Saturday 12 June 2021

ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6) byasana sutta (A.N. 11.6)

  ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6)



 " ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ."

"  ಯಾವುದವು 11 ?"

  "1. ಅಂತಹವರು ಪ್ರಾಪ್ತಿ ಮಾಡಬೇಕಾಗಿರುವುದನ್ನು ಪ್ರಾಪ್ತಿ ಮಾಡುವುದಿಲ್ಲ.


  2.ಅಥವಾ ಅಂತಹವರು ಯಾವುದನ್ನು ಪ್ರಾಪ್ತಿ ಮಾಡಿರುವರೋ ಅದರಿಂದ ಕೆಳಕ್ಕೆ ಬೀಳುವರು. ಅಂದರೆ ಅವನ್ನು ಕಳೆದುಕೊಳ್ಳುವರು.


   3. ಅಥವಾ ಅಂತಹವರು ಅವರು ತಮ್ಮ ಸದ್ಗುಣಗಳನ್ನು ಪರಿಶುದ್ಧಿಗೊಳಿಸುವುದಿಲ್ಲ.


    4. ಅಥವಾ ಅಂತಹವರು ತಮ್ಮ ಸದ್ಗುಣಗಳ ಬಗ್ಗೆ ಅತಿಯಾಗಿ ಅಂದಾಜು ಮಾಡುತ್ತಾರೆ. ವಾಸ್ತವವಾಗಿ ಹಾಗೆ ವಿಕಾಸವಾಗಿರುವುದಿಲ್ಲ. 


     5. ಅಥವಾ ಅಂತಹವರು ತಮ್ಮ ಧಾಮರ್ಿಕ ಜೀವನವನ್ನು ಅಸಂತುಷ್ಟರಾಗಿ ಜೀವಿಸುತ್ತಾರೆ. 


      6. ಅಥವಾ ಅಂತಹವರು ಭ್ರಷ್ಟ ಅಪರಾದಗಳಲ್ಲಿ ತೊಡಗುತ್ತಾರೆ.


       7. ಅಥವಾ ಅಂತಹವರು ತಮ್ಮ ಶಿಕ್ಷಣಕ್ಕೆ ರಾಜಿನಾಮೆ ನೀಡಿ ನೀಚ ಜೀವನಕ್ಕೆ ಹಿಂತಿರುಗುತ್ತಾರೆ. 


        8. ಅಥವಾ ಅಂತಹವರು ಭೀಕರ ರೋಗಕ್ಕೆ ಗುರಿಯಾಗುತ್ತಾರೆ. 


       9. ಅಥವಾ ಅಂತಹವರು ತಮ್ಮ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. 


        10. ಅಥವಾ ಅಂತಹವರು ಸಾಯುವಾಗ ನಷ್ಟತನದ ಭಾವವನ್ನು ಹೊಂದುತ್ತಾರೆ. 


        11. ಮತ್ತು ಅಂತಹವರು ಸಾವಿನ ನಂತರ, ಕಾಯವು ಭೇಧವಾದ ನಂತರ ಅಪಾಯಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತಗಳಲ್ಲಿ, ನಿರಯಗಳಲ್ಲಿ ಜನಿಸುತ್ತಾರೆ. "


  "   ಹೀಗೆ ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ.."


" ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವುದಿಲ್ಲವೋ, ಅವಮಾನ ಮಾಡುವುದಿಲ್ಲವೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವುದಿಲ್ಲವೋ, ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದೂ ಪಡೆಯುವುದಿಲ್ಲ." .


  


 

No comments:

Post a Comment