Friday 29 November 2019

ಅಭಾಸಿತ ಸುತ್ತ abhasita sutta

ಅಭಾಸಿತ ಸುತ್ತ


  ಭಿಕ್ಖುಗಳೇ, ಇವೆರಡು ತಥಾಗತರಿಗೆ ಮಾಡುವ ಅಪನಿಂದೆಗಳಾಗಿವೆ
ಯಾವುವವು ಎರಡು ?

"ತಥಾಗತರು ನುಡಿಯದಿದ್ದರೂ ಹೀಗೆ  ನುಡಿದಿದ್ದಾರೆ ಎಂದು ನಿರೂಪಿಸುವುದು. &
ತಥಾಗತರೂ ನುಡಿದಿದ್ದರೂ ಹೀಗೆ ನುಡಿದಿಲ್ಲ ಎಂದು ನಿರೂಪಿಸುವುದು.

ಹೀಗೆ ತಥಾಗತರಿಗೆ 2 ರೀತಿಯಲ್ಲಿ ಅಪನಿಂದೆ ಮಾಡುವರು.

Tuesday 26 November 2019

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ/ಚಾಪಾಲ ಸುತ್ತ)

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ)

ಮಹಾಮೊಗ್ಗಲಾನರವರು ಮಗಧದ ಸಮೀಪದ ಕಲ್ಲವಾಲಪುತ್ತ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಪಬ್ಬಜ್ಜ ಸ್ವೀಕಾರದ ಏಳು ದಿನಕ್ಕೆ ಕಾಲಿಟ್ಟರು. ಸದಾಕಾಲ ಧ್ಯಾನದಲ್ಲಿ ತೊಡಗಿದರು. ಆದರೂ ಅವರು ಥೀನಮಿದ್ಧ (ಆಲಸ್ಯ, ಜಡತೆ, ನಿದ್ದೆ) ಯಿಂದಾಗಿ ತುಸು ತ್ರಾಸಪಟ್ಟರು.
   ಮೊಗ್ಗಲಾನರವರು ತಮ್ಮ ಧ್ಯಾನ ಸಾಧನೆಗೆ ಮಗಧದ ಸಮೀಪದ ಕಲ್ಲವಲಪುತ್ತ ಎಂಬ ಹಳ್ಳಿಯ ಪಕ್ಕದ ಅರಣ್ಯವನ್ನು ಆಯ್ಕೆ ಮಾಡಿದರು, ಅಲ್ಲಿ ಅವರು ಪದ್ಮಾಸನದಲ್ಲಿ ಹಾಗೂ ನಡಿಗೆಯ ಭಂಗಿಯಲ್ಲಿ ಧ್ಯಾನವನ್ನು ಆರಂಭಿಸಿದರು. ಅದರೂ ಸಹಾ ಅವರು ತೂಗಡಿಕೆಯನ್ನು ಗೆಲ್ಲಲಾರೆದೆ ಹೋದರು.  ಅವರಿಗೆ ನಿದ್ರಿಸಲು ಇಷ್ಟವಿರಲಿಲ್ಲ ಅದರೂ ತಮ್ಮ ಬೆನ್ನು ಹಾಗೂ ಕತ್ತನ್ನು ನೇರವಾಗಿಡಲು ಅಸಮರ್ಥರಾದರು. ಅದರೂ ತಮ್ಮ ಇಚ್ಚಾಶಕ್ತಿಯಿಂದ ಕಣ್ಣುಗಳನ್ನು ಅಗಲವಾಗಿಸಿ ನಿದ್ರೆ ಗೆಲ್ಲಲು ಯತ್ನಿಸಿದರು. ಅದರೂ ಯಶಸ್ವಿಯಾಗದೆ ಹೋಯಿತು, ಅಂದು ಅವರು ಸಂಘಕ್ಕೆ ಸೇರಿ 7ನೆಯ ದಿನವಾಗಿತ್ತು.  ಭಗವಾನರಿಗೆ ಇವರ ಕಷ್ಟಗಳು ಅರ್ಥವಾಗಿ ಅವರ ಮುಂದೆ ತೇಜೋಮಯವಾಗಿ ಪ್ರತ್ಯಕ್ಷವಾದರು. ಹಾಗೂ ಹೀಗೆ ಕೇಳಿದರು.
