Wednesday 1 October 2014

vangeesa sutta in kannada

12. ವಂಗೀಸ ಸುತ್ತ
                ಹೀಗೆ ನಾನು ಕೇಳಿದ್ದೇನೆ, ಒಮ್ಮೆ ಭಗವಾನರು ಅಳವಿಯ ಅಗ್ಗಾಲವ ಚೈತ್ಯದಲ್ಲಿ ವಿಹರಿಸುತ್ತಿದ್ದರು. ಆಗ ಆಯುಷ್ಮಂತ ವಂಗೀಶನ ಉಪಾಧ್ಯಾಯ ನ್ಯುಗ್ರೋಧಕಲ್ಪನೆಂಬ ಸ್ಥವಿರರು ಕೆಲವು ದಿನಗಳ ಹಿಂದೆ ಅಗ್ಗಾಲವ ಚೈತ್ಯದಲ್ಲಿ ಪರಿನಿಬ್ಬಾಣ ಪ್ರಾಪ್ತಿಮಾಡಿದ್ದರು. ಆಗ ಆಯುಷ್ಮಂತ ವಂಗೀಸನಿಗೆ ಏಕಾಂತದಲ್ಲಿ ಧ್ಯಾನನಿರತನಾಗಿದ್ದಾಗ ಚಿತ್ತದಲ್ಲಿ ಈ ವಿತರ್ಕ ಉಂಟಾಯಿತು- ನನ್ನ ಉಪಾಧ್ಯಾಯರ ಪರಿನಿಬ್ಬಾಣ ಆಯಿತೋ ಅಥವಾ ಇಲ್ಲವೋ ಎಂದು. ಆಗ ಆಯುಷ್ಮಂತ ವಂಗೀಸ ಸಾಯಂಕಾಲ ಧ್ಯಾನದಿಂದೆದ್ದು, ಭಗವಾನರು ಎಲ್ಲಿದ್ದರೋ ಅಲ್ಲಿ ಬಂದನು. ಒಂದುಕಡೆ ಕುಳಿತ ಆಯುಷ್ಮಂತ ವಂಗೀಸನು ಭಗವಾನರಿಗೆ ಈ ರೀತಿ ಹೇಳಿದನು- ಭಂತೆ, ನನಗೆ ಏಕಾಂತದಲ್ಲಿ ಧ್ಯಾನನಿರತನಾಗಿದ್ದಾಗ ಈ ರೀತಿ ವಿತರ್ಕ ಉಂಟಾಯಿತು. ಏನೆಂದರೆ ನನ್ನ ಉಪಾಧ್ಯಾಯರ ಪರಿನಿಬ್ಬಾಣ ಆಯಿತೋ ಅಥವಾ ಇಲ್ಲವೋ ಎಂದು. ಗಾಥೆಗಳಲ್ಲಿ ಈ ರೀತಿ ಹೇಳಿದನು -


