Tuesday 13 August 2019

Girimananda sutta in kannada ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

      ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಪೂಜ್ಯ ಗಿರಿಮಾನಂದರು ಅಸ್ವಸ್ಥರಾಗಿದ್ದರು. ಅವರ ಆರೋಗ್ಯ ತೀರ ಕೆಟ್ಟಿತ್ತು. ಆಗ ಪೂಜ್ಯ ಆನಂದರವರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತು ಹೀಗೆ ನುಡಿದರು: :
 ಭಗವಾನ್ ಅಯುಷ್ಮಂತ ಗಿರಿಮಾನಂದರು ತೀರ ಅಸ್ವಸ್ಥರಾಗಿದ್ದಾರೆ ಅವರ ಆರೋಗ್ಯ ಗಂಭಿರವಾಗಿದೆ. ಅದ್ದರಿಂದ ಭಗವಾನರು ಅನುಕಂಪೆಯುಳ್ಳವರಾಗಿ ಅಲ್ಲಿಗೆ ಹೋಗುವಂತಾಗಲಿ.
ಆನಂದ ನೀನು ಆಯುಷ್ಮಂತ ಗಿರಿಮಾನಂದನಲ್ಲಿಗೆ ಹೋಗಿ ಈ 10 ಬಗೆಯ ಸಞ್ಞಗಳನ್ನು (ಸಂಜ್ಞೆ/ಗ್ರಹಿಕೆ) ಪಠಿಸಿದ್ದೆ ಆದರೆ , ಅದನ್ನು ಆಲಿಸಿ, ಅದರ ಬಗ್ಗೆ ಮನಸ್ಸು ಹರಿಸಿ ಆತನ ಚಿತ್ತವು ಸಕಾರಾತ್ಮಕವಾಗಿ ಆತನ ರೋಗವು ಆ ಸ್ಥಳದಲ್ಲಿಯೆ ಆ ಕ್ಷಣವೇ ಇಲ್ಲದಂತಾಗುವುದು.

 ಆನಂದ ಯಾವುವವು 10 ?ಅವೆಂದರೆ 

1. ಅನಿತ್ಯದ ಸಂಜ್ಞೆ
2. ಅನತ್ತ (ಆನಾತ್ಮದ ) ಸಂಜ್ಞೆ
3. ಅಶುಭದ ಕುರೂಪ (ಸಂಜ್ಞೆ)
4. ಅದಿನವದ (ಅನಾನುಕೂಲಗಳ) ಸಂಜ್ಞೆ
5. ಪಹಾನದ (ತೇಜಿಸಬೇಕಾದುದರ ಬಗ್ಗೆ ) ಸಂಜ್ಞೆ
6. ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ
7. ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ
8. ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ
9. ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ
10. ಅನಾಪಾನ ಸತಿ

1.ಮತ್ತೆ ಯಾವುದು ಅನಿತ್ಯದ ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ ದೇಹವಾಗಲಿ, ಭಾವವೇಶಗಳಾಗಲಿ (ವೇದನೆ), ಸಂಜ್ಞೇಗಳಾಗಲಿ, ಸಂಖಾರಗಳಾಗಲಿ(ಇಚ್ಚೆ) ಮತ್ತು ವಿಜ್ಞಾಣ(ಮನಸ್ಥಿತಿ/ಅರಿವು)ಗಳಾಗಲಿ ಇವೆಲ್ಲವೂ ಅನಿತ್ಯವಾಗಿದೆ ಹೀಗೆ ಆತನು ಪಂಚಖಂದಗಳಲ್ಲಿ ಅನಿತ್ಯಗಳನ್ನು ಧ್ಯಾನದಲ್ಲಿ ಕಾಣುವನು.. ಇದಕ್ಕೆ ಅನಿತ್ಯದ ಸಂಜ್ಞೆ ಎನ್ನುವರು.

