ಹಾಗು ಅವಲಕ್ಕಿಗೆ ಪರಮಯೋಗ್ಯರಾಗಿರುವಿರಿ. ತಾವೇ ಅತ್ಯುತ್ತಮ ಪುಣ್ಯಕ್ಷೇತ್ರ ಆಗಿದ್ದೀರಿ. ಸರ್ವ ಲೋಕಗಳಿಗೂ ಪೂಜ್ಯರಾಗಿರುವಿರಿ. ತಮಗೆ ದಾನ ನೀಡುವುದು ಮಹಾ ಫಲದಾಯಕವಾಗಿದೆ.
                ಆಗ ಸುಂದರಿಕ ಭಾರದ್ವಾಜ ಬ್ರಾಹ್ಮಣನು ಭಗವಾನರಿಗೆ ಈ ರೀತಿ ಹೇಳಿದನು - ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನಗೆ ಪ್ರವಜ್ರ್ಯವನ್ನು ನೀಡುವಂತಾಗಲಿ, ಉಪಸಂಪದವು ದೊರೆಯುವಂತಾಗಲಿ.
                ನಂತರ ಸುಂದರಿಕ ಭಾರದ್ವಾಜನು ಭಗವಾನರಿಂದ ಪ್ರವಜ್ರ್ಯ ಪಡೆದನು, ಉಪಸಂಪದ ಪಡೆದನು. ಉಪಸಂಪದ ಪಡೆದ ಕೆಲವೇ ದಿನಗಳಲ್ಲಿ ಆಯುಷ್ಮಂತ ಭಾರದ್ವಾಜನು ಏಕಾಂತದಲ್ಲಿ ವಾಸಿಸಿ, ಸಂಯಮಿ, ಅಪ್ರಮಾದಿ ಧ್ಯಾನ ವಿಧಿಗಳಲ್ಲಿ ಮಗ್ನನಾದನು. ನಂತರ ಯಾವ ಪರಮ ಅರ್ಥವನ್ನು ಪಡೆಯಲು ಕುಲಪುತ್ರರು ಮನೆ ತ್ಯಜಿಸಿ ಪ್ರವಜರ್ಿತರಾಗಿ ಸಾಧನಶೀಲರಾಗುವರೋ, ಅಂತಹ ಅನುತ್ತರ ಬ್ರಹ್ಮಚರ್ಯದ ಅಂತಿಮ ಫಲವನ್ನು ಸ್ವಯಂ ಜ್ಞಾನವನ್ನು ಸಾಕ್ಷಾತ್ಕರಿಸಿದನು. ಹಾಗೆಯೇ ವಿಮುಕ್ತಿ ಜ್ಞಾನವು ಲಭಿಸಿತು- ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದನ್ನು ಮಾಡಿದೆ, ಯಾವ ಶೇಷವೂ ಉಳಿದಿಲ್ಲ. ಆಯುಷ್ಮಂತ ಭಾರದ್ವಾಜನು ಅರಹಂತರಲ್ಲಿ ಒಬ್ಬನಾದನು.

ಇಲ್ಲಿಗೆ ಸುಂದರಿಕ ಭಾರದ್ವಾಜ ಸುತ್ತ ಮುಗಿಯಿತು.

subhashita sutta in kannada

3. ಸುಭಾಷಿತ ಸುತ್ತ
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಾಸವಾಗಿದ್ದರು. ಭಗವಾನರು ಹೀಗೆ ಹೇಳಿದರು- ಭಿಕ್ಷುಗಳೇ, ನಾಲ್ಕು ಅಂಗಗಳಿಂದ ಯುಕ್ತವಾದ ವಚನವು ಸುಭಾಷಿತವಾಗುತ್ತದೆ. ದುಭರ್ಾಷಿಕವಾಗುವುದಿಲ್ಲ. ಯಾವುದು ಆ ನಾಲ್ಕು? ಭಿಕ್ಷುಗಳೇ, ಇಲ್ಲಿ ಭಿಕ್ಷು ಸುಭಾಷಿತಯುತವಾಗಿ ನುಡಿಯುತ್ತಾನೆ. ದುಭರ್ಾಷಿತವಾಗಿ ಅಲ್ಲ. ಧರ್ಮಯುತವಾಗಿ ನುಡಿಯುತ್ತಾನೆ, ಅಧರ್ಮಯುತನಾಗಿ ಅಲ್ಲ. ಸತ್ಯವನ್ನೇ ನುಡಿಯುತ್ತಾನೆ, ಅಸತ್ಯವನ್ನಲ್ಲ. ಭಿಕ್ಷುಗಳೇ ಈ ನಾಲ್ಕು ಅಂಶಗಳಿಂದ ಯುಕ್ತವಾದುದು ಸುಭಾಷಿತವಾಗುತ್ತದೆ, ದುಭರ್ಾಷಿತವಲ್ಲ. ಜ್ಞಾನಿಗಳಿಗೆ ನಿದರ್ೊಷವಾಗಿರುತ್ತದೆ, ದೋಷಯುತವಲ್ಲ.

