5. ಚುಂದ ಸುತ್ತ
(ನಾಲ್ಕು ರೀತಿಯ ಸಮಣರು)
1. ಚುಂದ ಕಮ್ಮಾರ ಪುತ್ರ - ಮಹಾ ಪ್ರಾಜ್ಞಾವಂತ ಮುನಿ, ಧಮ್ಮಸ್ವಾಮಿ, ತೃಷ್ಣಾರಹಿತರು, ಮನುಷ್ಯರಲ್ಲಿ ಉತ್ತಮರು ಹಾಗು ಸಾರಥಿಗಳಲ್ಲಿ ಶ್ರೇಷ್ಠರಾದ ತಮ್ಮನ್ನು ಕೇಳುತ್ತೇನೆ. ಲೋಕದಲ್ಲಿ ಎಷ್ಟು ಬಗೆಯ ಸಮಣರಿದ್ದಾರೆ? ದಯವಿಟ್ಟು ಇದನ್ನು ತಿಳಿಸಿರಿ.
2. ಬುದ್ಧ ಭಗವಾನರು - ನಾಲ್ಕು ಪ್ರಕಾರದ ಸಮಣರಿದ್ದಾರೆ. ಐದನೆಯವರಿಲ್ಲ. ನೀನು ಕೇಳಿದಷ್ಟು ನಾನು ಹೇಳಿರುವೆ. ಅವೆಂದರೆ: (1) ಮಾರ್ಗಜಿನ (2) ಮಾರ್ಗದೇಶಿಕ (3) ಮಾರ್ಗಜೀವಿ (4) ಮಾರ್ಗದೂಷಿ.
3. ಚುಂದ ಕಮ್ಮಾರ ಪುತ್ರ - ಭಗವಾನರೇ, ಮಾರ್ಗಜಿನರೆಂದು ಯಾರಿಗೆ ಹೇಳುತ್ತಾರೆ? ಅತುಲನಿಯ ಮಾರ್ಗದೇಶಿಕರು ಹೇಗಿರುತ್ತಾರೆ? ನಾನು ಕೇಳಿದ್ದಕ್ಕಾಗಿ ಮಾರ್ಗಜೀವಿ ಹಾಗು ಮಾರ್ಗದೂಷಿಯವರನ್ನು ತಿಳಿಸಿ, ಪ್ರಕಟಪಡಿಸಿ.
4. ಭಗವಾನರು - ಯಾರು ಸಂದೇಹರಹಿತರೋ, ಸಂಸಾರದ ಮುಳ್ಳುಗಳಿಂದ ಮುಕ್ತರೋ, ನಿಬ್ಬಾಣದಲ್ಲಿ ಲೀನರೋ, ಆಸಕ್ತಿರಹಿತರೋ, ದೇವತೆಗಳ ಸಹಿತವಾಗಿ ಲೋಕನಾಥರೋ ಅವರನ್ನು ಬುದ್ಧರು ಮಾರ್ಗಜಿನ ಎನ್ನುತ್ತಾರೆ.
5. ಯಾರು ಪರಮಾರ್ಥವನ್ನು ಇಲ್ಲಿ ಅರಿತು ಇಲ್ಲಿಯೇ ಧಮ್ಮವನ್ನು ತಿಳಿಸುವರೋ ಹಾಗು ಅದರ ವ್ಯಾಖ್ಯಾನವನ್ನು ಮಾಡುವರೋ, ಅಂತಹ ಸಂದೇಹರಹಿತ, ತೃಷ್ಣಾಮುಕ್ತಿ ಮುನಿಯಾದ ಎರಡನೆಯವರನ್ನು ಮಾರ್ಗದಶರ್ಿ ಎಂದು ಹೇಳಲ್ಪಡುವರು.
6. ಯಾರು ಸುಉಪದೇಶಿತವಾದ ಧಮ್ಮಪದದ ಅನುಸಾರವಾಗಿ ಸಂಯಮಿತರಾಗಿ, ಹಾಗು ಸ್ಮೃತಿವಂತರಾಗಿ, ಮಾರ್ಗದಲ್ಲಿ ಜೀವಿಸುವರೋ, ನಿದರ್ೊಷಯುತ ಧಮ್ಮವನ್ನು ಪಾಲನೆ ಮಾಡುವರೋ ಆ ತೃತೀಯರನ್ನು ಮಾರ್ಗಜೀವಿ ಎನ್ನುತ್ತಾರೆ.
7. ಯಾರು ಶ್ರೇಷ್ಠ (ಕಾಷಾಯ) ವಸ್ತ್ರವನ್ನು ಧರಿಸಿಕೊಂಡು ಪಾಖಂಡಿ, ಕುಲದೂಷಿಕ, ವಂಚಕ, ಮಾಯಾವಿ, ಅಸಂಯಮಿ ಹಾಗು ಬಾಯಿಬಡುಕನಾಗಿರುವನೋ ಅಂತಹವನೇ ಮಾರ್ಗದೂಷಿಯಾಗಿರುತ್ತಾನೆ.
8. ಯಾರು ಪ್ರಜ್ಞಾವಂತರೋ, ಶ್ರುತವಂತರೋ ಅಂತಹ ಆರ್ಯಶ್ರಾವಕ ಗೃಹಸ್ಥರು ಇಂತಹವರನ್ನು ಕಂಡು ಎಲ್ಲರೂ ಈ ರೀತಿ (ಕಪಟಿ) ಇರುವುದಿಲ್ಲ. ಇದನ್ನು ಅರಿತು ಹಾಗು ಕಂಡು ತನ್ನ ಶ್ರದ್ಧೆ ಕ್ಷೀಣಿಸುವುದಿಲ್ಲ. ಹೇಗೆ ತಾನೇ ದುಷ್ಟರು ಶ್ರೇಷ್ಠರ ಸಮಾನವಾಗುತ್ತಾರೆ ಅಥವಾ ಅಶುದ್ಧರು ಶುದ್ಧರ ಸಮವಾಗುತ್ತಾರೆ?
ಇಲ್ಲಿಗೆ ಚುಂದ ಸುತ್ತ ಮುಗಿಯಿತು.
No comments:
Post a Comment