Thursday 26 July 2018

DHAMMACAKKAPAVATTANA SUTTA in kannada ದಮ್ಮಚಕ್ಕಪವತ್ತನ ಸುತ್ತ

 ದಮ್ಮಚಕ್ಕಪವತ್ತನ ಸುತ್ತ




ನಾನು ಹೀಗೆ ಕೇಳಿದ್ದೇನೆ :
ಒಮ್ಮೆ ಭಗವಾನರು ವಾರಾಣಸಿಯ ಇಸಿಪಟ್ಟಣದ ಮಿಗದಾಯದಲ್ಲಿ ವಿಹರಿಸುತ್ತಿದ್ದರು, ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳಿಗೆ ಹೀಗೆ ಸಂಭೋದಿಸಿದರು :

 ಎರಡು ಅತಿರೇಕಗಳಿವೆ ಭಿಕ್ಖುಗಳೇ, ಅದನ್ನು ಪಬ್ಬಜಿತನಾದವನು ಸೇವಿಸಬಾರದು, ಯಾವುದವು ಎರಡು ?

 ಅವೆಂದರೆ ಕಾಮಸುಖಗಳಲ್ಲಿ ತಲ್ಲಿನನಾಗುವಿಕೆ, ಇವು ಹೀನವಾದುದು, ಅಸಭ್ಯವಾದುದು(ಗಮ್ಮೋ), ಪ್ರಾಪಂಚಿಕವಾದುದು(ಪೊಥುಜ್ಜನಿಕೊ), ಉದಾತ್ತವಲ್ಲದ್ದು(ಅನರಿಯೊ), ಮತ್ತು ಅನರ್ಥಕಾರಿಯಾದುದು.


ಇನ್ನೊಂದು ಅತಿರೇಕವೆಂದರೆ ಸ್ವಯಂವನ್ನು(ದೇಹ) ದಂಡಿಸುವಿಕೆ, ಇವು ದುಃಖಕಾರಿ, ಉದಾತ್ತವಲ್ಲದ್ದು, ಮತ್ತು ಅನರ್ಥಕಾರಿಯಾದುದು.

 ಈ ಉಭಯವನ್ನು ವಜರ್ಿಸಿರುವ ತಥಾಗತರು ಮಧ್ಯಮ ಮಾರ್ಗವನ್ನು ಅನ್ವೇಷಿಸಿದ್ದಾರೆ. ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.

   ಯಾವುದು ಭಿಕ್ಖುಗಳೇ ತಥಾಗತರು ಅನ್ವೇಷಿಸಿರುವ. ಮಧ್ಯಮ ಮಾರ್ಗವು. ಚಕ್ಷುಕಾರಕವು, ಜ್ಞಾನಕಾರಕವು, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು..
 ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ
ಸಮ್ಮಾದೃಷ್ಟಿಕೋನ,
ಸಮ್ಮಾಸಂಕಲ್ಪ,
ಸಮ್ಮಾ ವಾಚ,
ಸಮ್ಮಾ ಕಮ್ಮ,
 ಸಮ್ಮಾ ಜೀವನೋಪಾಯ,
ಸಮ್ಮಾ ಸ್ಮೃತಿ ಮತ್ತು
ಸಮ್ಮಾ ಸಮಾಧಿ.

ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.
 ಇದೇ ಭಿಕ್ಖುಗಳೇ ದುಃಖ ಆರ್ಯಸತ್ಯ, ಹೇಗೆಂದರೆ ಜನ್ಮವು ದುಃಖಕರ, ಜರಾ(ಮುಪ್ಪು) ದುಃಖಕರ, ವ್ಯಾದಿ ದುಃಖಕರ, ಮರಣ ದುಃಖಕರ, ಅಪ್ರೀಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖಕರ, ಇಚ್ಚಿಸುವಂತಹುದು ಅಲಭ್ಯವಾದರೆ ದುಃಖ, ಸಂಕ್ಷೀಪ್ತವಾಗಿ ಹೇಳುವುದಾದರೆ ಐದು ಖಂದಗಳಲ್ಲಿ(ದೇಹ ಮತ್ತು ಮನಸ್ಸುಗೆ) ಅಂಟಿರುವಿಕೆಯೇ ದುಃಖಕರ.

  ಈಗ ಓ ಭಿಕ್ಖುಗಳೇ ಇದೇ ದುಃಖ ಸಮುದಯ(ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರ್ಯ ಸತ್ಯವಾಗಿದೆ. ಇಲ್ಲಿ ತಣ್ಹಾದಿಂದಲೇ ಪುನರ್ಭವಿಸುತ್ತಾನೆ ತಣ್ಹಾವು 3 ವಿಧದ್ದಾಗಿದೆ ಕಾಮತಣ್ಹಾ(ಇಂದ್ರೀಯ ಬೋಗ), ಭವತಣ್ಹಾ(ಶಾಶ್ವತವಾಗಿ ಅಥವಾ ಇರಬೇಕೆಂಬ ತೀವ್ರಬಯಕೆ) ಮತ್ತು ವಿಭವ ತಣ್ಹಾ(ಇರಬಾರದು ಎಂಬ ತೀವ್ರಬಯಕೆ).

ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧ ಆರ್ಯಸತ್ಯವಾಗಿದೆ. ಅಂದರೆ ಈ ತಣ್ಹಾದಿಂದ ನಿಶ್ಶ್ಯೇಷವಾಗಿ ರಹಿತನಾಗುವಿಕೆ, ವಿರಾಗಹೊಂದುವಿಕೆ, ನಿರೋಧಹೊಂದುವಿಕೆ, ತ್ಯಾಗಮಾಡಿವಿಕೆ, ಬಿಟ್ಟುಬಿಡುವಿಕೆ, ಮುಕ್ತಿ ಹೊಂದುವಿಕೆ ಮತ್ತು ಪೂರ್ಣವಾಗಿ ಅಂಟದೆ ಹೋಗುವಿಕೆ.

          ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧಕ್ಕೇ ಕೊಂಡುಯ್ಯುವಂತಹ ಮಾರ್ಗದ ಆರ್ಯಸತ್ಯವಾಗಿದೆ. ಅದೇ ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ ಸಮ್ಮಾದೃಷ್ಟಿಕೋನ, ಸಮ್ಮಾಸಂಕಲ್ಪ, ಸಮ್ಮಾ ವಾಚ, ಸಮ್ಮಾ ಕಮ್ಮ, ಸಮ್ಮಾ ಜೀವನೋಪಾಯ, ಸಮ್ಮಾ ಸ್ಮೃತಿ ಮತ್ತು ಸಮ್ಮಾ ಸಮಾಧಿ.

ಇದೇ ದುಃಖದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಪೂರ್ಣವಾಗಿ ಅರಿಯಲೇಬೇಕು(ಪರಿನೆಯ್ಯ) ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಅರಿಯಲಾಗಿದೆ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

  ಇದು ದುಃಖಸಮುದಯದ ((ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಲೇಬೇಕು. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಿಯಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಇದೇ ದುಃಖನಿರೋಧ ಆರಿಯ ಸತ್ಯ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲೇಬೇಕು ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲಾಗಿದೆ  ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಇದೇ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲೇಬೇಕು. . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲಾಗಿದೆ  . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಭಿಕ್ಖುಗಳೇ ಎಲ್ಲಿಯವರೆಗೆ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಲಿಲ್ಲವೋ, ಅಲ್ಲಿಯವರೆಗೆ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಳ್ಳಲ್ಲಿಲ್ಲ.

 ಅದರೆ ಭಿಕ್ಖುಗಳೇ ಯಾವಾಗ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಿಹೋಯಿತೋ, ಆಗ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಂಡೆನು.

ಮತ್ತು ಆಗ ನನ್ನಲ್ಲಿ ಈ ಬಗೆಯ ಜ್ಞಾನವೂ ಹಾಗೂ ದರ್ಶನವೂ ಉದಯಿಸಿತು ಅದೇನೆಂದರೆ ; (ನನ್ನ) ಚೇತೋವಿಮುಕ್ತಿಯು ಅಚಲವಾದುದು, ಇದೇ (ನನ್ನ) ಕಟ್ಟಕಡೆಯ ಜನ್ಮ, ಮತ್ತೆ ಪುನರ್ಭವವಿಲ್ಲ.(ಅಸ್ತಿತ್ವವಿಲ್ಲ).


ಹೀಗೆ ಭಗವಾನರು ಸುತ್ತವನ್ನು ಪ್ರವಚಿಸಿದಾಗ ಭಿಕ್ಖುಗಳು ಆನಂದಿತರಾದರು ಹಾಗು ಅಭಿನಂದನೆ ಮಾಡಿದರು. ಯಾವಾಗ ಹೀಗೆ ಸುತ್ತವನ್ನು ಪ್ರವಚಿಸುವಾಗ ಪೂಜ್ಯ ಕೊಂಡನ್ಯರವರಿಗೆ ಹೀಗೆ ವಿರಜವಾದ, ವಿಮಲವಾದ ಧಮ್ಮಚಕ್ಷುವು ಉದಯವಾಯಿತು.: ಯಾವುದೆಲ್ಲಾ ಉದಯ ಧಮ್ಮವನ್ನು ಹೊಂದಿವೆಯೋ ಅವೆಲ್ಲವೂ ನಿರೋಧಧಮ್ಮವನ್ನು ಹೊಂದುತ್ತವೆ.