                ಭಗವಾನರು ಈ ರೀತಿ ನುಡಿದರು. ಸುಗತರು ಈ ರೀತಿ ಹೇಳಿದ ನಂತರ ಶಾಸ್ತರು ಇದನ್ನು ಹೇಳಿದರು-
1.            ಸಂತರು ಸುಭಾಷಿತವನ್ನು ಉತ್ತಮ ವಚನವೆಂದು ನುಡಿದಿದ್ದಾರೆ, ಧರ್ಮವನ್ನೇ ನುಡಿಯಿರಿ, ಅಧರ್ಮವನ್ನಲ್ಲ - ಇದು ಎರಡನೆಯದು. ಪ್ರಿಯ ವಚನವನ್ನು ನುಡಿಯಿರಿ, ಅಪ್ರಿಯವನ್ನಲ್ಲ - ಇದು ಮೂರನೆಯದು. ಸತ್ಯವನ್ನೇ ನುಡಿಯಿರಿ, ಅಸತ್ಯವನ್ನಲ್ಲ - ಇದು ನಾಲ್ಕನೆಯದು.
                ಆಗ ಆಯುಷ್ಮಂತ ವಂಗೀಸನು ಆಸನದಿಂದ ಎದ್ದನು. ಚೀವರವನ್ನು ಒಂದು ಹೆಗಲಮೇಲೆ ಹಾಕಿಕೊಂಡು, ಎಲ್ಲಿ ಭಗವಾನರಿದ್ದರೋ ಅಲ್ಲಿ ಎರಡು ಕೈಗಳನ್ನು ಜೋಡಿಸಿ ಪ್ರಣಾಮ ಮಾಡಿದನು. ನಂತರ ಈ ರೀತಿ ಹೇಳಿದನು-ಸುಗತರೇ, ನನಗೆ ಈ ರೀತಿ ಅರಿವು ಉಂಟಾಗಿದೆ. ವಂಗೀಸ, ಅದನ್ನು ತಿಳಿಯಪಡಿಸು ಎಂದು ಭಗವಾನರು ಹೇಳಿದರು. ಆಗ ಆಯುಷ್ಮಂತ ವಂಗೀಸನು ಭಗವಾನರ ಮುಂದೆ ಅನುಕೂಲಕರವಾದ ಗಾಥೆಗಳಿಂದ ವ್ಯಕ್ತಪಡಿಸಿದನು.
2.            ಅದೇ ಮಾತನ್ನು ನುಡಿಯಲಿ, ಅದರಿಂದ ತಾನು ಸಂಕಷ್ಟದಲ್ಲಿ ಬೀಳದಿರಲಿ ಮತ್ತು ಪರರಿಗೂ ದುಃಖವಾಗದಿರಲಿ. ಅದೇ ಸುಭಾಷಿತವಾಗಿದೆ.
3.            ಯಾವ ನುಡಿಯು ಆನಂದಮಯವೋ, ಅಂತಹ ಪ್ರಿಯ ನುಡಿಯನ್ನು ನುಡಿಯಲಿ. ಪಾಪಯುತ ನುಡಿಗಳನ್ನು ತ್ಯಜಿಸಿ ಪ್ರಿಯವಾದುದನ್ನು ನುಡಿಯಲಿ.
4.            ಸತ್ಯವೇ ಅಮೃತವಾಣಿಯಾಗಿದೆ. ಇದು ಸನಾತನ ನಿಯಮವಾಗಿದೆ. ಇದನ್ನು ಸತ್ಯ, ಅರ್ಥ ಮತ್ತು ಧರ್ಮದಿಂದ ಪ್ರತಿಷ್ಠಿತರಾದ ಸಂತರು ಹೇಳಿದ್ದಾರೆ.
5.            ಭಗವಾನ ಬುದ್ಧರು ಯಾವ ಕಲ್ಯಾಣಕರವಾದ ನಿಬ್ಬಾಣ ಪ್ರಾಪ್ತಿ ಹಾಗು ದುಃಖದ ಅಂತ್ಯ ಮಾಡಬಲ್ಲ ಯಾವ ಶ್ರೇಷ್ಠ ಸುವಾಚವನ್ನು ನುಡಿದಿರುವರೋ, ಅದೇ ವಚನಗಳಲ್ಲಿ ಅತ್ಯುತ್ತಮವಾಗಿದೆ.

