Friday 29 May 2015

paramatthaka sutta in kannada 5. ಪರಮಟ್ಠಕ ಸುತ್ತ

5. ಪರಮಟ್ಠಕ ಸುತ್ತ
(ಸತ್ಯದಶರ್ಿಯು ಧಾಮರ್ಿಕ ವಿವಾದಗಳಲ್ಲಿ ಬೀಳುವುದಿಲ್ಲ)
1.            ಯಾವ ವ್ಯಕ್ತಿಯು ತನ್ನ ದೃಷ್ಟಿಯನ್ನು (ಸಿದ್ಧಾಂತ) ಸರ್ವಶ್ರೇಷ್ಠ ಎಂದು ನಂಬುತ್ತಾನೋ ಮತ್ತು ಲೋಕದಲ್ಲಿ ಆತನು ಅದರ ಪ್ರಶಂಸೆ ಮಾಡುತ್ತಾನೆ. ಬೇರೆ ಎಲ್ಲಾ ದೃಷ್ಟಿಗಳನ್ನು ಹೀನವೆಂದು ಹೇಳುವನು. ಆದ್ದರಿಂದ ಆತನು ವಿವಾದರಹಿತನಲ್ಲ.
2.            ಯಾರು ತನ್ನ ದೃಷ್ಟಿ, ಶ್ರುತಿ, ಶೀಲವ್ರತ ಅಥವಾ ವಿಚಾರಶೀಲತೆಯಲ್ಲಿ ಗುಣವನ್ನು ಕಾಣುವನೋ, ಆತನು ಅದನ್ನು ಹಿಡಿಯುತ್ತಾನೆ ಮತ್ತು ಸರ್ವ ಅನ್ಯ ದೃಷ್ಟಿಗಳನ್ನು ಕೀಳಾಗಿ ನೋಡುತ್ತಾನೆ.
3.            ಕುಶಲ ವ್ಯಕ್ತಿಗಳು ಆತನನ್ನು ಸಹ ಬಂಧಿ ಎಂದು ಹೇಳುತ್ತಾರೆ, ಯಾರು ತನ್ನ ದೃಷ್ಟಿಯಿಂದ ಬಂಧಿತನಾಗಿ ಪರರ ದೃಷ್ಟಿಯನ್ನು ಕೀಳಾಗಿ ಕಾಣುವನೋ, ಅದರಿಂದ ಭಿಕ್ಷುವು ದೃಷ್ಟಿ, ಶ್ರುತಿ, ವಿಚಾರತೆ ಅಥವಾ ಶೀಲವ್ರತಗಳ ಜಾಲದಲ್ಲಿ ಬೀಳದಿರಲಿ.
4.            ಲೋಕದಲ್ಲಿ ಜ್ಞಾನ ಅಥವಾ ಶೀಲವ್ರತದಿಂದ ಯಾವುದೇ ದೃಷ್ಟಿಯ (ಸಿದ್ಧಾಂತದ) ಕಲ್ಪನೆ ಮಾಡದಿರಲಿ. ತನ್ನನ್ನು ಪರರ ಸಮಾನನೆಂದು ಭಾವಿಸದಿರಲಿ ಮತ್ತು ಅವರಿಗಿಂತ ನೀಚ ಅಥವಾ ಶ್ರೇಷ್ಠ ಎಂದೂ ಭಾವಿಸದಿರಲಿ (ಪರಿಗಣಿಸದಿರಲಿ).
5.            ಯಾರು ಅಹಂ ತ್ಯಜಿಸಿ ಆಸಕ್ತರಹಿತರಾಗಿರುವರೋ, ಅವರು ಜ್ಞಾನದಲ್ಲಿಯೂ ಸಹಾ ಆಶ್ರಯಗ್ರಹಣ ಮಾಡುವುದಿಲ್ಲ. ಅವರು ಸಮೂಹದಲ್ಲಿಯೂ ಯಾರ ಪಕ್ಷವು ಸೇರುವುದಿಲ್ಲ ಮತ್ತು ಯಾವುದೇ ದೃಷ್ಟಿಯಲ್ಲೂ ಬೀಳಲಾರರು.
6.            ಯಾರಲ್ಲಿ ಇಲ್ಲಿ ಎರಡು ಹಂತಗಳಲ್ಲಿ ಮತ್ತು ಈ ಲೋಕ ಹಾಗು ಪರಲೋಕದಲ್ಲಿ ಉತ್ಪನ್ನವಾಗುವ ತೃಷ್ಣೆಯಿಲ್ಲವೋ ಆತನಲ್ಲಿ ಧಾಮರ್ಿಕ, ದೃಢಗ್ರಾಹ್ಯದಿಂದ ಉತ್ಪನ್ನವಾಗುವ ಯಾವುದೇ ರೀತಿಯ ಆಸಕ್ತಿಗಳು ಇರುವುದಿಲ್ಲ.
7.            ಆತನಿಗೆ ಯಾವುದೇ ದೃಷ್ಟಿ, ಶ್ರುತಿ ಅಥವಾ ವಿಚಾರಿತ ವಿಷಯದಲ್ಲಿ ಅಣುಮಾತ್ರವೂ ಕಲ್ಪಿತಧಾರಣೆ ಇರುವುದಿಲ್ಲ. ಯಾವುದೇ ದೃಷ್ಟಿಯಲ್ಲೂ ಅನಾಸಕ್ತನಾದ ಆ ಬ್ರಾಹ್ಮಣನಿಗೆ ಈ ಲೋಕದಲ್ಲಿ ವಿಚಲಿತನನ್ನಾಗಿ ಯಾರು ಮಾಡುವರು?
8.            ಅವರು ಯಾವುದೇ ದೃಷ್ಟಿಗಳನ್ನು ಕಲ್ಪಿಸುವುದಾಗಲಿ, ಅಥವಾ ದೃಷ್ಟಿಗಳಿಗೆ ವಿಶೇಷ ಗ್ರಹಣ ನೀಡುವುದು ಮಾಡುವುದಿಲ್ಲ. ಅವರು ಆ ದೃಷ್ಟಿಗಳನ್ನು ನಂಬುವುದು ಇಲ್ಲ. ಬ್ರಾಹ್ಮಣ ಕೇವಲ ಶೀಲವ್ರತದಿಂದ ಭವಸಾಗರ ದಾಟಲಾರನು. ದಾಟಿರುವ ಅರಹಂತರು ಈ ದೃಷ್ಟಿಗಳಲ್ಲಿ ಬೀಳಲಾರರು.

ಇಲ್ಲಿಗೆ ಪರಮಟ್ಠಕ ಸುತ್ತ ಮುಗಿಯಿತು.

No comments:

Post a Comment