"ಮೊಗ್ಗಲಾನ ತೂಗಡಿಸುತ್ತಿರುವೆಯಾ.? ಮೊಗ್ಗಲಾನ ತೂಗಡಿಸುತ್ತಿರುವೆಯಾ (ಮಂಪರು)"
"ಹೌದು ಭಗವಾನ್"
"ಸರಿ ಮೊಗ್ಗಲಾನ , ಯಾವಾಗಲಾದರೂ ನಿನಗೆ ನಿದ್ದೆ ಅಥವಾ ತೂಗಡಿಕೆ ಆವರಿಸಿದಾಗ ಆ ಯೋಚನೆ ಅಥವಾ ಆ ಗ್ರಹಿೆಕೆಯೆಡೆಗೆ ಗಮನ ಹರಿಸದಿರು, ಹಾಗೆ ಆ ಗ್ರಹಿಕೆಯೆಡೆ ಗಮನವನ್ನು ಹರಿಸಿದಾಗ ತೂಗಡಿಕೆ ದೂರವಾಗುವುದು."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ನೀನೂ ಹಿಂದೆ ಆಲಿಸಿರುವ ಬೋಧನೆಯನ್ನು (ಧಮ್ಮ) ನೆನಪಿಸಿಕೋ ಹಾಗೂ ಅವನ್ನು ವಿಶ್ಲೇಶಿಸಿಕೊ.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನೂ ಆಲಿಸಿದ್ದ ಧಮ್ಮವನ್ನು ಪೂರ್ಣ ವಿವರವಾಗಿ ಪುನಾರಾವತರ್ಿತಗೊಳಿಸಿಕೊ.............."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿನ್ನ ಕಿವಿಗಳ ಹಾಲೆಗಳನ್ನು ಎಳೆದಾಡು ಮತ್ತು ನಿನ್ನ ಅಂಗಗಳನ್ನು ಉಜ್ಜಲು ಆರಂಭಿಸು,............"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನು ಆಸನದಿಂದ ಎದ್ದೇಳು ಹಾಗೂ ಕಣ್ಣುಗಳನ್ನು ನೀರಿನಿಂದ ತೊಳೆದುಕೊ, ನಂತರ ಎಲ್ಲಾ ದಿಕ್ಕುಗಳ ಕಡೆಗೆ ವೀಕ್ಷಿಸಲು ಆರಂಭಿಸು,   ನಕ್ಷತ್ರಗಳನ್ನು ಹಾಗೂ ನಕ್ಷತ್ರಗಳ ಸಮೂಹ ರಾಶಿಗಳನ್ನು ನೋಡಲು ಆರಂಭಿಸು.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಬೆಳಕಿನ ಸಂಜ್ಞೆಯತ್ತ ಗಮನಹರಿಸು, ಹಗಲಿನ ಸಂಜ್ಞೆಯತ್ತ ಗಮನಹರಿಸು, ಅದನ್ನು ರಾತ್ರಿಯಲ್ಲಿ ಅಭ್ಯಾಸಿಸು ಅಂದರೆ ರಾತ್ರಿಯನ್ನು ಹಗಲಿನಂತೆ ಹಾಗೂ ಹಗಲನ್ನು ರಾತ್ರಿಯಂತೆ ಗ್ರಹಿಸುವುದು., ಹೀಗಾದಾಗ ಮನಸ್ಸು ಸ್ವಚ್ಚವಾಗಿ ಜಡರಹಿತವಾಗುವುದು. ಹೀಗೆ ಮನಸ್ಸನ್ನು ಬೆಳಕಿನಂತೆ ಪೂರ್ಣವಾಗಿ ಪ್ರಕಾಶಿಸು........