1.            ಆಯುಷ್ಮಂತ ವಂಗೀಸ - ಈ ಜನ್ಮದಲ್ಲಿ ಯಾರು ಮಹಾ ಪ್ರಜ್ಞಾವಂತರು ಹಾಗು ಸಂಶಯಗಳನ್ನು ದೂರಮಾಡುವ ಶಾಸ್ತರಿರುವರೋ (ಬುದ್ಧ) ಅವರಿಂದ ನಾನು ಆ ಪ್ರಸಿದ್ಧ, ಯಶಸ್ವಿ, ಶಾಂತಚಿತ್ತ ಭಿಕ್ಷುವಿನ ಸಂಬಂಧದಲ್ಲಿ ಕೇಳುತ್ತಿದ್ದೇನೆ, ಅವರ ದೇಹಾಂತವು ಅಗ್ಗಾಲವದಲ್ಲಿ ಆಗಿತ್ತು.
2.            ಹೇ ಭಗವಾನ್ ತಾವೇ ಆ ಬ್ರಾಹ್ಮಣರಿಗೆ ನಿಗ್ರೋಧಕಲ್ಪ ಎಂದು ಹೆಸರು ಕೊಟ್ಟಿದ್ದೀರಿ. ಆ ಪರಿಶ್ರಮಿ, ದೃಢ ಧರ್ಮದಶರ್ಿಯು ಮುಕ್ತಿಯ ಕಾಮನೆಯಿಂದ ತಮಗೆ ನಮಸ್ಕರಿಸುತ್ತ ಸಂಚರಿಸುತ್ತಿದ್ದರು.
3.            ಹೇ ಸಮಂತ ಚಕ್ಷುವುಳ್ಳ ಶಾಕ್ಯರೇ, ನಾವು ಆ ಶ್ರಾವಕನ ಬಗ್ಗೆ ಅರಿಯಲು ಇಚ್ಛಿಸುತ್ತೇವೆ. ನಮ್ಮ ಕಿವಿಗಳು ಕೇಳಲು ಸಿದ್ಧವಾಗಿದೆ. ತಾವು ನಮ್ಮ ಶಾಸ್ತರಾಗಿದ್ದೀರಿ. ತಾವು ಸವರ್ೊತ್ತಮರು ಆಗಿದ್ದೀರಿ.
4.            ಹೇ ಮಹಾಪ್ರಾಜ್ಞರೇ, ನಮ್ಮ ಸಂಶಯಗಳನ್ನು ದೂರಮಾಡಿ, ತಾವು ಅವರ ಪರಿನಿಬ್ಬಾಣವನ್ನು ಪಡೆದಿದ್ದಾರೆಯೆ ಎಂಬುದನ್ನು ತಿಳಿಸಿ. ಹೇ ಸಮಂತ ಚಕ್ಷು, ಯಾವರೀತಿ ಸಹಸ್ರ ನೇತ್ರ ಇಂದ್ರ ದೇವಲೋಕದ ಮಧ್ಯೆ ನುಡಿಯುವನೋ, ಅದೇರೀತಿ ತಾವು ಸದಾ ನಮ್ಮ ಮಧ್ಯೆ ನುಡಿಯಿರಿ.
5.            ಇಲ್ಲಿ ಮೋಹದ ಕಡೆ ಕರೆದುಕೊಂಡು ಹೋಗುವ, ಅಜ್ಞಾನ ಸಂಬಂಧಿ, ಸಂಶಯ ಉತ್ಪತ್ತಿ ಯಾವ ಗ್ರಂಥಿಗಳಿವೆಯೋ, ಅವೆಲ್ಲವೂ ತಥಾಗತರ ಬಳಿ ಸೇರಿದ ನಂತರ ಸರ್ವವೂ ನಷ್ಟವಾಗುತ್ತವೆ. ತಥಾಗತರೇ ಮನುಷ್ಯರಲ್ಲಿ ಅತ್ಯುತ್ತಮ ಚಕ್ಷು ಆಗಿದ್ದಾರೆ.
6.            ಹೇಗೆ ಆಕಾಶದಲ್ಲಿ ಗಾಳಿಯು ಮೋಡಗಳನ್ನು ದೂರೀಕರಿಸುವುದೋ, ಹಾಗೆಯೇ ತಮ್ಮ ಸಮಾನವಾಗಿ ಮನುಷ್ಯರಲ್ಲಿ ವಾಸನೆಗಳನ್ನು ದೂರ ಮಾಡದಿದ್ದರೆ ಲೋಕವು ಮೋಹದಿಂದ, ಆವೃತವಾಗುತ್ತದೆ ಮತ್ತು ಪ್ರಜ್ಞಾವಂತ ಪುರುಷನು ಬೆಳಗುವುದಿಲ್ಲ.
7.            ಧೀರರು ಪ್ರಕಾಶ ನೀಡಬಲ್ಲವರಾಗಿರುತ್ತಾರೆ. ಹೇ ಧೀರರೇ, ನಾನು ತಮ್ಮನ್ನು ಹಾಗೆಯೇ ತಿಳಿಯುತ್ತೇನೆ. ನಾವು ಭಗವಾನರನ್ನು ಸರ್ವದಶರ್ಿ ಎಂದು ತಿಳಿಯಬಂದಿದ್ದೇವೆ. ಈ ಪರಿಷತ್ತಿಗೆ ನ್ಯುಗ್ರೋಧಕಲ್ಪರ ವಿಷಯವಾಗಿ ತಿಳಿಸಿರಿ.
8.            ಯಾವರೀತಿ ಹಂಸವು ಬೇಗ ಬೇಗ ಮಧುರವಾಣಿಯಲ್ಲಿ ಹೇಳುತ್ತದೋ, ಹಾಗೆಯೇ ತಾವು ಸಹಾ ಶೀಘ್ರವಾಗಿ ಸ್ಪಷ್ಟರೂಪದಲ್ಲಿ ಮಧುರ-ಮಧುರ ವಾಣಿಯಲ್ಲಿ ಹೇಳಿರಿ. ನಾವೆಲ್ಲರೂ ಅದನ್ನು ಧ್ಯಾನಪೂರ್ವಕ ಕೇಳುತ್ತೇವೆ.