ಯಾವಾಗ ಬುದ್ಧಭಗವಾನರು ಈ ಧಮ್ಮಚಕ್ಕ ಸುತ್ತವನ್ನು ಪ್ರವಚಿಸಿದರೋ ಆಗ ಭೂಮಿಯಲ್ಲಿನ ದೇವದೇವತೆಗಳೂ ಹೀಗೇ ಹಷರ್ೋಧ್ಗಾರಗಳನ್ನು ಮಾಡಿದವು : ಭಗವಾನರು ವಾರಾಣಸಿಯ ಋಷಿಪಟ್ಟಣದಲ್ಲಿ ಮೃಗದಾಯದ ಬಳಿ ಅನುತ್ತರವಾದ ಧಮ್ಮಚಕ್ರವನ್ನು ಪ್ರವತರ್ಿಸಿದ್ದಾರೆ. ಈ ಬಗೆಯ ಧಮ್ಮಚಕ್ರದ ಚಾಲನೆಯನ್ನು ಈವರೆವಿಗೆ ಈ ಲೋಕಗಳ ಯಾವುದೇ ಸಮಣ ಬ್ರಾಹ್ಮಣರಾಗಲಿ, ದೇವಗಳಾಗಲಿ, ಮಾರರಾಗಲಿ, ಬ್ರಹ್ಮರಾಗಲಿ ಪ್ರವರ್ತನೆ ಮಾಡಿಲ್ಲ  ಈ ದಮ್ಮಚಕ್ಕಪವತ್ತನವನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಹಾಗೂ ಯಾರಿಂದಲೂ ಹಿಂದಕ್ಕೆ ತಿರುಗಿಸಲು ಸಾಧ್ಯವಿಲ್ಲ .. ಈ ಬಗೆಯ ಭೂಮಿಯ ದೇವದೇವತೆಗಳ ಶಬ್ದಗಳನ್ನು ಆಲಿಸಿದಂತಹ ಚಾತುಮಹಾರಾಜಿಕಾ ದೇವತೆಗಳುಹೀಗೆಯೇ ಪುನರುಚ್ಚಿಸಿದವು. . . .  . . . . . .ಅವನ್ನು ಕಂಡು . . . .ತಾವತಿಂಸ . .. . . . . .ಯಾಮ. . . . . . ತುಸಿತಾ. . .. . . .ನಿಮ್ಮಾನರತಿ. . .. . . . . .ಪರನಿಮ್ಮಾನರತಿ ದೇವಗಳು ಪುನರುಚ್ಚಿಸಿದವು.. ..  . . .. .. .ಅವರ ಧ್ವನಿ ಆಲಿಸಿದಂತಹ ಬ್ರಹ್ಮಕಾಯಿಕ ದೇವತೆಗಳಾದ ಬ್ರಹ್ಮ ಪರಿಸಜ್ಜ,  . . . ಬ್ರಹ್ಮ ಪುರೋಹಿತ .. . .ಮಹಾಬ್ರಹ್ಮ . . . .ಪರಿತ್ತಭ. .. . . .ಅಪ್ಪಮಾನಾಭ. .. . .ಸುಭಕಿನ್ನ,, . . ..ವೆಹಪ್ಫಲ. . .ಅವಿಹ. . .. ಅತಪ್ಪ. . . ಸುದಸ್ಸ . . . .ಮತ್ತು ಅಕನಿತ್ಥ ಅವರೂ ಸಹಾ ಹೀಗೆಯೇ ಹಷರ್ೋಧ್ಗಾರಗಳನ್ನು ಮಾಡಿದವು
ಹೀಗೇ ಆ ಕ್ಷಣದಲ್ಲಿ ಆ ಸಮಯದಲ್ಲಿ ಈ ಬಗೆಯ ಹಷರ್ೋಧ್ಗಾರಗಳೂ ಬ್ರಹ್ಮಲೋಕಗಳವರೆವಿಗೂ ಹಬ್ಬಿತು. ಆಗ ಹತ್ತುಸಹಸ್ರ ಲೋಕಧಾತುಗಳು ಕಂಪಿಸಿದವು,  ನಡುಗಿದವು, ಭೀಕರವಾಗಿ ಅಲುಗಾಡಿದವು.
ಆಗ ದೇವದೇವತೆಗಳ ಮೀರಿಸಿದ ತೇಜಸ್ಸುಗಳ ಮಹಾ ಬೆಳಗಿನಿಂದಾಗಿ ಲೋಕವೆಲ್ಲಾ ಪ್ರಕಾಶಮಾನವಾಯಿತು. ಆಗ ಭಗವಾನರು ಹೀಗೆ ನುಡಿದರು. :  ಅರಿತಿದ್ದಾನೆ ಕೋಂಡನ್ಯ, ನಿಜವಾಗಿಯು ಆಯುಷ್ಮಂತ ಕೋಂಡನ್ಯ ಜ್ಞಾನವನ್ನು ಪಡೆದಿದ್ದಾನೆ .ಅಥರ್ೈಸಿಕೊಂಡಿದ್ದಾನೆ.

ಅಂದಿನಿಂದ ಪೂಜ್ಯಕೊಂಡನ್ಯನವರಿಗೆ ಅಞ್ಞಸಿ(ಅರಿತಿರುವ) ಕೊಂಡನ್ಯ ಎಂದು ಕರೆಯಲಾರಂಬಿಸಿದರು.

  _____________________________ಸಮಾಪ್ತಿ_______________________________________

No comments:

Post a Comment