 2. ಮತ್ತೆ ಯಾವುದು ಅನತ್ತ (ಆನಾತ್ಮದ ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಕಣ್ನು ಆಗಲಿ ಅಥವಾ ಅವುಗಳಿಂದ ನೋಡಲ್ಪಡುವ ರೂಪಗಳಾಗಲಿ ಹಾಗೆಯೇ ಕಿವಿ ಮತ್ತು ಶಬ್ದಗಳು: ; ಮೂಗು ಮತ್ತು ವಾಸನೆಗಳು ; ನಾಲಿಗೆ ಮತ್ತು ಸ್ವಾದಗಳು :ದೇಹ ಮತ್ತು ಸ್ಪರ್ಷಗಳು ; ಮತ್ತು ಮನಸ್ಸು ಮತ್ತು ಮಾನಸಿಕ ವಿಷಯಗಳು. ಇವು ಯಾವುವು ಸಹಾ ನಾನಲ್ಲ ,ನನ್ನದಲ್ಲ, ನನ್ನ ಆತ್ಮವಲ್ಲ, ಎಂದು ಅರಿಯುವುದು. ಹೀಗೆ ಆರು ಇಂದ್ರಿಯಗಳು ಹಾಗೂ ಅವುಗಳ ವಿಷಯಗಳಲ್ಲಿ ಆನಾತ್ಮವನ್ನು ಕಾಣುವುದು ಅಂದರೆ ಆವು ಯಾವುದರಲ್ಲಿಯೂ ಸಹಾ ಆತ್ಮವನ್ನು (ಸ್ವಯಂ/ನಾನು/ನನ್ನದು) ಕಾಣದಿರುವುದು.

   3. ಮತ್ತೆ ಯಾವುದು ಅಶುಭದ (ಕುರೂಪ )ಸಂಜ್ಞೆ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಪಾದತಳದಿಂದ ಹಿಡಿದು ತಲೆಕೂದಲವರೆವಿಗೂ ಈ ಶರೀರವೂ ಚರ್ಮದಿಂದ ಆವೃತವಾದ ಅನೇಕ ಬಗೆಯ ಅಸಹ್ಯತೆಗಳಿಂದ  ಕೂಡಿರುವುದನ್ನು ಹೀಗೆ ಪರಿಕ್ಷಿಸುತ್ತಾನೆ.  ಈ ಶರೀರದಲ್ಲಿ ತಲೆಕೂದಲು, ಶರೀರದ ಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆಗಳು,, ಅಸ್ಥಿಮಜ್ಜೆ, , ಮೂತ್ರಪಿಂಡ, ಹೃದಯ, ಯಕೃತ್, ದ್ವನಿಪೆಟ್ಟಿಗೆ, ಗುಲ್ಮ, ಶ್ವಾಸಕೋಶ, ಕರುಳು, ಜಠರ, ಜೀರ್ಣವಾಗದ ಆಹಾರ, ಮಲ, ಪಿತ್ತ,, ಕಫ, ಕೀವು,, ರಕ್ತ, ಬೆವರು, ,ಕೊಬ್ಬು, ಆಶ್ರು, ಮೆದಸ್ಸು, ಜೊಲ್ಲು, ಗೊಣ್ಣೆ, ಕೀಲುಗಳ ಮಧ್ಯೆಯಿರುವ ಎಣ್ಣೆ, ಮೂತ್ರ, ಇತ್ಯಾದಿಗಳು ಇವೆ. ಹೀಗೆ ಶರೀರದ ಕುರೂಪವನ್ನು ಅರಿಯುತ್ತ ಅಸಹ್ಯಕರದ ಸಂಜ್ಞೆಗಳನ್ನು ಅರಿಯುತ್ತ ಬೆಳಸುತ್ತಾನೆ. ಇದನ್ನು ಅಶುಭದ ಸಂಜ್ಞೆ ಎನ್ನುವರು.