ಇಲ್ಲಿಗೆ ಸುಭಾಷಿತ ಸುತ್ತ ಮುಗಿಯಿತು.

padhaana sutta in kannada

2. ಪಧಾನ ಸುತ್ತ
1.            ನಾನು ನಿಬ್ಬಾಣದ ಪ್ರಾಪ್ತಿಗಾಗಿ ಎಂದಿನಿಂದ ನೆರಂಜರ ನದಿಯ ದಡದಲ್ಲಿ ಪರಾಕ್ರಮಯುತವಾದ ಧ್ಯಾನ ಮಾಡುತ್ತಿದ್ದೆನೋ.

2.            ಆಗ ಮಾರನು ಕರುಣಾಭರಿತ ನುಡಿಯೊಂದಿಗೆ ನನ್ನ ಬಳಿಗೆ ಬಂದನು. ನೀವು ಕೃಶರೂ ಹಾಗು ಕುರೂಪಿಯು ಆಗಿರುವಿರಿ, ನಿಮ್ಮ ಮೃತ್ಯು ಸನಿಹವಾಗಿದೆ.
3.            ಸಾವಿರ ಅಂಶವೂ ನಿಮ್ಮ ಮೃತ್ಯುಗಾಗಿ ಸಂಭವವಿದೆ, ಕೇವಲ ಒಂದು ಅಂಗ ನಿಮ್ಮ ಜೀವಿತಕ್ಕಾಗಿ ಇದೆ. ಹೇ ಜೀವಿಸಿ, ಜೀವಿಸುವುದು ಉತ್ತಮವಾಗಿದೆ, ಜೀವಿತವಾಗಿದ್ದರೆ ಮಾತ್ರ ಪುಣ್ಯವನ್ನು ಸಂಗ್ರಹಿಸಬಹುದು.
4.            ನೀವೇನಾದರೂ ಬ್ರಹ್ಮಚರ್ಯ ಹಾಗು ಅಗ್ನಿಹೋತ್ರ ಮಾಡಿದರೆ ಬಹಳಷ್ಟು ಪುಣ್ಯವನ್ನು ಸಂಚಯ ಮಾಡಬಹುದು, ತಪವನ್ನು ಮಾಡಿ ನೀವೇನು ಮಾಡುವಿರಿ.
5.            ತಪದ ಮಾರ್ಗ ದುರ್ಗಮವಾಗಿದೆ. ನಿಬ್ಬಾಣ ಪ್ರಾಪ್ತಿಯಂತೂ ದುಷ್ಕರವಾಗಿದೆ. ಈ ಗಾಥೆಗಳಿಂದ ಮಾರನು ಬುದ್ಧರ ಬಳಿ ನಿಂತನು.
6.            ಹಾಗೆ ನುಡಿಯುವ ಮಾರನಿಗೆ ಭಗವಾನರು ಹೀಗೆ ನುಡಿದರು- ಹೇ ಪ್ರಮತ್ತಬಂಧು, ಪಾಪಿ, ಯಾವ ಉದ್ದೇಶದಿಂದ ಇಲ್ಲಿಗೆ ಬಂದಿರುವೆ.
7.            ಆ ಪುಣ್ಯದ ಅವಶ್ಯಕತೆಯು ನನಗೆ ಅಣು ಮಾತ್ರವೂ ಇಲ್ಲ. ಯಾರಿಗೆ ಪುಣ್ಯದ ಅವಶ್ಯಕತೆ ಇದೆಯೋ ಅವರಿಗೆ ಮಾರನು ಹೇಳಲಿ.
8.            ನನ್ನಲ್ಲಿ ಶ್ರದ್ಧೆ, ವೀರ್ಯ ಹಾಗು ಪ್ರಜ್ಞಾ ಸದಾ ನೆಲೆಯಾಗಿದೆ. ನನ್ನಂಥಹ ಸಂಯಮಿಗೆ ಜೀವಿಸುವ ಮಾತು ಆಡುವೆಯಾ.
9.            ಈ ವಾಯುವು ನದಿಗಳ ಧಾರೆಯನ್ನು ಒಣಗಿಸಬಹುದು, ಇದು ನನ್ನಂಥಹ ಸಂಯಮಿಯ ರಕ್ತವನ್ನು ಒಣಗಿಸಲಾರದು.
