2. ತಿಸ್ಸ
ಮೇತ್ತೇಯ್ಯ ಮಾಣವ ಪುಚ್ಚಾ)
(ತಿಸ್ಸಮೇತ್ತೇಯ್ಯ
ಮಾಣವನ ಪ್ರಶ್ನಾವಳಿ)
1. ತಿಸ್ಸಮೆತ್ತೆಯ್ಯ- ಈ ಲೋಕದಲ್ಲಿ ಸಂತುಷ್ಟನಾರು? ಯಾರಲ್ಲಿ ಚಂಚಲತೆಯು ಇರುವುದಿಲ್ಲ, ಯಾವ ಜ್ಞಾನಿಯು ಎರಡು ಅತಿರೇಕದ ಹಂತಗಳನ್ನು ಅರಿತು ಮಧ್ಯೆಯಲ್ಲಿಯೂ ಲಿಪ್ತನಾಗುವುದಿಲ್ಲ?
ಯಾರಿಗೆ ಮಹಾಪುರುಷನೆಂದು ಕರೆಯುತ್ತಾರೆ. ಹಾಗು ಯಾರು ತೃಷ್ಣೆಗೆ
ಅತೀತನಾಗಿದ್ದಾನೆ?
2. ಭಗವಾನರು- ಯಾರು ಕಾಮಭೋಗಗಳನ್ನು ತ್ಯಾಗ ಮಾಡಿದ ಬ್ರಹ್ಮಚಾರಿಯೋ,
ತೃಷ್ಣಾರಹಿತನೋ, ಸ್ಮೃತಿವಂತನೋ ಹಾಗು
ಯಾವ ಭಿಕ್ಷು ಪ್ರಜ್ಞಾದಿಂದ ವಿಮುಕ್ತಿಸಾಧಿಸಿರುವನೋ, ಅಂತಹವನಲ್ಲಿ ಚಂಚಲತೆಯಿರದೆ ಅಕ್ರೋಧನಾಗಿರುತ್ತಾನೆ.
3. ಅಂತಹ ಜ್ಞಾನಿಯೇ ಎರಡು ಅತಿರೇಕದ ಹಂತಗಳನ್ನು ಅರಿತು ಮಧ್ಯೆಯಲ್ಲಿಯೂ
ಲಿಪ್ತನಾಗಲಾರ. ಅಂತಹವನನ್ನು ಮಹಾಪುರುಷನೆಂದು ಕರೆಯುತ್ತಾರೆ. ಹಾಗು ಆತನೇ ತೃಷ್ಣೆಗೆ
ಅತೀತನಾಗಿರುತ್ತಾನೆ.
ಇಲ್ಲಿಗೆ ತಿಸ್ಸಮೇತ್ತೇಯ್ಯ
ಮಾಣವ ಪ್ರಶ್ನೆಗಳು ಮುಗಿಯಿತು.
No comments:
Post a Comment