11. ಜತುಕಣ್ಣಿ
ಮಾಣವ ಪುಚ್ಛಾ (ಜತುಕಣ್ಣಿ ಮಾಣವನ ಪ್ರಶ್ನಾವಳಿ)
1. ಜತುಕಣ್ಣಿ- ಹೇ ಸರ್ವಜ್ಞರೇ, ನಾನು ತಮ್ಮನ್ನು ನಿಷ್ಕಾಮಿಗಳು ಹಾಗು ಜನ್ಮ ಪ್ರವಾಹವನ್ನು ದಾಟಿದವರು ಎಂದು ಕೇಳಿ
ಪ್ರಶ್ನಿಸಲು ಬಂದಿರುವೆ. ಭಗವಾನರು ನನಗೆ ಶಾಂತಿಪಥದ ಕುರಿತು ಯತಾರ್ಥವಾಗಿ ತಿಳಿಸಿ.
2. ಹೇಗೆ ಸೂರ್ಯನು ತನ್ನ ತೇಜಸ್ಸಿನಿಂದ ಪೃಥ್ವಿಯನ್ನು ಪ್ರಕಾಶಿಸುವನೋ,
ಅದೇರೀತಿಯಲ್ಲಿ ಭಗವಾನರು ಸಹಾ ಕಾಮವಿಜೇತರಾಗಿ ಪ್ರಕಾಶಮಾನರಾಗಿ ವಿಹರಿಸುವರು.
ಹೇ ಮಹಾಪ್ರಜ್ಞಾರೇ, ನನ್ನಂತ ಅಲ್ಪ ಪ್ರಜ್ಞನಿಗೆ
ಧಮ್ಮವನ್ನು ತಿಳಿಸಿ, ಅದರಿಂದಾಗಿ ನಾನು ಜನ್ಮ ಹಾಗು
ಜರಾದಿಂದ ಪಾರಾಗುವುದಕ್ಕೆ ತಿಳಿಯುವಂತಾಗಲಿ.
3. ಭಗವಾನರು- ನಿಷ್ಕಾಮವನ್ನೇ ಕಲ್ಯಾಣಕಾರಕವೆಂದು ನೋಡುತ್ತಾ, ಕಾಮ ಭೋಗಗಳ ಬಗ್ಗೆ ಆಸಕ್ತಿಯನ್ನು ತ್ಯಾಗಮಾಡು. ನಿನ್ನಲ್ಲಿ ಪಡೆಯಲು
ಅಥವಾ ತ್ಯಾಗಮಾಡಲು ಏನೂ ಉಳಿಯದಿರಲಿ.
4. ಈ ಹಿಂದೆ ಯಾವ ಪೂರ್ವ ವಾಸನೆಗಳಿದ್ದವೋ ಅವೆಲ್ಲವನ್ನು ನಷ್ಟಗೊಳಿಸು,
ಕ್ಷಯಗೊಳಿಸು ಹಾಗು ಅದರ ಹಿಂದೆ ಯಾವುದನ್ನೂ (ಭವಿಷ್ಯದಲ್ಲಿಯೂ ಯಾವ
ಹೊಸ ವಾಸನೆಯನ್ನು) ಹಿಡಿಯಬೇಡ. ಹೀಗೆ ಯಾವುದರಲ್ಲಿಯೂ (ಈಗಲೂ) ಯಾವ ಗ್ರಹಣವನ್ನು ಮಾಡದೆ ಹೋದಾಗ
ಉಪಶಾಂತನಾಗಿ ವಿಹರಿಸುವೆ.
5. ಹೇ ಬ್ರಾಹ್ಮಣನೇ, ಯಾರು ಸರ್ವಪ್ರಕಾರದ
ನಾಮರೂಪದ (ದೇಹ ಮನಸ್ಸಿನ) ಬಗ್ಗೆ ತೃಷ್ಣಾರಹಿತನೋ, ಅಂತಹವನಲ್ಲಿ ಮೃತ್ಯುವಿಗೆ ವಶನಾಗುವಂತಹ ವಾಸನೆಗಳು ಇರುವುದಿಲ್ಲ.
ಇಲ್ಲಿಗೆ ಜತುಕಣ್ಣಿ ಮಾಣವ
ಪ್ರಶ್ನಾವಳಿ ಮುಗಿಯಿತು.
No comments:
Post a Comment