10.          ರಕ್ತವು ಒಣಗಿದ ಮೇಲೆ ಪಿತ್ತ ಹಾಗು ಕಫವು ಒಣಗುತ್ತದೆ. ಮಾಂಸ ಕ್ಷೀಣವಾದ ಮೇಲೆ ಚಿತ್ತವೂ ಮತ್ತಷ್ಟು ಪ್ರಸನ್ನವಾಗುತ್ತದೆ ಮತ್ತು ಸ್ಮೃತಿ, ಪ್ರಜ್ಞಾ ಹಾಗು ಸಮಾಧಿಯು ನನ್ನಲ್ಲಿ ಅಧಿಕವಾಗಿ ನೆಲೆಸುತ್ತದೆ.
11.          ಈ ರೀತಿ ವಿಹರಿಸುವವನ ವೇದನೆಯು ಉತ್ತಮವಾಗಿ ನನ್ನ ಚಿತ್ತವೂ ಕಾಮಗಳನ್ನು ಬಯಸಲಾರದು. ಈ ವ್ಯಕ್ತಿಯ ಶುದ್ಧಿಯನ್ನು ಕಾಣು.
12.          ಹೇ ಮಾರ, ಕಾಮವು ನಿನ್ನ ಮೊದಲ ಸೇನೆಯಾಗಿದೆ. ಅರತಿಯು ನಿನ್ನ ಎರಡನೆಯ ಸೇನೆಯಾಗಿದೆ, ಹಸಿವು-ಬಾಯಾರಿಕೆ ನಿನ್ನ ಮೂರನೆಯ ಸೇನೆಯಾಗಿದೆ, ತೃಷ್ಣೆಯು ನಾಲ್ಕನೆಯದೆಂದು ಹೇಳಲ್ಪಡುತ್ತದೆ.
13.          ನಿನ್ನ ಐದನೆಯದು ಜಡತೆ-ಆಲಸ್ಯವಾಗಿದೆ, ಆರನೆಯದು ಭಯಭೀತಿಯಾಗಿದೆ, ನಿನ್ನ ಏಳನೆಯದು ಸಂಶಯ ಹಾಗು ಈಷರ್ೆ ಮತ್ತು ಹಠಮಾರಿತನವೇ ಎಂಟನೆಯದಾಗಿದೆ.
14.          ಲಾಭ, ಪ್ರಶಂಸೆ, ಸತ್ಕಾರ, ಅನುಚಿತ ರೀತಿಯಿಂದ ಪ್ರಾಪ್ತವಾದ ಯಾವ ಯಶಸ್ಸಿದೆಯೋ, ಅದು ತನಗೆ ಪ್ರಶಂಸೆ, ಪರರಿಗೆ ನಿಂದೆ ಉಂಟುಮಾಡುತ್ತದೆ.
15.          ಹೇ ಮಾರ, ಈ ನಿನ್ನ ಸೇನೆಯು (ಭಿಕ್ಷುಗಳಿಗೆ) ಪ್ರಹಾರ ಮಾಡುವಂತಹದ್ದಾಗಿದೆ. ಅದನ್ನು ಅಸುರರು ಜಯಿಸಲಾರರು, ಯಾರು ಜಯಿಸುವರೋ ಅವರು ಸುಖವನ್ನು ಪಡೆಯುವರು.
16.          ನಾನು ಈ ಮುಂಜವನ್ನು (ಹುಲ್ಲನ್ನ) ಧಾರಣೆ ಮಾಡುತ್ತೇನೆ. ಇಲ್ಲಿ ಜೀವಿಸುವುದಕ್ಕೆ ಧಿಕ್ಕಾರವಿರಲಿ. ಸಂಗ್ರಾಮದಲ್ಲಿ ಪರಾಜಿತನಾಗಿ ಜೀವಿಸುವ ಬದಲು ನನಗೆ ಸಾವೇ ಉಚಿತವಾದುದು.
17.          ವಾಸನೆಗಳಲ್ಲಿ ಅದ್ದಿ ಹೋಗಿರುವ ಕೆಲವು ಶ್ರಮಣ ಬ್ರಾಹ್ಮಣರು ಇಲ್ಲಿ ಸತ್ಯವನ್ನು ಕಾಣಲಾರರು. ಅವರು ಸುವ್ರತಿಗಳ ಆ ಮಾರ್ಗವನ್ನು ಅರಿಯಲಾರರು.
