Friday 23 January 2015

naalaka sutta in kannada (ನಾಲಕ ಸುತ್ತ)

11. ನಾಲಕ ಸುತ್ತ
                (ಅಸಿತ ಋಷಿಯ ಸೋದರಿಯ ಪುತ್ರನಿಗೆ ಭಗವಾನರ ಉಪದೇಶ)

1.            ಅಸಿತ ಋಷಿಯು (ತುಸಿತ ದೇವಲೋಕದಲ್ಲಿ) ದಿನದ ಆಹಾರಕ್ಕೆಂದು ಹೋಗಿ ನೋಡಿದಾಗ ಸರ್ವ ದೇವತೆಗಳೂ ಆನಂದಿತರಾಗಿದ್ದಾರೆ, ಪ್ರಸನ್ನರಾಗಿದ್ದಾರೆ, ದೇವತೆಗಳು ಮತ್ತು ಇಂದ್ರನು ಸತ್ಕಾರ ಪೂರ್ವಕವಾಗಿ, ಶುದ್ಧ ವಸ್ತ್ರಗಳನ್ನು ಧಾರಣೆ ಮಾಡಿದ್ದನು. ಹಾಗು ವಸ್ತ್ರವನ್ನು ಹಾರಿಸುತ್ತಾ ಅತ್ಯಧಿಕ ಸ್ತುತಿಯನ್ನು ಮಾಡುತ್ತಿದ್ದನು.
2.            ದೇವತೆಗಳ ಪ್ರಸನ್ನತೆ ಹಾಗು ಹರ್ಷ ಚಿತ್ತವನ್ನು ಕಂಡು ಅಸಿತರು ಈ ರೀತಿ ಚಿಂತಿಸಿದರು- ಯಾವ ಕಾರಣ ದೇವಗಣಕ್ಕೆ ಅತ್ಯಂತ ಪ್ರಸನ್ನರನ್ನಾಗಿ ಮಾಡಿ ವಸ್ತ್ರ ಹಾರಿಸುವಂತೆ ಮಾಡಿದೆ?.
3.            ಒಮ್ಮೆ ಅಸುರರೊಂದಿಗೆ ಯುದ್ಧವಾಗಿ, ದೇವತೆಗಳಿಗೆ ವಿಜಯವಾಗಿತ್ತು. ಅಸುರರು ಪರಾಜಿತರಾಗಿದ್ದರು. ಆಗಲೂ ಸಹಾ ಈ ರೀತಿಯಾದ ರೋಮಾಂಚನಕಾರಿ ಆನಂದ ಅನುಭವಿಸಿರಲಿಲ್ಲ. ಯಾವ ಅದ್ಭುತವಾದ ವಿಷಯ ಕಂಡು ದೇವತೆಗಳು ಪ್ರಮುದಿತರಾಗಿದ್ದಾರೆ.
4.            ದೇವತೆಗಳು ಹಷರ್ೊದ್ಗಾರಗಳು ಮಾಡುತ್ತಿದ್ದಾರೆ. ಗೀತೆಗಳನ್ನು ಹಾಡುತ್ತಿರುವರು. ಭುಜಗಳನ್ನು ಹಾರಿಸುತ್ತಾ ಹಾಗು ದಿವ್ಯನೃತ್ಯಗಳನ್ನು ಮಾಡುತ್ತಾ ಇರುವರು. ನಾನು ಮೇರುಶಿಖರದಲ್ಲಿರುವ ತಮ್ಮನ್ನು ಕೇಳುತ್ತಿದ್ದೇನೆ, ಇಂದ್ರ ನನ್ನ ಸಂದೇಹವನ್ನು ಶೀಘ್ರದಲ್ಲಿ ದೂರೀಕರಿಸು.
5.            ಇಂದ್ರ - ಆ ಅತುಲನಿಯ, ಪರಮಶ್ರೇಷ್ಠ ರತ್ನವಾದ ಮಹಾಬೋಧಿಸತ್ವರು ಸರ್ವಜೀವಿಗಳ ಹಿತಸುಖಕ್ಕಾಗಿ ಮಾನವ ಲೋಕದಲ್ಲಿ ಶಾಕ್ಯ ಜನಪದದಲ್ಲಿ ಲುಂಬಿನಿ ಉದ್ಯಾನದಲ್ಲಿ (ಗ್ರಾಮ) ಜನಿಸಿದ್ದಾರೆ. ಅದರಿಂದ ನಾವೆಲ್ಲಾ ಅತ್ಯಧಿಕ ತುಷ್ಟರು ಹಾಗು ಪ್ರಸನ್ನರೂ ಆಗಿದ್ದೇವೆ.
