8. ಹೇಮಕ
ಮಾಣವ ಪುಚ್ಛಾ (ಹೇಮಕ ಮಾಣವನ ಪ್ರಶ್ನಾವಳಿ)
1. ಹೇಮಕ- ಓ ಭಗವಾನ್, ತಮ್ಮ ಶಾಸನದ ಬಗ್ಗೆ
ಈ ಮೊದಲು ಹಲವಾರು ಜನರು ತಿಳಿಸಿದ್ದರು. ಅವರೆಲ್ಲಾ ಹೀಗೆ ಹೇಳಿದ್ದರು- ಹೀಗಿತ್ತು, ಹೀಗಾಗುವುದು. ಇವೆಲ್ಲಾ ಮಾತುಗಳು ಕಲ್ಪಿತ ಹಾಗು ತರ್ಕಗಳನ್ನು
ಹೆಚ್ಚಿಸುವಂತಾಗಿತ್ತು, ಸಂಶಯಗಳನ್ನು
ವೃದ್ಧಿಸುವಂತಿತ್ತು. ಹೀಗಾಗಿ ಅದರಲೆಲ್ಲಾ ನನ್ನ ಮನಸ್ಸು ಆನಂದಿಸಲಿಲ್ಲ.
2. ಹೇ ಮುನಿಗಳೇ, ತಾವು ನನಗೆ
ತೃಷ್ಣೆಯನ್ನು ನಷ್ಟಗೊಳಿಸುವಂತಹ ಧಮ್ಮವನ್ನು ತಿಳಿಸಿ. ಯಾವ ಜ್ಞಾನದ ಹಾಗೂ ಸ್ಮೃತಿಯ ರೀತಿಯಲ್ಲಿ
ಜೀವಿಸುವುದರಿಂದಾಗಿ ಲೋಕದಲ್ಲಿ ತೃಷ್ಣೆಯಿಂದ ಮುಕ್ತನಾಗುತ್ತಾನೆ.
3. ಭಗವಾನರು- ಹೇ ಹೇಮಕ, ಯಾವುದೆಲ್ಲಾ
ನೋಡಿದ್ದೀಯೋ, ಕೇಳಿರುವೆಯೋ, ಯೋಚಿಸಿರುವೆಯೋ, ಅನುಭವಿಸಿರುವೆಯೋ
ಅವೆಲ್ಲಾ ಇಂದ್ರಿಯ ವಿಷಯಗಳ ಬಗ್ಗೆ ಆಸಕ್ತಿ ದೂರೀಕರಿಸು. ಪ್ರಿಯವಾದವುಗಳಿಗೆ ಅಂಟದೆ ಹೋಗು,
ಈ ರೀತಿಯಲ್ಲಿ ಯಾವುದಕ್ಕೂ ಅಂಟದ ಸ್ಥಿತಿಯೇ ಅದ್ಭುತವಾದ ನಿಬ್ಬಾಣದ
ಪದವಾಗಿದೆ.
4. ಇದನ್ನು ಅರಿತ ಸ್ಮೃತಿವಂತರ ಜನ್ಮವು ಶಾಂತವಾಗಿದೆ, ಸದಾ ಉಪಶಾಂತರಾದ ಅವರೆಲ್ಲಾ ಲೋಕದಲ್ಲಿ ತೃಷ್ಣೆಗೆ ಅತೀತರಾಗಿ
ಹೋಗಿರುವರು.
ಇಲ್ಲಿಗೆ ಹೇಮಕ ಮಾಣವ
ಪ್ರಶ್ನಾವಳಿ ಮುಗಿಯಿತು.
No comments:
Post a Comment