   4. ಮತ್ತೆ ಯಾವುದು ಅದಿನವದ (ಅನಾನುಕೂಲಗಳ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಈ ಶರೀರವು ಬಹಳಷ್ಟು ದುಃಖಗಳನ್ನು ಮತ್ತು ಹಲವಾರು ಅನಾನುಕೂಲಗಳನ್ನು ಹೊಂದಿದೆ. ಅದರಿಂದಾಗಿಯೇ ಈ ಶರೀರವು ಬಹಳಷ್ಟು ವಿಧದ ಕಾಯಿಲೆಗಳಿಗೆ ಗುರಿಯಾಗುವುದು, ಉದಾಹರಿಸುವುದಾದರೆ ಕಣ್ಣಿನ ಕಾಯಿಲೆ, ಒಳಕಿವಿಯ ಕಾಯಿಲೆ, ಮೂಗಿನ ಕಾಯಿಲೆ, ನಾಲಿಗೆಗೆ ಸಂಬಂಧ ಪಟ್ಟ ಕಾಯಿಲೆಗಳು, ದೇಹ, ತಲೆ, ಕಿವಿ, ಹಲ್ಲುನೋವು,  ಮತ್ತು ತುಟಿಗಳ ಕಾಯಿಲೆ, ಕೆಮ್ಮು, ಅಸ್ತಮ, ನೆಗಡಿ, ಉರಿ, ಜ್ವರ, ಹೊಟ್ಟೆನೋವು, ತಲೆತಿರುಗುವಿಕೆ, ಆಮಶಂಕೆ, ಜಠರ ನೋವು, ಕಾಲೆರಾ, ಕುಷ್ಠರೋಗ, ಗುಳ್ಳೆಗಳು, ಚರ್ಮರೋಗಗಳು, ಕ್ಷಯರೋಗ, ಮೂಚರ್ೆರೋಗ,, ಸರ್ಪಸುತ್ತು ಚರ್ಮ ರೋಗ, ತುರಿಕೆ, ಕಜ್ಜಿ, ಸಿಡುಬು ರೋಗ, ಹಕ್ಕಳೆ ರೋಗ, ರಕ್ತಸ್ರಾವ, ಮಧುಮೇಹ, ಮೂಲವ್ಯಾಧಿ, ಮೊಡಮೆ, ಮತ್ತು ಕೀವು ವ್ರಣ, ಪಿತ್ತ ಅಥವಾ ಕಫ ಅಥವಾ ವಾತದ ಅವ್ಯವಸ್ಥೆಯಿಂದಾಗುವ ರೋಗಗಳು, ವಾತವರಣದ ಅವ್ಯವಸ್ಥೆಯಿಂದಾಗುವ ರೋಗಗಳು, ನಿರ್ಲಕ್ಷತೆಯಿಂದ ಉಂಟಾಗುವ ರೋಗಗಳು, ಅತಿಶ್ರಮದಿಂದ ಅಥವಾ ಹಿಂದಿನ ಕಮ್ಮಗಳಿಂದ ಉಂಟಾಗುವ ರೋಗಗಳು, ಚಳಿ, ಉಷ,, ಹಸಿವು, ಬಾಯಾರಿಕೆ, ನಿರ್ಜಲಿಕರಣ, ಮೂತ್ರವ್ಯಾದಿಗಳು, ಮತ್ತು ಇತ್ಯಾದಿ. ಹೀಗೆ ಹಲವಾರು ದೋಷಗಳಿಂದ ಕೋಡಿರುವ ಶರೀರವನ್ನು ವೀಕ್ಷಿಸುತ್ತಾನೆ, ಇದಕ್ಕೆ ಶರೀರದ ಅನಾನೂಕಲಗಳ ಸಂಜ್ಞೆ ಎನ್ನುತ್ತಾರೆ.

5. ಮತ್ತೆ ಯಾವುದು ಪಹಾನದ (ತೇಜಿಸಬೇಕಾದುದರ ಬಗ್ಗೆ )ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಕಾಮುಕತೆಗಳ ಯೋಚನೆಗಳಾಗಲಿ, ಅಥವಾ ದ್ವೇಷಗಳ ಯೋಚನೆಗಳಾಗಲಿ ಅಥವಾ ಹಿಂಸೆ(ಕ್ರೂರತೆ )ಗಳ ಯೋಚನೆಗಳಾಗಲಿ ಅವು ಉಂಟಾದಾಗ ಸಹಿಸುವುದಿಲ್ಲ, ಅಕುಶಲ ಯೋಚನೆಗಳು ಯಾವುವೇ ಆಗಲಿ ಅವು ಉದಯಿಸುವಾಗ ಸಹಿಸಲಾರನು, ಬದಲಾಗಿ ಅವುಗಳನ್ನು ತೊರೆಯುತ್ತಾನೆ, ತೆಗೆದು ಹಾಕುತ್ತಾನೆ, ಇನ್ನಿಲ್ಲದಂತೆ ಮಾಡುತ್ತಾನೆ, ಮತ್ತು ನಿನರ್ಾಮ ಮಾಡಿಹಾಕುತ್ತಾನೆ, ಇದನ್ನು ತ್ಯೇಜಿಸಬೇಕಾದುದರ ಸಂಜ್ಞೆ ಎನ್ನುತ್ತಾರೆ.

6. ಮತ್ತೆ ಯಾವುದು ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕೆ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ವಿರಾಗತಾಳುವಿಕೆ, ನಂದಿಸುವಿಕೆ(ನಿಬ್ಬಾಣ). ಇವನ್ನೆ ವಿರಾಗದ ಸಂಜ್ಞೆಗಳು ಎನ್ನುವರು.

7.  ಮತ್ತೆ ಯಾವುದು ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ನಿರೋಧ ತಾಳುವಿಕೆ, ನಂದಿಸುವಿಕೆ(ನಿಬ್ಬಾಣ)ೆ. ಇವನ್ನೆ ನಿರೋಧದ ಸಂಜ್ಞೆಗಳು ಎನ್ನುವರು.