6.            ಅವರು ಸರ್ವಜೀವಿಗಳಲ್ಲೂ ಅತ್ಯುತ್ತಮರು, ಮಹಾಶ್ರೇಷ್ಠರು, ಸರ್ವಮಾನವ ಶ್ರೇಷ್ಠರು, ಸರ್ವ ಪ್ರಜೋತ್ತಮರು ಆಗಿರುವರು. ಹೇಗೆ ಸಿಂಹವು ಸುಘರ್ಜನೆ ಮಾಡುವುದೋ, ಅದೇರೀತಿ ಋಷಿಪತ್ತನ ವನದಲ್ಲಿ ಧರ್ಮಚಕ್ರ ಪ್ರವರ್ತನ ಮಾಡುವರು.
7.            ಈ ಮಾತನ್ನು ಕೇಳಿದ ಅವರು ಅತಿ ಶೀಘ್ರದಲ್ಲಿ ಶುದ್ಧೋಧನ ಮಹಾರಾಜರ ಭವನಕ್ಕೆ ಬಂದರು. ಅಲ್ಲಿ ಕುಳಿತು ಶಾಕ್ಯರೊಂದಿಗೆ ಈ ರೀತಿ ಕೇಳಿದರು- ಕುಮಾರರೆಲ್ಲಿ? ನಾನು ದಶರ್ಿಸಲು ಪ್ರಬಲಾಕಾಂಕ್ಷೆಯುಳ್ಳವನಾಗಿದ್ದೇನೆ!
8.            ಆಗ ಸುಂದರ ಆಕಾರದಲ್ಲಿ ಸುನಿಮರ್ಿತರಾದ, ತೇಜೋಕಾಂತಿಯುಕ್ತರಾದ, ಸ್ವರ್ಣಪ್ರಭೆಯನ್ನು ಪ್ರಸರಿಸುತ್ತಿರುವ ಪರಮ ಸ್ವರೂಪಿ ಪುತ್ರನನ್ನು ಶಾಕ್ಯರು ಅಸಿತ ಋಷಿಗೆ ತೋರಿಸಿದರು.
9.            ಪ್ರಜ್ವಲಿಸುತ್ತಿರುವ ತೇಜಸ್ಸಿನಂತೆ, ಆಕಾಶದಲ್ಲಿ ನಿರ್ಮಲಶುದ್ಧ ಚಂದಿರನಂತೆ ಮತ್ತು ಮೇಘರಹಿತ ಶರದ್ ಋತುವಿನ ಸೂರ್ಯನಂತೆ ಇರುವ ಕುಮಾರನನ್ನು ಕಂಡು ಅಸಿತರು ಆನಂದಿತರಾದರು. ಅವರಲ್ಲಿ ವಿಪುಲವಾದ ಆನಂದವು ಉಕ್ಕಿಹರಿಯಿತು.
10.          ಆಕಾಶದಲ್ಲೂ ಸಹಾ ದೇವತೆಗಳಲ್ಲಿ ಅನೇಕ ಶಾಖೆ ಹಾಗು ಸಹಸ್ರ ಮಂಡಲದಿಂದ ಕೂಡಿದ ಛತ್ರಿಯನ್ನು ಧಾರಣೆ ಮಾಡಿದ್ದರು. ಸ್ವರ್ಣದಂಡಯುಕ್ತವಾದ ಚಾಮರವನ್ನು ಬೀಸುತ್ತಿದ್ದರು. ಆದರೂ ಚಾಮರದವರೂ ಮತ್ತು ಛತ್ರಿಧಾರಣೆಯವರು ಕಾಣುತ್ತಿರಲಿಲ್ಲ.
11.          ಜಟಧಾರಿಯಾದ, ಪ್ರಸಿದ್ಧಿ ಹೊಂದಿದ ಅಸಿತ ಋಷಿಯು ಹಳದಿ ವರ್ಣದ ಕಂಬಳಿಯಲ್ಲಿಟ್ಟ ಸ್ವರ್ಣಮುದ್ರೆಯಂತಿರುವ ಸುಂದರ ಕುಮಾರನನ್ನು ದಶರ್ಿಸಿ ಅತ್ಯಧಿಕ ಹಷರ್ಿತರಾದರು, ಅವರ ಚಿತ್ತವು ಸಹಾ ಆನಂದಿತವಾಯಿತು. ಕುಮಾರನ ಮೇಲೆ ಶ್ವೇತಛತ್ರಿಯಿತ್ತು.
