2. ಪಧಾನ ಸುತ್ತ
1. ನಾನು ನಿಬ್ಬಾಣದ ಪ್ರಾಪ್ತಿಗಾಗಿ ಎಂದಿನಿಂದ ನೆರಂಜರ
ನದಿಯ ದಡದಲ್ಲಿ ಪರಾಕ್ರಮಯುತವಾದ ಧ್ಯಾನ ಮಾಡುತ್ತಿದ್ದೆನೋ.
2. ಆಗ ಮಾರನು ಕರುಣಾಭರಿತ ನುಡಿಯೊಂದಿಗೆ ನನ್ನ ಬಳಿಗೆ
ಬಂದನು. ನೀವು ಕೃಶರೂ ಹಾಗು ಕುರೂಪಿಯು ಆಗಿರುವಿರಿ, ನಿಮ್ಮ ಮೃತ್ಯು ಸನಿಹವಾಗಿದೆ.
3. ಸಾವಿರ ಅಂಶವೂ ನಿಮ್ಮ ಮೃತ್ಯುಗಾಗಿ ಸಂಭವವಿದೆ,
ಕೇವಲ ಒಂದು ಅಂಗ ನಿಮ್ಮ
ಜೀವಿತಕ್ಕಾಗಿ ಇದೆ. ಹೇ ಜೀವಿಸಿ, ಜೀವಿಸುವುದು
ಉತ್ತಮವಾಗಿದೆ, ಜೀವಿತವಾಗಿದ್ದರೆ
ಮಾತ್ರ ಪುಣ್ಯವನ್ನು ಸಂಗ್ರಹಿಸಬಹುದು.
4. ನೀವೇನಾದರೂ ಬ್ರಹ್ಮಚರ್ಯ ಹಾಗು ಅಗ್ನಿಹೋತ್ರ ಮಾಡಿದರೆ
ಬಹಳಷ್ಟು ಪುಣ್ಯವನ್ನು ಸಂಚಯ ಮಾಡಬಹುದು, ತಪವನ್ನು ಮಾಡಿ
ನೀವೇನು ಮಾಡುವಿರಿ.
5. ತಪದ ಮಾರ್ಗ ದುರ್ಗಮವಾಗಿದೆ. ನಿಬ್ಬಾಣ ಪ್ರಾಪ್ತಿಯಂತೂ
ದುಷ್ಕರವಾಗಿದೆ. ಈ ಗಾಥೆಗಳಿಂದ ಮಾರನು ಬುದ್ಧರ ಬಳಿ ನಿಂತನು.
6. ಹಾಗೆ ನುಡಿಯುವ ಮಾರನಿಗೆ ಭಗವಾನರು ಹೀಗೆ ನುಡಿದರು- ಹೇ
ಪ್ರಮತ್ತಬಂಧು, ಪಾಪಿ, ಯಾವ ಉದ್ದೇಶದಿಂದ ಇಲ್ಲಿಗೆ ಬಂದಿರುವೆ.
7. ಆ ಪುಣ್ಯದ ಅವಶ್ಯಕತೆಯು ನನಗೆ ಅಣು ಮಾತ್ರವೂ ಇಲ್ಲ.
ಯಾರಿಗೆ ಪುಣ್ಯದ ಅವಶ್ಯಕತೆ ಇದೆಯೋ ಅವರಿಗೆ ಮಾರನು ಹೇಳಲಿ.
8. ನನ್ನಲ್ಲಿ ಶ್ರದ್ಧೆ, ವೀರ್ಯ ಹಾಗು ಪ್ರಜ್ಞಾ ಸದಾ ನೆಲೆಯಾಗಿದೆ. ನನ್ನಂಥಹ
ಸಂಯಮಿಗೆ ಜೀವಿಸುವ ಮಾತು ಆಡುವೆಯಾ.
9. ಈ ವಾಯುವು ನದಿಗಳ ಧಾರೆಯನ್ನು ಒಣಗಿಸಬಹುದು, ಇದು ನನ್ನಂಥಹ ಸಂಯಮಿಯ ರಕ್ತವನ್ನು ಒಣಗಿಸಲಾರದು.
10. ರಕ್ತವು ಒಣಗಿದ ಮೇಲೆ ಪಿತ್ತ ಹಾಗು ಕಫವು ಒಣಗುತ್ತದೆ.
