.110.
ಉಟ್ಠಾನ ಸುತ್ತ
(ಎದ್ದೇಳು, ಕುಳಿತುಕೋ ಹಾಗು ಚುಚ್ಚಿಕೊಂಡ ಮುಳ್ಳುಗಳನ್ನು ಕಿತ್ತು
ಬಿಸಾಡು)
1. ಎದ್ದೇಳು, ಕುಳಿತುಕೋ, ಮಲಗುವುದರಿಂದ (ನಿದ್ರಿಸುವುದರಿಂದ) ನಿನಗೇನು ಲಾಭ?
ಮುಳ್ಳುಗಳಿಂದ ಚುಚ್ಚಿಸಿಕೊಂಡ
ಪೀಡಿತ ರೋಗಿಗೆ ನಿದ್ರೆ ಏತಕ್ಕಾಗಿ ?
2. ಎದ್ದೇಳು, ಕುಳಿತುಕೋ, ದೃಢತೆಯ ಸಹಿತ ಶಾಂತಿ (ನಿಬ್ಬಾಣ)ಗಾಗಿ ಪರಿಶ್ರಮಿಸು.
ನಿನ್ನನ್ನು ಪ್ರಮತ್ತನೆಂದು ಅರಿತು, ಮೃತ್ಯುರಾಜನು
ಮೋಹಿತನನ್ನಾಗಿ ಮಾಡಿ ತನ್ನ ವಶಕ್ಕೆ ತೆಗೆದುಕೊಳ್ಳದಿರಲಿ.
3. ಯಾವ ತೃಷ್ಣೆಯಿಂದ ಬಂಧಿತರಾಗಿ, ದೇವತೆಗಳೂ ಹಾಗು ಮಾನವರು ಸದಾ ತಿರುಗುತ್ತಿದ್ದಾರೋ,
ಅದನ್ನು ದಾಟಿಹೋಗು, ನಿನ್ನ ಕ್ಷಣವು ಕಳೆದುಹೋಗದಿರಲಿ, ಅಮೂಲ್ಯ ಕ್ಷಣವನ್ನು ಕಳೆದುಕೊಂಡವರು ದುರ್ಗತಿಯಲ್ಲಿ
ಬಿದ್ದು ಶೋಕಿಸುವರು.
4. ಪ್ರಮಾದವು (ಅಜಾಗರೂಕತೆ, ಅಲಕ್ಷತೆ) ರಜವಾಗಿದೆ (ಕಶ್ಮಲ), ಪ್ರಮಾದದ ಕಾರಣದಿಂದ ರಜ ಉತ್ಪನ್ನ ಆಗುತ್ತದೆ.
ಅಪ್ರಮಾದಿ (ಜಾಗರೂಕ) ಹಾಗು ವಿದ್ಯೆಯಿಂದ ತನ್ನ ಮುಳ್ಳುಗಳನ್ನು (ದುಃಖ, ಜನ್ಮ) ಕಿತ್ತಿ ಬಿಸಾಡಲಿ.
ಇಲ್ಲಿಗೆ ಉಟ್ಠಾನ
ಸುತ್ತ ಮುಗಿಯಿತು.
No comments:
Post a Comment