12.          ಉತ್ತಮೋತ್ತಮರಾದ ಶಾಕ್ಯ ಕುಮಾರನನ್ನು ಗ್ರಹಿಸಿ, ಲಕ್ಷಣಶಾಸ್ತ್ರ ಮತ್ತು ವೇದಪಾರಂಗತ ಜಿಜ್ಞಾಸು ಋಷಿಯು ಪ್ರಸನ್ನ ಮನದಿಂದ ಈ ಮಾತು ಹೇಳಿದರು. ಈತನು ಸವರ್ೊತ್ತಮನಾಗಿದ್ದಾನೆ, ಮನುಷ್ಯರಲ್ಲೇ ಅತ್ಯಂತ ಉತ್ತಮನಾಗಿರುವನು.
13.          ಹಾಗೆಯೇ ಅವರಿಗೆ ತಮ್ಮ ಗಮನ (ಮರಣ)ದ ಸ್ಮರಣೆ ಉಂಟಾಗಿ ಅವರ ನೇತ್ರಗಳಲ್ಲಿ ಆಶ್ರುವು ಹರಿಯಿತು. ಶಾಕ್ಯರಾಜರಂತು ಅಸಿತ ಋಷಿಯ ಆಶ್ರುವನ್ನು ಕಂಡು ಗಾಬರಿಯಿಂದ ಈ ರೀತಿ ಕೇಳಿದರು- ಕುಮಾರನಿಗೆ ವಿಘ್ನವಾವುದು ಇಲ್ಲತಾನೆ?
14.          ಕಾಲದೇವಲ (ಅಸಿತ) ಋಷಿಯು ಶಾಕ್ಯರ ಆತಂಕ ಕಂಡು ಈ ವಾಕ್ಯ ನುಡಿದರು: ಅಹಿತ ಯಾವುದನ್ನೂ ಕುಮಾರ ಕಾಣಲಾರ ಮತ್ತು ಯಾವುದೇ ವಿಘ್ನ ಆಗಲಾರದು. ಈತನು ಸಾಧಾರಣ ಮಾನವನಲ್ಲ, ತಾವೆಲ್ಲರೂ ಪ್ರಸನ್ನರಾಗಿರಿ.
15.          (ಚಕ್ಷು) ಉತ್ತಮನು, ವಿಶುದ್ಧ ದಶರ್ಿಯಾದ ಈ ಕುಮಾರನು ಸಂಬೋಧಿಯ ಪ್ರಾಪ್ತಿಮಾಡುವನು ಮತ್ತು ಸರ್ವಜೀವಿಗಳ (ಬಹುಜನರ) ಹಿತದ ಅನುಕಂಪೆಯಿಂದ ಧಮ್ಮಚಕ್ರದ ಪ್ರವರ್ತನ ಮಾಡುವನು. ಅವನ ಬ್ರಹ್ಮಚರ್ಯಯುತ ಶಾಸನವು ಶ್ರೇಷ್ಠತರವಾಗಿ ಹರಡುತ್ತದೆ.
16.          ಆದರೆ ಇಲ್ಲಿ ನನ್ನ ಆಯುವು ಹೆಚ್ಚು ಉಳಿದಿಲ್ಲ. ಅದಕ್ಕೆ ಮುಂಚೆಯೇ ನನ್ನ ಮೃತ್ಯು ಸಂಭವಿಸುತ್ತದೆ. ನಾನು ಈ ಅಸದೃಶ ಪರಾಕ್ರಮಿಯ ಧಮ್ಮವನ್ನು ಕೇಳಲಾರೆನು. ಆದ್ದರಿಂದ ನಾನು ಆತುರನಾಗಿದ್ದೇನೆ, ಕಷ್ಟದಲ್ಲಿದ್ದೇನೆ ಹಾಗು ದುಃಖಿತನಾಗಿದ್ದೇನೆ.
