Friday 29 May 2015

jara sutta in kannada 6. ಜರಾ ಸುತ್ತ

6. ಜರಾ ಸುತ್ತ
(ಅನಿತ್ಯತೆಯ ವರ್ಣನೆ)
1.            ಅಹೋ! ಈ ಜೀವನವು ಅತಿ ಅಲ್ಪವಾಗಿದೆ, ನೂರು ವರ್ಷಕ್ಕಿಂತ ಮೊದಲೇ ಮಾನವ ಮೃತ್ಯುವಪ್ಪುತ್ತಾನೆ. ಯಾರು ಇದಕ್ಕಿಂತ ಅಧಿಕವಾಗಿ ಜೀವಿಸುವರೋ ಅವರು ಸಹಾ ವೃದ್ಧಾವಸ್ಥೆ ಪ್ರಾಪ್ತಿಮಾಡಿ ಮೃತ್ಯು ಹೊಂದುತ್ತಾನೆ.
2.            ಮಮತ್ವ (ನನ್ನವರು ಎಂಬ ಭಾವ) ದಲ್ಲಿ ಬಿದ್ದು ಜೀವಿಗಳು (ಜನರು) ಶೋಕಪಡುತ್ತಾರೆ. ಯಾವುದೇ ಪ್ರಕಾರದ ಪರಿಗ್ರಹವೂ (ಸಂಗ್ರಹ) ನಿತ್ಯವಾದುದಲ್ಲ. ಇದರಲ್ಲಿ ವಿಯೋಗವು ಇದ್ದೇ ಇರುತ್ತದೆ. ಈ ರೀತಿ ನೋಡಿ, ಮನೆಯಲ್ಲಿ (ಪ್ರಾಪಂಚಿಕತೆಯಲ್ಲಿ) ಇರದಿರಲಿ.
3.            ಪುರುಷನು ಯಾವುದನ್ನು ತನ್ನದು ಎಂದು ಅರಿಯುತ್ತಾನೋ ಅದನ್ನು ಸಹಾ ಮೃತ್ಯುವಿನ ಅನಂತರ ತ್ಯಜಿಸುತ್ತಾನೆ. ಆದ್ದರಿಂದ ಪಂಡಿತರು ತಮ್ಮನ್ನು ಮಮತೆಯ (ನನ್ನದು ಎಂಬುದರ) ಕಡೆ ವಾಲಿಸದಿರಲಿ.
4.            ಹೇಗೆ ಸ್ವಪ್ನದಲ್ಲಿ ಕಂಡ ವಸ್ತುವನ್ನು ಜಾಗೃತನಾದ ಮೇಲೆ ನೋಡಲಾರನೋ ಅದೇರೀತಿ ಪ್ರಿಯ ಜನರನ್ನು ಮೃತ್ಯುವಿನ ಆನಂತರ ನೋಡಲಾರನು.
5.            ಯಾರನ್ನು ನೋಡಿರುತ್ತೀರೋ ಮತ್ತು ಕೇಳಿರುತ್ತೀರೋ ಅವರ ಚಚರ್ೆ ಆಗುತ್ತದೆ. ಮೃತ ಮನುಷ್ಯನ ಹೆಸರು ಮಾತ್ರ ಅವಶ್ಯಕವಾಗಿ (ಕೆಲವು ಕಾಲ) ಇರುತ್ತದೆ.
6.            ಯಾರು ಬಹು ಲೋಭಿಗಳೋ ಮತ್ತು ಮಮತ್ವವುಳ್ಳವರೋ, ಅಂತಹವರು ಶೋಕವನ್ನು, ವಿಲಾಪವನ್ನು ಮತ್ತು ಜಿಪುಣತನವನ್ನು ಬಿಡಲಾರರು. ಆದ್ದರಿಂದ ಮುನಿಯು ಪರಿಗ್ರಹವನ್ನು ಬಿಟ್ಟು, ನಿಬ್ಬಾಣದಶರ್ಿಯಾಗಿ ಸಂಚರಿಸುತ್ತಾನೆ.
7.            ಏಕಾಗ್ರಚಿತ್ತರಾಗಿ ಸಂಚರಿಸುವವರು ಮತ್ತು ಏಕಾಂತ ಚಿಂತನೆಯಲ್ಲಿ ಲೀನವಾದ ಭಿಕ್ಷುವಿಗೆ ಯೋಗ್ಯವಾದುದು ಏನೆಂದರೆ ಅವರು ಪುನಃ ಪುನರ್ಜನ್ಮದಲ್ಲಿ ಬೀಳದೆ ಇರಲಿ.
8.            ಮುನಿಯು ಸರ್ವಧಾ ಅನಾಸಕ್ತರಾಗಿರುತ್ತಾರೆ. ಆ ಮಹಾವ್ಯಕ್ತಿಯು ಯಾರಿಗೂ ಪ್ರಿಯರನ್ನಾಗಿ ಅಥವಾ ಅಪ್ರಿಯರನ್ನಾಗಿ ಮಾಡುವುದಿಲ್ಲ (ಭಾವಿಸುವುದಿಲ್ಲ). ಹೇಗೆ ಎಲೆಯ ಮೇಲೆ ಜಲವು ಇರುವುದಿಲ್ಲವೋ ಅದೇರೀತಿ ವಿಲಾಪಿಗಳು ಮತ್ತು ಲೋಭಿಗಳು ಅವನಿಗೆ ಪ್ರಭಾವ ಮಾಡಲಾರರು.
9.            ಯಾವರೀತಿ ಕಮಲ ಅಥವಾ ಪದ್ಮದ ಎಲೆಯ ಮೇಲೆ ಜಲವು ನಿಲ್ಲುವುದಿಲ್ಲವೋ ಅದೇರೀತಿ ಮುನಿಯು ದೃಷ್ಟಿಶೃತಿ ಅಥವಾ ವಿಚಾರತೆಯಲ್ಲಿ ಲಿಪ್ತರಾಗುವುದಿಲ್ಲ.
10.          ಶುದ್ಧ ಪುರುಷನು ದೃಷ್ಷಿ ಶ್ರುತಿ ಅಥವಾ ವಿಚಾರತೆ ಸ್ವೀಕರಿಸುವುದಿಲ್ಲ. ಅವನು ಪರರ ಸಹಾಯದಿಂದ ಶುದ್ದಿ ಇಚ್ಛಿಸಲಾರ. ಅವನು ಯಾವುದರಲ್ಲಿಯೂ ರತನೂ ಆಗಲಾರ, ವಿರತನೂ ಆಗಲಾರ.

ಇಲ್ಲಿಗೆ ಜರಾ ಸುತ್ತ ಮುಗಿಯಿತು.

No comments:

Post a Comment