8.  ಮತ್ತೆ ಯಾವುದು ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ? 
ಇಲ್ಲಿ ಭಿಕ್ಖುವು ಲೋಕಗಳ ಬಗ್ಗೆ ಯಾವುದೇ ರೀತಿಯಲ್ಲೂ ಅಂಟಿಕೊಳ್ಳದೆ, ಈ ಹಿಂದಿನ ಎಲ್ಲವನ್ನು ಬಿಟ್ಟು, ಯಾವುದರಲ್ಲು ಆಕಷರ್ಿತನಾಗದೆ, ಹಿಡಿದುಕೊಳ್ಳದೆ, ಹಾಗೇಯೇ ೆ ಹುದುಗಿರುವ ಅನುಶಯಗಳ ಬಗ್ಗೆ ,ಇಚ್ಚೆಪಡದೆ, ದೃಡನಿಧರ್ಾರ ತಾಳದೆ ಹೀಗೆ ತೊರೆದು ಉಪಾದಿಯಿಲ್ಲದೆ ವಿಹರಿಸುತ್ತಾನೆ, ಇದನ್ನೆ ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ ಎನ್ನುವರು.

9. ಮತ್ತೆ ಯಾವುದು ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ?
 ಇಲ್ಲಿ ಭಿಕ್ಖುವು ಎಲ್ಲಾ ಸಂಖಾರಗಳಲ್ಲಿ (ಚಟುವಟಿಕೆ) ಭಯಭೀತನಾಗಿ, ವಿಕಷರ್ಿತನಾಗಿ, ಜಿಗುಪ್ಸೆ ತಾಳುತ್ತಾನೆ, ಇದನ್ನೆ ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ಎನ್ನುತ್ತಾರೆ.

10.ಮತ್ತೆ ಯಾವುದು ಅನಾಪಾನ ಸತಿ? 
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ. 
1. ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 
2. ಉಸಿರಾಟವು ಕಿರಿದಾಗಿದ್ದರೆ ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ. 
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).
5. ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
6. ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
7. ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
8. ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).
9. ಚಿತ್ತವನ್ನು ಅನುಭವಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
10. ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಆನಂದಗೊಳಿಸುತ್ತಾ) ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
11. ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).
13. ಅನಿತ್ಯತೆಯನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
14. ವಿರಾಗವನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
15. ನಿರೋಧವನ್ನು ಗಮನಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).

ಹೀಗೆ ನೀವು ಬಿಕ್ಖು ಗಿರಿಮಾನಂದನ ಬಳಿಯಲ್ಲಿ ಈ 10 ಸಂಜ್ಞೆಗಳನ್ನು ಪಠಿಸಿದರೆ , ಇದನ್ನು ಆಲಿಸಿ ಅಥರ್ೈಸಿಕೊಂಡ ನಂತರ ಆ ಕ್ಷಣದಲೇ ಅಲ್ಲಿಯೇ ಆತನ ಕಾಯಿಲೆಯು ನಾಷವಾಗುವುದು.

ನಂತರ ಆನಂದರವರು ಆ ಸುತ್ತವನ್ನು ಭಗವಾನರಿಂದ ಆಲಿಸಿ ನೆನಪಿನಲ್ಲಿಟ್ಟುಕೊಂಡು ಗಿರಿವéಾನಂದರ ಬಳಿಗೆ ಹೋದರು ಹಾಗು ಈ ಸುತ್ತವನ್ನು ಅದರಲ್ಲಿಯ 10 ಸಂಜ್ಞೆಗಳನ್ನು ಪಠಿಸಿದಾಗ ಗಿರಿಮಾನಂದರ ಕಾಯಿಲೆಯು ಆ ಕ್ಷಣದಲ್ಲಿಯೇ ಅಲ್ಲಿಯೇ ಇನ್ನಿಲ್ಲದಂತಾಯಿತು. ಹೀಗೆ ಅವರು ರೋಗದಿಂದ ಮುಕ್ತರಾದರು.
(ಅಂದಿನಿಂದ ಇಲ್ಲಿಯತನಕ ಈ ಸುತ್ತವನ್ನು ರೋಗಿಗಳ ಬಳಿಯಲ್ಲಿ ಪಠಿಸುತ್ತಾರೆ. ಅದನ್ನು ಆಲಿಸಿ ಅಥರ್ೈಸಿಕೊಂಡವರು ರೋಗಗಳಿಂದ ಮುಕ್ತರಾದಂತಹ ಬಹಳಷ್ಡು ನಿದರ್ಶನಗಳು ಇವೆ.)