17.          ಶಾಕ್ಯರಿಗೆ ವಿಪುಲವಾದ ಆನಂದ ನೀಡಿ ಆ ಬ್ರಹ್ಮಚಾರಿಯು ಅಂತಃಪುರದಿಂದ ಹೊರಟರು. ಆದರೆ ಅವರು ತಮ್ಮ ಸೋದರಿಯ ಪುತ್ರನ ಮೇಲೆ ಅನುಂಕಪ ತಾಳಿ ಆತನನ್ನು ಅಸದೃಶ ಪರಕ್ರಮಿಯ ಬಳಿ ಬ್ರಹ್ಮಚರ್ಯೆಯಲ್ಲಿ ತೊಡಗಿಸಿದರು.
18.          ಸಂಬೋಧಿ ಪ್ರಾಪ್ತಿ, ಧಮ್ಮ ಮಾರ್ಗದ ಉಪದೇಶ ನೀಡುವಂತ ಬುದ್ಧರ ಘೋಷ ಪರರಿಂದ ಕೇಳಿದಾಗ ಅವರ (ಬುದ್ಧರ) ಬಳಿಗೆ ಹೋಗು, ಧಮ್ಮದ ವಿಷಯ ಕೇಳಿ ಆ ಭಗವಾನರ ಬಳಿ ಬ್ರಹ್ಮಚರ್ಯೆ ಪಾಲಿಸು.
19.          ಹಿತೈಷಿ ಭಾವದಿಂದ, ಸ್ಥಿರವಾದ, ಉತ್ತಮವಾದ, ವಿಶುದ್ಧ ಭವಿಷ್ಯ ದೃಷ್ಟಿಯಿಂದ ಉಪದಿಷ್ಟನಾದ ಪುಣ್ಯವಂತ ಆ ನಾಲಕನು ಬುದ್ಧರ (ಜಿನ) ಪ್ರತೀಕ್ಷೆಯಿಂದ ತಪಸ್ವಿಯಾಗಿ ಇಂದ್ರಿಯಗಳ ರಕ್ಷಣೆ ಮಾಡಿದನು.
20.          ಧಮ್ಮಚಕ್ರ ಪ್ರವತ್ತನದ ಸಮಯದಲ್ಲಿ ಬುದ್ಧರೆಂಬ ಘೋಷವನ್ನು ಕೇಳಿ, ಅವರಲ್ಲಿಗೆ ಹೋದನು. ಪರಮಶ್ರೇಷ್ಠ ಋಷಿಗೆ ದಶರ್ಿಸಿ ಧಮ್ಮದ ವಿಷಯದಲ್ಲಿ ಅಸಿತರಿಂದ ಕಲಿಯಲ್ಪಟ್ಟ ಪ್ರಶ್ನೆಗಳನ್ನು ಉತ್ತಮ ಪ್ರಜ್ಞೆಯಿಂದ ಕೇಳಿದನು.
ಇಲ್ಲಿಗೆ ವಸ್ತು ಗಾಥೆ ಮುಗಿಯಿತು.
21.          ನಾಲಕ - ನಾನು ಈ ಮಾತನ್ನು ಅಸಿತ ಋಷಿಯಿಂದ ಯಥಾರ್ಥವಾಗಿ ಅರಿತಿರುವೆನು. ಸರ್ವಧಮ್ಮಗಳಲ್ಲಿ ಪಾರಂಗತರಾದ ಹೇ ಗೋತಮರೇ, ನಾನು ಅದನ್ನು ಕೇಳುತ್ತಿರುವೆನು.
22.          ಗೃಹತ್ಯಾಗಿಯಾಗಿ ಭಿಕ್ಷೆಯಿಂದ ಜೀವಿಸುತ್ತಿರುವ ನನಗೆ, ನಾನು ಪ್ರಶ್ನಿಸಿದಾಗ ಉತ್ತಮ ಪದದ ವಿಷಯದಲ್ಲಿ ತಿಳಿಸಿ.
23.          ಭಗವಾನರು - ದುಷ್ಕರ ಮತ್ತು ಕಠಿಣತೆಯಿಂದ ಪ್ರಾಪ್ತವಾದ ಜ್ಞಾನ ವ್ಯಾಖ್ಯೆಯನ್ನು ನಾನು ಮಾಡುವೆನು. ನಾನು ಆ ವಿಷಯದಲ್ಲಿ ನಿನಗೆ ತಿಳಿಸುವೆನು. ಆದ್ದರಿಂದ ನೀನು ಸ್ಥಿರಚಿತ್ತದಲ್ಲಿ ದೃಢನಾಗು.
