Wednesday 1 October 2014

rahula sutta in kannada

11. ರಾಹುಲ ಸುತ್ತ
(ಭಗವಾನ ಬುದ್ಧರಿಂದ ರಾಹುಲನಿಗೆ ಉಪದೇಶ)
1.            ಭಗವಾನ ಬುದ್ಧರು - ಏನು ಸದಾ ಪಂಡಿತರ (ಸಾರಿಪುತ್ರ) ಜೊತೆಯಲ್ಲಿ ಇರುವುದರಿಂದ ಅವರ ಅನಾಧರಣೆ ಮಾಡುವುದಿಲ್ಲ ತಾನೆ? ಏನು ಮಾನವರಲ್ಲಿ ಉಲ್ಕೆ (ಪಂಜು) ಯನ್ನು ಧರಿಸಿರುವವರು (ಸಾರಿಪುತ್ರ) ನಿನ್ನಿಂದ ಪೂಜಿತರಾಗಿರುವರೇ?
2.            ರಾಹುಲ - ನಾನು ಸದಾ ಜೊತೆಯಲ್ಲಿರುವ ಕಾರಣ ಪಂಡಿತರ ಅನಾಧರಣೆ ಮಾಡುವುದಿಲ್ಲ. ಮನುಷ್ಯರಲ್ಲಿ ಉಲ್ಕೆ ಧರಿಸಿರುವವರು ನನ್ನಿಂದ ಪೂಜಿತರಾಗಿರುವರು.
3.            ಭಗವಾನ್ ಬುದ್ಧರು - ಐದು ರೀತಿಯ ಪ್ರಿಯವಾದ ಹಾಗು ಮನೋಹರವಾದ ಕಾಮ-ಭೋಗಗಳನ್ನು ತ್ಯಜಿಸಿ ಶ್ರದ್ಧಾಪೂರ್ವಕವಾಗಿ ಗೃಹದಿಂದ ಹೊರಬಂದು ದುಃಖದ ಅಂತ್ಯ ಮಾಡುವವನಾಗು.
4.            ಉತ್ತಮ ಮಿತ್ರರ ಸಂಗತಿ ಬೆರೆಯುವಂತಾಗು, ಏಕಾಂತ ಹಾಗು ಶಬ್ದರಹಿತ ಗ್ರಾಮದಿಂದಲೂ ದೂರ ಶಾಂತ ಸ್ಥಳದಲ್ಲಿ ಶಯನಾಸನ ಹಾಕಿಕೋ ಹಾಗು ಭೋಜನದಲ್ಲಿ ಮಿತಿ ಅರಿಯುವವನಾಗು.
5.            ಚೀವರ, ಪಿಂಡಪಾತ (ಭೋಜನ), ಪ್ರತ್ಯಯ (ಔಷಧಿ) ಹಾಗು ಶಯನಾಸನ ಇವುಗಳಲ್ಲಿ ತೃಷ್ಣೆ ಮಾಡದಿರು. ಈ ಲೋಕಗಳಲ್ಲಿ ಮತ್ತೆ ಬಾರದಿರು.
6.            ಪಾತಿಮೋಕ್ಖ (ನಿಯಮ)ಗಳಲ್ಲಿ ಸಂಯಮದಿಂದಿರು, ಐದು ಇಂದ್ರಿಯಗಳಲ್ಲಿ ಕಾಯಾನುಗತಾಸ್ಮೃತಿ ಸ್ಥಾಪಿಸಿರಲಿ, ವೈರಾಗ್ಯ ವೃದ್ಧಿಸುವವನಾಗು.
7.            ರಾಗಯುಕ್ತವಾದ ಸೌಂದರ್ಯದ ನಿಮಿತ್ತ (ಸಂಕೇತ-ಗ್ರಹಿಕೆ)ಗಳನ್ನು ತ್ಯಜಿಸು, ಏಕಾಗ್ರ ಹಾಗು ಸಮಾಧಿಸ್ಥನಾಗು, ಅಶುಭದ ಭಾವನೆಯಲ್ಲಿ ಚಿತ್ತವನ್ನು ನಿಲ್ಲಿಸು.
8.            ಅನಿಮಿತ್ತದ (ಶೂನ್ಯ / ಅತಿ ಸೂಕ್ಷ್ಮ ಚಿತ್ತಾವಸ್ಥೆ) ಅಭಿವೃದ್ಧಿಗೊಳಿಸು, ಅಭಿಮಾನದ ಅನುಶಯ (ಚಿತ್ತವೃತ್ತಿ) ತೆಗೆದುಬಿಡು. ಆಗ ಅಭಿಮಾನದ ಅಂತ್ಯಮಾಡಿ ಉಪಶಾಂತನಾಗಿ ವಿಹರಿಸುವೆ (ಸಂಚರಿಸುವೆ).
                ಈ ರೀತಿಯಾಗಿ ಭಗವಾನ್ ಬುದ್ಧರು ಆಯುಷ್ಮಂತ ರಾಹುಲನಿಗೆ ಈ ಗಾಥೆಗಳಿಂದ ನಿತ್ಯವೂ ಉಪದೇಶಿಸುತ್ತಿದ್ದರು.

ಇಲ್ಲಿಗೆ ರಾಹುಲ ಸುತ್ತ ಮುಗಿಯಿತು

No comments:

Post a Comment