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ಇಂದ್ರಿಯಗಳನ್ನು ಅಂತಮರ್ುಖಗೊಳಿಸಿ,  ಮನಸ್ಸನ್ನು ಬಾಹ್ಯಕ್ಕೆ ದಾರಿತಪ್ಪದಂತೆ ಜಾಗಾರೂಕತೆವಹಿಸಿ, ನಡಿಗೆಯ ಧ್ಯಾನವನ್ನು ಆರಂಭಿಸು, ನಡಿಗೆಯಲ್ಲಿಯೇ ಗಮನವಹಿಸು. ಹಾಗೂ ಹಿಂದೆಯಿರುವುದನ್ನು ಕಲ್ಪಿಸಿಕೊ, ಹಾಗೂ ಹಿಂದೆಯಿದ್ದಾಗ ಮುಂದೆಯಿರುವುದನ್ನು ಕಲ್ಪಿಸಿಕೋ........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿದ್ದೆಯು ಈಗ ಅವಶ್ಯಕವೆಂದು ತಿಳಿದು ಆಗ ಜಾಗಾರೂಕತೆಯಿಂದ, ಸ್ಪಷ್ಟ ಅರಿವಿನಿಂದ, ಸಿಂಹಶಯ್ಯೆಯ ಭಂಗಿಯಲ್ಲಿ ಬಲಮುಖವಾಗಿ ಮಲಗಿ,  ಬಲಗಾಲ ಮೇಲೆ ಎಡಗಾಲನ್ನು ಇಟ್ಟು ನೇರವಾಗಿ ಮಲಗಿ, ಮತ್ತೆ ಮೇಲೆಳುವ ಸಮಯವನ್ನು ನಿಗಧಿತಪಡಿಸಿ, ಅಲ್ಪನಿದ್ದೆಯಲ್ಲಿ ತೃಪ್ತಿತಾಳಿ ನಂತರ ಎಚ್ಚರಗೊಂಡಾಗ ಜಾಗರೂಕತೆ ತಾಳಿ ಈ ಬಗೆಯ ಮನೋಭಾವ ತಾಳುವುದು ನಾನು ಅತಿನಿದ್ದೆಯಲ್ಲಿ ಅಥವಾ ಅತಿವಿಶ್ರಾಂತಿಯ ಸುಖದಲ್ಲಿ ತಲ್ಲೀನಲಾಗಿಲ್ಲ ಹಾಗೂ ತಲ್ಲೀನವಾಗುವುದಿಲ್ಲ. ಹೀಗೆ ಮೊಗ್ಗಾಲಾನ ನೀನು ಸುಶಿಕ್ಷಣಗೊಳಿಸಿಕೊಳ್ಳಬೇಕು."
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು ಹೇಗೆಂದರೆ ನಾನು ನನ್ನ ಅಹಂಕಾರ ಉದಯಿಸುವ ಅಥವಾ ವೃದ್ಧಿಯಾಗುವಂತಹ ಕುಟುಂಬಗಳಿಗೆ ಆಹಾರಕ್ಕೆ ಹೋಗಲಾರೆನು ಏಕೆಂದರೆ ಹಲವಾರು ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರುವ ಕುಟುಂಬಗಳಿಗೆ ಹೋದಾಗ ಅವರು  ಗಮನಹರಿಸದೆ ಹೋಗಬಹುದು ಆಗ ಇವರು ನನಗೆ ಇಷ್ಟ ಪಡುತ್ತಿಲ್ಲ, ಏನೂ ದೊರೆಯದೆ ಹೋಯಿತು, ಎಂದು ಲಜ್ಜೆಗೆ ಒಳಗಾಗಿ, ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ. "
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು, ನಾನು ಮುಖಾಮುಖಿ ಅಥವಾ ವಿವಾದಾತ್ಮಕ ವಾದಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಆಗ ನಾನಾ ಚಚರ್ೆ ವಾದ ವಿವಾದಗಳು ಉಂಟಾಗಿ ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ."