24.          ಗ್ರಾಮದಲ್ಲಿ ಕೆಲವರು ವಂದಿಸುವರು, ಅಥವಾ ಕೆಲವರು ನಿಂದಿಸುವರು. ಅದರ ಪ್ರತಿಯಾಗಿ ಸಮಾನ ಭಾವದಿಂದಿರು, ಮನವನ್ನು ದೂಷಿತ ಮಾಡದಿರು, ಶಾಂತತೆ ಹಾಗು ವಿನೀತನಾಗಿ ಸಂಚರಿಸು.
25.          ದಾವಾಗ್ನಿಯ ಜ್ವಾಲೆಯ ರೀತಿ ನಾನಾ ಪ್ರಕಾರದ ಅವಲಂಬನೆ (ಆಕರ್ಷಣೆ) ಉಪಸ್ಥಿತವಾಗಿರುತ್ತದೆ. ಸ್ತ್ರೀಯರು ಮುನಿಗಳಿಗೆ ಪ್ರಲೋಭನೆ ಮಾಡುವರು. ಅವರಲ್ಲಿ ನೀನು ಪ್ರಲೋಭಿತನಾಗದಿರು.
26.          ಮೈಥುನ ಧರ್ಮದಿಂದ ವಿರತನಾಗು, ಒಳ್ಳೆಯ-ಕೆಟ್ಟದಾದ ಕಾಮಭೋಗಗಳನ್ನು ತ್ಯಜಿಸಿ, ನಿಂತಿರುವ ಮತ್ತು ಚಲಿಸುತ್ತಿರುವ ಜೀವಿಗಳ ಬಗ್ಗೆ ವಿರೋಧಭಾವ ಅಥವಾ ಆಸಕ್ತಿಯಿಂದ ರಹಿತನಾಗು.
27.          ಹೇಗೆ ನಾನು ಇರುವೆನೋ, ಹಾಗೆಯೇ ಜೀವಿಗಳು ಸಹಾ, ಹೇಗೆ ಈ ಜೀವಿಗಳಿರುವವೋ ಹಾಗೆಯೇ ನಾನಿರುವೆನು. ಈ ರೀತಿಯಾಗಿ ಎಲ್ಲರೂ ತನ್ನ ಸಮಾನರು ಎಂದು ಅರಿತು ಯಾರನ್ನು ವಧಿಸದಿರು ಮತ್ತು ಪರರಿಂದ ಕೊಲ್ಲಿಸದಿರು (ಹಿಂಸಿಸದಿರು).
28.          ಯಾವ ಇಚ್ಛೆ ಮತ್ತು ಲೋಭದಿಂದ ಸಾಮಾನ್ಯ ಜನ, ಪ್ರಾಣಿಗಳು ಆಸಕ್ತರಾಗಿರುವರು, ಅದನ್ನು ತ್ಯಜಿಸಿ ಚಕ್ಷುಮಂತನು ಸಂಚರಿಸಲಿ ಮತ್ತು ನರಕವನ್ನು ದಾಟಿಹೋಗಲಿ.
29.          ಯಾರು ಹೊಟ್ಟೆಬಾಕನಲ್ಲವೋ, ಮಿತಹಾರ ಭೋಜನ ಮಾಡುವನೋ, ಅಲ್ಪೆಚ್ಛೆ ಮತ್ತು ಲೋಭರಹಿತ ನಾಗಿರುವನೋ ಅಂತಹ ಇಚ್ಛಾರಹಿತ ಸಂತುಷ್ಟ ವ್ಯಕ್ತಿ ಶಾಂತನಾಗುವನು.
30.          ಭಿಕ್ಷೆ ಸ್ವೀಕರಿಸಿ ಆ ಮುನಿಯು ವನದಲ್ಲಿ ಹೋಗಲಿ ಮತ್ತು ಗಿಡ (ಮರ)ದ ಕೆಳಗೆ ಆಸನ ಹಾಕಿ ಕುಳಿತುಕೊಳ್ಳಲಿ.
31.          ವನದಲ್ಲಿ ಇರುತ್ತಾ ಆ ಧೀರನು ಧ್ಯಾನತತ್ವರ ಆಗಲಿ, ತನಗೆ ಸಂತೋಷ ನೀಡುವ ಮರದ ಕೆಳಗೆ ಧ್ಯಾನಮಾಡಲಿ.
