Sunday 30 May 2021

ದುತಿಯಪರಿಹಾನಿ ಸುತ್ತ dutiya parihani sutta : ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.

   ದುತಿಯಪರಿಹಾನಿ ಸುತ್ತ


ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.



   ಭಿಕ್ಖುಗಳೇ, ಈ ಏಳು ವಿಷಯಗಳಿಂದ ಉಪಾಸಕನು ಅವನತಿಗೆ ಈಡಾಗುತ್ತಾನೆ ?

  

       ಯಾವುವವು ಏಳು ?


  " 1. ಅವನು ಭಿಕ್ಖುಗಳನ್ನು ದಶರ್ಿಸಲು (ನೋಡಲು) ನಿಲ್ಲಿಸುತ್ತಾನೆ.


    2. ಅವನು ಧಮ್ಮವನ್ನು ಕೇಳಲು ಅಲಕ್ಷಿಸುತ್ತಾ ಇರುತ್ತಾನೆ.


    3. ಅವನು ಉನ್ನತವಾದ (ಪಂಚ)ಶೀಲವನ್ನು ಪಾಲಿಸುವುದಿಲ್ಲ.


     4. ಅವನು ಭಿಕ್ಖುಗಳ ಬಗ್ಗೆ ಅಪಾರವಾಗಿ ಸಂಶಯಸ್ಥನಾಗುತ್ತಾನೆ. ಆ ಭಿಕ್ಖುಗಳು ಹಿರಿಯ ಥೇರರೇ ಆಗಿರಲಿ, ಹೊಸ ಸಮಣೇರರೇ ಆಗಿರಲಿ, ಅಥವಾ ವರ್ಷಗಳು ಸಾಧನೆ ಮಾಡುತ್ತಿರುವ ಭಿಕ್ಖುಗಳೇ ಆಗಿರಲಿ. ಅವರ ಬಗ್ಗೆ ಸಂಶಯಸ್ಥನಾಗಿರುತ್ತಾನೆ.


      5. ಆತನು ಧಮ್ಮವನ್ನು ಆಲಿಸುವಾಗಲೂ ಸಹಾ ಟೀಕಾತ್ಮಕವಾಗಿಯೇ, ತಪ್ಪುಗಳನ್ನು ಹುಡುಕುವ ರೀತಿಯಲ್ಲಿಯೇ ಧಮ್ಮವನ್ನು ಆಲಿಸುತ್ತಾನೆ.


       6. ಆತನು ಆರಿಯರಲ್ಲದ ಉದಾರಲ್ಲದ ವ್ಯಕ್ತಿಗಳಾದ ಹೊರಗಿನವರಿಗೆ ದಾನಕ್ಕೆ, ಆತಿಥ್ಯಕ್ಕೆ, ಜ್ಞಾನಕ್ಕೆ ಅರ್ಹರೆಂದು ಭಾವಿಸಿ ಅವರನ್ನೇ ಹಿಂಬಾಲಿಸುತ್ತಾನೆ. 


       7. ಆತನು ಆ ಉದಾರಲ್ಲದವರಲ್ಲಿಯೇ ಗೌರವ, ಜ್ಙಾನಗಳಿಕೆ, ದಾನ, ಸೇವೆ, ಆತಿಥ್ಯಗಳೆಲ್ಲವನ್ನು ಮಾಡುತ್ತಾನೆ.

  

      ಈ ಏಳು ವಿಷಯಗಳಿಂದ ಉಪಾಸಕನು(ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ 






 .