Sunday 12 July 2020

ಚುಲಕಮ್ಮವಿಭಂಗ ಸುತ್ತ culakammavibhanga sutta in kannada




ಚುಲಕಮ್ಮವಿಭಂಗ ಸುತ್ತ
(ಕಮ್ಮಫಲದ ವಿಶ್ಲೇಷಣೆಯ ಚಿಕ್ಕ ಸುತ್ತ)


ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯ ಆನಾಥಪಿಂಡಿಕನ ಜೇತವನದಲ್ಲಿ ವಾಸಿಸುತ್ತಿದ್ದರು.
ಆಗ ಬ್ರಾಹ್ಮಣ ವಿಧ್ಯಾಥರ್ಿಯಾದ ತೋದಯ್ಯನ ಮಗನಾದ ಸುಭನು ಭಗವಾನರ ಬಳಿಗೆ ಹೋದನು ಅವರಿಗೆ ವಂದಿಸಿ ಕುಶಲಗಳನ್ನು ವಿನಿಯೋಗಿಸಿಕೊಂಡನು. ಹೀಗೆ ಕುಶಲ ಮಾತುಕತೆಯ ನಂತರ ಆತನು ಭಗವಾನರ ಮುಂದೆ ಒಂದೆಡೆ ಕುಳಿತನು. ಮತ್ತು ಹೀಗೆ ಪ್ರಶ್ನಿಸಿದನು: 
"ಗೋತಮ ಭಗವಾನರೇ ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಯಿಂದಾಗಿ(ಬೆಂಬಲದಿಂದಾಗಿ) ಮಾನವರು ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುತ್ತಾರೆ. ? ಏಕೆಂದರೆ ಜನರು ಅಲ್ಪಾಯುಷ್ಯನಿಂದ ಹಾಗೂ ದೀಘರ್ಾಯುಷ್ಯನಿಂದ ಕಾಣಿಸುವರು. ರೋಗಿಗಳಾಗಿ ಮತ್ತು ಆರೋಗ್ಯವಂತರಾಗಿ ,ಅದೇ ರೀತಿ ಕುರೂಪಿಗಳಾಗಿ ಮತ್ತು ಸುರೂಪಿಗಳಾಗಿ, ಅಪ್ರಭಾವಿಗಳಾಗಿ ಮತ್ತು ಪ್ರಭಾವಿಗಳಾಗಿ, ಬಡವರಾಗಿ ಮತ್ತು ಸಿರಿವಂತರಾಗಿ, ನೀಚಕುಲದಲ್ಲಿ ಮತ್ತು ಉಚ್ಚಕುಲದಲ್ಲಿ, ದಡ್ಡರಾಗಿ ಹಾಗೇಯೆ ಪ್ರಜ್ಞಾವಂತರಾಗಿ, ಕಾಣಿಸಿಕೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಗಳಿಂದಾಗಿ ಮಾನವರು ಹೀಗೆ ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುವರು."

   " ಓ ಮಾಣವನೇ, 
ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು


"ಭಗವಾನರೇ ನಾನು ತಮ್ಮ ಬೋಧನೆಯ ಅರ್ಥವನ್ನು ವಿಶಾಲತೆಯನ್ನು ಅರ್ಥಮಾಡಿಕೊಳ್ಳಲಿಲ್ಲ, ತಾವು ಸಂಕ್ಷೀಪ್ತವಾಗಿ ನುಡಿದಿದ್ದಿರಿ ವಿವರವಾಗಿ ಹೇಳಲಿಲ್ಲ.  ಹೀಗಾಗಿ ಭಗವಾನರು ನನಗೆ ಅರ್ಥವಾಗುವ ರೀತಿ ವಿಸ್ತಾರವಾಗಿ ಧಮ್ಮವನ್ನು ನುಡಿದರೆ ಬಹಳ ಒಳಿತಾಗುವುದು."

"ಹಾಗಾದರೇ ಮಾಣವನೇ ನಾನು ನುಡಿಯುವುದನ್ನೇ ಗಮನವಿಟ್ಟು ಆಲಿಸು."

"ಹಾಗೇ ಆಗಲಿ ಭಂತೆ" ಎಂದು ಶುಭನು ನುಡಿದನು.