32.          ರಾತ್ರಿ ಕಳೆದ ನಂತರ ಪ್ರಾತಃ ಭಿಕ್ಷೆಗಾಗಿ ಗ್ರಾಮವನ್ನು ಪ್ರವೇಶಿಸಲಿ, ಅಲ್ಲಿ ಯಾರಲ್ಲಿಯೂ ನಿಮಂತ್ರಣ ಸ್ವೀಕಾರ ಮಾಡದೆ ಮತ್ತು ಪರರು ಗ್ರಾಮದಿಂದ ತಂದ ಭೋಜನವನ್ನು ಸ್ವೀಕರಿಸದಿರಲಿ.
33.          ಮುನಿಯು ಗ್ರಾಮದಲ್ಲಿ ಬಂದಕೂಡಲೇ ಕುಲಗಳಲ್ಲಿ ಬೆರೆಯದಿರಲಿ, ನಿಶ್ಶಬ್ದದಿಂದ ಭಿಕ್ಷೆ ಸ್ವೀಕರಿಸಲಿ, ಸಂಕೇತ ನೀಡುವಂತಹ ಯಾವ ಮಾತನ್ನು ಆಡದಿರಲಿ.
34.          ಏನಾದರೂ ಉತ್ತಮವಾದದ್ದು ಸಿಕ್ಕರೆ ಸಿಗಲಿ, ಸಿಗದಿದ್ದರೂ ಪರವಾಗಿಲ್ಲ. ಒಂದು (ಸ್ಥಳ) ಸ್ಥಾನದಲ್ಲಿ ವೃಕ್ಷದ ರೀತಿ ಎರಡು ಅವಸ್ಥೆಯಲ್ಲಿ ಸಮಾನ (ಶಾಂತ) ನಾಗಿಯೇ ಇರುತ್ತಾನೆ.
35.          ಮೂಕನಾಗದಿದ್ದರೂ ಮೂಕನ ಹಾಗೆ ನಿಶ್ಶಬ್ದದಿಂದ ಭಿಕ್ಷಾಪಾತ್ರೆಯನ್ನು ತೆಗೆದುಕೊಂಡು ಸಂಚರಿಸುತ್ತಾ ಅಲ್ಪ ದಾನವನ್ನು ಅನಾಧರಣೆ ಮಾಡದೆ ಮತ್ತು ದಾನಿ (ದಾತನ)ಯ ನಿಂದೆ ಮಾಡದಿರಲಿ.
36.          ಮಹಾಶ್ರಮಣರಿಂದ ಒಳ್ಳೆಯ-ಕೆಟ್ಟ ಮಾರ್ಗ ಹೇಳಲ್ಪಟ್ಟಿವೆ. ಸಂಸಾರ ಸಾಗರವನ್ನು ಎರಡುಬಾರಿ ದಾಟಲಾಗುವುದಿಲ್ಲ ಮತ್ತು ಒಂದೇಸಾರಿ (ತಕ್ಷಣವೂ) ಪ್ರಾಪ್ತಿಮಾಡಲಾಗುವುದಿಲ್ಲ.
37.          ಯಾರಲ್ಲಿ ತೃಷ್ಣೆ ಇಲ್ಲವೋ, ಯಾವ ಭಿಕ್ಷುವಿನ ಭವಸ್ತೋತ್ರ ನಷ್ಟವಾಗಿದೆಯೋ, ಯಾರು ಕೃತ್ಯ-ಅಕೃತ್ಯಗಳಿಂದ ಮೀರಿಹೋಗಿರುವರೋ, ಅವರಿಗೆ ಯಾವ ಸಂತಾಪವೂ ಇಲ್ಲ.
38.          ನಾನು ನಿನಗೆ ಮೌನೇಯ (ಶ್ರೇಷ್ಠಜ್ಞಾನ) ವನ್ನು ತಿಳಿಸುತ್ತೇನೆ, ಅದು ಕತ್ತಿಯ ಅಲಗಿನಂತಿರುತ್ತದೆ. ನಾಲಿಗೆಯನ್ನು ತಾಲುವಿಗೆ ಒತ್ತಿ ಹೊಟ್ಟೆ (ನಾಲಿಗೆ)ಯ ಬಗ್ಗೆ ಸಂಯಮಿಯಾಗು.