ಮಾಂಸ ಕ್ಷೀಣವಾದ ಮೇಲೆ ಚಿತ್ತವೂ ಮತ್ತಷ್ಟು ಪ್ರಸನ್ನವಾಗುತ್ತದೆ ಮತ್ತು ಸ್ಮೃತಿ, ಪ್ರಜ್ಞಾ ಹಾಗು ಸಮಾಧಿಯು ನನ್ನಲ್ಲಿ ಅಧಿಕವಾಗಿ
ನೆಲೆಸುತ್ತದೆ.
11. ಈ ರೀತಿ ವಿಹರಿಸುವವನ ವೇದನೆಯು ಉತ್ತಮವಾಗಿ ನನ್ನ
ಚಿತ್ತವೂ ಕಾಮಗಳನ್ನು ಬಯಸಲಾರದು. ಈ ವ್ಯಕ್ತಿಯ ಶುದ್ಧಿಯನ್ನು ಕಾಣು.
12. ಹೇ ಮಾರ, ಕಾಮವು ನಿನ್ನ ಮೊದಲ ಸೇನೆಯಾಗಿದೆ. ಅರತಿಯು ನಿನ್ನ
ಎರಡನೆಯ ಸೇನೆಯಾಗಿದೆ, ಹಸಿವು-ಬಾಯಾರಿಕೆ
ನಿನ್ನ ಮೂರನೆಯ ಸೇನೆಯಾಗಿದೆ, ತೃಷ್ಣೆಯು
ನಾಲ್ಕನೆಯದೆಂದು ಹೇಳಲ್ಪಡುತ್ತದೆ.
13. ನಿನ್ನ ಐದನೆಯದು ಜಡತೆ-ಆಲಸ್ಯವಾಗಿದೆ, ಆರನೆಯದು ಭಯಭೀತಿಯಾಗಿದೆ, ನಿನ್ನ ಏಳನೆಯದು ಸಂಶಯ ಹಾಗು ಈಷರ್ೆ ಮತ್ತು
ಹಠಮಾರಿತನವೇ ಎಂಟನೆಯದಾಗಿದೆ.
14. ಲಾಭ, ಪ್ರಶಂಸೆ, ಸತ್ಕಾರ, ಅನುಚಿತ ರೀತಿಯಿಂದ ಪ್ರಾಪ್ತವಾದ ಯಾವ ಯಶಸ್ಸಿದೆಯೋ,
ಅದು ತನಗೆ ಪ್ರಶಂಸೆ,
ಪರರಿಗೆ ನಿಂದೆ
ಉಂಟುಮಾಡುತ್ತದೆ.
15. ಹೇ ಮಾರ, ಈ ನಿನ್ನ ಸೇನೆಯು (ಭಿಕ್ಷುಗಳಿಗೆ) ಪ್ರಹಾರ
ಮಾಡುವಂತಹದ್ದಾಗಿದೆ. ಅದನ್ನು ಅಸುರರು ಜಯಿಸಲಾರರು, ಯಾರು ಜಯಿಸುವರೋ ಅವರು ಸುಖವನ್ನು ಪಡೆಯುವರು.
16. ನಾನು ಈ ಮುಂಜವನ್ನು (ಹುಲ್ಲನ್ನ) ಧಾರಣೆ ಮಾಡುತ್ತೇನೆ.
ಇಲ್ಲಿ ಜೀವಿಸುವುದಕ್ಕೆ ಧಿಕ್ಕಾರವಿರಲಿ. ಸಂಗ್ರಾಮದಲ್ಲಿ ಪರಾಜಿತನಾಗಿ ಜೀವಿಸುವ ಬದಲು ನನಗೆ
ಸಾವೇ ಉಚಿತವಾದುದು.
17. ವಾಸನೆಗಳಲ್ಲಿ ಅದ್ದಿ ಹೋಗಿರುವ ಕೆಲವು ಶ್ರಮಣ
ಬ್ರಾಹ್ಮಣರು ಇಲ್ಲಿ ಸತ್ಯವನ್ನು ಕಾಣಲಾರರು. ಅವರು ಸುವ್ರತಿಗಳ ಆ ಮಾರ್ಗವನ್ನು ಅರಿಯಲಾರರು.