18.          ನಾಲ್ಕು ಕಡೆಗಳಿಂದ ವಾಹನಸಹಿತ ಸುಸಜ್ಜಿತವಾದ ಮಾರನ ಸೇನೆಯನ್ನು ನೋಡಿ, ನಾನು ಯುದ್ಧಕ್ಕೆ ಹೊರಡುತ್ತೇನೆ. ಏಕೆಂದರೆ ಮಾರನು ನನ್ನನ್ನು ಸ್ಥಾನದಿಂದ ಚ್ಯುತನಾಗಿಸಬಾರದು.
19.          ದೇವ ಮನುಷ್ಯರ ಸಹಿತ ಸರ್ವ ಲೋಕಗಳಲ್ಲಿ ನಿನ್ನ ಸೇನೆಯನ್ನು ಜಯಿಸಲಾರರೋ, ಅದನ್ನು ನನ್ನ ಪ್ರಜ್ಞಾದಿಂದ ನಷ್ಟಗೊಳಿಸುತ್ತೇನೆ. ಹೇಗೆಂದರೆ ಕಲ್ಲಿನಿಂದ ಹಸಿ ಪಾತ್ರೆ (ಮಣ್ಣಿನ) ಚೂರು ಮಾಡುವಂತೆ.
20.          ಸಂಕಲ್ಪಗಳನ್ನು ತನ್ನ ವಶದಲ್ಲಿರಿಸಿ, ಸ್ಮೃತಿ (ಎಚ್ಚರಿಕೆ) ಯನ್ನು ಸುಪ್ರತಿಷ್ಠಿತಗೊಳಿಸಿ ಬಹಳಷ್ಟು ಶ್ರಾವಕರಿಗೆ ಶಿಕ್ಷಣ ನೀಡುತ್ತಾ ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ಸಂಚರಿಸುವೆನು.
21.          ಅವರು ನನ್ನ ಶಾಸನವನ್ನು ಪಾಲಿಸುತ್ತ ಅಪ್ರಮತ್ತ ಹಾಗು ಸಂಯಮಿಗಳಾದ ಶಿಷ್ಯರು ನಿಬ್ಬಾಣ ಪ್ರಾಪ್ತಿ ಮಾಡುತ್ತಾರೆ. ಅಲ್ಲಿ ತಲುಪಿದ ಅವರು ಶೋಕಪಡುವುದಿಲ್ಲ.
22.          ಮಾರ - ಏಳು ವರ್ಷಗಳ ತನಕ ನಾನು ಭಗವಾನರ ಹಿಂದೆ ಹಿಂದೆಯೇ ಬಿದ್ದೆ. ಆದರೆ ಸ್ಮೃತಿವಂತರಾದ ಸಂಬುದ್ಧರು ಅಲ್ಪವೂ ಅವಕಾಶ ನೀಡಲಿಲ್ಲ.
23.          ಕೆಂಪು ಬಣ್ಣದ ಕಲ್ಲಿಗೆ ಮಾಂಸವೆಂದು ಕಾಗೆಯು ಕುಕ್ಕುತ್ತದೆ, ಸ್ವಾದಿಷ್ಟತೆ ಸಿಗುವುದೆಂದು.
24.          ಅದರಲ್ಲಿ ಯಾವ ಸ್ವಾದವೂ ಸಿಗದೆ ಕಾಗೆಯು ಅಲ್ಲಿಂದ ಹೊರಟು ಹೋಗುತ್ತದೆ. ಕಾಗೆಯು ಕಲ್ಲಿಗೆ ಕುಕ್ಕುವಂತೆ ನಾನು ಗೋತಮರಿಂದ ವೈರಾಗ್ಯ ತೆಗೆದುಕೊಳ್ಳುತ್ತಿದ್ದೆನೆ.
25.          ಶೋಕಭರಿತ ಮಾರನ ಕಂಕುಳಿನಿಂದ ವೀಣೆಯು ಕೆಳಕ್ಕೆ ಜಾರಿತು. ಆ ಯಕ್ಷನು ದುಃಖಿತನಾಗಿ ಅಲ್ಲಿಯೇ ಅಂತಧರ್ಾನನಾದನು.

ಇಲ್ಲಿಗೆ ಪಧಾನ ಸುತ್ತ ಮುಗಿಯಿತು.