39.          ಆಲಸ್ಯರಹಿತ ಚಿತ್ತದವನಾಗು, ಅವಿಶ್ರಾಂತಿಯುತ ಚಿಂತನೆ ಮಾಡದಿರು, ಕ್ಲೇಷರಹಿತ ಹಾಗು ಅನಾಸಕ್ತನಾಗಿ ಬ್ರಹ್ಮಚರ್ಯ ಪಾಲನೆಮಾಡು.
40.          ಒಂದೇ ಆಸನದಲ್ಲಿ ಬಹುಕಾಲ ಇರುವಂತೆ ಅಭ್ಯಾಸಿಸು ಮತ್ತು ಶ್ರಮಣರ ಸಂಗತಿ ಮಾಡು, ಏಕಾಂತವಾಸಿಯು ಮೌನೆಯ ಎಂದು ಕರೆಯಲ್ಪಡುತ್ತಾನೆ. ಏಕಾಂತತೆಯಲ್ಲಿ (ಚಿತ್ತ ಏಕಾಂತತೆ) ವಿಹರಿಸುವವನು (ಪಾಲಿಸುವವನು) ದಶದಿಕ್ಕುಗಳನ್ನು ಪ್ರಕಾಶಿಸುವನು.
41.          ಧ್ಯಾನಿಯು, ವಿಷಯ ವಾಸನಾ ತ್ಯಾಗಿಯು ಧೀರರ ವಾಣಿಯನ್ನು ಕೇಳಿ ಶ್ರದ್ಧಾಳು ವ್ಯಕ್ತಿಯಾಗಿ (ಪಾಪಗಳಲ್ಲಿ) ಲಜ್ಜೆಯುಳ್ಳವನಾಗಿ (ಪುಣ್ಯ) ಕರ್ಮಗಳಲ್ಲಿ ಶ್ರದ್ಧೆಯನ್ನು ಅತ್ಯಧಿಕಾಗಿ ಬೆಳೆಸಲಿ.
42.          ಚಿಕ್ಕ ನದಿಗಳಲ್ಲಿ ಮತ್ತು ಕಾಲುವೆಗಳ ಮಧ್ಯೆಯಿರುವುದನ್ನು ನದಿ ಎಂದು ಭಾವಿಸು. ಚಿಕ್ಕ ನದಿಯು ಶಬ್ದ ಮಾಡುತ್ತಾ ಹರಿಯುತ್ತದೆ. ಆದರೆ ಸಾಗರವು ಶಾಂತವಾಗಿ ಚಲಿಸುತ್ತದೆ.
43.          ಯಾರಲ್ಲಿ ಕೊರತೆಯಿರುವುದೋ ಆತನು ಕೀತರ್ಿಗಾಗಿ (ಪ್ರಚಾರ) ಶಬ್ದಮಾಡುತ್ತಾನೆ. ಆದರೆ ಯಾರು ಪೂರ್ಣವಾಗಿರುವರೊ, ಅವರು ಶಾಂತರಾಗಿರುತ್ತಾರೆ. ಮೂರ್ಖ ಅರ್ಧ ತುಂಬಿದ ಗಡಿಗೆಯಂತಾದರೆ, ಪಂಡಿತರು ತುಂಬಿದ ಜಲಾಶಯದಂತೆ.
44.          ಯಾವ ಶ್ರಮಣರು ಅರ್ಥಯುಕ್ತ ಬಹುಮಾತನ್ನು ಹೇಳುವರೋ, ಅವರು ಅರಿತು ಧಮ್ಮೋಪದೇಶ ನೀಡುವರು ಮತ್ತು ಅರಿತು ಹೇಳುವರು.
45.          ಅವರು ಅರಿತು ಸಹಾ ಸಂಯಮದ ಕಾರಣದಿಂದ ಅರಿತ ಧರ್ಮವನ್ನು ಬಹು ವಿವರವಾಗಿ ಹೇಳುವುದಿಲ್ಲ. ಮುನಿ ಮೌನೆಯನೆಂದು ಕರೆಯಲ್ಪಡುತ್ತಾನೆ. ಆ ಮುನಿಯು ಮೌನೆಯವನ್ನು (ಶಾಂತಜ್ಞಾನ) ಪ್ರಾಪ್ತಿಮಾಡಿರುವನು.

ಇಲ್ಲಿಗೆ ನಾಲಕ ಸುತ್ತ ಮುಗಿಯಿತು.

No comments:

Post a Comment