16. ಪಿಂಗಿಯ
ಮಾಣವ ಪುಚ್ಛಾ (ಪಿಂಗಿಯ ಮಾಣವನ ಪ್ರಶ್ನೆಗಳು)
1. ಪಿಂಗಿಯಾ- ನಾನು ಜೀಣರ್ಾವಸ್ಥೆಯಲ್ಲಿಹೆನು, ದುರ್ಬಲನೂ ಹೌದು. ನನ್ನ ಸುಂದರತೆ ಹೋಗುತ್ತಲಿದೆ. ನನ್ನ ಕಂಗಳು ಸರಿಯಾಗಿ ಕಾಣಿಸುತ್ತಿಲ್ಲ.
ಕಿವಿಗಳು ಸಹಾ ಸ್ಪಷ್ಟವಾಗಿ ಆಲಿಸದು. ನನಗೆ ಧಮ್ಮೋಪದೇಶ ನೀಡಿ. ಅದರಿಂದಾಗಿ ನಾನು ಜನ್ಮ ಜರಾ
ಬಂಧನದಿಂದ ಪಾರಾಗುವಂತಾಗಲಿ. ಹಾಗು ಮಧ್ಯದಲ್ಲಿ ಮೋಹದ ಜೊತೆಯಲ್ಲಿಯೇ ಸಾಯದೆ ಹೋಗುವಂತಾಗಲಿ.
2. ಭಗವಾನರು- ದೇಹದ ಕಾರಣದಿಂದಾಗಿ ಚಿಂತಿತರಾಗಿರುವ, ದೇಹದ ಕಾರಣದಿಂದಲೇ ನಾಶವಾಗುತ್ತಿರುವ ಅಜಾಗರೂಕ ಜನತೆಯನ್ನು ನೋಡುತ್ತಾ
ಓ ಪಿಂಗಿಯಾ! ಅಪ್ರಮತ್ತನಾಗು, ಜಾಗರೂಕನಾಗಿ ದೇಹದ
ಮೋಹವನ್ನು ಅಂತ್ಯಗೊಳಿಸು. ಅದರಿಂದಾಗಿ ಭವ ಅಂತ್ಯವಾಗಲಿ.
3. ಪಿಂಗಿಯ- ನಾಲ್ಕು ದಿಕ್ಕುಗಳು, ಮತ್ತೆ ನಾಲ್ಕು ಅನು ದಿಕ್ಕುಗಳು (ಮೂಲೆ ದಿಕ್ಕುಗಳು) ಊದ್ರ್ವ ಹಾಗೂ ಅಧೋ ದಿಕ್ಕು. ಹೀಗೆ
ಯಾವೆಲ್ಲಾ ಲೋಕಗಳಲ್ಲಿ ದಿಕ್ಕುಗಳಿವೆಯೋ, ಅವುಗಳಲ್ಲೆಲ್ಲಾ
ಯಾವುದು ಸಹಾ ತಮ್ಮಿಂದ ಅದೃಷ್ಯವಾಗಿಲ್ಲ (ಎಲ್ಲವನ್ನು ನೋಡಿದ್ದೀರಿ), ಅಶ್ರುತವಾಗಿಲ್ಲ (ಎಲ್ಲವನ್ನು ಅರಿತಿದ್ದೀರಿ), ಅಪರಿಚಿತವಾಗಿಲ್ಲ ಅಥವಾ ಅಜ್ಞಾತವಾಗಿಲ್ಲ. ಆದ್ದರಿಂದ ತಾವು ನನಗೆ ಧಮ್ಮ ತಿಳಿಸಿ. ಅದನ್ನು
ಅರಿತು ನಾನು ಜನ್ಮ ಹಾಗು ಜರಾಗಳ ಅಂತ್ಯ ಮಾಡುವಂತಾಗಲಿ.
4. ಭಗವಾನರು- ಹೇ ಪಿಂಗಿಯಾ! ತೃಷ್ಣೆಗೆ ವಶೀಭೂತರಾಗಿರುವ ಹೀಗೆಯೇ ಸಾಗಿ
ದುಃಖಿತರಾಗಿರುವ, ವೃದ್ಧಾಪ್ಯದಿಂದಾಗಿ
ಚಿಂತಾಕ್ರಾಂತರಾಗಿರುವ ಈ ಮನುಜರನ್ನು ನೋಡಿ, ನೀನು ಪಿಂಗಿಯಾ!
ಅಪ್ರಮತ್ತನಾಗು. ಪುನಃ ಪುನಃ ಜನ್ಮ ತಾಳದಿರಲು ಈ ತೃಷ್ಣೆಯನ್ನು ತ್ಯಾಗ ಮಾಡಿಬಿಡು.
ಇಲ್ಲಿಗೆ ಪಿಂಗಿಯ ಮಾಣವ
ಪ್ರಶ್ನೆಗಳು ಮುಗಿಯಿತು.
No comments:
Post a Comment