"ಮತ್ತೆ ಮೊಗ್ಗಾಲಾನ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೆಯೇ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಅಪ್ರಶಂಸಿಸಲಾರೆನು ಹಾಗೆಯೇ ಗೃಹಸ್ಥರೊಡನೆಯಾಗಲಿ ಅಥವಾ ಪಬ್ಬಜಿತರೊಡನೆಯಾಗಲಿ ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೂ ಯಾವ ಸ್ಥಳಗಳು ನಿಶಬ್ದದಿಂದ ಕೂಡಿವೆಯೋ, ಶಬ್ಧರಹಿತವೂ, ಹಾಗೂ ನಿರ್ಜನ ಪ್ರದೇಶಗಳೋ ಅಂತಹ ಧ್ಯಾನಯೋಗ್ಯ ಪ್ರದೇಶಗಳನ್ನು ನಾನು ಪ್ರಶಂಸಿಸುವೆನು".
ಹೀಗೆ ಭಗವಾನರು ನುಡಿದಾಗ ಮೊಗ್ಗಲಾನರು ಹೀಗೆ ಪ್ರಶ್ನಿಸಿದರು : "ಭಗವಾನ್ ಸಂಕ್ಷಿಪ್ತವಾಗಿ ತಿಳಿಸಿ, ಯಾವ ರೀತಿಯಲ್ಲಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು."
"ಇಲ್ಲಿ ಮೊಗ್ಗಾಲಾನ, ಒಬ್ಬನು ಹೀಗೆ ಕೇಳುತ್ತಾನೆ ಏನೆಂದರೆ ಎಲ್ಲಾ ಆಗುಹೋಗುಗಳು ಅಂಟಿಕೊಳ್ಳುವಿಕೆಗೆ ಅರ್ಹವಲ್ಲ ಆಗ ಆತನು ಎಲ್ಲಾ ಬಗೆಯ ಸ್ಥಿತಿಗಳನ್ನು ಅರಿಯುತ್ತಾನೆ, ಯಾವುದೇ ಅನುಭವಗಳಾಗಲಿ ಅದರಲ್ಲಿ ಕ್ಷಣಿಕತೆಯನ್ನು ಅರಿತು, ವಿರಾಗ ತಾಳುತ್ತಾನೆ, ನಿರೋಧ ತಾಳುತ್ತಾನೆ,  ತ್ಯೆಜಿಸುವಿಕೆ ತಾಳುತ್ತಾನೆ, ಹೀಗೆ ಲೋಕದ ಯಾವುದಕ್ಕೂ ಅಂಟಲಾರನು, ಹೀಗೆ ಯಾವುದಕ್ಕೂ ಅಂಟದೆ ತಳಮಳಗೊಳ್ಳಲಾರನು, ತಳಮಳಗೊಳ್ಳದೆ ಆರತರ್ಯದಲ್ಲೇ ಸರಿಯಾಗಿ ಮುಕ್ತನಾಗುತ್ತಾನೆ, ಆಗ ಆತನಲ್ಲಿ ವಿಮುಕ್ತಿ ಜ್ಞಾನವು ಉಂಟಾಗುವುದು, ಜನ್ಮವು ಅಂತ್ಯವಾಯಿತು,  ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಮಾಡಬೇಕಾದುದೆಲ್ಲಾ ಮಾಡಿಯಾಯಿತು, ಈ ಲೋಕಗಳಿಗೆ ಇನ್ನೇನೂ ಉಳಿದಿಲ್ಲ."
"ಈ ರೀತಿಯಾಗಿ ಮೊಗ್ಗಾಲಾನ ಸಂಕ್ಷಿಪ್ತವಾಗಿ  ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.." (ಪಾಚಾಲ ಸುತ್ತ, ಅಂಗುತ್ತರ ನಿಕಾಯ 7.58)