14. ಪೋಸಾಲ
ಮಾಣವ ಪುಚ್ಛಾ (ಪೋಸಾಲ ಮಾಣವನ ಪ್ರಶ್ನಾವಳಿ)
1. ಪೋಸಾಲ- ಯಾವ ಭಗವಾನರು ಅತೀತದಲ್ಲಿ ನಡೆದ ಎಲ್ಲವನ್ನೂ ಹೇಳುವರೋ,
ಯಾರು ಚಾಂಚಲ್ಯರಹಿತರೋ, ಯಾರು ಸಂಶಯಗಳನ್ನು ಛಿದ್ರಗೊಳಿಸಿರುವರೋ, ಸರ್ವ ಧರ್ಮಗಳಲ್ಲಿ
ಪಾರಂಗತರೋ, ಅಂತಹ ತಮ್ಮಲ್ಲಿ ನಾನು ಪ್ರಶ್ನಿಸಲು ಬಂದಿರುವೆನು.
2. ಹೇ ಶಕ್ರರೇ, ರೂಪ (ದೇಹ)
ಸಂಜ್ಞೆಗಳಿಂದ ರಹಿತರಾಗಿರುವ ಸರ್ವರೀತಿ ದೇಹಭಾವಗಳನ್ನು ತೊರೆದಿರುವ ಸರ್ವ ಅರೂಪಿ (ದೇಹಾತೀತ)
ಸಂಜ್ಞೆಗಳಿಂದ ಮುಕ್ತರಾಗಿರುವ, ಆಂತರ್ಯದಲ್ಲೂ ಹಾಗು
ಬಾಹ್ಯದಲ್ಲೂ ಏನೂ ಇಲ್ಲ ಎಂದು ವೀಕ್ಷಿಸುವ ಜ್ಞಾನದ ಬಗ್ಗೆ ಕೇಳುತ್ತಿರುವೆ. ಅಂತಹ ವ್ಯಕ್ತಿಯು
ಮುಂದೆ ಎಂತಹ ಜ್ಞಾನವನ್ನು ಉತ್ಪನ್ನಗೊಳಿಸಬೇಕು.
3. ಭಗವಾನರು- ವಿಞ್ಞಾನದ (ಮನಸ್ಸಿನ/ಅರಿವಿನ) ಸರ್ವ ಅವಸ್ಥೆಯ
ಸ್ಥಿತಿಗಳನ್ನು ಅರಿತಿರುವಂತಹ ತಥಾಗತರು ಸ್ಥಿರವಿಮುಕ್ತ ಹಾಗು ವಿಮುಕ್ತಿಯೆಡೆಗೆ ಧಾವಿಸುತ್ತಿರುವ
ವ್ಯಕ್ತಿಗಳನ್ನು ಅರಿತಿದ್ದಾರೆ.
4. ಅಕಿಂಚಾಯತನವನ್ನು ಉತ್ಪನ್ನಗೊಳಿಸುವಂತಹುದು ಎಂದರಿತು, ರಾಗವನ್ನು ಬಂಧನವೆಂದು ಪರಿಗಣಿಸಿ ಇಂತಹ ಜ್ಞಾನಿಯು ಇದನ್ನು ಮೀರಿ
ವಿಪಶ್ಶನ ಧ್ಯಾನ ಮಾಡುತ್ತಾನೆ. ಅಂತಹ ಪೂರ್ಣತೆಯನ್ನು ಪ್ರಾಪ್ತಿಗೊಳಿಸಿದ ಬ್ರಾಹ್ಮಣನ ಜ್ಞಾನವು
ಯಥಾರ್ಥವಾಗಿರುತ್ತದೆ.
ಇಲ್ಲಿಗೆ ಪೋಸಾಲ ಮಾಣವ
ಪುಚ್ಛಾ ಮುಗಿಯಿತು
No comments:
Post a Comment