  ಆಗ ಭಗವಾನರು ಹೀಗೆ ನುಡಿದರು :
"ಇಲ್ಲಿ ಮಾಣವನೇ ಹಲವು ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಜೀವಿಗಳನ್ನು ಕೊಲ್ಲುತ್ತಾರೆ ಹೀಗೆ ಕೊಲೆಗಾರರಾಗುತ್ತಾರೆ, ರಕ್ತಸ್ಥಿಗ್ದ ಕೈಯುಳ್ಳವರಾಗಿ, ಹೊಡೆದಾಟಗಳಿಂದ ಮತ್ತು ಹಿಂಸೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ದಯೆರಹಿತರಾಗುತ್ತಾರೆ, ಈ ಬಗೆಯ ಕರ್ಮಗಳಿಂದ ಕೃತ್ಯಗಳಿಂದಾಗಿ ಸಾವಿನ ನಂತರ ಶರೀರದಿಂದ ವಿಚ್ಛೇದರಾದ ನಂತರ ಆಪಾಯ, ದುರ್ಗತಿ, ವಿನಿಪಾತ(ಅದಃಪತನ) ಮತ್ತು ನಿರಯಗಳಲ್ಲಿ ಉದಯಿಸುತ್ತಾರೆ.ಒಂದು ವೇಳೆ ಅವರು ಆಪಾಯಗಳಲ್ಲಿ, ದುಗ್ಗತಿಯಲ್ಲಿ, ವಿನಿಪಾತದಲ್ಲಿ ಮತ್ತು ನಿರಯಗಳಲ್ಲಿ ಹುಟ್ಟದೆ ಪುನಃ ಮಾನವರಾಗಿ ಹುಟ್ಟಿದ್ದರೆ ಆತನು ಅಥವಾ ಅವಳು ಅಲ್ಪಾಯುಷ್ಯವನ್ನು ಹೊಂದಿ ಹುಟ್ಟಿರುತ್ತಾರೆ. ಈ ರೀತಿಯಲ್ಲಿ ಮಾಣವನೇ ಒಬ್ಬನು ಜೀವಿಗಳನ್ನು ಕೊಲ್ಲುತ್ತಾ ಕೊಲೆಗಾರನಾಗಿ ರಕ್ತಸ್ಥಿಗ್ದ ಕೈಯುಳ್ಳವನಾಗಿ, ಹೊಡೆತ ಹಾಗೂ ಹಿಂಸೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ದಯೆರಹಿತನಾದರೆ ಹೀಗೆ ಅಲ್ಪಾಯುಷ್ಯದ ಜೀವನ ಪಡೆಯುತ್ತಾರೆ.


ಅದರೆ ಇಲ್ಲಿ ಮಾಣವಕನೇ ಹಲವು ಸ್ತ್ರೀ ಅಥವಾ ಪುರುಷರು ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಲು ಬದ್ದನಾಗಿರುತ್ತಾನೆ. ಈ ಬಗೆಯ ಕಮ್ಮಗಳನ್ನು ಆಚರಿಸಿದ್ದರಿಂದಾಗಿ ಮತ್ತು ನಿರ್ವಹಿಸಿದ್ದರಿಂದಾಗಿ ಆತನು ಅಥವಾ ಆಕೆಯು ಸಾವಿನ ನಂತರ ದೇಹದ ವಿಘಟನೆಯ ನಂತರ ಸುಗತಿಯಲ್ಲಿ ಜನಿಸುತ್ತಾನೆ. ಒಂದು ವೇಳೆ ಆತನು ಸಾವಿನ ನಂತರ ದೇಹದಿಂದ ಬೇರ್ಪಟ್ಟ ನಂತರ ಸುಗತಿಯಲ್ಲಿ ಜನಿಸದಿದ್ದರೇ ಮಾನವನಾಗಿಯೇ ಹುಟ್ಟಿದರೇ ಆತನು ಎಲ್ಲಿಯೇ ಹುಟ್ಟಲಿ ಆತನು ದೀಘರ್ಾಯುವಾಗಿಯೇ ಜೀವಿಸುವಂತವನಾಗುತ್ತಾನೆ. ಈ ರೀತಿಯಾಗಿ ಮಾಣವನೇ ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಿ ಬದ್ದನಾಗಿದ್ದರೇ ಅದು ದೀಘರ್ಾಯುತನಕ್ಕೆ ಕೊಂಡಯ್ಯುತ್ತದೆ.

.

 'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುತ್ತಾರೆ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುತ್ತಾರೆ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ರೋಗಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡಿದ್ದರೇ ಈ ಬಗೆಯಲ್ಲಿ ರೋಗಗಳಿಂದ ಕೂಡಿರುತ್ತಾರೆ..

'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುವುದಿಲ್ಲ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುವುದಿಲ್ಲ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆರೋಗ್ಯಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗದಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡದಿದ್ದರೇ ಈ ಬಗೆಯಲ್ಲಿ ಆರೋಗ್ಯಗಳಿಂದ ಕೂಡಿರುತ್ತಾರೆ..

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಕುರೂಪಿಯಾಗಿ, ದುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕುರೂಪಿಗಳಾಗಿ, ದುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಸುರೂಪಿಯಾಗಿ, ಸುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸುರೂಪಿಗಳಾಗಿ, ಸುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸುವುದಿಲ್ಲ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಪ್ರಭಾವರಹಿತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವರಹಿತನಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸದೆ ಹೋಗಿರುತ್ತಾರೆ.



ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ, ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಪ್ರಭಾವವುಳ್ಳವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವವುಳ್ಳವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ


 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುವುದಿಲ್ಲ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಬಡವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಬಡವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುವುದಿಲ್ಲ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುತ್ತಾರೆ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಶ್ರೀಮಂತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಶ್ರೀಮಂತರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುತ್ತಾರೆ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುತ್ತಾರೆ, ಮತ್ತು ಅಹಂಕಾರಿಯಾಗಿರುತ್ತಾರೆ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುವುದಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಾರರು, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಾರನು, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡಲಾರರು, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಲಾರರು, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಲಾರರು, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಲಾರರು, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಲಾರರು, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ನೀಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ನೀಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿದ್ದರು, ಮತ್ತು ಅಹಂಕಾರಿಯಾಗಿದ್ದರು; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರಲಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಿಲ್ಲ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಿಲ್ಲ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರಲಿಲ್ಲ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರಲಿಲ್ಲ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರಲಿಲ್ಲ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರಲಿಲ್ಲ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರಲಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುವುದಿಲ್ಲ, ಮತ್ತು ಅಹಂಕಾರಿಯಾಗಿರುವುದಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡುತ್ತಾನೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸುತ್ತಾನೆ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಮಾನವನಾಗಿ ಹುಟ್ಟಿದ್ದರೇ ,ಆತನು ಉಚ್ಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಉಚ್ಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿಲಿಲ್ಲ, ಮತ್ತು ಅಹಂಕಾರಿಯಾಗಿರಲಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಿರುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಿರುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರುತ್ತಾರೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರುತ್ತಾನೆ.
 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ದಡ್ಡನಾಗಿ(ದುಪ್ರಜ್ಞನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ದುಪ್ರ್ರಜ್ಙನಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿರಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸುತ್ತಾರೆ ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ?
 ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ?
 ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ , ಆತನು ಮಹಾಪ್ರಾಜ್ಞನಾಗಿ (ಬುದ್ಧಿವಂತನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ಮಹಾಪ್ರಜ್ಞಾರಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿದ್ದರು ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ? 
ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? 
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಹೀಗೆ ಮಾಣವನೇ ಈ ಬಗೆಯಲ್ಲಿ ಜನರು ಜೀವಿಸಿ ಹೀಗಾಗಿರುವರು.  ಅಲ್ಪಯುಷ್ಯನ ಹಾದಿಯು ಜನರನ್ನು ಅಲ್ಪಯುಷ್ಯನನ್ನಾಗಿಸುತ್ತದೆ. ದೀಘರ್ಾಯುಸ್ಸಿನ ಹಾದಿಯು ಜನರನ್ನು ದೀಘರ್ಾಯುಸ್ಸನ್ನಾಗಿ ಮಾಡುತ್ತದೆ. ರೋಗಗಳ ಹಾದಿಯಲ್ಲಿ ಹೋಗುವವರು ರೋಗಿಗಳಾಗುತ್ತಾರೆ, ಆರೋಗ್ಯದ ಹಾದಿಯು ಜನರನ್ನು ಆರೋಗ್ಯನನ್ನಾಗಿಸಿದೆ, ಈ ಬಗೆಯ ಹಾದಿಯಲ್ಲಿ ಜೀವಿಸಿ ಕುರೂಪಿಗಳಾಗಿರುವರು, ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಸುರೂಪಿಗಳಾಗುವರು. ಈ ಬಗೆಯ ಹಾದಿಯಲ್ಲಿ ಸಾಗಿದಾಗ ಪ್ರಭಾವರಹಿತರು ಆಗುವರು. ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಪ್ರಭಾವಶಾಲಿಗಳಾಗುವರು. ಬಡತನದ ಹಾದಿಯು ಜನರನ್ನು ಬಡವರನ್ನಾಗಿಯು, ಸಿರಿತನದ ಹಾದಿಯು ಜನರನ್ನು ಸಿರಿವಂತರನ್ನಾಗಿಯು ಹಾಗೆಯೇ ನೀಚಕುಲದ ಹಾದಿಯು ಜನರನ್ನು ನೀಚರನ್ನಾಗಿಯು, ಉಚ್ಚಕುಲದ ಹಾದಿಯು ಜನರನ್ನು ಉಚ್ಚರನ್ನಾಗಿಯು ಮತ್ತು ದಡ್ಡತನದ ಹಾದಿಯು ಜನರನ್ನು ದಡ್ಡರನ್ನಾಗಿಯು ಮತ್ತು ಮಹಾಪ್ರಜ್ಞರ ಹಾದಿಯು ಜನರನ್ನು ಮಹಪ್ರಜ್ಞಾರನ್ನಾಗಿಯು ಮಾಡುತ್ತದೆ.

ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು

ಯಾವಗ ಭಗವಾನರು ಹೀಗೆ ನುಡಿದರೊ ಆಗ ತೊದೆಯ್ಯನ ಮಗನಾದ ಸುಭನು ಭಗವಾನರಿಗೆ ಹೀಗೆ ನುಡಿದನು. : ಭವ್ಯವಾಗಿ ನುಡಿದಿರಿ ಗೋತಮರೇ ! ಗೋತಮರೇ ಅತುತ್ತಮವಾಗಿ ನುಡಿದಿರಿ! 
ಧಮ್ಮವು ಭಗವಾನರಿಂದ ಅನೇಕ ವಿಧದಲ್ಲಿ ಸ್ಪಷ್ಟಿಕರಣಗೊಂಡಿತು. 
ಹೇಗೆಂದರೇ ತಲೆಕೆಳಕಾಗಿರುವುದನ್ನು ಸರಿಯಾಗಿ ನಿಲ್ಲಿಸಿದಂತೆ, 
ಅಡಗಿರುವುದನ್ನು ಅನಾವರಣಗೊಳಿಸಿದಂತೆ, 
ದಾರಿ ತಪ್ಪಿದವನಿಗೆ ಮಾರ್ಗ ತೊರಿಸಿದಂತೆ, 
ಕತ್ತಲೆಯಲ್ಲಿರುವವನಿಗೆ ಪ್ರದೀಪವನ್ನು ಹಿಡಿದು ರೂಪಗಳನ್ನು ತೋರಿಸಿದಂತೆ, 

ಭಗವಾನರು ಅನೇಕ ರೀತಿಯಲ್ಲಿ ಧಮ್ಮವನ್ನು ಸ್ಪಷ್ಟಿಕರಿಸಿದ್ದಾರೆ, 
ನಾನು ಭಗವಾನ ಗೋತಮರ ಶರಣು ಹೋಗುವೆನು, 
ಅವರ ಅಧ್ಭುತವಾದ ಧಮ್ಮಕ್ಕೆ ಶರಣು ಹೋಗುವೆನು, 
ಅವರ ಅಸಮಾನ ಸಂಘಕ್ಕೂ ಶರಣು ಹೋಗುವೆನು.
ಭಗವಾನರು ನನಗೆ ಅವರಲ್ಲಿ ಜೀವನ ಪರ್ಯಂತ ಶರಣು ಹೋದಂತಹ ಉಪಾಸಕನೆಂದು ಪರಿಗಣಿಸಲಿ


ಇಲ್ಲಿಗೆ ಕಮ್ಮವಿಪಾಕದ ವಿಶ್ಲೇಷಣೆಯ ಚಿಕ್ಕ ಸುತ್ತವು ಸಮಪ್ತಿಯಾಯಿತು.