9. ತೋದೆಯ್ಯಾ
ಮಾಣವ ಪುಚ್ಛಾ (ತೋದೆಯ್ಯಾ ಮಾಣವನ ಪ್ರಶ್ನಾವಳಿ)
1. ತೋದೆಯ್ಯಾ- ಯಾರಲ್ಲಿ ವಾಸನೆಗಳಿಲ್ಲವೋ, ಯಾರಲ್ಲಿ ತೃಷ್ಣೆ ಇಲ್ಲವೋ ಹಾಗು ಯಾರು ಸಂದೇಹದೂರನೋ, ಅಂತಹವನ ವಿಮೋಕ್ಷ ಯಾವರೀತಿ ಇರುತ್ತದೆ ?
2. ಭಗವಾನರು- ಯಾರಲ್ಲಿ ವಾಸನೆಗಳು ಇಲ್ಲವೋ, ಯಾರಲ್ಲಿ ತೃಷ್ಣೆಯು ಇಲ್ಲವೋ ಹಾಗು ಯಾರು ಸಂದೇಹಾತೀತನೋ, ಅಂತಹವನಿಗೆ ಬೇರೆ ಯಾವ ವಿಮೋಕ್ಷವೂ ಇಲ್ಲ. (ಅಂದರೆ ಆತನಾಗಲೇ ವಿಮೋಕ್ಷ ಸಾಧಿಸಿದ್ದಾನೆ
ಎಂದರ್ಥ.)
3. ತೋದೆಯ್ಯಾ- ಆತನು ತೃಷ್ಣಾರಹಿತನೋ ಅಥವಾ ತೃಷ್ಣಾಯುಕ್ತನೋ? ಆತನು ಪ್ರಜ್ಞಾವಂತನೋ ಅಥವಾ ಪ್ರಜ್ಞಾದ ಪ್ರಾಪ್ತಿಯಲ್ಲಿ ತೊಡಗಿದ್ದಾನೋ
ಹೇ ಸಮಂತಚಕ್ಷರೇ, ತಾವೇ ತಿಳಿಸಿ, ಇಂತಹವರಲ್ಲಿ ನಾನು ಮುನಿಯನ್ನು ಹೇಗೆ ಕಂಡುಹಿಡಿಯಲಿ.
4. ಭಗವಾನರು- ಹೇ ತೊದೆಯ್ಯಾ, ಯಾರು ಅಕಿಂಚನನೋ (ಏನನ್ನೂ ಹೊಂದಿಲ್ಲವೋ), ಇಂದ್ರಿಯಗಳಲ್ಲಿ
ಅನಾಸಕ್ತನಾಗಿರುತ್ತಾನೋ ಅಂತಹವನಿಗೆ ಮುನಿಯೆಂದು ಭಾವಿಸು. ಆಗ ನಿನಗೆ ತೃಷ್ಣಾರಹಿತನ್ಯಾರು,
ತೃಷ್ಣಾಸಹಿತನ್ಯಾರು, ಪ್ರಜ್ಞಾವಂತನ್ಯಾರು,
ಪ್ರಜ್ಞೆಗೆ ಪ್ರಯತ್ನಶಾಲಿಪಡುವವನ್ಯಾರು ಎಂದು ತಿಳಿದು ಹೋಗುವುದು.
ಇಲ್ಲಿಗೆ ತೋದೆಯ್ಯಾ ಮಾಣವ
ಪ್ರಶ್ನಾವಳಿ ಮುಗಿಯಿತು
No comments:
Post a Comment