9.            ತಾವು ಸಂಪೂರ್ಣ ಜನ್ಮ-ಮೃತ್ಯುವಿನ ನಾಶ ಮಾಡಿದ್ದೀರಿ. ನಾನು ಸುಪರಿಶುದ್ಧರಾದ ತಮ್ಮಲ್ಲಿ ಉಪದೇಶಕ್ಕಾಗಿ ಅನುರೋಧ ಮಾಡುತ್ತೇನೆ. ಸಾಮಾನ್ಯ ಜನರ ಇಚ್ಛೆಗಳು ಪೂರ್ಣವಾಗುವುದಿಲ್ಲ. ತಥಾಗತರಂತು ಪ್ರಜ್ಞಾನುಸಾರವಾಗಿ ಕ್ರಿಯೆ ಮಾಡುತ್ತಾರೆ.
10.          ಹೇ ರುಜು ಪ್ರಜ್ಞಾ ತಮ್ಮ ಈ ಸಂಪೂರ್ಣ ಕಥನವನ್ನು ನಾವು ಸರಿಯಾಗಿ ಗ್ರಹಿಸಿದ್ದೇವೆ. ಇದು ನನ್ನ ಅಂತಿಮ ಪ್ರಣಾಮವಾಗಿದೆ. ಹೇ ಮಹಾಪ್ರಾಜ್ಞರೇ, ನಮ್ಮನ್ನು ಭ್ರಮೆಯಲ್ಲಿ ಇರಿಸದಿರಿ.
11.          ಮಹಾಪ್ರಾಜ್ಞರೇ, ಆರಂಭದಿಂದ ಅಂತ್ಯದವರೆಗೆ ಆರ್ಯ ಧರ್ಮವನ್ನು ಅರಿತು ತಾವು ನಮಗೆ ಭ್ರಮೆಯಲ್ಲಿ ಇರಿಸದಿರಿ. ಯಾವರೀತಿ ಬೇಸಿಗೆಯಲ್ಲಿ ಉಷ್ಠ ಪೀಡಿತನೊಬ್ಬನು ನೀರಿಗಾಗಿ ಹಾತೊರೆಯುತ್ತಾನೋ, ಅದೇರೀತಿಯಲ್ಲಿ ತಮ್ಮ ವಚನಕ್ಕಾಗಿ ಆಕಾಂಕ್ಷೆಪಡುತ್ತಿದ್ದೇನೆ. ತಾವು ನುಡಿ ವರ್ಷವನ್ನು ಸುರಿಸಿರಿ.
12.          ಕಪ್ಪಾಯನರು (ನಿಗ್ರೋಧಕಲ್ಪ) ಯಾವ ಆಕಾಂಕ್ಷೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿದರೋ ಅದು ಸಫಲವಾಯಿತೇ? ಅವರು ಏನು ಅನುಪಾದಿಶೇಷ ನಿಬ್ಬಾಣವನ್ನು ಪ್ರಾಪ್ತಿಮಾಡಿದರೆ? ಅವರು ಹೇಗೆ ವಿಮುಕ್ತರಾದರೋ, ಅದನ್ನು ತಿಳಿಸಿ, ನಾವು ಕೇಳಲು ಬಯಸುತ್ತೇವೆ.
13.          ಭಗವಾನ್ ಬುದ್ಧರು - ಆತನು ನಾಮರೂಪದ ತೃಷ್ಣಾರೂಪಿ, ದೀರ್ಘ ಕಾಲದಿಂದ ಹರಿಯುವ ಮಾರನ ನದಿಯನ್ನು ನಾಶಮಾಡಿ, ಸರ್ವ ಜನ್ಮ-ಮೃತ್ಯುವಿನಿಂದ ದೂರ ಹೋಗಿದ್ದಾನೆ ಪ್ರಜ್ಞಾ ಶ್ರೇಷ್ಠ ಭಗವಾನರು ಹೀಗೆ ಹೇಳಿದರು.
14.          ವಂಗೀಸ - ಹೇ ಏಳನೆಯ ಋಷಿ (ವಿಪಸ್ಸಿ ಬುದ್ಧರ ನಂತರದ ಏಳನೆಯ ಬುದ್ಧರು) ತಮ್ಮ ನುಡಿ ಆಲಿಸಿ ನಾನು ಪ್ರಸನ್ನನಾಗಿದ್ದೇನೆ. ನನ್ನ ಪ್ರಶ್ನೆಯು ನಿರರ್ಥಕವಾಗಲಿಲ್ಲ. ಬ್ರಾಹ್ಮಣರಾದ ತಾವು ನನಗೆ ವಂಚಿಸಲಿಲ್ಲ.
15.          ಬುದ್ಧರ ಶಿಷ್ಯರು ಯಥಾವಾದಿಗಳು, ತಥಾಕಾರಿಗಳಾಗಿರುತ್ತಾರೆ. ಅವರು ಮಾರನಿಂದ ವಿಸ್ತ್ರುತವಾದ ಮಾಯಾವಿತನದ ದೃಢ ಬಲೆಯನ್ನು ಕತ್ತರಿಸಿದ್ದಾರೆ.
16.          ಭಗವಾನ್, ಕಪ್ಪಿಯನರು ತೃಷ್ಣೆಯ ಕಾರಣವನ್ನು ಅರಿತುಬಿಟ್ಟರು. ಕಪ್ಪಿಯನರು ಅತಿ ದುಷ್ಕರವಾದ ಮೃತ್ಯು ರಾಜ್ಯವನ್ನು ದಾಟಿ ಹೋಗಿದ್ದಾರೆ.

ಇಲ್ಲಿಗೆ ವಂಗೀಸ ಸುತ್ತ ಮುಗಿಯಿತು.

No comments:

Post a Comment