1. ಅಜೀತ
ಮಾಣವ ಪುಚ್ಚ
(ಅಜೀತ
ಮಾಣವನ ಪ್ರಶ್ನಾವಳಿ)
1. ಅಜಿತ- ಸಂಸಾರವು ಯಾವುದರಿಂದ ಆವರಿಸಲ್ಪಟ್ಟಿದೆ? ಯಾವುದರಿಂದ ಪ್ರಕಾಶಿತವಾಗುವುದಿಲ್ಲ? ಯಾವುದಕ್ಕೆ ಲೇಪ (ಕಲೆ) ಎನ್ನುತ್ತೇವೆ? ಇದರಿಂದಾಗುವ ಮಹಾಭಯ
ಯಾವುದು?
2. ಭಗವಾನರು- ಸಂಸಾರವು ಅವಿದ್ಯೆಯಿಂದ ಆವರಿಸಲ್ಪಟ್ಟಿದೆ. ಲೋಭ ಹಾಗು
ಪ್ರಮಾದದ ಕಾರಣದಿಂದಾಗಿ ಇದು ಪ್ರಕಾಶಿತವಾಗುವುದಿಲ್ಲ. ತೃಷ್ಣಾ ಅಥವಾ ಲೋಭಕ್ಕೆ ನಾನು ಲೋಪ ಅಥವಾ
ಕಲೆ ಎನ್ನುತ್ತೇನೆ. ದುಃಖವೇ ಇದರಿಂದಾಗುವ ಮಹಾಭಯ ಆಗಿದೆ.
3. ಅಜಿತ- ಎಲ್ಲೆಡೆ ತೃಷ್ಣಾ ಸಂಬಂಧಿ ಧಾರೆಗಳು ಹರಿಯುತ್ತಿವೆ; ಈ ಧಾರೆಗಳ ನಿವಾರಣೆಯಾದರೂ ಏನು? ಈ ಧಾರೆಗಳ ಆವರಣವನ್ನು ತಿಳಿಸಿ ಹಾಗು ಈ ಧಾರೆಗಳು ಹೇಗೆ ನಿಂತು ಹೋಗುವುವು?
4. ಭಗವಾನರು- ಸಂಸಾರದಲ್ಲಿ ಎಷ್ಟೋ ಧಾರೆಗಳು ಇವೆಯೋ ಅವೆಲ್ಲಕ್ಕೂ
ಸ್ಮೃತಿಯೇ (ಜಾಗರೂಕತೆಯೇ) ನಿವಾರಣೆಯಾಗಿದೆ. ಎಚ್ಚರಿಕೆಯಿಂದಲೇ ಧಾರೆಗಳ ಆವರಣವಾಗುವುದು. ಈ
ಎಲ್ಲಾ ಧಾರೆಗಳು ಪ್ರಜ್ಞೆಯಿಂದಲೇ ನಿಂತುಹೋಗುವುವು.
5. ಅಜಿತ- ಹೇ ಪರಮಪೂಜ್ಯರೇ, ಪ್ರಜ್ಞಾ, ಸ್ಮೃತಿ ಮತ್ತು ನಾಮರೂಪ (ದೇಹ
ಮತ್ತು ಮನಸ್ಸು) ಅಂತ್ಯವು ಎಲ್ಲಿ ಆಗುವುದು? ದಯವಿಟ್ಟು ತಿಳಿಸಿ.
6. ಭಗವಾನರು- ಅಜಿತ ! ಯಾವ ಪ್ರಶ್ನೆಯನ್ನು ನೀನು ಕೇಳಿದೆಯೋ ಅದಕ್ಕೆ
ಉತ್ತರಿಸುವೆ ಆಲಿಸು. ಯಾವಾಗ ನಾಮರೂಪವು ಸಂಪೂರ್ಣವಾಗಿ ನಿರೋಧ ಆಗುವವೋ ಆಗಲೇ ವಿಞ್ಞಾಣದ
(ಪ್ರಜ್ಞಾ/ಸ್ಮೃತಿ) ನಿರೋಧವೂ ಆಗುವುದು.
7. ಅಜಿತ - ಯಾರು ಎಲ್ಲವನ್ನು ಅರಿತಿರುವಂತಹ ಸಂಖತಧಮ್ಮ ಅರಿತಂಥಹವರ ಹಾಗು
ಯಾರು ಇನ್ನೂ ಶಿಕ್ಷಣ ಪಡೆಯುತ್ತಿರುವಂತಹ ಸೇಖರೋ ಹಾಗು ಸಾಮಾನ್ಯ ಗೃಹಸ್ಥರೋ (ಪುಥುಜ್ಜನ),
ಇವರೆಲ್ಲರೂ ಪಾಲಿಸಬೇಕಾದ ಚಯರ್ೆಗಳು ಯಾವುವು ತಿಳಿಸಿ, ಓ ಪೂಜ್ಯರೇ.
8. ಭಗವಾನರು- ಕಾಮಭೋಗಗಳಲ್ಲಿ ಲಿಪ್ತನಾಗದಿರುವುದು, ಮನಸ್ಸನ್ನು ನಿರ್ಮಲವಾಗಿಡುವುದು, ಸರ್ವ ಧರ್ಮಗಳಲ್ಲಿ ಕುಶಲನಾಗಿರುವುದು, ಹೀಗಿದ್ದು
ಭಿಕ್ಷುವು ಸ್ಮೃತಿವಂತನಾಗಿ ಸಂಚರಿಸಲಿ.
ಇಲ್ಲಿಗೆ ಅಜಿತ ಮಾಣವ
ಪ್ರಶ್ನೆಗಳು ಮುಗಿಯಿತು.
No comments:
Post a Comment