Sunday 28 August 2022

ಮಿತ್ತ ಸುತ್ತ mitta sutta in kannada

                       ಮಿತ್ತ ಸುತ್ತ


 ಭಿಕ್ಖುಗಳೇ, ಮಿತ್ರನು ಈ 7 ಗುಣಗಳಿಂದ ಕೂಡಿರುವಾಗ ಆತನು ಸಹವತರ್ಿಯಾಗಲು ಅರ್ಹನಾಗುತ್ತಾನೆ.

ಯಾವುವವು ಏಳು ?


1. ಆತನು ಯಾವುದನ್ನು ಪರರು ನೀಡಲು ಕಷ್ಟಕರವಾಗಿರುವುದೋ ಅದನ್ನೇ ನೀಡುತ್ತಾನೆ,

2. ಆತನು ಯಾವುದನ್ನು ಪರರು ಮಾಡಲು ಹಿಂಜರಿಯುತ್ತಾರೋ ಅದನ್ನೇ ಮಾಡುತ್ತಾನೆ,

3. ಆತನು ಸಹಿಸಲು ಅತಿದುಸ್ಸಹವಾಗಿರುವುದನ್ನು ಸಹಿಸುತ್ತಾನೆ,

4. ಆತನು ತನ್ನ ರಹಸ್ಯಗಳನ್ನೆಲ್ಲಾ ಮಿತ್ರನ ಬಳಿ ತೆರೆದಿಡುತ್ತಾನೆ,

5. ಆದರೆ ಮಿತ್ರನ ರಹಸ್ಯಗಳನ್ನು ಅಡಗಿಸಿಡುತ್ತಾನೆ,

6. ಯಾವಾಗ ವಿಪತ್ತುಗಳು ಆಕ್ರಮಣ ಮಾಡುವವು ಆಗ ಆತನು ಮಿತ್ರನಿಗೆ ತೊರೆಯುವುದಿಲ್ಲ,

7.  ಯಾವಾಗ ಮಿತ್ರನು ನಿರ್ಗತಿಕ ಅಥವಾ ನಿರ್ಧನನಾಗುವನೋ ಆಗ ಆತನನ್ನು ಕೀಳಾಗಿ ಕಾಣುವುದಿಲ್ಲ. 


   ಆತನು ಸುಂದರವಾಗಿರುವುದನ್ನು ನೀಡಲು ಕಷ್ಟಕರವಾಗಿದ್ದರೂ ನೀಡುತ್ತಾನೆ.

ಮಾಡಲು ಅತಿಕಠಿಣವಾಗಿದ್ದರೂ ಮಾಡುತ್ತಾನೆ,

ಆಲಿಸಲು ಅತ್ಯಂತ ಹೇಯವಾದ ಕಠೋರವಾದ ಮಾತುಗಳನ್ನು ಸಹಿಸುತ್ತಾನೆ.

ಆತನ ರಹಸ್ಯಗಳನ್ನು ನಿನಗೆ ನುಡಿಯುತ್ತಾನೆ,

ನಿನ್ನ ರಹಸ್ಯಗಳನ್ನು ಬಚ್ಚಿಡುತ್ತಾನೆ,

ಯಾವಾಗ ದುರಂತಗಳು, ಆಪಾಯಗಳು ಬೀಳುತ್ತವೆಯೋ ಆತನು ನಿನ್ನನ್ನು ವಜರ್ಿಸಲಾರ.

ಯಾವಾಗ ನೀನು ಅವನತಿಗೆ ಈಡಾಗುವೆಯೋ ಆಗ ನಿನಗೆ ಕೀಳಾಗಿ ನೋಡಲಾರನು.

ಯಾರಲ್ಲಿ ಈ ಸಪ್ತ ಸದ್ಗುಣಗಳನ್ನು ನೋಡುತ್ತೆವೆಯೊ ಮಿತ್ರತ್ವ ಬಯಸುವವನು ತಕ್ಷಣ ಆತನ ಸ್ನೇಹವನ್ನು ಬಲಿಷ್ಟಗೊಳಿಸಬೇಕು.




 

Saturday 27 August 2022

ಕಿಂ ದಾನ ಸುತ್ತ kimdana sutta in kannada

    ಕಿಂ ದಾನ ಸುತ್ತ 




ದೇವನೊಬ್ಬನ ಪ್ರಶ್ನೆ :


1. ಏನನ್ನು ದಾನ ನೀಡಿದರೆ ಶಕ್ತಿಯನ್ನು ನೀಡುತ್ತಾನೆ ?

2. ಏನನ್ನು ದಾನ ನೀಡಿದರೆ ಸೌಂದರ್ಯವನ್ನು ನೀಡುತ್ತಾನೆ ?

3. ಏನನ್ನು ದಾನ ನೀಡಿದರೆ ಆರಾಮ  ನೀಡುತ್ತಾನೆ ?

4. ಏನನ್ನು ದಾನ ನೀಡಿದರೆ ದೃಷಿ ನೀಡುತ್ತಾನೆ ?

5. ಮತ್ತು ಏನನ್ನು ದಾನ ನೀಡಿದರೆ ಎಲ್ಲವನ್ನು ದಾನ ನೀಡಿದಂತೆ ಆಗುವುದು ?


  ಬುದ್ಧ ಭಗವಾನರ ಉತ್ತರ :


 1. ಆಹಾರ ನೀಡುವ ದಾನಿಯು ಶಕ್ತಿಯನ್ನು ನೀಡುತ್ತಾನೆ.

2. ವಸ್ತ್ರಗಳನ್ನು ನೀಡುವ ದಾನಿಯು ಸೌಂದರ್ಯವನ್ನು ನೀಡುತ್ತಾನೆ .

3. ವಾಹನವನ್ನು ನೀಡುವ ದಾನಿಯು ಆರಾಮವನ್ನು ನೀಡುತ್ತಾನೆ.

4. ದೀಪಗಳನ್ನು ನೀಡುವ ದಾನಿಯು ದೃಷ್ಟಿಯನ್ನು ನೀಡುತ್ತಾನೆ.

5.  ಮತ್ತು ವಸತಿಯನ್ನು ನೀಡುವ ದಾನಿಯು ಎಲ್ಲವನ್ನು ದಾನ ನೀಡಿದಂತೆ ಆಗುವುದು.

ಅದರೆ ಧಮ್ಮವನ್ನು (ಬುದ್ಧರ ಬೋಧನೆ) ನೀಡುವ ದಾನಿಯು ಅಮರತ್ವವನ್ನೇ ನೀಡುತ್ತಾನೆ.