18. ನಾಲ್ಕು ಕಡೆಗಳಿಂದ ವಾಹನಸಹಿತ ಸುಸಜ್ಜಿತವಾದ ಮಾರನ
ಸೇನೆಯನ್ನು ನೋಡಿ, ನಾನು ಯುದ್ಧಕ್ಕೆ
ಹೊರಡುತ್ತೇನೆ. ಏಕೆಂದರೆ ಮಾರನು ನನ್ನನ್ನು ಸ್ಥಾನದಿಂದ ಚ್ಯುತನಾಗಿಸಬಾರದು.
19. ದೇವ ಮನುಷ್ಯರ ಸಹಿತ ಸರ್ವ ಲೋಕಗಳಲ್ಲಿ ನಿನ್ನ
ಸೇನೆಯನ್ನು ಜಯಿಸಲಾರರೋ, ಅದನ್ನು ನನ್ನ
ಪ್ರಜ್ಞಾದಿಂದ ನಷ್ಟಗೊಳಿಸುತ್ತೇನೆ. ಹೇಗೆಂದರೆ ಕಲ್ಲಿನಿಂದ ಹಸಿ ಪಾತ್ರೆ (ಮಣ್ಣಿನ) ಚೂರು
ಮಾಡುವಂತೆ.
20. ಸಂಕಲ್ಪಗಳನ್ನು ತನ್ನ ವಶದಲ್ಲಿರಿಸಿ, ಸ್ಮೃತಿ (ಎಚ್ಚರಿಕೆ) ಯನ್ನು ಸುಪ್ರತಿಷ್ಠಿತಗೊಳಿಸಿ
ಬಹಳಷ್ಟು ಶ್ರಾವಕರಿಗೆ ಶಿಕ್ಷಣ ನೀಡುತ್ತಾ ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ
ಸಂಚರಿಸುವೆನು.
21. ಅವರು ನನ್ನ ಶಾಸನವನ್ನು ಪಾಲಿಸುತ್ತ ಅಪ್ರಮತ್ತ ಹಾಗು
ಸಂಯಮಿಗಳಾದ ಶಿಷ್ಯರು ನಿಬ್ಬಾಣ ಪ್ರಾಪ್ತಿ ಮಾಡುತ್ತಾರೆ. ಅಲ್ಲಿ ತಲುಪಿದ ಅವರು ಶೋಕಪಡುವುದಿಲ್ಲ.
22. ಮಾರ - ಏಳು ವರ್ಷಗಳ ತನಕ ನಾನು ಭಗವಾನರ ಹಿಂದೆ
ಹಿಂದೆಯೇ ಬಿದ್ದೆ. ಆದರೆ ಸ್ಮೃತಿವಂತರಾದ ಸಂಬುದ್ಧರು ಅಲ್ಪವೂ ಅವಕಾಶ ನೀಡಲಿಲ್ಲ.
23. ಕೆಂಪು ಬಣ್ಣದ ಕಲ್ಲಿಗೆ ಮಾಂಸವೆಂದು ಕಾಗೆಯು
ಕುಕ್ಕುತ್ತದೆ, ಸ್ವಾದಿಷ್ಟತೆ
ಸಿಗುವುದೆಂದು.
24. ಅದರಲ್ಲಿ ಯಾವ ಸ್ವಾದವೂ ಸಿಗದೆ ಕಾಗೆಯು ಅಲ್ಲಿಂದ
ಹೊರಟು ಹೋಗುತ್ತದೆ. ಕಾಗೆಯು ಕಲ್ಲಿಗೆ ಕುಕ್ಕುವಂತೆ ನಾನು ಗೋತಮರಿಂದ ವೈರಾಗ್ಯ
ತೆಗೆದುಕೊಳ್ಳುತ್ತಿದ್ದೆನೆ.
25. ಶೋಕಭರಿತ ಮಾರನ ಕಂಕುಳಿನಿಂದ ವೀಣೆಯು ಕೆಳಕ್ಕೆ
ಜಾರಿತು. ಆ ಯಕ್ಷನು ದುಃಖಿತನಾಗಿ ಅಲ್ಲಿಯೇ ಅಂತಧರ್ಾನನಾದನು.
ಇಲ್ಲಿಗೆ ಪಧಾನ
ಸುತ್ತ ಮುಗಿಯಿತು.
No comments:
Post a Comment